ಮನುಷ್ಯ ಪ್ರಾಣಿವರ್ಗದಲ್ಲಿ ಶ್ರೇಷ್ಟ ನೆನ್ನಿಸಿಕೊಂಡದ್ದು ಅವನ ಬುದ್ಧಿ ಬಲದಿಂದ ಆತನ ಆರ್ಥಿಕ ಚಟುವಟಿಕೆಗಳು ಸಂಸ್ಕೃತಿ ನಿರ್ಮಾಣದಲ್ಲಿ ಮಹತ್ತರವಾದ ಪಾತ್ರವಹಿಸುತ್ತವೆ. ಹುಟ್ಟಿನಿಂದ ಇಲ್ಲಿಯವರೆಗೆ ಮಾನವ ಜೀವಿ ಹಲವು ಬಗೆಯ ಆರ್ಥಿಕ ಚಟುವಟಿಕೆಯ ಹಂತಗಳನ್ನು ದಾಟಿ ಬಂದಿದ್ದಾನೆ. ಈ ಎಲ್ಲ ಹಂತಗಳಲ್ಲಿ ಅವನು ಉಳಿವಿಗಾಗಿ ಹೊರಾಡಿದ. ದೇವದೇವತೆಗಳು, ಆಚರಣೆಗಳು ಹುಟ್ಟಿದಲ್ಲಿ ಈ ಚಟುವಟಿಕೆಗಳು ಹಿನ್ನೆಲೆಯಲ್ಲಿವೇ. ಆಹಾರ ಸಂಗ್ರಹಣೆಯ ಹಂತದ ಅನೇಕ ಆಚರಣೆಗಳು ಅವನ ದೈವದ ಆರಾಧನೆಯಲ್ಲಿ ಕಾಣಬಹುದಾಗಿದೆ.

ಪ್ರಪಂಚದ ಒಟ್ಟು ದೇವತೆಗಳನ್ನು ಗಮನದಲ್ಲಿ ಇಟ್ಟುಕೊಂಡು ಚಾರ್ಲ್ ವಿನಿಸ್ ಆರು ಪ್ರಧಾನ ವಿಭಾಗಗಳಲ್ಲಿ ದೇವತೆಗಳನ್ನು ವಿಭಜನೆ ಮಾಡಿದ್ದಾರೆ. ೧) ಪ್ರಕೃತಿಯ ದೇವತೆಗಳು, ೨) ಸಮೃದ್ಧಿಯ ದೇವತೆಗಳು ೩) ಚಟುವಟಿಕೆಯ ದೇವತೆಗಳು ೪) ಮಧ್ಯಸ್ಥಿಕೆಯ ದೇವತೆಗಳು (ವಿಮ್ಲ ಅವಕಾಶ) ೫) ಉನ್ನತ ದೇವತೆಗಳು ೬) ಜನದಾಧಿಕಾರ ದೇವತೆಗಳೆಂದು ವಿಂಗಡಿಸಿದ್ದಾರೆ.

ಡಾ. ಗದ್ದಗೀಮಠ ಅವರು ದೇವರು ದೇವತೆಗಳು, ಸಂಪ್ರದಾಯದ ದೇವತೆಗಳು ಶಿವಶರಣರು, ಸಾಧು ಸತ್ಪುರುಷರು, ಭೂತವಾದಿಗಳೆಂದು ವಿಂಗಡಿಸಿದ್ದಾರೆ.

ಸಿದ್ದಲಿಂಗಯ್ಯನವರು ಪುರುಷ ದೇತೆಗಳು ಮತ್ತು ಸ್ತ್ರೀ ದೇವತೆಗಳೆಂದು ವರ್ಗೀಕರಿಸುವುದು ಅತಿ ವಿಕರಿಲವಾದ ಚೌಕಟ್ಟಿನಲ್ಲಿ ಮಾತ್ರವೆಂದು ಹೇಳಿ, ಅವುಗಳ ಗುಣ ಸ್ವಭಾವದ ಮೇಲೆ ಇನ್ನಿತರ ಅನೇಕ ಸಾಮಾನ್ಯ ಮಾಟಿದಂಡಗಳನ್ನು ಆಧಾರವಾಗಿದ್ದುಕೊಂಡು ಸಾಮ್ಯದೇವತೆಗಳು, ಉಗ್ರದೇವತೆಗಳು, ಆಧುನಿಕ ದೇವತೆಗಳೆಂದು ವಿಂಗಡನೆ ಮಾಡಿದ್ದಾರಲ್ಲದೆ ಆಹಾರ, ಜನಾಂಗ, ಕಾಲ, ಲಿಂಗವನ್ನು ಅನುಸರಿಸಿ ವಿಭಜಿಸಿಕೊಂಡು ಅಧ್ಯಯನ ಮಾಡಬಹುದೆಂದು ಸೂಚಿಸಿದ್ದಾರೆ. ಕ್ರಮವೇ ನನ್ನ ಅದೃಮಣ್ಣಿ ಸೂಕ್ತವೆಂದು ಭಾವಿಸಿದೇನೆ.

ಜನಪದ ದೈವಗಳನ್ನು ಒಂದು ಚೌಕಟ್ಟಿನಲ್ಲಿ ಹಿಡಿದಿಡುವುದು ಅಷ್ಟು ಸುಲಭದ ಮಾತಲ್ಲ. ಏಕೆಂದರೆ ಅವರ ದೈವಗಳು ನೊರೆಂದು. ಅವುಗಳ ಆರಾಧನೆ ಆಚರಣೆ, ಸಂಪ್ರದಾಯಗಳೂ ಕೂಡ ಅವರವರ ಜಾತಿ, ಧರ್ಮಕ್ಕನುಸಾರವಾಗಿ ವೈವಿದ್ಯಮಯವಾಗಿ ನಡೆಸುತ್ತಾ ಬಂದಿದ್ದಾರೆ. ಶಿಟ್ಟಿದೈವದ ಗುಡಿಗಳಿಲ್ಲದೆ ಊರುಗಳು ಸಿಗಬಹುದು ಆದರೆ ಗ್ರಾಮದೇವರುಗಳಿಲ್ಲದ ಹಳ್ಳಿಗಳು ಕಾಣುವುದೇ ಇಲ್ಲ. ಅವರ ಇಡೀ ಬದುಕನ್ನೇ ಅವು ಅವಲಂಬಿಸಿಕೊಂಡಿರುತ್ತವೆ. ಜನಪದ ದೈವಗಳು ಹೆಸರಿನಲ್ಲಾಗಲಿ, ಆಕಾರದಲ್ಲಾಗಲಿ ತುಂಬಾ ಸರಳ ಅವಕ್ಕೆ ನಿರ್ದಿಷ್ಟವಾದ ಹೆಸರೇ ಇರಬೇಕೆಂದಿಲ್ಲ. ಯಾವ ಯಾವ ಜಾಗದಲ್ಲಿರುತ್ತದೋ ಆ ಜಾಗದ ಹೆಸರು ಅಥವಾ ಆ ಊರಿನ ಹೆಸರೇ ಅವಕ್ಕೂ ಇಟ್ಟು ಆರಾಧಿಸುತ್ತಾರೆ.

