ಸೌರಮಂಡಲದಲ್ಲಿ ಜೀವಿಗಳನ್ನು ಹೊಂದಿರುವ ಏಕೈಕ ಗ್ರಹ ಭೂಮಿ. ಸುಮಾರು ೩೦೦ ಮಿಲಿಯನ್ ವರ್ಷಗಳ ಹಿಂದೆ ಈ ಗ್ರಹದಲ್ಲಿ ಮೊಟ್ಟಮೊದಲು ಜೀವಿಗಳು ಬೆಳವಣೆಗೆಯಾದವು ಎಂಬ ವೈಜ್ಞಾಜಿಕ ಸಿದ್ಧಾಂತವಿದೆ. ನಿಧಾನವಾಗಿ ನಿರಂತರವಾಗಿ, ವಿವಿಧ ರೀತಿಯ ಭೌತಿಕ ಅಂಶಗಳಿಂದ ಈ ಜೈವಿಕ ಲೋಕದಲ್ಲಿ ಜೀವ ವಿಕಾಸವಾಗಿದೆ ಎಂದು ಹಲವಾರು ವಿಜ್ಞಾನಿಗಳ ಸಂಶೋಧನೆಯಿಂದ ಬೆಳಕಿಗೆ ಬಂದಿದೆ. ಈ ಗ್ರಹದಲ್ಲಿ ಇದುವರೆಗೆ ೩,೫೦,೦೦೦ ಸಸ್ಯಗಳಿವೆ ಎಂದು ತಿಳಿದಿದೆ. ಈ ಸಸ್ಯರಾಶಿಗಳು ಜೈವಿಕ-ಅಜೈವಿಕ ಅಂಶಗಳಿಗೆ ಅನುಗುಣವಾಗಿ ಇಲ್ಲಿ ಬೆಳೆಯಲ್ಪಟ್ಟಿವೆ. ಇಂತಹ ಸಸ್ಯಗಳು ಪ್ರಾಣಿಗಳಿಗೆ ಆಹಾರವಾಗಿ, ಔಷಧಿಯಾಗಿ ವಿವಿಧ ರೀತಿಯ ಕ್ಷೇತ್ರಗಳಲ್ಲಿ ಉಪಯುಕ್ತವಾಗಿವೆ. ಈ ಭೂಮಿಯ ಮೇಲೆ ಅಪಾರವಾದ ಸಸ್ಯ ಮತ್ತು ಪ್ರಾಣಿ ಸಂಕುಲಗಳು ಬೆಳೆಯಲು ನಾಂದಿಯಾಗಿದೆ. ಯಾವುದೇ ಒಂದು ಪ್ರಾಣಿಯು ತನ್ನ ಜೀವನವನ್ನು ಸರಳವಾಗಿ ಸುಗಮವಾಗಿ ಸಾಗಿಸಿ, ಆರೋಗ್ಯದಿಂದಿರಬೇಕಾದರೆ ಸಸ್ಯಗಳು ಬೇಕೇ ಬೇಕು. ಆದರೆ ಸಸ್ಯಗಳು ಸಮೃದ್ಧವಾಗಿ ಬೆಳೆಯಬೇಕಾದರೆ ಪರಿಸರಕ್ಕೆ ಅನುಗುಣವಾಗಿ ಪ್ರಾಣಿಗಳು ಇರಬೇಕಾಗುತ್ತದೆ. ಹೀಗೆ ಯಾವುದೇ ಪ್ರಾಣಿ ತನ್ನ ಪೀಳಿಗೆಯನ್ನು ಮುಂದುವರಿಸಿಕೊಂಡು ಹೋಗಬೇಕಾದರೆ ವಿವಿಧ ರೀತಿಯ ಪರಿಸರವನ್ನು ಅವಲಿಂಬಿಸಿವೆ. ಹಿಗೆ ಸಸ್ಯಗಳು ಪ್ರಾಣಿಗಳು ಒಂದನ್ನೊಂದು ಅಂಟಿಕೊಂಡು ಬೆಳೆದಿವೆ. ಇದರಿಂದ ಭೂಮಿಯ ಮೇಲೆ ಜೀವ ವೈವಿಧ್ಯತೆಗಳು ಪರಿಸರಕ್ಕೆ ಅನುಗುಣವಾಗಿ ಹೆಚ್ಚುತ್ತಾ ಬಂದಿರುತ್ತದೆ. ಇಂತಹ ಅನಂತ ವ್ಯಾಪ್ತಿಯ ಪರಿಸರದೊಳಗೆ ಸಸ್ಯ, ಪ್ರಾಣಿಗಳ ಸಂಬಂಧ ಸಂವೇದನೆಗಳು ಒಂದು ಕಾಲಕ್ಕೆ ಗೃಹಿತವೆಂದು; ಮಾರ್ಯಾದಬದ್ಧವೆಂದು ಪರಿಗಣಿಸಲಾಗಿತ್ತು. ಇಂತಹ ಸಸ್ಯ ಪ್ರಾಣಿಗಳ ಸಂಬಂಧ ಮತ್ತು ಉಪಯೋಗಕ್ಕೆ ಅನುಗುಣವಾಗಿ ಪರಿಸರದೊಡನೆ ಆತ್ಮೀಯವಾಗಿ ಜನರು ಸಹಾ ಬದುಕುತ್ತಿದ್ದರು. ಜನರು ಪ್ರಕೃತಿಯೊಂದಿಗೆ ಸಂಸ್ಕೃತಿಯ ಪೂಜ್ಯ ಭಾವನೆಯಿಂದ ಪ್ರಕೃತಿ ಮಾತೆಯ ಮಡಿಲಿನಲ್ಲಿ ಅನಾದಿಕಾಲದಿಂದಲೂ ಬದುಕಿ ಬಂದಿರುತ್ತಾರೆ.

