ಒಟ್ಟಿನ ಮೇಲೆ ಸೂರ್ಯಗ್ರಹಣಗಳಲ್ಲಿ ಪೂರ್ಣ, ಕಂಕಣ, ಸಂಕರ ಅಥವಾ ಹೈಬ್ರಿಡ್ (ಪೂರ್ಣ ಮತ್ತು ಕಂಕಣ ಗ್ರಹಣಗಳೆರಡೂ ಬೇರೆ ಬೇರೆ ಜಾಗಗಳಲ್ಲಿ ತೋರುವ ಸನ್ನಿವೇಶ) ಮತ್ತು ಪಾರ್ಶ್ವ (ಅಥವಾ ಖಂಡ) ಗ್ರಹಣಗಳೆಂದು ನಾಲ್ಕು ವಿಧಗಳನ್ನು ಗುರುತಿಸಬಹುದು. ಹಾಗೆಯೇ ಚಂದ್ರಗ್ರಹಣಗಳಲ್ಲಿ ಪೂರ್ಣ, ಖಂಡ (ಪಾರ್ಶ್ವ ಅಥವಾ ಆಂಶಿಕ) ಮತ್ತು ಪಿನಂಬ್ರ ಗ್ರಹಣಗಳೆಂದು ಮೂರು ವಿಧಗಳನ್ನು ಗುರುತಿಸಬಹುದು. ಇವುಗಳಲ್ಲಿ ಕಡಿಮೆ ಅವಧಿಗೆ ಮಾತ್ರ ತೋರಿಸಿಕೊಳ್ಳುತ್ತ, ನೋಡಿದವರ ಮೇಲೆ ಮರೆಯಲಾಗದ ಛಾಪು ಬೀರುತ್ತ ವಿರಳವಾಗಿ ಮರೆಯುವ ಪೂರ್ಣ ಸೂರ್ಯಗ್ರಹಣದ ವಿವರಣೆಗೆ ಈ ಬರಹ ಸೀಮಿತವಾಗಿದೆ.