ಹಸಿಮಾಂಸವನ್ನು ತಿನ್ನುತ್ತಾ ಕಾಡಿನಲ್ಲಿ ಅಲೆಮಾರಿಯಂತೆ ಜೀವಿಸುತ್ತಿದ್ದ ಮಾನವ, ಕುಟುಂಬ ಜೀವಿಯಾದ ಮೇಲೆ ವಸತಿಯ ಅಗತ್ಯವನ್ನು ಕಂಡುಕೊಂಡಿರಬೇಕು. ಆರಂಭದಲ್ಲಿ ಮರದ ಪೊಟರೆ. ಕಲ್ಲಿನ ಗುಹೆಗಳಲ್ಲಿ ವಾಸಿಸುತ್ತಿದ್ದು ಕ್ರಮೇಣ ಬುದ್ದಿ ವಿಕಾಸವಾದಂತೆ ಅವನ ಅಗತ್ಯಗಳು ಹೆಚ್ಚಿದವು. ಆಹಾರದ ಕೊರತೆ, ಮಿತವಾದ ಮಾಂಸ ಸೇವನೆ ಮತ್ತು ಬೇಸಾಯ ವೃತ್ತಿ ಅವನನ್ನು ಒಂದೆಡೆ ನೆಲೆ ನಿಲ್ಲುವಂತೆ ಪ್ರೇರೇಪಿಸಿದವು.ಸಹಕಾರ ಮನೋಭಾವವು ಮಾಡಿತು. ಪರಿಣಾಮವಾಗಿ ಬಹುಕಾಲ ಉಳಿಯುವ ಪ್ರಕೃತಿಯ ಕೋಪ ವಿಕೃತಿಗಳಿಂದ ರಕ್ಷಣೆ ಸಿಗುವಂತಹ ವಾಸದ ಮನೆಗಳನ್ನು ಕಟ್ಟಿ, ಗುಂಪಾಗಿ ಜೀವಿಸತೊಡಗಿದ. ಇದು ಮುಂದೆ ಗ್ರಾಮ ವ್ಯವಸ್ಥೆಗೆ ನಾಂದಿಯಾಯಿತು. ಇದು ಮನುಷ್ಯ ಅವ್ಯವಸ್ಥೆಯಿಂದ ವ್ಯವಸ್ಥೆಯೆಡೆಗೆ ಸಾಗಿ ಬಂದುದರ ಫಲ. ಕ್ರಿ.ಪೂ. ೩೦೦ ರಲ್ಲಿ ಭಾರತಕ್ಕೆ ಬಂದಿದ್ದ ವಿದೇಶಿಯಾತ್ರಿಕ ಮೆಗಾಸ್ಸನೀಸ್ ಭಾರತದ ಅಂದಿನ ವಸ್ತು ಸ್ಥಿತಿಯನ್ನು ವಿವರಿಸುತ್ತಾ ಭಾರತದ ಬಹು ಸಂಖ್ಯೆಯ ಜನರು ಬೇಸಾಯ ಮಾಡುತ್ತಾ ತಮ್ಮ ಮಡದಿ ಮಕ್ಕಳೊಂದಿಗೆ ಹಳ್ಳಿಗಾಡುಗಳಲ್ಲಿ ವಾಸಿಸುತ್ತಿದ್ದರೆಂದು ಉಲ್ಲೇಖಿಸುವನು. ಇದಕ್ಕೆ ಪೂರಕವಾಗಿ ಕ್ರಿ.ಪೂ. ೮೦೦೦ ವರ್ಷಗಳ ಹಿಂದೆ ನಮ್ಮಲ್ಲಿ ಭತ್ತವನ್ನು, ೪೦೦೦ ವರ್ಷಗಳ ಹಿಂದೆ ಗೋಧಿಯನ್ನು ಬೆಳೆಯುತತಿದ್ದುದಕ್ಕೆ ಸ್ಪಷ್ಟ ದಾಖಲೆಗಳು ಸಿಗುತ್ತವೆ. ಇವೆಲ್ಲ ಭಾರತದಲ್ಲಿದ್ದ ಗ್ರಾಮ ಜೀವನ ವ್ಯವಸ್ಥೆಯನ್ನು ಸಾಬೀತು ಪಡಿಸುತ್ತವೆ.

ದಕ್ಷಿಣ ಕರ್ನಾಟಕದ ಗ್ರಾಮ ರಚನೆಯ ವಿನ್ಯಾಸವೇ ಒಂದು ಬಗೆ ಸಣ್ಣೂರುಗಳಾದರೆ ಸುತ್ತಲೂ ಮನೆಗಳನ್ನು ಕಟ್ಟಿದ್ದು, ಸಂಕೇತವಾಗಿ ಒಂದೇ ಕಡೆ ಪ್ರವೇಶ ಇದ್ದರೆ, ದೊಡ್ಡೂರಿನಲ್ಲಿ ಸುತ್ತ ಕೊಟೆಯನ್ನು ಕಟ್ಟಿದ್ದು, ಹೆಬ್ಬಾಗಿಲು ಇರುತ್ತದೆ. ಇಂದಿಗೂ ಇದರ ಪಳೆಯುಳಿಕೆಗಳನ್ನು ಕಾಣಬಹುದು. ಕಳ್ಳಕಾರರು ದೊಂಬಿಕಾರರಿಂದ ರಕ್ಷಣೆ ಪಡೆಯಲು ಮತ್ತು ಸುಲಭದಲ್ಲಿ ಅವರನ್ನು ಹಿಡಿದು ಸದೆ ಬಡಿಯಲು ಈ ಬಗೆಯ ಬಾಗಿಲುಗಳು ಸಹಕಾರಿಯಾಗಿದ್ದವು.

ಹಳ್ಳಿಗಳು ಸಾಮಾನ್ಯವಾಗಿ ಇಳಿಜಾರು ಪ್ರದೇಶದಲ್ಲಿ ಇರುತ್ತಿದ್ದವು. ಸೂರ್ಯನ ಪ್ರಖರತೆಯಿಂದ ಮುಕ್ತವಾಗಲೂ, ಎದುರುಗಾಳಿಯಿಂದ ತಪ್ಪಿಸಿಕೊಳ್ಳಲು ಮತ್ತು ಮಳೆ ನೀರು ನಿಲ್ಲದೆ ಹರಿದುಕೊಂಡು ಹೋಗುವುದರಿಂದ ಗ್ರಾಮನೈರ್ಮವ್ಯವನ್ನು ಕಾಪಾಡುವ ಉದ್ದೇಶ ಅವರದಾಗಿತ್ತೆಂದು ತೋರುತ್ತದೆ.

