ವಡ್ದಾರಾಧನೆಯಲ್ಲಿ ಉದಾಹೃತವಾಗಿರುವ ಸಂಸ್ಕೃತ, ಪ್ರಾಕೃತ ಪದ್ಯಗಳು ಅನ್ಯತ್ರ ಎಲ್ಲೆಲ್ಲಿ ಬಂದಿವೆಯೆಂಬುದು ಸ್ವಾರಸ್ಯಕರ ಸಂಶೋಧನೆಯಾಗಿದೆ. ಇದು ಡಾ || ಆ.ನೇ. ಉಪಾಧ್ಯೆಯವರು ತೆರೆದ ದಾರಿ. ಈ ದಾರಿಯಲ್ಲಿ ಮತ್ತಷ್ಟು ದೂರ ಸಾಗಿದ ಮೇಲೆ ಬೆಳಕಿಗೆ ಬಂದ ಹೊಸ ಸಂಗತಿಗಳಲ್ಲಿ ಕೆಲವನ್ನು ದಾಖಲಿಸುತ್ತಾ ಬಂದಿದ್ದೇನೆ. ಆ ಲೇಖನಮಾಲೆಯಲ್ಲಿ ಮತ್ತೊಂದು ಕಂತು ಇಲ್ಲಿದೆ. ಇದರಲ್ಲಿ ದಾಖಲಿಸುತ್ತಾ ಬಂದಿದ್ದೇನೆ. ಆ ಲೇಖನಮಾಲೆಯಲ್ಲಿ ಮತ್ತೊಂದು ಕಂತು ಇಲ್ಲಿದೆ. ಇದರಲ್ಲಿ ವಡ್ಡಾರಾಧನಕಾರ ಉದಾಹರಿಸಿರುವ ಮೂರು ಸಂಸ್ಕೃತ ಶ್ಲೋಕಗಳು ಇತರ ಸಂಕಲನಗಳಲ್ಲಿಯೂ ಸೇರ್ಪಡೆಯಾಗಿರುವುದನ್ನು ತೋರಿಸಿದ್ದೇನೆ. ವಡ್ದಾರಾಧನ ಕಾರನು ಬಹುಜನ ಮನ್ನಣೆ ಪಡೆದು ಲೋಕಪ್ರಿಯವಾದ ಪದ್ಯಗಳನ್ನು ಆಯ್ಕೆಮಾಡಿರುವುದನ್ನು ಇದರಿಂದ ಅರಿಯಬಹುದು.

೧. ಸುಖಸ್ಯಾನಂತರಂ ದುಃಖ ದುಃಖಸ್ಯಾನಂತರಂ ಸುಖಂ
ಚಕ್ರವತ್ ಪರಿವರ್ತಂತೇ ದುಃಖಾನಿ ಚ ಸುಖಾನಿ ಚ
||

(ಈ ಶ್ಲೋಕದ ಎರಡನೆಯ ಸಾಲು ಅನ್ಯತ್ರ ಸುಖ-ದುಃಖೇ ಮನುಷ್ಯಾಣಾಂ ಚಕ್ರವತ್ ಪರಿವರ್ತತಃ- ಎಂದಿದೆ, ಅವೇ ಶಬ್ದಗಳಿದ್ದರೂ ಸ್ಥಳಾಂತರಗೊಂಡಿವೆ.) ವಡ್ದಾರಾಧನೆಯಲ್ಲಿ (ಪುಟ ೯೭) ಉಲ್ಲೇಖಗೊಂಡಿರುವ ಈ ಶ್ಲೋಕ ಸಿಗುವ ಇತರ ಕೃತಿಗಳು:

CS, II, ೪೮,.CSBD ೧೪೮, ab,dc. CSBI, ೨, ೫೦.
CSJ, 2, 48, CSC, ೨, ೪೯. CSC II, ೧೪೮.
CSB, II, ೧೪೭. CSLD ೨, ೪೮. CR, ೬, ೫೧.
CNP II. ೪೯. CPS, ೧೫೩, ೫೨. MBh, ೧೨, ೧೭೪, ೨೦.
GP, I, ೧೧೩, ೬೧, IS. ೭೦೮೬. Subh, ೧೮೧. Slt (OJ), ೭೬.
ShD(T), ೬೪. ಸೂರಹಾ, ೮ ೨೬೨.

