ಅನುಬಂಧ

. ಕರಾವಳಿಯಲ್ಲಿ ಕೆಲವು ಮನೆಗಳನ್ನು ಅವು ಯಾವ ಧರ್ಮದವರ ಮನೆ ಎಂಬುದಾಗಿ ಗುರುತಿಸುವುದು ಸಾಧ್ಯ. ಮುಸ್ಲಿಂ, ಕ್ರಿಶ್ಚಿಯನ್ ಮನೆಗಳನ್ನು ಬಿಟ್ಟವರೆ ಉಳಿದವರ ಮನೆ ಅಂಗಳದಲ್ಲಿ ತುಳಸಿಕಟ್ಟೆ ಯಿರುತ್ತದೆ. ಆದರೆ ಇದು ಇತ್ತೀಚೆಗಿನ ಬೆಣವಣಿಗೆ. ಬ್ರಾಹ್ಮಣ ಸಂಪ್ರದಾಯದ ಪ್ರಭಾವ ಇದಕ್ಕೆ ಕಾರಣ. ಮುಸ್ಲಿಂರ ಮನೆಯ ಮುಂಭಾಗ- ಜಗಲಿ ಬಿದಿರು ತಟ್ಟೆಗಳನ್ನು (ಸಪೂರ ಸಲಾಕೆಗಳನ್ನು ಪೋಣಿಸಿ ಮಾಡಲಾದ) ಅಥವಾ ಪರದೆಗಳನ್ನು ಹೊಂದಿರುತ್ತದೆ. ಕ್ರಿಶ್ಚಿಯನ್ ಮನೆಯ ಮುಂಭಾಗದ ಗೋಡೆಯಲ್ಲಿ ಕ್ರೈಸ್ತನ ಶಿಲುಬೆಯ ಚಿತ್ರವಿರುತ್ತದೆ. ಕರಾವಳಿಯ ವಾಸದ ಮನೆಗಳ ಸಂರ್ಕಿರ್ಣದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಯನ್ ಮನೆಗಳ ಬಗೆಗೆ ಹೆಚ್ಚು ಅಧ್ಯಯನ ನಡೆಸಲು ನನಗೆ ಸಾಧ್ಯವಾಗಲಿಲ್ಲ.

. ತರವಾಡಿನ ಮನೆಗಳು: ಕುಟುಂಬದ ಹಿರಿಯರ ಮೂಲ ಮನೆಗಳನ್ನು ತರವಾಡಿನ ಮನೆಗಳೆನ್ನುತ್ತಾರೆ. ಅವುಗಳಲ್ಲಿ ಐನ್ ಮನೆಗಳು. ಐದು ಸುತ್ತಿನ ಮನೆಗಳು ಕೌಟುಂಬಿಕ ಬದುಕಿನಲ್ಲಿ ಮಹತ್ವದ ಸ್ಥಾನ ಪಡೆಯುತ್ತವೆ. ಕುಟುಂಬಕ್ಕೆ ಸಂಬಂಧಿಸಿದ ಮುಖ್ಯ ಕೆಲಸಗಳು ಅಲ್ಲಿ ನಡೆಯುತ್ತವೆ. ಮನೆಯ ಜಗಲಿಯಲ್ಲೇ ಮದುವೆ ನಿಶ್ಚಯ ಮೊದಲಾದ ಕಾರ್ಯಗಳು ನಡೆಯುತ್ತವೆ. ಕರಾವಳಿಯ ಗೌಡರ ಹಳೆಮನೆಯ ರಚನೆಯ ಮತ್ತು ಮದುವೆಯಲ್ಲಿ ಜಗಲಿ ಮತ್ತು ತೊಂಬಾರ (ಅಡುಗೆ ಮನೆಯಲ್ಲಿ ಊಟ ಮಾಡುವ ಒಳಗಿನ ಸ್ಥಳ) ಇವನ್ನು ವಿವರಿಸುವ ಚಿತ್ರ ಮಾಹಿತಿಗಾಗಿ ನೋಡಿ: ಪುರುಷೋತ್ತಮ ಬಿಳಿಮೆ ೧೯೯೦, ೧೦೪). ಕೇರಳದ ತರವಾಡಿನ ಮನೆಗಳ ವಿವರಗಳಿಗೆ ನೋಡಿ ನಂದಾವರ ೧೯೯೨, ೧೧೮).

