ಕಾಲಗಣನೆಗಾಗಿ ಕ್ರಾಂತಿ ವೃತ್ತವನ್ನು ೧೨ ವಿಭಾಗಗಳಾಗಿ ಮಾಡಿ ಅವನ್ನು ಕ್ರಮವಾಗಿ ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಬ ಮತ್ತು ಮೀನ ರಾಶಿಗಳ ಹೆಸರುಗಳಿಂದ ಕರೆಯುತ್ತಾರಷ್ಟೆ? ಗ್ರಹಣವನ್ನು ಚಂದ್ರ ಮತ್ತು ಸೂರ್ಯರಿರುವ ರಾಶಿ ಮತ್ತು ಆ ರಾಶಿಯಲ್ಲಿರುವ ಪರ್ವಬಿಂದುವಿನ ಹೆಸರಿನಿಂದ ಕರೆಯುವ ಸಂಪ್ರದಾಯವಿದೆ. ೧೯೮೦ರ – ಫೆಬ್ರವರಿಯಲ್ಲಿ ಸೂರ್ಯ, ಚಂದ್ರರು ಕುಂಬರಾಶಿ – ಯಲ್ಲಿರುವಾಗ ಕೇತುಬಿಂದು ಅದೇ ರಾಶಿಯಲ್ಲಿತ್ತು. ಆದ್ದರಿಂದ ಅಂದಿನದು ಕುಂಭರಾಶಿಯಲ್ಲಿ ಸೂರ್ಯನಿಗೆ ಕೇತು ಗ್ರಹಣ. ೧೯೯೫ನೇ ವರ್ಷ ಆಕ್ಟೋಬರಿನಲ್ಲಿ ತುಲಾ ರಾಶಿಯಲ್ಲಿ ಸೂರ್ಯನಿಗೆ ರಾಹು ಗ್ರಹಣವಾಯಿತು. ಹಾಗೆಯೇ ೧೯೯೯ನೇ ಆಗಸ್ಟ್ ೧೧ರಂದು ಕರ್ಕಾಟಕ ರಾಶಿಯಲ್ಲಿ ಸೂರ್ಯನಿಗೆ ರಾಹುಗ್ರಹಣ. ೨೦೦೯ನೇ ಜುಲೈ ೨೨ರಂದು ನಡೆಯುವುದು ಕೇತು ಗ್ರಹಣ – ಕರ್ಕಾಟಕ ರಾಶಿಯಲ್ಲಿ (ಚಿತ್ರ ೧೪).
ಗ್ರಹಣ : ಗ್ರಹಣದ ಹೆಸರು
By kanaja|2016-11-08T03:55:58+05:30January 22, 2012|ಕನ್ನಡ, ಖಗೋಳ ವಿಜ್ಞಾನ, ಗ್ರಹಣ, ನೈಸರ್ಗಿಕ ವಿಜ್ಞಾನ, ವಿಜ್ಞಾನ|0 Comments
Leave A Comment