ಗ್ರಾಮ ದೇವತೆಗಳ ವಸತಿ ಶಿಷ್ಟು ದೈವಗಳ ಗುಡಿಗಳಂತೆ ಸಂಕೀರ್ಣದಲ್ಲಿ ಕಲ್ಲು ಚಪ್ಪಡಿಗಳ ಮಾಡಿದ ಗುಡಿ ಇದ್ದರೆ ಅದೇ ದೊಡ್ಡದೆನ್ನಬಹುದು. ಏಕೆಂದರೆ ಬಹುಪಾಲು ದೈವಗಳು, ಬಿಸಿಲಲ್ಲಿ ಚಳಿಯಲ್ಲಿ ಮಳೆಯಲ್ಲಿ ಭಕ್ತರನ್ನು ಕೂಗುತ್ತಾ ಕುಳಿತಿರುವಂತಹವೇ ಆಗಿರುತ್ತದೆ. ಶಿಷ್ಟು ದೈವದ ಗುಡಿಗಳಾದರೆ ಗೋಪುರಗಳಿದ್ದು ಗೋಡೆಗಳ ಮೇಲೆಲ್ಲಾ ರಾಮಾಯಣ ಮಹಾಭಾರತ ಚಿತ್ರಗಳನ್ನು ಕೆತ್ತಿಸಿರುವುದಲ್ಲಿದೆ. ಪೂಜಾರಿ ಪುರೋಹಿತರು ಮಂಗಳ ವಾದ್ಯಗಳು, ಮೆರೆಯುತ್ತಿದ್ದ ಅದ್ಭುತ ಶಿಲ್ಪ ಕಲಾ ವೈಭವವನ್ನೇ ನಾವಲ್ಲಿ ಕಾಣಬಹುದು. ನಮ್ಮ ಜನಪದ ದೈವಗಳಲ್ಲಿಯೂ ಕೆಲವು ಶಕ್ತಿ ದೇವತೆಗಳು ರಾಜ ಮಹಾರಾಜರ ಪಾಳೆಯಗಾರರ ಕೃಪಾದೃಷ್ಟಿಗೆ ಬಿದ್ದು, ಗುಡಿ ಗೋಪುರಗಳನ್ನು ಕಟ್ಟಿಸಿಕೊಂಡಂತವವನ್ನು ಕಾಣುತ್ತೇವೆ. ಮೂಗೂರು, ಶಿದ್ದಾದೇವಿ, ಕಂಡಿಕಾಕ್ಷಿ, ಚಾಮುಂಡಿ, ಕಾಳಿಕಾದೇವಿ ಮುಂತಾದವನ್ನು ಉಲ್ಲೇಖಿಸಬಹುದು.

ಗ್ರಾಮದೇವತೆಗಳನ್ನು ನಿರ್ದಿಷ್ಟವಾಗಿ ಇಂತಿಂತಹ ಜಾಗದಲ್ಲಿ ಪ್ರತಿಷ್ಠಾಪಿಸಬೇಕೆಂಬ ನಿಯಮ ನಿಷ್ಟೆಯನ್ನಿಟ್ಟುಕೊಂಡವರಲ್ಲಿ ಅವನು ಓಡಾಡುವ ಜಾಗದಲ್ಲೆಲ್ಲಾ ದೇವರುಗಳಿರಬೇಕು. ಊರ ಹೊರಗಡೆ ಹನುಮಪ್ಪನ ಗುಡಿ ಇದ್ದರೆ, ಗಡ್ಡೆಯಲ್ಲೊಂದು ಜಾಡಿ, ದಾರಿಯಲ್ಲೊಂದು ಭೂತ, ಊರ ಮಧ್ಯದಲ್ಲೊಂದು ಮಾರಿಗುಡಿ, ಬಾಗಿಲು ಕಾಯಲೆಂದು ಅಗಸೆಯಲ್ಲೊಂದು ಭೈರವನ ಗುಡಿ. ಇವನಿಗೆ ಬಾಗಿಲು ಭೈರವನೆಂದೇ ಹೆಸರು. ಭೈರವಗುಡಿಯಿಲ್ಲದ ಊರೇ ಇಲ್ಲ. ಹಾಗೆಯೇ “ಊರು ಸುಟ್ಟುರೂ ಹನುಮಪ್ಪ ಹೊರಗೆ” ಎಂದು ಹುನುಮನ ಗುಡಿ ಊರಿಂದ ಹೊರಗಡೆಯೇ ಇರುತ್ತದೆ. ಹುಮಂತನ ಗುಡಿಯೂ ಕೂಡ ಅಷ್ಟೇ ಸಾಮಾನ್ಯವಾಗಿ ಎಲ್ಲ ಕಡೆಯೂ ಕಂಡು ಬರುತ್ತದೆ. ಇವನನ್ನು ಕೂಡ ಊರ ಮುಂದಲ ಹನುಮನೆಂದೇ ಕರೆಯುತ್ತಾರೆ. “ಮನೇಯಾಂಗಳ ಮುದ್ದೆ ಹುಮಂತೇವರ ಗುಡಿ ನಿದ್ದೆ” ಎಂಬ ಗಾದೆ ಮಾತೇ ಬಳಕೆಯಲ್ಲಿದೆ. ಇವರೆಲ್ಲಾ ರಕ್ಷಣಾ ದೇವೆಗಳು. ಸಾಮಾನ್ಯವಾಗಿ ದೈವದ ಗುಡಿಯ ಬಾಗಿಲೆಲ್ಲಾ ಪೂರ್ವಾಭಿಮುಖವಾಗಿಯೇ ಇರುತ್ತವೆ. ಗರ್ಭಗುಡಿ ಮಣ್ಣಿನ ದಪ್ಪಗೋಡೆಗಳಿಂದಿದ್ದು ಮೇಲೆ ಚಪ್ಪಡಿ ಕಲ್ಲನ್ನು ಹೊದಿಸಿರುತ್ತಾರೆ. ಇಲ್ಲವೇ ನಾಡ ಹಂಚನ್ನು ಹಾಕಿರುತ್ತಾರೆ. ಕೆಲವಕ್ಕೆ ಗರ್ಭಗುಡಿಯ ಮುಂಭಾಗದಲ್ಲಿ ಹಬಾರವೂ ಇರುತ್ತದೇ. ಸುಣ್ಣ ಕೆಮ್ಮಣ್ಣಿನಿಂದ ಬಳಿದ ಗೋಡೆಗಳಾದರೆ ನೆಲವನ್ನು ಸಗಣಿಯಿಂದಲೇ ಸಾರಿಸಿರುತ್ತಾರೆ. ಮಾರಿಗುಡಿಗಳೂ ಕೂಡ ಸಾಮಾನ್ಯವಾಗಿ ಇದೇ ರೀತಿಯಲ್ಲಿ ಕಟ್ಟಿರುತ್ತಾರೆ. ಮಾರಿ ದೇವತೆ ಗ್ರಾಮದೇವತೆಯಾಗಿದ್ದಾಗ ಮಾತ್ರ ಗುಡಿ. ಇಲ್ಲದಿದ್ದರೆ ಅದು ಊರ ಹೊರಗೆ ಸಾಮಾನ್ಯ ರೀತಿಯಲ್ಲಿ ಒಂದು ಒಂದೂವರೆ ಅಡಿ ಎತ್ತರದ ಗೋಡೆಯಾಗಿದ್ದು ಎರಡು ಮೂರಡಿ ಉದ್ದವಿದ್ದು ಮೇಲೊಂದು ಕಲ್ಲು ಚಪ್ಪಡಿ ಹೊದಿಸಿರುತ್ತಾರೆ.

ಈ ದೇವರುಗಳಿಗೆ ನಿರ್ದಿಷ್ಟವಾದ ಮೂರ್ತಿಯಾಗಲೀ ಆಕಾರವಾಗಲೀ ಇರುವುದಿಲ್ಲ. ಹುತ್ತ, ಬೆತ್ತ, ಕಲ್ಲು ಗುಂಡು, ಮರದ ಬುಡ ಹೀಗೆ ಏನು ಬೇಕಾದರೂ ಆಗಬಹುದು. ಯಾರು ಬೇಕಾದರೂ ಪೂಜೆ ಮಾಡಬಹುದು. ಪೂಜಾರಿ ಇರಲೇಬೇಕೆಂದಿಲ್ಲ. ಹೊಲ, ಗದ್ದೆಗಳ ಬಯಲಿನಲ್ಲಿ ಕಾಣಬರುವ ಜಾಡಿ, ಭೂತಗಳ ಗುಡಿಗಳೆಲ್ಲಾ ತುಂಬಾ ಚಿಕ್ಕವು. ಹೊರಗಡೆಯಿಂದಲೇ ಬಣ್ಣ ಪೂಜೆ ಮಾಡಬೇಕಾಗುತ್ತವೆ. ಕೆಲವು ಕಡೆಗಳಲ್ಲಿ ಅವೂ ಇರುವುದಿಲ್ಲ. ಇನ್ನು ಕೆಲವು ಕಡೆ ಕಪ್ಪಗೆ ಎಣ್ಣೆ ಸ್ನಾನದಲ್ಲಿಯೇ ಮುಳುಗಿರುತ್ತದೆ.

ಇವುಗಳ ಸಾಮಾನ್ಯ ಸ್ವರೂಪವನ್ನು ಕಂಡ ನಂತರ ಎಂತೆಂತಹದ ದೈವಗಳಿರುತ್ತವೆ. ಮತ್ತು ಅವುಗಳ ವಸತಿ ವ್ಯವಸ್ಥೆ ಯಾವ ರೀತಿ ಇರುತ್ತವೆಂಬುದನ್ನು ಸ್ವಲ್ಪ ನೋಡಬಹುದು.