. ಐಮರ: ಸುಳ್ಯ ಪರಿಸರದ ಗೌಡರ ಮನೆಗಳಲ್ಲಿ ಮನೆಯ ಕುಟುಂಬದ ಮುಖ್ಯಸ್ಥ ಕುಳಿತುಕೊಳ್ಳುವ ಮಂಚ/ ಪೀಠ. ಈ ಆಸನದಲ್ಲಿ ಆತ ಕುಳಿತು ತನ್ನ ಕುಟುಂಬದ ಸದಸ್ಯರನ್ನು ವಿಚಾರಿಸುತ್ತಾನೆ. ಯೋಗಕ್ಷೇಮ ತಿಳಿದು, ನ್ಯಾಯ ತೀರ್ಮಾನಗಳನ್ನು ನೀಡುತ್ತಾನೆ. ಉಳಿದವರು ಅದರಲ್ಲಿ ಕುಳಿತುಕೊಳ್ಳುವ ಕ್ರಮವಿಲ್ಲ.

. ಮನೆ ಮತ್ತು ಹಟ್ಟಿ: ಹಟ್ಟಿ ಆಯ ೨೨ X ೫ ಕೋಲು. ಇದನ್ನು ಎಷ್ಟು ಉದ್ದಕ್ಕೂ ತೆಗೆದು ಕೊಳ್ಳಬಹುದು. ಸಾಮಾನ್ಯವಾಗಿ ಹಟ್ಟಿಯಲ್ಲಿ ಚೆಂಬಿನ ಪಾತ್ರಯಲ್ಲಿ ಹಾಲು ಕರೆದರೆ ಆ ಹಾಲನ್ನು ದಂಬೆಯ (ಕೊಳವೆ) ಮೂಲಕ ಅಡುಗೆ ಮನೆಗೆ ಕಳುಹಿಸುವ ವ್ಯವಸ್ಥೆಯೂ ಇರುತ್ತಿತ್ತು. ಹೀಗಾಗಿ ಹಟ್ಟಿ ಮನೆಗಿಂತ ಎತ್ತರದಲ್ಲಿರುತ್ತಿತ್ತು. ಮನೆಯ ಒಡತಿ ಮನೆಯಿಂದ ಹೊರಗೆಲ್ಲಾದರೂ ಹೋಗಲು ಹೊರಟರೆ ಹಟ್ಟಿಯ ದನಕರುಗಳು ಕೂಗಿ ಸ್ವರ ಮಾಡುತ್ತವೆ. ಕೋಡು ತಲೆಗಳಿಂದ ಕಂಬ, ಗೋಡೆಗಳಿಗೆ ತಿಕ್ಕಿ ಶಬ್ದಮಾಡುತ್ತವೆ. ಒಡತಿ ಇಲ್ಲದೆ ಹೋದರೆ ತಮಗೆ ಆಹಾರ, ಪದಾರ್ಥ ನೀಡುವವರು ಯಾರು ಎಂಬುದರಿಂದಲೇ ಈ ಭಾವನೆಯನ್ನು ಅವು ವ್ಯಕ್ತ ಪಡಿಸುತ್ತವೆ.

