ನೀರು ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಒಂದು ಪ್ರಮುಖ ಅಂಶವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಾಸವಾಗಿರುವ ಜನರಿಗೆ ಸುರಕ್ಷಿತ ಮತ್ತು ಅಗತ್ಯ ಪ್ರಮಾಣದಷ್ಟು ಪ್ರಮಾಣದ ನೀರಿನ ಕೊರತೆ ಅನುಭವಿಸುತ್ತಿದ್ದಾರೆ. ಈ ಕೊರತೆಯಿಂದಾಗಿ ತನ್ನ ಸುತ್ತಮುತ್ತಲಿನ ಪರಿಸರ ಮಲಿನಗೊಂಡಿರುತ್ತದೆ. ಇಂತಹ ಸ್ಥಳಗಳಲ್ಲಿ ವಾಸಿಸುವುದರಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದನ್ನು ಗಮನಿಸಿದ ಸರಕಾರ ಹಳ್ಳಿಯ ಜನರಿಗೆ ಸುರಕ್ಷಿತವಾದ ಕುಡಿಯುವ ನೀರು ಮತ್ತು ನೈರ್ಮಲ್ಯ ಸೌಲಭ್ಯ ಒದಗಿಸಲು ಅನೇಕ ಕಾರ್ಯಕ್ರಮಗಳನ್ನು ಗ್ರಾಮ ಪಂಚಾಯ್ತಿಗಳ ಮೂಲಕ ಅನುಷ್ಟಾನಗೊಳಿಸುತ್ತಿದೆ. ಅಂತಹ ಗ್ರಾಮ ಪಂಚಾಯ್ತಿಗಳಲ್ಲಿ ಕೃಷ್ಣನಗರ ಗ್ರಾಮ ಪಂಚಾಯ್ತಿಯಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿ ವಿಶ್ಲೇಷಿಸಲಾಗಿದೆ.

ಮಾಹಿತಿ ವಿಶ್ಲೇಷಣೆ

ಕೃಷ್ಣನಗರ ಗ್ರಾಮ ಪಂಚಾಯತಿ ಕುಟುಂಬಗಳ ವಿವರ ಜಾತಿವಾರು

ಕ್ರ.

ಜಾತಿಗಳು

ಕೃಷ್ಣನಗರ ಗ್ರಾ.ಪಂಚಾಯ್ತಿ ಕೃಷ್ಣನಗರ ದೌಲತ್‌ಪುರ
ಕುಟುಂಬಗಳ ಸಂಖ್ಯೆ ಶೇ.ವಾರು ಕುಟುಂಬಗಳ ಸಂಖ್ಯೆ ಶೇ.ವಾರು ಕುಟುಂಬಗಳ ಸಂಖ್ಯೆ ಶೇ.ವಾರು
೧. ಮುಸ್ಲಿಂ ೧೦೦ ೬೨.೫೦ ೫೬ ೫೬.೦೦ ೪೪ ೭೩.೩೩
೨. ಕುರುಬರು ೨೩ ೧೪.೩೮ ೨೩ ೨೩.೦೦
೩. ಲಿಂಗಾಯತರು ೦೫.೦೦ ೦೪ ೦೪.೦೦ ೦೪ ೬.೬೭
೪. ಮಾದಿಗರು ೧೨ ೦೭.೫೦ ೦೪ ೦೪.೦೦ ೦೮ ೧೩.೩೩
೫. ಮರಾಠರು ೦೪ ೦೨.೫೦ ೦೪ ೦೪.೦೦
೬. ಹಜಾಮರು ೦೩ ೦೧.೮೭ ೦೩ ೦೩.೦೦
೭. ನಾಯಕರು ೦೨ ೦೧.೨೫ ೦೨ ೦೨.೦೦
೮. ಬಡಿಗೇರು ೦೨ ೦೧.೨೫ ೦೧ ೦೧.೦೦ ೦೧ ೧.೬೭
೯. ಮಡಿವಾಳರು ೦೨ ೦೧.೨೫ ೦೧ ೦೧.೦೦ ೦೧ ೦೧.೬೭
೧೦. ಇತರೆ ೦೪ ೦೨.೫೦ ೦೨ ೦೨.೦೦ ೦೨ ೩.೩೩
  ಒಟ್ಟು ೧೬೦ ೧೦೦.೦೦ ೧೦೦ ೧೦೦.೦೦ ೬೦ ೧೦೦.೦೦

ಕುಡಿಯುವ ನೀರು, ನೈರ್ಮಲ್ಯಸೌಲಭ್ಯಗಳನ್ನು ಪಡೆಯುವ ಸಾಮರ್ಥ್ಯ ಮತ್ತು ಜಾತಿ, ಆರ್ಥಿಕ ಸ್ಥಿತಿ ಇವುಗಳ ನಡುವೆ ಆಂತರಿಕ ಸಂಬಂಧವಿರುತ್ತದೆ. ನಮ್ಮ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡ ಒಟ್ಟು ೧೬೦ ಕುಟುಂಬಗಳಲ್ಲಿ ಜಾತಿವಾರು ನೋಡಿದಾಗ ಶೇ. ೬೨ರಷ್ಟು ಮುಸ್ಲಿಂ ಕುಟುಂಬಗಳು ಇದ್ದು ಜನಸಂಖ್ಯೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ. ಕುರುಬರು ೧೪.೩೮ ಎರಡನೆಯ ಸ್ಥಾನದಲ್ಲಿದ್ದಾರೆ. ಪರಿಶಿಷ್ಟರು ೭.೫೦ರಷ್ಟಿದ್ದು ನಾಯಕರು, ಬಡಿಗೇರರು, ಮಡಿವಾಳರು ತಲಾ ಶೇ. ೧.೨೫ ರಷ್ಟಿದ್ದರೆ, ಹಡಪದವರು ೧.೮೭ರಷ್ಟಿದ್ದಾರೆ. ಉಳಿದಂತೆ ಮರಾಠರು ಮತ್ತು ಇತರೆ ಜಾತಿ ಕುಟುಂಬಗಳು ಸಮವಾಗಿ ಶೇ. ೨.೫೦ರ ಪ್ರಮಾಣದಲ್ಲಿದೆ. ಜಾತಿವಾರು ಕುಟುಂಬಗಳನ್ನು ಗ್ರಾಮವಾರು ನೋಡಿದಾಗ ಎರಡು ಹಳ್ಳಿಗಳು ಮುಸ್ಲಿಂ ಕುಟುಂಬಗಳು (ಶೇ. ೬೨.೫೦) ೭೩.೩೦ ಅಧಿಕ ಸಂಖ್ಯೆಯಲ್ಲಿವೆ. ಕುರುಬ ಜಾತಿ ಕುಟುಂಬಗಳು ದೌಲತ್‌ಪುರದಲ್ಲಿ ಇಲ್ಲ. ಉಳಿದಂತೆ ಎಲ್ಲಾ ಜಾತಿಗಳು ಹೆಚ್ಚು ಕಡಿಮೆ ಎರಡು ಹಳ್ಳಿಗಳಲ್ಲಿ ಸಮಪ್ರಮಾಣದಲ್ಲಿಯೇ ಇವೆ. ಶೇ. ೫೨ಕ್ಕೂ ಹೆಚ್ಚು ಕುಟುಂಬಗಳು ಬಡತನ ರೇಖೆ ಕೆಳಗಿವೆ. ಲಿಂಗಾಯತರು ಕುರುಬರು ಮತ್ತು ಕೆಲವು ಮುಸ್ಲಿಂ ಕುಟುಂಬಗಳು ಆರ್ಥಿಕವಾಗಿ ಸ್ವಲ್ಪ ಉತ್ತಮ ಸ್ಥಿತಿಯಲ್ಲಿವೆ.

