ಪೂರ್ಣತಾ ಪಥದ ದಕ್ಷಿಣ ಮತ್ತು ಉತ್ತರದಲ್ಲಿ ಪಿನಂಬ್ರ ಛಾಯೆಯ ಭಾಗಗಳಲ್ಲಿ ಪಾರ್ಶ್ವ ಸೂರ್ಯಗ್ರಹಣ (ಅಥವಾ ಖಂಡ ಗ್ರಾಸ)ವನ್ನು ನೋಡಬಹುದು. ಕರ್ನಾಟಕವು ಪೂರ್ಣತಾ ಪಥದ ದಕ್ಷಿಣಕ್ಕಿದೆ. ಆದ್ದರಿಂದ ಕರ್ನಾಟಕದಲ್ಲಿ ಈ ಬಾರಿ ನಾವು ನೋಡಬಹುದಾದದ್ದು ಕೇವಲ ಪಾರ್ಶ್ವ ಸೂರ್ಯಗ್ರಹಣವನ್ನು. ಇದನ್ನೂ ಬರಿಗಣ್ಣಿನಿಂದ ನೋಡಬಾರದು.

ಕರ್ನಾಟಕದ ವೀಕ್ಷಕರು ಪೂರ್ಣತಾ ಪಥದಲ್ಲಿರುವ ವೀಕ್ಷಕರಿಗಿಂತ ಹೇಗೆ ಭಿನ್ನವಾಗಿ ನೋಡುತ್ತಾರೆ ಎಂಬುದನ್ನು ಪರಿಶೀಲಿಸಿ ಪಿನಂಬ್ರವು ಉಂಟುಮಾಡುವ ಬದಲಿ ಸನ್ನಿವೇಶವನ್ನು ಅರ್ಥಯಿಸಬಹುದು.