೫. ೯ ೧/೨ X ೭ ರ ಆಯುಧದಲ್ಲಿ ಕೈಸಾಲೆ ಮತ್ತು ಕೈಸಾಲೆ ಕೋಣೆ, ಚಾವಡ ಮತ್ತು ಚಾವಡಿ ಕೋಣೆ ಇಷ್ಟೇ ಬರುವುದು. ಹೆಚ್ಚು ಸ್ಥಳಬೇಕಿದ್ದರೆ ಇಳಿಸಿಕಟ್ಟಬಹುದು. ಅದು ಆಯದಿಂದ ಹೊರಗೆ ಬರುವ ಸ್ಥಳಗಳು ಅವುಗಳನ್ನು ಪಡುಬದಿ ಎನ್ನುತ್ತಾರೆ. ಈ ಆಯದ ಮನೆಯೇ ಸಾಮಾನ್ಯವಾಗಿ ಕಂಡು ಬರುವುದು.

೧೩ ೧/೨ X ೮ರ ಆಯದಲ್ಲಿ ಕೈಸಾಲೆ ಮತ್ತು ಕೈಸಾಲೆಯಲ್ಲಿ ಎರಡು ಕೋಣೆಗಳು ಮತ್ತು ಚಾವಡಿಯಲ್ಲಿ ಎರಡು ಕೋಣೆಗಳು ಬರುತ್ತದೆ. ಇತರ ಸ್ಥಳಗಳಿಗೆ ಇಳಿಸಿ ಕಟ್ಟಬಹುದು.

೧೬ ೧/೨ X ೮ ರ ಆಯದಲ್ಲಿ ಕೈಸಾಲೆ ಮತ್ತು ಕೈಸಾಲೆಯಲ್ಲಿ ಎರಡು ಕೋಣೆಗಳು ಮತ್ತು ಚಾವಡಿ ಚಾವಡಿಯಲ್ಲಿ ಎರಡು ಕೋಣೆಗಳು ಬರುತ್ತವೆ.

ಈ ಮೂರು ವಿಧದ ಮನೆಗಳಿಗೆ ಬೇಕಾದ ಸಾಮಗ್ರಿಗಳ ಪಟ್ಟಿ ಹೀಗಿದೆ:

ಧ್ವಜ ಆಯದ ಮನೆಗಳು

  ರೀಪು ಮೂಲೆ ಪಕ್ಕಾಸು ಸರಿ ಪಕ್ಕಾಸು ಆಣಿ ಹಂಚು ಕಿಟಕಿ ಬಾಗಿಲು
9 ½ x7

28 x 18

650 7 ½ 5 ¾ 5 ½ ಕಿಲೋ 60 1350 6 5
13 ½ x 8

 

960 8 ¼ 6 ½ 7½ ಕಿಲೋ  80 1950 9 7
16 ½ x8

41 x 20

1150 8 ½ 6 ½   9 ½ ಕಿಲೋ 2125 8 9

ಆಣಿ ೨’ ೫ ಕೆ.ಜಿ. ೩” ೧ ೧/೨ ಕೆ.ಜಿ.

ಕೆಲವೊಮ್ಮೆ ಎರಡು ಮಾಡಿನ ಮನೆ ತತ್ಕಾಲಕ್ಕೆ ಕಟ್ಟುವುದಿದೆ. ಅದರ ಆಯ ೭ x ೫ ಇರಬಹುದು. ಬಡವರ ಮನೆಗಳು ಇಂತಹ ಮಾದರಿಯವು.