ಕೃಷ್ಣಾನಗರ ಗ್ರಾಮ ಪಂಚಾಯತಿಯಲ್ಲಿಯ ಜನಸಂಖ್ಯೆ ಲಿಂಗವಾರು

ಸಂ.

ಗ್ರಾಮಗಳು

ಕುಟುಂಬಗಳ ಸಂಖ್ಯೆ ಜನಸಂಖ್ಯೆ ಶಿಕ್ಷಣ
ಗಂಡು ಹೆಣ್ಣು ಒಟ್ಟು ಸ್ತ್ರೀ % ಪುರುಷ % ಒಟ್ಟು %
೧. ಕೃಷ್ಣನಗರ ೧೦೦ ೩೦೪ ೨೮೭ ೫೯೧ ೨೮ ೪೮ ೩೮
(೬೨.೫೦%) (೫೨.೩೬%) (೪೭.೦೪%) (೫೩.೯೭%)
೨. ದೌಲತ್‌ಪುರ ೬೦ ೨೭೦ ೨೩೪ ೫೦೪ ೩೦ ೪೮ ೩೯
(೩೭.೫೦%) (೫೪.೦೯%) (೪೪.೯೧%) (೪೬.೦೩%)
೩. ಕೃಷ್ಣನಗರ ಗ್ರಾಮ ಪಂಚಾಯ್ತಿ ೧೬೦ ೫೭೪ ೫೨೧ ೧೦೯೫ ೨೯ ೪೮ ೩೮

ಅಧ್ಯಯನಕ್ಕೆ ಒಳಪಟ್ಟ ೧೬೦ ಕುಟುಂಬಗಳ ಒಟ್ಟು ಜನಸಂಖ್ಯೆ ೧೦೯೫ ರಷ್ಟಿದೆ. ಇದರಲ್ಲಿ ೫೭೪ ಪುರುಷರು ಹಾಗೂ ೫೨೧ ಮಹಿಳೆಯರಿದ್ದಾರೆ. ಶೇಕಡಾವಾರು ನೋಡಿದಾಗ ಪುರುಷರು ಶೇ. ೫೫.೦೯ ರಷ್ಟಿದ್ದರೆ ಮಹಿಳೆಯರ ಪ್ರಮಾಣ ಶೇ. ೪೬.೦೩ ರಷ್ಟಿದೆ.

ಒಟ್ಟಾರೆ ಶಿಕ್ಷಣ ಪ್ರಮಾಣ ಶೇ. ೩೮ ರಷ್ಟಿದ್ದರೆ ಪುರುಷರ ಶಿಕ್ಷಣ ಪ್ರಮಾಣ ಶೇ. ೪೮ ರಷ್ಟಿದ್ದರೆ ಮಹಿಳಾ ಶಿಕ್ಷಣ ಪ್ರಮಾಣ ಶೇ. ೨೯ ರಷ್ಟಿದೆ. ಗ್ರಾಮ ಪಂಚಾಯ್ತಿಯಲ್ಲಿ ಮಹಿಳೆಯರು ಜನಸಂಖ್ಯೆ ಮತ್ತು ಶಿಕ್ಷಣ ಎರಡರಲ್ಲೂ ಕಡಿಮೆ ಪ್ರಮಾಣದಲ್ಲಿದ್ದಾರೆ.

ಕುಡಿಯುವ ನೀರಿಗಾಗಿ ಕುಟುಂಬಗಳು ಅವಲಂಬಿಸಿರುವ ಮೂಲಗಳು

ಕ್ರ.
ಗ್ರಾಮಗಳು
ಕಿರುನೀರು ಸರಬರಾಜು ಯೋಜನೆ ಬೋರ್‌ವೇಲ್ (ನಲ್ಲಿ ನೀರು) ಕೊಳವೆ ಬಾವಿ ಪಂಪ್‌ಹೌಸ್ (ತೋಟದ ಬಾವಿಗಳು)
೧. ಕೃಷ್ಣನಗರ ೫೦% ೫೦%
೨. ದೌಲತ್‌ಪುರ ೬೫% ೩೫%
೩. ಕೃಷ್ಣನಗರ ಗ್ರಾ. ಪಂಚಾಯ್ತಿ ೩೨.೫% ೪೨.೫% ೨೫%

