ಇನ್ನು ಗೋಕರ್ಣ ಮಂಡಳದ ಗ್ರಾಮದೇವತೆಗಳ ದರ್ಶನವನ್ನು ತುಸು ಹತ್ತಿರದಿಂದ ಪಡೆಯೋಣ.

ಇಲ್ಲಿಯ ಗ್ರಾಮಾಧಿ ದೇವತೆ ಮಂಕಾಳಮ್ಮ. ಇವಳನ್ನೇ ಭದ್ರಕಾಳಿ ಎಂದು ಕರೆಯುತ್ತಾರೆ. ಮಾದನಗೇರಿಯಿಂದ ಮುಂದೆ ಹಿರೇಗುತ್ತಿಯ ಸಮೀಪ ಬಳಲೆ ಗ್ರಾಮವಿದೆ. ಅಲ್ಲಿಯ ಅಮ್ಮನವರಿಗೆ ಈ ಮಂಕಾಳಮ್ಮನೊಂದಿಗೆ ಹತ್ತಿರದ ಬಾಂಧವ್ಯ. ಅವಳು “ಉತ್ತರ ಕಾಳಿ” ಯಾದರೆ ಮಂಕಾಳಮ್ಮ “ದಕ್ಷಿಣ ಕಾಳಿ”. ಉತ್ತರ ಕಾಳಿಯ ದೃಷ್ಟಿ ದಕ್ಷಿಣಕ್ಕೆ ಶಿರಾಲಿಯಾಚೆಯ ವೆಂಕಾಟಾಪುರ ಹೊಳೆಯವರೆಗೆ ಈ ದಕ್ಷಿಣ ಕಾಳಿಯ ದೃಷ್ಟಿ ಉತ್ತರಕ್ಕೆ ಕಾಳೀನದಿಯ ತನಕ. ಹನೆಹಳ್ಳಿಯ ಅಮ್ಮ, ಅಗ್ರಗೋಣ – ಅಡಿಗೋಣ – ಹೆಗ್ರೆಗಳಲ್ಲಿಯ ಅಮ್ಮ, ಅಶೋಕೆಯ (ನೀರ್ಹಳ್ಳದ) ಅಮ್ಮ, ಬೈರಕಣಿಯ ಅಮ್ಮ, ಬಳಲೆಯ ಅಮ್ಮ,- ಇವರೆಲ್ಲರಿಗೂ ನಮ್ಮ ಮಂಕಾಳಮ್ಮ ಹಿರಿಯಕ್ಕ. ಅಲ್ಲಲ್ಲಿಯ ಸ್ಥಾನಿಕ ಅಮ್ಮನವರಿಗೆ “ಬಾಗಿಲ ಕಟ್ಟಿ” “ಅಪ್ಪಣೆ” ಕೇಳಿದಾಗ ಅದು ಅಳವು ಮೀರಿದ್ದರೆ ಅದು ಗೋಕರ್ಣದ ಅಕ್ಕನಿಗೆ ಕೇಳಿ ಎಂದು ಅಪ್ಪಣೆ ಕೊಡುತ್ತಾರೆ. ಇವರಲ್ಲಿ ತೊರ್ಕೆಯ “ಕೆಂಗಳಾಪರಮೇಶ್ವರಿ” ಅಮ್ಮನೂ ಸೇರಿದ್ದಾಳೆ.

ಮಂಕಾಳಮ್ಮನಿಗೆ ಹೇಗೋ ಈ ಎಲ್ಲ ಅಮ್ಮಂದಿರಿಗೂ ಬಲಿಷ್ಠ ಉಗ್ರ ಪರಿವಾರ ದೇವತೆಗಳಿವೆ. ಬಂಟ, ಬೀರ ಮತ್ತು ಹೊಸಬ ದೇವರೆಂದು ಅವರ ಹೆಸರು. ಇವರು ಹೆಚ್ಚಾಗಿ ಅಲ್ಲಲ್ಲಿಯ ಅಂದಿನ ಹೆದ್ದಾರಿಗಳ ಆಯಕಟ್ಟಿನ ಸ್ಥಾನಗಳ ರಕ್ಷಕರು. ಬರ್ಗಿಯ ಗಟ್ಟದ ಹೊನ್ನ, ತದಡಿಯ ಹಾರೂಬೀರ, ಗಂಗಾವಳಿ ಹೊಳೆಯಂಚಿನ ಕೋಡಿಬೀರ ಹಾಗೆಯೇ ಗಟ್ಟದ ಹೊನ್ನ ಮುಂತಾದವರು ಇದಕ್ಕೆ ಮಾದರಿ. ಇವರಲ್ಲಿ ನಡೆದುಕೊಳ್ಳುವ ಸಮಾಜಗಳು ಆಯಾ ಊರಿನಂತೆ ಬೆರೆ ಬೇರೆ. ಆದರೆ ಹೆಚ್ಚಾಗಿ ಆಗೇರ ಹಳ್ಳೇರ ಅಸ್ಪೃಶ್ಯ ವರ್ಗದವರು. ಗೋಕರ್ಣದಲ್ಲಿಯ ಬೀರದೇವರಲ್ಲಿ (ತಲಗೇರಿ) ಬಂಡಿ ಹಬ್ಬದ ಮುಕ್ರಿ “ಹೂವಿನ ಮಕ್ಕಳು” ತಮ್ಮ ಆ ಹಬ್ಬದ ಹೂವಿನ ಮಾಲೆಯ ಉಡುಪನ್ನು ಹಬ್ಬದ ಕೊನೆಯ ಸಂಜೆಗೆ ವಿಸರ್ಜಿಸುತ್ತಾರೆ.

ಮಂಕಾಳಮ್ಮ, ಕೆಂಗಳಾ ಪರಮೇಶ್ವರಿ ಇವರೆಲ್ಲ ಮೂಲತಃ ಒಂದೊಂದು “ಕಾನಿ” ನಲ್ಲಿ ಏಕಾಂತದಲ್ಲಿ ನಿಂತಿದ್ದಾರೆ. “ಕಾನು” ಅಂದರೆ ಸಣ್ಣ ಅಡವಿ. (ಈಚೆಗೆ ಅದೆಲ್ಲ ಸವರಿ ಬಯಲಾಗುತ್ತಿದೆ.) ಸಂಸ್ಕೃತ ದುರ್ಗಾ ಸ್ತೋತ್ರದಲ್ಲಿಯೂ “ಕಾಂತಾರ ಭಯ ದುರ್ಗೇಷು” ಎಂದು ವರ್ಣನೆ ಬರುತ್ತದೆ. ಈ ಎಲ್ಲ  ದೇವಿಯರ ಇನ್ನೊಂದು ವಿಶೇಷ ಅವರ ಹಿಂದೆ ಇಲ್ಲವೇ ಹತ್ತಿರವೇ ಹುತ್ತ ಬೆಳೆದು ನಿಂತಿದ್ದು. ಇವರೆಲ್ಲ “ಭೂಮಿ ತಾಯಿ” ಆ ತಾಯಿಯು ಮೈವೆತ್ತು ಮೂಡಿಬಂದ ರೂಪವೇ ಹುತ್ತ. ಗೋಕರ್ಣ ಮಹಾಬಲೇಶ್ವರ ದೇವರನ್ನು ಈ ಮಂಕಾಳಮ್ಮ “ಅಣ್ಣಾ” ಎಂದು ಕರೆಯುತ್ತಾಳೆ. ಕಲಶ ಹೊತ್ತ ಗುನಗನಿಗೆ ಭಾವಾವೇಶ ಬಂದಾಗ, ಭದ್ರಕಾಳಿಯಾಗಿ ಅಮ್ಮನವರಿಗೆ  ಆಗಮೋಕ್ತ ಪೂಜಾವಿಧಾನ ಶ್ರೀಚಕ್ರ ಕುಂಕುಮಾರ್ಚನೆ ಇತ್ಯಾದಿ ಸಲ್ಲುತ್ತಿದ್ದರೂ ಅದರ ಮೂಲದ ಬ್ರಾಹ್ಮಣೇತರ ಹಾಗೂ ಶೂದ್ರ ಶ್ರದ್ದೆಗೆ ಒಪ್ಪಿದ ಭೂತಬಲಿ, ಪರಿವಾರ ದೇವರುಗಳ ಪೂಜೆ ವಾರ್ಷಿಕ ಬಂಡಿ ಕಲಶದ ಹಬ್ಬ ಅದಕ್ಕೇ ಸಂಬಂಧಿಸಿದ ಆವಾರಿ ಕುರಿ – ಕೋಳಿಗಳ ಬಲಿ ಇವೆಲ್ಲ ತಪ್ಪದೇ ನಡೆಯುತ್ತವೆ. ಅಲ್ಲದೆ ದೇವಿಯ “ಭಾರ” ಬಂದು ಅಪ್ಪಣೆ ಕೊಡುವುದೂ ಇದೆ. ಇದೆಲ್ಲ ಬ್ರಾಹ್ಮಣ ಅರ್ಚಕರದಲ್ಲ. ಇದಕ್ಕೆಲ್ಲ ಅನಾದಿಯಿಂದಲೂ “ಗುನಗ” ನೇ ಅಧಿಕಾರಿ. ಆತ ಕುಂಬಾರ.

ಈ ಗುನಗರು ಹೆಚ್ಚಾಗಿ ಕುಂಬಾರರು. ಹುತ್ತದ ಅಮ್ಮದ ಪೂಜೆ ಮಣ್ಣಿನ ಕೆಲಸದ ಕುಂಬಾರರಿಗೇ ಮೀಸಲಾಗಿ ಬಂದದ್ದು ಸಮಂಜಸವೇ. ಆದರೆ  ಅವನ ಈ “ಗುನಗ” ಅಥವಾ “ಗುನಿಗ” ಹೆಸರು ಮಾರ್ಮಿಕವಾಗಿದೆ. “ಗುನಿ” ಎಂದರೆ ಗುಂಗು ಅಮಲು. ಅಮ್ಮನವರ ಪೂಜಾರಿಗೆ ಕಲಶ ಹೊತ್ತಾಗ, ಬಾಗಿಲ ಕಟ್ಟಿದಾಗ “ಭಾರ” ಆವೇಶ ಬರುತ್ತದೆ. ಅಮ್ಮ ಮೈಯಲ್ಲಿ ಸಂಚರಿಸುತ್ತಾಳೆ. ಆತ ಆ ಗುಂಗಿನಲ್ಲಿಯೇ ನಡೆಯುತ್ತಾನೆ, ನುಡಿಯುತ್ತಾನೆ. ಅಂತೆಯೇ  ಆತ “ಗುನಿಗ” – ಗುನಕ ಇದೂ ಅಲ್ಲದೆ ಹಾಗೆ “ಮೈಮೇಲೆ” ಬಂದಾಗ ಆತ ಗುನುಗುತ್ತ – ಗೊಣಗುತ್ತ ಇರುತ್ತಾನೆ. ಅಂತೆಯೇ ಆತ “ಗುನಗ”. ಅಮ್ಮನವರ ಪೂಜೆಗೆ ಕೆಲವೆಡೆಗೆ ಹಾಲಕ್ಕಿಗೌಡನೂ ಇರುತ್ತಾನೆ. ನಾಮಧಾರಿ ಬಂಟನೂ ಇರುತ್ತಾನೆ. ಅವರೆಲ್ಲ ಗುನುಗು ಕೈ ಅರ್ಥಾತ್ “ಗುನಗ” ನೆಂದರೆ ಅಮ್ಮನವರ ಅರ್ಚಕನೆಂದೇ ಅರ್ಥ.