ದಕ್ಷಿಣ ಕರ್ನಾಟಕದಲ್ಲಿ ಮನೆಯನ್ನು ಕಟ್ಟುವ ಮೊದಲು ಮನೆಗಾಗಿ ನಿರ್ದಿಷ್ಟ ಜಾಗವನ್ನು ಕೊಂಚ ಎತ್ತರಮಟ್ಟದಲ್ಲಿರುವಂತೆ ಆಯ್ಕೆ ಮಾಡುತ್ತಾರೆ. ಕಾರಣ ಗಾಳಿ ಬೆಳಕು, ಧಾರಾಳವಾಗಿ ಬರಲೆಂಬ ಆಶಯ. ಒಂದು ಪಕ್ಷ ಜಾಗವೇ ತಗ್ಗಿನಲ್ಲಿದ್ದರೆ ಹಜಾರದ ರಚನೆಯಲ್ಲೆ ಆ ಎತ್ತರವನ್ನು ಕಾಯ್ದುಕೊಳ್ಳುತ್ತಾರೆ. ಹೀಗೆ ಆಯ್ಕೆಗೊಂಡ ಜಾಗಕ್ಕೆ ‘ಮಂದಾಳ’ ಎನ್ನುವರು. ಆ ಮೇಲೆ ಕುಂಬದವರಲ್ಲಿ ಯಾರ ಹೆಸರಿನ ಬಲಕ್ಕೆ ಮನೆ ಕೂಡಿಬರುತ್ತದೋ ಅವರ ಹೆಸರಿನ ಬಲಕ್ಕೆ ಕೆಲವೊಮ್ಮೆ ಮನೆದೇವರ ಹೆಸರಿನ ಬಲಕ್ಕೆ ಪುರೋಹಿತರ ಬಳಿ ಜೋತಿಷ್ಯ ನೋಡಿ ಆಯ ಕಟ್ಟುವ ದಾನವನ್ನು ಗೊತ್ತು ಮಾಡುತ್ತಾರೆ. ಆಯ ಕಟ್ಟುವಲ್ಲಿಯೂ ಎರಡು ಉಂಟು. ಬಂದಾಳ ಪೂರ್ತಿ ಆಯ ಕಟ್ಟುವುದು ಒಂದು ಬಗೆಯಾದರೆ, (ಹೀಗೆ ಮಾಡುವಾಗ ಜಾಗದ ಸುತ್ತ ೯ ಅಗುಲ ಬಿಟ್ಟು) ಮನೆ ಕಟ್ಟುವಷ್ಟೇ ಜಾಗಕ್ಕೆ ಆಯಕಟ್ಟುವುದು ಮತ್ತೊಂದು ಬಗೆ. ಇದೊಂದು ಬಗೆಯಲ್ಲಿ ದುಷ್ಟ ಗ್ರಹಗಳನ್ನು ದಿಗ್ಬಂಧೀಸುವ ಪೂಜೆ. ಆಯದಲ್ಲಿ ಗಜಾಯ, ಧ್ವಜಾಯ, ವೃಷಭಾಯ, ಸಿಂಹಾಯ, ಕಾಕಾಯ ಎಂಬ ವಿಧಗಳಿವೆ. ಇವುಗಳಲ್ಲಿ ದ್ವಜಾಯ, ವೃಷಭಾಯಗಳು ಉತ್ತಮವಾದುವು. ಜೊತೆಗೆ ವರ್ಗಭೇದಕ್ಕೆ ಅನುಸಾರವಾಗಿ ಆಯ ಕಟ್ಟುವುದೂ ಉಂಟು. ವೈಶ್ಯರಿಗೆ ಗಜಾಯ, ರಾಜ ಮಹಾರಾಜರಿಗೆ ಧ್ವಜಾಯ (ಮೈಸೂರಿನ ಅರಮನೆ) ಶ್ವೇತಮತ ಮತ್ತು ಗೌಡರಿಗೆ ವೃಷಭಾಯ, ಕೆಳವರ್ಗದವರಿಗೆ ಕಾಕಾಯ, ಸಿಂಹಾಯ ದೇವಾಲಯ ಕಟ್ಟುಲು ಆಗಿರುವಂಥದ್ದು ಎಂಬ ನಂಬಿಕೆ ಜನಪದರದ್ದು. ಮನೆಯನ್ನು ಕಟ್ಟುವ ಸ್ಥಳದಲ ಉದ್ದದ ಮೊಳಗಳನ್ನು ಅಗಲದ ಮೊಳಗಳಿಂದ ಗುಣಿಸಲು ಬರುವ ಕ್ಷೇತ್ರ ಪದ ಸಂಖ್ಯೆಯ ಗುಣಾಕಾರಕ್ಕೆ ತಕ್ಕಂತೆ ಆಯದ ವಿಧಗಳು ರೂಪುಗಳೊಳ್ಳುತ್ತವೆ. ಆಯಪೂಜೆಯಲ್ಲಿ ಐದು ಅಥವಾ ೯ ಬಗೆಯ ಧಾನ್ಯದ ‘ಹಳದಿ ಬಟ್ಟೆಯ’ ಗಂಟುಗಳನ್ನಿಟ್ಟು ಹೂವು, ಹಣ್ಣು, ಎಲೆ ಅಡಿಕೆ, ಅರಿಸಿಣ, ಕುಂಕುಮ, ಹಾಲುತುಪ್ಪಗಳಿಂದ ಹಣ್ಣುಕಾಯಿಗಳಿಂದ ಈಶಾನ್ಯದಿಕ್ಕನ್ನು ಪೂಜೆ ಮಾಡುತ್ತಾರೆ. ಈ ಪೂಜೆಯಲ್ಲಿ ಎಳ್ಳಕ್ಕಿ, ನೆನೆದ ಕಡ್ಲೆಕಾಳುಗಳ ಪ್ರಧಾನ ಪಾತ್ರವನ್ನು ವಹಿಸುತ್ತವೆ. ಪೂಜೆಯಾದ ಮೇಲೆ ಹಸಿನೂಲನ್ನು ೩ ಇಲ್ಲವೆ ಐದು ಬಾರಿ ಮಂದಾಳದ ಸುತ್ತಲೂ ಕಟ್ಟಿ ದಿಗ್ಬಂಧನ ಮಾಡಿ ದೆವ್ವ ಭೂತಗಳಿಂದ ರಕ್ಷಣೆ ಕೋರುತ್ತಾರೆ.

ಆಯಕಟ್ಟದ ತರುವಾಯ ಗುದ್ದಲಿಪೂಜೆ ಮಾಡುವ ಮೂಲಕ ಮನೆ ಕಟ್ಟಲು ಮೊದಲು ಮಾಡುತ್ತಾರೆ. ಈಶಾನ್ಯ ದಿಕ್ಕಿನಲ್ಲಿ ನಿವೇಶನದ ಮೂಲೆಯಲ್ಲಿ ಗುದ್ದಲಿ ಪೂಜೆ ನಡೆಯುತ್ತದೆ. ಈ ದಿಕ್ಕಿಗೆ ದೇವಮೂಲೆ ಎಂದು ಕರೆವ ಜನಪದರು ಅಲ್ಲಿ ದೇವಾನ್‌ದೇವತೆಗಳು ವಾಸಿಸುತ್ತಾರೆಂದು ನಂಬುತ್ತಾರೆ. ಆಳ ಗುಂಡಿ ತೋಡಿ ಪೂಜೆ ಮಾಡಿ ಹಾಲು ತುಪ್ಪವನ್ನು ಆ ಜಾಗಕ್ಕೆ ಬಿಟ್ಟು ಎರಡು ಕೊಡ ನೀರು ಹಾಕಿ ಮಣ್ಣು ತುಂಬಿ ಗುಂಡಿಯನ್ನು ಸಮತಟ್ಟು ಮಾಡುತ್ತಾರೆ. ಮರುದಿನ ಆ ಜಾಗ ಬಿರುಕು ಬಿಡದಿದ್ದರೆ ಆ ಮನೆಗೆ ಶುಭಯೋಗ ಎಂಬ ನಂಬಿಕೆ ಇಂದಿಗೂ ಚಾಲ್ತಿಯಲ್ಲಿದೆ.

ಹೀಗೆ ಜನಪದರು ಶಾಸ್ತ್ರಬದ್ಧವಾಗಿ ಮನೆ ಕಟ್ಟಲು ತೊಡುಗುವರು. ಯಾವುದೇ ಹಳ್ಳಿಯ ಮನೆಗಳು ನಿರ್ಮಾಣ ಕುಟುಂಬದ ಆರ್ಥಿಕ ವ್ಯವಸ್ಥೆಯನ್ನು ಅವಲಂಭಿಸಿರುತ್ತದೆ. ಆ ಮನೆಗಳ ರಚನಾ ವಿನ್ಯಾಸಕ್ಕೆ ತಕ್ಕಂತೆ ಗುಡಿಸಲು ಮನೆ, ಮರದ ಮನೆ, ಮಾಳಿಗೆ ಮನೆ, ಕವಳ್ಗೆ ಮನೆ ಮತ್ತು ತೊಟ್ಟಿ ಮನೆಗಳೆಂದು ವಿಭಾಗಿಸಬಹುದು.

ಗುಡಿಸಲು ಸುಮಾರು ೨೦ ರಿಂದ ೩೦ ಉದ್ದ, ೬ ರಿಂದ ೮ ಅಗಲ ಇರುತ್ತದೆ. ಉದ್ದಳತೆಯ ಮಧ್ಯದಲ್ಲಿ ಎರಡೂ ಕಡೆ ೧೦ ರಿಂದ ೧೨ ಉದ್ದದ ಕವಗೋಲನ್ನು ನಟ್ಟು ನಡುವೆ ಹೊಡೆಮರವನ್ನು ಇಡುತ್ತಾರೆ. ಈ ಹೊಡೆಬರ ಉಂಡಗೆಯ ಚೊಂಬು, ಅಡಿಕೆ ಮರ ಅಥವಾ ಸುರಗಿಯ ಪಾಸಾಗಿರುತ್ತದೆ. ಹೊಡೆಮರದಿಂದ ಇಳಿಜಾರಾಗಿ ಒತ್ತೊತ್ತಾಗಿ ಗಳದ  ಸರಗಳನ್ನು ಹಾಕಿ, ಅಡ್ಡಲಾಗಿ ಗಳಗಳನ್ನು ಬೀಸಲಾಗಿರುತ್ತದೆ ಅವನ್ನು ಭೊತಾಳೆ ಇಲ್ಲವೆ ಕತ್ತಾಳೆ ನಾರಿನಿಂದ ಕಟ್ಟುತ್ತಾರೆ. ಕೆಲವು ಗುಡಿಸಲಲ್ಲಿ ಸುತ್ತ ಮೋಟುಗೋಡೆ ಹಾಕಿ, ಸರದ ಗಳಗಳನ್ನು ಅದರ ಮೇಲೆ ಕೂರಿಸುತ್ತಾರೆ. ಇದು ಮಳೆಯ ಉರಪಲನ್ನು ತಡೆಯುತ್ತದೆ. ಬಾಗಿಲಿಗಾಗಿ ಕಿಡಿಕಿಯನ್ನು ಕಟ್ಟುತ್ತಾರೆ. ಹೀಗೆ ಸಿದ್ಧವಾದ ಗುಡಿಸಲಿನ ಮೇಲೆ ಹಲ್ಲು, ತರಗು, ತೆಂಗಿನ ಗರಿ (ಸೋಗೆ/ ಪಟ್ಟೆ) ಎಲೆಗಳನ್ನು ಹೊದಿಸುತ್ತಾರೆ. ಹೊದಿಕೆಗೆ ಬಳಸಿದ ವಸ್ತುವಿಗೆ ಅನುಸಾರವಾಗಿ ಕ್ರಮವಾಗಿ ಹುಲ್ಲಿನ ಮನೆ, ಹೊಡಕೆ ಮನೆ, ಎಲೆ ಮನೆಯೆಂದು ಕರೆಯಲಾಗುತ್ತದೆ. ಈ ಎಲೆ ಮನೆಯ ಅಸ್ತಿತ್ವವನ್ನು ರಾಮಾಯಣದ ಕಾಲಕ್ಕೆ ಬಳಕೆಯಲ್ಲಿತ್ತೆಂಬುದು ಗಮನಾಹ್ಹ. ಅದಕ್ಕಿದ್ದ ಪಾವಿತ್ಯ್ರ ಮತ್ತು ಮಹತ್ವದ ಸಂಕೇತವಾಗಿ ಋತುಗತಿ ಹೆಣ್ಣಿಗೆ ಕೆಲಕಾಲವಾದರೂ ಎಲೆಯ ಗುಡ್ಲು ಹಾಕುವ ಪದ್ಧತಿ ಇಂದಿಗೂ ಹಳ್ಳಿಯಲ್ಲಿದೆ.

ಗುಡಿಸಲಿನಾಕಾರದಲ್ಲೆ ಮರದ ಮನೆಗಳನ್ನು ಕಟ್ಟುತ್ತಿದ್ದುದ್ದುಂಟು. ಇಂದಿಗೂ ಸೋಲಿಗರು ಮರದ ಮನೆಗಳಲ್ಲೇ ವಾಸಿಸುವುದು ಹೆಚ್ಚು. ಇವತ್ತಿಗೂ ಗುಡ್ಡಗಾಡಿನಲ್ಲಿ, ಕ್ರೂರ ಮೃಗಗಳಿಂದ ರಕ್ಷಣೆ ಪಡೆಯಲು ಮರದ ಅಟ್ಟಿಗೆಗಳಲ್ಲಿ ಮಲಗುವುದನ್ನು ಕಾಣಬಹುದು. ಬೇಟೆಗಾರರು ಇಂಥವನ್ನೇ ಬಳಸುವರು.

ಇನ್ನು ಪಾಟ ಕಟ್ಟೋ ಕೆಲಸ. ಒಂದು ಗಜದ ಅಗಲಕ್ಕೆ, ನಾಟುಗಟ್ಟಿ ಸಿಗುವವರೆಗೂ ಅಗೆದು ಕಾಡುಗಲ್ಲನ್ನು ಉದ್ದಗಲಕ್ಕೆ ಇಡುತ್ತಾ ನಡುನಡುವೆ ನೀರು ಬೆರಸಿ, ದನಗಳಿಂದ ತುಳಿಸಿ ಅಂಟಿನಂತೆ ಹದಗೊಳಿಸಿದ ಮಣ್ಣನ್ನು ವರಟೆ ವರಟೆಯಾಗಿದ್ದು ಭೂಮಟ್ಟಕ್ಕೆ ೧/೨ ಅಡಿಯಿಂದ ೧ ಅಡಿ ಮೇಲಕ್ಕೆ ಕಲ್ಲಿನ ಪಾಯ ಹಾಕುವರು. ನಂತರ ಹಿಂದಿನ ದಿನವೇ ಹದಮಾಡಿಕೊಂಡಿದ್ದ ಮಣ್ಣ ಉಂಡೆಯನ್ನು ಬಳಸಿ, ೭ ರಿಂದ ೧೦ ಅಡಿ ಎತ್ತರವಿರುವ ೨ ರಿಂದ ೧. ೧/೨ ಅಡಿ ದಪ್ಪದ ಗೋಡೆಯನ್ನು ಸುತ್ತಲೂ ಕಟ್ಟುತ್ತಾರೆ. ಕಳ್ಳ ಸುಲಭವಾಗಿ ಕನ್ನ ಕೊರೆಯಲು ಆಗದಷ್ಟು ಗೋಡೆ ಗಟ್ಟಿಯಾಗುತ್ತವೆ. ಗೋಡೆಯ ನಿರ್ಮಾಣದ ಮೇಲಿನ ವಿನ್ಯಾಸಕ್ಕೆ ತಕ್ಕಂತೆ ಮನೆಯ ವಿಧಗಳು ಸೃಷ್ಟಿಗೊಳ್ಳುತ್ತವೆ.

ಕವಳಿಗೆ ಮನೆ ಸಾಮಾನ್ಯವಾಗಿ ೧೮ ಅಡಿ ಅಗಲ, ೩೩ ಅಡಿ ಉದ್ದವನ್ನು ಹೊಂದಿರುತ್ತದೆ. ಗೋಡೆಯ ಮೇಲೆ ತೊಲೆಗಳನ್ನು ಹಾಕಿ ಎರಡು ಕಡೆ ೯ ಅಡಿ ಉದ್ದದ ಸುಮಾರು ೧ ಅಡಿ ದಪ್ಪ ಕೊಮಾರ್‌ಗಳನ್ನು ನಿಲ್ಲಿಸಿ ಅಡ್ಡ ಸರ ಹಾಕುತ್ತಾರೆ. ಇದು ೧.೧/೪ ಅಡಿಗೆ ಬಂದಂತೆ ಇರುತ್ತದೆ. ಈ ಅಡ್ಡ ಸರವನ್ನು ಜಂತಿ, ತಕಡಿ ಎಂದಲೂ ಕರೆಯುತ್ತಾರೆ. ಈ ಜಂಟಿಗಳಿಗೆ ರಿಪರ್‌ಗಳನ್ನು ಹಂಚಿನ ಅಳತೆಗೆ ತಕ್ಕಂತೆ ಮೊಳೆ ಹೊಡೆದು, ಇಲ್ಲವೆ ಜಂತಿಗಳವಾಗಿದ್ದಲ್ಲಿ ಪಿಂಜಿ ಹುರಿ ಕಟ್ಟಿ  ಸಿದ್ಧ ಮಾಡುತ್ತಾರೆ. ಇಂಥ ಮನೆಯ ಹಿಂದೆ ದು. ೧೨ ಅಡಿಯ ಹಿಪ್ಪಾರು, ಮುಂದೆ ೭.೧/೩ ಹೊಸಾರು ಇದ್ದು, ಹೊಸಾರಿನಲ್ಲಿ ಜಗಲಿಯನ್ನು ನಿರ್ಮಿಸುತ್ತಾರೆ. ಕೆಲವು ಮನೆಗಳಲ್ಲಿ ಜಗಲಿಯಲ್ಲಿ ಹೊಸಾರನ್ನು ಎತ್ತರವಾಗಿ ಹಿಡಿದಿಟ್ಟುಕೊಳ್ಳುವಂತೆ ಬೋದಿಗೆಯಾಕಾರದ ಕಂಬಗಳನ್ನು ನಿಲ್ಲಿಸುತ್ತಾರೆ. ಇಂಥ ಮನೆಗಳಿಗೆ ಮುಂತೆ ತಲೆಬಾಗಿಲು, ಹಿಂದೆ ಹಿಂಬಗಿಲಿದ್ದು ಎರಡು ಪ್ರವೇಶವಿರುತ್ತದೆ. ಇಂಥ ಮನೆಗಳಲ್ಲಿ ಗವಾಕ್ಷಿಗಳೇ ಕಿಟಕಿಯ ಕೆಲಸವನ್ನು ಮಾಡುತ್ತವೆ. ಆದರೆ ಚೈತನ್ಯವಂತರು ಮುಂಬಾಗಿಲು ಆಚೆ-ಈಚೆ ಕಿಟಕಿಗಳನ್ನು ಇಡಿಸುತ್ತಾರೆ. ಮಾಳಿಗೆ ಮನೆಯ ಮುಂಬದಿ ಕವಳೆ ಮನೆಗಿಂತ ಭಿನ್ನವಾಗಿರುತ್ತದೆ. ಸುತ್ತಲೂ ಮಧ್ಯಭಾಗದಲ್ಲಿ ಗೋಡೆಯ ಎರಡೂ ಕಡೆ ಚಾಚಿರುವಂತೆ ಅಡ್ಡ ಹಾಕಿ ಆಸರೆಯಾಗಿ ಬೋದಿಗೆಯಾಕಾರದ ಕಂಬಗಳನ್ನು ನಿಲ್ಲಿಸಿ, ಅಡ್ಡ ಮೇಲೆ ಬರುವಂತೆ, ಅಡ್ಡೆಯಂತೆ ಇರುವ ತೊಲೆಗಳನ್ನು ಹಾಕುತ್ತಾರೆ. ಇವನ್ನೆಲ್ಲ ಸಮನಾಗಿ ಹಾಸಿದ ಮೇಲೆ ಇವುಗಳ ಮೇಲ್‌ಭಾಗದಲ್ಲಿ ಒತ್ತೊತ್ತಾಗಿ ಜಂತೆಗಳನ್ನು ಹಾಕಿ ಅದರ ಮೇಲೆ ಕಲ್ಲು ಹಾಕುತ್ತಾರೆ. ಕೆಲವರು ತೆಳುವಾದ ಕಲ್ಲು ಚಪ್ಪಡಿಯನ್ನು ಹಾಕಿ ಅದರ ಮೇಲೆ ಮಣ್ಣಿನಿಂದ ದಮ್ಮಾಸು ಮಾಡುತ್ತಾರೆ. ಇದಕ್ಕೆ ಮೇಲುಮುದ್ದೆ ಹಾಕುವುದು ಎನ್ನುತ್ತಾರೆ. ಈ ದಮ್ಮಾಸಿನ ಮಣ್ಣಿಗೆ ಮಳೆ ನೀಡು ಒಳಕ್ಕೆ ಬೀಳದಂತೆ ತಡೆಹಿಡಿಯಲು ಜೋನಿಬೆಲ್ಲ ಮತ್ತು ಕೋಳಿ ಮೊಟ್ಟೆಯನ್ನು ಕಲಿಸಿರುತ್ತಾರೆ. ಇದು ನೋಡಲು ತಾರಸಿಯಂತೆ ಕಾಣುತ್ತದೆ. ಇಂಥ ಮನೆಯ ಗೋಡೆಯ ಒಳ ಮೈಗೆ ನಯವಾದ, ಹೊರ ಮೈಗೆ ಒರಟಾದ ಗಾರೆಯಿಂದ ಸಾರಣೆ ಮಾಡಿರುತ್ತಾರೆ. ಸುಣ್ಣ ಮರಳನ್ನು ರೋಣ್‌ಗಲ್ಲಿನಿಂದ ಅರೆದು ಗಾರೆ ಮಾಡಿರುತ್ತಾರೆ. ಮಾಳಿಗೆ ಮನೆಯ ಸೂರಿಗೆ ಪಲ್ಟು ಹಾಕಿರುತ್ತಾರೆ. ಇದು ಗೋಡೆಯ ನೇರದಲ್ಲಿ ಕಟ್ಟಿದ ದಿಂಡು. ಮನೆ ಸುತ್ತ ಸೂರಿನ ಅಂಚಿನಲ್ಲಿ ಒಂದು ಅಥವಾ ಎರಡು ಮೂರು ಅಂತರದಲ್ಲಿ ಮಳೆ ನೀರು ಹೋಗಲು ದೋಣಿಯನ್ನು ಕಟ್ಟಿರುತ್ತಾರೆ. ಇದನ್ನು ಮರ, ತಗಡು ಅಥವಾ ಬೊಂಬಿನಿಂದ ತಯಾರಿಸಿದ್ದಾಗಿರುತ್ತದೆ. ಕೆಲವು ಮನೆಗಳಲ್ಲಿ ಗೋಡೆಯಿಂದ ಒಂದು ಮಳ ಮುಂದಕ್ಕೆ ಚಾಚಿದಂತೆ ಚಾಚುಗಲ್ಲನ್ನು ಗೋಡೆಯೇ ಮೇಲೆ ಕೂರುವಂತೆ ಹಾಕಿರುತ್ತಾರೆ. ಇದರಿಂದ ಮಳೆ ನೀರು ಗೋಡೆಯ ಮೇಲೆ ಬೀಳುವುದಿಲ್ಲ. ಮಾಳಿಗೆ ಮನೆಗಳ ನಿರ್ಮಾಣಕ್ಕೆ ಹೆಚ್ಚು ಖರ್ಚು ಬರುವುದರಿಂದ ಶ್ರೀಮಂತರು ಮಾತ್ರ ಇಂಥವನ್ನು ಕಟ್ಟಿಸುತ್ತಾರೆ.