“ಬನಶಂಕರಮ್ಮ” ಎಂಬ ದೇವತೆ ಚಿಕ್ಕಮಗಳೂರು ಜಿಲ್ಲೆಯ ಕೆಲವು ಹಳ್ಳಿಗಳಲ್ಲಿ ಕಾಣಬರುವ ದೈವ ಒಂದು ಪೆಟ್ಟಿಗೆಯೊಳಗೆ ಇರುತ್ತದೆ. ಸಾಮಾನ್ಯವಾಗಿ ಊರ ಹೊರಗೆ ಒಂದು ಚಿಕ್ಕ ಗರ್ಭಗುಡಿಯ ಅಥವಾ ನಾಲ್ಕು ಅಡಿ ಎತ್ತರದ ಬಗಿಲುಳ್ಳದ್ದಾಗಿದ್ದ ಯಾವಾಗಲೂ ಬೀಗ ಹಾಕಿಯೇ ಇರುತ್ತದೆ. ವರುಷಕ್ಕೊಮ್ಮೆ ಮಾತ್ರ ಬಾಗಿಲು ತೆರೆದು ಜಾತ್ರೆ ಮಾಡುತ್ತಾರೆ. ಅದು ಹೊರ ಹೊರಭಾಗ ಹೆಜ್ಜೆಗೊಂದು ತೆಂಗಿಕಾಯಿ ಒಡಯಬೇಕು. ಬೇರೆ ಸಮಯದಲ್ಲಿ ಬಾಗಿಲಿಗೇ ಪೂಜೆ. ಅದು ಉಗ್ರ ಸ್ವರೂಪದ್ದೆಂದು ಯಾರೂ ಅದರ ಹತ್ತಿರ ಸುಳಿಯುವುದೇ ಇಲ್ಲ. ಹೆಂಗಸರಂತೂ ಪೂಜಿಸುವಂತೆಯೇ ಇಲ್ಲ ನೆನೆಯಕ್ಕಿ, ನೆನೆಗಡಲೆ, ಕೋಸಂಬರಿ ಮಾತ್ರ ಇದಕ್ಕೆ ಫಲಹಾರ.

ಭರಮದೇವರು: ಇದು ಮಕ್ಕಳ ದೈವ. ಇದು ಅರಶಿಮರದ ಕೆಳಗೆ ಇರುವ ಒಂದು ಚಿಕ್ಕ ಕಲ್ಲಿನ ಗುಡ್ಡೆಯೇ ಆಗಿರುತ್ತದೆ. ಇದಕ್ಕೆ ಗುಡಿ ಪಡಿ ಏನೂ ಇಲ್ಲ. ಮಕ್ಕಳು ಮರಿಗಳಿಗೆ ಹುಷಾರಿಲ್ಲದಿದ್ದಾಗ ಅವರನ್ನು ಕರೆತಂದು ಪೂಜಿಸುವ ಸಂಪ್ರದಾಯವಿದೆ. ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಯ ಹಳ್ಳಿಗಳಲ್ಲಿ ಸಾಮಾನ್ಯವಾಗಿ ಊರ ಮಧ್ಯೆ ಇರುವಂತಹ ದೇವರುಗಳಿವು.

ಇದೇ ರೀತಿ ತರೀಕೆರೆ ತಾಲ್ಲೂಕಿನ ಶಿವನಿ ಎಂಬ ಊರಿನ ಬಳಿ “ತಲೆಪೊಟರಾಯ” ಎಂಬ ಒಂದು ದೇವರಿದೆ. ಇದು ಊರಿಗೆ ಹೋಗುವ ದಾರಿಯಲ್ಲಿ ಕಂಡು ಬರುವ ೨ ಅಥವಾ ೩ ಅಡಿ ಎತ್ತರದ ಕಲ್ಲುರಾಶಿಯೇ ಆಗಿದೆ. ಆ ದಾರಿಯಲ್ಲಿ ಹೋಗುವವರೆಲ್ಲಾ ಆ ಗುಡ್ಡೆಗೊಂದು ಕಲ್ಲು ಹಾಕಿಯೇ ಮುಂದೇ ಸಾಗುತ್ತಾರೆ. ಇದಕ್ಕೆ ಪೂಜೆ ಗೀಜೆ ಏನೂ ಇಲ್ಲ. ಇವನು ಹಸವಾಲದವನ್ನು ಏನಾದರೂ ತೊಂದರೆ ಮಾಡುವವನೆಂದು ಹೇಳುತ್ತಾರೆ. ಆ ಊರ ಗೌಡನ ಮಗ ಗರತಿಯೊಬ್ಬಳ ಶೀಲ ಹರಣ ಮಾಡಿದ್ದಕ್ಕಾಗಿ ಊರಿನ ಜನರೇ ತುಂಬಿ ಹೊಡೆದು ಕೊಂದ ಜಾಗವೇ ಅದು. ಅದರ ಗುರುತು ಮತ್ತು ಆತನ ನೆನಪಿನ ಗುಡ್ಡವೇ ಅದು. ಅದಕ್ಕೆ ಒಂದು ಕಲ್ಲು ಹಾಕುವುದೇ ಒಂದು ಸಂಪ್ರದಾಯವಾಗಿದೆ. ಅವರ ಮನೆತನದವರು ಮಾತ್ರ ವರ್ಷಕ್ಕೊಮ್ಮೆ ಪೂಜಿಸುತ್ತಾರೆ.

ಭೂತನಕಲ್ಲು ಅಥವಾ ಭೂತರಾಮ ಇದು ಊರ ಹೊರಗೆ ಇರುವಂತಹದ್ದು. ಕೆಲವು ಕಡೆ ಒಂದು ದೊಡ್ಡ ಕಲ್ಲಿರುತ್ತದೆ. ಕೆಲವು ಭಾಗದಲ್ಲಿ ಒಂದು ಹುತ್ತವನ್ನೆ ಭೂತವೆಂದು ಪೂಜಿಸುವುದಿದೆ. ವರುಷಕ್ಕೊಮ್ಮೆ ಭೂತದ ಹಬ್ಬವೆಮದು ಕುರಿ, ಕೋಳಿಗಳನ್ನು ಬಲಿಕೊಟ್ಟು ಆರಾಧಿಸುತ್ತಾರೆ.

ಇದೇ ರೀತಿ “ಹೊರಬಿಟ್ಟಮ್ಮ” ಎಂಬ ದೈವವಿದೆ. ಇದು ಊರ ಹೊರಗೆ ನದೀ ತೀರದಲ್ಲಿ ಅಥವಾ ಪಟಿಟಕಾಡಿನಲ್ಲಿ ದೊಡ್ಡ ಆಲದ ಮರದ ಬಳಿ ಇರುವಂತಹದ್ದು. ಇದಕ್ಕೆ ಪ್ರತ್ಯೇಕ ಗುಡಿ ಇಲ್ಲ. ಅದರ ವಸತಿ ಆ ಆಲದ ಮರದ ಬುಡವೇ ಆಗಿರುತ್ತದೆ. ಕೆಲವು ಭಾಗದಲ್ಲಿ ಎರಡು ಕಲ್ಲು ಗುಂಡುಗಳಿರುತ್ತವೆ. ಊರಿನವರೆಲ್ಲಾ ಒಂದು ರಾತ್ರಿ ತಮ್ಮ ತಮ್ಮ ಮನೆಗೆ ಬೀಗಹಾಕಿಕೊಂಡು ಮಕ್ಕಳು ಮರಿಗಳಾದಿಯಾಗಿ ತಿನ್ನುಣ್ಣುವವರು ಕುರಿ ಕೋಳಿಗಳನ್ನು ಹರಕೆ ಮಾಡಿಕೊಂಡಿದ್ದು ಅಲ್ಲಿಯೇ ಎಲ್ಲಾ ಸೇರಿ ಬಲಿಕೊಟ್ಟು ಅಲ್ಲೇ ಅಡಿಗೆ ಮಾಡಿ ಊಟ ಮಾಡುತ್ತಾರೆ. ಸಸ್ಯಾಹಾರಿಗಳು ಕೂಡ ಹತ್ತಿರದಲ್ಲಿ ಪ್ರತ್ಯೇಕವಾಗಿ ಅಡಿಗೆ ಮಾಡಿ ನೈವೇದ್ಯೆ ಸಲ್ಲಿಸುತ್ತಾರೆ.

