ತಾಲ್ಲೂಕು ಕೇಂದ್ರದಿಂದ : ೧೮ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೩೦ ಕಿ.ಮೀ

ಶ್ರೀ ಕ್ಷೇತ್ರ ಮಿಣುಕನಗುರ್ಕಿ : ಗೌರಿಬಿದನೂರಿನ ಪ್ರಮುಖ ಹೋಬಳಿ ಕೇಂದ್ರ ಮಂಚೇನಹಳ್ಳಿಯಿಂದ ೩ ಕಿ.ಮೀ. ದೂರದಲ್ಲಿರುವ ಒಂದು ಪ್ರಸಿದ್ಧ ಪೌರಾಣಿಕ ಮತ್ತು ಐತಿಹಾಸಿಕ ಸ್ಥಳ ಮಿಣಕನಗುರ್ಕಿ. ಜಿಂಕೆವನ, ರಾಶಿವನ ಹಾಗೂ ಔಷಧೀಯ ಸಸ್ಯಗಳಿಂದ ಕೂಡಿದ ಒಂದು ಸುಂದರ ತೋಟವಿದೆ. ಪುರಾಣ ಪ್ರಸಿದ್ಧ ಮಹೇಶ್ವರಿ ಅಮ್ಮನವರ ದೇವಸ್ಥಾನ ಇಲ್ಲಿನ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿದ್ದು ಸುಂದರ ಪ್ರಕೃತಿಯ ಮಡಿಲಲ್ಲಿ ದೇವಾಲಯವನ್ನು ಪೂರ್ವಾಭಿಮುಖವಾಗಿ ನಿರ್ಮಿಸಲಾಗಿದೆ.

ಶ್ರೀ ಕ್ಷೇತ್ರದಲ್ಲಿ ಶ್ರೀ ಕೊಂಡಾರ್ಯರ ಮಠ, ನವಗ್ರಹ ದೇಗುಲ, ರಾಶಿವನ, ಶ್ರೀ ಶನಿಮಹಾತ್ಮ ಸನ್ನಿಧಿ, ಶಿವ ಪಂಚಾಯತನ, ದೇವಿವನ, ಧನ್ವಂತರಿ ವನ, ಶ್ರೀ ಲಕ್ಷಿ ಕೊಳ, ಪಂಚ ಬೃಂದಾವನ, ಅಷ್ಟ ಲಕ್ಷ್ಮಿಯರ ವನ, ಜಿಂಕೆ ವನ, ತಪೋವನ ಮತ್ತು ವಿಶ್ರಾಂತಿ ವೇದಿಕೆಗಳನ್ನು ನೋಡಬಹುದು.

ಪ್ರವಾಸಿಗರ  ಅನುಕೂಲಕ್ಕಾಗಿ  ಪ್ರವಾಸೋದ್ಯಮ ಇಲಾಖೆಯವರು ಇಲ್ಲಿ ಎರಡು ಕಾಟೇಜ್ಗಳನ್ನು ಒಂದು ಡಾರ್ಮೆಂಟರಿ ಮತ್ತು ಕೊಠಡಿಗಳನ್ನು ವಸತಿ ಸೌಲಭ್ಯಕ್ಕಾಗಿ ನಿರ್ಮಿಸಿರುತ್ತಾರೆ.

 

ಹೊಸೂರು

ತಾಲ್ಲೂಕು ಕೇಂದ್ರದಿಂದ : ೧೦ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೪೫ ಕಿ.ಮೀ


ನಾಡು ಕಂಡ ಖ್ಯಾತ ಶಿಕ್ಷಣ ತಜ್ಞ ಅಪ್ರತಿಮ ಗಾಂಧೀವಾದಿ, ಪದ್ಮಭೂಷಣ ಡಾ||ಎಚ್. ನರಸಿಂಹಯ್ಯ ನವರ ಹುಟ್ಟೂರೇ ಹೊಸೂರು. ಇಲ್ಲಿ ೧೯೬೩ರಲ್ಲಿ ಸ್ಥಾಪನೆಯಾದ ಡಾ| ಎಚ್. ನರಸಿಂಹಯ್ಯ ಹೈಸ್ಕೂಲು ಇದೆ. ಈ ಶಾಲೆ ಸುಸಜ್ಜಿತ ಗ್ರಂಥಾಲಯ, ಪ್ರಯೋಗಾಲಯ, ವಿಶಾಲವಾದ ಆಟದ ಮೈದಾನ ಮತ್ತು ಭೋಜನಾ ಶಾಲೆ ಹೊಂದಿದ್ದು ಗ್ರಾಮೀಣ ವಿದ್ಯಾರ್ಥಿಗಳ ವಿದ್ಯಾವಿಕಾಸಕ್ಕೆ ವರದಾನವಾಗಿದೆ.