ಜಟ್ಗ ಚೌಡಿಗಳಂತೆ ಅಮ್ಮನವರೂ ಕಾನಿನಲ್ಲಿ ಗಿಡ ಮರಗಳ ನಡುವೆ [“ಬಲ್ಲೆ” ಯಲ್ಲಿ] ಇರುವವಳು. ಇವಳನ್ನು “ಈಚಲ ಮರದವ್ವ” ಎನ್ನುತ್ತಾರೆ. ಸಂಸ್ಕೃತದಲ್ಲಿ ಇದನ್ನೇ “ಕದಂಬ ವನ ಚಾರಿಣೀ” ಎಂದು ಬಣ್ಣಿಸಲಾಗಿದೆ. ಈಚಲಮರದ ಮದ್ಯ ಈ ಅಮ್ಮನವರ ದೇವಾವೇಶದ ಉನ್ಮಾದಕ್ಕೆ ಸರಿ. [ಅಲ್ಲದೆ ಶಾಕ್ತರ “ಪಂಚಮಕಾರ” ಗಳಲ್ಲಿ ಮದ್ಯವೂ ಸೇರಿದೆ] ಕದಂಬ ಎಂದರೆ ಈಚಲಮರ.

ಈ ಅಮ್ಮನವರ ಪರಿವಾರ ಒಟ್ಟು ೧೨ ಹಿರಿಕಿರಿ ಉಪದೇವತೆಗಳಿಂದ ಕೂಡಿದೆ. ಅವರು ಕಡಬ, ಹೊಸಬ, ಹೊಲೆಯಟ್ರ, ಗಟ್ಟದ ಹೊನ್ನ, ಬೀರ ದೇವತಮ್ಮ, ಮುರ್ಕುಂಡಿ ಮತ್ತು ಹುಲಿದೇವ್ರು. ಇವರೊಂದಿಗೆ ಸಣ್ಣ ಕಡಬ ಹಾಗೆಯೇ ದೊಡ್ಡ ಹೊಸಬ, ಸಣ್ಣ ಹೊಸಬ ಬೇರೆ ಸೇರಿದ್ದು ಹಾಲಕ್ಕಿ ಒಕ್ಕಲ ಸುಗ್ಗಿಯ ಕರಿದೇವ್ರು ಬೇರೆ ಇದ್ದಾನೆ. ಈ ದೇವಿಯ ಬಂಡಿ ಕಲಶದ ಹಬ್ಬ ಕಲಶದ ಹಬ್ಬ ನಡೆಯುವುದೂ ೧೨ ದಿನವೇ.

ಕಡಬ ಈ ಪರಿವಾರದಲ್ಲಿ ಹಿರಿಯ. ಕಡಬ ಅಂದರೇನು? ಈ ಶಬ್ದಕ್ಕೆ ಇಚಲ ಮರವೆಂದೂ ಅರ್ಥವಿದೆ. [ದ. ಕನ್ನಡದಲ್ಲಿ ಕದಂಬವೆಂದೂ ರೂಢಿಯಲ್ಲಿದೆ. ಇದರ ಪರಿಷ್ಕೃತ ರೂಪ ಕಡಬ ?] ಕಡು ಎಂದರೆ ಕದ – ಬಾಗಿಲು. ಕಡಬ ಎಂದರೆ ಬಾಗಿಲ ಜಟ್ಗ, ದ್ವಾರಪಾಲಕ ಎನ್ನಬಹುದು. ಪರಿವಾರದಲ್ಲಿ ಈ ದೇವರಿಗೆ ಮೊದಲು ಪೂಜೆ. ಕಡವಳ ಎಂದರೆ ಒಂದು ದೇವತೆ ಎಂದಿದೆ ನಿಘಂಟು. [ಕಡಪ ಬಯಲು ಸೀಮೆಯಲ್ಲಿಯೂ ಇದೆ.] ಇವನ ಹತ್ತಿರವೇ ಸಣ್ಣ ಕಡಬ. ಇವನಲ್ಲಿಯೇ ಕೋಳಿ – ಕುರಿಗಳ ಬಲಿ. ಹೆಚ್ಚಾಗಿ ಹಾಲಕ್ಕಿಗಳ ದೇವರು.

ಹೊಸಬ. ಇವರು ಒಟ್ಟು ಮೂರು. ಮೂವರೂ ಬಂಟರು. ಇವರು ಬೀರ ದೇವರಿಗೆ ಪರ್ಯಾಯ. ಈ ಹೊಸಬ ಯಾರು? ಹೆಸರೇ ಹೇಳುವಂತೆ ಈತ ಆಗಂತುಕನೇ ? ಸೋಜಿಗದ ವಿಚಿತ್ರ ವ್ಯಕ್ತಿ ಎಂದೂ ಹೊಸಬನಿಗೆ ಒಂದು ಅರ್ಥ. ಇವರು ಮೂವರು – ಹಿರಿಯ. ದೊಡ್ಡ – ಸಣ್ಣ. ಕುರಿ – ಕೋಳಿಗಳ ಬಲಿ ಸಣ್ಣ ಹೊಸಬನ ಇದಿರು. [ಹಿರೇಗುತ್ತಿಯ ಬೊಮ್ಮಯ್ಯ ದೇವರಿಗೆ ಹಿರಿ ಹೊಸಬ ಸೇನಾಪತಿಯಂತೆ ಇದ್ದಾನೆ. ಅವನಿಗೂ ಸಣ್ಣ ಹೊಸಬ ಪುಸ್ತಕ. ಅಲ್ಲಿಯೂ “ಆವಾರಿ” [ಕುರಿ ಕೋಳಿ] ನಡೆಯುತ್ತದೆ.

ಹೊಲೆಯಟ್ರ : ವಿಶೇಷತಃ ಮುಕ್ರಿ – ಹಳ್ಳೇರರು ನಡೆದುಕೊಳ್ಳುವ ಸ್ಥಾನ. ಅವನಿಗೆ ಗಟ್ಟದ ಹೊನ್ನ ಹಸ್ತಕ. ಆದರೆ ಈ ಹೊನ್ನ ಭೇರೆ ಸ್ಥಾನಗಳಲ್ಲಿ ಬೇರೆ ಅಂತಸ್ತಿನಲ್ಲಿ ಬೀರನೋ ಆಗಿ ಅಲ್ಲಿಯ ಗ್ರಾಮ ದೈವಕ್ಕೆ ವಿಧೇಯನಾಗಿ ಜಟ್ಗನಿಗೋ ಬೀರನಿಗೋ ಹಸ್ತಕನಾಗಿ ನಡೆಯುವುದೂ ಇದೆ. ಉದಾ. ಹತ್ತಿರದ ಹನೆಹಳ್ಳಿಯ ಅಮ್ಮನವರ ಪರಿವಾರದಲ್ಲಿ [ಎಡ ಬಲಗಳಲ್ಲಿ] ಬಂಟ ಮತ್ತು ಹೊನ್ನಪ್ಪ ದೇವರ ಗುಡಿಗಳಿರುತ್ತವೆ. ಅಲ್ಲದೇ ಅಮ್ಮನವರ ಬಳಿಯಲ್ಲಿಯೇ ಬೀರದೇವರಿದೆ. “ಬಾಗಿಲ ಕಟ್ಟಿ” ದಾಗ ಬೀರದೇವರು “ಭಾರ” ಬಂದು ಗುನಗನ ಬಾಯಿಂದ “ನನ್ನ ತಂಗಿಯನ್ನು ಕೇಳು” ಎಂದು ಅಪ್ಪಣೆ ಕೊಡುತ್ತಾನೆ. ಅಂದರೆ ಅಮ್ಮನವರು ಅವನಿಗೆ ತಂಗಿ. ಹಾಗೆಯೇ ಅಮ್ಮ ಭಾರ ಬಂದಾಗ ನಮ್ಮ (ಗೋಕರ್ಣದ) ಮಂಕಾಳಮ್ಮನಿಗೆ “ನಮ್ಮ ಅಕ್ಕನನ್ನು ಕೇಳು” ಎನ್ನುತ್ತಾಳೆ. ಈ ಜಾನಪದ ಶಕ್ತಿ ದೈವತಗಳಲ್ಲಿಯ ಈ ಅಕ್ಕ – ತಂಗಿ ಅಣ್ಣ – ತಮ್ಮ ಬಾಂಧವ್ಯ ನಿಜವಾಗಿಯೂ ಅಭ್ಯಸನೀಯ.

ಜಗನ್ನಾಥ ಪುರಿಯಲ್ಲಿಯ ಮುಖ್ಯ ಮೂರು ವಿಗ್ರಹಗಳು – ಕೃಷ್ಣ, ಬಲರಾಮ, ಮತ್ತು ಸುಭದ್ರೆ ! ಈ ದೇವರುಗಳ ಈ ಸೋದರ ಸಂಬಂಧವೇಕೆ ? ರಾಮ – ಸೀತೆ, ಕೃಷ್ಣ -ರುಕ್ಮಿಣಿ, ಲಕ್ಷ್ಮೀ – ನಾರಾಯಣ, ಶಿವ – ಪಾರ್ವತಿ ಹೀಗೆ ಇಲ್ಲಿ ದೈವ ದಾಂಪತ್ಯವಿಲ್ಲ. ಇದಕ್ಕೆ ಒಂದು ಕಾರಣ ಹೀಗೆ ಕೊಡುತ್ತಾರೆ. ಹಿಂದೆ ಈ ಸ್ಥಾನ ಬುದ್ಧನದಾಗಿತ್ತು. ಅಲ್ಲಿ ಬೌದ್ದರ “ತ್ರಿಪೀಠಿಕೆ” ಗ್ರಂಥಗಳಿಗೆ ಪೂಜೆ ಸಲ್ಲುತ್ತಿತ್ತು. ಅನಂತರ ಅದು ಹಿಂದೂ ದೇವಾಲಯವಾಯಿತು. ಆಗ ಈ ತ್ರಿಪೀಠಿಕೆಗಳ ಸಮಾನ ಬಾಂಧವ್ಯಕ್ಕೆ ಪ್ರತಿಯಾಗಿ ಹೀಗೆ  ಸೋದರ ಸೋದರಿಯರ ದೇವತಾ ಪರಿಕಲ್ಪನೆ ಸ್ಥಾಪಿತವಾಯಿತು. ಬೌದ್ದರ ಮೂರು ಶರಣ ಸ್ಥಾನಗಳು ಬುದ್ದ, ಸಂಘ ಮತ್ತು ಧರ್ಮ ಈ ಮೂರನ್ನೂ ಸೋದರ ಬಾಂಧವ್ಯದಲ್ಲಿಯೇ ಕಾಣಬೇಕಾಗಿ ಬಂತು. ಅದಕ್ಕೆ ಪ್ರತಿಯಾಗಿ ಕೃಷ್ಣ, ಬಲರಾಮ, ಸುಭದ್ರೆಯರು ನಿಂತರು !

