ವಾಸ್ತು ಶಿಲ್ಪ ಕಲೆ – ಸ್ಥಳವನ್ನು ಸದುಪಯೋಕ್ತವಾಗಿ ಹಾಗೂ ಸುಂದರವಾಗಿ ಸಂಯೋಜಿಸುವ ಸೃಜನಾತ್ಮಕ ಕಲೆಯಾಗಿದೆ. (Architecture is the art of organiing space not only frectronally but also beautifully) ಆಯಾ ಕಾಲದ, ಆಯಾ ಜನಾಂಗದ ಆಂತರಿಕ ಆಕಾಂಕ್ಷೆ ಅನುಭವ, ಅನುಭಾವ, ಮೌಲ್ಯಾದರ್ಶಗಳಿಗೆ ಹಿಡಿದ ಕನ್ನಡಿ- ವಾಸ್ತುಶಿಲ್ಪ ಇದರ ಶೈಲಿಯ ರೂಪಣದಲ್ಲಿ ಧಾರ್ಮಿಕ ತಳಹದಿ, ಸಮಕಾಲೀನ ಅಭಿರುಚಿ ಮನೋಧರ್ಮ, ಆರ್ಥಿಕ ಸ್ಥಿತಿಗತಿ, ಭೌಗೋಳಿಕ ಸನ್ನಿವೇಶ-ಪರಿಸರ, ರಾಜಕೀಯ ಪರಿವರ್ತನೆ, ಐತಿಹಾಸಿಕ – ಸಾಂಸ್ಕೃತಿಕ ಘಟನೆಗಳ ಪ್ರಭಾವ, ಸಮಕಾಲಿ ಕಲಾದೈವ ಆರಾಧನೆಗಳೊಟ್ಟಿಗೆ ಇರುವ ಸಂಪರ್ಕ ಪ್ರಭಾವ ಇತ್ಯಾದಿ ಹಲವು ಹತ್ತು ಸಂಗತಿಗಳು (factors) ಕೆಲಸ ಮಾಡುತ್ತಿರುತ್ತವೆ. ಜಾನಪದ ವಾಸ್ತು ಕಲಾವಿದ್ಯೆಯ ಉಗಮ ಮತ್ತು ವಿಕಾಸ ತುಂಬ ನಿಗೂಢ- ಕುತೂಹಲಕಾರಿ- ಹಾಗೂ ಸ್ವಾರಸ್ಯಕರ, ಇದನ್ನು ಗುರುತಿಸುವಲ್ಲಿ, ರೇಖಿಸುವಲ್ಲಿ ಇತಿಹಾಸ ಶಾಸನಗಳು ನಮ್ಮ ನೆರವಿಗೆ ಬರುವುದು ಕಡಿಮೆ, ವಿರಳ ವಿಮರ್ಶೆಯಂತೂ ಗಟ್ಟಿ ಎಂದು ಮೇಲೆ ನಿಲ್ಲುವಂತಿಲ್ಲ ಅಂತೇಯೇ ನಮ್ಮ ಸಂಶೋಧನೆಯಲ್ಲಿ ಹೆಚ್ಚು ಭಾಗ ಊಹನೆ, ಬಣ್ಣನೆ ಕೆಲವೂಮ್ಮೆ ವರ್ಣಮಯ. ಆದರೆ ಸಂಶೋಧನೆಯ ವಿವರಗಳು ಸ್ವಾರಸ್ಯಕ್ಕಾಗಲಿ, ಸಂಶೋಧನೆಯ ಅಗತ್ಯಕ್ಕಾಗಲಿ ಊನವಿಲ್ಲ.

ವಾಸ್ತು ಕಲೆಯನ್ನು ಒಳಗೊಂಡಂತೆ ಎಲ್ಲ ಕಲೆಗಳ ಅಡಿಪಾಯ ಇಲ್ಲವೆ ಬುನಾದಿ ಮೂಲತಃ ಧರ್ಮಾಚರಣೆ ಅಥವಾ ದೈವತ್ವ ಎನ್ನುವುದು ಭಾರತೀಯ ಸಂದರ್ಭದಲ್ಲಿ ಒಪ್ಪತಕ್ಕ ಮಾತು. ಪ್ರಾಗೈತಿಹಾಸಿಕ ಕಾಲದಿಂದ ಇಂದಿನವರೆಗೆ ಬೆಳೆದು ಬಂದ ವಾಸ್ತುಕಲೆ ಮೂರ್ತಿಕಲೆಯಲ್ಲೂ ಈ ಸಂಗತಿಯನ್ನು ಮರೆಯುವಂತಿಲ್ಲ. ದೇವಾಯುತನ, ವಿಗ್ರಹಾರಾಧನೆಯ ಕಲ್ಪನೆ ಮಾಡಿದಂದೇ ದೈವ ವಸತಿ, ಮೂರ್ತಿಶಿಲ್ಪದ ನಿರ್ಮಾಣ ಆರಂಭವಾಗಿ ಕ್ರಮೇಣ ಅದಕ್ಕೆ ಸಿಕ್ಕ ಪ್ರೋತ್ಸಾಹ, ಉತ್ತೇಜನದಿಂದ ಬಗೆಬಗೆಯಾಗಿ ಬೆಳೆಯುತ್ತಾ ಬಂತು. ಇದರಲ್ಲಿ ಪ್ರಧಾನವಾಗಿ ಎರಡು ವಾಹಿನಿಗಳನ್ನು ಗುರುತಿಸಬಹುದು. ಜಾನಪದ ಹಾಗೂ ಶಿಷ್ಟ. ದೈವವಸತಿಗೆ ಸಂಬಂಧಿಸಿದಂತೆ ವಾಸ್ತು ಶಾಸ್ತ್ರವಾಗಿ- ನೆಲೆಯ ಆಯ್ಕೆ, ಶುದ್ಧಿಕರಣ, ಸಾಮಗ್ರಿ ಸಂಚಯ, ಕಟ್ಟಡ ನಿರ್ಮಾಣ, ಕಡೆಯುವ ವಿಗ್ರಹ ಕಲೆಯಾಗಿ ಇನ್ನೊಂದಡೆ, ಚಿತ್ರಸೂತ್ರವಾಗಿ ಭಿತ್ತಿಗಳ ಮೇಲೆ ವರ್ಣಚಿತ್ರ ಬಿಡುವುದು ಮುಗಿದೊಂದೆಡೆ ಬೆಳೆಯಿತು. ಇಷ್ಟು ದೈವ ವಸತಿಯ ಒಂದು ಮುಖವಾದರೆ- ಇದನ್ನು ತಾಂತ್ರಿಕ ಕಲಾತ್ಮಕ ಮುಖವೆಂದು ಬೇಕಾದರೂ ಕರೆಯಬಹುದು. ದೈವದ ಪರಿಕಲ್ಪನೆ ಆರಾಧನೆ, ವಿಧಿ ವಿಧಾನಗಳು (Ritnals) ಇತ್ಯಾದಿ ಆಚರಣಾ ಮುಖ ವೈಧಮ್ಮನ್ನು ಇನ್ನೊಂದು ಪ್ರಪಂಚಕ್ಕೆ ಕೊಂಡೊಯ್ಯುವಷ್ಟು ವ್ಯಾಪಕವಾಗಿ, ಆಳವಾಗಿ ಬೆಳೆದು ಬಂದಿರುವುದು ಗಮನಾರ್ಹ. ಇವೆರಡರ ಮಧ್ಯೆ ಒಂದು ಸೌಂದರ್ಯ ಮಿಮಾಂಸೆ (asthetic senitibilety) ಎಂಬುದು ನಮಗೆ ಗೊತ್ತಿಲ್ಲದೆ, ಸೃಷ್ಟಾತ್ಮಕ ಪ್ರತಿಯೆಯಾಗಿ ಪಡಿಮಾಡಿರುತ್ತದೆ. ಹೀಗೆ ದೈವವಸತಿಯನ್ನು ಸಾಮಾನ್ಯವಾಗಿ ತಾಂತ್ರಿಕ, ಆರಾಧನಾ ಹಾಗೂ ಸೌಂದರ್ಯ ಮಿಮಾಂಸೆಯ ದೃಶ್ಯಗಳಿಂದ ನೋಡಬಹುದು ಸಮಾಜೋ ಧಾರ್ಮಿಕ ಆರ್ಥಿಕ ದೃಷ್ಟಿಕೋನಗಳಿಂದಲೂ ನೋಡುವುದು ಅಷ್ಟೆ ಅಗತ್ಯ. ಈ ಹಿನ್ನಲೆಯಲ್ಲಿ ನಾನು ಕರಾವಳಿ ಕರ್ನಾಟಕದ ದೈವವಸತಿಯನ್ನು Flok architecture  ಎಂಬ ತಾಂತ್ರಿಕ ಚೌಕಟ್ಟಿನಲ್ಲಿ ನೋಡಬಯಸಿ, ಶೈಲಿಯ ದೃಷ್ಟಿಯಿಂದ ಅದು ಎಷ್ಟೊಂದು ವೈಶಿಷ್ಟಪೂರ್ಣವಾಗಿ ಬೆಳೆದು ಬಂದಿವೆ ಎಂಬುದನ್ನಷ್ಟೇ ಇಲ್ಲಿ ವಿಶ್ಲೇಷಿಸುವೆ.

