ನಡಿ ತಂಗಿ ಹೋಗುವೆವ್ವ ಕಾಡಿಗೆ ನಾವೊಂದು
ಅಡವಿ ಪಾಲಗುವೆವು | ನಡುಹಾದಿಯೊಳು
ಕೈ ಬಿಟ್ಟಂತ ಗುರುವಿನ ಹಿಡಿದರೆ ಫಲವೇನು
ಬಿಡ ತಂಗಿ ಅವರಾಸೆ || ನಡಿ ತಂಗಿ ||

ಹಡೆದವರು ಹೆತ್ತವರು ಆತೆಗೆ ಎನ್ನ
ಹಿಡಿದು ಕೈಸೆರೆ ಕೊಟ್ಟರು | ಬಡ ಸ್ಥಾನವಿದ್ದರಿರಲಿ
ಪಡೆದಷ್ಟ ಹಿತ ಬೋಗ ನಡೆ ನುಡಿ ಬಂದಿಲ್ಲ
ಕಡುತನ ಏನು ಬಿಟ್ಟು || ನಡಿ ತಂಗಿ ||

ಮಾತಿನೊಳಗೆ ಮಾತಿಲ್ಲದೆ ಸದ್ದು ಭಕ್ತಿಭಾವ
ಪ್ರೀತಿಯೊಂದಿನ ಮೂಡಲಿಲ್ಲವೋ ಜಾತಿಕಾರ
ವೇಷವಾಗಿ ಭೂತ ಪ್ರೇತಂಗಳನ್ನು ಮಾಡಿ
ಘಾಸಿ ಪಡಿಸಿ ಹೋದ ಎನ್ನ ಪ್ರಾಣ ಕಾಂತನ ಮಗಳಾದೆ || ನಡಿತಂಗಿ ||

ಮುತ್ತೈದೆ ಸ್ಥಾನವನು ಹತ್ತಾರು ಜನರು ಇಟ್ಟಂತ
ಕಳಸವನ್ನು ಮುತ್ತಿನ ಮೂಗುತಿಯನ್ನು ಹೊತ್ತಿನೊಳಗೆ
ಇಟ್ಟುಕೊಂಡು ಎತ್ತಹೋದರು
ಶಂಭುಲಿಂಗ ಬೆಂಬಲಿಸಿ ಬರುತ್ತಾನೆ || ನಡಿತಂಗಿ ||