ಈ ನಮ್ಮ ಜಾನಪದ ದೇವತೆಗಳ Complex ದಲ್ಲಿಯೂ ಹೀಗೆ ಸೋದರ ಬಾಂಧವ್ಯ ನಡೆದು ಬಂದದ್ದು ಏಕೆ ? ಸಂಶೋಧಕರ ಮಿದುಳಿಗೆ ಇದು ತಿಂಡಿಯಾಗಲಿ.

ಮಂಕಾಳಮ್ಮನ ಪರಿವಾರದಲ್ಲಿ ಉತ್ತರಕ್ಕೆ ದೂರದ ಕುಟ್ಲೆ ಗುಡ್ಡದ ಓರೆಯಲ್ಲಿ ಒಬ್ಬ ಬೀರನಿದ್ದಾನೆ. ಆತ ಅಷ್ಟು ದೂರವೆಂತಲೋ ಏನೋ ಅಮ್ಮನವರ ಗುಡಿಯ ಹತ್ತಿರವೇ  ತುಸು ಅಂತರದಲ್ಲಿ ಪೂರ್ವಕ್ಕೆ ಒಂದು ಗುಂಪಾಗಿಯೇ ನಿಂತ – ಈ ಪರಿವಾರ ದೇವರುಗಳ  ಗುಡಿಗಳ ನಡುವೆ ಹೊಲೆಯಟ್ರನ ಗುಡಿಯಲ್ಲಿಯೇ ಆ ವಿಗ್ರಹದ ಬಲಕ್ಕೆ ಅದೇ ಸಾಲಿನಲ್ಲಿ ನಿಂತಿದ್ದಾನೆ. ಆದರೆ ಇಲ್ಲಿ ಅದು ವಿಗ್ರಹವಲ್ಲ, ಪಾದುಕೆ  ಪಾದ ಚಿಹ್ನೆ. ಸಾಮಾನ್ಯವಾಗಿ ದತ್ತ ಸಂಪ್ರದಾಯದಲ್ಲಿ ಹೀಗೆ ಗುರು ಪಾದುಕೆಗಳ ಪೂಜೆ ಆಗುತ್ತದೆ. ನಾಥ ಸಂಪ್ರದಾಯದಲ್ಲಿಯೂ ಈ “ಪಾದುಕಾ ಪಟ್ಟಾಭಿಷೇಕ” ಇದ್ದರಬಹುದೇ ?  ನಮ್ಮ ಊರಿನ ದಕ್ಷಿಣಕ್ಕೆ ಸಮುದ್ರ ತಿರದ ಒಂದು ಗುಡ್ಡದಲ್ಲಿ ಮಾಣೇಶ್ವರ ಅಥವಾ ಮಣಿಭದ್ರವೆಂಬ ಪ್ರಮುಖ ದೇವಸ್ಥಾನವಿದೆ. ಈ ಮಣಿಭದ್ರನೂ ಒಂದು ಪಾದ ಚಿನ್ಹವೇ ಆಗಿದೆ. [ಈ ಕುರಿತು ಒಂದು ವಿಚಿತ್ರ ಆಖ್ಯಾಯಿಕೆ ಸ್ಥಳ ಪುರಾಣದಲ್ಲಿದೆ, ಸಿದ್ದೇಶ್ವರ ಹಾಗೂ ಮಾಣೇಶ್ವರ ಎಂಬ ಇಬ್ಬರು ಪ್ರಮಥರು ಮಹಾಬಲೇಶ್ವರನ (ಆತ್ಮಲಿಂಗದ) ದರ್ಶನಕ್ಕಾಗಿ ಬಂದರು. ಆದರೆ ಈ ಪುಣ್ಯಕ್ಷೇತ್ರದಲ್ಲಿ “ನೆಲವೆಲ್ಲ ಲಿಂಗ, ಜಲವೆಲ್ಲ ತೀರ್ಥ” ಎಂದು ಪವಿತ್ರ ಭಾವನೆಯಿಂದ ಸಿದ್ದೇಶ್ವರ ಕ್ಷೇತ್ರದ ಹೊರಗೇ ದೂರದಲ್ಲಿ ನೆಲೆನಿಂತ. ಆದರೆ ಸಾಹಸಿಯಾದ ಮಣಿಭದ್ರ ತಲೆಕೆಳಗೆ ಮಾಡಿ ಕೈಗಳ ಮೇಲೆಯೇ ನಡೆದು ಬಂದು ಈಗಿದ್ದ ಸ್ಥಾನದಲ್ಲಿ ಭದ್ರವಾಗಿ ನಿಂತು ತಪಸ್ಸು ಮಾಡಿ ಸದ್ಗತಿಯನ್ನು ಸಂದ. ಆದ್ದರಿಂದ ಇಲ್ಲಿ ಅವನ ವಿಗ್ರಹವಿರದೆ ಬರೇ ಅಂಗಾಲುಗಳೇ ಪೂಜೆಗೆ ಪಾತ್ರವಾಗಿವೆ !] ಈ ಮಣಿಭದ್ರ ಅಥವಾ ಮಾಣೇಶ್ವರನಲ್ಲಿಗೆ ಅಮ್ಮನವರ ಬಂಡಿ ಕಲಶ ಹಬ್ಬದ ದಿಗಳಲ್ಲಿ ಬಂದು ಭೆಟ್ಟಿಕೊಡುತ್ತದೆ, ಅಂದಾಗ ಈತನೂ ಅವಳ ಪರಿವಾರವೇ ಇರಬೇಕು. ಆದರೆ ಇಲ್ಲಿ ಬಿಲ್ಲು – ಬಾಣ, ಕತ್ತಿ ಪಟ್ಟಿಗಳ ಕುದುರೆಯೇರಿದ ಭಟ (ಬಂಟ) ನ ವಿಗ್ರಹವಿಲ್ಲ.

ಇಂಥ ವಿಗ್ರಹ ಕಡಬಾ, ಹೊಸಬ,, ಹೊಲೆಯಡ್ರ ಇತ್ಯಾದಿಗಳಲ್ಲಿ ಇದೆ. (ಕುದುರೆ ಎರಿದ್ದು ಇಲ್ಲ.) ಮಂಕಾಳಮ್ಮನೂ ಹೀಗೆ ಒಬ್ಬನೆ ಬೀರ ಪರಿವಾರ ವಲಯದಲ್ಲಿ ಇದ್ದರೂ ಹನೆಹಳ್ಳಿಯ ಅಮ್ಮನ ಪರಿವಾರದಲ್ಲಿ ಹಲವಾರು ಬೀರರಿದ್ದಾರೆ – ಮಾಣ ಬೀರ, ಹೆಡಿ ಬೀರ, ಹೊನ್ನಪ್ಪ ಬೀರ ಇತ್ಯಾದಿ.

ಮೇಲೆ ಹೇಳಿದ ಹೊಲೆಯಡ್ರ ದೇವರು ಬೇಟೆಯ ದೇವರು. ಬಂಕಿಕೊಡ್ಲಿನ ಮುರ್ಕುಂಡಿಯ ಹಸ್ತಕನಾಗಿಯೂ ಆತ ಇದ್ದಾನೆ. [ನಮ್ಮಲ್ಲಿ ದೊಡ್ಡ ಹೊಸಬನ ಹಸ್ತಕನಾಗಿ ಇರುವಂತೆ.] ಗಂಗಾವಳಿಯ ತಡಿಯ ಅಗ್ರಗೋಣದಲ್ಲಿ ಹೊಲೆಯಟ್ರ ದೇವರಿಗೆ ಮುಕ್ರಿ (ಆಗೇರ) ಯೇ ಪೂಜಾರಿ.

ಮುರ್ಕಂಡಿ ದೇವರು ಆ ಪರಿಸರದಲ್ಲಿ ಒಂದು ಜಾಗೃತ ದೇವರು. ಆತನೂ ಬೀರ. ಹಾಲಕ್ಕಿಹಳ ಪದಗಳಲ್ಲಿ ಆತ ಮಂಕಾಳಮ್ಮ ತಮ್ಮ, ಸೇನಾಪತಿ. ಕೆಂಪು ಕುದುರೆ ಏರಿ ಬೆಳ್ಳಿಯ ಬೆತ್ತ ಜಳಪಿಸುತ್ತ ಬರುತ್ತಾನೆ. ಆದರೆ ಗುಡಿಯಲ್ಲಿ ವಿಗ್ರಹದ ಸ್ಥಿತಿ ಬೇರೆಯೇ. ಆತನೂ ಬಿಲ್ಲು -ಬಾಣ ಹಿಡಿದ ಬೀರ. ಮಾತ್ರವಲ್ಲ, ಅವನಿಗೆ ಪಾದಗಳೇ ಇಲ್ಲ ! ಪೀಠದಲ್ಲಿ ಪಾದವಿಲ್ಲದ ಕಾಲ್ಗಳನ್ನೇ ನಿಲ್ಲಿಸಿದೆ. ಮೂರ್ತಿಯ ಪ್ರಭಾವಳಿಗೆ ಒಂದು ಕಂಚಿನ ಕವಚವು ಸದಾ ಮಾಲವೂ ಮುಚ್ಚಿದೆ. ಸಾಮಾನ್ಯವಾಗಿ ಇಂಥ ಕವಚವನ್ನು ದೇವರನ್ನು ಅಲಂಕಾರ ಮಾಡುವಾಗ ಮಾತ್ರ ತೊಡಿಸುತ್ತಾರೆ. ಇಲ್ಲಿ ಹಾಗಿಲ್ಲ. ವಿಗ್ರಹದ ಕಾಲುಗಳ ಅವಸ್ಥೆಯನ್ನು ಈ ಪ್ರಭಾವಳಿಯ ಸ್ವರೂಪವನ್ನು ನೋಡಿದರೆ ಇದು ಹಿಂದಿನಿಂದಲೂ ಒಂದು ಒಡೆದ ವಿಗ್ರಹವಿಬೇಕು. ಅದನ್ನು ಹಾಗೆಯೇ ಇದ್ದಕಿದ್ದಂತೆ ಸ್ಥಾಪಿಸಿದ್ದಾಗಿರಬೇಕು.

