ಪಲ್ಲವಿ : ಗೋವಿಂದ ಬಾರೋ ಗೋಪಾಲ ಬಾರೋ
ಗೋಮಾಳದಲ್ಲಿ ಗೋಲಿಯನಾಡುವ

ಚರಣ :  ಗೋಪಿ ಪ್ರಿಯನು ನೀನೇ ಗೋಳ ಹತ್ತಿ ಬಾರೋ
ಗೊರಗನು ಹೊದಿಸುವೆವು ಗೋಪಾಲ ನೀ ಬಾರೋ   

ಗೋದಾನೆ ಬಿಟ್ಟು ಬಾರೋ ಗೋಪಿಚಂದನ ಹಚ್ಚುವೆವು
ಗೊಲ್ಲ ಮಕ್ಕಳು ಒಂದಾಗಿಹೆವು ಗೋವಿಂದ ನೀ ಬಾರೋ

ಗೋಸಾಯಿ ಎಲ್ಲರು ನಿಂತಿಹರು ಗೋನು ಹೊದಿಸಲು ಸಜ್ಜಾಗಿಹರು
ಗೋಸ್ವಾಮಿ ನೀನೇ ಎಲ್ಲರೊಳು ಗೋಮಿನಿ ನಿನಗೆ ಒಲಿದಿಹಳು

ಗೋಬೆಣ್ಣೆ ಕೊಡುವೆವು ಗೊರಗು ಹೊದಿಸುವೆವು
ಗೋಧನ ಸಂಪದ ನಿನಗದೇ ಜಯ ಜಯಕಾರ ಮಾಡುವೆವು