ಕರಾವಳಿ ಪರಿಸರ ಪ್ರಜ್ಞೆ ಅದರ ಎಲ್ಲ ಆಯಾಮಗಳಲ್ಲಿ ನಮಗಿದೆ ನಮ್ಮಗಿರುವುದು ಅಗತ್ಯ ಎಂಬ ಪ್ರಮೇಯದಿಂದಲೇ ಆರಂಭಿಸಬಹುದು. ಒಂದೆಡೆ ವಿಶಾಲವಾದ ಉಪ್ಪುಗಡಲು (ಅರಬ್ಬೀ ಸಮುದ್ರ), ಇನ್ನೊಂದಡೆ ಸಹ್ಯಾದ್ರಿ ಶ್ರೇಣಿಯ ಏರಿಳಿತಗಳಿಂದ ಕೂಡಿದ ಕಾನ್ಯನ ಕಣಿವೆ ಆಳವೆವನ್ನು ಛೇದಿಸುವ ನದಿನಾಲೆಗಳು ಹಳ್ಳ ಕೊಳ್ಳಗಳು, ಹೇರಳ ಅರಣ್ಯ ಸಂಪತ್ತು, ಮರಮುಟ್ಟುಗಳು, (ನಾಟಕಗಳು), ವಿಪರೀತ ಮಳೆಗಾಳಿ (ಮಳೆಗಾಲದಲ್ಲಿ ಭಯಾನಕ ಕಾಡುಪ್ರಾಣಿಗಳು, ಇಂಥ ಪರಿಸರದಲ್ಲಿ ಜೀವಿಸುತ್ತ ಬಂದ ಮಾನವ ಅನಾದಿಕಾಲದಿಂದಲೂ ದೈವದ ಪರಿಕಲ್ಪನೆಯನ್ನು ಪಡಿಮಾಡಿಸಿಕೊಂಡು ಅದನ್ನು ವಾಸ್ತು ಶಿಲ್ಪ ಚಿತ್ರ ಕಲಾತ್ಮಕವಾಗಿ ಅಭಿವ್ಯಕ್ತಿಗೊಳಿಸುತ್ತ ಬಂದ ತನ್ನದೇ ಆದ ರೀತಿಯಿಂದ ಸೃಷ್ಟಿಸಿದ. ಅಂತೆಯೇ ಇದು ಒಂದೊಂದು ಪ್ರದೇಶದಲ್ಲಿ ಒಂದು ತೆರನಾದ ಕಾಣುತ್ತದೆ. ದೈವವಸತಿಯಲ್ಲಿ ನಾವು “ಕರಾವಳಿ ಶೈಲಿ” ಯೊಂದನ್ನು ಗುರುತಿಸಬಹುದೆ? ಗುರುತಿಸಬಹುದಾದರೆ ಅದು ಬೆಳೆದು ಬಂದ ಬಗೆಯಂತು? ಅದರ ವೈಶಿಷ್ಟತೆಯೇನು? ಇತ್ಯಾದಿ ಪ್ರಶ್ನೆಗಳು ಒಂದರ ಹಿಂದೊಂದರಂತೆ ಮೂಡಿ ಬರುತ್ತದೆ. ಇವೆಲ್ಲಕ್ಕೂ ಉತ್ತರವನ್ನು ಸಮರ್ಥವಾಗಿ, ಹಾಗೂ ಸಮಗ್ರವಾಗಿ ಕೊಡಲು ಈ ಘಳಿಗೆಯಲ್ಲಿ ನನಗೆ ಸಂಪೂರ್ಣವಾಗಿ ಸಾಧ್ಯವಾಗದಾದರೂ ನಾನು ಈವರೆಗೆ ಕೈಕೊಂಡ ಕ್ಷೇತ್ರಕಾರ್ಯವನ್ನಾಧರಿಸಿ ಕೆಲವು ಅನುಭವಗಳನ್ನು ಹಂಚಿಕೊಳ್ಳಬಹುದು.

ಕರಾವಳಿ ಕರ್ನಾಟಕ ಮೂಲತಃ : ಕೊಂಕಣ ಒಂಬೈನೂರರಲ್ಲಿ ಅಂತರ್ಗತವಾಗಿದ್ದ ತುಳುನಾಡು, ಹೈನನಾಡನೊಳಗೊಂಡ ಕಿರಿಯಗಲದ ಉದ್ದಪಟ್ಟಿ. ಈಗ ಅದನ್ನು ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡವೆಂದು ಮೂರು ಜಿಲ್ಲಾಭಾಗಗಳಾಗಿವೆ. ಈ ಮೂರು ಪ್ರದೇಶಗಳಲ್ಲಿ ಜಾನಪದ ದೈವವಸತಿ ನೆಲೆಗಳು, ಹೇರಳವಾಗಿವೆ. ಎಷ್ಟರಮಟ್ಟಿಗೆ ಎಂದರೆ- ದೈವವಸತಿಯಿಲ್ಲದ ಜನವಸತಿಯಿಲ್ಲ ಜನವಸತಿಯಿಲ್ಲದ ಗಿರಿಕಾನನ, ನಿಗೂಢ ಸ್ಥಳಗಳಲ್ಲೂ ದೈವವಸತಿಗಳಿಲ್ಲದಿಲ್ಲ. ಸಾಮಾನ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ತುಳುನಾಡಿನಲ್ಲಿ ಕರಾವಳಿಯ ಭೂತಾರಾಧನೆ, ದೈವವಸತಿಗಳು ಕಂಡು ಬಂದರೆ, ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮಾಸ್ತಿ ಆರಾಧನೆ ದೈವವಸತಿ ಹೆಚ್ದಾಗಿ ಕಂಡು ಬರುತ್ತದೆ. ಈ ಮಧ್ಯೆ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಕರಾವಳಿಯ ಕರಾವಳಿತೀರದಲ್ಲಿ ಕ್ರೈಸ್ತವಸತಿ ದೈವವಸತಿಗಳೂ ಸಾಕಷ್ಟು ಸೇರಿವೆ. ಇಸ್ಲಾಮಿಕ ದೈವವಸತಿಗಳೂ ಇಲ್ಲದಿಲ್ಲ. ಇದೆಲ್ಲವನ್ನು ಸವಿಸ್ತಾರವಾಗಿ ಬಣ್ಣಿಸಲು ಇಲ್ಲಿ ಈಗ ಸಾಧ್ಯವೂ ಇಲ್ಲ. ಅಗತ್ಯವೂ ಇಲ್ಲ.