೬. ಬಿಡು ಗುತ್ತಿನ ಮನೆಗಳ ಸರಹದ್ದುಗಳಲ್ಲಿ ಒಕ್ಕಲು ಮನೆಗಳು ಇರುತ್ತವೆ. ಅವು ಒಂದು ರಕ್ಷಣೆಯ ಆವರಣವಿದ್ದ ಹಾಗೆ. ಗುತ್ತು ಅರಮನೆಗಳಿಗೆ ಯಾರೇ ಪ್ರವೇಶವಾಗುವುದಿದ್ದರೂ ಈ ಮನೆಗಳನ್ನು ಹಾದು ಹೋಗಬೇಕು. ಬಂದವರ ಬಗೆಗೆ ಸುದ್ದಿ ಮುಟ್ಟಿಸುವ ವ್ಯವಸ್ಥೆ ಈ ಮೂಲಕವು ಆಗುತ್ತದೆ. ಹಾಗೆಯೇ ವೈರಿಗಳ ಮುತ್ತಿಗೆಯ ಸಂದರ್ಭಗಳಲ್ಲಿ ಅಗತ್ಯ ಬೀಳುತ್ತಿತ್ತು. ಎಲ್ಲಕ್ಕಿಂತಲೂ ಬೀಡಿನ ಮನೆಗಳಲ್ಲಿ ಚಾಕರಿ ಕೆಲಸಗಳಿಗೂ ಇವರೆಲ್ಲ ಬೇಕು. ಹಾಗೂ ಅವರೆಲ್ಲ ಈ ಮುಖ ಮನೆಯ ಸಮೀಪವೇ ವಾಸವಾಗಿರಬೇಕಾಗುತ್ತದೆ.

. ಹೊಸ್ತಿಲು: ಹೊಸ್ತಿಲ ಮೇಲೆ ಕುಳಿತುಕೊಳ್ಳಬಾರದು. ಅದರ ಮೇಲೆ ಕುಳಿತರೆ ಮನೆಯ ಯಜಮಾನನ ಎದೆಯ ಮೇಲೆ ಕುಳಿತ ಹಾಗೆ. ಹೊಸ್ತಿಲು ಮನೆಗೆ ಭೂಷಣ. ಮನೆಯ ಹೊಸ್ತಿಲು ನೋಡಿ ಮನೆಯವರ ಸ್ವಭಾವವನ್ನು ನಿರ್ಧರಿಸಬಹುದು. “ಹೊಸ್ತಿಲೊಳೊರಲೋನಕೆಗಳ ಮೇಲೆ ಕುಳ್ಳಿರ್ಪವನ ಮಸ್ತಕ ವನೆರಡು ಕೈಯಿಂ ತುರಿಸಿಕೊಂಬವನ ನಿಂದು ನಿರ್ಗುಡಿವವನ” ಎಂದು ಮುಂತಾಗಿ ಲಕ್ಷ್ಮೀಶ ಕವಿಯೂ ಜೈಮಿನ ಭಾರತದಲ್ಲಿ ತಿಳಿಸಿದ್ದಾನೆ. ಕೊಂಕಣಿಗಳ ಪ್ರಕಾರ ಹೊಸ್ತಿಲನ್ನು ತುಳಿಯಬಾರದು. ಅದನ್ನು ದಾಡಿ ಹೋಗಬೇಕು. ದಾಟುವಾಗ ಮೈಯ ಬತ್ತಲೆ ಭಾಗ ಹೊಸ್ತಿಲಿಗೆ ಕಾಣಬಾರದು. ಅದಕ್ಕಾಗಿ ಅವರು ಕಚ್ಚೆ ಹಾಕಿ ದೀರೆ ಉಡುತ್ತಾರೆ. ಹೊಸ್ತಿಲು ಮನೆಯೊಳಗನ್ನು ಹೊರಗನ್ನು ಬೆಸೆಯುವ ಜಾಗ. ಈಗಿನ ಮನೆಗಳಿಗೆ ಹೊಸ್ತಿಲು ಇಡುವುದಿಲ್ಲ. ಆದರೆ ಹೊಸ್ತಿಲು ಮನೆಗೆ ಇದ್ದರೆ ಮನೆಯ ಒಳಗೆ ಗುಡಿಸುವ ಸಂದರ್ಭದಲ್ಲಿ ನೆಲಕ್ಕೆ ಬಿದ್ದರಬಹುದಾದ ಬೆಲೆಬಾಳುವ ಸೂಕ್ಷ್ಮ ವಸ್ತು ಒಡವೆ ಹೊರಗೆ ಹೋಗುವುದನ್ನು ತಡೆಯುತ್ತದೆ. ಹಾಗೆಯೇ ಹೊರಗಿನಿಂದ ಹುಳ ಹುಪ್ಪಡಿ ಒಳಗೆ ಬರುವುದೂ ತಡೆಯುತ್ತದೆ. ಈಗೀಗ ಈ ಕಾರಣದಿಂದಲೇ ಇರಬೇಕು ದಾರಂದಕ್ಕೆ ಹೊಸ್ತಿಲು ಇಡುವ ಪದ್ಧತಿ ಪರಾರಂಭವಾಗಿದೆ. ಈ ದೃಷ್ಟಿಯಿಂದ ಹೆಬ್ಬಾಗಿಲು (ಮುಂದಿನ ಬಾಗಿಲು) ಮತ್ತು ಕಿರುಬಾಗಿಲುಗಳನ್ನು ಹೊಸ್ತಿಲುಗಳನ್ನು ಪಡೆದಿರಬೇಕಾಗುತ್ತದೆ. ಹಿಂದಿನ ಮನೆಗಳಿಗೆ ಎತ್ತರದ ಹೊಸ್ತಿಲು ಚಿಕ್ಕ ಬಾಗಿಲು ಮನೆಯ ಒಳಗೆ ಪ್ರವೇಶಿಸುವಾಗ ತಲೆ ಬಾಗಿ ಹೋಗಭೇಕು  ಎಂಬುದಕ್ಕಾಗಿ ಹಾದೆಂದು ಮೇಲು ತಡ್ಯ ತಲೆಗೆ ತಾಗಿದರೆ ಅಪಶಕುಲವೇ ತಿರ್ತಡ್ಯದಂಟ್‌ಡ್ತ್‌ವಿತ್ತಡ್ಯ ಕೋಲ್ತ್‌ಡ್ತ್‌(ಕೆಳಹೊಸ್ತಿಲು ಎಡವಿತ್ತು ಮೇಲು ಹೊಸ್ತಿಲು ತಗುಲಿತ್ತು ಇತ್ಯಾದಿ ಪಾಡ್ದನಗಳಲ್ಲಿ ವರ್ಣಿಸಲ್ಪಟ್ಟಿದೆ).