ಹೊಸಬ : ಇವರು ಒಟ್ಟು ಮೂರು. ಮೂವರು ಬಂಟರು. ಇವರು ಬೀರ ದೇವರಿಗೆ ಪ್ರರ್ಯಾಯ. ಈ ಹೊಸಬ ಯಾರು? ಹೆಸರೇ ಹೇಳುವಂತೆ ಇತ ಆಗಂತುಕನೇ? ಸೋಜಿಗದ ವಿಚಿತ್ರ ವ್ಯಕ್ತಿ ಎಂದೂ ಹೊಬ್ಬನಿಗೆ ಒಂದು ಅರ್ಥ. ಇವರು ಮೂವರು – ಹಿರಿಯ, ದೊಡ್ಡ ಮತ್ತು ಸಣ್ಣ. ಕುರಿ-ಕೋಳಿಗಳ ಬಲಿ ಸಣ್ಣ ಹೊಸಬನ ಇದಿರು. [ಹಿರೇಗುತ್ತಿಯ ಬೋಮ್ಮಯ್ಯ ದೇವರಿಗೆ ಹಿರಿ ಹೊಸಬ ಸೇನಾಪತಿಯಂತೆ ಇದ್ದಾನೆ. ಅವನಿಗೂ ಸಣ್ಣ ಹೊಸಬ ಹಸ್ತಕ. ಅಲ್ಲಿಯೂ “ಆವಾರಿ” [ಕುರಿ ಕೋಳಿ] ನಡೆಯುತ್ತದೆ.

ಹೊಲೆಯಟ್ರ : ವಿಶೇಷತಃ ಮುಕ್ರಿ – ಹಳ್ಳೇರರು ನಡೆದುಕೋಳ್ಳುವ ಸ್ಥಾನ. ಅವನಿಗೆ ಗಟ್ಟದ ಹೊನ್ನ ಹಸ್ತಕ. ಆದರೆ ಈ ಹೊನ್ನ ಬೇರೆ ಸ್ಥಾನಗಳಲ್ಲಿ ಅಂತಸ್ತಿನಲ್ಲಿ ಬೀರನೋ ಬಂಟನೋ ಆಗಿ ಅಲ್ಲಿಯ ಗ್ರಾಮ ದೈವಕ್ಕೆ ವಿಧೇಯನಾಗಿ ಜಟ್ಗನಿಗೋ ಬೀರನಿಗೋ ಹಸ್ತಕನ್ನಾಗಿ ನಡೆಯುವುದೂ ಇದೆ. ಉದಾ. ಹತ್ತಿರದ ಹನೆಹಳ್ಳಿಯ ಅಮ್ಮನ್ನವರ ಪರಿವಾರದಲ್ಲಿ [ಎಡ ಬಲಗಳಲ್ಲಿ] ಬಂಟ ಮತ್ತು ಹೊನ್ನಪ್ಪ ದೇವರ ಗುಡಿಗಳಿರುತ್ತವೆ. ಅಲ್ಲದೇ ಅಮ್ಮನವರ ಬಳಿಯಲ್ಲಿಯೇ ಬೀರ ದೇವರಿದೆ. ” ಬಾಗಿಲ ಕಟ್ಟಿ” ದಾಗ ಬೀರ ದೇವರು “ಭಾರ” ಬಂದು ಗುನಗನ ಬಾಯಿಂದ” ತನ್ನ ತಂಗಿಯನ್ನು ಕೇಳು” ಎಂದು ಅಪ್ಪಣೆ ಕೊಡುತ್ತಾನೆ. ಅಂದರೆ ಅಮ್ಮನವರು ಅವನಿಗೆ ತಂಗಿ. ಹಾಗೆಯೇ ಅಮ್ಮ ಭಾರ ಬಂದಾಗ ನಮ್ಮ (ಗೋಕರ್ಣದ) ಮಂಕಾಳಮ್ಮನಿಗೆ “ನಮ್ಮ ಅಕ್ಕನನ್ನು ಕೇಳು ” ಎನ್ನುತ್ತಾರೆ. ಈ ಜಾನಪದ ಶಕ್ತಿ ದೈವತಗಳಲ್ಲಿಯ ಈ ಅಕ್ಕ – ತಂಗಿ ಅಣ್ಣ-ತಮ್ಮ ಬಾಂಧವ್ಯ ನಿಜವಾಗಿಯೂ ಅಭ್ಯಸನೀಯ.

ಜಗನ್ನಾಥ ಪುರಿಯಲ್ಲಿಯ ಮುಖ್ಯ ಮೂರು ವಿಗ್ರಹಗಳು – ಕೃಷ್ಣ , ಬಲರಾಮ ಮತ್ತು ಸುಭದ್ರೆ ! ಈ ದೇವರುಗಳ ಈ ಸೋದರ ಸಂಬಂಧವೇಕೆ? ರಾಮ – ಸೀತೆ, ಕೃಷ್ಣ-ರುಕ್ಮಣಿ, ಲಕ್ಷ್ಮಿ – ನಾರಾಯಣ, ಶಿವ – ಪಾರ್ವತಿ, ಹೀಗೆ ಇಲ್ಲಿ ದೈವ ದಾಂಪತ್ಯವಿಲ್ಲ. ಇದಕ್ಕೆ ಒಂದು ಕಾರಣ ಹೀಗೆ ಕೊಡುತ್ತಾರೆ. ಹಿಂದೆ ಈ ಸ್ಥಾನ ಬುದ್ಧರಾಗಿತ್ತು. ಅಲ್ಲಿ ಬೌದ್ಧರ ” ತ್ರಿಪೀಠಿಕೆ” ಗ್ರಂಥಗಳಿಗೆ ಪೂಜೆ ಸಲ್ಲುತ್ತಿತ್ತು. ಅನಂತರ ಅದು ಹಿಂದೂ ದೇವಾಲಯವಾಯಿತು. ಆಗ ಈ ತ್ರಿಪೀಠಿಕೆಗಳ ಸಮಾನ ಬಾಂಧವ್ಯಕ್ಕೆ ಪ್ರತಿಯಾಗಿ ಹೀಗೆ ಸೋದರ ಸೋದರಿಯರ ದೇವತಾ ಪರಿಕಲ್ಪನೆ ಸ್ಥಾಪಿಸಲಾಯಿತು. ಬೌದ್ಧರ ಮೂರು ಶರಣ ಸ್ಥಾನಗಳು ಬುದ್ಧ , ಸಂಘ ಮತ್ತು ಧರ್ಮ ಈ ಮೂರನ್ನೂ ಸೋದರ ಬಾಂಧವ್ಯದಲ್ಲಿಯೇ ಕಾಣಬೇಕಾಗಿ ಬಂತು. ಅದಕ್ಕೆ ಪ್ರತಿಯಾಗಿ ಕೃಷ್ಣ , ಬಲರಾಮ, ಸುಭದ್ರೆಯರು ನಿಂತರು !

ಈ ನಮ್ಮ ಜಾನಪದ ದೇವತೆಗಳ Complex ದಲ್ಲಿಯೂ ಹೀಗೆ ಸೋದರ ಬಾಂಧವ್ಯ ನಡೆದು ಬಂದದ್ದು ಏಕೆ? ಸಂಶೋಧಕರ ಮಿದುಳಿಗೆ ಇದು ತಿಂಡಿಯಾಗಲಿ.

ಮಂಕಾಳಮ್ಮನ ಪರಿವಾರದಲ್ಲಿ ಉತ್ತರಕ್ಕೆ ದೂರದ ಕುಟ್ಲೆ ಗುಡ್ಡದ ಓರೆಯಲ್ಲಿ ಒಬ್ಬ ಬೀರನಿದ್ದಾನೆ. ಆತ ಅಷ್ಟು ದೂರವೆಂತಲೋ ಏನೋ ಅಮ್ಮನವರ ಗುಡಿಯ ಹತ್ತಿರವೇ ತುಸು ಅಂತರದಲ್ಲಿ ಪೂರ್ವಕ್ಕೆ ಒಂದು ಗುಂಪಾಗಿಯೇ ನಿಂತ – ಈ ಪರಿವಾರ ದೇವರಗಳ ಗುಡಿಗಳ ನಡುವೆ ಹೊಲೆಯಟ್ರನ ಗುಡಿಯಲ್ಲಯೇ ಆ ವಿಗ್ರಹದ ಬಲಕ್ಕೆ ಅದೆ ಸಾಲಿನಲ್ಲಿ ನಿಂತಿದ್ದಾನೆ. ಆದರೆ ಇಲ್ಲಿ ಅದು ವಿಗ್ರಹವಲ್ಲ, ಪಾದುಕ್ಕೆ-ಪಾದ ಚಿಹ್ನೆ. ಸಾಮಾನ್ಯವಾಗಿ ದತ್ತ ಸಂಪ್ರದಾಯದಲ್ಲಿ ಹೀಗೆ ಗುರು ಪಾದುಕೆಗಳ ಪೂಜೆ ಆಗುತ್ತದೆ. ನಾಥ ಸಂಪ್ರದಾಯದಲ್ಲಿಯೂ ಈ ” ಪಾದುಕಾ ಪಟ್ಟಾಭಿಷೇಕ” ಇದ್ದಿರಬಹುದೇ? ನಮ್ಮ ಊರಿನ ದಕ್ಷಿಣಕ್ಕೆ ಸಮುದ್ರ ತೀರದ ಒಂದು ಗುಡ್ಡದಲ್ಲಿ ಮಾಣೇಶ್ವರ ಅಥವಾ ಮಣಿಭದ್ರವೆಂಬ ಪ್ರಮುಖ ದೇವಸ್ಥಾನವಿದೆ. ಈ ಮಣಿಭದ್ರನೂ ಒಂದು ಪಾದ ಚಿಹ್ನವೇ ಆಗಿದೆ. [ಈ ಕುರಿತು ಒಂದು ವಿಚಿತ್ರ ಆಖ್ಯಾಯಿಕೆ ಸ್ಥಳ ಪುರಾಣದಲ್ಲಿದೆ. ಸಿದ್ದೇಶ್ವರ ಹಾಗೂ ಮಾಣೇಶ್ವರ ಎಂಬ ಇಬ್ಬರೂ ಪ್ರಮಥರು ಮಹಾ ಬಲೇಶ್ವರನ (ಆತ್ಮಲಿಂಗದ) ದರ್ಶನಕ್ಕಾಗಿ ಬಂದರು. ಆದರೆ ಈ ಪುಣ್ಯ ಕ್ಷೇತ್ರದಲ್ಲಿ ” ನೆಲವೆಲ್ಲಾ ಲಿಂಗ, ಜಲವೆಲ್ಲಾ ತೀರ್ಥ” ಎಂದು ಪವಿತ್ರ ಭಾವನೆಯಿಂದ ಸಿದ್ಧೇಶ್ವರ ಕ್ಷೇತ್ರದ ಹೊರಗೇ ದೂರದಲ್ಲಿ ನೆಲೆನಿಂತ. ಆದರೆ ಸಾಹಸಿಯಾದ ಮಣಿಭದ್ರ ತೆಲೆ ಕೆಳಗೆ ಮಾಡಿ ಕೈಗಳ ಮೇಲೆಯೇ ನಡೆದು ಬಂದು ಈಗಿದ್ದ ಸ್ಥಾನದಲ್ಲಿ ಭದ್ರವಾಗಿ ನಿಂತು ತಪ್ಪಸ್ಸು ಮಾಡಿ ಸದ್ಗತಿಯನ್ನು ಸಂದ. ಆದರಿಂದ ಇಲ್ಲಿ ಅವನ ವಿಗ್ರಹವಿರದೆ ಬರೇ ಅಂಗಾಲುಗಳೇ ಪೂಜೆಗೆ ಪಾತ್ರವಾಗಿವೆ !] ಈ ಮಣಿಭದ್ರ ಅಥವಾ  ಮಾಣೇಶ್ವರನಲ್ಲಿಗೆ ಅಮ್ಮನವರ ಬಂಡಿ ಕಲಶ ಹಬ್ಬದಿನಗಳಲ್ಲಿ ಭೆಟ್ಟಿ ಕೊಡುತ್ತದೆ. ಅಂದಾಗ ಈತನೂ ಅವಳ ಪರಿವಾರವೇ ಇರಬೇಕು.  ಆದರೆ ಇಲ್ಲಿ ಬಿಲ್ಲು -ಬಾಣ, ಕತ್ತಿ ಪಟ್ಟೆಗಳ ಕುದುರೆ ಯೇರಿದ ಭಟ (ಬಂಟ) ನ ವಿಗ್ರಹವಿಲ್ಲ.