ಅಂತೆಯೇ ಪ್ರಕೃತಿಯ ಮಡಿಲಿನಲ್ಲಿ ಬೆಳೆದ ಸುಮಾರು ೭೦೦ ಗಿಡಗಳನ್ನು ಉಪಯೋಗಿಸಿಕೊಂಡು ನಾಟಿ ವೈದ್ಯರು ತಮ್ಮದೇ ಆದ ದಾರ್ಶನಿಕ, ಧಾರ್ಮಿಕ, ಕಲಾತ್ಮಕ, ತಾತ್ವಿಕ ಕೈಚಳಕದಿಂದ ನಾಟಿ ವೈದ್ಯ ವೃತ್ತಿಯನ್ನು ಮುಂದುವರಿಸಿ ತಮ್ಮ ಉತ್ತೇಜಿತ ಜೀವನವನ್ನು ಪರಿಸರದೊಂದಿಗೆ ಸರಳವಾಗಿ ಪೂಜಾ ಆರಾಧಕರಾಗಿ ಅನಂತ ರೂಪಗಳಿಂದ ಇಡೀ ಜನಾಂಗದ ಚೈತನ್ಯದ ಚಿಲುಮೆಗಳಾಗಿ, ಜನರ ಆರೋಗ್ಯವನ್ನು ಕಾಪಾಡಿಕೊಂಡು ಬಂದಿರುತ್ತಾರೆ. ಶತಶತಮಾನಗಳು ಕಳೆದರೂ ನಾಟಿ ವೈದ್ಯರು ಅನ್ಯೋನ್ಯ ರೀತಿಯಿಂದ ವೈದ್ಯವನ್ನು ಮುಂದುವರಿಸಿ ಕೊಂಡು ಇಂದಿಗೂ ತಮ್ಮ ಮಹತ್ವವನ್ನು ಉಳಿಸಿಕೊಂಡಿದ್ದಾರೆ.

ಸಸ್ಯ ಮತ್ತು ಪ್ರಾಣಿ ಜೀವ ಸಂಕುಲವನ್ನು ತೆಗೆದುಕೊಂಡರೆ ಈ ಜೀವ ಜಗತ್ತಿನಲ್ಲಿ ಹಲವಾರು ವಿಶೇಷಗಳನ್ನು ಕಾಣುತ್ತೇವೆ. ಈ ಭೂಮಿಯ ಮೇಲೆ ೧೨ ರಿಂದ ೨೦ ಮಿಲಿಯ ಜೀವಿಗಳ ಸಂಖ್ಯೆ ಇತ್ತೆಂದು ಅಂದಾಜು ಮಾಡಲಾಗಿತ್ತು. ಇದರಲ್ಲಿ ಈಗ ೧.೪ ಮಿಲಿಯ ಜೀವಿಗಳ ವಿಚಾರವನ್ನು ಮಾತ್ರ ವಿವರಿಸಲಾಗಿದೆ. ಇಡೀ ಭೂಮಿಯ ಮೇಲೆ ನಾನಾ ರೀತಿಯ ಅವಾಸಗಳಿವೆ. ೩,೨೫,೦೦೦ ಗಿದಗಳು ೨೩,೦೦೦ ಶೀಲಿಂದ್ರಗಳು, ೨೫೦೦ ಆಲ್ಗೆಗಳು ೯೦೦ ರೀತಿಯ ಬ್ರಯೋಪೈಟಗಳು, ೩೫೦ ರೀತಿಯ ಸಸ್ತನಿಗಳು, ೭೫,೦೦೦ ಕೀಟಗಳು, ೩೨,೦೦೦ ಮೀನುಗಳು, ೧೫,೦೦೦ ಇರುವೆಗಳು, ೪೫೦ ಸರೀಸೃಪಗಳು ವಿವಿಧ ರೀತಿಯ ಅವಾಸಗಳಲ್ಲಿ ತಮ್ಮದೇ ಆದ ಜೀವ ವೈವಿಧ್ಯತೆಯಲ್ಲಿ ಬೆಳೆದಿರುತ್ತವೆ.

