ಕರ್ನಾಟಕದಲ್ಲಿದ್ದುಕ್ಕೊಂಡು ಈ ಬಾರಿ ಪೂರ್ಣ ಸೂರ್ಯಗ್ರಹಣ ದರ್ಶನದ ‘ಪೂರ್ಣ ಅನುಭವ’ವನ್ನು ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಗುಜರಾತ್, ಮಧ್ಯ ಮತ್ತು ಉತ್ತರ ಪ್ರದೇಶಗಳಲ್ಲಿ ಆಪ್ತರು, ಬಂಧುಗಳು ಇದ್ದರೆ ಅವರ ಸಹಕಾರದಿಂದ ಪೂರ್ಣತೆಯ ಪಥದಲ್ಲಿ ಸುರಕ್ಷಾ ಫಿಲ್ಟರುಗಳೊಂದಿಗೆ ಹಾಜರಾಗಲು ಪ್ರಯತ್ನಿಸಿ. ವ್ಯವಸ್ಥಿತವಾಗಿ ಪಯಣವನ್ನೂ ವೀಕ್ಷಣೆಯನ್ನೂ ನಿಯೋಜಿಸುವವರಿದ್ದರೆ ಅವರನ್ನು ಸಂಪರ್ಕಿಸಿ. ಪತ್ರಿಕೆಗಳ ಮೂಲಕ ಅಂಥ ಸಂಘ ಸಂಸ್ಥೆಗಳನ್ನೂ ಸುರಕ್ಷಾ ಫಿಲ್ಟರುಗಳನ್ನು ಸರಬರಾಜು ಮಾಡುವವರನ್ನೂ ನೀವು ತಿಳಿಯುವಿರಿ. ಮನತುಂಬುವ ನೋಟ ನಿಮ್ಮ ಪಾಲಿಗಿರಲಿ. ಎಚ್ಚರಿಕೆಯ ಪ್ರಜ್ಞೆ ತಪ್ಪದಿರಲಿ.