ವಸತಿ ಜಾನಪದ (ಸಂಕೇತ ವೈಜ್ಞಾನಿಕ ಅವಲೋಕನ)

ಜಾನಪದ ಎಂಬ ಪಾರಿಭಾಷಿಕ ಪದವನ್ನು ಕುರಿತು ಈಗಾಗಲೇ ಸಾಕಷ್ಟು ಚರ್ಚೆ ನಡೆದಿದೆ (ಮಾಡ್ತ, ೧೯೮೨ ಅ ಟಿ.೨). ಅದರ ಪುನರಕ್ತಿ ಪ್ರಸ್ತುತದಲ್ಲಿ ಅನಾವಶ್ಯಕ. ಕೃಚಿತ್ತಾಗಿ, ಜಾನಪದವೆಂದರೆ- ಜನಪದದ ಸಮಷ್ಟಿ ಹಾಗೂ ಖಸಗಿ ಜೀವನಾಭಿವ್ಯಕ್ತಿ. ಜನಪದರ ಜೀವನ (Flok Life) ಆಯಾಯ ಜನಪದಕ್ಕೆ ವಶಿಷ್ಟವಾಗಿ ರುವುದರಿಂದ ಜೇವನಾಭಿವ್ಯಕ್ತಿ ಖಾಸಗಿ (Estoric) ಗಿರುತ್ತದ; ಅದು ಸಾಮೂಹಿಕ ಕ್ರಿಯೆ ಆಗಿರುವುದರಿಂದ ಅದರಲ್ಲಿ ವೃಷ್ಟಿ ಪ್ರಜ್ಞೆಗಿಂತ ಸಮಷ್ಟಿಪ್ರಜ್ಞೆ (Common consciousness) ಗೆ ಹೆಚ್ಚು ಪ್ರಾಧಾನ್ಯತೆ ಇರುತ್ತದೆ ಎಂಬುದೇ ಮೇಲಿನ ವಾಖ್ಯೆಯ ತಾತ್ಪರ್ಯ.

ಜಾನಪದ ವೈಜ್ಞಾನಿಕ ಅಧ್ಯಯನದಲ್ಲಿ ವರ್ಗೀಕರಣ ಅತ್ಯಂತ ಪ್ರಮುಖವಾದ ಅಂಶ. ಹೀಗೆ ಮಾಡುವಲ್ಲಿ ಅಭೌತಿಕ ಜಾನಪದ (Non- material Floklore) ಮತ್ತು ಭೌತಿಕ ಜಾನಪದ (Material floklore) ಎಂಬ ಎರಡು ಪ್ರಮುಖ ವರ್ಗಗಳು ದೊರಕುತ್ತವೆ. ಜನಪದರ ಮನೋವೃತ್ತಿಗಳು (Minifacts) ಕಲಾತ್ಮಕವಾಗಿ ಅಭಿವ್ಯಕ್ತಿ ಪಡೆದಾಗ ಅದನ್ನು ನಾವು ಅಭೌತಿಕ ಜಾನಪದವೆಂದು ಕರೆಯುತ್ತೇವೆ; ಅದರ ಬದಲಾಗಿ ಅವು ದಿನ ನಿತ್ಯ ಜೀವನದ ಉಪಯುಕ್ತ ವಸ್ತುಗಳಾಗಿ (Artefacts) ಅಭಿವ್ಯಕ್ತಿ ಪಡೆದಾಗ ಅದನ್ನು ನಾವು ಭೌತಿಕ ಜಾನಪದವೆಂದು ಕರೆಯುತ್ತೇವೆ. ಭೌತಿಕ ಜಾನಪದದಲ್ಲಿ ಆಹಾರ ಪಾನೀಯ, ಉಡಿಗೆ ತೊಡಿಗೆ; ವೈದ್ಯ ಇತ್ಯಾದಿಗಳಂತೆ ವಸತಿಯೂ ಒಂದು ಪ್ರಮುಖ ಘಟಕ (Constituent).

ಪ್ರಸ್ತುತ ಜಾನಪದ ಸಮ್ಮಳನದ ವಿಷಯವನ್ನು ವಸತಿ ಜಾನಪದವೆಂದು ಹೆಸರಿಸಿ ಅದನ್ನು ನಾಲ್ಕು ಗೋಷ್ಠಿಗಳಲ್ಲಿ ಈ ಕೆಳಗಿನಮಗೆ ವಿನ್ಯಾಸಗೊಳಿಸಲಾಗಿದೆ. 