ಕುಡಿಯುವ ನೀರು ಪಡೆಯುವಲ್ಲಿ ಕುಟುಂಬಗಳು ಅವಲಂಬಿಸಿರುವ ನೀರಿನ ಮೂಲಗಳು ಮುಖ್ಯವಾಗಿರುತ್ತದೆ. ಒಟ್ಟಾರೆ ಶೇ. ೩೨.೫ರಷ್ಟು ಕುಟುಂಬಗಳು ಕುಡಿಯುವ ನೀರಿಗಾಗಿ ಕಿರುನೀರು ಘಟಕಗಳನ್ನು ಅವಲಂಬಿಸಿದ್ದಾರೆ. ಶೇ. ೪೨.೫ ಕುಟುಂಬಗಳು ನಲ್ಲಿ ನೀರಿನ ಮೂಲಗಳನ್ನು ಅವಲಂಬಿಸಿದೆ. ಉಳಿದಂತೆ ಶೇ. ೨೫ ರಷ್ಟು ಕುಟುಂಬಗಳು ತೋಟದ ಬಾವಿ, ಪಂಪ್‌ಸೆಟ್‌ಗಳನ್ನು ಅವಲಂಬಿಸಿದೆ. ಇಲ್ಲಿ ಕುಡಿಯುವ ನೀರಿಗಾಗಿ ಯಾವ ಕುಟುಂಬಗಳು ಕೈಪಂಪು ಕೊಳವೆ ಬಾವಿಗಳನ್ನು ಅವಲಂಬಿಸಿಲ್ಲ. ಕೃಷ್ಣನಗರದಲ್ಲಿ ಶೇ. ೫೦ ರಷ್ಟು ಕುಟುಂಬಗಳು ಕುಡಿಯುವ ನೀರಿಗಾಗಿ ತೋಟದ ಬಾವಿ ಪಂಪ್‌ಸೆಟ್‌ಗಳನ್ನು ಅವಲಂಬಿಸಿದೆ. ದೌಲತ್‌ಪುರದಲ್ಲಿ ಶೇ. ೬೫ ರಷ್ಟು ಕುಟುಂಬಗಳು ಕುಡಿಯುವ ನೀರಿಗಾಗಿ ಕಿರುನೀರು ಘಟಕಗಳನ್ನು ಅವಲಂಬಿಸಿದೆ. ಶೇ. ೩೫ರಷ್ಟು ಕುಟುಂಬಗಳು ನಲ್ಲಿ ನೀರಿನ ಮೂಲಗಳನ್ನು ಅವಲಂಬಿಸಿದೆ. ವಿದ್ಯುತ್ ಕೈ ಕೊಟ್ಟಾಗ ಮನೆ ಬಳಕೆ ನೀರಿಗಾಗಿ ಮಾತ್ರ ಕೈಪಂಪು ಕೊಳವೆ ಬಾವಿಗಳನ್ನು ಅವಲಂಬಿಸಿದ್ದಾರೆ.

ಕೃಷ್ಣನಗರ ಗ್ರಾಮಪಂಚಾಯತಿಯ ಗ್ರಾಮಗಳಲ್ಲಿ ದೊರಕುತ್ತಿರುವ ನೀರಿನ ಪ್ರಮಾಣ

ಕ್ರ. ಗ್ರಾಮಗಳು ಕುಟುಂಬಗಳ ಸಂಖ್ಯೆ
೨೫ ಲೀ.ಗಿಂತ ಕಡಿಮೆ ಒಳಗಡೆ ೨೫ ಲೀ.ಗಿಂತ ಹೆಚ್ಚು ೪೦ ಲೀ ೪೦ ಲೀ.ಗಿಂತ ಅಧಿಕ
೧. ಕೃಷ್ಣನಗರ ೬೦ ೪೦
೬೦.೦೦% ೪೦.೦೦%  
೨. ದೌಲತ್‌ಪುರ ೧೫ ೨೫ ೨೦
೨೫.೦೦% ೪೧.೬೭% ೩೩.೩೩%
೩. ಕೃಷ್ಣನಗರ ಗ್ರಾಮ ಪಂಚಾಯ್ತಿ ೨೫ ೬೫ ೨೦
೪೬.೮೭% ೪೦.೬೩% ೧೨.೫೦%

ಅಧ್ಯಯನಕ್ಕೆ ಒಳಪಟ್ಟ ೧೬೦ ಕುಟುಂಬಗಳಲ್ಲಿ ೭೫ ಕುಟುಂಬಗಳು ೨೫ ಲೀಟರ್‌ಗಿಂತ ಕಡಿಮೆ ಪ್ರಮಾಣದ ತಲಾವಾರು ನೀರು ಪಡೆಯುತ್ತಿದ್ದರೆ ೬೫ ಕುಟುಂಬಗಳು ೨೫-೪೦ ಲೀಟರ್ ಪ್ರಮಾಣದ ನೀರು ಪಡೆಯುತ್ತಿವೆ. ಇನ್ನೂ ೨೦ ಕುಟುಂಬಗಳು ೪೦ ಲೀಟರ್ ನೀರು ಪಡೆಯುತ್ತಿವೆ. ಕೃಷ್ಣನಗರದ ೧೦೦ ಕುಟುಂಬಗಳಲ್ಲಿ ೬೦ ಕುಟುಂಬಗಳು ೨೫ ಲೀಟರ್ ನೀರಿಗಿಂತ ಕಡಿಮೆ ನೀರು ಪಡೆಯುತ್ತಿದ್ದಾರೆ. ೪೦ ಕುಟುಂಬಗಳು ೨೫-೪೦ ಲೀಟರ್ ಪ್ರಮಾಣದ ನೀರು ಪಡೆಯುತ್ತವೆ. ದೌಲತ್‌ಪುರದ ೧೫ ಕುಟುಂಬಗಳು ೨೫ ಲೀಟರ್‌ಗಿಂತ ಕಡಿಮೆ ಪ್ರಮಾಣದ ನೀರು ಪಡೆಯುತ್ತಿದ್ದಾರೆ. ೨೫ ಕುಟುಂಬಗಳು ೨೫-೪೦ ಲೀಟರ್ ಪ್ರಮಾಣದ ನೀರು ಪಡೆದರೆ ಉಳಿದಂತೆ ೨೦ ಕುಟುಂಬಗಳು ೪೦ ಲೀಟರ್ ಪ್ರಮಾಣದ ತಲಾವಾರು ನೀರು ಪಡೆಯುತ್ತಿದ್ದಾರೆ.