ಇಡೀ ಪ್ರಪಂಚದಲ್ಲಿ ಸಸ್ಯಗಳು ಮತ್ತು ಪ್ರಾಣಿಗಳು ಬಹಳವಾಗಿ ತಮ್ಮದೇ ಆದ ಶ್ರೀಮಂತಿಕೆಯನ್ನು ಬೆಳೆಸಿಕೊಂಡಿರುವ ಹೆಸರುವಾಸಿಯಾದ ೧೮ ತಾಣಗಳಿವೆ. ಇದರಲ್ಲಿ ಹೆಚ್ಚು ಪ್ರಬೇಧಗಳನ್ನು ಹೊಂದಿರುವ ವಾಸಸ್ಥಾನಗಳು, ಅಗ್ರಗಣ್ಯ ತಾಣಗಳಾಗಿವೆ. ಜಗತ್ತಿನ ಭೂಭಾಗದ ಶೇಖಡಾ೦.೫ ರಷ್ಟ್ರರಲ್ಲಿ ೪೯.೧೫೫ ಸಸ್ಯ ಪ್ರಬೇಧಗಳಿವೆ. ಇವು ೭,೪೬,೯೦೦ ಚ.ಕಿ.ಮಿ.ನಲ್ಲಿ ಹರಡಿಕೊಂಡಿವೆ. ಈ ೧೮ ಜಗತ್ ಪ್ರಸಿದ್ಧ ತಾಣಗಳಲ್ಲಿ ಭಾರತದಲ್ಲಿ ೨ ಅಗ್ರತಾಣಗಳೀವೆ. ಇದು ಭಾರತೀಯ ಸಂಸ್ಕೃತಿಯ ಮಹತ್ತರವಾದ ಸಾಧನೆಗೆ ಅಗ್ರತಾಣಗಳಾಗಿವೆ. ೧) ಹಿಮಾಲಯದ ಪ್ರದೇಶ ೨) ಪಶ್ಚಿಮಘಟ್ಟಗಳು ಭೂಮಿಯು ಸುಮಾರು ೩೦೦೦ ಮಿಲಿಯನ್ ವರ್ಷಗಳ ಹಿಂದೆ ಹುಟ್ಟಿ ವಿಕಸಿಸಲು ಪ್ರಾರಂಭವಾಗಿ ನಿಧಾನವಾಗಿ, ನಿರಂತರವಾಗಿ, ಕಾಲ ಕ್ರಂಏಣ ಅನೇಕ ಬದಲಾವಣೆಯನ್ನು ಹೊಂದುತ್ತಾ ಬಂದಿಎ. ಈ ಭೂಮಿಯು ಮೊದಲು ನೀರಿನಿಂದ ಆವೃತ್ತವಾಗಿ ನಂತರ ಎಷ್ಟೋ ಕಾಲದ ನಂತರ ಚಿಕ್ಕ ಚಿಕ್ಕ ಪಾಚಿಯು ಬೆಳೆದು, ನಂತರ ಸೂಕ್ಷ್ಮ ಜೀವಿಗಳು ಬೆಳೆದು, ಸಹಸ್ರಾರು ಜೀವಿಗಳು ಬೆಳೆಯಲು ಪ್ರಾರಂಭವಾಯಿತು. ಸೂಕ್ಷ್ಮ ಜೀವಿಗಳಾದ ವೈರಸ್ ಮತ್ತು ಬ್ಯಾಕ್ಟೀರಿಯಾಗಳಿಂದ ಹಿಡೀದು ಅತಿ ದೊಡ್ಡ ಜೀವಿಗಳು ಉಂಟಾಗಲು ಕಾರಣವಾಯಿತು. ಇವುಗಳ ಬೆಳವಣೆಗೆಗೆ ಪೂರಕವಾದ ಜೈವಿಕ ಅಜೈವಿಕ ವಸ್ತುಗಳಾದ, ಭೂಮಿ, ಆಕಾಶ, ವಾಯು, ಬೆಳಕು, ಶಾಕಹ್, ನದಿ, ಸಮುದ್ರ, ನೀರು, ಮೋಡ, ಮಳೆ, ಗುಡುಗು, ಮಿಂಚು ಈ ಎಲ್ಲಾ ಅಂಶಗಳ ಪ್ರಮಾಣಗಳಿಂದ ಈ ಭೂಮಿಯ ಮೇಲೆ ಸಸ್ಯ ಮತ್ತು ಪ್ರಾಣಿ ಸಂಕುಲಗಳು ಬರಲು ಕಾರಣವಾಗಿದೆ. ಅಲ್ಲದೆ ಈ ಭೂಮಿಯ ಮೇಲ್ಮೈಯನ್ನು ಗಮನಿಸಿದಾಗ ಹಿಮ ಪ್ರದೇಶಗಳು ಉರಿಯುವ ಮರುಭೂಮಿಗಳು, ಅರಣ್ಯಗಳು, ಹುಲ್ಲುಗಾವಲುಗಳು, ಬೆಟ್ಟಗುಡ್ಡಗಳಲ್ಲಿ, ಜೀವರಾಶಿಗಳು ಶ್ರೀಮಂತವಾಗಿ ಬೆಳೆದಿವೆ. ಇಂತಹ ಜೀವ ಸಮುದಾಯಕ್ಕೆ ಜೀವ ವೈವಿಧ್ಯತೆ ಎನ್ನುತ್ತೇವೆ. ಇಂತಹ ಜೀವವೈವಿದ್ಯತೆಯ ಪಾರಂಪರೆಯಾಗಿ ಅಂದಿನಿಂದ ಇಮ್ದಿನವರೆಗೆ ಬೆಳೆಯುತ್ತಾ ಬಂದಿವೆ. ಹೀಗೆ ಒಂದು ಜೀವ ಜಗತ್ತು ಸೃಷ್ಟಿಯಾಗಬೇಕಾದರೆ ಅಲ್ಲಿನ ಪರಿಸರ ವ್ಯವಸ್ಥೆಯು ಕ್ರಿಯಾತ್ಮಕವಾಗಿ ತನ್ನ ವೈವಿಧ್ಯತೆಯನ್ನು ಭೌಗೋಳಿಕ ಲಕ್ಷಣಗಳೀಗೆ ಅನುಗುಣವಾಗಿ, ಜೀವ ಜಗತ್ತನ್ನು ಉಳಿಸಿ ಕೊಳ್ಳಲು ಸಾಧ್ಯವಾಗಿದೆ. ಈ ಎಲ್ಲಾ ಅಂಶಗಳು, ಇಲ್ಲದೆ ಇದ್ದರೆ ಜೀವ ಜಗತ್ತು ಸೃಷ್ಟಿಯಾಗಲು ಸಾಧ್ಯವಾಗುತ್ತಿರಲಿಲ್ಲ.