ಮೇಲಿನ ವಿನ್ಯಾಸ ಕ್ರಮ (Taxonomy) ಜಾನಪದದ ವಿಕಾಸ (Evolution) ಕ್ರಮವನ್ನು ಸಂಕೇತಿಸುತ್ತದೆ. ಪ್ರಾಣಿ ವಸತಿ ಅವರ ಹಿಂದಿನ ಪ್ರಾಣಿಸ್ಥಿತಿಯನ್ನು ಸೂಚಿಸಿದರೆ, ಮಾನವ ವಸತಿ ಅವರ ಇಂದಿನ ಮಾನವೀಕರಣ (Humanization) ವನ್ನೂ    ದೈವವಸತಿ ಅವರ ಮುಂದಿನ ಚೈವೀಕರಣ(Divination) ವನ್ನೂ ಸೂಚಿಸುತ್ತದೆ. ಈ ವಿನ್ಯಾಸ ಕ್ರಮವನ್ನು ಮನೋವೈಜ್ಞಾನಿಕವಾಗಿ ದೈವೀಕರಣ ಪರಿಶೀಲಿಸಿದಾಗ ಪ್ರಾಣಿವಸತಿ ಜನಪದರ ಸುಪ್ತಪ್ರಜ್ಞೆ (Unconscious- ness)ಗೆ ಸಂಕೇತವಾದರೆ ಮಾನವ ವಸತಿ ಅವರ ಅಹಂಪ್ರಜ್ಞೆ (Ego-Consciousness)ಗೆ ಅಂತೆಯೇ ದೈವವಸತಿ ಅವರ ಅತೀಂದ್ರಿಯ ಪ್ರಜ್ಞೆ (Super consciousness / Trans- Consciousness)ಗೆ ಸಂಕೇತವಾಗಿರುತ್ತದೆ.

ಸುಪ್ತಪ್ರಜ್ಞೆಯ ಅವ್ಯವಸ್ಥತಾ ಸ್ಥಿತಿ (Chaos) ಪ್ರಾಣಿವಸತಿಯಲ್ಲಿ, ಅಭಿವ್ಯಕ್ತಗೊಂಡು ದೈವವಸತಿಯಲ್ಲಿ ಅಯ್ತಂತ ಮಟ್ಟದ ಸುವ್ಯವಸ್ಥೆ (Cosmos)ಯನ್ನು ಪಡೆದುಕೊಳ್ಳುತ್ತದೆ. ಪ್ರಾಣಿವಸತಿಯಲ್ಲಿ ಕೇವಲ ಪ್ರಾಣಿ ಇರುತ್ತದೆ; (Exists); ಮಾನವ ವಸತಿಯಲ್ಲಿ ಮಾನವ ಪ್ರಜ್ಞಾಪೂರ್ವಕವಾಗಿ ಬಾಳುತ್ತಾನೆ. (Lives); ದೈವವಸತಿಯಲ್ಲಿ ಮಾನವನ ಅಹಂಪ್ರಜ್ಞೆ ಅಳಿದುಹೋಗಿ ಏಕತಾಪ್ರಜ್ಞೆಯಲ್ಲಿ ಸಮರಸಗೊಳ್ಳುತ್ತದೆ (Intigrates). ವಸತಿ ಜಾನಪದ ಜನಪದ ಪ್ರಜ್ಞೆ ಈ ವಿಕಾಸದ ಒಂದು ಸಾಂಕೇತಿಕ (Semotic) ಹಾಗೂ ಅವಾಚಿಕ (Non- Verbal) ಅಭಿವ್ಯಕ್ತಿ ಸ್ವಭಾವತಹ ಅಹಂಪ್ರಜ್ಞೆ ಎಲ್ಲದಕ್ಕೂ ತಾನೇ ಯಜಮಾನ; ತಾನು ಹೇಳಿದಂತೆ ಎಲ್ಲವೂ ನಡೆಯಬೇಕು ಎಂಬುದೇ ಇಲ್ಲಿಯ ಸ್ಥಾಯಾಭಾವ. ಈ ಅಹಂಭಾವಕ್ಕೆ ವಾಸದ ಮನೆ ಒಂದು ಮೂಲ ಸಂಕೇತ. ಈ ಅಹಂಮಿಕೆ ಅಳೆದಾಗ ಮಾತ್ರ ಮಾನವ, ದೇವ- ಮಾನವನಾಗುತ್ತಾನೆ; “ಮನೆ”; “ದೇಗುಲ” ವಾಗುತ್ತದೆ. ಹೀಗೆ ಮಾನವನ ವಿಕಾಸದಲ್ಲಿ “ಹಟ್ಟಿ”, “ಮನೆ” ಗಳನ್ನು ಬಿಟ್ಟು ದೇಗುಲ ಪ್ರವೇಶಿಸಿ ಅಲ್ಲಿರಲು ಕರೆ ನೀಡುತ್ತದೆ.