ತುಳುನಾಡಿನ ಭೂತಾರಾಧನೆ ಆಸಂಬಂಧಿ ದೈವವಸತಿಗೆ ವಿಶೇಷ ಮಹತ್ವವಿದೆ. ಸಾಹಿತ್ಯ ಸಂಗೀತ, ವಾಸ್ತು ಶಿಲ್ಪ ಚಿತ್ರ ನರ್ತನಗಳಂತಹ ಕಲೆಗಳನ್ನು ಮೈಗೂಡಿಸಿಕೊಂಡು, ಒಂದು ವಿಶಿಷ್ಟ ಧಾರ್ಮಿಕ ಆಚರಣೆಯ ಚೌಕಟ್ಟಿನಲ್ಲಿ ಮುಂದುವರೆದುಕೊಂಡು ಬರುತ್ತಿರುವುದು ಇದರ ವೈಶಿಷ್ಟ್ಯ ಇದರ ಅಧ್ಯಯನಕ್ಕೆ ಪೂರಕ ಸಾಹಿತ್ಯವಾದ ಕೆಲವೊಮ್ಮೆ ಸಮರ್ಥನೆ ಸಾಹಿತ್ಯವಾದ ಪಾಡ್ಡನಗಳಂತೂ ತುಳುನಾಡಿನ ಸಾಂಸ್ಕೃತಿಕ ಇತಿಹಾಸದ ಕತ್ತಲೆಯ ಮುಖಗಳನ್ನು ಅನಾವರಣಮಾಡುವುದುರ ಮೂಲಕ ವಾಸ್ತವಿಕತೆಯ ನೆಲೆಯಲ್ಲಿ ಈ ಪ್ರದೇಶದ ಇತಿಹಾಸವನ್ನು ಪುನಾರಚಿಸಲು ಅಮೂಲ್ಯ ಆಕರಗಳಾಗಿವೆ ಸಮಾಜದ ತೀರ ಕೆಳಸ್ತರದ ಮಂದಿ (ಪರಮ, ಪಂಬರ, ನಲಿಕೆಯವರು) ಭೂತಗಳನ್ನು ಆವಾಹನೆ ಮಾಡುವ ಮಾಧ್ಯಮಗಳಾಗಿ ವರ್ತಿಸುವುದು ಕೊರಗ, ತನಿಯ, ಕೋಡ್ದಬ್ಬು ಕಲ್ಕುಡ ಮುಂತಾದ ದಲಿತರು, ಶ್ರಮಜೀವಿಗಳು ಸಾಮಾಜಿಕ ಕಾರ್ಯಕ್ಕೆ ಬಲಿಯಾಗಿ ಭೂತಗಳಾಗುವುದು, ಸಮಾಜದ ಭಿನ್ನ ಭಿನ್ನಸ್ತರಗಳ ಜನರು ಈ ದೈವಾರಾಧನೆಯನ್ನು ವಿಭಿನ್ನ ರೀತಿಯಲ್ಲಿ ನಿರ್ವಹಣೆ ಮಾಡುವುದು, ಅವುಗಳ ವಸತಿ, ಮೂರ್ತಿಗಳನ್ನು ವಿಶಿಷ್ಟರೀತಿಯಲ್ಲಿ ಮಾಡಿಸುವುದು, ಆ ಕ್ಷೇತ್ರದಲ್ಲಿ ಪ್ರಾದೇಶಿಕ ಶೈಲಿಯೊಂದು ನಿಚ್ಚಳವಾಗಿ ಪಡಿಮಾಡಿರುವುದು ನಮ್ಮನ್ನು ಬೆರಗುಗೊಳಿಸುತ್ತವೆ. ಇಂಥ ಅನೇಕ ಆಶ್ಚರ್ಯಗಳು, ವಿಸಂಗತಿಗಳು ಭೂತರಾಧನೆಯ ಅಧ್ಯಯನಕ್ಕೆ ಕೇವಲ ವಾಸ್ತುಶಿಲ್ಪ ಪಂಡಿತರನ್ನಷ್ಟೆ ಅಲ್ಲ, ಮಾನವ ವಿಜ್ಞಾನಿ ಹಾಗೂ ಸಮಾಜ ವಿಜ್ಞಾನಿಗಳನ್ನು ತೊಡಗಿಸುತ್ತವೆ. ಪೂರ್ವಸೂರಿ ವೀರರ ಆರಾಧನೆ, ಪೂರ್ವಿಕರ ಪೂಜೆ, ಕೃಷಿ ಪ್ರಧಾನ ಸಮಾಜೋ ಆರ್ಥಿಕ ಸ್ವರೂಪ, ವೃತ್ತಿ, ಜಾತಿ ಆರಾಧನೆಗಳ ಸಂಬಂಧವೇ ಮುಂತಾದವು ವಿಶ್ಲೇಷಣೆಗೊಳಗಾಗಬೇಕಾಗುತ್ತದೆ. ಅನೇಕ ದೇವಸ್ಥಾನಗಳಿಗೂ ಭೂತಸ್ಥಾನಗಳಿಗೂ ಕೆಲವೊಂದು ನಡೆವಳಿಕೆಯ ವಿಚಾರದಲ್ಲೂ ಪರಸ್ಪರ ಸಂಬಂಧ ಏರ್ಪಟ್ಟಿರುತ್ತದೆ. ತುಳುನಾಡಿನ ಸೀಮೆಯ ಪ್ರಧಾನ ದೇವಸ್ಥಾನದ ಹಿರಿಮೆಯನ್ನು ಒಪ್ಪಿಕೊಂಡು ಆಸುಪಾಸಿನ ಭೂತಗಳು ನಡೆದುಕೊಳ್ಳುತ್ತವೆ. ಭೂತಗಳಲ್ಲೂ ಆಯಾಸೀಮೆಯ ರಾಜನ ದೈವ, ಗ್ರಾಮದ ದೈವ, ಜಾಗದ ದೈವ, ಕುಟುಂಬದ ದೈವ ಮನೆಯ ದೈವ ಹೀಗೆ ಪ್ರತ್ಯೇಕವಾದ ವ್ಯವಸ್ಥೆಯಿದ್ದು (Frierarchy) ಅದರಲ್ಲೊಂದು ಸಾಮಾಜಿಕ ಸಾಮರಸ್ಯದ ಎಚ್ಚರ ಆಶ್ಚರ್ಯವೂ ಅಡಗಿರುತ್ತದೆ. ಇದರೊಟ್ಟಿಗೆ ಕರಾವಳಿಯ ತುಳುನಾಡಿನಲ್ಲಿ ನಾಗರಕುಲದ ನೆಲಮನೆಯಿತ್ತೆಂಬ ಹೇಳಿಕೆಯನ್ನು ಪರಿಭಾವಿಸಿದರೆ ಈ ನಾಗಾರಾಧನೆ, ನಾಗಮಂಡಲ, ಅದರ ಜನಾಂಗಿಕ ಸಂಬಂಧ ಪ್ರಾದೇಶಿಕ ಕಲಾವಂತಿಕೆ ತುಂಬ ಕುತೂಹಲಕಾರಿಯಾಗಿದೆ. ಇದೇ ರೀತಿ ಕ್ರೈಸ್ತ ದೇವ ಮಂದಿರಗಳಲ್ಲೂ ಪ್ರಾದೇಶಿಕ ಎದ್ದುಕಾಣುತ್ತದೆ. ಹೀಗೆ ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ತುಳುನಾಡಿನ ಸೆರಗು ದೆವ್ವಗಳ ಪ್ರಪಂಚ ಈ ದೈವದ ಆವರಣ ತೊಟ್ಟಿರುವ ಈ ಜನ ಪ್ರತಿಯೊಂದರಲ್ಲೂ ದೈವಶಕ್ತಿಯ “ಕೈ” ಕಾಣುವುದು ಪ್ರತಿಯೊಂದಕ್ಕೂ ದೈವದ ಮೊರೆಹೋಗುವುದು ಸಹಜ. ಕರಾವಳಿಯ ಜನ ನೆಚ್ಚಿ ಬಂದಿರುವ ದೈವ ನೂರಾರು (೩೫೦ಕ್ಕೂ ಹೆಚ್ಚು) ದೈವ ಮುನಿದರೆ ನಾಡು ಉಳಿಯದು. ಈ ದೈವಸ್ಥಾನಗಳನ್ನು ವಸತಿಗಳನ್ನು ತುಂಬ ಭಯ ಭಕ್ತಿಯಿಂದ ರಚಿಸಿದ್ದುಂಟು ವ್ಯಕ್ತಿ ಅಥವಾ ಕುಟುಂಬ ನಿಷ್ಠೆಯ ಕುಣಿತ, ಹಾಡು ಬಣ್ಣ ಶಿಲ್ಪಗಳನ್ನೂಳಗೊಂಡ ಆರಾಧನೆಗಳು ಕಾಲಕ್ರಮೇಣ ಜಾತಿಬಾಂಧವರ ಒಂದು ವರ್ಗದ ಪರಿಧಿಯನ್ನು ದಾಟಿ ಒಂದು ಪ್ರದೇಶದ ಎಲ್ಲ ಜನಾಂಗಗಳ ಸಂವೇದನಾತ್ಮಕ ಸ್ವರೂಪವನ್ನು ಪಡೆದವು ಪ್ರಾದೇಶಿಕ ಶೈಲಿಯನ್ನು ದೈವವಸತಿ ನಿಮಾರ್ಣದಲ್ಲಿ ರೂಢಿಸಿಕೊಂಡರು. ಸ್ಥಳಿಯವಾಗಿ ಲಭ್ಯವಿರುವ ಜಂಬಿಟ್ಟಿಗೆ ಕಲ್ಲಿನ ಪುಟ್ಟ ಕಟ್ಟಡ, ಮರದ ಇಳಿಜಾರು ನಾಲ್ಕು ಮಾಡು, ಮರದ ಕಟಾಂಜನ ಇತ್ಯಾದಿ ವಾಸ್ತು ಲಕ್ಷಣಗಳನ್ನು ನೋಡಿ ನೇಪಾಳಿ ಶೈಲಿಯೆಂದು ಕೆಲವು ವಿದ್ವಾಂಸರು ಕರೆದುಬಿಟ್ಟರು! ಆದರೆ ವಾಸ್ತವಿಕವಾಗಿ ಇದು ಕರಾವಳಿ- ಮಲೆನಾಡಿನ ಮಳೆ ಪ್ರದೇಶಕ್ಕನುಗುಣವಾದ, (ಹಿಮಾಚ್ಛಾದಿತ ಪ್ರದೇಶದಂತೆ) ಇಳಿ ಮಾಡು ಶೈಲಿ. ಇದರ ಮೂಲ ಅಲ್ಲಿಯ ಜನವಸತಿ, ಹುಲ್ಲಿನ ಗೊಣಬೆ ಹಾಕುವ ರೀತಿ (ಉಡುಪಿಯಲ್ಲಿದೆಯಲ್ಲ) ಮುಂತಾದ ಪರಿಚಿತ ಮಾದರಿಗಳಿಂದ ಪ್ರೇರಿತವಾದವು. ಇದಕ್ಕೂ ಪೂರ್ವದಲ್ಲಿ ಪ್ರಾಗೈತಿ ಕಾಲದಲ್ಲಿ ಈ ಪ್ರದೇಶದಲ್ಲಿ ಬಿದಿರುಗಳಿಂದ ಕಟ್ಟಿರಬಹುದಾದ ಮನೆ ರೀತಿ, ಅದಕ್ಕೂ ಪೂರ್ವದಲ್ಲಿ ಬೃಹತ್ ಶಿಲ್ಪಾ ಗೋರಿಗಳನ್ನು ಕಟ್ಟುವ ರೀತಿ, ಅನಂತರ ಸ್ತೂಪಮಾದರಿಗಳೂ ಸಾಕಷ್ಟು ಪ್ರೇರಣೆನೀಡಿರಲು ಸಾಕು. ಇವನ್ನೆಲ್ಲ ಸ್ಥಳೀಯವಾಗಿ ಲಭ್ಯವಿರುವು ಜಂಬಿಟ್ಟಿಗೆಕಲ್ಲು (leferile) ಗಳನ್ನು ಬಳಸಿ ಕಟ್ಟಿದ್ದಾರೆ ಇದು ಮೂಲತಃ ರಂಧ್ರವುಳ್ಳ ಮಿದುಕಲ್ಲು (Porom) ಇದರಲ್ಲಿ ಸೂಕ್ಷ್ಮ ಕೆತ್ತನೆ ಅಸಾಧ್ಯ ದಪ್ಪ ದಪ್ಪ ಕಲ್ಕಂಬ ಗೋಡೆ ನಾಲ್ಕೂ ಕಡೆ ಇಳಿಜಾರದ ಮಾಡುಗಳನ್ನು ಪಟ್ಟದೈವವಸತಿಯಾದರೆ ನಿರ್ಮಿಸಬಹುದು.