೨. ರಾಜ್ಞಿ ಧರ್ಮಿಣಿ ಧರ್ಮಿಷ್ಠಾಃ ಪಾಪೇ ಪಾಪಸಮಾಶ್ರೀತಾಃ
ರಾಜಾನಮನುವರ್ತಂತೇ ಯಥಾ ರಾಜಾ ತಥಾ ಪ್ರಜಾಃ
||

(ಈ ಶ್ಲೋಕದ ಮೊದಲನೆಯ ಪಾದದ ಉತ್ತರಾರ್ಧ ‘ಪಾಪ ಸಮಾಶ್ರಿತಾಃ’ ಎಂಬುದಕ್ಕೆ ಭೋಜಪ್ರಬಂಧದಲ್ಲಿ ‘ಪರಾಃ ಸದಾ’ -ಎಂದೂ ಸೋಮದೇವನಲ್ಲಿ ಮತ್ತು ಚಾಣಕ್ಯಕೃತ ಶತಕಗಳಲ್ಲಿ ‘ಪಾಪಾಃ ಸಮೇ ಸಮಾಃ’ -ಎಂದೂ ಪಾಠ ಭೇದಗಳಿವೆ).

ವಡ್ಡಾರಾಧನೆಯಲ್ಲಿ (ಪುಟ ೧೧೮) ಬರುವ ಈ ಸಂಸ್ಕೃತ ಶ್ಲೋಕ ಉದಾಹೃತವಾಗಿರುವ ಇತರ ಕೃತಿಗಳು:

CS, II, ೨, ಪುಟ ೨೫೮
CS, XIII, ೭, ಪುಟ ೭೬
ಸುರಭಾ ೧೧೯, ಪುಟ ೧೪೫
ಸ್ವಾಮಿ ಸಮುದ್ದೇಶ,. ನೀತಿ ವಾಕ್ಯಾಮೃತ
ಬಲ್ಲಾಲ ಕವಿ, ಭೋಜ ಪ್ರಬಂಧ, ಪದ್ಯ ೪೪
ಸೋಮದೇವಸೂರಿ, ಯಶಸ್ತಿಲಕ ಸಂಪು

೩. ಧರ್ಮಾರ್ಥ ಕಾಮಮೋಕ್ಷಾಣಾಂ ಯಸ್ಯೈಕೋಪಿ ನ ವಿದ್ಯತೇ
ಅಜಾಗಲಸ್ತನಸ್ಯೈವ ತನ್ನ ಜನ್ಮ ನಿರರ್ಥಕಂ
||

ವಡ್ಡಾರಾಧನೆಯಲ್ಲಿ (ಪುಟ ೧೦೩) ಉದಾಹೃತವಾಗಿರುವ ಈ ಸಂಸ್ಕೃತ ಶ್ಲೋಕ ದೊರೆಯುವ ಇತರ ಕೃತಿಗಳು:

CV, III, ೭. CV, III, ೨೦. CS, II, ೯೫
ಸುಮಯೋಚಿತ ಪದ್ಯ ರತ್ನ ಮಾಲಿಕಾ
ಸುಭಾಷಿತ ಮಂಜರೀ, ಕಸಾಪ, ದ್ವಿಮು. ೧೯೮೦, ಪು. ೪೯೫
ಶತಕ ತ್ರಯಾದಿ ಸುಭಾಷಿತ ಸಂಗ್ರಹ, ೫೪೪

ಹೀಗೆಯೇ ವಡ್ಡಾರಾಧನೆಯ ಇನ್ನೂ ಕೆಲವು ಉದಾಹೃತ ಸಂಸ್ಕೃತ – ಪ್ರಾಕೃತ ಪದ್ಯಗಳ ಮೂಲಸೂಚನೆಗಳನ್ನೂ ವ್ಯಾಪಕ ಬಳಕೆಯನ್ನೂ ಗುರುತಿಸಬಹುದು. ಈ ಬಗೆಯ ತೌಲನಿಕ ಅಧ್ಯಯನದಿಂದ ಪ್ರಾಚೀನತೆಯೊಂದಿಗೆ ಪಾಠಾಂತರಗಳೂ ಬೆಳಕಿಗೆ ಬರುತ್ತವೆ.

