ಚನ್ನಪ್ಪ ಚನ್ನೇಗೌಡ ಕುಂಬಾರ
ಮಾಡಿದ ಕೊಡನಪ್ಪ ಚಂದಕೆ ತಂದೆನಾ
ತಂಗಿ ನೀರಿಗೆ ಬಂದೆನಾ   || ಚನ್ನಪ್ಪ ||

ಆರು ಮೂರು ಒಂಭತ್ತು ಒಂಬತ್ತು
ತೂತಿನ ಕೊಡೆನವ್ವ ಚಂದಕೆ ತಂದೆನಾ
ತಂಗಿ ನೀರಿಗೆ ಬಂದೆನಾ   || ಚನ್ನಪ್ಪ ||

ನಿಂಬಿಯ ಹೊನದಾಗ ನಾನೆಂಗೆ ನಂಬಲ್ಲವ್ವ
ನಿಂಬಿ ಕಾಯಿಗೆ ತಗರಿತು ತಂಗಿ
ಕೂತು ಬಡದರೆ ಚಂದಕೆ ತಂದೆನಾ  || ಚನ್ನಪ್ಪ ||

ಬಾಳೆಯ ಹೊನದಾಗ ನಾನು ಹೆಂಗೆ
ಬಾಗಿ ಬರಲವ್ವ
ಬಾಳೆ ಕೊನೆಗೆ ತಾಕಿತು ತಂಗಿ ಕೊಡವು ಒಡಿದೀತು    || ಚನ್ನಪ್ಪ ||

ತೆಂಗಿನ ಹೊನದಾಗ ಜಲದ ಹೊತ್ತಿನಾಗ
ಬರುವಾಗ ತೆಂಗಿನಗರಿಗೆ ತಾಕಿತ ತಂಗಿ
ಕೊಡವು ಬಡಿದೀತ         || ಚನ್ನಪ್ಪ ||

ಕಾವೇರಿ ನದಿಯಾಗ ಜವನ
ಸೋಸಿ ತರುವಾಗ ಕಾಲುಜಾರಿತು
ತಂಗಿ ಕೊಡವ ಬಡಿದೀತ   || ಚನ್ನಪ್ಪ ||