ಮೈಸೂರು ಪ್ರಾಂತ್ಯದಲ್ಲಿ ಹೆಚ್ಚಾಗಿ ಕಂಡು ಬರುವ ಮನೆಗಳು ಎಂದರೆ ತೊಟ್ಟಿಮನೆಗಳು, ತೊಟ್ಟಿ ಮನೆಗಳು ೪, ೮, ೧೬, ೩೨  ಕಂಬಗಳಷ್ಟು ವಿಸ್ತಾರವಾಗಿರುತ್ತವೆ. ವಿರಳವಾಗಿ ಕಂಬದ ಮನೆಗಳು ಕಂಡು ಬರುತ್ತವೆ. ೪ ಕಂಬದ ತೊಟ್ಟಿಮನೆ ಎಂದರೆ ಪೂರ್ವ ಪಶ್ಚಿಮ ೩೦ ಮೊಳ, ಉತ್ತರ ದಕ್ಷಿಣಕ್ಕೆ ೪೦ ಮೊಳ ಉದ್ದವಿರುತ್ತದೆ. ಕೋಟೆಯಂತೆ ಸುತ್ತಲೂ ಗೋಡೆ ಕಟ್ಟಿ, ಮನೆಯ ಮಧ್ಯಭಾಗಕ್ಕೆ ೫’ x ೫’ ಅಗಲದ ತೊಟ್ಟಿಯಿರುತ್ತದೆ. ಗಾಳಿ, ಬೆಳಕು ಇದರಿಂದಲೇ ಇಡೀ ಮನೆಗೆ ಒದಗುತ್ತದೆ. ಉಳಿದಂತೆ ಯಾವ ಕಡೆಗೂ ಕಿಟಕಿಯಿರುವುದೇ ಇಲ್ಲ. ನಾಲ್ಕು ಮೂಲೆಗೆ ಸುರುಪಾದ ಕಲ್ಲು ಇಟ್ಟು ಅದರ ಮೇಲ ಕಂಬ ಇಟ್ಟು ಒಳಬದಿಗೆ ಹಾಕುತ್ತಾರೆ. ನಾಲ್ಕು ಭಾಗದಲ್ಲೂ ಸಮಪಾದದ ತೊಲೆಯನ್ನು ಬೋದಿಗೆಯ ಮೇಲಿಡುತ್ತಾರೆ. ತೊಲೆಯ ಮೇಲೆ ೭’ ಕೊಮಾಠ ಹಾಕಿ, ೩.೧/೨’ ಯ ಗುಜ್ಜು ಹಾಕಿ, ಆ ಗುಜ್ಜಿನ ಮೇಲೆ ಎರಡು ಕಡೆ ಜಂತಿಗಳನ್ನು ಬೀಸುತ್ತಾರೆ. ಹಿಂಬದಿಯ ಗೋಡೆಯಿಂದ ಬಂದ ಇವು ತೊಲೆಯ ಮೇಲೆ ಕೂತುಕೊಳ್ಳುವಂತೆ ಇಳಿಜಾರಾಗಿ ಮಾಳಿಗೆಯ ಮಾದರಿಯಲ್ಲಿ ಕಟ್ಟುತ್ತಾರೆ. ಆ ಮೇಲೆ ಹಂಚು ಹೊದಿಸುತ್ತಾರೆ. ಹಂಚಿನ ಮನೆಗಳನ್ನು ಮಳೆಗಾಲದ ಪೂರ್ವದಲ್ಲಿ ಕೈಯಾಡಿಸಿ ಒಡೆದ ಹಂಚನ್ನು ತೆಗೆದು ಹೊಸ ಹಂಚು ಹೊದಿಸುತ್ತಾ ತೊಟ್ಟಿಯಲ್ಲಿ ಚಪ್ಪಡಿ ಕಲ್ಲನ್ನು ಹಾಸಿರುತ್ತಾರೆ. ನೀರು ಹೊರಹೋಗುವ ವ್ಯವಸ್ಥೆಯನ್ನು ಮಾಡಿರುತ್ತಾರೆ. ತೊಟ್ಟಿಯಿಂದಲೇ ಮಳೆಗಾಲದಲ್ಲಿ ಮನೆ ನೀರನ್ನು ಶೇಖರಿಸುವುದುಂಟು. ಇಂಥ ಮನೆಗೆ ಪ್ರತ್ಯೇಕವಾದ ಸ್ನಾನದ ಮನೆ ಇರುವುದಿಲ್ಲ. ನಾಲ್ಕು ಕಂಬಗಳ ಸುತ್ತ ಸೀರೆಯನ್ನು ಕಟ್ಟಿಮರೆ ಮಾಡಿ ಸ್ನಾನದ ಕೊಠಡಿ ವ್ಯವಸ್ಥೆ ಮಾಡಿಕೊಳ್ಳುವರು. ತೊಟ್ಟಿ ಮನೆಯಲ್ಲಿ ಎತ್ತರದ ಜಗಲಿ ಇದ್ದೆ ಇರುತ್ತದೆ. ತಲೆ ಬಾಗಿಲಿಗೆ ತಲುಪಲು ೩ ಇಲ್ಲವೆ ೪ ಮೆಟ್ಟಿಲುಗಳು ಇರುತ್ತವೆ.