ಕೃಷ್ಣನಗರ ಗ್ರಾಮ ಪಂಚಾಯ್ತಿಯ ನೀರಿನ ಮೂಲಗಳು

ಕ್ರ. ಗ್ರಾಮಗಳು ಕುಡಿಯುವ ನೀರಿನ ಮೂಲಗಳು
ಕೈಪಂಪ್‌ಗಳು ಘಟಕ ಕಿರುನೀರು ಟ್ಯಾಂಕುಗಳು
೧. ಕೃಷ್ಣನಗರ ೦೮ ೦೫ ೦೩
೫೦.೦೦% ೬೨.೫೦% ೭೫.೦೦%
೨. ದೌಲತ್‌ಪುರ ೦೭ ೦೩ ೦೧
೫೦.೦೦% ೩೭.೫೦% ೨೫.೦೦%
೩. ಕೃಷ್ಣನಗರ ಗ್ರಾ.ಪಂಚಾಯ್ತಿ ೧೪ ೦೮ ೦೪

ಜನತೆಯ ಕುಡಿಯುವ ನೀರು ಸೌಲಭ್ಯ ಪಡೆಯುವ ಪ್ರಮಾಣವು ಅಲ್ಲಿ ಅನುಷ್ಠಾನಗೊಳಿಸುವ ನೀರಿನ ಮೂಲಗಳನ್ನು ಅವಲಂಬಿಸಿರುತ್ತದೆ. ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಒಟ್ಟಾರೆ ೧೫ ಕೈಪಂಪು ಕೊಳವೆ ಬಾವಿಗಳು, ೦೮ ಕಿರುನೀರು ಘಟಕಗಳಳು ಹಾಗೂ ೧೭ ಸಾರ್ವಜನಿಕ ನಳಗಳು ಹಾಗೂ ೧೧೪ ವೈಯಕ್ತಿಕ ನಳಗಳಿವೆ. ಆರು ಪಂಪ್‌ಸೆಟ್‌ಗಳು ಹಾಗೂ ನೀರು ಸಂಗ್ರಹಣೆಗಾಗಿ ೪ ಟ್ಯಾಂಕ್‌ಗಳಿವೆ. ಇವುಗಳಲ್ಲಿ ದೌಲತ್‌ಪುರದಲ್ಲಿರುವ ೩ ಕಿರುನೀರು ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಇವು ಜನರಿಗೆ ಕುಡಿಯುವ ನೀರು ಪೂರೈಸುವ ಪ್ರಧಾನ ಘಟಕಗಳಾಗಿವೆ.

ಕುಡಿಯುವ ನೀರಿನ ಗುಣಮಟ್ಟ

ಸಂ. ಕುಟುಂಬಗಳ ಸಂಖ್ಯೆ ಕುಟುಂಬಗಳ ಸಂಖ್ಯೆ
ಕುಡಿಯಲು ಯೋಗ್ಯ ಕುಡಿಯಲು ಸಾಧಾರಣ ಕುಡಿಯಲು ಯೋಗ್ಯವಲ್ಲ
೧. ಕೃಷ್ಣನಗರ ೨೦ ೩೦ ೫೦
೨೦.೦೦% ೩೦.೦೦% ೫೦.೦೦%
೨. ದೌಲತ್‌ಪುರ ೪೦ ೨೦
೫೨.೫೦% ೨೦.೦೦%
೩. ಕೃಷ್ಣನಗರ ಗ್ರಾ.ಪಂಚಾಯ್ತಿ ೬೦ ೫೦ ೫೦
೩೭.೫೦% ೩೧.೨೫% ೩೧.೨೫%

ಕುಡಿಯುವ ನೀರಿನ ಪ್ರಮಾಣಕ್ಕಿಂತಲೂ ನೀರಿನ ಗುಣಮಟ್ಟ ಮುಖ್ಯವಾದದ್ದು. ಇಲ್ಲಿ ಕುಡಿಯುವ ನೀರಿನ ಅಗತ್ಯದಷ್ಟು ಪ್ರಮಾಣದ ನೀರಿನ ಕೊರತೆ ಜೊತೆಗೆ ನೀರಿನ ಗುಣಮಟ್ಟದ ಸಮಸ್ಯೆಯನ್ನು ಎದುರಿಸುತ್ತಿದೆ. ಕೃಷ್ಣನಗರ ಗ್ರಾಮಪಂಚಾಯ್ತಿಯಲ್ಲಿ ಶೇ. ೩೭.೫೦ ಕುಟುಂಬಗಳು ಉತ್ತಮ ಗುಣಮಟ್ಟದ ಕುಡಿಯುವ ನೀರು ಪಡೆಯುತ್ತಿದ್ದಾರೆ. ಶೇ. ೩೧.೨೫ ಕುಟುಂಬಗಳು ಸಾಧಾರಣ ಗುಣಮಟ್ಟದ ನೀರು ಪಡೆಯುತ್ತಿವೆ. ಉಳಿದಂತೆ ಶೇ. ೩೧.೨೫ ಕುಟುಂಬಗಳು ಉತ್ತಮ ಗುಣಮಟ್ಟದ ನೀರು ಪಡೆಯುತ್ತಿಲ್ಲ. ಕೃಷ್ಣನಗರದಲ್ಲಿ ಶೇ. ೨೦ರಷ್ಟು ಕುಟುಂಬಗಳು ಉತ್ತಮ ಗುಣಮಟ್ಟದ ಕುಡಿಯುವ ನೀರು ಪಡೆಯುತ್ತಿದ್ದಾರೆ. ದೌಲತ್‌ಪುರದಲ್ಲಿ ಶೇ. ೫೨.೫೦ ಕುಟುಂಬಗಳು ಉತ್ತಮ ಗುಣಮಟ್ಟದ ನೀರು ಪಡೆಯುತ್ತಿವೆ.

ಎರಡು ಹಳ್ಳಿಗಳಲ್ಲೂ ಶೇ. ೩೦ ಮತ್ತು ೩೧.೨೫ರಷ್ಟು ಕುಟುಂಬಗಳು ಸಾಧಾರಣ ಗುಣಮಟ್ಟದ ನೀರು ಪಡೆಯುತ್ತಿದ್ದಾರೆ. ಕೃಷ್ಣನಗರದಲ್ಲಿ ಶೇ. ೫೦ರಷ್ಟು ಕುಟುಂಬಗಳು ಕುಡಿಯುವ ನೀರಿನ ಗುಣಮಟ್ಟ ಸಮರ್ಪಕವಾಗಿಲ್ಲ. ದೌಲತ್‌ಪುರದಲ್ಲಿ ಶೇ. ೩೧.೨೫ ಕುಟುಂಬಗಳ ಗುಣಮಟ್ಟದ ಸಮಸ್ಯೆ ಎದುರಿಸುತ್ತಿವೆ. ಒಟ್ಟಾರೆ ದೌಲತ್‌ಪುರಕ್ಕಿಂತ ಕೃಷ್ಣನಗರದ ಜನತೆ ಕುಡಿಯುವ ನೀರಿನ ಗುಣಮಟ್ಟದ ಹೆಚ್ಚು ಸಮಸ್ಯೆ ಎದುರಿಸುತ್ತಿದ್ದಾರೆ.