ಸಂಕೇತ ಸೂಚಿ

C S : ಚಾಣಕ್ಯಸಾರ ಸಂಗ್ರಹಃ

CSBI : ಟೂಬಿಂಗನ್ ಹಸ್ತಪ್ರತಿ ಹಾಳೆ ಸಂಖ್ಯೆ ೫೯೮

CSB II : ಟೂಬಿಂಗನ್ ಹಸ್ತಪ್ರತಿ ಹಾಳೆ ಸಂಖ್ಯೆ ೫೯೯

CSBD : ಬೋಧಿ ಚಾಣಕ್ಯಮ್ (ಚಾಣಕ್ಯಸಾರ ಸಂಗ್ರಹಃ), (ಸಂ.) ಭ.ಸಿ.ದತ್, ಕಲಕತ್ತ, ೧೮೮೮

CSJ : ಲೈಡನ್ನಿನ ಪ್ರಾಧ್ಯಾಪಕರಾದ J.W. de Jong ಅವರ ಹಸ್ತಪ್ರತಿ

CSC I : ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಗ್ರಂಥಭಂಡಾರ ಹಸ್ತಪ್ರತಿ ೧೫೩೯

CSC II : ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಗ್ರಂಥಭಂಡಾರ ಹಸ್ತಪ್ರತಿ ೧೩೪೬

CSLd : ಲೈಡನ್ನಿನ ವಿಶ್ವವಿದ್ಯಾಲಯದ ಗ್ರಂಥಭಂಡಾರ ಹಸ್ತಪ್ರತಿ Lub/D ೧೨೨

CR : ಚಾಣಕ್ಯ ರಾಜನೀತಿ ಶಾಸ್ತ್ರ ಆವೃತ್ತಿ

CV : ವೃದ್ಧ ಚಾಣಕ್ಯ, textus ornatior version

CNP II : ಪ್ಯಾರಿಸ್ ವಿಶ್ವವಿದ್ಯಾಲಯದ ಹಸ್ತಪ್ರತಿ ೧೭೦೭೨-I(B)

CPS : ವೃದ್ಧ ಚಾಣಕ್ಯ. (ಸಂ) ಪಂ. ಶ್ರೀರಾಮ ಶಾಸ್ತ್ರಿ, ಕಲಕತ್ತ, ೧೭೭೭

MBh : ಮಹಾಭಾರತ, (ಸಂ)ಪ್ರತಾಪಚಂದ್ರರಾಯ್, ಕಲಕತ್ತ, ಮೂರನೆಯ ಆವೃತ್ತಿ, ೧೮೮೭=೮೮

GP : ಗರುಡ ಪುರಾಣ, (ಸಂ) ಜೀವಾನಂದ ವಿದ್ಯಾಸಾಗರ, ಕಲಕತ್ತ, ೧೮೯೦

IS : Indische 0spruche, Sanskrit 0and Deutsch0 heransgegeben Von 0O 0Bohtlingk.Zweitevermehrte0U.VerbesserteAnsgabel-III, St. Petersburg, 1870-1873

Subh : ಸುಭಾಷಿತ ರತ್ನಾರ್ಣವ, ಮೇಲಿನ IS ನಲ್ಲಿ ಉದಾಹೃತ

Slt (OJ) : ಶ್ಲೋಕಾಂತರ, ಜಾವಾದ ಪ್ರಾಚೀನ ನೀತಿ ಗ್ರಂಥ, (ಸಂ.) ಶಾರದಾರಾಣಿ. ದೆಹಲಿ, ೧೯೫೭

ShD (T) : ಪ್ರಜ್ಞ್ಯದಂಡ, ಲಿ-ತುಂಬ್ (ನಾಗಾರ್ಜುನ), (ಸಂ.) ಮೇಜರ್ ಡಬ್ಲ್ಯು.ಎಲ್. ಕ್ಯಾಂಪ್‍ಬೆಲ್, ಕಲಕತ್ತ, ೧೯೧೯ (ಟಿಬೆಟನ್)

ಸೂರಹಾ : ಸೂಕ್ತಿರತ್ನ ಹಾರ, (ಸಂ) ಕೆ. ಸಾಂಬವಶಿವಶಾಸ್ತ್ರಿ ತಿರುವನಂತಪುರ, ೧೯೩೮, ತಿರುವನಂತಪುರ ಸಂಸ್ಕೃತ ಮಾಲೆ, CXLI

ಸುರಭಾ : ಸುಭಾಷಿತ ರತ್ನ ಭಾಂಡಾಗಾರ, ನಿರ್ಣಯಸಾಗರ ಪ್ರಕಾಶನ, ಮುಂಬಯಿ, ಏಳನೆಯ ಮುದ್ರಣ, ೧೯೩೫

ಆಧಾರ ಮತ್ತು ನೆರವು : Canakya- Niti – Text – Tradition, (ed.) Ludwik Sternbach, Vol-I, Partl, 1963