ಇದರಂತೆಯೇ ಗುಂಡುಕಲ್ಲಮ್ಮನಿದ್ದಾಳೆ. ಇದು ಮಾರಿಗುಡಿ ಎದುರಿಗಿರುತ್ತದೆ. ಇದನ್ನು ಮಾರಿಯ ಗಂಡನೆಂತಲೂ ಕರೆಯುತ್ತಾರೆ. ಮಕ್ಕಳಿಗೆ ದಡಾರ ಅಪ್ಪಿದ್ದಾಗ, ಸಿಡುಬು ಆದಾಗ ಆ ಕಲ್ಲಿಗೆ ಬಂದು ಬಿಂದಿಗೆ ನೀರು ಹೊಯ್ದು ಮೂರು ವಾರ ಹರಳೆಣ್ಣೆ ಸುರಿದು ಬರುವುದಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನಲ್ಲಿ ತಮಡಿಹಳ್ಳಿ ಜಾಡಿ, ಕೂಡ್ಲಿಭೂತ ಎಂಬ ಎರಡು ದೈವಗಳಿವೆ. ಇವು ಊರಿನಿಂದ ಹೊರಗೆ ಕಾಡಿನಲ್ಲಿವೆ. ಬೇರೆ ಬೇರೆ ಊರಿನ ಸಮೀಪದಲ್ಲಿವೆ. ವೈರಿಗಳಿಗೆ ಮಾಟ ಮಾಡಿಸುವಾಗ ಹಾಗೂ ಕಳೆದು ಹೊದ ವಸ್ತುಗಳನ್ನು ಪಡೆಯುವಾಗ ಇವಕ್ಕೆ ಮೊರೆ ಹೊಗುವುದುಂಟು. ಯಾವುದೇ ಗುಡಿ ವ್ಯವಸ್ಥೆಇಲ್ಲ. ಮರದ ಬುಡದಲ್ಲಿದ್ದಂತಹ ಹತ್ತು ಹದಿನೈದು ವಿವಿಧ ಬಗೆಯ ಕಲ್ಲಿನ ಗುಂಡುಗಳಿವೆ, ಚಪ್ಪಡಿಗಳಿವೆ. ಇವಷ್ಟೆ ತಾವು ಯಾರಿಗೆ, ಏನು ಮಾಡಿಸಬೇಕೋ ಅವರ ಹೆಸರು ಹೇಳಿ ಚೆನ್ನಾಗಿ ಮೆಣಸಿನ ಕಾಯಿಯಿಂದ ಕಾರ ತಿಕ್ಕಿ ಮುರಾಡೆ ಹಾಕಿ ಬಂದರಾಯಿತು. ನಮ್ಮ ಕೆಲಸವಾದ ಮೇಲೆ ತೊಳೆದು ಪೂಜೆ ಮಾಡಿ ಬಲಿಕೊಡುವ ಸಂಪ್ರದಾಯವಿದೆ.

ಮಲೆನಾಡಿನ ಭಾಗದಲ್ಲಿ ವಿಶೇಷವಾಗಿ ರಸ್ತೆಯುದ್ದಕ್ಕೂ ಅಲ್ಲಲ್ಲಿ ಕಂಡು ಬರುವ ಇನ್ನೊಂದು ದೈವವಿದೆ. ಅದೇ ಗಡೀ ಮಾರಿ. ಇದಕ್ಕೊಂದು ನಿರ್ದಿಷ್ಟ ತಾಣವಿಲ್ಲ. ಇದರೆ ಆಕಾರವೆಂದರೆ, ಎರಡು ಮರದ ಗೊಂಬೆಗಳು ಮಕ್ಕಳು ಆಡುವ ಎರಡು ಗಾಲಿಯ ರಥದ ಮೇಲೆ ಕುಳ್ಳಿರಿಸಿರುತ್ತಾರೆ. ಯಾವುದೋ ಊರಿನಲ್ಲಿ ಸೋಂಕು ರೋಗ ದನಕರುಗಳಿಗೆ ತಗುಲಿದ್ದರೆ ಅಲ್ಲಿಯವರು ಆಚಾರಿಯಿಂದ ಮಾಡಿಸಿ ಮನೆ ಮನೆಯಿಂದ ಹರಕು ಮೊರ, ಪೊರಕೆ, ಬೇವಿನ ಸೊಪ್ಪು ಭಂಡಾರ ಎಲ್ಲಾ ಇಟ್ಟು ಪೂಜೆ ಮಾಡಿ ಜೋರಾಗಿ ಬಾಯಿ ಬಡಿದುಕೊಳ್ಳುತ್ತಾ ಊರಿಂದ ಪರವೂರ ಗಡಿಗೆ ಬಿಟ್ಟು ಬರುತ್ತಾರೆ. ಇದು ಹೀಗೇ ಗಡಿಯಿಂದ ಗಡಿಗೆ ಸಾಗುತ್ತಿರುತ್ತದೆ.

ಇದೇ ಸಂಧರ್ಭದಲ್ಲೀಯೇ ಊರ ಮಾರಿ ದೇವತೆಯ ವಸತಿ ಬಗ್ಗೆಯೂ ತಿಳಿಯುವುದು ಅಗತ್ಯ. ಶಿವಮೊಗ್ಗ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕೆಲವು ಕಡೆ ಪ್ರತಿವರ್ಷ, ಮತ್ತೆ ಕೆಲವು ಭಾಗದಲ್ಲಿ ಮೂರು ವರ್ಷಕ್ಕೊಮ್ಮೆ, ಏಳು ವರ್ಷಕ್ಕೊಮ್ಮೆ ಪೂರೀ ಜಾತ್ರೆ ಮಾಡುತ್ತಾರೆ. ಈ ಮಾರಿ ಗುಡಿ ಊರೊಳಗೆ ಅಥವಾ ಹೊರಗೆ ಇರುತ್ತದೆ. ಚಿಕ್ಕದಾದ ಗರ್ಭಗುಡಿ ಇದ್ದು ಸೂರ್ಯನ ಕಿರಣಗಳು ನೇರವಾಗಿ ಬೆಳಗ್ಗೆ ಬೀಳುವಂತಿರುತ್ತವೆ. ಸುಣ್ಣ ಕೆಮ್ಮಣ್ಣು ಬಳಿದುಕೊಂಡ ಮಣ್ಣಿನ ಗೋಡೆಗಳ ಸಾಮಾನ್ಯ ಕಟ್ಟಡ. ಅದರೊಳಗೆ ಬಲಿಪೀಠ ಬಂದಿರುತ್ತದೆ ಮೂಲ ಮೂರ್ತಿ ಅಥವಾ ಉದ್ಭವ ಮೂರ್ತಿ ಒಂದು ಹುತ್ತ ಅಥವಾ ಒಂದು ಬಗೆಯ ತಗ್ಗಾದ ಅಥವಾ ಎತ್ತರದ ಸ್ಥಳ. ಆದರೆ ಮರದಿಂದ ಮಾಡಿದ ಏಳೆಂಟು ಅಡಿ ಎತ್ತರದ ಮಾರಿಗಳ ವಾಸಸ್ಥಳ ಊರ ಹೊರಗೆ ಮಾರಿಗದ್ದಿಗೆ ಎಂದಿರುತ್ತದೆ. ಹಬ್ಬವಾದ ನಂತರ ಆ ಜಾಗಕ್ಕೆ ಅವನ್ನು ಬಿಟ್ಟು ಬರುತ್ತಾರೆ. ಉದಾಹರಣೆಗೆ ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿ ಬಳಿ ಮಾರಿದಿಬ್ಬ ಎಂಬ ಊರಿದೆ. ಅಲ್ಲಿ ಹೀಗೆ ಬಟ್ಟಿ ಬಿಸಿಲಿಗೆ ಮಳೆಗೆ ತೊಯ್ಯುತ್ತಿರುವ ಎಳೆಂಟು ಮಾರಿಯ ಮೂರ್ತಿಗಳನ್ನು ನೋಡಬಹುದು. ಊರ ದೈವದಂತೆ ಮನೆ ದೈವವೊಂದಿರುತ್ತದೆ. ಇದಕ್ಕೂ ಭೂತವೆಂದೇ ಕರೆಯುತ್ತಾರೆ. ಇದು ಎಲ್ಲರ ಮನೆಯಲ್ಲೂ ಇರುವುದಿಲ್ಲ. ಗೋಣೀ ಚೀಲದಲ್ಲಿ ಒಂದು ಗುಂಡುಕಲ್ಲನ್ನು ಕಟ್ಟಿ ಮೇಲ್ಗಡೆ ಕರಿಯ ಬಟ್ಟೆ ಸುತ್ತಿದ್ದು, ಮನೆಯ ಹೊರಗಡೆ ಸೂರಿಗೆ ನೇತು ಹಾಕಿರುತ್ತಾರೆ. ಇದಕ್ಕೆ ವಾರಕ್ಕೊಂದು ದಿವಸ ಮಾತ್ರ ಆಮನೆಯ ಹಿರಿಯನಿಂದ ಪೂಜೆ. ಇದು ಅವರ ಹೊಲಗದ್ದೆಗಳ ಫಸಲು ಬಂದು ಆ ರಾಶಿ ಪೂಜಿಸುವಾಗ ಭೂತದೈವವನ್ನು ಮಡಿಯಿಂದ ಆಯಾ ಜಾಗಕ್ಕೆ ಹೊತ್ತುಕೊಂಡು ಹೋಗಿ ಪೂಜಿಸಿ, ನೈವೇದ್ಯ ಮಾಡಿದ ನಂತರವೇ ಬೇರೆ ಕೆಲಸ. ಇದೊಂದು ರೀತಿಯ ಸಂಚಾರೀ ದೈವ.