. ಮನೆಯ ಕುರಿತಾದ ಕೆಲವು ನಂಬಿಕೆಗಳು: ೧) ಮನೆಯ ನಾಯಿ ಯಾರಿಗಾದರೂ ಕಚ್ಚಿದರೆ ಆತ ಗಾಯದ ರಕ್ತವನ್ನು ಆ ಮನೆಯ ಮಾಡಿಗೆ ಹಚ್ಚಿದರೆ ಮನೆಗೆ ಉಡ ಪ್ರವೇಶಿಸಿದಂತೆ. ಆ ಮನೆಯ ನಾಶ ಆರಂಭವಾದ ಹಾಗೆ.

೨) ಮನೆಯ ಮುಖ ತೆಂಕು ಪಡುವಾಗಿರಬಾರದು. ಆದರೆ ಶಾಸ್ತ್ರ ಪ್ರಕಾರ ಬೀದಿಗೆ ಮುಖ ಹಾಕಿ ಮನೆ ಕಟ್ಟಬಹುದೆಂದಿದೆ. ಇದು ಅನುಕೂಲ ಶಾಸ್ತ್ರ ಹೆಚ್ಚು ವ್ಯಾವಹಾರಿಕ ಸಂಗತಿ.

೩) ಮನೆಯ ಆಯದಲ್ಲಿ ಅಡ್ಡದಲ್ಲಿ ಅರೆ ಬರಬಾರದು. ದೀಟ (ಉದ್ದ) ದಲ್ಲಿ ಇಡಿಯಾಗಲಾರದು. ಹಾಗಾಗಿ ೧೦ ಕೋಲು ೨೦ ಅಂಗಿಲ, ೧೩ ಕೋಲು ೨೦ ಅಂಗಿಲ ಇತ್ಯಾದಿ ಅಳತೆಗಳು.