ಯಾವುದೇ ಮನೆಗಾಗಲಿ ಹೆಸರ ಬಲಕ್ಕೆ ಬಂದ ದಿಕ್ಕಿಗೆ ಬಾಗಿಲನ್ನು ಇಡಲಾಗುತ್ತದೆ. ಕೆಲವೊಮ್ಮೆ ಧ್ವಜಾಯ, ಸಿಂಹಾಯ ಮುಂತಾಗಿ ಆಯಕಟ್ಟಿಗೆ ಬರುವ ದಿಕ್ಕಿಗೆ ಬಾಗಿಲು ಇರುವುದೂ ಉಂಟು. ಸಾಮಾನ್ಯ ಬಾಗಿಲು ರಸ್ತೆಗೆ ಅಭಿಮುಖವಾಗಿರುತ್ತವೆಯಾದರೂ ದಕ್ಷಿಣ ದಿಕ್ಕಿಗೆ ಮಾತ್ರ ಇರುವುದಿಲ್ಲ. ಏಕೆಂದರೆ ಈ ದಿಕ್ಕನ್ನು ಜನಪದರು ಯಮದಿಕ್ಕು ಎಂದು ಕರೆಯುತ್ತಾರೆ ಮಾತ್ರವಲ್ಲ ಸತ್ತವರ ತಲೆಯನ್ನು ಆ ದಿಕ್ಕಿಗೆ ಮಲಗಿಸುವ ಸಂಪ್ರದಾಯವೂ ಇದೆ. ಹಳ್ಳಿಗಳ ಬಾಗಿಲಿನಲ್ಲಿ ‘ನಾಳೆ ಬಾ’ ಎಂಬ ಬರಹ ಇರುತ್ತದೆ. ಕೂಗಿನ ಮಾರಿ ಬರುತ್ತದೆ ಎಂಬ ಭೀತಿ. ಹಣವಂತರ ಚಿತ್ತಾರದ ಬಾಗಿಲನ್ನು ಮಾಡಿಸಿರುತ್ತಾರೆ, ಕಟ್ಟಿರುತ್ತಾರೆ.

ಮನೆಯನ್ನು ಕಟ್ಟಿಯಾದ ಮೇಲೆ ಮನೆ ಕೂಡೋ ಶಾಸ್ತ್ರ ನಡೆಯುತ್ತದೆ ಇದನ್ನೆ ನಾವಿಂದು ಗೃಹ ಪ್ರವೇಶವೆಂದು ಕರೆಯುವುದುಂಟು. ಇದಕ್ಕಾಗಿ ಮಹೂರ್ತವನ್ನು ಪುರೋಹಿತರು ನಿರ್ಧರಿಸುತ್ತಾರೆ. ಆ ದಿನ ಪುಣ್ಯಾರ್ಜನೆ, ಹೋಮಾದಿಗಳು ಮನೆಯಲ್ಲಿ ನಡೆಯುತ್ತವೆ. ಕಗ್ಲಿಮರದಿಂದ ಕೆತ್ತಿ ನಯ ಮಾಡಿದ ಒಂದು ಅಡಿಯ ಕಂಬವೇ ಮುಹೂರ್ತ ಕಂಬ. ಇದನ್ನು ಈಶಾನ್ಯ ದಿಕಕಿನಲ್ಲಿ ೧.೧/೨’ ಆಳಕ್ಕೆ ತೆಗೆದ ಗುಂಡಿಯಲ್ಲಿ ಇಟ್ಟು ಮುಚ್ಚುತ್ತಾರೆ. ಅದಕ್ಕೂ ಮೊದಲು ಐದು ಜನ ಮುತ್ತೈದೆಯರು ಆ ಗುಂಡಿಯನ್ನು ಪೂಜಿಸಿ ಹಾಲು, ತುಪ್ಪ ವಿಟ್ಟು, ಚಿನ್ನ, ಬೆಳ್ಳಿ ಹವಳದ ತುಂಡುಗಳನ್ನು ಹಾಕಿ ತರುವಾಯ ಮುಹೂರ್ತ ಕಂಬವನ್ನಿಟ್ಟು ಮುಚ್ಚುತ್ತಾರೆ. ಇದರಿಂದ ಮನೆಗೆ ಬಂದೋಬಸ್ತ ಆಗಿ, ಯೋಗ ಬರುತ್ತದೆಯೆಂದು ಜನಪದರು ಭಾವಿಸುತ್ತಾರೆ. ಹೋಮ ನಡೆಯುವಾಗ ಪೂಜಾರಿ ಮಂತ್ರಿಸಿಕೊಟ್ಟ ತಾಮ್ರದ ಕಾಸನ್ನು ಮನೆಯ ಹೊಸ್ತಿಲ ಮಧ್ಯಭಾಗಕ್ಕೆ ಇಟ್ಟು ಭದ್ರವಾಗಿ ಮೊಳೆ ಹೊಡೆಯುತ್ತಾರೆ. ಹೀಗೆ ಮಾಡುವುದರಿಂದ ಲಕ್ಷ್ಮಿ ತಮ್ಮ ಮನೆಯಲ್ಲೆ ಕಾಲ್‌ಮುರದು ಬಿದ್ದಿರುತ್ತಾಳೆಂದು ನಂಬುತ್ತಾರೆ. ಬಡವರಾದರೆ ಹಸುವನ್ನು ಮನೆಯೊಳಕ್ಕೆ ನುಗ್ಗಿಸಿದರೆ ಎಲ್ಲವೂ ಪರಿಹಾರವಾದಂತೆಯೇ. ತಿನ್ನುಣ್ಣೋ ಜನ ಕುರಿ ಕೋಳಿಯನ್ನು ಬಲಿಕೊಟ್ಟು ಅದರ  ರಕ್ತವನ್ನು ಅಂಗೈಯಲ್ಲಿ ಬಳಿದುಕೊಂಡು ಮನೆಯ ಮೂರು ದಿಕ್ಕಿಗೂ ಬಡಿಯುತ್ತಾರೆ. ಎಲ್ಲ ಮನೆಯಲ್ಲಿ ಅರಿಶಿಣ ಹಚ್ಚಿದ ತೆಂಗಿನ ಕಾಯನ್ನು ತೊಲೆಗೆ ಕಟ್ಟುವುದು ಉಂಟು. ಮನೆಯ ನಾಲ್ಕು ಮೂಲೆಗೆ ಕೆಲವು ಜನ ಹಳೆಯ ಚಪ್ಪಲಿಯನ್ನು ಕಟ್ಟುತ್ತಾರೆ. ದೆವ್ವ ಮನೆ ಹತ್ತಿರ ಬಾರದಿರಲೆಂದು.

ದಕ್ಷಿಣ ಕರ್ನಾಟಕದ ಮನೆಗಳಲ್ಲಿ ಕಾಣಸಿಗುವ ಮುಖ್ಯ ಭಾಗಗಳು ಎಂದರೆ ಜಗಲಿ/ ಜಗತಿ, ನಡುಮನೆ, ಒಳಮನೆ, ಕಿರುಮನೆ ಮತ್ತು ಕೋಣೆ. ನಡುಮನೆಗೆ ಸಾರ್ವತ್ರಿಕರೆಲ್ಲರ ಪ್ರವೇಶವಿರುತ್ತದೆ. ಇದರಲ್ಲಿಯೇ ಒಂದೆಡೆ ಕಣಜವನ್ನು ಒಂದು ಮೂಲೆಗೆ ಭಟ್ಟ ಕುಟ್ಟುವ ಏತವನ್ನು ಇಟ್ಟಿರುತ್ತಾರೆ. ಜೊತೆಗೆ ಜನರ ಮನರಂಜನೆಗಾಗಿ ಬೆಳಕು ಬೀಳುವ ಜಾಗದಲ್ಲಿ ನೆಲದಲ್ಲಿಯೇ ಕಟ್ಟೆ ಮನೆ, ಹಳ್ಳಗುಳಿಮನೆಯನ್ನು ಕೆತ್ತಿರುತ್ತಾರೆ. ತೊಟ್ಟಿ ಮನೆಗಳಲ್ಲಿ ಹೆಚ್ಚಾಗಿ ಇವು ಕಾಣಸಿಗುತ್ತವೆ. ಇದರ ಒಂದು ಮೂಲೆಯಲ್ಲಿ ಮೋಟುಗೋಡೆ ಕಟ್ಟಿ ಸ್ನಾನದ ಮನೆಯ ವ್ಯವಸ್ಥೆಯನ್ನು ಮಾಡಿಕೊಂಡಿರುತ್ತಾರೆ. ಇದರಲ್ಲಿಯೇ ಕೊಟ್ಟಿಗೆ ಇದ್ದು, ಎತ್ತುಗಳನ್ನು ಅಲ್ಲೆ ಕಟ್ಟಿ ಹಾಕುವರು. ಎದ್ದು ಎತ್ತಿನ ಮೊಕ ನೋಡಿದರೆ ಒಳ್ಳೆಯದಾಗುತ್ತದೆ ಎಂಬ ಜನಪದರ ನಂಬಿಕೆಯೇ ಇದಕ್ಕೆ ಕಾರಣ. ಕಲಗಚ್ಚಿನ ಬಾನಿಯನ್ನು ಇಲ್ಲೇ ಇಡುತ್ತಾರೆ.