ಹೀಗೆಯೇ ಅಂಡಿಗೆ ಭೂತ, ಜಿಗಳಿ ಹೊಂಡದ ಭೂತ ಎಂದು ಶಿಕಾರಿಪುರದ ಕೆರೆಯಲ್ಲಿವೆ. ಅವರು ಅದನ್ನು ಹೊಂಡವೆಂದೇ ಕರೆಯುತ್ತಾರೆ. ಇದರ ಆಕಾರವನ್ನು ನೋಡಲಿಕ್ಕಾಗುವುದಿಲ್ಲ. ಏಕೆಂದರೆ ಇದು ಹೊಂಡದ ಮಧ್ಯದಲ್ಲಿ ಮುಳುಗೆದೆ. ಇದಕ್ಕೆ ತೆಪ್ಪದಲ್ಲಿ ಹೋಗಿ ಪೂಜೆ ಮಾಡಿ ಬರುತ್ತಾರೆ. ಇದೇ ರೀತಿ ಆಲದ ಮರದಲ್ಲಿ  “ಮುನಿಯಗಳಿವೆಂದು” ಬ್ರಹ್ಮರಾಕ್ಷರಿರುತ್ತಾರೆಂದೂ ನಮ್ಮ ಜನ ಹೇಳುತ್ತಾರೆ. ಇವುಗಳ ಸಂಚಾರ ಬೆಳಗಿನ ಜಾವವಂತೆ. ಅವುಗಳ ಸಂಚಾರದ ವೇಳೆಯಲ್ಲಿ ಎದುರಿಗೆ ಸಿಕ್ಕವನು ನೆಲಪಟ್ಟು ಹೊಡೆದು ರಕ್ತ ಕಾರಿ ಸಾಯುತ್ತಾನೆಂದು ಭಾವಿಸಿದ್ದಾರೆ. ಆ ಮರಗಳಿಗೇ ಪೂಜೆ ಸಲ್ಲಿಸುತ್ತಾರೆ. ಅದೆ ಅವರ ವಸತಿ ಗೃಹ. ಭದ್ರಾವತಿ ತಾಲ್ಲೂಕಿನ ಅರಕೆರೆ ಗ್ರಾಮದ ಬಿಸಿಲು ಮಾರಿ, ಒಂದು ದೊಡ್ಡ ಮರದ ಕಂಭ. ಇದಕ್ಕೆ ಸುತ್ತಲೂ ಐದು ಅಡಿ ಎತ್ತರದ ಗೋಡೆ ಕಟ್ಟಿದ್ದಾರೆ. ಕಂಭದ ಬಳಿ ಒಂದು ಪೀಠವಿದೆ. ಒಂದು ಕಡೆ ಭಂಡಾರ ಮತ್ತೊಂದು ಕಡೆ ಎಣ್ಣೆ ಹಾಕಲು ಕಲ್ಲಿನಿಂದ ಮಾಡಿದ ದೀಪವಿದೆ ಇಷ್ಟೆ. ಎಳೆಂಟು ಅಡಿ ದೂರದಲ್ಲಿ ಒಂದು ಉಯ್ಯಾಲೆ ಇದೆ. ಅದರ ಕಂಬಗಳು ಕಲ್ಲಿನವು. ಅದರ ಮಕ್ಕಳೆಂದು ಕಂಭದ ಎದುರೆಗೆ ಎರಡು ಕಲ್ಲು ಗುಂಡುಗಳು ಹಾಗೆಯೇ ಕಲ್ಲು ಚಪ್ಪಡಿಗಳಿಂದಲೇ ನಿರ್ಮಿಸಿದ ಒಂದು ಮಂಟಪದ ಒಳಗಡೆ ಹರುವ ಒಂದು ಸಣ್ಣ ದಿಬ್ಬವೇ ಮಾತಂಗಿ ಮಾನ ಗುಡಿ. ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲ್ಲೂಕಿನ ಒಂದು ಹಳ್ಳಿಯಲ್ಲಿ ದುರ್ಗಿಯ ಗುಡಿಯಿದೆ, ಇದಕ್ಕೆ ಮೇಲೆ ಗೋಪುರ ಕಟ್ಟಿಸ ಮುಂಬಾಗಿಲ ಬಳಿ ಕರಿಯ ಕೆಂಪು ಎಂಬ ಭಂದರನ್ನು ಮಾಡಿ ನಿಲ್ಲಿಸಿದ್ದಾರೆ. ಮುಂಭಾಗದಲ್ಲಿ ಸರಪಳಿಯಿಂದ ಕಟ್ಟಿರುವ ಕೆಂಚರಾಯನಿದ್ದಾನೆ. ಇವನ್ನು ಸರಪಳಿ ಸೆಂಪ ಎಂದೇ ಕರೆಯುತ್ತಾರೆ. ಸ್ವಲ್ಪ ಮುಂದೆ ಸಿಡಿ ಕಂಭವಿದೆ ವಿಶಾಲವಾದ ಚಾವಡಿಯನ್ನು ನಿರ್ಮಿಸಿದ್ದಾರೆ. ನ್ಯಾಯತೀರ್ಮಾನಗಳೆಲ್ಲಾ ಅಲ್ಲಿಯೇ ನಡೆಯುವುದು. ತಪ್ಪು ಒಪ್ಪಿಕೊಂಡವನು ಅಲ್ಲಿರುವ ತೂಗು ದೀಪಕ್ಕೆ ತುಪ್ಪ ಹಾಕಿ ದೀಪ ಹಚ್ಚಿಸಬೇಕು. ಮುಂಭಾಗದಲ್ಲಿ ನಿಂತಿರುವ ಭಂಟರಿಗೆ ಬಾಳೆ ಹಣ್ಣಿನ ಹರಿಸೇವೆ ಮಾಡಿಸಬೇಕು. ಅಲ್ಲಿನ ಒಂದು ವಿಶೇಷವೆಂದರೆ, ಬಾಚಪ್ಪ ಬಳಿಯಪ್ಪ, ದೊಣ್ಣೆಪ್ಪ, ಸವರಪ್ಪ ಎಂಬ ನಾಲ್ಕು ಕಲ್ಲುಗಳು ದೇವಸ್ಥಾನದ ಹೊರಗಿನ ಮುಳೆಯಲ್ಲಿ ಕುಳಿತಿರುವುದು. ಮಕ್ಕಳಿಗೆ ವಾಂತಿಭೇದಿ ಬಂದು ಬಾಚಿಬಳಿದು ಸತ್ತು ಹೋಗುವಂತಾದರೆ ಈ ದೇವರುಗಳೆಗೆ ಹರಕೆ ಹೊಡುತ್ತಾರೆ. ಅಂಗಿ ಕುಲಾವಿ, ಸಣ್ಣ ಪುಟ್ಟ ಕಿವಿಯ, ಕೊರಳಿನ ಮಕ್ಕಳಾಭರಣಗಳನ್ನು ತಂದೊಪ್ಪಿಸುತ್ತಾರೆ.