ಕುಡಿಯುವ ನೀರನ್ನು ಸಂಗ್ರಹಿಸುವವರು ಲಿಂಗವಾರು ಕೃಷ್ಣನಗರ ಗ್ರಾಮಪಂಚಾಯ್ತಿ

ಸಂ. ಸಂಗ್ರಹಿಸುವವರು ಕುಟುಂಬಗಳ ಸಂಖ್ಯೆ ಶೇಕಡಾವಾರು
೧. ಮಹಿಳೆಯರು ೩೪ ೨೧.೨೫
೨. ಪುರುಷರು ೨೮ ೧೭.೫೦
೩. ಮಕ್ಕಳು ೨೭ ೧೬.೮೮
೪. ಮಹಿಳೆಯರು ಮತ್ತು ಪುರುಷರು ೩೩ ೨೦.೬೩
೫. ಎಲ್ಲರೂ ೩೮ ೨೩.೭೫
  ಒಟ್ಟು ೧೬೦ ೧೦೦.೦೦

ಸರ್ವೆ ಸಾಮಾನ್ಯವಾಗಿ ಎಲ್ಲಾ ಕಡೆ ಕುಡಿಯುವ ನೀರು ಮತ್ತು ಮನೆ ಬಳಕೆಗೆ ಅಗತ್ಯವಾದ ಕುಡಿಯುವ ನೀರು ಸಂಗ್ರಹಿಸುವವರು ಮಹಿಳೆಯರು. ಅಧ್ಯಯನದ ವ್ಯಾಪ್ತಿಯೊಳಗೆ ಶೇ. ೨೧.೨೫ರಷ್ಟು ಕುಟುಂಬಗಳಲ್ಲಿ ಮಹಿಳೆಯರು ನೀರು ಸಂಗ್ರಹಿಸುತ್ತಾರೆ. ಶೇ. ೧೭.೫೦ರಷ್ಟು ಕುಟುಂಬಗಳಲ್ಲಿ ಪುರುಷರು ನೀರು ಸಂಗ್ರಹಿಸುತ್ತಿದ್ದಾರೆ. ಶೇ. ೧೬.೮೮ರಷ್ಟು ಕುಟುಂಬಗಳಲ್ಲಿ ನೀರು ಸಂಗ್ರಹಿಸುವ ಜವಾಬ್ದಾರಿ ಮಕ್ಕಳದಾಗಿದೆ. ಶೇ. ೨೦ರಷ್ಟು ಕುಟುಂಬಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಸ್ತ್ರೀಯರು ಮತ್ತು ಪುರುಷರು ನೀರು ಸಂಗ್ರಹಿಸುತ್ತಿದ್ದಾರೆ. ಇನ್ನೂ ಶೇ. ೨೩.೭೫ ಕುಟುಂಬಗಳಲ್ಲಿ ಸ್ತ್ರೀಯರು ಪುರುಷರು ಹಾಗೂ ಮಕ್ಕಳು ನೀರು ಸಂಗ್ರಹಿಸುತ್ತಿದ್ದಾರೆ.

ನೀರು ಸಂಗ್ರಹಿಸುವವರನ್ನು ಲಿಂಗವಾರು ನೋಡಿದಾಗ ಶೇ. ೬೮.೭೫ರಷ್ಟು ಕುಟುಂಬಗಳು ಮಹಿಳೆಯರು ಹಾಗೂ ಶೇ. ೪೧.೨೫ರಷ್ಟು ಪುರುಷರು ಕುಡಿಯುವ ನೀರು ಮತ್ತು ಮನೆ ಬಳಕೆಗೆ ಅಗತ್ಯವಾದ ನೀರು ಸಂಗ್ರಹಿಸುತ್ತಿರುವುದು ಕಂಡುಬರುತ್ತದೆ. ಕುಡಿಯುವ ನೀರು ಮತ್ತು ಮನೆ ಬಳಕೆಗೆ ಅಗತ್ಯವಾದ ನೀರು ಸಂಗ್ರಹಿಸುತ್ತಿರುವ ಪ್ರಮಾಣ ಹೆಚ್ಚುತ್ತಿರುವುದನ್ನು ಕಾಣಬಹುದಾಗಿದೆ. ಇದಕ್ಕೆ ಮತ್ತೊಂದು ಕಾರಣ ಇರಬಹುದಾಗಿದೆ. ಮುಸ್ಲಿಂ ಕುಟುಂಬಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸಂಗ್ರಹಣೆಗಾಗಿ ಮಹಿಳೆಯರೂ ಹೊರಗೆ ಕಳುಹಿಸುವುದಿಲ್ಲ.

ಕೃಷ್ಣನಗರ ಗ್ರಾಮ ಪಂಚಾಯ್ತಿಯ ಕುಟುಂಬಗಳು ಕುಡಿಯುವ ನೀರನ್ನು ತರಲು ಕ್ರಮಿಸಬೇಕಾದ ದೂರ

ಕ್ರ.ಸಂ. ಕುಟುಂಬಗಳು ಅಂತರ ಕಿ.ಮೀ.ಗಳಲ್ಲಿ
೧. ೧೧೭ (೭೩.೧೩%) ೧/೨ ಕಿ.ಮೀ.ಒಳಗೆ
೨. ೪೩ (೨೬.೮೭%) ೧/೨ ಕಿ.ಮೀ.ನಿಂದ ೧ ಕಿ.ಮೀ.ವರೆಗೆ

ಕುಡಿಯುವ ನೀರು ಸಂಗ್ರಹಿಸಲು ಕ್ರಮಿಸಬೇಕಾದ ದೂರ ನೀರಿನ ಸಮಸ್ಯೆಯನ್ನು ಆಧರಿಸಲಾಗುತ್ತದೆ. ಕುಡಿಯುವ ನೀರಿನ ಕೊರತೆ ಹೆಚ್ಚಾದಂತೆಲ್ಲಾ ಹೆಚ್ಚು ಹೆಚ್ಚು ದೂರ ಕ್ರಮಿಸಬೇಕಾಗುತ್ತದೆ. ಶೇ. ೭೩.೧೩ ಕುಟುಂಬಗಳು ಕುಡಿಯುವ ನೀರಿಗಾಗಿ ೫೦೦ ಮೀಟರ್ ಒಳಗೆ ಕುಡಿಯುವ ನೀರು ಸಂಗ್ರಹಿಸಿದರೆ ಶೇ. ೨೬.೬೭ ಕುಟುಂಬಗಳು ೧ ಕಿ.ಮೀ.ನಿಂದ ೨ ಕಿ.ಮೀ.ವರೆಗೆ ದೂರ ಕ್ರಮಿಸಿ ನೀರು ಸಂಗ್ರಹಿಸುತ್ತಿದ್ದಾರೆ.

