ಕೆಲವು ಸಾಮಾನ್ಯ ಪ್ರಶ್ನೆಗಳು

೧. ಗ್ರಹಣ ಕಾಲದಲ್ಲಿ ಅಪಾಯಕಾರಿ ವಿಕಿರಣಗಳು ಹೊಮ್ಮುತ್ತವೆಯೆ?
(ದಿನನಿತ್ಯದ ವಿಕಿರಣಗಳಿಗಿಂತ ಭಿನ್ನವಾದ ಗ್ರಹಣ ವಿಕಿರಣ ಹೊಮ್ಮುವುದಿಲ್ಲ).

೨. ಗರ್ಭಿಣಿಯರ ಮೇಲೆ ಗ್ರಹಣ,ಹೆಚ್ಚು ದುಷ್ಪರಿಣಾಮ ಬೀರುವುದೆ?
(ಇದುವರೆಗಿನ ಸಮೀಕ್ಷೆಯಿಂದ ಇದು ಕಂಡುಬಂದಿಲ್ಲ)

೩. ತಟ್ಟೆಯ ನೀರಿನಲ್ಲಿ ಸಾಕಷ್ಟು ತಣಿದ ಸೂರ್ಯ ಪ್ರತಿಬಿಂಬವನ್ನು ನೋಡುವುದು ಸುರಕ್ಷಿತವಷ್ಟೆ?
(ಪ್ರತಿಬಿಂಬದ ತೀವ್ರತೆ ಸಾಕಷ್ಟು ಕಡಿಮೆ ಇರುವುದು ಮುಖ್ಯ.  ನೀರಿನ ಮೈಯಿಂದ ಕಾಣುವ ಪ್ರಖರ ಪ್ರತಿಬಿಂಬವನ್ನು ನೋಡಬಾರದು)

೪. ಗ್ರಹಣ ನೋಡಲು ದೂರದರ್ಶಕ ಬೇಕೆ?
(ಖಂಡಿತವಾಗಿ ಬೇಡ)

೫. ಗ್ರಹಣ ವೀಕ್ಷಣೆಯಿಂದ ಕಣ್ಣಿಗೆ ಹಾನಿಯಾದ ದೃಷ್ಟಾಂತಗಳಿಲ್ಲವೆ?
(ಇವೆ. ಜಾಗರೂಕತೆಯ ಕ್ರಮಗಳನ್ನು ಪಾಲಿಸದೆ ನೋಡುವುದು ಅಪಾಯ. ಅಗೋಚರ ಅವಕೆಂಪು ಕಿರಣಗಳನ್ನು ಕೂಡ ಹಾದು ಹೋಗಲು ಬಿಡದ ಫಿಲ್ಟರುಗಳಿಂದ ಗ್ರಹಣ ನೋಡಬೇಕು).

೬. ಸೂರ್ಯನನ್ನು ದಿನನಿತ್ಯವೂ ಅಧ್ಯಯಿಸಬಹುದಲ್ಲ? ಗ್ರಹಣ ಕಾಲದಲ್ಲೇನು ವಿಶೇಷ?
(ಸೂರ್ಯನ ಹೊರ ಕರೋನದ ಅಧ್ಯಯನಕ್ಕೆ ಇತರ ಬೆಳಕಿನ ಪ್ರಖರತೆ ಕಡಿಮೆಯಾಗಿರುವ ಪೂರ್ಣ ಸೂರ್ಯಗ್ರಹಣ ಕಾಲವೇ ಬಹಳ ಪ್ರಶಸ್ತ).

* * *