ಈ ದೇವಸ್ಥಾನದಲ್ಲಿ ಕಲಾದೃಷ್ಟಿಯಿಂದ ಹೇಳುವುದಾದರೆ ದೀಪಸ್ಥಂಭ. ಒಂದರ ಮೇಲೊಂದರಂತೆ ಹದಿನೈದು ಇಪ್ಪತ್ತು ದೀಪಗಳನ್ನು ಎರಡು ಮಗ್ಗುಲಲ್ಲಿ ಏಕಕಾಲಕ್ಕೆ ಹಚ್ಚಿಸುವಂತಿದೆ. ಗೊಡೆಗಳ ವಿವಿಧ ಬಗೆಗಳನ್ನು ಕಾಣಬಹುದು. ಆ ಒಂದು ಗುಡಿಯಲ್ಲಿ ಮಾರಿ ಮತ್ತು ವೀರಭದ್ರನ ಎರಡು ಮೂರ್ತಿಗಳು ಪ್ರತಿಷ್ಠಾಪಿಸಿದ್ದಾರೆ. ಮಾರಿಗೆ ಬಲಿಕೊಡುವಾಗ ವೀರಭದ್ರನಿಗೆ ತೆರೆ ಎಳೆಯುತ್ತಾರೆ.

ಈ ಗುಡಿಯಂತೆಯೇ ಚಿಕ್ಕಮಗಳೂರು ಜಿಲ್ಲೆ ಅಂತರಗಟ್ಟಮ್ಮನ ಗುಡಿಯೂ ಇದೆ. ಇದರ ಗರ್ಭಗುಡಿ ಸಂಪೂರ್ಣ ಕಲ್ಲಿನಿಂದ ಕಟ್ಟಿದ್ದಾರೆ. ವಿಸ್ತಾರವಾದ ಪ್ರಾಂಗಣವಿದೆ. ಸುಂದರವಾದ ಪಿರಮಿಡ್ ಆಕಾರದಲ್ಲಿ ಕಲ್ಲುಗಳನ್ನು ಜೋಡಿಸಿದ್ದಾರೆ. ಉತ್ಸವ ಮೂರ್ತಿ ಲೋಹದ್ದಿದೆ. ಭಂಟರು ಸೋನು, ಕೆಂಚಗಳನ್ನು ರಕ್ತಭೂತಾಳಿ ಮರದಿಂದ ಮಾಡಿದ್ದಾರೆ. ಇದೇ ರೀತಿ ಕುಕ್ಕಾಡರಮ್ಮ ಚನ್ನಗಿರಿ ಹತ್ತಿರ ಜೋಳದಾಳನಲ್ಲಿದೆ. ಅಮ್ಮನಗುಡ್ಡವೆಂದೇ ಕರೆಯುವ ದೊಡ್ಡ ಗುಡ್ಡದ ಮೇಲೆ ಇದೆ. ಇದರ ವಸತಿ ಸಾಧಾರಣವಿದ್ದರೂ ಸುತ್ತ ವಿಶಾಲವಾದ ಅಂಕಣವಿದೆ. ಇತ್ತೀಚೆಗೆ ಭಕ್ತಾದಿಗಳು ಹೆಚ್ಚಿ ಗುಡಿ ನವೀಕರಣಗೊಂಡಿದೆ.

ಸಾಮಾನ್ಯವಾಗಿ ನಮ್ಮ ಜನಪದ ದೈವಗಳು ದೊಡ್ಡ ತಿರುವಿನಲ್ಲಿ ಮಡ್ಡಿಡಯ ಮೇಲೆ, ಮೂರು ನಾಲ್ಕು ದಾರಿ ಕೂಡುವಲ್ಲಿ ತುಂಬಾ ತಗ್ಗಿನಲ್ಲಿ ಹೀಗೆ ವಿಶಿಷ್ಟ ಪ್ರದೇಶದಲ್ಲಿ ವಸತಿ ಹೂಡಿರುತ್ತವೆ.

“ಕರ್ಕಾರುಮಠವೆಂದು” ಉಂಬಳೆಬೈಲಿನ ಸಮೀಪ ನರಸಿಂಹರಾಜಪುರ ತಾಲ್ಲೂಕಿಗೆ ಸೇರಿದ ಜಾಗದಲ್ಲಿದೆ. ಇದು ಕಾಡಿನ ಮಧ್ಯೆ ಇದ್ದು, ಒಂದು ದೊಡ್ಡ ಸುರಂಗವೂ ಅಲ್ಲಿದೆ. ಇಲ್ಲಿಯ ವಸತಿ ವೈಶಿಷ್ಟವೆಂದರೆ ಕಿಟಕಿಗಳಿಲ್ಲದ ಕತ್ತಲೆಯ ಚಿಕ್ಕ ಗರ್ಭಗುಡಿಗೆ ಎರಡು ಅಡಿ ಎತ್ತರದ ಬಾಗಿಲಿನಿಂದ ಒಳಗೆ ಪೂಸುವಂತಹದ್ದು. ಕತ್ತಿಗಳು, ಚಾಮರಗಳು, ವಿಭೂತಿಗಡ್ಡಿ, ತಾಮ್ರದ ತಗಡು ಆ ದೇವರ ಹತ್ತಿರ ಇರುವ ಸಾಧನಗಳು. ಇಲ್ಲಿಗೆ ಹೆಂಗಸರು ಹೋಗುವಂತಿಲ್ಲ. ಹೀಗೆಯೇ ಗಿರಿಮಲ್ಲಯ್ಯ, ಕೂಗೋ ಮಲ್ಲಪ್ಪ ಎಂಬ ಗುಡ್ಡದ ಮೇಲಿರುವ “ಕಲ್ಲಿನ” ದೇವರುಗಳಿಗೂ ವರ್ಷಕ್ಕೊಮ್ಮೆ “ಗಿರಿಗೆ” ಹಣ್ಣಾಕುತ್ತೇವೆಂದು ಊರಿನವರೆಲ್ಲಾ ಹೋಗುತ್ತಾರೆ. ಇಲ್ಲಿಗೂ ಹೆಂಗಸರಿಗೆ ಪ್ರವೇಶವಿಲ್ಲ.

ಹೊನ್ನಾಳಿಯಲ್ಲಿ ಚನ್ನಪ್ಪಸ್ವಾಮಿ ಮಠವಿದೆ. ಇದು ಸಂಪೂರ್ಣ ಕಲ್ಲಿನದು. ಮೇಲ್ಛಾವಣಿಯನ್ನು ಕಲ್ಲಿನ ಚಪ್ಪಡಿಗಳಿಂದಲೇ ನಿರ್ಮಿಸಿದ್ದಾರೆ. ದೀಪಸ್ತಂಭ, ಉಯ್ಯಾಲೆ ಕಂಭ, ಸುರಂಗ ಮಾರ್ಗಗಳ, ಮಧ್ಯದಲ್ಲಿ ಕಲ್ಯಾಣಿ, ಹಾಗೆಯೇ ಮಠದ ಒಂದು ಪಕ್ಕದಲ್ಲಿ ಎರಡು ಕಲ್ಲುಗಳಿವೆ. ಇವನ್ನು ಅಪ್ಪಣೆ “ದೇವರು” ಎಂದೇ ಕರೆಯುತ್ತಾರೆ. ಅಪ್ಪಣೆ ಕೊಡುವುದೆಂದರೆ ಎಡ ಬಲ ಹೂ ಕೊಸುವುದಲ್ಲ. ತೊಂದರೆ ನಿವಾರಣೆ ಮನಸ್ಸಿನಲ್ಲೇ ಕುರ್ತುಕೊಂಡು ಆಗುತ್ತೆ ಅಥವಾ ಇಲ್ಲಾ ಎಂದು ಎತ್ತಬೇಕು. ಆಗುತ್ತೆ ಅನ್ನೊದಾದರೆ ಭಾರವಾದ ಕಲ್ಲು ಹಗುರವಾಗುತ್ತದಂತೆ. ಇದಕ್ಕೆ ಪ್ರತ್ಯೇಕವಾದ ಸ್ಥಾನ ಮಾಡಿ ಇಟ್ಟಿದ್ದಾರೆ. “ಸಮಾಧಿ ಪೂಜೆ” ಇದೆ. ಅಮವಾಸ್ಯೆ ಹುಣ್ಣಿಮೆಗೆ ಮಾತ್ರ ಇಂಥವರು ಬರುತ್ತಾರೆ. ಇದು ಭದ್ರಾ ನದಿಯ ದಂಡೆಯ ಮೇಲಿರುವ ಸಮಾಧಿಯಷ್ಟೆ. ಅದಕ್ಕೊಂದು ಮಂಟಪ ಕಟ್ಟಿದ್ದಾರೆ. ಮಂಡಕ್ಕಿ ಮಾತ್ರ ನೈವೇದ್ಯ, ಪೂಜಾರಿಗಳಿಲ್ಲ.