ಇಂಥ ವಿಗ್ರಹ ಕಡಬಾ, ಹೊಲಿಯಡ್ರ ಇತ್ಯಾದಿಗಳಲ್ಲಿ ಇದೆ. (ಕುದುರೆ ಏರಿದ್ದು ಇಲ್ಲ) ಮಂಕಾಳಮ್ಮನೂ ಹೀಗೆ ಒಬ್ಬನೇ ಬೀರ ಪರಿವಾರ ವಲಯದಲ್ಲಿ ಇದ್ದರೂ ಹನೆ ಹಳ್ಳಿಯ ಅಮ್ಮನ ಪರಿವಾರದಲ್ಲಿ ಹಲವಾರು ಬೀರರಿದ್ದಾರೆ – ಮಾಣಬೀರ, ಹೆಡಿ ಬೀರ, ಹೊನ್ನಪ್ಪ ಬೀರ ಇತ್ಯಾದಿ.

ಮೇಲೆ ಹೇಳಿದ ಹೊಲೆಯಡ್ರ ದೇವರು ಬೇಟೆಯ ದೇವರು. ಬಂಕಿಕೊಡ್ಲಿನ ಮುರ್ಕಂಡಿಯ ಹಸ್ತಕನಾಗಿಯೂ ಆತ ಇದ್ದಾನೆ. [ನಮ್ಮಲ್ಲಿ ದೊಡ್ಡ ಹೊಸಬನ ಹಸ್ತಕನಾಗಿ ಇರುವಂತೆ.] ಗಂಗಾವಳಿಯ ತಡಿಯ ಅಗ್ರಗೋಣದಲ್ಲಿ ಹೊಲೆಯಟ್ರ ದೇವರಿಗೆ ಮುಕ್ರಿ (ಆಗೇರ) ಯೇ ಪೂಜಾರಿ.

ಮುರ್ಕಂಡಿ ದೇವರು ಆ ಪರಿಸರದಲ್ಲಿ ಒಂದು ಜಾಗೃತ ದೇವರು. ಆತನೂ ಬೀರ. ಹಾಲಕ್ಕಿಹಳ ಪದಗಳಲ್ಲಿ ಆತ ಮಂಕಾಳಮ್ಮ ತಮ್ಮ, ಸೇನಾಪತಿ. ಕೆಂಪು ಕುದುರೆ ಏರಿ ಬೆಳ್ಳಿಯ ಬೆತ್ತ ಜಳಪಿಸುತ್ತ ಬರುತ್ತಾನೆ. ಆದರೆ ಗುಡಿಯಲ್ಲಿ ವಿಗ್ರಹದ ಸ್ಥಿತಿ ಬೇರೆಯೇ. ಆತನೂ ಬಿಲ್ಲು -ಬಾಣ ಹಿಡಿದ ಬೀರ. ಮಾತ್ರವಲ್ಲ, ಅವನಿಗೆ ಪಾದಗಳೇ ಇಲ್ಲ ! ಪೀಠದಲ್ಲಿ ಪಾದವಿಲ್ಲದ ಕಾಲ್ಗಳನ್ನೇ ನಿಲ್ಲಿಸಿದೆ. ಮೂರ್ತಿಯ ಪ್ರಭಾವಳಿಗೆ ಒಂದು ಕಂಚಿನ ಕವಚವು ಸದಾ ಮಾಲವೂ ಮುಚ್ಚಿದೆ. ಸಾಮಾನ್ಯವಾಗಿ ಇಂಥ ಕವಚವನ್ನು ದೇವರನ್ನು ಅಲಂಕಾರ ಮಾಡುವಾಗ ಮಾತ್ರ ತೊಡಿಸುತ್ತಾರೆ. ಇಲ್ಲಿ ಹಾಗಿಲ್ಲ. ವಿಗ್ರಹದ ಕಾಲುಗಳ ಅವಸ್ಥೆಯನ್ನು ಈ ಪ್ರಭಾವಳಿಯ ಸ್ವರೂಪವನ್ನು ನೋಡಿದರೆ ಇದು ಹಿಂದಿನಿಂದಲೂ ಒಂದು ಒಡೆದ ವಿಗ್ರಹವಿಬೇಕು. ಅದನ್ನು ಹಾಗೆಯೇ ಇದ್ದಕಿದ್ದಂತೆ ಸ್ತಾಪಿಸಿದ್ದಾಗಿರಬೇಕು.

ಹೊಸಬ : ಮಂಕಾಳಮ್ಮನ ಪರಿವಾರದಲ್ಲಿ ಹೊಸಬರು ಮೂರು, ಆದರೆ ಈ ಕ್ಷೇತ್ರದದಾಚೆಗೆ ಗೋಕರ್ಣ ಮಂಡಳದಲ್ಲಿ ಇಬ್ಬರೇ ಹೊಸಬರು. ಹಿರಿ ಹೊಸಬನೇ ಮುರ್ಕಂಡಿ ಎಂದೂ ಹೇಳತ್ತಾರೆ. ” ಮುರ್ಕಂಡಿ” ಎಂಬ ಶಬ್ದ ಹೇಗೆ ಬಂತು? ನನ್ನ ಒಬ್ಬ ಹಾಲಕ್ಕಿ ಪದವೀಧರ ಮಿತ್ರ ಈ ಹೆಸರು ” ಮೃಕಂಡು” ಋಷಿಯಿಂದ ಬಂದಿರಬೇಕೆಂದು ಜನ ನಂಬುತ್ತಾರೆ ಎಂದ. ಆದರೆ ಇದು  ಜಾನಪದವನ್ನು ಶಿಷ್ಟ ಸಂಪ್ರದಾಯಕ್ಕೆ ಸೇರಿಸುವ ಬ್ರಾಹ್ಮಣೀಕರಣದ ಪ್ರಯತ್ನಕ್ಕೆ ಸೇರಿದ ವಿಚಾರ. ನಾನು ಮೇಲೆ ಹೇಳಿದಂತೆ ಮೂಲ ಬಿಂಬವೇ ವಿಚ್ಛಿನ್ನ ವಾಗಿದ್ದರೆ ಅದು ಮುರಿದ -ಮುರ್ಕುಳ್ಳ  ಎಂಬ ಅರ್ಥದಿಂದ ಹೇಗೋ ಬಾಯಿ ಮಾತಿನಲ್ಲಿ ಮುರ್ಕಂಡಿ ಆಗಿರಬೇಕು. ಬೈಲ ಸೀಮೆಯಲ್ಲಿ ಲಕ್ಕುಂಡಿ, ಯಕ್ಕುಂಡಿ, ಅಸುಂಡಿ ಇತ್ಯಾದಿ ಗ್ರಾಮ ನಾಮಗಳಲ್ಲಿಯೂ ಈ “ಉಂಡಿ” ಯಲ್ಲಿ ಕೊನೆಗಾಣುವ ರೀತಿ ಕಾಣುತ್ತದೆ. ಇದು ಒಟ್ಟು Toponomical ಪರಿಶೋಧನೆ.

ಹೆಸರಿನಂತೆ ಈ “ಹೊಸಬ” ಅಗಂತುಕ. ಜನಪದಕ್ಕೂ ಅವರ ದೇವತಾ ಪ್ರಪಂಚಕ್ಕೂ ಹೊಸಬ. ಅದಲ್ಲದೆ ಏನಾದರೂ ವಿಶೇಷ ಆಶ್ಚರ್ಯದ (ಪವಾಡ) ಕಾರ್ಯವೆಸಗಿದ ಮನುಷ್ಯನೆಂದೂ ಸಾಮಾನ್ಯರಿಗೆಲ್ಲ ಹೊಸಬ. ಅಪೂರ್ವ ವಿಭೂತಿ. ಆದರೆ ಇವನ ಈ ೨ – ೩ ಪ್ರತಿಗಳೇಕೆ ?  ಒಂದು ಅಂಶದಲ್ಲಿ ಮುತ್ತಜ್ಜನ ಪ್ರತಿರೂಪ ಮರಿಮಗನಲ್ಲಿ ಮೂಡಿ ಬರುವದುಂಟು.  ಇದಕ್ಕೆ Atavism  ಅನ್ನುತ್ತಾರೆ. ದೇವತಾ ಪ್ರಪಂಚದಲ್ಲಿಯೂ ಒಂದು ತಲೆಮಾರಿನ ದೇವರೇ ಮುಂದಿನ ಒಂದು ತಲೆಮಾರಿನಲ್ಲಿ ಮತ್ತೆ ಕಾಣಿಸಿಕೊಳ್ಳುವ ಈ ವಾಂಶಿಕ ಪುನರಾವೃತ್ತಿ ನಡೆದು ಬಂದಿರಬೇಕು. [“ಸಂಭವಾಮಿ ಯುಗೇ ಯುಗೇ” ಇದೂ ಒಂದು Atavistic  ಪರಿಕಲ್ಪನೆಯೇ?]