೪) ಮನೆಯ ಆಯದ ಭೂಮಿಯಲ್ಲಿ ವ್ಯಕ್ತಿಯೊಬ್ಬ ಮಲಗಿಕೊಂಡಿರುತ್ತಾರೆ ಎನ್ನುವ ಭಾವನೆಯೊಂದಿದ್ದು ಕುಟ್ಟಿಕಲ್ಲು ಹಾಕುವಾಗ ಆತನ ಅಂಗಾಂಗಗಳಿಗೆ ಕೋಲು ಊರಿ ಕಟ್ಟಿಸಾಗುವಂತಿಲ್ಲ. ಅಂಗಾಂಗ ಬಿಟ್ಟು ಎಂದರೆ ಕೈ, ಕಾಲು ಸಿಗಬಾರದು. ಕೈ ಕಾಲುಗಳ ಸಂದುಗಳಿಗೆ ಹಾಕಬಹುದು. ವಾಸ್ತು ದೇವತೆಯನ್ನೇ ಈ ರೀತಿ ತಿಳಿದುಕೊಂಡಿರಲೂ ಬಹುದು.

೫) ಮನೆಯ ಮುಖ್ಯ ದ್ವಾರ ಬಡಗು ಅಥವಾ ಪೂರ್ವಕ್ಕೆ ಇರಬೇಕು. ಬಡಗು ಸಂಪತ್ತು ಬರುವ ದಿಕ್ಕ. ಮೂಡು ಬೆಳಕು ಬರುವ ದಿಕ್ಕು (ದೇವರು ಉದಯಿಸುವ ದಿಕ್ಕು).

೬) ಒಂದು ಮನೆಗೆ ಒಬ್ಬ ವ್ಯಕ್ತಿಯ ಆಯುಷ್ಯ ಹೆಚ್ಚು ಕಡಿಮೆ ೧೦೧ ವರ್ಷ. ಕೆಲವರು ಹೊಸ ಮನೆ ಕಟ್ಟಿಕೊಳ್ಳುವ ಸಂದರ್ಭ ಹಳೆ ಮನೆಗಳ ಹಂಚು ಪಕ್ಕಾಸು ಕಿಟಕಿ, ದಾರಂದಗಳನ್ನು ಬಳಸುವುದುಂಟು. ಅದರ ಉದ್ಧಾರವಾಗುವುದು ಹೀಗೆ ಎನ್ನುತ್ತಾರೆ ಕೆಲವರು. ಏಕೆಂದರೆ ಅವುಗಳ ಆಯಸ್ಸು ಈಗಾಗಲೇ ತೀರಿದೆ. ಹಾಗಾಗಿ ಹೊಸ ಮನೆಗೆ ಬಾಳಿಕೆ ಇಲ್ಲ. ಕಟ್ಟಿದ ಹತ್ತೋ-ಹದಿನೈದೋ ವರ್ಷದಲ್ಲಿ ಅವು ಬಿದ್ದು ಹೋಗಬಹುದು. ಆದರೆ ಹಳೆ ವಸ್ತು ಎಂದ ಮಾತ್ರಕ್ಕೆ ತೀರ ಹಳೆಯದೇ ಆಗಬೇಕಾಗಿಲ್ಲ. ಯಾವುದೋ ಕಾರಣಕ್ಕೋಸ್ಕರ ಇತ್ತೀಚೆಗೆ ಕಟ್ಟಿಸಿಕೊಂಡ ಮನೆಯೊಂದನ್ನು ಕೆಡವಿ ಹಾಕಬೇಕಾಗಬಹುದು. ಆ ಮನೆಯ ವಸ್ತು ಸಾಮಗ್ರಿಗಳನ್ನು ಬಳಸುವುದರಲ್ಲಿ ತಪ್ಪಿಲ್ಲ.