೧೯ನೇಯ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ವರದಿ ಫಲಶೃತಿ.

ಕರ್ನಾಟಕ ಜಾನಪದ ಅಪಾರ ವ್ಯಾಪ್ತಿಯುಳ್ಳ ಒಂದು ಕ್ಷೇತ್ರ. ಕಳೆದ ವರ್ಷಗಳಿಂದ ಅಖಿಲ ಕರ್ನಾಟಕ ಜಾನಪದ ಸಮ್ಮೇಳನಗಳು ನಡೆದುಕೊಂಡು ಬರುತ್ತಿವೆ. ಜನಪದ ಸಾಹಿತ್ಯ ಜಾನಪದ ವೃತ್ತಿಗಾರರು, ಆಯಾಗಾರರು, ಗ್ರಾಮದೇವತೆಗಳು, ಹಬ್ಬಗಳು, ಏಳುಕೊಳ್ಳದ ಎಲ್ಲಮ್ಮ, ಆಕಾಶಜಾನಪದ, ಮೈಲಾರಲಿಂಗ, ಗೊಂಬೆಯಾಟ, ಜನಾಂಗಿಕ ಅಧ್ಯಯನ, ಸಸ್ಯ-ಪ್ರಾಣಿ- ಖನಿಜ ಜಾನಪದ ಮುಂತಾದ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಸಮ್ಮೇಳನಗಳು ನಡೆದಿದ್ದು ಇದೀಗ ವಸತಿ ಜಾನಪದ”ವನ್ನು ಕುರಿತು ಮೇ ೨೬- ೨೭ ರಂದು ಹತ್ತೊಂಬತ್ತನೆಯ ಅಖಿಲ ಕರ್ನಾಟಕ ಜಾನಪದ ಸಮ್ಮೇಳನವು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನಪೀಠ ಹಾಗೂ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಆಕಾಡೆಮಿಗಳ ಸಂಯುಕ್ತಾಶ್ರಯದಲ್ಲಿ ಜಾನಪದ ಕಲಾಭವನದಲ್ಲೆ ಜರುಗಿತು. ಸಮ್ಮೇಳನದ ಸರ್ವಾಧ್ಯಕ್ಷರನ್ನು ಹಾಗೂ ಅತಿಥಿಗಳನ್ನು ಜಗ್ಗಳಿಗೆ ಮೇಳ, ಕರಡಿ ಮಜಲು ಕಹಳೆ ಮುಂತಾದ ಮೇಳಗಳೊಂದಿಗೆ ಸ್ವಾಗತಿಸಲಾಯಿತು. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳೂ ಖ್ಯಾತ ಜಾನಪದ ತಜ್ಞರೂ ಆದ ಡಾ. ಚಂದ್ರಶೇಖರ ಕಂಬಾರರು ದೀಪ ಬೆಳಗಿಸುವುದರೊಂದಿಗೆ ಸಮ್ಮೇಳನವನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು. ತಮ್ಮ ಭಾಷಣದಲ್ಲೆ ಜಾನಪದವು ಆಯಾ ಪ್ರದೇಶಗಳ ಬದುಕು ಹಾಗೂ ಸಂಸ್ಕೃತಿಯ ಪ್ರತಿಬಿಂಬವಾಗದೆ. ವಿಕೇಂದ್ರಿಕೃತ ಸಮಾಜದಲ್ಲಿ ಜನಿಸಿದ ಈ ಜಾನಪದವನ್ನು ಕೇಂದ್ರಿಕೃತ ವ್ಯವಸ್ಥೆಗೆ ಸೇರಿಸಿಬಿಡುವ ಸನ್ನಾಹನಡೆದಿದೆ. ಅಮೇರಿಕೆಯಲ್ಲಿ ಜಾನಪದವು ನಮ್ಮಲ್ಲಿರುವಷ್ಟು ಶ್ರೀಮಂತರಾಗಿರದಿದ್ದರೂ ಜಾನಪದ ವಿದ್ವಾಂಸರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಭಾರತೀಯರಾದರೋ ಪಾಶ್ಚಿಮಾತ್ಯ ಟ್ರಸ್ಟ ಬಿದ್ದರೇನೆ ತಮ್ಮ ಜಾನಪದ ಸಂಶೋಧನೆ ಯಶಸ್ವಿಯಾಗುತ್ತದೆಯೆಂದು ಪರಿಭಾವಿಸುತ್ತಾರೆಂದರು. ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ ಹಿರಿಯ ಜಾನಪದ ತಜ್ಞರಾದ ಡಾ. ಎಂ. ಎಸ್. ಲಠ್ಠೆಯವರು ಜಾನಪದ ಅಧ್ಯಯನ ಹಾಗೂ ಸಂಶೋಧನೆಗೆ ಪ್ರೋತ್ಸಾಹ ದೊರೆತಿದ್ದರೂ ಕರ್ನಾಟಕ ಸರಕಾರವು ಜಾನಪದ ಪದವೀಧರರನ್ನು ಕಡೆಗಣಿಸುತ್ತಿರುವುದು ದುರಾದೃಷ್ಟಕರವೆಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರೂ ಪ್ರಖ್ಯಾತ ಜಾನಪದ ವಿದ್ವಾಂಸರೂ ಆದ ಪ್ರೊ. ಜೀ. ಶಂ. ಪರಮಶಿವಯ್ಯನವರು ಮಾತಾಡುತ್ತ *ಜಾನಪದ ಕಲೆ ಸಂಶೋಧನೆಯಲ್ಲಿ ಪಾಶ್ಚಿಮಾತ್ಯರು ಹೆಚ್ಚಾಗಿದೆ ಎಂಬುದು..೨ ಸತ್ಯಕ್ಕೆ ದೂರವಾಗಿದೆ ವೈದ್ಯಕೀಯ ತಾಂತ್ರಿಕ ಸಮಾಜಶಾಸ್ತ್ರ ಹಾಗೂ ಇನ್ನಿತರ ವಿಷಯಗಳಲ್ಲಿಯೂ ದೃಷ್ಟಿಯಿಂದ ನೋಡುವುದು ಉಚಿತವಲ್ಲ ಎಂದು ಹೇಳಿ… ಕಳೆದ ಹದಿನೆಂಟು ವರ್ಷಗಳಿಂದ ಕನ್ನಡ ಅಧ್ಯಯನಪೀಠವು ಸತತವಾಗಿ ನಡೆಸುತ್ತ ಬಂದಿರುವ ಸಮ್ಮೇಳನಗಳದ್ದೇ ಒಂದು ದಾಖಲೆಯಾಗಿದೆ. ಇದು ನಿಜಕ್ಕೂ ಸ್ವಾಗತಾರ್ಹ ಕೆಲಸ. ಈ ಸಲವೂ ನಿಲ್ಲಬಾರದೆಂದು ಅಕಾಡೆಮಿ ನೆರವು ನೀಡಿತಂದರು. ಕನ್ನಡ ಅಧ್ಯಯನ ಪೀಠದ ಅಧ್ಯಕ್ಷರೂ ಸಮ್ಮೇಳನದ ಕಾರ್ಯಧ್ಯಕ್ಷರೂ ಆದ ಪ್ರೊ. ಸೋಮಶೇಖರ ಇಮ್ರಾಪುರ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ಶಾಲಿನಿ ರಘುನಾಥರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಮತ್ತೊಬ್ಬ ಕಾರ್ಯದರ್ಶಿ ಶ್ರೀ ಎಸ್. ಎಸ್. ಭದ್ರಾಪೂರ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಗಿಯಿತು. ಈ ಮಧ್ಯೆ ಡಾ. ಚಂದ್ರಶೇಖರ ಕಂಬಾರ. ಲಿಂಗನಗೌಡ ಮುಖಂಡರಾಗಿ, ಸುಳ್ಳದ ದೇವಕ್ಕ ಮತ್ತು ಸಂಗಡಿಗರು ಜಾನಪದ ಗೀತೆಗಳನ್ನು ಹಾಡಿ ಕಾರ್ಯಕ್ರಮಕ್ಕೆ ಉತ್ಸವದ ಮೆರಗನ್ನು ತಂದರು.