ಹಿರೇ ಹೊಸಬನೂ ಅವನ ಬಂಟ ಸಣ್ಣ ಹೊಸಬನೂ ಈ ಮಂಡಳದ ಹಿರೇಗುತ್ತಿಯಲ್ಲಿಯೂ  ಸುಪ್ರತಿಷ್ಠಿತ ದೈವಗಳು. “ಆವಾರಿ” [ಕೋಳಿ – ಕುರಿ ಬಲಿ ಹರಕೆ] ಗೆಲ್ಲ ಇವನೇ ಅಧಿಕಾರಿ. ಅಲ್ಲಿ ಹಿರೇ ಹೊಸಬನ ನಂತರದ ಸ್ಥಾನ ಗೋಳಿ ಬೀರನದು.

ಉದ್ದಂಡ : ಈ ಮಂಡಳದ ಕಿರಿಯ ಗ್ರಾಮದೇವತೆಗಳಲ್ಲಿ ಇವನೂ ಒಬ್ಬ ಗೋಕರ್ಣದಲ್ಲಿ ಈತ ಅಮ್ಮನವರ ಅನುಚಾರಕರಲ್ಲಿ ಒಬ್ಬ. ಆದರೆ ಹಿರೇಗುತ್ತಿಯಲ್ಲಿ ಉದ್ದಂಡನಿಗೇ ಹೆಚ್ಚಿನ ಸ್ಥಾನ – ಮಾನ. ಮೂಲತಃ ಇವನೂ, ಹೊಸಬರೇ ಮುಂತಾದ ಬೀರ, ಬಂಟ ಪ್ರಭೃತಿಗಳೂ ಜಟ್ಗರವರ್ಗವೇ. ನಮ್ಮಲ್ಲಿ ಅನೇಕ ಜಟ್ಗಗಳ ಗುತ್ತಗಳಲ್ಲಿ ಒಂದು ದೊಣ್ಣೆ (ದಂಡ)  ಇಟ್ಟಿರುತ್ತಾರೆ. ಅದು ಜುಮ್ಮನ ಮರದ ದೊಣ್ಣೆ ಗಡಿಯನ್ನೋ, ಕೋಟೆಯ ಬಾಗಿಲನ್ನೋ, ಕೋಡಿಯನ್ನೋ, ಗುಪ್ತ ಧನವನ್ನೋ, ಅಬ್ಬಿಯ ನೀರನ್ನೋ ಕಾಪಾಡುವ ಬಂಟನು ಈ ದೊಣ್ಣೆ ಬೀಸುತ್ತಾನೆ. ಡಾ. ಎಲ್, ಆರ್. ಹೆಗಡೆಯವರು ಈಚೆಗೆ ಪ್ರಕಟಿಸಿದ ನಮ್ಮ ಜಿಲ್ಲೆಯ ಜಾನಪದ ಮಹಾಭಾರತ ಕಥೆಗಳಲ್ಲಿ ಒಂದು ಪ್ರಸಂಗ ಹೀಗಿದೆ. ಅರಗಿನ ಮನೆಯಿಂದ ಪಾರಾಗಿ ಬಂದ ನಂತರ ಭೀಮನು ಒಬ್ಬ ರೈತನ ಹೊಲದಲ್ಲಿ ಚಾಕರಿಗೆ ನಿಲ್ಲುತ್ತಾನೆ. ಅಲ್ಲಿಯ ಜಟ್ಟಿಗರನ್ನೆಲ್ಲ ಆತ ಜುಮ್ಮಿನ ಮರದ ಕೋಲಿನಿಂದ ಬಡಿದು ಓಡಿಸುತ್ತಾನೆ. ಅರ್ಥಾತ್ ಜುಮ್ಮಿನ ದಂಡಗಳಿಗೂ ಜಟ್ಟಿಗರಿಗೂ ಸಂಬಂಧವಿದ್ದಂತೆ ಆಯಿತು. [ಆ ಮರಕ್ಕೆ ಮೈತುಂಬ ಮುಳ್ಳು. ಆ ಮುಳ್ಳುಗಳನ್ನೇ ಯಕ್ಷಗಾನ ವೇಷಗಳ ಭುಜಕೀರ್ತಿಗಳ ಚಿನ್ನಕ್ಕೆ ಬಳಸುತ್ತಾರೆ.] ಈ ದಂಡಧಾರಿಯಾದ ಕ್ಷೇತ್ರಪಾಲಕ ಜಟ್ಟಿಗರೇ “ಉದ್ದಂಡ” ದೇವರೆನಿಸಿಕೊಂಡರು. ಇಂಥ ಸಂಸ್ಕೃತ ನಾಮಕರಣ ಪುರೋಹಿತ ವರ್ಗದ ಅನುಗ್ರಹವಿರಬೇಕು.

ಈ ಉದ್ದಂಡನದೊಂದು ವಿಶೇಷ. ಜಾನಪದರಲ್ಲಿ ಈತ ದೃಷ್ಟಿದೋಷ ನಿವಾರಣೆಗಾಗಿ ಆರಾಧ್ಯ. ಅದೇ ರೀತಿ ಮಕ್ಕಳ ರೋಗ – ರುಜಿನ, ಕಟ್ಟೆ ಸಿಡುಬು ಚಾಪೆ ಇತ್ಯಾದಿಗಳಿಗಾಗಿ ಮಂಕಾಳಮ್ಮನ ಒಂದು ಹೆಣ್ಣು ಪರಿವಾರ ದೈವ “ದೇವತಮ್ಮ” ಮೀಸಲು. ಹಿರೇಗುತ್ತಿಯ “ಬ್ರಹ್ಮಜಟ್ಗ” ಬ್ರಾಹ್ಮಣರಿಂದ ಪೂಜೆ ಪಡೆಯುತ್ತಾನೆ. ದನ ಕರುಗಳ ಬೇನೆ ಬೇಸರಿಕೆಗಳಿಗೆ ಅವನಿಂದಲೇ ರಕ್ಷಣೆ. ಜಟ್ಗನಿಗೂ ಬ್ರಹ್ಮನಿಗೂ ಯಾವ ನಂಟು ? ಹಿರೇಗುತ್ತಿ ಪರಿಸರದಲ್ಲಿ ಜೈನರ ಪ್ರಭಾವವಿತ್ತು. ಬ್ರಹ್ಮ – ಬೊಮ್ಮಯ್ಯ ಅವರಿಂದ ಪುರಸ್ಕೃತ. ಗೋಕರ್ಣದಲ್ಲಿಯೂ ಕೆಲವು ಜೈನ ಜಟ್ಗಗಳಿವೆ. ಅವು ಉಗ್ರ ದೈವತಗಳು. ಅವು ಕೋಳಿ – ಕುರಿಗಳ ಹರಕೆಗೆ ಒಲಿಯುವ ದೈವ.

ಆದರೆ ನಮ್ಮಲ್ಲಿ ಜಟ್ಗ ಬೇರೆ ಬ್ರಹ್ಮ ಬೇರೆ. ಹಾಲಕ್ಕಿ ಒಕ್ಕಲು ಇತರ ನಿಮ್ನ ವರ್ಗಗಳಿಗೂ “ನಡಕೊಳ್ಳುವ” ಕೆಲವು ಸ್ಥಾನಗಳಲ್ಲಿ ಹತ್ತಿರ ಹತ್ತಿರ ಮೂರು ಗುತ್ತಗಳಿರುತ್ತವೆ. ಒಂದು ಚೌಡಿಯದು, ಇನ್ನೊಂದು ಜಟ್ಗನದು, ಮೂರನೆಯದು ಬ್ರಹ್ಮನದು. ಅದೇಕೋ ಬ್ರಹ್ಮ ಮತ್ತು  ಹುತ್ತದ ನಾಗ ಒಂದಾಗಿಯೇ ಈ ಜನ ಕಾಣುತ್ತಾರೆ. ಈ ಬಗೆಗೆ ವಿಚಿಕಿತ್ಸೆಗೆ ಅವಕಾಶವಿದೆ. [ಪೌರಾಣಿಕವಾಗಿ ವೈದಿಕ ಪೂಜಾರಾಧನೆಯಲ್ಲಿ ಅದೂ ಗೋಕರ್ಣದಲ್ಲಿ ಬ್ರಹ್ಮನಿಗೆ ಸ್ಥಾನವಿಲ್ಲ !] ಇವನ ಪ್ರತಿಷ್ಠಾಪನೆಯ ಹೊಸ ಮಂತ್ರಗಳಲ್ಲಿ ಯಾವ ಆಧಾರದಿಂದಲೋ “ಜಟಗೇಶ” ನನ್ನು “ಬ್ರಹ್ಮ ಪುತ್ರ” ನೆಂದು ಕರೆಯಲಾಗಿದೆ. [ಆತ “ಭೂತನಾಥ” ನೂ ಅಹುದು.]

ಕೊನೆಗೂ ಈ ಪರಿಸರದಲ್ಲಿ ದೇವ ಒಬ್ಬ ನಾಮ ಹಲವು ಎಂಬಂತೆ ಈ ಜಟ್ಗನೇ ಬೇರೆ ಬೇರೆ ಕಡೆಗೆ ಬೇರೆ ಬೇರೆ ರೂಪದಲ್ಲಿ ಹಿರಿಕಿರಿ ಸ್ಥಾನಮಾನಗಳನ್ನು ಭೋಗಿಸುತ್ತ ಬಂದಿದ್ದಾನೆ. ಹಿಂದೆ ಹೇಳಿದ ನಾಗರಬೈಲ ಸಮೀಪ ತೊರ್ಕೆ ಗ್ರಾಮದಲ್ಲಿಯೇ ೧೪ ಜಟ್ಗಗಳಿರುತ್ತವೆ. ಅಲ್ಲಿಯ ಅಧಿದೇವತೆ ಕೆಂಗಳಾ ಪರಮೇಶ್ವರಿ. ಇಲ್ಲಿ ಮೂರು ಜಟ್ಗಗಳಿಗೆ ಮಾತ್ರ “ಆವಾರಿ” ಇಲ್ಲ – ಕುರಿ ಕೋಳಿ ಬಲಿ ಇಲ್ಲ. ಇಲ್ಲಿಯೂ ದೇವಿಯು ಒಂದು ಗಿಡ ಮರಗಳ ಕಾನಿನಲ್ಲಿ ನಿಂತಿದ್ದಾಳೆ. ಗೋಕರ್ಣದ ಮಹಾಕಾಳಿಯೂ ಹಾಗೆಯೇ. ತೊರ್ಕೆಯ ದೇವಿಗೂ ಗೋಕರ್ಣದ ಅಮ್ಮನವರಂತೆಯೇ ಇಬ್ಬರು ಹೊಸಬರು ಒಬ್ಬ ಉದ್ದಂಡನೂ ಒಬ್ಬ ಬೀರನೂ ಪರಿವಾರ ದೈವಗಳು. ದೇವಿಯನ್ನು ಪರಮೇಶ್ವರಿ ಎಂದರೂ “ಕೆಂಗಳಾ” ಎಂಬ ಹೆಸರಿನ ಇತ್ಯರ್ಥವಾಗುವದಿಲ್ಲ ಇವಳು ಪುರಾತನ ಕಾಲದ ಮಗನ ಚಿತೆಯೇರಿದ ಮಾತೃದೈವವೇ ?  ಬಳಲೆಯ ಅಮ್ಮ ಅಂಥದೆ ಮಾ – ಸತಿಯಂತೆ. ಗುಡಿಯಿಂದ ತುಸು ದೂರ ಅಳೆತ್ತರದ ಗಜದಷ್ಟು ಅಗಲದ ಮಾಸ್ತಿ ಕಲ್ಲು ಒಂದು ನಿಂತಿರುತ್ತದೆ. ಹಣಿ ಹಕ್ಕಲು, ಆಹಾರ ಕೊಡ್ಲು, ಗರುಡನ ಮೂಲೆ, ಕೋಟೆ ಕೆರೆ, ದೇವೀ ಪಾದ, ಬೀರ ಸೀಮೆ, ಅಸ್ರಾಳ, ದೇವೀವನ, (ದ್ಯಾವಣ) ಕೇದಗೀ ಕೆರೆ ಇತ್ಯಾದಿ. “ಸ್ಥಾನ” ಗಳಿರುತ್ತವೆ. [ಶ್ರೀ ಹರ್ಷನ “ನಾಗಾನಂದ” ನಾಟಕದಲ್ಲಿ ಕೇಂದ್ರ ಘಟನೆಯಾಗಿ ಬರುವ ಗರುಡನಿಗೆ ಜೀಮೂತವಾಹನ ಶಂಖಚೂಡನಾಗನ ಬದಲಾಗಿ ತಾನೇ ಬಲಿಯಾದ ಪ್ರಸಂಗ ಇಲ್ಲಿಯ ಗರುಡನ ಮೂಲೆ, ಆಹಾರ ಕೊಡ್ಲಗಳಲ್ಲಿಯೇ ನಡೆಯಿತ್ತೆಂದು ಕೆಲವು ಸ್ಥಳೀಯ ವಿದ್ವಾಂಸರ ಅಭಿಪ್ರಾಯ,]