 

ಮಾಹಿತಿದಾರರ ವಿಳಾಸಗಳು

೧. ಕಮಲ (ಹೆಂ), ಮುಕ್ಕಲ್ದೋಟ, ಕಜೆ, ಕೊಳಂಬೆ ಅಂಚೆ, ಮಂಗಳೂರು ತಾಲ್ಲೂಕು (ದ.ಕ).

೨. ಕೃಷ್ಣಯ್ಯ ಎಸ್. ಎ (ಗಂ), ಸಂಶೋಧಕರು, ಪ್ರಾದೇಶಿಕ ಜನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಎಂ.ಜಿ.ಎಂ. ಕಾಲೇಜು, ಉಡುಪಿ-೫೭೬೧೦೨

೩. ಗುರುವಪ್ಪ ಎಸ್. ಟಿ. (ಗಂ), ನಾಯಕ, ತಚ್ಚಮಜಲು, ಬಾಳೇಪುಣೆ ಗ್ರಾಮ, ಬಂಟ್ವಾಳ ತಾಲ್ಲೂಕು (ದ.ಕ).

೪. ದೇವಕುಮಾರ್ ಜೈನ್, (ಗಂ), ನಿವೃತ್ತ ಹಿಂದಿ ಪಡಿತ್ ಭವನ, ಬೆಟ್ಕೆಚರಿ ರಸ್ತೆ, ಮೂಡಬಿದರೆ ದ.ಕ.

೫. ನಿರ್ಮಲ (ಹೆಂ), ಮೂಡಬಿದರೆ ಅರಮನೆ (ಚೌಟ ಅರಸುಮನೆತನದ ಕುಟುಂಬ) ದ.ಕ.

೬. ಪದ್ಮನಾಭ ಬ, ರಾವ್. (ಗಂ), ಶ್ರೀ ದುರ್ಗಾ ಪ್ರೆಸ್, ಕಾಟಪಳ್ಳ- ೫೭೪೧೧೪೯ (ದ.ಕ).

೭. ಬಾಬು ಒಕ್ಕೆತ್ತಾರು, (ಗಂ), ಮೇಸ್ತ್ರಿ, ಒಕ್ಕೆತ್ತಾರು, ಬಂಟ್ವಾಳ ತಾಲ್ಲೂಕು (ದ.ಕ).

೮. ಬಾಬು ಪೈವ ಹೆಗ್ಗಡೆ, (ಗಂ), ಮಿತ್ತೋಡಿ ಮನೆ, ಕುತ್ತೆತ್ತೂರು, ಬಾಜಾವು ಅಂಚೆ, ಮಂಗಳೂರು ತಾಲ್ಲೂಕು, ದ.ಕ.

೯. ರಾಜೇಂದ್ರ (ಗಂ) ಮೂಡಬಿದರೆ ಅರಮನೆ (ಚೌಟ ಅರಸುಮನೆತನದ ಕುಟುಂಬ) ಮೂಡಬಿದರೆ, ದ.ಕ.

೧೦. ಸದಾನಂದ ನಾರಾವಿ, (ಗಂ), ಸೂರ್ಯ ಕೃಪಾ, ನಾರಾವಿ ಅಂಚೆ -೫೭೪೧೦೯ (ದ.ಕ.)

೧೧. ಸಾದು ಪೂಜಾರಿ (ಗಂ), ಶ್ರೀ ಗೋಕರ್ಣನಾಥೇಶ್ವರ ಸ್ಹಾಮಿಲ್, ಕುಳಾಯಿ- ೫೭೪೧೯೬ (ದ.ಕ).

೧೨. ಹೇಮಾವತಿ, (ಹೆಂ) ಕಜೆಗುತ್ತು, ಕೊಳಂಬೆ ಗ್ರಾಮ, ದ.ಕ.