ಬೇಸಿಗೆ ಬಂದಂತೆ ನೀರಿನ ಸಮಸ್ಯೆ ಹೆಚ್ಚಾಗುತ್ತದೆ. ದೌಲತ್‌ಪುರಕ್ಕಿಂತ ಕೃಷ್ಣನಗರದಲ್ಲಿ ಕುಡಿಯುವ ನೀರು ಸಂಗ್ರಹಣೆಗಾಗಿ ಹೆಚ್ಚು ಹೆಚ್ಚು ದೂರ ಕ್ರಮಿಸುತ್ತಿದ್ದಾರೆ. ಬೇಸಿಗೆ ಹೆಚ್ಚಾದಂತೆಲ್ಲಾ ದೂರ ದೂರದ ತೋಟದ ಬಾವಿ ಪಂಪ್‌ಸೆಟ್‌ಗಳಿಗೆ ಹೋಗಿ ನೀರು ಸಂಗ್ರಹಿಸಬೇಕಾಗುತ್ತದೆ.

ವಿವಿಧ ಉದ್ದೇಶಗಳಿಗೆ ನೀರಿನ ಬಳಕೆ ಮತ್ತು ಅವುಗಳ ಮೂಲ

ಕ್ರ. ನೀರಿನ ಬಳಕೆ ಕೃಷ್ಣನಗರ ದೌಲತ್‌ಪುರ ಕೃಷ್ಣನಗರ ಗ್ರಾ.ಪಂಚಾಯ್ತಿ
ಕೊಳವೆ ಬಾವಿ ಕಿ.ನೀ ಘಟಕ ನಲ್ಲಿ ತೋಟದ ಬಾವಿ ಹಳ್ಳ ಕೊಳವೆ ಬಾವಿ ಕಿ.ನೀ ಘಟಕ ನಲ್ಲಿ ತೋಟದ ಬಾವಿ ಹಳ್ಳ ಕೊಳವೆ ಬಾವಿ ಕಿ.ನೀ ಘಟಕ ನಲ್ಲಿ ತೋಟದ ಬಾವಿ ಹಳ್ಳ
೧. ಬಟ್ಟೆ ಸ್ವಚ್ಛಗೊಳಿಸಲು ೯೦ ೧೦ ೫೦ ೧೦ ೫೦ ೧೦೦ ೧೦
    ೯೦.೦೦ ೧೦.೦೦ ೫೦.೦೦ ೧೦.೦೦ ೩೧.೨೫ ೬೨.೫೦ ೬.೨೫
೨. ಸ್ನಾನಕ್ಕಾಗಿ ೧೦೦ ೫೦ ೧೦ ೫೦ ೧೧೦
    ೧೦೦.೦೦ ೫೦.೦೦ ೧೦.೦೦ ೩೧.೨೫ ೬೮.೭೫

ಕೃಷ್ಣನಗರದಲ್ಲಿ ೯೦ ಕುಟುಂಬಗಳು ಬಟ್ಟೆ ಒಗೆಯಲು ನಲ್ಲಿ ನೀರಿನ ಮೂಲ ಅವಲಂಬಿಸಿದ್ದರೆ ೧೦ ಕುಟುಂಬಗಳು ಹಳ್ಳದ ನೀರು ಅವಲಂಬಿಸಿವೆ. ಸ್ನಾನಕ್ಕೆ ೧೦೦ ಕುಟುಂಬಗಳು ಸಹ ನಲ್ಲಿ ನೀರಿನ ಮೂಲಗಳನ್ನು ಅವಲಂಬಿಸಿದೆ. ದೌಲತ್‌ಪುರದಲ್ಲಿ ಬಟ್ಟೆ ಒಗೆಯಲು ನಲ್ಲಿ ನೀರಿನ ಮೂಲ ಅವಲಂಬಿಸಿದ್ದರೆ ೧೦ ಕುಟುಂಬಗಳು ಹಳ್ಳದ ನೀರು ಅವಲಂಬಿಸಿದೆ. ದೌಲತ್‌ಪುರದಲ್ಲಿ ಬಟ್ಟೆ ಒಗೆಯಲು ೫೦ ಕುಟುಂಬಗಳು ಕಿರುನೀರು ಘಟಕ ಹಾಗೂ ೧೦ ಕುಟುಂಬಗಳು ನಲ್ಲಿ ನೀರಿನ ಮೂಲಗಳೂ ಅವಲಂಬಿಸಿದೆ. ಸ್ನಾನಕ್ಕೆ ೫೦ ಕುಟುಂಬಗಳು ಕಿರುನೀರು ಘಟಕಗಳನ್ನು ಅವಲಂಬಿಸಿದ್ದಾರೆ. ಉಳಿದ ೧೦ ಕುಟುಂಬಗಳು ನಲ್ಲಿ ನೀರಿನ ಮೂಲಗಳನ್ನು ಅವಲಂಬಿಸಿದ್ದಾರೆ.