ಸದರಿ ಶಾಲೆಯ ಆವರಣದಲ್ಲಿ ಇನ್ಫೋಸಿಸ್ ಪೌಂಡೇಷನ್ ರವರ ಸಹಕಾರದಿಂದ ೨೯-೦೬-೨೦೦೦ರಂದು ಅಂದಿನ ರಾಜ್ಯಪಾಲರಾದ ಶ್ರೀಮತಿ ವಿ.ಎಸ್. ರಮಾದೇವಿಯವರಿಂದ ಉದ್ಘಾಟನೆಯಾದ “ಇನ್ಪೊs ಸಿಸ್ ವಿಜ್ಞಾನ ಕೇಂದ್ರ” ಎಂಬ ೬೫ ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಿತವಾದ ಭವ್ಯ ಕಟ್ಟಡವಿದೆ. ಇಲ್ಲಿ ವಿದ್ಯಾರ್ಥಿಗಳ ವಿಜ್ಞಾನದ ಕುತೂಹಲ ಕೆರಳಿಸುವ ವೈಚಾರಿಕ ಪ್ರಜ್ಞೆ ಅರಳಿಸುವ ನೂರಾರು ಕಾರ್ಯನಿರತ ವಿಜ್ಞಾನದ ಮಾದರಿಗಳು ಇದ್ದು, ಪ್ರೇಕ್ಷಕರು ತಾವೇ ಮಾಡಿ ನೋಡುವ ಮೂಲಕ ವಿಜ್ಞಾನದ ತತ್ವಗಳನ್ನು ಅರಿಯಬಹುದಾಗಿದೆ.

ಡಾ|| ಎಚ್.ಎನ್. ರವರ ದೇಹಾಂತ್ಯದ ಬಳಿಕ ಅವರಿಚ್ಚೆಯಂತೆ ಈ ಶಾಲೆಯ ಆವರಣದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಆ ಸ್ಥಳಕ್ಕೆ “ಅಮರಧಾಮ” ಎಂದು ಹೆಸರಿಡಲಾಗಿದೆ.

ಹೊಸೂರಿನಲ್ಲಿ ಎಚ್.ಎನ್. ಪ್ರಾಥಮಿಕ ಶಿಕ್ಷಣ ಪೂರೈಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅವರ ಹುಟ್ಟಿದ ಮನೆ ಕೂಡ ವೀಕ್ಷಿಸಬಹುದಾಗಿದೆ

 

ಕೋಟಾಲದಿನ್ನೆ

ತಾಲ್ಲೂಕು ಕೇಂದ್ರದಿಂದ : ೧೨ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೪೫ ಕಿ.ಮೀ

ರಾಮನ್ ರೀಸರ್ಚ್ ಇನ್ಸಿಟಿಟ್ಯೂಟ್

ರಾಮನ್ ರೀಸರ್ಚ್ ಇನ್ಸಿಟಿಟ್ಯೂಟ್

ವಿಶ್ವದ ಯಾವುದೇ ಭಾಗದಲ್ಲಿ ಭೂಕಂಪನಗಳು ಸಂಭವಿಸಿದರೂ ಅದರ ತೀವ್ರತೆಯನ್ನು ನಮೂದಿಸುವ ಕೇಂದ್ರವನ್ನು ಇಲ್ಲಿ ಸ್ಥಾಪಿಸಲಾಗಿದೆ. ಭಾಭಾ ಅಣು ಸಂಶೋಧನಾ ಕೇಂದ್ರ ಇಲ್ಲಿದೆ. ೧೯೬೫ರಲ್ಲಿ ಈ ಕೇಂದ್ರವನ್ನು ಅಣುವಿಜ್ಞಾನಿ ಡಾ|| ಹೋಮಿ ಜಹಾಂಗೀರ್ ಭಾಭಾ ಅವರ ನೇತೃತ್ವದಲ್ಲಿ ಭಾರತ ಸರ್ಕಾರ ಸ್ಥಾಪನೆ ಮಾಡಿತು. ಪ್ರಸ್ತುತ ಇದು ಮುಂಬೈ ಪರಮಾಣು ಇಂಧನ ಶಾಖೆಯ ಆಡಳಿತಕ್ಕೆ ಒಳಪಟ್ಟಿದೆ.

