೧. ವೀಕ್ಷಣೆಗೆ ಅನುಕೂಲವಾದ ಸ್ಥಳದ ಆಯ್ಕೆ ಮಾಡುವುದು.

೨. ವೀಕ್ಷಣಾ ಸ್ಥಾನದ ಅಕ್ಷಾಂಶ, ರೇಖಾಂಶ, ಸಮುದ್ರ ಮಟ್ಟದಿಂದ ಅದರ ಎತ್ತರ  –  ಇವನ್ನು ದಾಖಲಿಸುವುದು.

೩. ಸ್ವರ್ಶ ಬಿಂದುಗಳ ಕಾಲವನ್ನು ದಾಖಲು ಮಾಡುವುದು.

 

ಚಿತ್ರ ೨೬: ೧೯೯೯ನೇ ಆಗಸ್ಟ್ ೧೧ರ ಪೂರ್ಣತೆಯ ಕಲ್ಪನಾ ಚಿತ್ರ. ಚಂದ್ರಬಿಂಬ ಕೆಳಗಿನಿಂದ (ಪಶ್ಚಿಮ) ಮೇಲಕ್ಕೆ (ಪೂರ್ವ) ಚಲಿಸುತ್ತ ಸೂರ್ಯ ಬಿಂಬವನ್ನು ಮರೆಮಾಚುತ್ತದೆ. ಆಗ್ನೇಯದಲ್ಲಿ (ಮೇಲಕ್ಕೆ ಎಡ) ಶುಕ್ರ ಗ್ರಹ ಮತ್ತು ಮಖಾ ನಕ್ಷತ್ರ ಮಿನುಗುತ್ತವೆ. ಉಳಿದ ಅಕಾಶಕಾಯಗಳನ್ನು ಚಿತ್ರದಲ್ಲಿ ತೋರಿಸಿಲ್ಲ.

೪. ಯುಕ್ತ ಫಿಲ್ಟರುಗಳನ್ನು ವೀಕ್ಷಣೆಗಾಗಿ ಸಿದ್ಧಪಡಿಸುವುದು.

೫. ದೂರದರ್ಶಕವನ್ನು ಉಪಯೋಗಿಸಿ / ಉಪಯೋಗಿಸದೆ ಸೂರ್ಯನ ಪ್ರತಿಬಿಂಬವನ್ನು ವೀಕ್ಷಣೆಗಾಗಿ ಪ್ರಕ್ಷೇಪಿಸುವುದು.

೬. ಗ್ರಹಣದಿಂದಾಗಿ ಬೆಳಕಿನ ತೀವ್ರತೆ ಕಡಿಮೆಯಾಗುವುದನ್ನು ಅಳೆಯುವುದು.

೭. ಗ್ರಹಣ ಕಾಲದಲ್ಲಿ ಉಷ್ಣತೆ ಕಡಿಮೆಯಾಗುವುದನ್ನು ಅಳೆಯುವುದು.

೮. ರೇಡಿಯೊ ದೂರದರ್ಶಕದಿಂದ ವಿದ್ಯುತ್‌ಕಾಂತೀಯ ಕ್ಷೋಬೆಗಳನ್ನು ದಾಖಲಿಸುವುದು.

೯. ಸೂರ್ಯನ ಸ್ಥಾನವನ್ನು, ಅದರ ಕೋನೀಯ ವ್ಯಾಸವನ್ನು ಹಾಗೂ ಚಲನೆಯ ವೇಗವನ್ನು ಕಂಡುಹಿಡಿಯುವುದು.

೧೦. ಅಂಬ್ರದ ಪಥದಲ್ಲಿ ಉತ್ತರ ಮತ್ತು ದಕ್ಷಿಣದ ಗಡಿಗಳನ್ನು ಈಗಾಗಲೇ ಮುನ್ಸೂಚಿಸಿದ ಗಡಿಗಳೊಂದಿಗೆ ತಾಳೆ ನೋಡುವುದು.

೧೧. ನೆರಳಿನ ಪಟ್ಟೆಗಳನ್ನೂ ಮರದ ನೆರಳುಗಳನ್ನೂ ವೀಕ್ಷಿಸುವುದು.

೧೨. ಬೈಲಿ ಮಣಿಗಳನ್ನು ವೀಕ್ಷಿಸುವುದು.

೧೩. ಪ್ರಬಾ ಸಂವೇದೀ ಗಿಡಗಳನ್ನೂ ಪ್ರಾಣಿ ವರ್ತನೆಗಳನ್ನೂ ವೀಕ್ಷಿಸುವುದು.

೧೪. ವಜ್ರದುಂಗುರವನ್ನು ವೀಕ್ಷಿಸುವುದು.

೧೫. ಗ್ರಹಣಕ್ಕೆ ಸಂಬಂಧಿಸಿದಂತೆ ವಿವಿಧ ವ್ಯಕ್ತಿಗಳ ವರ್ತನೆಗಳನ್ನೂ ಮೂಡನಂಬಿಕೆಗಳ ಬಗ್ಗೆ ಅವರ ಧೋರಣೆಗಳನ್ನೂ ತಿಳಿಯುವುದು.

೧೬. ದೂರದರ್ಶಕವಿಲ್ಲದೆ ಹಾಗೂ ದೂರದರ್ಶಕವನ್ನು ಉಪಯೋಗಿಸಿ ಫೋಟೋ ತೆಗೆಯುವುದು. ವಿಡಿಯೊ (ದೃಶ್ಯ) ದಾಖಲೆ ಮಾಡುವುದು.

೧೭. ಪೂರ್ಣತೆಯ ಕಾಲದಲ್ಲಿ a) ಗ್ರಹ, ಧೂಮಕೇತುಗಳನ್ನು (b) ಕರೋನದ ಆಕಾರವನ್ನು (c) ನಕ್ಷತ್ರಗಳನ್ನು ವೀಕ್ಷಿಸುವುದು.

೧೮. ಸೂರ್ಯ, ಚಂದ್ರ, ಭೂಮಿಗಳ ಬಗ್ಗೆ ಹೆಚ್ಚು ತಿಳುವಳಿಕೆ.

೧೯. ಸೂರ್ಯ, ಚಂದ್ರ, ಭೂಮಿಗಳ ರಾಶಿ ಮತ್ತು ತ್ರಿಜ್ಯಗಳನ್ನೂ ಭೂಮಿಯಿಂದ ಸೂರ್ಯ, ಚಂದ್ರರಿಗಿರುವ ದೂರವನ್ನೂ ಸೈದ್ಧಾಂತಿಕವಾಗಿ ನಿರ್ಣಯಿಸುವುದು.

೨೦. ತಂಡ, ಸಾಮಾನು, ಆಯಕಟ್ಟು, ದತ್ತಾಂಶಗಳ ದಾಖಲೆ, ವರದಿಗಳೇ ಮೊದಲಾದವುಗಳ ನೆಲೆಯಿಂದ ಯಾವುದೇ ಒಂದು ಯೋಜನೆಯನ್ನು ಸಂಯೋಜಿಸುವುದು.