ಒಳ ಮನೆಗೆ ನೆಂಟರಿಷ್ಟರಿಗೆ ಮಾತ್ರ ಪ್ರವೇಶಾವಕಾಶ. ಇಲ್ಲಿ ರಾಗಿ ಕಲ್ಲು, ಒರಳುಕಲ್ಲು ಹೂತಿರುತ್ತಾರೆ. ಸಾಮೂಹಿಕ ಮಲಗುವ ಕೊಠಡಿಯೂ (ಮಿತ ಸಂತಾನ) ಇದೇ ಆಗಿರುವುದರಿಂದ ಹೆಚ್ಚಿನ ಸಾಮಾನು ಸರಂಜಾಮುಗಳು ಇಲ್ಲಿರುವುದು ಕಡಿಮೆ. ಒಳಮನೆಯ ಗೋಡೆಯ ಉದ್ದಕ್ಕೂ ದೇವರ ಪೋಜಗಳನ್ನು ಇಟ್ಟು ಮಧ್ಯಕ್ಕೆ ತ್ರಿಕೋನಾಕಾರದ ಗೂಡು ಮಾಡಿ ಹಣತೆಯನ್ನಿಡಲು ಉಪಯೋಗಿಸುತ್ತಾರೆ. ಕೆಲವೆಡೆ ಮರದ ಗೂಡು ಮಾಡಿ ಹಣತೆಯಲ್ಲಿಡಲು ಉಪಯೋಗಿಸುತ್ತಾರೆ. ಕೆಲವೆಡೆ ಮರದ ಗೂಡು ಮಾಡಿ ಮೊಳೆಗೆ ನೇತು ಹಾಕಿರುವುದು ಕಂಡು ಬರುತ್ತದೆ. ಪಟವಿಟ್ಟ ಗೋಡೆಗೆ ಶಂಖು, ಚಕ್ರ, ಮೂರು ನಾಮದ ಏಟಿಯನ್ನು ಬಿಡಿಸಿರುತ್ತಾರೆ. ಕೆಂಪು ಬಣ್ಣದಲ್ಲಿ ದೀಪ ಹಚ್ಚಿ ಕೈ ಮುಗಿದರೆ ದೇವರ ಪೂಜೆ ಮುಗಿದಂತೆಯೇ. ಈ ಮನೆಗೆ ಸೇರಿದಂತೆ ಕಿರುಕೋಣೆಯಿರುತ್ತದೆ. ಸಾಮಾನ್ಯವಾಗಿದು ಕತ್ತಲು ಕೋಣೆ. ಬಾಗಿಲು ಪ್ರತ್ಯೇಕವಾಗಿರುವುದಿಲ್ಲ. ಇದರಲ್ಲಿ ದವಸ ಧಾನ್ಯಗಳನ್ನು ಇಡುವ ಬಾನಿಸಾಲು, ವಾಡೆ, ತಟ್ಟಿಗೆ, ಗಳಿಗೆಯ ಮುಂತಾದ ಸಾಮಾನುಗಳನ್ನು ಇಟ್ಟಿರುತ್ತಾರೆ. ಮಣ್ಣಿನ ಬೇರೆ ಬೇರೆ ಗಾತ್ರದ ಮಡಕೆಗಳನ್ನು ಒಂದರ ಮೇಲೊಂದು ಇಟ್ಟು ದವಸ ತುಂಬಿದರೆ ಅದು ಬಾನಿ ಸಾಲು. ಇಂಥ ಹತ್ತಾರು ಸಾಲುಗಳು ಜೋಡಿಸಿಟ್ಟಿರುತ್ತಾರೆ. ಹೆಂಗಸರು ಪುಡಿಗಂಟನ್ನು ಇಂಥವುಗಳಲ್ಲೇ ಮುಚ್ಚಿಡುವುದೇ ಹೆಚ್ಚು. ತಳ ಭಾಗ ಮತ್ತು ಮೇಲ್ಭಾಗ ಚಪ್ಪಟೆಯಾಗಿ, ಒಂದೇ ಸಮನಾಗಿದ್ದು, ಡೋಲಿನಾಕಾರ ದೊಡ್ಡ ಡುಬ್ಬದ ಮಡಕೆಯೇ ವಾಡೆಯಾಗುತ್ತದೆ. (ಆದರಿದು ಮಧ್ಯಕ್ಕೆ ಎರಡು ತುಂಡಾಗಿರುತ್ತದೆ. ಗಾತ್ರ ಹೆಚ್ಚಿರುವುದರಿಮದ ಅದನ್ನು ಸುಲಭವಾಗಿ ಸಾಗಿಸಲು ಕಷ್ಟವಾಗುತ್ತದೆ ಎಂಬ ಕುಂಬಾರನ ಉಪಾಯವೇ ಇದು) ಗಳಿಗೆ ಎಂದರೆ ತಡಿಕೆಯನ್ನು ಮಾಡಿ ಸಗಣಿಯಿಂದ ಸಾರಿಸಿ ಉರುಚಾಗಿ ಹುರಿಯಿಂದ ಹೊಲಿದು ನಿಲ್ಲಿಸಿ ಪಾದದ ಭಾಗವನ್ನು ಸಗಣಿ ಮತ್ತು ಮಣ್ಣು ಒರೆಯುತ್ತಾರೆ. ಭತ್ತ ತುಂಬ ಮೇಲೆ ಹುಲ್ಲು ಹಾಕಿ ಅದರ ಬಾಯಿ ಮುಚ್ಚಿ, ಸಗಣಿ ಮಣ್ಣಿನಿಂದ ಮತ್ತೆ ಒಡೆಯುತ್ತಾರೆ. ಇವುಗಳೊಂದಿಗೆ ವಾಡೆಗಿಂತ ಚಿಕ್ಕ ಸೈಜಿನ ಕೂಸಿಯಿರುತ್ತದೆ. ಹೀಗೆ ಹಲವಾರು ಪರಿಕರಗಳನ್ನು ಕಿರುಮನೆಯಲ್ಲಿಟ್ಟು ಕೊಂಡಿರುತ್ತಾರೆ. ಕೆಲವೊಮ್ಮೆ ಬಾಣಂತಿ ಕೋಣೆಯಾಗಿಯೂ ಕಿರುಮನೆಯನ್ನು ಬಳಸಿಕೊಳ್ಳುವುದು ಕಂಡುಬರುತ್ತದೆ.

ಇನ್ನು ಕೋಣೆಯ ವಿಚಾರ. ಎಷ್ಟು ಹೇಳಿದರೂ ಮುಗಿಯದು. ಏಕೆಂದರೆ ಹಿಂದಿನಿಂದಲೂ ಮಹಿಳೆ ಪ್ರಪಂಚವೆಲ್ಲ ಕೊಣೆಯೇ ಆಗಿ ಬಿಟ್ಟಿದೆ. ಕೋಣೆ ಎಂದರೆ ಅಡಿಗೆ ಮನೆ. ಸಾಮಾನ್ಯವಾಗಿ ಕೋಣೆಯಲ್ಲಿ ಪ್ರಧಾನವಾಗಿರುವುದು ಒಲೆ. ಇದು ೨ ೧/೨ ಅಡಿ ಉದ್ದ, ೧ ೧/೨’ ಅಗಲವಾಗಿದ್ದು ಬಟ್ಟೊಲೆ, ಹೋಗಲೆ ಅಥವಾ ಕೂಡೊಲೆಯನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ಬಟ್ಟೊಲೆಗೆ ಉರಿ ಹಾಕುವರು. ಬೇಯಿಸಿದ ಅಡಿಗೆ ಸಾಮಾನು ಇಡಲು, ಅನ್ನ ಬಸಿಯಲು ಬಳಸಿಕೊಳ್ಳುವರು. ಒಲೆಗೆ ಉರಿ ಅಪವ್ಯಯಗೊಳ್ಳದಂತೆ ಓರೆಯಾಗಿ ಕೂಡೊಲೆ ಇದ್ದು. ಅದರಲ್ಲಿ ಬಿಸಿನೀರಿನ ಅಂಡೆ ಇರುವುದು ಸಾಮಾನ್ಯ. ಬಟ್ಟೊಲೆ ಹಾಗೂ ಒಲೆಯ ನಡುವೆ ಒಂದು ಅಂಗೈ ಅಗಲದ ಗುಂಡಿ ಮಾಡಿ, ಅದರಲ್ಲಿ ಚಟ್ನಿಗೆ ಬೇಕಾದ ಮೆಣಸಿಕಕಾಯಿಯನ್ನು ಬಿಸಿಯಾಗಿಟ್ಟುಕೊಳ್ಳಲು ಬಳಸುವರು. ಒಲೆಯ ಹಿಂಬದಿಗೆ ಸಾಕಷ್ಟು ಜಾಗ ಬಿಟ್ಟಿದ್ದು ಏನಾದರೂ ಒಣ ಹಾಕಲು ಉಪಯೋಗವಾಗುವಂತಿರುತ್ತದೆ. ಉರಿಯೊಲೆಯ ಮುಂದೆ ೧/೨’ ಅಗಲ ಮತ್ತು ೧/೨’ ಉದ್ದದ ಗುಂಡಿಯನ್ನು ಮಾಡಿಕೊಂಡಿಎಉವುದು ಕೆಲವೆಡೆ ಕಾಣಸಿಗುತ್ತದೆ. ಒಲೆಯೊಳಗಿನ ಅನಗತ್ಯ ಕೆಂಡ ಮತ್ತು ಬೂದಿಯನ್ನು ಹೊರಹಾಕಲು ಇದು ಸಹಕಾರಿ. ಈ ಮೂಲಕ ಇದ್ದಿಲನ್ನು ಜನಪದರು ಪಡೆದುಕೊಳ್ಳುತ್ತಾರೆ. ಎಲ್ಲಾ ಒಲೆಗಳು ಸಾಮಾನ್ಯವಾಗಿ ಪೂರ್ವ ದಿಕ್ಕಿನ ಗೋಡೆಗೆ ಹೊಂದಿಕೊಂಡಿರುವುದೇ ಹೆಚ್ಚು. ಒಲೆ ಯಾವ ಕಡೆ ಇದ್ದರೂ ಸರಿ ಅನ್ನವನ್ನು ಬಡಿಸಲು ಪೂರ್ವದ ಕಡೆಯಿಂದ ಬರುವಂತೆ ಕೋಣೆಯ ಬಾಗಿಲಿನ ನಿಯೋಜನೆಯಿರುತ್ತದೆ.