ಮತ್ತೆ ಹನೆಹಳ್ಳಿಯ ಕಡೆಗೆ ಹೋಗೋಣ – ಮುರ್ಕಂಡಿ ದೇವರ ಗುಡಿಯ ಹಿಂದೆ “ಸನ್ಯಾಸಿ ಬೇಣ” ವಿದೆ. ಅಲ್ಲಿ ಒಂದು ಗುತ್ತವಿದ್ದು ಅದಕ್ಕೆ ಹಳಿಯಾಳ ಧಾರವಾಡ ಕಡೆಯ “ಗಿರಿ” ಮನೆತನದವರು ನಡೆದುಕೊಳ್ಳುತ್ತಾರೆ ! ಗೋಕರ್ಣದ ರಾಮತೀರ್ಥ ಗುಡ್ಡದ ಮೇಲಿನ ಬೇಣದಲ್ಲಿಯೂ ಒಂದು “ಸನ್ಯಾಸಿ ಕಾನು” ಇದೆ ಅಲ್ಲಿ ಇಂದಿಗೂ ೨ – ೩ “ಗಿರಿ” ಸಮಾಜದ ಬಡ ಕುಟುಂಬಗಳಿವೆ. [ ಅದಕ್ಕೆ ಬಾವಾಜೀ ಕಾನು ಎಂದೂ ಕರೆಯುತ್ತಾರೆ.]

ಹಾಗೆಯೇ ಮುಂದೆ ಹಿತ್ತಲಮಕ್ಕಿ ಗ್ರಾಮದ ಗುಡಿ ಹೊನ್ನಪ್ಪ (ಬೀರ) ನ ಗುಡಿಯ ಹತ್ತಿರವೇ ಒಂದು ಸನ್ಯಾಸಿ ಗುತ್ತವಿದೆ. ಈ ಗುತ್ತಕ್ಕೆ ಪೂಜೆಯಲ್ಲಿ ಭಂಗಿ (ಗಾಂಜಾ) ಸಮರ್ಪಿಸುವ ಪರಿಪಾಠ ಇಂದಿಗೂ ಇದೆ. ಈ  ಗುತ್ತ ಯಾವುದೋ ಸಿದ್ಧನ ಅಥವಾ ನಾಥನ ಸಮಾಧಿ ಇರಬೇಕು. ಇಲ್ಲಿಂದ ಹಿಂದೆ ಹೇಳಿದ ಪ್ರಮಥ ಸಿದ್ಧೇಶ್ವರನ ಸ್ಥಾನ ದೂರವಿಲ್ಲ.

ಗೋಕರ್ಣ ಮಂಡಳದ ದಕ್ಷಿಣಕ್ಕೆ ೨II ಮೈಲು ದೂರದಲ್ಲಿ ತದಡಿಯ ಹಳೇಯ ನೈಸರ್ಗಿಕ ಬಂದರವಿದ್ದು ಅದರ ಬೆನ್ನಿಗೆ ಹವೀಕ ಬ್ರಾಹ್ಮಣರ ಪ್ರಾಚೀನ ಅಗ್ರಹಾರವಿದ್ದ ಅಶೋಕ (ಅಸಕ್ಕಿ) ಊರು ಇದೆ. ಇದೆಲ್ಲ ಪರಿಸರ ಅಂಬಿಗರ, ಮುಕ್ರಿಯರ, ನಾಮಧಾರಿ, ಗಾಬಿತ ಕುಟುಂಬಗಳ ನೆಲೆವೀಡು. ಇಲ್ಲಿಯ ಒಂದು ಸ್ವಾರಸ್ಯವೆಂದರೆ ತದಡಿಯಲ್ಲಿ ಒಂದು ಬುನಾದಿಯಿಂದಲೂ ಕೆಲವು ಕುಲಗಳ ಪೂಜೆ ನೇಮ ಪಡೆಯುತ್ತ ಬಂದ ಒಂದು “ಮಾಸ್ತಿ” ಇದೆ. ಈಚೆಗೆ ಆ ವಿಗ್ರಹದ ಪ್ರಭಾವಳಿಯ ಫಲಕದಲ್ಲಿಯ ಲೇಖದ ಅಚ್ಚು ಪಡೆಯಲು ಪ್ರಿ . ಎಲ್ . ಟಿ. ಶರ್ಮರು ಹೋದಾಗ ಅವರು ಆ ವಿಗ್ರಹ ತೊಳೆಯಿಸಿ ಸ್ವಚ್ಛ ಮಾಡಿಸಿದಾಗ ಅಲ್ಲಿ ಕಂಡಿದ್ದು ಹೆಣ್ಣು ವಿಗ್ರಹವೇ ಅಲ್ಲ. ಒಬ್ಬ ಬೈರಾಗಿಯ ವಿಗ್ರಹ – ಜಟೆ ಗಡ್ಡ ಮೀಸೆಗಳ ಆ ಬಾವಾಜಿ !  ಆಗ ಅಲ್ಲಿಯ ಜನ ಆಡಿಕೊಳ್ಲುತ್ತಿದ್ದ ಒಂದು ಕತೆ ಕೇಳಿಬಂತು. ಆ ಮಾಸ್ತಿಗೆ ಸರಿಯಾಗಿ ಹರಕೆ ಸಲ್ಲದ ಸಮಯ “ಆಕೆ” ಕನಸಿನಲ್ಲಿ ಕಾಣಿಸಿಕೊಂಡು ಗಾಂಜಾ ಬೇಡುತ್ತಾಳೆಂದು. ಆದರೆ ಆ ವಿಗ್ರಹ ಮಹಾಸತಿಯದೇ ಎಂದು ನೆರೆನಂಬಿ ಅದಕ್ಕೆ ಸೌಭಾಗ್ಯ ದ್ರವ್ಯಗಳಿಂದಲೇ ಪೂಜೆ ಮತ್ತು ಉಡಿ ತುಂಬುವದು ನಡೆದು ಬಂದಿದೆ.

ಅಲ್ಲಿ ಬೇಲೆಕಾನಿನ ಕಡಲ ಅಂಚಿಗೆ ಒಬ್ಬ ಬಂಟನ ವಿಗ್ರಹವಿದೆ. ಅದು ಎಂದೋ ಕಡಲಲ್ಲಿ ತೇಲಿ ಬಂದಿತ್ತೆಂದು ಪ್ರತೀತಿ. ಈ ಬಂಟನ ಒಡೆಯ “ಹಾರೂಬೀರ”. ಒಂದು ಜಾಗೃತ ಸ್ಥಾನ. ಅಶೋಕೆ ಅಮ್ಮನವರ ಬೀರ. “ಹಾರೂ” ಅಂದಾಗ ಈ ಬೀರ ಹಾರವರ (ಬ್ರಹ್ಮಣರ) “ಕಲಿಯುಗ ವಿಪರೀತ” ನೇ ಆಗಿದ್ದಿರಬೇಕು. ಅಲ್ಲಿಯೇ ಸಮೀಪ  ಹಾವುಗಳ ಸ್ಥಾನವಿದೆ. ಹಾವುಗಳಿಗೆ ಭಾವಿಕಜನ ಹಾಲಿಟ್ಟು ಮನ್ನಿಸುತ್ತ ಬಂದಿದ್ದಾರೆ.

ಅಘನಾಶಿನಿ ಹೊಳೆಯ ಈಚೆಯ ತಡಿಯ ಈ ತದಡಿ ಹಳೆಯ ಹೆದ್ದಾರಿಯ ಮೇಲಿದೆ – ಕುಮಟೆಯಿಂದ ಗೋಕರ್ಣಕ್ಕೂ ಮುಂದೆ ಗಂಗಾವಳಿ ಹೊಳೆದಾಟ ಅಂಕೋಲಾ – ಕಾರವಾರ ಕಡೆಗೂ (ಬೇಲೇಕೇರಿಯ ಮೇಲಿಂದ) ಹಾಯುವ ದಾರಿಯಿದು. ಇಲ್ಲಿ “ಕೊಗಳತೆಗೊಂದು” ಬೀರಕಲ್ಲುಗಳು ನಿಂತಿವೆ. ಹಳೇಯ ದಾರಿಯ ಮುಖಕ್ಕೆ, ಗುಡ್ಡದಲ್ಲಿ ಹಳೆಯ ಕೋಟೆಯ ಗೋಡೆಯ ಹತ್ತಿರ ಅಬ್ಬ (ನೀರಝರಿ) ಹರಿಯುವಲ್ಲಿ, ಹಳೆಯ ವಸತಿಗಳ ಆಯಕಟ್ಟಿನ ಸ್ಥಳಗಳಲ್ಲಿ ಈ ಜಟ್ಟಿಗ ಕಲ್ಲುಗಳಿವೆ.