ಒಟ್ಟಾರೆ ೧೬೦ ಕುಟುಂಬಗಳಲ್ಲಿ ಬಟ್ಟೆ ಒಗೆಯಲು ೫೦ ಕುಟುಂಬಗಳು ಕಿರುನೀರು ಘಟಕಗಳು ಹಾಗೂ ೧೦೦ ಕುಟುಂಬಗಳು ನಲ್ಲಿ ನೀರಿನ ಮೂಲಗಳು ಹಾಗೂ ೧೦ ಕುಟುಂಬಗಳು ಹಳ್ಳದ ನೀರು ಅವಲಂಬಿಸಿವೆ. ಇನ್ನೂ ಸ್ನಾನಕ್ಕಾಗಿ ೫೦ ಕುಟುಂಬಗಳು ಕಿರುನೀರು ಘಟಕ ಹಾಗೂ ೧೦೦ ಕುಟುಂಬಗಳು ನಲ್ಲಿ ನೀರಿನ ಮೂಲಗಳನ್ನು ಅವಲಂಬಿಸಿದೆ. ಉದ್ಯೋಗಕ್ಕೆ ಹೋಗುವವರು, ಮಕ್ಕಳು, ಬಾಣಂತಿಯರು ೨-೩ ದಿನಕ್ಕೊಮ್ಮೆ ಸ್ನಾನ ಮಾಡುತ್ತಾರೆ. ಉಳಿದಂತೆ ಎಲ್ಲರೂ ೭-೧೦ ದಿನಗಳಿಗೊಮ್ಮೆ ಸ್ನಾನ ಮಾಡುತ್ತಾರೆ.

ಶೌಚಾಲಯ ಸೌಲಭ್ಯ

ಹಳ್ಳಿಗಳ ಸ್ವಚ್ಛತೆಯು ಅಲ್ಲಿನ ಜನರು ಶೌಚಾಲಯಗಳನ್ನು ಪಡೆದಿರುವ ಪ್ರಮಾಣ ಅವಲಂಬಿಸುತ್ತದೆ. ನಮ್ಮ ಅಧ್ಯಯನದಲ್ಲಿ ಶೇ. ೨೦.೬೩ರಷ್ಟು ಕುಟುಂಬಗಳು ವೈಯಕ್ತಿಕ ಶೌಚಾಲಯ ಸೌಲಭ್ಯ ಹೊಂದಿದ್ದು ಇವುಗಳಲ್ಲಿ ಶೇ. ೨೪.೪೪ರಷ್ಟು ಶೌಚಾಲಯಗಳನ್ನು ಉಪಯೋಗಿಸುತ್ತಿದ್ದಾರೆ. ಉಳಿದ ಶೇ. ೭೫.೭೬ರಷ್ಟು ಕುಟುಂಬಗಳು ಶೌಚಾಲಯಗಳನ್ನು ಬಳಸುತ್ತಿಲ್ಲ. ಶೌಚಾಲಯ ಉಪಯೋಗಿಸದೇ ಇರಲು ನೀರಿನ ಕೊರತೆ ಮುಖ್ಯ ಕಾರಣವಾಗಿದೆ. ಇನ್ನೂ ಶೇ. ೭೯.೩೭ರ ಕುಟುಂಬಗಳು ಶೌಚಾಲಯ ಸೌಲಭ್ಯ ಹೊಂದಿಲ್ಲ.

ಕೃಷ್ಣನಗರದಲ್ಲಿ ಶೇ. ೧೫ರಷ್ಟು ಕುಟುಂಬಗಳು ವೈಯಕ್ತಿಕ ಶೌಚಾಲಯ ಸೌಲಭ್ಯ ಹೊಂದಿದ್ದು ಇವುಗಳಲ್ಲಿ ಶೇ. ೩೦ರಷ್ಟು ಕುಟುಂಬಗಳು ಶೌಚಾಲಯಗಳನ್ನು ಬಳಸುತ್ತಿದ್ದರೆ ಶೇ. ೮೦ರಷ್ಟು ಶೌಚಾಲಯಗಳು ಬಳಸಲಾಗುತ್ತಿಲ್ಲ.

ಇನ್ನೂ ಶೇ. ೮೫ರಷ್ಟು ಕುಟುಂಬಗಳು ಶೌಚಾಲಯ ಸೌಲಭ್ಯ ಹೊಂದಿಲ್ಲ. ದೌಲತ್‌ಪುರದಲ್ಲಿ ೭೦ರಷ್ಟು ಕುಟುಂಬಗಳು ಶೌಚಾಲಯ ಸೌಲಭ್ಯ ಹೊಂದಿಲ್ಲ. ಶೇ. ೩೦ರಷ್ಟು ಶೌಚಾಲಯಗಳಲ್ಲಿ ಶೇ. ೨೭.೭೮ರಷ್ಟು ಶೌಚಾಲಯಗಳನ್ನು ಬಳಸುತ್ತಿದ್ದಾರೆ. ಶೇ. ೭೨.೨೨ರಷ್ಟು ಕುಟುಂಬಗಳು ಶೌಚಾಲಯವನ್ನು ಬಳಸದೆ ಇರಲು ಪ್ರಮುಖ ಕಾರಣ ನೀರಿನ ಸಮಸ್ಯೆಯಾಗಿದೆ.

ಶೌಚಾಲಯ ಸೌಲಭ್ಯ ಹೊಂದುವಲ್ಲಿ ದೌಲತ್‌ಪುರ (ಶೇ. ೩೦) ಕೃಷ್ಣನಗರಕ್ಕಿಂತ (ಶೇ. ೨೭.೭೮) (ಶೇ.೨.೨೨ ರಷ್ಟು) ಉತ್ತಮ ಸ್ಥಿತಿಯಲ್ಲಿದೆ.

ಶೌಚಾಲಯಗಳು ಮತ್ತು ಅವುಗಳ ಬಳಕೆ

ಕ್ರ. ನೀರಿನ ಬಳಕೆ
ಕೃಷ್ಣನಗರ
ದೌಲತ್‌ಪುರ ಕೃಷ್ಣನಗರ ಗ್ರಾ.ಪಂಚಾಯ್ತಿ
ಸಂಖ್ಯೆ ಬಳಕೆ ಬಳಸುತ್ತಿಲ್ಲ ಸಂಖ್ಯೆ ಬಳಕೆ ಬಳಸುತ್ತಿಲ್ಲ ಸಂಖ್ಯೆ ಬಳಕೆ ಬಳಸುತ್ತಿಲ್ಲ
೧. ವೈಯಕ್ತಿಕ ಶೌಚಾಲಯಗಳು ೧೫ ೦೩ ೧೨ ೧೮ ೦೫ ೧೩ ೩೩ ೦೮ ೨೫
(೨೦.೦೦) (೮೦.೦೦) (೨೭.೭೮) (೭೨.೨೨) (೨೪.೨೪) (೭೫.೭೬)
೨. ಶೌಚಾಲಯ ವ್ಯವಸ್ಥೆ ಇರದೇ ಇರುವುದು ೮೫ ೪೨ ೧೨೭
(೮೫.೦೦) (೭೦.೦೦) (೭೯.೩೭)
  ಒಟ್ಟು ೧೦೦ ೦೩ ೧೨ ೬೦ ೦೫ ೧೩ ೧೬೦ ೦೮