ವಿಶ್ವದಲ್ಲೇ ಪ್ರಸಿದ್ಧಿ ಹೊಂದದ ಆಂಗ್ಲಭಾಷೆಯ ’ಐ’ ಆಕಾರದಲ್ಲಿ ೨೦ ಕಾಲ್ಪನಿಕ ಕಂಪನಗಳನ್ನು ನಮೂದಿಸುವ ಹಾಗೂ ಮೂರು ದೀರ್ಘಕಾಲಿಕ ಕಂಪನಗಳನ್ನು ನಮೂದಿಸುವ ಸಲಕರಣೆಗಳನ್ನು ಇಲ್ಲಿ ಅಳವಡಿಸಲಾಗಿದೆ. ಇವುಗಳಿಂದ ಪಡೆದ ಕಂಪನಗಳ ಸಂಕೇತಗಳನ್ನು ಕೇಂದ್ರದಲ್ಲಿರುವ ಗಣಕಯಂತ್ರಗಳು ಸ್ವೀಕರಿಸಿ ಡಿಜಿಟಲ್ ರೂಪಕ್ಕೆ ತರುತ್ತವೆ. ಈ ಮಾಹಿತಿಯಿಂದ ಭೂಮಿಯು ಕಂಪಿಸಿದ ಸ್ಥಳ ಮತ್ತು ತೀವ್ರತೆಯನ್ನು ವಿಜ್ಞಾನಿಗಳು ಕಂಡುಕೊಳ್ಳುತ್ತಾರೆ.

ಇದರ ಸನಿಹದಲ್ಲೇ ೧೦೦೦ಕ್ಕೂ ಹೆಚ್ಚು ‘ಖಿ’ಆಕಾರದ ರೇಡಿಯೋ ದೂರದರ್ಶಕಗಳನ್ನು ಹೊಂದಿರುವ ರಾಮನ್ ರೀಸರ್ಚ್ ಇನ್ಸಿಟಿಟ್ಯೂಟ್ ಕೂಡ ಇದೆ. ಇಲ್ಲಿ ದೂರದ ಗೆಲಾಕ್ಸಿಗಳಿಂದ ಬರುವ ರೇಡಿಯೋ ಸಂಕೇತಗಳನ್ನು ಗ್ರಹಿಸಿ ಅಭ್ಯಸಿಸಲಾಗುತ್ತದೆ.

ವಿ.ಸೂ.: ಈ ಎರಡೂ ಕೇಂದ್ರಗಳು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರಗಳಾಗಿದ್ದು ಪೂರ್ವಾನುಮತಿ ಇಲ್ಲದೇ ಭೇಟಿ ಮಾಡಲು ಅವಕಾಶವಿರುವುದಿಲ್ಲ.

 

ವಿದುರಾಶ್ವತ್ಥ

ತಾಲ್ಲೂಕು ಕೇಂದ್ರದಿಂದ: ೮ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೪೨ ಕಿ.ಮೀ

ವಿದುರಾಶ್ವತ್ಥದಲ್ಲಿರುವ ಅಶ್ವತ್ಥ ವೃಕ್ಷ

ವಿದುರಾಶ್ವತ್ಥದಲ್ಲಿರುವ ಅಶ್ವತ್ಥ ವೃಕ್ಷ

ಗೌರಿಬಿದನೂರು ಪಟ್ಟಣದಿಂದ ಉತ್ತರ ದಿಕ್ಕಿಗೆ ಉತ್ತರ ಪಿನಾಕಿನಿ ನದಿಯ ತೀರದಲ್ಲಿ ಇರುವ ಪುಣ್ಯಕ್ಷೇತ್ರವೇ ವಿದುರಾಶ್ವತ್ಥ. ದ್ವಾಪರಯುಗದಲ್ಲಿ ವಿದುರ ದೇವರು ಈ ಕ್ಷೇತ್ರದಲ್ಲಿ ನೆಲಸಿ ಅಶ್ವತ್ಥ ವೃಕ್ಷ ನೆಟ್ಟು ನಾಗರ ಪ್ರತಿಷ್ಠಾಪನೆ ಮಾಡಿದರೆಂದು ಪುರಾಣಗಳು ಹೇಳುತ್ತವೆ. ಇಲ್ಲಿ ನೂರಾರು ಭಕ್ತರು ಪ್ರತಿಷ್ಠಾಪಿಸಿದ ನಾಗರಕಲ್ಲುಗಳು ಇವೆ. ಇಲ್ಲಿನ ಮುಖ್ಯ ದೇವರು ಶ್ರೀ ಅಶ್ವತ್ಥನಾರಾಯಣಸ್ವಾಮಿ ಆಗಿದ್ದು ಪ್ರತಿ ನಿತ್ಯ ನೂರಾರು ಭಕ್ತರು ಭೇಟಿ ನೀಡುವ ಪ್ರಮುಖ ಯಾತ್ರಾ ಸ್ಥಳವಾಗಿದೆ.