ಊರಿಗೆ ನೆರವಾದ ಹಗೆಗಳಿಗೆ ಮಾರಿಯಾದ ಹತ್ತು ಜನರ ಸಂರಕ್ಷಣೆಗಾಗಿ ತನ್ನನ್ನೇ ಬಲಿಕೊಟ್ಟುಕೊಂಡಂತಹ ವೀರ ಮಹಿಳೆಯರು, ಪತಿವ್ರತೆಯರು, ಸೇಡಿಗಾಗಿ ಆತ್ಮಹತ್ಯೆ ಮಾಡಿಕೊಂಡವರು ಗ್ರಾಮದೇವತೆಗಳಾಗಿ ಮೃತಳಾದದ್ದುಂಟು. ಇವರೆಲ್ಲಾ ಊರಿನ ಒಂದೊಂದು ಭಾಗದಲ್ಲಿ ವಸತಿ ಹೂಡಿದ್ದು, ಜನರ ಭಕ್ತಿಗೆ ಪಾತ್ರರಾಗಿರುತ್ತಾರೆ. ಮೈಮರೆಸುವ, ಮನಸ್ಸನ್ನು ಹಗುರಗೊಳಿಸುವ ಹೆಂಡವನ್ನು ದೇವತೆ ಎಂದೇ ಬಗೆದು ಪುರಬಾಂಡೇಶ್ವರಿ ಎಂದು ಕರೆದಿದ್ದಾರೆ. ಕೊಂಡ ಜನಾಂಗದವರು, ಹೆಂಡದ ಗಡಿಗೆಯೇ ಅವಳ ನಿವಾಸಸ್ಥಾನವಾಗಿ ಪೂಜಿಸುತ್ತಾರೆ. ವೈಧಿಕ ಸಂಸ್ಕೃತಿ ಬಲಿತು ಬೇರೂರಿದ್ದರೂ ಜನರ ಜೀವನಾಡಿಯಲ್ಲಿ ಸೇರಿ ಹೋಗಿದ್ದು ಮಾತ್ರ ಸಂಸ್ಕೃತಿ ಕಾಲದಿಂದ ಕಾಲಕ್ಕೆ ನಾನಾ ರೀತಿಯಲ್ಲಿ ಉಳಿದು ಬೆಳೆದು ಬರುತ್ತಿದೆ.

ವೈಷ್ಣವ ಪ್ರಭಾವ ಹೆಚ್ಚಿದ್ದರೆ, ಗ್ರಾಮ ಮಧ್ಯದಲ್ಲಿ ಶಾಕ್ತರಿದ್ದರೆ, ಗ್ರಾಮದ ಹೊರಗೆ, ವ್ಯಾಪಾರಿಗಳಿದ್ದರೆ, ಸ್ಮಶಾನದಲ್ಲಿ ಗಾನಪತ್ಯರಾದರೆ ಬಾಗಿಲ ಬಳಿ, ಇತರರಾದರೆ. ತೆರೆಕೊಳ್ಳಗಳ ಪಕ್ಕದಲ್ಲಿ ಕಲ್ಲಿನಿಂದ ಮರದಿಂದ ಮಣ್ಣಿನಿಂದ ಗುಡಿಗಳಲ್ಲಿ ಗ್ರಾಮದೇವತೆಗಳನ್ನು ಸ್ಥಾಪಿಸುತ್ತಿದ್ದರು.

ಅಂಬಾ ತಾಯಿ ಎನ್ನುವ ಸಂಸ್ಕಾರದ ಮಾತು ಸೌಡ ದ್ರಾವಿಡ ಪದವಾದ “ಅಮ್ಮ” ಎನ್ನುವುದರಿಂದಲೇ ಬಂದಿತೆಂದು ತಜ್ಞರು ಹೇಳುತ್ತಾರೆ. ಈಕೆಯನ್ನು ತಾಯಿ, ಕಾಯ, ಅಮ್ಮ, ಅಮ್ಮೆ, ಕಾತಾಯಿ (ಕಾಪಾಡು ತಾಯಿ) ಊರಮ್ಮ, ಊರುಕಾಪಾಡುವ ತಾಯವ್ವ ಮುಂತಾಗಿ ಕರೆಯುತ್ತಾರೆ.

ಮಾರಿಯಮ್ಮನ ನಿವಾಸ ಬೇವಿನ ಮರದಲ್ಲಿಯೇ. ಬೇವಿನೆಲೆಗಳ ಮಲಗಿ ಹಾವಿನ ತಲೆದಿಂಬ ಮಾಡಿ ಮಲಗುವಳೆಂದು ಪ್ರತೀತಿ. ಆದ್ದರಿಂದ ಬೇವು ಸೊಂಕುರೋಗಕ್ಕೆ ಸಿದ್ದಾಕ್ಷರವೆನ್ನುತ್ತಾರೆ. ಬಯ್ದು ಮಾತಾಡಿಸುವ, ಹೊಡೆದೆಬ್ಬಿಸುವ ದೇವರುಗಳೂ ನಮ್ಮಲ್ಲಿವೆ. ಉದಾಹರಣೆಗೆ “ಕೆಪ್ಪಚೌಡಿ” ಇದು ಊರ ಹೊರಗೆ ಮರದ ಕೆಳಗೆ ಒಂದು ಕಲ್ಲು ಚಪ್ಪಡಿ ಮೇಲಿರುವ ಒಂದು ಗುಂಡು. ಇದಕ್ಕೆ ಪೂಜೆಮಾಡುವಾಗ ಅಲ್ಲಿ ಒಂದು ಕಲ್ಲನ್ನು ಕುಟ್ಟಿ ಕುಟ್ಟಿ ಅನಂತರ ಪೂಜೆ ನೈವೆದ್ಯ ಮಾಡಬೇಕು.