ಅಧ್ಯಯನದ ವ್ಯಾಪ್ತಿಯಲ್ಲಿನ ೧೬೦ ಕುಟುಂಬಗಳಲ್ಲಿ ೩೩ ವೈಯಕ್ತಿಕ ಶೌಚಾಲಯಗಳಿದ್ದು ಅವುಗಳಲ್ಲಿ ೮ ಶೌಚಾಲಯಗಳು ಮಾತ್ರ ಬಳಸಲಾಗುತ್ತಿದೆ. ಉಳಿದ ೨೫ ಶೌಚಾಲಯಗಳನ್ನು ಬಳಸಲಾಗುತ್ತಿಲ್ಲ. ಶೌಚಾಲಯ ಬಳಸದೇ ಇರಲು ಮುಖ್ಯ ಕಾರಣ ನೀರಿನ ಸಮಸ್ಯೆ. ಕೃಷ್ಣನಗರದಲ್ಲಿ ೧೫ ಕುಟುಂಬಗಳು ಮಾತ್ರ ಶೌಚಾಲಯ ಸೌಲಭ್ಯ ಹೊಂದಿದ್ದು ಅವುಗಳಲ್ಲಿ ೩ ಶೌಚಾಲಯಗಳನ್ನು ಮಾತ್ರ ಬಳಸಲಾಗುತ್ತಿದೆ. ಇನ್ನೂ ೧೨ ಶೌಚಾಲಯಗಳನ್ನು ಇದೇ ಕಾರಣದಿಂದ ಬಳಸುತ್ತಿಲ್ಲ.

ದೌಲತ್‌ಪುರದಲ್ಲಿ ೧೮ ಶೌಚಾಲಯಗಳಿದ್ದು ಅವುಗಳಲ್ಲಿ ೫ ಶೌಚಾಲಯಗಳನ್ನು ಬಳಸುತ್ತಿದ್ದಾರೆ. ದೌಲತ್‌ಪುರದಲ್ಲಿ ಊರಿನ ಸುತ್ತಮುತ್ತಲಿರುವ ತಿಪ್ಪೆಗಳನ್ನೇ ಶೌಚಾಲಯವಾಗಿ ಬಳಸುತ್ತಿದ್ದಾರೆ.

ಮಹಿಳಾ ಸಾಮೂಹಿಕ ಶೌಚಾಲಯಗಳು ಮತ್ತು ಅವುಗಳ ಬಳಕೆ

ಗ್ರಾಮಗಳು
ಮಹಿಳಾ
ಸಾಮೂಹಿಕ ಶೌಚಾಲಯ
ಬಳಕೆ
ಇದೆ ಇಲ್ಲ
ಕೃಷ್ಣನಗರ ಇಲ್ಲ
ದೌಲತ್‌ಪುರ ಇಲ್ಲ
ಒಟ್ಟು ಇಲ್ಲ

ಮಹಿಳಾ ಸಾಮೂಹಿಕ ಶೌಚಾಲಯಗಳು ಮತ್ತು ಅವುಗಳ ಬಳಕೆ

ಮಹಿಳೆಯರಿಗೆ ಶೌಚಾಲಯ ಸೌಲಭ್ಯಕ್ಕಾಗಿ ಒಟ್ಟು ೬ ಸಾಮೂಹಿಕ ಶೌಚಾಲಯಗಳಿವೆ. ಇವುಗಳಲ್ಲಿ ಕೃಷ್ಣನಗರದಲ್ಲಿ ೪ ಶೌಚಾಲಯಗಳಿದ್ದು ಅವುಗಳಲ್ಲಿ ೧ ಶೌಚಾಲಯ ಪರಿಶಿಷ್ಟರ ಕೇರಿಯಲ್ಲಿದೆ. ಉಳಿದ ೩ ಸಾಮೂಹಿಕ ಶೌಚಾಲಯಗಳು ಇತರ ಜಾತಿ ಕೇರಿಗಳಲ್ಲಿವೆ. ದೌಲತ್‌ಪುರದಲ್ಲಿ ೨ ಮಹಿಳಾ ಸಾಮೂಹಿಕ ಶೌಚಾಲಯಗಳಿದ್ದು ಒಂದು ಪರಿಶಿಷ್ಟರ ಕೇರಿಯಲ್ಲಿದೆ. ಉಳಿದಂತೆ ಸಾಮಾನ್ಯ ಜಾತಿ ಮಹಿಳೆಯರಿಗಾಗಿ ಒಂದು ಶೌಚಾಲಯವಿದೆ. ಮೊದಲು ಈ ಶೌಚಾಲಯವನ್ನು ಬಳಸುತ್ತಿದ್ದರಾದರೂ ನೀರಿನ ಸಮಸ್ಯೆಯಿಂದಾಗಿ ಸದ್ಯದಲ್ಲಿ ಯಾವ ಶೌಚಾಲಯಗಳನ್ನು ಬಳಸುತ್ತಿಲ್ಲ. ಅವುಗಳ ಸುತ್ತಲೂ ಮಲಮೂತ್ರಗಳ ಗಲೀಜು ತುಂಬಿ ಗಬ್ಬುವಾಸನೆ ಬರುತ್ತಿದೆ.

ನೀರಿನ ಕೊರತೆ ಮತ್ತು ಅನೈರ್ಮಲ್ಯದಿಂದಾಗಿ ಮಹಿಳಾ ಸಾಮೂಹಿಕ ಶೌಚಾಲಯಗಳು ಬಳಕೆಯಾಗುತ್ತಿಲ್ಲ. ಜನರು ತಮ್ಮ ನಿತ್ಯಕರ್ಮ ತೀರಿಸಿಕೊಳ್ಳಲು ಹೊಲ ಗದ್ದೆ, ತಿಪ್ಪೆ, ರಸ್ತೆ, ಕೋಟೆ ಬತೇರಿ ಮುಂತಾದ ಕಡೆಗಳಲ್ಲಿ ಮಲಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.