ಅಬ್ಬಿ ಜಟ್ಗ ಇದು ನೀರು ಹರಿಯುವಲ್ಲಿ ೭ ನೀಳ್ಗಲ್ಲುಗಳ ಸಾಲು. ಇದಕ್ಕೆ ಪ್ರತಿಯಾಗಿ ಊರಲ್ಲಿ ಅಲ್ಲಲ್ಲಿ ೭ ಗುತ್ತಗಳಿವೆ – ಒಬ್ಬೊಬ್ಬ ಜಟ್ಗನಿಗೆ ಒಂದೊಂದು ಗುತ್ತ. ಇದೇ ಬಗೆಯ ಅಬ್ಬಿ ಜಟ್ಗ ಕಲ್ಲುಗಳು ಹೊಳೆಯಾಚೆಯ ಅಘನಾಶಿನಿ (ಅಗಸೆ) ಗ್ರಾಮದಲ್ಲಿಯೂ ಇರುವವು. ಆದರೆ ಗೋಕರ್ಣ ಮಂಡಲದಲ್ಲಿ ಆಗಲಿ, ಬೇರೆಕಡೆಗಾಗಲಿ ಹೀಗೆ ನೀರಸೆಲೆಗಳಿದ್ದ ತೊರೆಗಳಿದ್ದ ಎಡೆಗಳಲ್ಲಿ ಜಟ್ಗನ ಗುತ್ತ ಇದ್ದಂತಿಲ್ಲ. ಅಲ್ಲದೆ “ಅಬ್ಬಿ” ಪದಪ್ರಯೋಗ ಕರಾವಳಿಗಿಂತ ಘಟ್ಟದ (ಮಲೆನಾಡಿನ ಅಂವಿನ) ಸೀಮೆಯಲ್ಲಿಯೇ ಹೆಚ್ಚು. ಇತ್ತ ಕಡೆಗೆ ಇತ್ತ ಕಡೆಗೆ “ತೊರೆ” ಎನ್ನುತ್ತಾರೆ. (ಸಾಣಿ ಕಟ್ಟೆಯಿಂದ ಮುಂದೆ “ತೊರೆ ಗಜನಿ” ಇದೆ.) ಅಂದಾಗ ಈ ಜಟ್ಗನ ಕಲ್ಲುಗಳಿಗೆ “ಅಬ್ಬಿಜಟ್ಗ” ಎಂಬ ಹೆಸರು ತುಸು ವಿಚಿತ್ರ. ನನ್ನ ಅಭಿಪ್ರಾಯದಂತೆ ಅರಬ – ಅರ್ಬಿ – ಅಬ್ಬಿ ಆಗಿರಬೇಕು. ಈ ಜಟ್ಗಗಳಿಗೆ ಸಂಬಂಧಿಸಿದ ಗುತ್ತಗಳಲ್ಲಿ ಒಂದು “ಹಬಸಿ” ಗುತ್ವಿದೆ ! ಪ್ರಾಚೀನ ಕಾಲದಲ್ಲಿ ಈ ಪಡು ಮೂಲೆಗೆ ಅರಬ ವ್ಯಾಪಾರಿಗಳ “ಬತೇಲ” ಗಳಲ್ಲಿ “ಹಬಸೀ” (ಅಬಸೀನಿಯನ್) ಕಟ್ಟಾಳುಗಳು ದುಡಿಯುತ್ತಿದ್ದರು. ಅವರ ಏನೋ ಬಲಿದಾನದ ಸ್ಮಾರಕವಾಗಿ ಈ ಜಟ್ಗ ಗುತ್ತೆ ಉಂಟಾಗಿರಲು ಸಾಕು, ಇರಲಿ.

ಇನ್ನು ಅಶೋಕೆಯ (ನೀರ್ ಹಳ್ಳದ) ಅಮ್ಮ, ಆಚೆಗೆ ವೈತರಣಿ ಕೊಳ್ಳದ ಅಮ್ಮ , ಹಿರೇಗುತ್ತಿಯ ಅಲ್ಲಿಂದ ಮುಂದೆ ಹೊಳೆಯ ತದಡಿ ನುಸಿಕೋಟೆಯ, ಹಾಗೆಯೇ ಅದೇ ಅಘನಾಶಿನಿ ಹೊಳೆಯ ಆ ಕೋಡಕಣಿಯ ಅಮ್ಮನವರು ಎಲ್ಲರೂ ಇದೇ ರೀತಿ ತಮ್ಮ ತಮ್ಮ ಹೊಸಬ ಬೀರ, ಬಂಟರೇ ಪ್ರಭೃತಿ ಪರಿವಾರದೊಂದಿಗೆ ಪ್ರತಿಷ್ಠೆ ಪಡೆದು ಅಲ್ಲಿ ಅನಾದಿಯಿಂದ ನಿಂತಿದ್ದಾರೆ.

ನಮ್ಮ ಪರಿಸರದಲ್ಲಿ ವಿರಳವೇ ಆದ ಒಂದು ದೈವ ರಾಕೇಸ ಅಥವಾ ರಾಕೇಸ್ರ. ಬಾಸ್ಕೋಡದಿಂದ ಕೊಗ್ರೆ ಬೊಮ್ಮಯ್ಯನ ಗುಡಿಗೆ ಹೋಗುವಲ್ಲಿ ಈ ದೈವವಿದೆ. ಈ ದೈವದ ವಿಗ್ರಹವೂ ಕಡಲಲ್ಲಿ ತೇಲಿಬಂದು ಬಿದ್ದದ್ದು – ಬೇಲೆಕಾನಿನ ಬಂಟಗಲ್ಲಿನಂತೆ. [ ಈ ಬಂಟಗಲ್ಲಿ ದೇವರಿಗೆ ಬಂಡೆಗಲ್ಲ ದೇವರೆಂದೂ ಕರೆಯುತ್ತಾರೆ.] ಸಮುದ್ರ ತೀರದಿಂದ ಈ ವಿಗ್ರಹವನ್ನು ಈಗಿದ್ದ ಸ್ಥಾನಕ್ಕೆ ಹೊತ್ತು ತರಲು ೪೦ ಮಂದಿಯಿಂದಲೂ ಆಗಲಿಲ್ಲವಂತೆ. ಆಗ ಬೆಳೆಂಬರದ ಒಬ್ಬ ಹಾಲಕ್ಕಿ ಒಕ್ಕಲಿಗ ಮೈಯಲ್ಲಿ ಭಾರ ತುಂಬಿ ಒಬ್ಬನೇ ಅದನ್ನು  ಎತ್ತಿ ಹೊತ್ತು ತಂದನೆಂದು ಆಖ್ಯಾಯಿಕೆ. ಇದೇ ರಾಕೇಸ್ರ. ಅಂಕೋಲೆಯ ಗೋಖಲೆ ಕಾಲೇಜಿನ ಬದಿಯಲ್ಲಿಯೂ, ಬೇಲೇಕೇರಿಯಲ್ಲಿಯೂ ಇದ್ದಾನೆ.

ರಾಕೇಸ್ರ – ರಾಕೇಸ ಇದು ನೋಡಲು ರಾಕ್ಷಸದ ತದ್ಭವ ಇಲ್ಲವೆ ಅಪಭ್ರಂಶವೆನಿಸುತ್ತದೆ. ಆದರೆ ಆಗೇರರಲ್ಲಿ ರಾಕು – ರಾಕಾ ಎಂದು ಹೆಸರಿಡುತ್ತಾರೆ. ಮೇಲೆ ಹೇಳಿದ ಕಾಲೇಜ ಹತ್ತಿರದಲ್ಲಿ ಹೊನ್ನಾ – ರಾಕಾ ಎರಡು ಗುಡಿಗಳಿವೆ. ಈ ರಾಕಾ ಶಬ್ದಕ್ಕೆ ಸಂಸ್ಕೃತದಲ್ಲಿ ಬೆಳದಿಂಗಳು ಎಂಬ ಅರ್ಥ ಪ್ರಸಿದ್ದ. ಜೊತೆಗೆ ಮೈನೆರೆತ ಹುಡುಗಿ ಎಂದೂ ಅರ್ಥವಿದೆ. ಆದರೆ ಬಹುಶಃ ಇದು ಹೀಗೆ ರಾಕಾ – ರಾಕೇಶ – ಚಂದ್ರ ಎಂಬ ಮೂಲದ್ದಲ್ಲ. ಬೆಳೆಂಬರದ ಹಾಲಕ್ಕಿಯ “ಭಾರ” ಗಮನಿಸಿದರೆ ಈತ ರಾಕ್ಷಸನೇ. (ಬ್ರಹ್ಮರಾಕ್ಷಸನಾಗಿ ಕಾಡುವ ಪ್ರೇತ ?)

ಇನ್ನೂ ಕೆಲವೊಂದು ವೈಶಿಷ್ಟ್ಯ ಪೂರ್ಣವಾದ ದೈವಗಳನ್ನೂ ಗಮನಿಸಬೇಕು.

ರಣಗೋಲೆ : ಹನೇಹಳ್ಳಿಯ ಅಮ್ಮನವರ ಗುಡಿಯ ಹಿಂದೆ ಕಾಸಕನ ಮರದಲ್ಲಿ ರಣಗೋಲೆ ಇದೆ. ಅದಕ್ಕೆ ಆಗಾಗ್ಗೆ ಅನ್ನದ ಬಲಿ ಕೊಡುತ್ತಾರೆ. “ಕೊಲೆ” ಎಂದರೆ ಹತ್ಯೆಗೊಂಡ ಒಂದು ಪ್ರೇತ. ಭೂತ, ಪ್ರೇತ, ಪಿಶಾಚಿ ಇವು ಸಾಂಪ್ರದಾಯಿಕವಾಗಿ ನಮ್ಮ ಮೃತಜೀವಿಗಳಿಗೆ ಬರುವ ವಿಕಾರಗೆಟ್ಟ ಅವಸ್ಥೆಗಳು – ಸಂಸ್ಕಾರವಿಲ್ಲದೆ ದುರ್ಮರಣಕ್ಕೆ ತುತ್ತಾದಾಗ. ಇವುಗಳಲ್ಲಿ ಆರಂಭದ ಅವಸ್ಥೆ ಪ್ರೇತ. [ ಪು + ಈತಃ ಈ “ಹೋಗು” ] ದೇಹದಿಂದ ಆಗತಾನೇ ಹೊರಟೆದ್ದು ಹೋದದ್ದು.

ರಣಗೋಲೆ ಎಂದರೆ ರಣ + ಕೊಲೆ. ರಣದಲ್ಲಿ, ಉರಿಯಲ್ಲಿ (ರನರನ ಬಿಸಿಲು) ನೀರಿಲ್ಲದ ಅವಸ್ಥೆಯಲ್ಲಿ (ರಣ = ಮರುಸ್ಥಳ) ಅಸುನೀಗಿದ ಜೀವಿ. ಒಂಟಿ ಇರಬಹುದು, ತಂಡವಿರಬಹುದು.