 

ವಿದುರಾಶ್ವತ್ಥ ಚಾರಿತ್ರಿಕ ಹಿನ್ನೆಲೆ
ತಾಲ್ಲೂಕು ಕೇಂದ್ರದಿಂದ: ೮ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೪೨ ಕಿ.ಮೀ

ಹುತಾತ್ಮರ ಸ್ಮಾರಕ

ಹುತಾತ್ಮರ ಸ್ಮಾರಕ

ಗಾಂಧೀಜಿಯವರ ಕರೆಗೆ ಓಗೊಟ್ಟು ಸ್ವಾತಂತ್ರ ಆಂದೋಲನದಲ್ಲಿ ಧುಮುಕಿ ಬ್ರಿಟಿಷರು ಹೋರಾಡಿ ಮಡಿದ ಸತ್ಯ ಕಥೆಯೇ ವಿದುರಾಶ್ವತ್ಥ ಹತ್ಯಾಕಾಂಡ. ೧೯೩೮ರಲ್ಲಿ ಶಿವಪುರದಲ್ಲಿ ನಡೆದ ಧ್ವಜ ಸತ್ಯಾಗ್ರಹ ನಡೆಸಲು ತೀರ್ಮಾನಿಸಿ ಈ ಧ್ವಜ ಸತ್ಯಾಗ್ರಹವನ್ನು  ವಿದುರಾಶ್ವತ್ಥದಲ್ಲಿ ನಡೆಸಲು ಅಣಿಯಾದರು. ೧೯೩೮ ಏಪ್ರಿಲ್ ೨೫ರಂದು ವಿದುರಾಶ್ವತ್ಥದಲ್ಲಿ ಧ್ವಜ ಸತ್ಯಾಗ್ರಹ ಪ್ರಾರಂs ಯಿತು. ಈ ಕಾರ್ಯವ ವನ್ನು ಸಹಿಸದ ಬ್ರಿಟಿಷ್ ಸರ್ಕಾರ ಸತ್ಯಾಗ್ರಹಿಗಳ ಮೇಲೆ ಲಾಠಿ ಪ್ರಹಾರ ಮತ್ತು ಬಂದೂಕುಗಳಿಂದ ಗುಂಡಿನ ಮಳೆಗೆರೆಯಿತು. ಇದರಿಂದ ಒಂಬತ್ತು ಮಂದಿ ಸತ್ಯಾಗ್ರಹಿಗಳು ಹುತಾತ್ಮರಾದರು. ಈ ಘಟನೆ ಪ್ರಪಂಚದಾದ್ಯಂತ ಹರಡಿ ಭಾರತೀಯರಲ್ಲಿ ಸ್ವಾತಂತ್ರ ದ ಜಾಗೃತಿಯನ್ನು ಇಮ್ಮಡಿಗೊಳಿಸಿತು. ಈ ಜಾಗೃತಿಯ ಫಲವೇ ಬ್ರಿಟಿಷರ ಬಿಗಿ ಮುಷ್ಠಿಯಿಂದ ಭಾರತದ ಮುಕ್ತಿಗೆ ನೆರವಾಯಿತು. ಇತಿಹಾಸದ ಪುಟಗಳಲ್ಲಿ ವಿದುರಾಶ್ವತ್ಥ “ಕರ್ನಾಟಕದ ಜಲಿಯನ್ ವಾಲಾಬಾಗ್” ಎಂದು ಖ್ಯಾತಿ ಪಡೆದಿದೆ. ಹುತಾತ್ಮರ ಸ್ಮರಣೆಗಾಗಿ ದೇವಾಲಯದ ಹಿಂಭಾಗದಲ್ಲಿ ಸ್ಮಾರಕ ನಿರ್ಮಿಸಿದೆ. ೫೦ನೇ ಂμಂಜzಂ ಸ್ವಾತಂತ್ರ್ಯೋತ್ಸವದ ಸವಿನೆನಪಿಗಾಗಿ “ ವೀರಸೌಧ ” ನಿರ್ಮಿಸಿದೆ. ಇದರಲ್ಲಿ ಸುಸಜ್ಜಿತವಾದ ಗ್ರಂಥಾಲಯ ಹಾಗೂ ಸ್ವಾತಂತ್ರ‍್ಯ ಹೋರಾಟ ಚಿತ್ರಗಳನ್ನು ಒಳಗೊಂಡ ಗ್ಯಾಲರಿಯು ಸಹ ಸೇರಿದೆ. ಸ್ವಾತಂತ್ರ  ಹೋರಾಟದ ಚಲನಚಿತ್ರಗಳನ್ನು ಪ್ರದರ್ಶಿಸಲು ವ್ಯವಸ್ಥೆ ಇರುತ್ತದೆ.