[1] ಒಲೆಯ ಒಡಭಾಗಕ್ಕೆ ಅಥವಾ ಬಲಭಾಗದಲ್ಲಿ ಮೂಲೆಯಲ್ಲಿ ಅರೆಕಲ್ಲು ಮತ್ತು ಹಾಸುಕಲ್ಲು ಇರುತ್ತದೆ. ಇದರಿಂದ ಸಣ್ಣಪುಟ್ಟ ಕಾರಗಳನ್ನು ಅರೆದುಕೊಳ್ಳುತ್ತಾರೆ ಮಾತ್ರವಲ್ಲ. ಹಿಟ್ಟನ್ನು ಮುದ್ದೆಮಾಡಿ, ಇಟ್ಟುಕೊಳ್ಳಲು ಉಪಯೋಗಿಸುವರು. ಇನ್ನೊಂದೆಡೆ ಕುಡಿಯೋ ನೀರಿನ ಹಂಡೆಯನ್ನೋ ಕೊಳಗವನ್ನೋ ಇಟ್ಟುಕೊಂಡಿರುತ್ತಾರೆ. ಕಡಾಯಿಯನ್ನೇ ಕೆಲವು ಬಾರಿ ತೊಳೆದ ಪಾತ್ರಯನ್ನು ಮೊರಲು ಹಾಕಲು ಇಟ್ಟುಕೊಂಡಿರುತ್ತಾರೆ. ಮೂಲೆಯಲ್ಲಿ ಮೊಸರು ಕಡಿಯೋ ಮಂತು, ಕುತುಗೋಲು, ಕವಗೋಲು, ಕಡಗೋಲು ಮುಂತಾದವುಗಳನ್ನು ಒರಗಿಸಿಟ್ಟುಕೊಳ್ಳುವರು. ನಡುಮನೆಯಿಂದ ಕೋಣೆಯನ್ನು ಬೇರ್ಪಡಿಸಲು ಕೆಲವರು ಉತ್ತರ ಗೋಡೆಯನ್ನೇ ಹಾಕಿದ್ದರೆ, ಕೆಲವರು ಅಡ್ಡ ಗೋಡೆಯನ್ನು ಹಾಕುತ್ತಾರೆ. ಇದು ಸು.೬ ಅಂಗುಲ ದಪ್ಪವಿದ್ದು ೧೧/೨’ ಎತ್ತವಿರುತ್ತದೆ. ಸಾಮಾನ್ಯವಾಗಿದ್ದು ಅರೆಯೊ ಕಲ್ಲು ಮತ್ತು ಒಲೆಗೆ ಮಧ್ಯಮವರ್ತಿಯಾಗಿರುವುದೂ ಉಂಟು. ಇನ್ನೂ ಕೆಲವು ಅಡ್ಡ ಗೋಡೆಗಳು ೩’ ಎತ್ತರವಿದ್ದು ಸಾಕಷ್ಟು ಸಮನಾದ ಬಾನಿಸಾಲನ್ನು ಹೊಳುವಷ್ಟು ದಪ್ಪವಿದ್ದು ಸಾಕಷ್ಟು ಸಮನಾದ ಬಾನಿಪಾಲನ್ನು ಹೊಳುವಷ್ಟು ದಪ್ಪವಿರುತ್ತದೆ. ಬಾನಿಸಾಲಿನ ಬಾಯಿ ಮಾತ್ರ ನಮಗೆ ಕಾಣಿಸುತ್ತದೆ. ಇದರ ಮೇಲೆ ಹಲಗೆಯನ್ನು ಹಾಕಿ ಅದನ್ನು ದೀಪವೇ ಇತ್ಯಾದಿ ಸಾಮಾನು ಇಟ್ಟುಕೊಳ್ಳಲು ಬಳಸುವರು. ಕೆಲವು ಮನೆಗಳಲ್ಲಿ ೨ ರಿಂದ ೨ ೧/೨’ ಅಗಲ ೪ ರಿಂದ ೫’ ಉದ್ದದ ಪೆಟ್ಟಿಗೆಯನ್ನೇ ಅಡಿಗೆ ಪರಿಕರಗಳನ್ನಿಟ್ಟುಕೊಳ್ಳಲು ಬಳಸುವುದೂ ಉಂಟು. ಡಬ್ಬಗಳು ಹಿಂದೆ ಇರುಕ್ಕಿರಲಿಲ್ಲವಾಗಿಲ್ಲವಾಗಿ ಸಾಸಿವೆ, ಗಸಗಸೆ ಯಂಥವುಗಳನ್ನು ಕಣ್ಣು ಮಾಡಿದ ತೆಂಗಿನ ಕಾಯಿ ಗೂಡಲ್ಲಿ ಇಟ್ಟು ದಾರಕಟ್ಟಿ ನೇತಾಕುತ್ತಿದ್ದರು. ಅಷ್ಟೆ ಅಲ್ಲ ಕಂಟದಿಂದಲೇ ಸೌಟುಗಳನ್ನು ಮಾಡಿ ಬಳಸುವುದನ್ನು ಇವತ್ತಿಗೂ ಕಾಣುತ್ತೇವೆ. ಕೋಣೆಯ ಮೂಲೆಯಲ್ಲಿ ಚಿಕ್ಕ ಹಾವಳಿಯನ್ನು ತಪ್ಪಿಸಲು, ಹುರಿಯಿಂದ ಮಾಡಿ ನೇತುಹಾಕಿದ ನೆಲದಲ್ಲಿ ಮೊದಲು, ಮಜ್ಜಿಗೆ, ಬೆಣ್ಣೆ ಗಡಿಗೆಯನ್ನು ಇಡುತ್ತಿದ್ದರು. ಹಾಗೆ ನೋಡಿದರೆ ಗೃಹಕೃತ್ಯದ ಎಲ್ಲಾ ವಸ್ತುಗಳು ಕೋಣೆಯಲ್ಲೆ ತಾವು ಪಡೆದುಕೊಳ್ಳುತ್ತಿದ್ದರಿಂದ ಗೃಹಿಣಿಗೆ ಅನಗತ್ಯ ಓಡಾಟ ತಪ್ಪುತ್ತಿತ್ತು. ಸಮಯದ ಉಳಿತಾಯವೂ ಆಗುತ್ತಿತ್ತು.