ಜನಪದರ ಮನೋಸ್ಥಿತಿಯನ್ನು ವೈಜ್ಞಾನಿಕವಾಗಿ ಗಮನಿಸಿದಾಗ ಎಷ್ಟೋ ಸಲ ಅವರಲ್ಲಿ ಗುಡಿ- ದೇವಸ್ಥಾನಗಳ ಬಗೆಗೆ ಕುರುಡು ನಂಬಿಕೆಗಳು ಹಾಗೂ ಪ್ರಾಣಿ ಬಲಿ ಮೊದಲಾದ ಮಾಂತ್ರಿಕ ನಂಬಿಕೆಗಳು ಇರುವುದನ್ನು ತಿಳಿದುಕೊಳ್ಳುತ್ತೇವೆ. ಕಲ್ಲು ಮಣ್ಣಿನ ಮಾನವ ನಿರ್ಮಿತ (is 16.12) ಗುಡಿಗಿಂತ ದೇವನಿರ್ಮಿತ ಮಾನವ ಸಮಾಜವೇ (1co 12.12-27) ನಿಜ ದೇವ- ಸ್ಥಾನ (2Co6.16). ಇದಕ್ಕೆ ಮೂಲವಾಗಿ ದೇಹವೇ ದೇಗುಲ ಎಂಬ ಅಭಿಪ್ರಾಯ ಬೈಬಲ್, ವಚನ, ಕೀರ್ತನೆ ಮೊದಲಾದ ಜನಪದ ಸಾಹಿತ್ಯಗಳಲ್ಲಿ ಕೂಡಾ ಕಂಡು ಬರುವುದನ್ನು ನಾವು ಗಮನಿಸಬೇಕು (1 Co. 3.16, 16.19 20).

ಈ ಹಂತಗಳಲ್ಲಿ ಒಂದು ಎಚ್ಚರಿಕೆಯ ಮಾತು; ಅನೇಕ ಸಲ, ಕೆಲವೊಂದು ಭಕ್ತರ ಪ್ರಭಾವದಿಂದಾಗಿ, ಮಠ ಮಂದಿರಗಳು ವ್ಯಾಪಾರದ, ಶೋಷಣೆಯ ಹಾಗೂ ಜಾತಿಮತ ಪ್ರಜ್ಞೆಯ ಕೇಂದ್ರಗಳಾಗುವ ಸಾಧ್ಯತೆ ಇದೆ. ಒಮ್ಮೆ ಯೇಸುಕ್ರಿಸ್ತ ಜೆರೂಸೆಲೇಮಿನ ದೇವಸ್ಥಾನವನ್ನು ನುಗ್ಗಿ ಅಲ್ಲಿಯ ವ್ಯಾಪಾರೀ ಮನೋವೃತ್ತಿ ಭಕ್ತರನ್ನು ಚಾಟಿಯಿಂದ ಹೊಡೆದೋಡಿಸಿ ದೇವಸ್ತಾನದ ಶುದ್ಧೀಕರಣ ಮಾಡಿದ್ದರು (Mt 21.12-17) ಯೇಸುವಿನ ಈ ಪ್ರತಿಭಟನೆ (Protest) ಮುಂದೆ ಆತನ ಅಮಾನುಷ ಹಾಗೂ ದಾರುಣ ಕೊಲೆಗೂ ಕಾರಣವಾಯಿತು!

ಅದೇನೆ ಇದ್ದರೂ, ಜಾನಪದ – ವಿಜ್ಞಾನಿಗಳು ಮಠ ಮಂದಿರ ಕೇಂದ್ರಿಕೃತ ಸಾಮಾಜಿಕ ಕೆಡುಕುಗಳನ್ನು ಜನಪದ ಪ್ರಜ್ಞೆ ಹಾಗೂ ನಡವಳಿಕೆಯಿಂದ ಕಿತ್ತು ಹಾಕಲು ಪ್ರಯತ್ನಿಸಬೇಕು. ಮಠ ಮಂದಿರಗಳು ಎಲ್ಲ ಜನಾಂಗಗಳನ್ನೂ, ಜನ ಸಮುದಾಯಗಳನ್ನೂ, “ಎಮ್ಮವರೆ” ಎಂದು ಬಗೆದು ಒಂದಾಗಿ ಮಾಡುವ ಹಾಗೂ ಶೋಷಿತರನ್ನು ವಿಮುಕ್ತಗೊಳಿಸುವ ಮತ್ತು ಸರ್ವ ಸಾಮಾಜಿಕ ಧರ್ಮಗಳನ್ನು ಮೀರಿ ಮಾನವ ಧರ್ಮವನ್ನು ಜಗತ್ತಿಗೆ ಸಾರುವ ಶಕ್ತಿ ಕೇಂದ್ರ-ಗಳಾದಾಗ ಮಾತ್ರ ಅವು ಸಮಾಜಕ್ಕೆ ತಾರಕ; ಇಲ್ಲದೆ ಹೋದಲ್ಲಿ ಅವು ಅತ್ಯಂತ ಮಾರಕವೆಂಬುದನ್ನು ನಮ್ಮ ದೇಶದ ಪ್ರಸ್ತುತ ಸಮಾಜೋಧಾರ್ಮಿಕ ವಿವರಿಸಿ, ವಿಸ್ತರಿಸಿ, ಹೇಳಬೇಕಾಗಿಲ್ಲ.