ಜನಪದ ದೈವಗಳ ವಸತಿ ವ್ಯವಸ್ಥೆ ಸಂಕೀರ್ಣವಾದುದಲ್ಲ. ಮನೆ ದೈವ, ಕುಲದೈವ, ಊರ ದೈವಗಳೆಂದು ಹಲವು ಬಗೆಯಲ್ಲಿ ಕಾಣಬರುವ ಇವುಗಳು ಅವರವರ ಮನೋಧರ್ಮಕ್ಕೆ ತಕ್ಕಂತೆ ಅವರು ಅನುಸರಿಸಿಕೊಂಡು ಬಂದ ಆಚಾರ ವಿಚಾರ, ಒಕ್ಕಲುತನ, ಸಂಪ್ರದಾಯಗಳಿಗೆ ಅನುಗುಣವಾಗಿ ಉಳಿದು ಬಂದಿವೆ. ಕೆಲವು ದೇವರುಗಳು ಆಯಾ ಸಂದರ್ಭಕಾಲಕ್ಕೆ ಮಾತ್ರ ಹುಟ್ಟಿ ನಂತರ ಮರೆಯಾಗುತ್ತವೆ. ಉದಾಹರಣೆಗೆ ದೀಪಾವಳಿಯಲ್ಲಿ ಮನೆಯ ಹೊಸ್ತಿಲು, ಮರಮುಟ್ಟು ಬಲೆ, ತಿಪ್ಪೆ, ದನದ ಕೊಟ್ಟಿಗೆ ಮುಂತಾದ ಸ್ಥಳಗಳಲೆಲ್ಲಾ ಸಗಣಿಯಲ್ಲಿ ನಾನಬಗೆಯ ಹೂಗಳನ್ನಿಟ್ಟು ಮಾಡಿಡುವ “ಕೆರಶಪ್ಪ” ಆ ಒಂದು ದಿನಕ್ಕೆ ಮಾತ್ರ, ಪುರಾಣದ ಹಿನ್ನೆಲೆಯಲ್ಲಿ ಗ್ರಾಮೀಣ ಜನ ಕಲ್ಪಿಸಿಕೊಂಡು ಪೂಜಿಸುವ ದೈವ. ಹಾಗೆಯೇ ಬೆಳ್ದಿಂಗಳಪ್ಪನನ್ನು ಮಾಡುವುದು ಆಯಾ ಮನೆತನಕ್ಕೆ ಸಂಬಂಧಿಸಿದ ದೇವರುಗಳಾದ “ಮುಸುರೆಮ್ಮ” ಈಕೆಯ ವಸತಿ “ಎಂಜಲು ಬಾನಿಯೇ” ಇದಕ್ಕೆ ವರ್ಷದ ಯಾವುದೇ ಒಂದು ದಿನ ಪೂಜೆ ಮಾಡಿ ಹಬ್ಬ ಮಾಡುತ್ತಾರೆ. ಇದಕ್ಕೆ ಬೇರೆಯೇ ಆದ ದಂತ ಕಥೆಗಳನ್ನು ಹೇಳುತ್ತಾರೆ. ಚಿಕ್ಕಮಗಳೂರ ಜಿಲ್ಲೆಯ ಮುಳ್ಳಯ್ಯನಗಿರಿಯಲ್ಲಿ ಹರದೇವರಿದೆ. ಇದು ಡಮರುಗದಾಕಾರದಲ್ಲಿದೆ. ಇದನ್ನು ನೋಡಿದರೆ ಕೇಡಾಗುತ್ತದೆಂದು ಕಾಡಿನಲ್ಲಿ ಮುಚ್ಚಿಟ್ಟಿದ್ದು ವರ್ಷಕ್ಕೊಂದು ದಿವಸ ಹೊರತೆಗೆದು ಪೂಜಿಸುತ್ತಾರೆ. ಬಾಶಾದೇವರು ಇದು ಉದ್ದನೆಯ ಒಂದು ಕೋಲು. ಕಾಡುಗೊಕ್ಕರೆಗೆ ದೇವಸ್ಥಾನ ಹಟ್ಟಿಯ ಮಧ್ಯದಲ್ಲಿರುತ್ತದೆ. ಅದಕ್ಕೆ ಅಪು, ಹಂಚಿಗುಲ್ಲು, ಹೊದಿಸಿರುತ್ತಾರೆ. ಸುತ್ತ ಬೇಲಿ ಹೆಣೆದಿರುತ್ತಾರೆ. ದೇವಸ್ಥಾನ ಗೊಳಾಕಾರವಾಗಿದ್ದು ಬಾಗಿಲು ಚಿಕ್ಕದಾಗಿದ್ದು ಪೂರ್ವಾಭಿಮುಖವಾಗಿರುತ್ತದೆ. ಒಳಭಾಗ ತುಂಬಾ ಕಿಷ್ಕಿಂಧವಾಗಿದ್ದು ಅಲ್ಲಿ ಇಟ್ಟಿರುವ ದೇವರನ್ನು ಬಿಟ್ಟರೆ ಪೂಜಾರಿ ಮಾತ್ರ ಹೋಗಬಹುದಷ್ಟೆ. ದೇವಸ್ಥಾನಕ್ಕೆ ಬಾಗಿಯೇ ಹೋಗಬೇಕು. ೪ ಅಡಿಗಿಂತ ಎತ್ತರವಿರುವುದಿಲ್ಲ. ಇವನ್ನು “ಕುಬ್ಬ” ಎನ್ನುತ್ತಾರೆ. ಇವನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ವರ್ಗಾಯಿಸುವುದುಂಟು. ದೇವಸ್ಥಾನದ ಸುತ್ತ ಕಳ್ಳಿಬೇಲಿ ಹಾಕಿದ್ದು ಒಂದು ಕಡೆ ಮಾತ್ರ ಹೊಳೆಬಾಗಿಲು ಇರುತ್ತದೆ. ಬೇಲಿ ಒಳಗೆ ಬೇವು, ತಗ್ಗಲಿ, ಧೂಪದ ಮರ ನೆಟ್ಟಿರುತ್ತಾರೆ. ದೇವಸ್ಥಾನದ ಸುತ್ತ ಸಾಮಾನ್ಯವಾಗಿ ಹೂಗಿಡಗಳನ್ನು ನೆಡುವುದು ಎಲ್ಲ ಕಡೆಯೂ ಕಂಡು ಬರುತ್ತದೆ. ಬಾಗಿಲುಗಳಿಗೆ ಹಿತ್ತಾಳೆಯ ತಗಡು, ಗಿಣಿಗಳನ್ನು ತೂಗುದೀಪಗಳನ್ನು ಮಾಡಿಸಿರುವುದೂ ಕೆಲವು ಕಡೆ ಕಂಡು ಬರುತ್ತದೆ.

ಕೋಟೆ ಕೊತ್ತಳದ ಮ್ಯಾಲೆ ಕುಳಿತೀರೋಳವಳ್ಯಾರೆ
ಕುಂಕುಮದ ಸೀರೆ ನರಿಗೋಳೆ ಕಾಳವ್ವ
ಕುಂತು ನೋಡ್ಯಾಳೆ ಕಣಿತಾವ
ಮಾರಿಯ ಬಗ್ಗೆ ಸಾಕಷ್ಟು ವಿಚಾರಗಳು

ಗ್ರಾಮದೈವಗಳ ವಸತಿ ವ್ಯವಸ್ಥೆ ಕಣ್ಣಿಗೆ ಕಾಣಿಸುವಷ್ಟು ಸರಳವಲ್ಲ. ಅದರ ಹಿಂದಿರುವ ಮನೋಧರ್ಮವನ್ನು ಅರ್ಥಮಾಡಿಕೊಳ್ಳಬೇಕು. ಅದರ ನಂಬಿಕೆ, ವಿಶ್ವಾಸಗಳು ಮೌಲ್ಯಗಳು ಅವನ ಹೃದಯಕ್ಕೆ ಸಂಬಂಧಿಸಿದವುಗಳು. ಇವು ನಮ್ಮ ಸಂಸ್ಕೃತಿಯ ಸ್ವರೂಪ. ಆರಾಧನಾ ದೃಷ್ಟಿ ಮತ್ತು ಕಲಾದೃಷ್ಟಿ ಎರಡಕ್ಕೂ ಸಂಬಂಧವಿದೆ. ಇತ್ತೀಚೆಗೆ ಜನಪದ ದೈವಗಳ ಭಕ್ತರು ಶ್ರೀಮಂತರಾದಂತೆ ಗುಡಿಗಳ ರಚನಾ ವಿನ್ಯಾಸಗಳೂ ಬದಲಾಗುತ್ತಿವೆ. ಮೂಲ ಗುಡಿಯನ್ನಿಟ್ಟುಕೊಂಡೇ ಅವುಗಳ ಸ್ವರೂಪದಲ್ಲಿ ಬದಲಾಗದಂತೆ ಉಳಿಸಿಕೊಳ್ಳಬೇಕಾದದ್ದು ಸಾಂಸ್ಕೃತಿಕ ದೃಷ್ಟಿಯಿಂದ ಮುಖ್ಯವಾದುದ್ದಾಗಿದೆ. ಅನೇಕ ಗ್ರಾಮದೇವತೆಗಳ ಗರ್ಭಗುಡಿಗಳ ಉಲ್ಲೇಖಗಳು ನಮಗೆ ಶಾಸನಗಳಲ್ಲಿಯೂ ಲಭ್ಯವಾಗುತ್ತವೆ. ದೇವಾಲಯದ ಒಳಾವರಣದಲ್ಲಾಗಲೀ ಹೊರ ಆವರಣದಲ್ಲಾಗಲೀ ಹೆಚ್ಚು ಕೆತ್ತನೆಯ ಕುಸುರಿ ಕೆಲಸಗಳಿರುವುದಿಲ್ಲ. “ಮೂಗೂರು ತಿಬ್ಬಾದೇವಿ” ಎಂಬ ಗ್ರಾಮದೇವತೆ ಬಗ್ಗೆ ಹ. ಕ. ರಾಜೇಗೌಡರು ನಡೆಸಿರುವ ಅಧ್ಯಯನವೊಂದು ಈ ನಿಟ್ಟಿನಲ್ಲಿ ತುಂಬಾ ವತಾಳಿವಾದುದಾಗಿದೆ. ಗ್ರಾಮದೇವತೆಗಳಿಗೆ ಸಂಬಂಧಿಸಿದ ಸಾಹಿತ್ಯ ಸಂಗ್ರಹಿಸುವಂತೆಯೇ ಅವುಗಳ ವಸತಿ, ವಿನ್ಯಾಸದ ಬಗ್ಗೆ ಕ್ಷೇತ್ರ ಕಾರ್ಯ ಮಾಡಬೇಕಾದದ್ದು ತುಂಬಾ ಅವಶ್ಯಕವಾಗಿದೆ.