ಜೀವಜಗತ್ತಿನ ಪ್ರಾಣಿ ಸಂಕುಲ ಸಸ್ಯ ಸಂಪತ್ತನ್ನು ಗಮನಿಸಿದಾಗ ಸಾಮಾನ್ಯವಾಗಿ ವಂಶವಾಹಿ ವೈವಿಧ್ಯತೆ, ಜಾತಿಯ ವೈವಿಧ್ಯತೆ ಮತ್ತು ಪರಿಸರ ವೈವಿಧ್ಯತೆಯನ್ನು ಕಾಣಬಹುದು.

ಪರಿಸರ ನಾಟಿ ವೈದ್ಯ

ಆರೋಗ್ಯವೇ ಭಾಗ್ಯ ಎನ್ನುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ನಮ್ಮ ಭಾರತೀಯ ಪರಂಪರೆ ಸಂಸ್ಕ್ರುತಿಯನ್ನು ನೋಡಿದಾಗ ಜನರು ಹಲವಾರು ವಿಧಾನಗಳಿಂದ ತಮ್ಮ ಆರೋಗ್ಯವನ್ನು ರಕ್ಷಿಸಿ, ಬೆಳೆಸಿ, ಉಳಿಸಿಕೊಂಡು ಬಂದಿದ್ದಾರೆ. ಅಜ್ಜಿಯ ಮದ್ದಿನಿಂದ, ನಾಟಿ ಔಷಧಿಯಿಂದ, ಆಯುರ್ವೇದ, ಯುನಾನಿ, ಹೋಮಿಯೋಪತಿ, ಸಿದ್ಧ ಔಷಧಿ ಮೊದಲಾದ ವಿಧಾನಗಳಿಂದ ಜನರು ತಮ್ಮ ತಮ್ಮ ಆರೋಗ್ಯವನ್ನು ನಿರಂತರವಾಗಿ ಪರಿಸರದೊಡನೆ ಕಾಪಾಡಿಕೊಂಡು ಬಂದಿರುತ್ತಾರೆ. ಆದರೆ ಆರೋಗ್ಯವನ್ನು ಕಾಪಾದಲು ಒಂದೊಂದು ವರ್ಗದ ಜನ, ಒಂದೊಂದು ರೀತಿಯ ಔಷಧಿ ಸಸ್ಯಗಳನ್ನು ಅಮ್ತ್ತು ಪ್ರಾಣಿಗಳನ್ನು ಬಳಸಿಕೊಂಡು ಔಷಧಿಗಳನ್ನು ತಯಾರಿಸಿ ಇಡೀ ಸಮುದಾಯವನ್ನು ನೋಡಿಕೊಳ್ಳುತ್ತಿದ್ದರು. ಹಿಂದೆ ಪ್ರತಿ ಮನೆಯಲ್ಲಿ ಒಬ್ಬೊಬ್ಬರು ನಾಟಿ ವೈದ್ಯರು ಇರುತ್ತಿದ್ದರು. ನಾಟಿ ವೈದ್ಯರು ಆ ಪ್ರಾಂತ್ಯದಲ್ಲಿ ದೊರೆಯುವ ಸ್ಥಳೀಯ ಸಸ್ಯ, ಪ್ರಾಣಿಗಳನ್ನು ಉಪಯೋಗಿಸಿಕೊಂಡು ಅವರವರ ಮನೆಯ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಇಡೀ ಊರನ್ನು ನೋಡಿ ಕೊಳ್ಳುತ್ತಿದ್ದರು. ಇಂತಹ ವೈದ್ಯರು ಒಂದೊಂದು ಊರಿನಲ್ಲಿ ಬಹಳಷ್ಟು ಇರುತ್ತಿದ್ದರು. ಇವರು ಸುಮಾರು ೫೦೦ ರಿಂದ ೭೦೦ ಗಿಡಗಳನ್ನು ಉಪಯೋಗಿಸಿಕೊಂಡು ಔಷಧಿಯನ್ನು ತಯಾರಿಸಿ ಕೊಡುತ್ತಿದ್ದರು. ಇವರು ವೈದ್ಯರು ಯಾವುದೇ ಹಣವನ್ನು ಅಪೇಕ್ಷಿಸದೆ ನಿಸ್ವಾರ್ಥ ಸೇವೆಯಿಂದ ತಮ್ಮ ವೈದ್ಯ ವೃತ್ತಿಯನ್ನು ಸದುಪಯೋಗ ಪಡಿಸಿಕೊಂಡು ರೋಗಿಗಳನ್ನು ಹುಡುಕಿ ಹೋಗಿ ಅವರಿಗೆ ಔಷಧಿ ಉಪಚಾರವನ್ನು ಮಾಡುತ್ತಿದ್ದರು. ರೋಗಿಯ ದೇಹದ ಮೇಲಿನ ಮತ್ತು ಒಳಗಿನ ನೋವುಗಳನ್ನು ಅರಿತು ಅದಕ್ಕೆ ಅನುಗುಣವಾಗಿ ಗಿಡಮೂಲಿಕೆಗಳನ್ನು ಹುಡುಕಿ, ಕಾಯಿಲೆಯನ್ನು ಗುಣಪದಿಸುತ್ತಿದ್ದರು. ಹೀಗೆ ತಮ್ಮ ನಾಟಿ ವೈದ್ಯವನ್ನು ಅಜ್ಜಿ ಔಷಧಿ, ಯಳವರು, ಪಂಡಿತರು, ನಾಟಿವೈದ್ಯ, ನಾಡ ಔಷಧಿಗಾರ, ಅರಳಿಕಾಯಿ ಪಂಡಿತ ಮತ್ತು ಪಂಡಿತ ಅಯ್ಯನವರು ಹೀಗೆ ವಿವಿಧ ಹೆಸರುಗಳಿಂದ ಔಷಧಿಯನ್ನು ಕೊಡುತ್ತಿದ್ದ ನಾಡಿ ವೈದ್ಯರಿದ್ದುದ್ದುಂಟು.