ಅಂದು ಮಧ್ಯಾಹ್ನ ೨ ಗಂಟೆಗೆ ಮೊದಲನೆಯ ಗೋಷ್ಠಿಯಾದ “ಪ್ರಾಣಿವಸತಿ” ಡಾ. ಕೆ. ಆರ್. ಗುರುಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಆರಂಭವಾಯಿತು. ಉತ್ತರ ಕರ್ನಾಟಕದ ಪ್ರಾಣಿ ವಸತಿಯನ್ನು ಕುರಿತು ಮಂಗಳೂರು ವಿಶ್ವವಿದ್ಯಾಲಯದ ಡಾ. ಅರವಿಂದ ಮೂಲಗತ್ತಿಯವರು ವಿಶ್ಲೇಷಣಾತ್ಮಕ ಪ್ರಬಂಧ ಮೂಡಿಸುತ್ತ ದನಕರು ಕೋಳಿ ಕುರಿಗಳಿಗೆ ಬೇಕಾದ ರೀತಿಯಲ್ಲಿ ಪ್ರಾಣಿವಸತಿ ಸೌಲಭ್ಯ ಒದಗಿಸದೇ ತನ್ನ ಇಷ್ಟಬಂದ ಹಾಗೆ ವ್ಯವಸ್ಥೆ ಮಾಡಿದ್ದು ವಿಪರ್ಯಾಸವೆಂದರು. ದಕ್ಷಿಣ ಕರ್ನಾಟಕದ ಪ್ರಾಣಿವಸತಿ ಕುರಿತು ಮೈಸೂರು ವಿಶ್ವವಿದ್ಯಾಲಯದ ಡಾ. ಅಂಬಳಿಕೆ ಹಿರಿಯಣ್ಣನವರು ವಿವರಣಾತ್ಮಕವಾಗಿ ಮಾತನಾಡುತ್ತ, ಭೌಗೋಳಿಕ, ಆರ್ಥಿಕ ಸ್ಥಿತಿಗಳು ಎಷ್ಟರಮಟ್ಟಿನ ಪ್ರಭಾವಬೀರುತ್ತವೆಯೆಂಬುದನ್ನು ಎತ್ತಿ ತೋರಿಸಿದರು. ಕರಾವಳಿ ಪ್ರಾಣಿವಸತಿಯ ಸ್ಥೂಲ ಚಿತ್ರಣ ನೀಡಿದವರು ಹೊನ್ನಾವರದ ಶ್ರೀಮತಿ. ಶಾಂತಿ ನಾಯಕ. ಇವುಗಳಲ್ಲೆ ನಿಸರ್ಗ ನಿರ್ಮಿತ, ಸ್ವಯಂ ನಿರ್ಮಿತ ಹಾಗೂ ಮನಷ್ಯ ನಿರ್ಮಿತ ಎಂದು ಮೂರು ಬಗೆಯಿದ್ದು, ಇವುಗಳ ಬಗೆಗೆ ವಿವರಣೆ ನೀಡಿದರು. ಅಧ್ಯಕ್ಷೀಯ ಭಾಷಣ ನೀಡಿದ ಡಾ. ಕೆ. ಜಿ. ಗುರುಮೂರ್ತಿಯವರು ಕ್ಷೇತ್ರ ಕಾರ್ಯ ಈ ಬಗೆಯ ಕೆಲಸಕ್ಕೆ ಎಷ್ಟು ಮುಖ್ಯ ಎಂಬುದನ್ನು ವಿವರಿಸಿದರು. ಗೋಷ್ಠಿಯ ನಿರ್ವಹಣೆಯನ್ನು ಡಾ. ಕೃ. ಅನ್ಬನ ನಡಸಿಕೊಟ್ಟರು. ಅದೇ ದಿನ ೪-೩೦ಕ್ಕೆ ಎರಡನೆಯ ಗೋಷ್ಠಿಯು ಮೈಸೂರು ವಿಶ್ವವಿದ್ಯಾನಿಲಯದ ಡಾ. ಡಿ. ಕೆ. ರಾಜೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡಿಯಿತು. ಗೋಷ್ಠಿಯ ವಿಷಯ “ಕೌಟುಂಬಿಕ ಮಾನವ ವಸತಿ”. ಇದರಲ್ಲಿ ಉತ್ತರ ಕರ್ನಾಟಕದ ವಾಸದ ಮನೆಯನ್ನು ಕುರಿತು ಬೆಳಗಾಂವಿಯ ಸ್ನಾತಕ್ಕೊತ್ತರ ಕೇಂದ್ರದ ಡಾ. ಕೆ. ಆರ್. ದುರ್ಗಾದಾಸ” ಅವರು ವಿವರಣಾತ್ಮಕ ಪ್ರಬಂಧನವನ್ನು ಮಂಡಿಸಿದರು. ದಕ್ಷಿಣ ಕರ್ನಾಟಕದ ವಾಸದ ಮನೆ ಕುರಿತು ಮೈಸೂರಿನ ಮಹಾರಾಣಿ ಕಾಲೇಜಿನ ಡಾ. ಪದ್ಮಾಶೇಖರರವರು ಸೋದಾಹರಣವಾಗಿ ಪ್ರಬಂಧ ಮಂಡಿಸಿದರು. ಕರಾವಳಿಯ ವಾಸದ ಮನೆ ಮಂಗಳೂರಿನ ಡಾ. ವಾಮನ ನಂದಾವರರು ಕ್ಷೇತ್ರಕಾರ್ಯವನ್ನಾಧರಿಸಿ, ವಿಶ್ಲೇಷಣಾತ್ಮಕವಾದ ಸಂಪ್ರಬಂಧವನ್ನು ಓದಿದರು. ಅಧ್ಯಕ್ಷೀಯ ಭಾಷಣದ ಡಾ. ಡಿ. ಕೆ. ರಾಜೇಂದ್ರರು (ಮೈಸೂರು ವಿ.ವಿ.) ಕೌಟುಂಬಿಕ ಮಾನವ ವಸತಿಯ ಅಧ್ಯಯನದ ಅಗತ್ಯ ಹಾಗೂ ಮಹತ್ವವನ್ನು ಉದಾಹರಣೆ ಸಹಿತ ವಿವರಿಸಿದರು. ಗೋಷ್ಠಿಯ ನಿರ್ವಹಣೆಯನ್ನು ಡಾ. ಎಸ್. ವಿ. ಅಯ್ಯನಗೌಡರು ನಡಸಿಕೊಟ್ಟರು.