ಜನಪದರ ಬದುಕಿನಲ್ಲಿ ಹೊಲಮನೆಯದೇ ಪ್ರಧಾನ ಪಾತ್ರ. ಅವು ಅವರ ಪಾಲಿಗೆ ಸಾಕ್ಷಾತ್ ದೈವಸ್ವರೂಪಗಳು, ಆದ್ದರಿಂದಲೇ ಮನೆಗೆ ಸಂಬಂದಿಸಿದ ಅನೇಕ ನಂಬಿಕೆ ಆಚರಣೆಗಳು ಅವರ ಬದುಕಿನಲ್ಲಿ, ಅವಿನಾಬಂಧುತ್ವವನ್ನು ಪಡೆದುಕೊಂಡಿವೆ. ಜನಪದರ ನಂಬಿಕೆಗಳು ಸಮಷ್ಟಿ ಸ್ವರೂಪದವು; ಸಂಸ್ಕೃತಿಯ ಪ್ರತೀಕಗಳು. ಕೆಲವು ಮೂಡನಂಬಿಕೆಗಳಾಗಿರುತ್ತವೆ; ಕೆಲವನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿರಬಹುದು. ಕೆಲವು ಭಯ ಮೂಲವಾದುವು; ಕೆಲವು ವಿವೇಕ ಮೂಲವಾದುವು. ಅದರಲ್ಲೂ ಜನಪದರ ಗಾದೆಗಳಂತೂ ಅನುಭವಜನ್ಯವಾಗಿದ್ದು, ಸಾರ್ವತ್ರಿಕ ಮನ್ನಣೆಯನ್ನು ಪಡೆದಿದ್ದು-ಜೀವನ ಮೌಲ್ಯಗಳ ಪ್ರತೀಕಗಳೂ ಆಗಿವೆ. ಉದಾಹರಣೆಗಷ್ಟೆ ಕೆಲವನ್ನಿಲ್ಲಿ ಉಲ್ಲೇಖಿಸಬಯಸುತ್ತೇನೆ.

ಜನಪದರಿಗೆ ದೀಪ / ಜ್ಯೋತಿಯೇ ಸರ್ವ ದೇವರುಗಳ ಸಂಕೇತ. (ಬೆಳಿಗ್ಗೆ ಮತ್ತು ರಾತ್ರಿ ದೀಪ ಹಚ್ಚಿ ಕೈ ಮುಗಿದರೆ ಪೂಜೆಯ ಕೆಲಸ ಮುಗಿದಂತೆ) ಆದ್ದರಿಂದಲೇ “ದೀಪವನ್ನು ಆರಿಸು” ಎನ್ನರು, “ದೀಪವನ್ನು ತುಂಬು, ದೊಡ್ಡದು ಮಾಡು” ಎನ್ನುತ್ತಾರೆ. ದೀಪ ಖಂಡಸ್ವರೂಪದ, ಅಂಶಸ್ವರೂಪದ ಜ್ಯೋತಿ. ಇದು ಅಖಂಡ ಜ್ಯೋತಿಯಲ್ಲಿ ಒಂದಾಗುವುದನ್ನೇ ಜನಪದರು ಮುಗ್ಧತೆ, ಭಾವುಕತೆಯಿಂದ ಹೇಳಿದ್ದರೂ ಅದು ಅರ್ಥಪೂರ್ಣ ಅಭಿವ್ಯಕ್ತಿಯೇ ಆಗಿದೆ. ಇವರಲ್ಲಿ ‘ಸಗಣಿ ಉಂತೆಯ ಮೇಲೆಯೇ ದೀಪವನ್ನಿಡುವುದು ಸಂಪ್ರದಾಯ’. ಇದು ಹುರುಳಿಲ್ಲದ್ದು ಅಲ್ಲ. ಏಕೆಂದರೆ ಆಗ ಬಳಸುತ್ತಿದ್ದದ್ದು ಮಣ್ಣಿನ ದೀಪ, ಅದರ ತಳ ಉರುಟಾಗಿರುತ್ತದೆ. ಹಸಿ ಸೆಗಣಿ ಉಂಟೆ ಬಳಸುವುದರಿಂದ ಅದನ್ನು ಅದುಮಿ ಎತ್ತಕಡೆಯಾದರೂ ಇಡಬಹುದು. ಜೊತೆಗೆ ಸೋರಿದ ಎಣ್ಣೆ ಗೋಡೆ, ನೆಲವನ್ನು ಹಾಕುಮಾಡೆ, ಸಗಣಿಯಲ್ಲೇ ಅಂಟಿಕೊಳ್ಳುತ್ತದೆ. ಈ ನಂಬಿಕೆಯಲ್ಲಿ ಅವರ ಅನುಭವಪೂರಿತ ವಿವೇಕವಿದೆ. “ಸಂಜೆ ಹೊತ್ತಿನಲ್ಲಿ ಕಸ ಗುಡಿಸಬಾರದು” ಕಸವನ್ನು ಸಂಜೆ ಹೊತ್ತು ಹೊರಗೆ ಬಿಸಾಕಬಾರದು ಎಂಬ ನಂಬಿಕೆಯಲ್ಲೂ ವಿವೇಕ ಎದ್ದು ಕಾಣುತ್ತದೆ. ರಾತ್ರಿ ಹೊತ್ತು ಲಕ್ಷ್ಮಿ ಮನೆ ತುಂಬುತ್ತಾಳೆಂಬ ಜನಪದರ ನಂಬಿಕೆಯು ಮೇಲಿನ ಆಚರಣೆಗೆ ಕಾರಣ. ಹಿಂದೆ ಹಣಕ್ಕೆ ಪಯಾಯವಾಗಿ ಮುತ್ತು ರತ್ನಾದಿಗಳನ್ನು ಬಳಸುತ್ತಿದ್ದರು. ಅದರೊಂದಿಗೆ ಸಣ್ಣ ಪುಟ್ಟ ಒಡವೆ ಕಳೆದು ಹೋಗಿರುವ ಸಾಧ್ಯತೆಯಲ್ಲಿ ಕಸವನ್ನು ಗುಡಿಸಿದರೆ ಬಿಸಾಕಿದರೆ ವಸ್ತು ಕಾಣದಾಗಬಹುದು ಆದ್ದರಿಂದ ಬೆಳಿಗ್ಗೆ ಕಸವನ್ನು ಕೇರಿಯೇ ಕಸ ಎಸೆಯುತ್ತಾರೆ ಜನಪದರು.

ಹೀಗೆಯೇ “ಒಲೆಯನ್ನು ಕಾಲಿಂದ ಒಡೆಯಬಾರದು” ಎಂಬ ನಂಬಿಕೆಯ ಉಗಮಕ್ಕೆ ಭಯವೇ ಮೂಲ. ಹಿಂದೆ ಅವಿಭಕ್ತ ಕುಟುಂಬಗಳೇ ಹೆಚ್ಚಿದ್ದ, ಒಲೆ ಉರಿ ಸಾಮಾನ್ಯವಾಗಿ ಇರುತ್ತಿತ್ತು. ಆದ್ದರಿಂದ ಕಾಲು ಸುಡುತ್ತದೆ ಎಂಬ ಭೀತಿ ಸಹಜವೇ ಜೊತೆಗೆ “ಮಾನವ ಸಂಸ್ಕೃತಿ ಅರಳಿದ್ದು ಅಗ್ನಿಯಿಂದ. ಶುಭಕಾರ್ಯಗಳಿಗೆ ಅಗ್ನಿ ಇರಲೇಬೇಕು ಅಶುಭವನ್ನು ಪರಿಹರಿಸುವಂಥ ಮಾತ್ರ ವಸ್ತುವೂ ಅದೆ” ಆದ್ದರಿಂದಲೇ ಒಲೆಯನ್ನು ಯಾರೂ ಒದೆಯುವುದಿಲ್ಲ.

ಊಟೋಪಚಾರಕ್ಕೆ ಸಂಬಂಧಿಸಿದಂತೆ ಒಂದು ನಂಬಿಕೆ ನೋಡಿ. “ಗಂಡಸರು ಕೋಳಿಕಾಲು ತಿನ್ನಬಾರದು ಕಾಲು ನಡುಗುತ್ತವೆ. ತಲೆ ತಿಂದರೆ ತಲೆ ನಡುಗುತ್ತದೆ” ಎಂಬುದು ನಂಬಿಕೆ. ಇದರ ಉಗಮಕ್ಕೆ ಹೆಂಗಸರ ಜಾಣ್ಮೆ ದೂರದರ್ಶಿತ್ವ ಮತ್ತು ಅನುಕೂಲಸಿಂದ್ವತ್ವ ಕಾರಣ. ಏಕೆಂದರೆ ಮಾಂಸಲೋಭಿ ಗಂಡಸರು ಎಲ್ಲವನ್ನು ತಿನ್ನುತ್ತಿದ್ದು ಹೆಣ್ಣಿಗೆ ಏನೂ ಉಳಿಯುತ್ತಿರಲಿಲ್ಲ. ಕೊನೆಗೆ ಇಷ್ಟನ್ನಾದರೂ ಉಳಿಸಿಕೊಳ್ಳಲು ಉಪಾಯ ಇಲ್ಲಿಯದು.

ಹೀಗೆ “ಉತ್ತರಕ್ಕೆ ತಲೆ ಹಾಕಿ ಮಲಗಬಾರದು” ಮಾತುಗಡೆಗೆ ಕಾಲುಚಾಚಿ ಮಲಗಬಾರದೆಂಬ ಆಚರಣೆಯುಕ್ತ ನಂಬಿಕೆಗಳು ಭಯ ಮೂಲದಿ