ಕೆಲವು ವೈದ್ಯರು ಉಚಿತವಾಗಿ ಸೇವಾ ಮನೋಭಾವನೆಯಿಂದ ಔಷಧಿ ನೀಡಿದರೆ, ಕೆಲವು ವೈದ್ಯರು ೧ ೧/೪, ೫ ೧/೪, ೧೨ ೧/೪ ರೂಪಾಯಿಯನ್ನು ತೆಗೆದುಕೊಂಡು ಔಷಧಿ ಕೊಡುತ್ತಿದ್ದರು. ಈ ಹಣವನ್ನು ಅಂಗಡಿಗಳಿಂದ ದೊರೆಯುವ ಔಷಧಿ ಸಸ್ಯಗಳನ್ನು ತರಿಸಿಕೊಳ್ಳಲು ಉಪಯೋಗಿಸುತ್ತಿದ್ದರು. ನಾಟಿ ಔಷಧಿಯನ್ನು ಕೊಡುವವರು ನಿಗಧಿತವಾದ ಸಮಯ; ನಿಯಮಿತವಾದ ಆಹಾರ ಸೇವನೆ, ಕೆಲವು ವಸ್ತುಗಳನ್ನು ತ್ಯಜಿಸುವುದು ಇವೇ ಮೊದಲಾದ ನಿಯಮಗಳನ್ನು ಹಾಕಿ ಅವರವರ ದೇಹಸ್ಥಿತಿಗೆ ಅನುಗುಣವಾಗಿ ಆಹಾರವನ್ನು ಕೊಡುತ್ತಿದ್ದರು. ಉದಾ. ಕೆಮ್ಮು ಹೆಚ್ಚಾದರೆ ಸಕ್ಕರೆಯನ್ನು ನಿಷೇಧಿಸುತ್ತಾರೆ. ಏಕೆಂದರೆ ಕೆಮ್ಮು ಬಂದವರಿಗೆ ಕಫ ಹೆಚ್ಚಾಗುತ್ತದೆ ಎಂದು. ಈ ಕಫವನ್ನು ನಿಲ್ಲಿಸಬೇಕಾದರೆ ಉಷ್ಣ ಆಹಾರವನ್ನು ತೆಗೆದುಕೊಳ್ಳಬೇಕು. ಕೆಮ್ಮು ಹೆಚ್ಚಾದರೆ ಔಷಧಿಯನ್ನು ಬೆಳಿಗ್ಗೆ, ಮದ್ಯಾಹ್ನ ಮತ್ತು ಸಂಜೆ ಮೂರು ಬಾರಿ ತೆಗೆದುಕೊಳ್ಳಬೇಕು. ಕೆಮ್ಮು ಮಧ್ಯಮವಾಗಿದ್ದರೆ ಔಷಧಿಯನ್ನು ಬೆಳಿಗ್ಗೆ, ಸಂಜೆ ತೆಗೆದುಕೊಂಡರೆ ಸಾಕು, ಕೆಮ್ಮು ಅತಿ ಕಡಿಮೆ ಇದ್ದರೆ ಸಂಜೆ ಔಷಧಿಯನ್ನು ತೆಗೆದುಕೊಳ್ಳಲು ಹೇಳುತ್ತಿದ್ದರು.