ದಿನಾಂಕ: ೨೭-೦೫-೧೯೯೨ ರಂದು ಮುಂಜಾನೆ ೧೦ ರಿಂದ ೧೨ ಗಂಟೆಯವರೆಗೆ ನಡೆದ ಮೂರನೆಯ ಗೋಷ್ಠಿಯು ಸಾಮುದಾಯಿಕ ಮಾನವವಸತಿ ಯನ್ನು ಕುರಿತಿದ್ದು. ಇದರ ಅಧ್ಯಕ್ಷತೆಯನ್ನು ಕರ್ನಾಟಕ ವಿಶ್ವವಿದ್ಯಾಲಯದ ಡಾ. ಅ. ಸುಂದರ ಅವರು ನಡೆಸಿಕೊಟ್ಟರು. ಉತ್ತರ ಕರ್ನಾಟಕದ ಗ್ರಾಮದ ಸ್ವರೂಪ – ಗುಣಲಕ್ಷಣಗಳನ್ನು, ಗಡಿ ಗುರುತಿಸುವ ವಿಧಾನ ಮುಂತಾದ ವಿಷಯಗಳೊಂದಿಗೆ ಪ್ರಬಂಧ ಮಂಡಿಸಿದರು. ದಕ್ಷಿಣ ಕರ್ನಾಟಕದ ಗ್ರಾಮ ವಿನ್ಯಾಸವನ್ನು, ಕೃಷಿ ಪ್ರಧಾನ, ಸಂರಕ್ಷಣಾ ದೃಷ್ಟಿಯ ವ್ಯವಸ್ಥೆಯ ಹಿನ್ನೆಲೆಯಲ್ಲಿ ನೋಡಿದವರು, ಬೆಂಗಳೂರಿನ ಡಾ. ಟಿ. ಗೋವಿಂದರಾಜು, ಡಾ. ಶಾಲಿನಿ ರಘುನಾಥರು ತಮ್ಮ ಸಂಪ್ರಬಂಧದಲ್ಲಿ ಕರಾವಳಿಯ “ಗ್ರಾಮವಿನ್ಯಾಸದ ಸ್ವರೂಪ- ಗುಣಲಕ್ಷಣ ವೈಶಿಷ್ಟ್ಯವನ್ನು ವಿವಿಧ ದೃಷ್ಠಿಕೋನಗಳಿಂದ ನೋಡಿ ಕೇಂದ್ರಿಕೃತ- ವಿಕೇಂದ್ರಿಕೃತ ಸಮಾಜ ವ್ಯವಸ್ಥೆಗಳಿಗೆ ಇವು ಹೇಗೆ ಪೂರಕವಾಗಿದ್ದವೆಂಬುದನ್ನು ವಿಷದಪಡಿಸಿದರು. ಕೈಗಾ ಅಣುಸ್ಥಾವರ, ಸೀಬರ್ಡ್ ನೌಕಾ ನೆಲೆ ಮುಂತಾದ ಯೋಜನೆಗಳಿಂದ ಕರಾವಳಿಯ ಗ್ರಾಮಗಳು ಹಾಗೂ ಜನಪದ ಸಂಸ್ಕೃತಿ, ಕಲೆ ಸಶಿಸಿ ಹೋಗುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದರು.

ಗೋಷ್ಠಿಯ ಅಧ್ಯಕ್ಷರಾದ ಡಾ. ಸುಂದರರವರು ಮಲೆನಾಡು, ಕರಾವಳಿ, ಮೈದಾನ ಎಂಬ ವಿಂಗಡಣೆ ಹೆಚ್ಚು ಅರ್ಥಪೂರ್ಣವೆನ್ನುತ್ತ ಪ್ರಕ್ತಶಾಸ್ತ್ರದ ಬಳಕೆ ಈ ಅಧ್ಯಯನದಲ್ಲೇ ಸಹಾಯಕಾರಿಯೆಂದರು. ಗೋಷ್ಠಿಯನ್ನು ಶ್ರೀ ಆರ್. ಎಸ್. ಹಿರೇಮಠ ಅವರು ನಿರ್ವಹಿಸಿದರು.

 

ನಾಲ್ಕನೆಯ ಗೋಷ್ಠಿ ದೈವವಸತಿಗೆ ಸಂಬಂಧಿಸಿದ್ದು ಬಹುಜನರ ಗಮನವನ್ನು ವಿಶೇಷವಾಗಿ ಸೆಳೆಯಿತು. ಕನ್ನಡ ಅಧ್ಯಯನ ಪೀಠದ ಭಾಷಾಶಾಸ್ತ್ರದ ಪ್ರಾಧ್ಯಾಪಕರಾದ ಡಾ. ವಿಲ್ಯಂ ಮಾಡ್ತ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಉತ್ತರ ಕರ್ನಾಟಕದ ದೈವವಸತಿಯನ್ನು ಕುರಿತು ಕನ್ನಡ ಅಧ್ಯಯನ ಪೀಠದ ಡಾ. ಬಿ.ವಿ. ಶಿರೂರ ಅವರು ವಿವರಿಸಿದರು ದಕ್ಷಿಣ ಕರ್ನಾಟಕದ ದೈವವಸತಿಯನ್ನು ಸವಿಸ್ತಾರವಾಗಿ ಬಣ್ಣಿಸಿದವರು ಕುವೆಂಪು ವಿಶ್ವವಿದ್ಯಾಲಯದ ಶ್ರೀ ಬಸವರಾಜ ನೆಲ್ಲಿಸರ ಇಲ್ಲಿ ದೈವಗಳ ವರ್ಗೀಕರಣ ಸ್ವರೂಪ, ವಿಶೇಷಗಳನ್ನು ಕ್ಷೇತ್ರಕಾರ್ಯಾಧಾರಿತ ಮಾಹಿತಿಗಳೊಡನೆ ವಿವರಿಸಿದರು.

ಕರಾವಳಿಯ ದೈವವಸತಿಯನ್ನು ಕುರಿತು ವಿಮರ್ಶಾತ್ಮಕವಾಗಿ ಪ್ರಬಂಧವನ್ನು ಮಂಡಿಸುತ್ತ ಕರ್ನಾಟಕ ವಿಶ್ವವಿದ್ಯಾಲಯದ ಡಾ. ಎಚ್. ಆರ್. ರಘುನಾಥ ಭಟ್‌ರವರು “ಕರಾವಳಿ ಶೈಲಿ” ಎಂಬ ಪ್ರಾದೇಶಿಕ ಸೊಗಡು ಅಲ್ಲಿಯ ದೈವವಸತಿಯಲ್ಲಿ ಕಂಡುಬರುವ ಬಗೆ, ಅದರ ವೈಶಿಷ್ಟ್ಯವನ್ನು ಎತ್ತಿ ಹೇಳುವ ಬಗೆ ಮೂಲ ಜಾನಪದ ದೈವವಸತಿಗಳಲ್ಲಿ ಹಲವು ಜೀರ್ಣೋದ್ಧಾರದ ಹೆಸರಿನಲ್ಲಿ ಹೇಗೆ ಭಿನ್ನ ಸ್ವರೂಪವನ್ನು ಪಡೆಯುತ್ತದೆ. ಸರಕಾರದ  ಆರಾಧನಾ ಕಾರ್ಯಕ್ರಮದಲ್ಲಿ ಗುಡಿಗೋಪುರಗಳ ಜೀರ್ಣೋದ್ಧಾರ ಎಷ್ಟು ಅರ್ಥಪೂರ್ಣವಾಗಿದೆಯೆಂದು ಒತ್ತಿ ಹೇಳಿದರು. ಅಧ್ಯಕ್ಷೀಯ ಭಾಷಣ ಮಾಡಿದ ಪ್ರೊ. ವೀಲ್ಯಂ ಮಾಡ್ತ ಅವರು ಒಟ್ಟಾರೆ ವಸತಿ ಜಾನಪದದ ವಿಂಗಡಣೆ – ತಂತ್ರ – ಉಪಯೋಗ ಇತ್ಯಾದಿಗಳನ್ನು ವೈಜ್ಞಾನಿಕವಾಗಿ ನೋಡಿ ಶಾಸ್ತ್ರದ ಚೌಕಟ್ಟಿನಲ್ಲಿ ಅಧ್ಯಯನ ಮಾಡುವ ಅಗತ್ಯವನ್ನು ಸ್ಪಷ್ಟಪಡಿಸಿದರು. ಡಾ. ಕೃ. ಅನ್ಬನ್ ಕಾರ್ಯಕ್ರಮ ನಿರ್ವಹಿಸಿದರು.

