ಪೂರ್ಣ ಸೂರ್ಯಗ್ರಹಣ

ನೋಡುವವರನ್ನು ಅತೀವ ಬೆರಗುಗೊಳಿಸುವ ಒಂದು ಖಗೋಲ ವಿದ್ಯಮಾನ  –  ಪೂರ್ಣ ಸೂರ್ಯಗ್ರಹಣ. ಇದನ್ನೇ ಖಗ್ರಾಸ ಸೂರ್ಯಗ್ರಹಣ ಎಂದೂ ಕರೆಯುವರು. ೨೧ನೇ ಶತಮಾನದಲ್ಲಿ ಒಂದೆಡೆ ಅತಿ ಹೆಚ್ಚು ಅವಧಿಯ ಪೂರ್ಣ ಸೂರ್ಯಗ್ರಹಣ ಈ ವರ್ಷ (೨೦೦೯) ಜುಲೈ ೨೨ರಂದು ನಡೆಯಲಿದೆ. ಅಷ್ಟು ಅವಧಿಯ ಪೂರ್ಣ ಸೂರ್ಯಗ್ರಹಣ ೨೧ನೇ ಶತಮಾನದಲ್ಲಿ ಬೇರೆ ಇಲ್ಲ. ಅಂದು ಪೂರ್ವಾಹ್ನ ಕೆಲವು ಮಿನಿಟುಗಳ ಅವಧಿಯ ತನಕ ಇದನ್ನು ಉತ್ತರ ಭಾರತದ ಕೆಲವು ಸ್ಥಳಗಳಲ್ಲಿ ನೋಡಬಹುದು. ಭಾರತದಲ್ಲಿ ಮುಂದಿನ ಪೂರ್ಣ ಸೂರ್ಯಗ್ರಹಣ ಕಾಣಿಸುವುದು ೨೦೩೪ನೇ ಮಾರ್ಚ್ ೨೦ರಂದು.