ನಾಟಿ ವೈದ್ಯವು ಜನರಿಂದ ಜನ್ರಿಗೆ ಅನುಭವದ ಮೂಲಕ ಹರಿದು ಬಂದಿರುವ ಒಂದು ಮಹತ್ವದ ವಿದ್ಯೆಯಾಗಿದೆ. ಇದು ಭಾರತದ ಮೂಲೆ ಮೂಲೆಗಳಲ್ಲಿ ಶ್ರೀಮಂತವಾಗಿ ಉಳಿದು ಬಂದಿರುವ ವೈದ್ಯ ಪದ್ಧತಿಯಾಗಿದೆ. ಇಂತಹ ಪದ್ಧತಿಯು ಒಂದಾನೊಂದು ಕಾಲದಲ್ಲಿ ಊರು ಕೇರಿಗಳಲ್ಲಿ ಹಳ್ಳಿ ನಗರಗಳಲ್ಲಿ ಪ್ರಚಲಿತವಾಗಿ ಹಬ್ಬಿ ಎಲ್ಲರ ಆರೋಗ್ಯವನ್ನು ಕಾಪಾಡಿಕೊಂಡು ತನ್ನದೇ ಆದ ಶ್ರೀಮಂತ ತನವನ್ನು ಉಳಿಸಿಕೊಂಡು ಮೆಚ್ಚುಗೆಯನ್ನು ಪಡೆಯಿತು. ಇಂತಹ ನಾಟಿ ವೈದ್ಯವು ಭಾರತೀಯರ ಸಂಸ್ಕೃತಿಯಲ್ಲಿ ಒಂದು ಮೈಲುಗಲ್ಲಾಗಿ ಜನರ ಹೃದಯದಲ್ಲಿ ಮನೆ ಮಾಡಿಕೊಂಡು ಬೆಳೆದಿರುವುದು ನಮ್ಮ ಸಂಸ್ಕೃತಿಗೆ ಮತ್ತಷ್ಟು ಮೆರುಗು ತಂದಿದೆ. ಕಡಿಮೆ ಖರ್ಚಿನಲ್ಲಿ ಅಥವಾ ನಮ್ಮ ಸುತ್ತ ಮುತ್ತಲು ಇರುವ ಗಿಡ ಪ್ರಾಣಿಗಳನ್ನು ಕಾಲ ಕಾಲಕ್ಕೆ ಸರಿಯಾಗಿ ಉಪಯೋಗಿಸಿಕೊಂಡು ನಾಟಿ ವೈದ್ಯರ ನಿಯಮಾನುಸಾರ ನಾಟಿ ಔಷಧಿ ಪಡೆಯುವುದರಿಂದ ಜನರು ಆರೋಗ್ಯವನ್ನು ಕಾಪಾಡಿಕೊಂಡು ದೀರ್ಘಕಾಲ ಬದುಕುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೆ ವೈವಿದ್ಯಮಯವಾದ ಜೀವನವನ್ನು ಅನುವಂಶಿಕವಾಗಿ, ಸಾಂಪ್ರದಾಯಕ ಶೋಷಣೆಗಳಿಂದ ಮುಕ್ತವಾಗಿ, ಸ್ಥಳೀಯ ಪರಂಪರೆಯನ್ನು ಅನುಸರಿಸಿ ಸಮಸ್ಯೆಯನ್ನು ಪರಿಹರಿಸಿಕೊಳ್ಳುತ್ತಿದ್ದರು. ನಾಟಿ ವೈದ್ಯವು ಜನರಲ್ಲಿ ಆಹಾರವಾಗಿ, ಔಷಧಿಯಾಗಿ ಸೇವಿಸಿ ಪಚನ, ಮಲನಿವೃತ್ತಿ, ದೈಹಿಕ, ಮಾನಸಿಕವಾಗಿ ನೆಮ್ಮದಿ ಯಿಂದಿರಲು ಸಾಧ್ಯವಾಗುತ್ತಿತ್ತು. ನಾಟಿ ವೈದ್ಯರ ನಿಯಮಗಳಿಗೆ ಅನುಗುಣವಾಗಿ ಜನರು ಹೊಂದಿ ಕೊಂಡು ಹೋಗುತ್ತಿದ್ದರಿಂದ ಅತಿಯಾದ ದೊಡ್ಡ ದೊಡ್ಡ ಖಾಯಿಲೆಗಳು ಬರುತ್ತಿರಲಿಲ್ಲ. ಇದಕ್ಕೆ ಬೇಕಾದ ಎಲ್ಲಾ ರೀತಿಯ ಗಿಡಮೂಲಿಕೆಗಳು ಸಮೃದ್ಧಿಯಾಗಿ ಜನರಿಗೆ ಸ್ವಾಭಾವಿಕವಾದ ಕಾಡುಗಳಿಂದ, ತೋಟಗಳಿಂದ ಯಥೇಚ್ಚವಾಗಿ ದೊರೆಯುತ್ತಿತ್ತು.

ನಾಗರೀಕತೆ ಹೆಚ್ಚಿದಂತೆ ಇಂಗ್ಲಿಷ್ ನವರು ನಮ್ಮ ದೇಶದ ಮೇಲೆ ಅತಿಕ್ರಮಣ ಮಾಡಿ ಭಾರತ ದೇಶದ ಸಂಸ್ಕೃತಿಯ ಮೇಲೆ ಅಪಾರವಾದ ಅಘಾತವನ್ನು ತಂದಿಟ್ಟರು. ನಮ್ಮ ಜನರಲ್ಲಿದ್ದ ಹಲವಾರು ಪರಂಪರಾ ವಿಚಾರಗಳು ಮೂಲೆ ಗುಂಪಾದವು. ಇದು ಶ್ರೀಮಂತ ಸ್ವರೂಪವನ್ನು ತಾಳಿದ ನಂತರ ನಾಟಿ ವೈದ್ಯರ ಮೇಲೆ ಹಲವಾರು ಪರಿಣಾಮಗಳು ಬೀರಿ ನಾಟಿ ವೈದ್ಯವು ಈ ಕೆಳಗಿನ ಕಾರಣಗಳಿಂದ ತನ್ನ ನಂಬಿಕೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆಯಾಯಿತು.