ಅಂದು ಸಂಜೆ ೪-೩೦ ಕ್ಕೆ ಸಮಾರಂಭ ಜರುಗಿತು. ಕರ್ನಾಟಕ ವಿಶ್ವವಿದ್ಯಾಲಯದ ತೋಟಗಾರಿಕೆ ಇಲಾಖೆಯ ಮಹಿಳೆಯರಿಂದ ಜಾನಪದ ಗೀತೆಗಳಿಂದ ಆರಂಭವಾದ ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಕುವೆಂಪು ವಿಶ್ವವಿದ್ಯಾಲಯದಿಂದ ಆಗಮಿಸಿದ ಡಾ. ಜೆ. ಲಕ್ಕಪ್ಪಗೌಡರವರು. ವಸತಿ ಜಾನಪದದಲ್ಲಿ ಕ್ರಿಮಿ- ಕೀಟ ವಸತಿ, ಪಕ್ಷಿವಸತಿ ಇತ್ಯಾದಿ ಇನ್ನೂ ಹಲವು ವಿಷಯಗಳ ಅಡಕವಾಗುವಷ್ಟು ವ್ಯಾಪಕವಾಗಿದೆಯೆಂಬುದನ್ನು ಸವಿಸ್ತಾರವಾಗಿ ಬಣ್ಣಿಸಿದರು. ಕನ್ನಡ ಅಧ್ಯಯನ ಪೀಠದ ನಿವೃತ್ತ ಪ್ರವಚಕರಾಗಿದ್ದ ಡಾ. ದೇವೆಂದ್ರ ಕುಮಾರ ಹಕಾರಿಯವರು ತಮ್ಮ ಸಂತಸವನ್ನು ವ್ಯಕ್ತಪಡಿಸುತ್ತ ಈ ವಸತಿ ಜಾನಪದದಲ್ಲಿ ಸಾಂಸ್ಕೃತಿಕ ಮೌಲ್ಯ, ಸೌಂದರ್ಯಪ್ರಜ್ಞೆ ಅಡಕವಾಗಿರುವುದನ್ನು ಎತ್ತಿ ಹೇಳಿದರು. ಮೈಸೂರು ವಿಶ್ವವಿದ್ಯಾಲಯದ ಡಾ. ಹ. ಕ. ರಾಜೇಗೌಡರು ಗ್ರಾಮ ಜೀವನದ ಪ್ರಾಚೀನತೆ, ಜಾನಪದ, ಶಿಷ್ಟಗಳ ಭೇದ ಕಲ್ಪನೆ ಮುಂತಾದವನ್ನು ಮಾರ್ಮಿಕವಾಗಿ ಹೇಳಿದರು ಡಾ. ಸೋಮಶೇಖರಗೌಡ ಅವರು ಸಮ್ಮೇಳನ ವ್ಯವಸ್ಥೆಯನ್ನು ಕುರಿತು ಪ್ರಶಂಸಿಸಿದರು. ಡಾ. ಕೆ. ಜಿ. ಶಾಸ್ತ್ರಯವರು ಸತತವಾಗಿ ಎರಡು ದಿನಗಳವರೆಗೆ ಸಮ್ಮೇಳನದಲ್ಲಿ ಭಾಗವಹಿಸಿ ತಮ್ಮ ಅನ್ನಿಸಿಕೆಗಳನ್ನು ಹೇಳಿದರು. ಸಮಾರೋಪ ಸಮಾರಂಭದಲ್ಲಿ ಮೂರು ಗೊತ್ತುವಳಿಗಳನ್ನು ಮಂಡಿಸಲಾಯಿತು.

೧) ಜಾನಪದ ವಿಶ್ವವಿದ್ಯಾಲಯ ಸ್ಥಾಪನೆ.

೨) ಜಾನಪದ ವಿದ್ಯಾರ್ಥಿಗಳಿಗೆ ಸರಕಾರದಿಂದ ಆದ ಅನ್ಯಾಯದ ಪ್ರತಿಭಟನೆ.

೩) ಜಾನಪದ ಆಕಾಡೆಮಿ ಎಂದು ಪುನರನಾಮಕರಣ ಮಾಡುವುದು.

ಡಾ. ಜೀ. ಶಂ. ಪರಮಶಿವಯ್ಯನವರು ಡಾ. ವಾಮನ ನಂದಾವರ ಬರೆದ ಜಾನಪದ ಸುತ್ತ ಮುತ್ತ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಈ ಗೊತ್ತುವಳಿಗಳ ಮಹತ್ವವನ್ನು ವಿವರಿಸಿ ಸರಕಾರದ ಮಟ್ಟದಲ್ಲಿ ಇದನ್ನು ಕೈಗೆತ್ತಿಕ್ಕೊಳುವ ಭರವಸೆ ನೀಡಿದರು. ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಯ ವಿಷಯವಾಗಿ ರೂಪರೇಷೆ ಹಾಕಿಕೊಳ್ಳಲು ಒಂದು ಉಪಸಮಿತಿ ರಚಿಸಿಲಾಗಿದೆಯೆಂದರು. ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಎಂ. ಎಸ್‌. ಲಠ್ಠೆಯವರು ಮಾತನಾಡುತ್ತ ಎಲ್ಲ ಗೋಷ್ಠಿ ಯಶಸ್ವಿಯಾಗಿ ನಡೆದ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ವಸತಿ ಜಾನಪದದ ಹಿನ್ನೆಲೆಯಲ್ಲಿರುವ ಸಾಂಸ್ಕೃತಿಕ ಪರಿಕಲ್ಪನೆ ನಮಗಿಂದು ಬೇಕೆಂದು ಹೇಳಿದರಲ್ಲದೆ. ವಚನ ಸಾಹಿತ್ಯದಿಂದ ಅನೇಕ ಉದಾಹರಣೆಗಳನ್ನು ನೀಡಿದರು. ಅಧ್ಯಕ್ಷರಾದ ಡಾ. ಸೋಮಶೇಖರ ಇಮ್ರಾಪೂರ ಜಾನಪದ ಸಮ್ಮೇಳನದ ಗೊತ್ತುಗುರಿಗಳನ್ನು ವಿವರಿಸಿ ಸಾಂಸ್ಕೃತಿಕ ಮಟ್ಟದಲ್ಲಿ ಇಂಥ ಸಮ್ಮೇಳನಗಳು ಹೇಗೆ ನಿರಂತರವಾಗಿ ನಡೆಯಬೇಕಾಗಿದೆಯೆಂದು ಹೇಳಿದರು. ಈ ಮಧ್ಯೆ ನಿಂಗನಗೌಡ ಮುಂಡರಗಿಯವರು ತಮ್ಮ ಸುಶ್ರಾವ್ಯ ಜಾನಪದ ಗೀತೆ ಹಾಡಿ ರಂಜಿಸಿದರು. ಈ ಕಾರ್ಯದ್ರಮವು ಡಾ. ಶಾಲಿನಿ ರಘುನಾಥ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.

* * *