ಒಟ್ಟಿನಲ್ಲಿ, ವಸತಿ- ಜಾನಪದದ ಅವಿಬಾಜ್ಯ ಘಟಕಗಳಾದ ಪ್ರಾಣಿವಸತಿ, ಮಾನವವಸತಿ ಹಾಗೂ ದೈವ ವಸತಿಗಳು ಜನಪದರ ಹಾಗೂ ಅವರ ಪ್ರಜ್ಞೆಯ ವಿಕಾಸವನ್ನು ಸೂಚಿಸುವ ಪ್ರಬಲ ಸಂಕೇತಗಳು ಎಂಬುವದನ್ನು ನಾವು ಪ್ರಸ್ತುತದಲ್ಲಿ ಗಮನಿಸಬೇಕು. ಈ ದೆಸೆಯಲ್ಲಿ ಜಾನಪದ ವಿಜ್ಞಾನಿಗಳು ಹೆಚ್ಚು ಕಾರ್ಯಪ್ರವೃತ್ತರಾಗಿ ಈ ಸಂಕೇತಗಳನ್ನು ರಚನಾವಿನ್ಯಾಸ, ಅರ್ಥ ವಿವರಣೆ ಮತ್ತು ಫಲ ನಿರೂಪಣೆ ತಂತ್ರಗಳ ಮೂಲಕ ಅನಾರ್ವಣಗೊಳಿಸಬೇಕು. ನಡೆಯಬೇಕಾದ ಈ ಕಾರ್ಯದಲ್ಲಿ ಪ್ರಸ್ತುತ ಗೋಷ್ಠಿ ಹಾಗೂ ೧೯ನೇಯ ಅಖಿಲ ಕರ್ನಾಟಕ ಜಾನಪದ ಸಮ್ಮೇಳನ ಒಂದು ಮೊದಲ ಹೆಜ್ಜೆ ಮಾತ್ರ.

ಉಲ್ಲೇಖಿಸಿದ ಬೈಬಲ್ ಗ್ರಂಥಗಳು
(ಆಕಾರಾದಿ ಸೂಚಿ)

Is         Isaiah                         ಯೆಶಾಯನು

Mt       Matthes                       ಮುತ್ತಾಯನು

1Co     1 Corintahins               1 ಕೊರಿಂಥದವರಿಗೆ

2 Co    2 Corianthians             2 ಕೊರಿಂಥದವರಿಗೆ 

ಆಕರ ಸೂಚಿ

ಮಾಡ್ತ ವಿಲ್ಯಂ

೧೯೮೨ ಜಾನಪದ ಭಾಷಾವಿಜ್ಞಾನ, ಹಂಪ ನಾಗರಾಜಯ್ಯ (ಪ್ರ. ಸಂ), ಶಿರಸಿ ಸಾಹಿತ್ಯ ಸಮ್ಮೇಳನ, ಬೆಂಗಳೂರು; ಕನ್ನಡ ಸಾಹಿತ್ಯ ಪರಿಷತ್ತು.

೧೯೮೭ ಜಾನಪದ ಭಾಷಾವಿಜ್ಞಾನ. ಧಾರವಾಡ; ಕರ್ನಾಟಕ ವಿಶ್ವವಿದ್ಯಾಲಯ. ಜನಪದ ಭಾಷೆ, ಮೈಸೂರು; ರಾಜ ಸಂಪನ್ಮೂಲ ಕೇಂದ್ರ (ಅಪ್ರಕಟಿತ).

AMALDAS (Swami)
1986 / 1982 Yeshu Abba Consciousness,
Bangalore; Asian Trading corporation.

BROWN, R.E.et al (Eds.)
1987 The Jerome Biblical Commentary,
Bangalore: TPI, St. Peter’s Seminay.

JONES A. (Gen Ed.)
1966 The Jarusalem Bible, London: Darton:
Longman and Todd.

* * *