೧. ನಾಗರೀಕರ ಅಸಡ್ಡೆಯಿಂದ

೨. ಗಿಡಗಳು ಸಿಕ್ಕದೆ ಇರುವುದು

೩. ಪರಿಸರ ನಾಶ

೪. ಗಿಡಗಳು ಬೆಳೆಯದೆ ಇರುವುದು

೫. ಹೇಗೆ ಉಪಯೋಗಿಸಬೇಕು ಎಂದು ತಿಳಿಯದೆ ಇರುವುದು

೬. ಇಂಗ್ಲೀಷರ ಔಷಧಿಗಳು

೭. ಕೈಗಾರೀಕರಣ

೮. ಜನಸಂಖ್ಯೆ ಹೆಚ್ಚಳ

ಈ ಪದ್ಧತಿಯು ಆದಿವಾಸಿಗಳಲ್ಲಿ ಮತ್ತು ಕಾಡಿಲ್ಲಿ ವಾಸ ಮಾಡುವ ಜನರಲ್ಲಿ, ಕೆಲವು ಊರುಗಳಲ್ಲಿ ಉಳಿದುಕೊಂಡು ಬಂದಿದೆ. ಅದರಲ್ಲೂ ಕೆಲವೇ ಕೆಲವು ಜನಾಂಗದಲ್ಲಿ ಮಾತ್ರ ಉಳಿದುಕೊಂಡಿದೆ. ಈ ನಾಟಿ ವೈದ್ಯದ ಪದ್ಧತಿಯನ್ನು ಉಳಿಸಿಕೊಳ್ಳಲು, ಶೈಕ್ಷಣಿಕವಾಗಿ ಎಲ್ಲ ವರ್ಗದ ಜನರಲ್ಲಿಯೂ ಪ್ರಚಲಿತ ಮಾಡಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.

ನಾಟಿ ವೈದ್ಯವನ್ನು ಉಳಿಸುವುದು

೧. ನಾಟಿ ವೈದ್ಯರ ಸಮ್ಮೇಳನಗಳನ್ನು ಮಾಡುವುದು

೨. ಜನಾಂಗೀಯ ಔಷಧಿ ತೋಟಗಳನ್ನು ಮಾಡಿಸುವುದು.

೩. ಸ್ವಾಭಾವಿಕ ಔಷಧಿ ತೋಟಗಳನ್ನು ಬೆಳೆಸುವುದು

೪. ನಾಟಿ ವೈದ್ಯರಿಗೆ ಪ್ರೋತ್ಸಾಹವನ್ನು ಕೊಡುವುದು

೫. ನಾಟಿ ಔಷಧಿಯನ್ನು ಡಾಕ್ಯುಮೆಂಟೆಷನ್ ಮಾಡುವುದು

೬. ಔಷಧಿಗಳಿರುವ ಸ್ಥಳಗಳನ್ನು ಸಂರಕ್ಷಿಸುವುದು

೭. ನಾಟಿ ವೈದ್ಯರನ್ನು ಶಿಕ್ಷಣ ಇಲಾಖೆಯಲ್ಲಿ ನೊಂದಾಯಿಸಿ ಪಠ್ಯಕ್ರಮದಲ್ಲಿ ಹಾಕುವುದು

೮. ವನೌಷಧಿ ತೋಟಗಳನ್ನು ನಿರ್ಮಿಸುವುದು

೯. ನೈಸರ್ಗಿಕವಾಗಿ ಬೆಳೆದಿರುವ ಸಂರಕ್ಷಿತ ಕಾಡುಗಳು, ರಾಷ್ಟ್ರೀಯ ಗ್ರಾಮೀಣ, ಇತರೆ ಕಾಡುಗಳನ್ನು ಬೆಳೆಸುವುದು.

೧೦. ನಾಟಿ ವೈದ್ಯದ ಉಪಯೋಗವನ್ನು ಎಲ್ಲರೂ ತಿಳಿಯುವಂತೆ ಮಾಡುವುದು.

೧೧. ನಾಟಿ ವೈದ್ಯರುಗಳನ್ನು ಗುರ್ತಿಸಿ ಅವರಿಗೆ ಪುರಸ್ಕಾರ ಕೊಡುವುದು.

ಜೀವಿಗಳು ಮತ್ತು ಸಸ್ಯ ಸಂಪತ್ತಿನ ನಡುವಿನ ಹೊಂದಾಣಿಕೆಯ ವೈಶಿಷ್ಟ್ಯತೆಗಳು

೧. ಪ್ರಪಂಚದ ಶೇಕಡ ೯೦ ಭಾಗದಷ್ಟು ಆಹಾರವನ್ನು ೨೦ ಸಸ್ಯ ಜಾತಿಯಿಂದ ಪಡೆಯಲಾಗುವುದು.

೨. ೧.ಗ್ರಾಂ ಮಣ್ಣಿನಲ್ಲಿ ೨೫೦೦ ಮಿಲಿಯ ಬ್ಯಾಕ್ಟೀರಿಯಾಗಳಿರುತ್ತವೆ.

೩. ಒಂದು ಬ್ಯಾಕ್ಟೀರಿಯಾವು ೨೮೦ ಮಿಲಿಯ ಬ್ಯಾಕ್ಟೀರಿಯಾವನ್ನು ಒಂದು ದಿನದಲ್ಲಿ ಉಂಟು ಮಾಡುವುದು.