 

ಆಕರ ಗ್ರಂಥಗಳು

೧) ಕುಶಾಲಪ್ಪಗೌಡ, ಚಿನ್ನಪ್ಪಗೌಡ ೧೯೮೩ ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಯತ್ತುಗಳು
ಉಜಿರೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ
ಪುಸ್ತಕ ಪ್ರಕಾಶನ ಮಾಲೆ,
ಧರ್ಮಸ್ಥಳ-೫೭೪೨೪೦ (ದ.ಕ)
೨) ಚಂದ್ರಶೇಖರ ದಾಮ್ಲೆ ೧೯೯೦ ಆಕರ್ಷಕ ಹೆಬ್ಬಾಗಿಲುಗಳು,
ಮುಂಗಾರು
ದೈನಿಕ ಪತ್ರಿಕೆ
ಮಂಗಳೂರು-೫೭-೭-೯೦  ಸಂಚಿಕೆ.
೩) ನಂದಾವರ ವಾಮನ ೧೯೮೭ ಸಿಂಗದನ, ಕಾಟಿಪಳ್ಳ,
ಹೇಮಾಂಶು ಪ್ರಕಾಶನ ೫-೧೯೦,
ಕಾಟಿಪಳ್ಳ-೫೭೪೧೪೯ (ದ.ಕ)
  ೧೯೯೨ ಗರಡಿ ಮತ್ತು ತಾವು, ಜನಪದ ಸುತ್ತಮುತ್ತ,
ಮಂಗಳೂರು ಪ್ರಜಾಬಂಧು ಪ್ರಕಾಶನ,
ನೊಯೆಯೆಲ್ಲಾ ಬಿಲ್ಲಿಂಗ್,
ಹಂಪನ್‌ಕಟ್ಟೆ-೫೭೫೦೦೧
೪) ಪಂಜೆ ಮಂಗೇಶರಾವ್ ೧೯೭೩ ತೆಂಕಣಗಾಳಿ
ಪಂಜೆಯವರ ಕೃತಿಗಳು,
ಬೆಂಗಳೂರು ಪದ್ಯಗಳು ಸಂ.೧,
ಓರಿಯಂಟಲ್ ಲಾಂಗ್‌ಮನ್ ಲಿಮಿಟೆಡ್,
ಬೆಂಗಳೂರು.
೫) ಪುರುಷೋತ್ತಮ ಬಿಳಿಮಾಲೆ ೧೯೯೦ ಕರಾವಳಿ ಜಾನಪದ,
ಮಂಗಳ ಗಂಗೋತ್ರಿ, ಮಂಗಳೂರು
ವಿಶ್ವವಿದ್ಯಾನಿಲಯ-೫೭೪೧೯೯ (ದ.ಕ)
೬) ರಾಮಚಂದ್ರರಾವ್ ಎಸ್. ಕೆ. ೧೯೭೫ ಮೂರ್ತಿ ಶಿಲ್ಪನೆಲೆ ಹಿನ್ನೆಲೆ,
ಬೆಂಗಳೂರು.
೭) ವಸಂತ ಮಾಧವ ಕೆ.ಜಿ. ೧೯೮೧ ಮೂಲಿಕೆಯ ಇತಿಹಾಸ,
ವಿಜಯಾ ಕಾಲೇಜು ವಿಶ್ವಸ್ಥ ಮಂಡಳಿ,
ದಕ್ಷಿಣ ಕನ್ನಡ
೮) ಶೀನಪ್ಪ ಹೆಗ್ಗಡೆ ೧೯೯೧ ಶೀನಪ್ಪ ಹೆಗ್ಗಡೆ ಸಮಗ್ರ ಸಾಹಿತ್ಯ,
ಮಣಿಪಾಲ ಪೊಳಲಿ ಶೀನಪ್ಪ ಹೆಗ್ಗಡೆ ಜನ್ಮಶತಾಬ್ದಿ, ವಿದ್ಯಾನಗರ, ಮಣಿಪಾಲ
ದಕ್ಷಿಣ ಕನ್ನಡ-೫೭೪೧೧೯.

* * *