೪. ರಿಸ್ಯೀಸಿಯಾ ಎಂಬ ಸಸ್ಯದ ಹೂ ಇಡೀ ಪ್ರಪಂಚದಲ್ಲಿ ಅತ್ಯಂತ ದೊಡ್ಡ ಹೂ, ಅದರ ವ್ಯಾಸ ಒಂದು ಮೀಟರ್

೫. ಕೊಕೋ-ಡಿ-ಮೆರ್ ಎಂಬ ಸಸ್ಯದ ಬೀಜ ೧೮ ಕೆ.ಜಿ.ಇರುತ್ತದೆ.

೬. ಇಡೀ ಪ್ರಪಂಚದಲ್ಲಿ ಉಪಯೋಗಿಸುವ ೧/೨ ಭಾಗದ ಆಹಾರ ಕೇವಲ ೩ ಸಸ್ಯಗಳಿಂದ ದೊರೆಯುತ್ತದೆ (ಗೋಧಿ, ಭತ್ತ, ಜೋಳ)

೭. ಸಸ್ಯಗಳು ಸೂರ್ಯನ ಶಕ್ತಿಯನ್ನು ಕೇವಲ ಶೇಕಡ ಒಂದು ಮಾತ್ರ ಉಪಯೋಗಿಸಿಕೊಳ್ಳುತ್ತವೆ.

೮. ಹುಲ್ಲು ಭೂಮಿಯ ೧/೪ ಭಾಗದಷ್ಟು ಬೆಳೆದಿರುತ್ತದೆ.

೯. ಹೆಸರಿಲ್ಲದ ಗಿಡಗಳು, ಶಿಲೀಂದ್ರಗಳು, ಅಣಬೆಗಳು ೧೦೦೦ ವಿಧಗಳಿವೆ.

೧೦. ೭.೫ ಸೆ.ಮೀ. ಎತ್ತರದ ಗೂಡಿನಲ್ಲಿ ಮಿಲಿಯನ್ ಗಟ್ಟಲೆ ಗೆದ್ದಲು ಹುಳುಗಳು ವಾಸಿಸುತ್ತವೆ.

೧೧. ಡ್ರಾಗನ್ ಎಂಬ ಕೀಟದ ಕಣ್ಣಿನಲ್ಲಿ ೩೦,೦೦೦ ಸಂಯುಕ್ತ ಕಣ್ಣುಗಳಿವೆ.

೧೨. ಒಂದು ಪ್ರಾಯವಿರುವ ಹೆಬ್ಬಾವು ಒಂದು ವರ್ಷ ಆಹಾರವಿಲ್ಲದಿದ್ದರೂ ಬದುಕಿರುತ್ತದೆ.

೧೩. ಅತಿ ಸಣ್ಣ ಪಕ್ಷಿಯೊಂದು ತನ್ನ ಜೀವಿತ ಕಾಲದವರೆಗೆ ೧೫ ಲಕ್ಷ ಕಂಬಳಿ ಹುಳುವನ್ನು ತಿನ್ನುವುದು.

೧೪. ಸಣ್ಣಪಕ್ಷಿಯೊಂದು ೧/೨ ಗಂಟೆಯಲ್ಲಿ ೩೦೦೦-೪೦೦೦ ಗಿಡದ ಹೇನುಗಳನ್ನು ತಿನ್ನುವುದು.

೧೫. ೨೧ ತಿಂಗಳವರೆಗೆ ಆನೆ ಮರಿ ತನ್ನ ತಾಯಿ ಗರ್ಭದೊಳಗೆ ಬೆಳೆಯುವುದು.

೧೬. ಜಲಚರದಲಿ ನೀಲಿ ತಿಮಿಂಗಲವು ೩೩ ಮೀ ಬೆಳೆಯುತ್ತದೆ.

೧೭. ಚಿರತೆಯು ಗಂಟೆಗೆ ೧೦೦ ಕಿ.ಮೀ.ವೇಗದಲ್ಲಿ ಓಡಿ ತನ್ನ ವೇಗದ ದಾಖಲೆಮಾಡಿದೆ.

೧೮. ಗಂಧದಿಂದ ತಯಾರಿಸಿದ ೧೦ ಗ್ರಾಂ ಎಣ್ಣೆಗೆ ೩೫೦ರೂ. ಆಗುವುದು.

೧೯. ಆರ್ಕಿಡ್ ಹೂಗಳು ಆತಿ ಸುಂದರವಾದ ಹೂಗಳು ೫-೬ ವರ್ಷಕ್ಕೊಮ್ಮೆ ಹೂ ಬಿಡುತ್ತವೆ.

೨೦. ಸಸ್ಯ ಮತ್ತು ಪ್ರಾಣಿಗಳಲ್ಲಿ ಸಹ ಬಾಳತ್ವವಿರುವುದರಿಂದ ದೊಡ್ಡ ಕಾಡುಗಳು ಬೆಳೆಯಲು ಸಾಧ್ಯವಾಯಿತು.

೨೧. ಮೊಸಳೆಯ ಹಲ್ಲುಗಳನ್ನು ಪ್ಲೋಮ್ ಪಕ್ಷಿ ಸ್ವಚ್ಚತೆ ಮಾಡುತ್ತದೆ. ಆದರೆ ಮೊಸಳೆ ಪಕ್ಷಿಯನ್ನು ತಿನ್ನುವುದಿಲ್ಲ.

೨೨. ರೇಷ್ಮೆ ಹುಳುವು ತನ್ನ ಬಾಯಿಯಿಂದ ಉಗುಳುವ ರಸದಿಂದ ರೇಷ್ಮೆ ದಾರ ತಯಾರಾಗುವುದು.