ದೇವಾಲಯಗಳಿಗೆ, ವ್ಯಕ್ತಿಗಳಿಗೆ ಕೊಡುತ್ತಿದ್ದ ದಾಬ-ಧರ್ಮ-ದತ್ತಿಗಳನ್ನು ಇತರರು ಅಪಹರಿಸದಿರಲು, ಪರಭಾರೆ ಮಾಡದಿರಲು ಶಾಪರೂಪದ ಎಚ್ಚರಿಕೆಗಳನ್ನು ಶಾಸನಫ಼ಳ ಕಡೆಯ ಭಾಗದಲ್ಲಿ ಬರೆಸುತ್ತಿದ್ದರು. ಇಂತಹ ಸಾಲುಗಳಿರುವ ಭಾಗದಲ್ಲಿ ಮನುವಿನಿಂದಲೊ, ಬೇರೆ ಕಡೆಯಿಂದಲೊ ಆರಿಸಿದ ಉದಾಹರಿಸಿದ ಪದ್ಯಗಳನ್ನು ಸಾಮಾನ್ಯವಾಗಿ ಸೇರಿಸುತ್ತಿದ್ದರು. ಒಮ್ಮೊಮ್ಮೆ ಶಾಸನಕವಿಯೆ ಸ್ವತಂತ್ರವಾಗಿ ರಚಿಸಿದ ಗದ್ಯ – ಪದ್ಯಗಳಲ್ಲಿ ಈ ಭಾವನೆಯನ್ನು ವ್ಯಕ್ತ ಪಡಿಸಲಾಗುತ್ತಿತ್ತು. ಶಾಸನದ ಕಡೆಯಲ್ಲಿ ಇರುವ ಇಂತಹ ಹೇಳಿಕೆಗಳಿರುವ ಭಾಗವನ್ನು ‘ಶಾಪಾಶಯ ಭಾಗ’ ವೆನ್ನುವರು.

ಶಾಪಾಶಯ ಭಾಗದ ಭಾಷೆ ಸಂಸ್ಕೃತದಲ್ಲಿ ಇರುವುದು ಅಧಿಕ. ಹಲವೊಮ್ಮೆ ಕನ್ನಡದಲ್ಲಿಯೂ ಇರುವುದುಂಟು. ಇದುವರೆಗೆ ಇಂತಹ ಶಾಪಾಶಯ ಭಾಗದ ವಿಚಾರದಲ್ಲಿ ಅಷ್ಟಾಗಿ ಗುರುತಿಸದಿರುವ ಅಶವೆಂದರೆ ಜೈನ ಪರವಾದ ಪ್ರಸ್ತಾಪ. ಈ ಪುಟ್ಟ ಸಂಲೇಖನದಲ್ಲಿ ಅಂತಹ ಕೆಲವು ಶಾಸನಗಳನ್ನು, ವಿದ್ವಾಂಸರ ವಾಗ್ವಾದಕ್ಕೆಂದು, ಕಾಲಾನುಕ್ರಮಣಿಯಲ್ಲಿ ಸಂಗ್ರಹಿಸಿ ಕೊಟ್ಟಿದ್ದೇನೆ.

ಕೊಟ್ಟ ದಾನವನ್ನು ಅಪಹರಿಸಿದರೆ, ವಂಚಿಸಿದರೆ, ಅಂತಹವರಿಗೆ, ಬ್ರಾಹ್ಮಣ ರನ್ನು ಗೋವುಗಳನ್ನು ವಾರಣಾಸಿಯಲ್ಲಿ ಹತ್ಯೆ ಮಾಡಿದ ಪಾಪ ಸುತ್ತಿಕೊಳ್ಳುತ್ತದೆ – ಎಂಬಿತ್ಯಾದಿ ಹೇಳಿಕೆಗಳು ಸಾವಿರಾರು ಶಾಸನಗಳ ಕಡೆಯಲ್ಲಿ ಉತ್ಕೀರ್ಣವಾಗಿದೆ. ಅದರಂತೆಯೆ ಪ್ರಾಚೀನ ಶಾಸನಗಳ ಶಾಪಾಶಯದಲ್ಲಿ ಇನ್ನೊಂದು ಎಳೆಯೂ ಇರುತ್ತಿತ್ತು. ಅದೆಂದರೆ, ದಾನ ಕೆಡಿಸಿದವರು, ಜೈನಮುನಿ (ರಿಷಿ, ರಿಸಿ, ರಿಸಿ) ಗಳನ್ನು ಕೊಂದ, ಬಸದಿಗಳನ್ನು ನಾಶ ಪಡಿಸಿದ, ಜೈನ ತೀರ್ಥಕ್ಷೇತ್ರಗಳನ್ನು ಕೞ್ಬಪ್ಪು (ಶ್ರವಣ ಬೆಳಗೊಳ)ವನ್ನು ನಾಶಪಡಿಸಿದ ಪಾತಕನಾಗುತ್ತಾನೆಂಬ ಹೇಳಿಕೆ ಒಂದು ಶಾಸನದಲ್ಲಿ ಬಂದಿದೆ; ಇದು ವಿಶೇಷ ಗಮನಿಕೆಗೆ ಅರ್ಹವಾದ ಶಾಪಾಶಯ. ಇಂತಹ ಕೆಲವು ಶಾಸನಗಳು ಮುಂದಿನ ಪುಟದಲ್ಲಿ ಉದ್ಧೃತವಾಗಿವೆ.

೧. ಬಾದಾಮಿ ಚಾಳುಕ್ಯರ ಇಮ್ಮಡಿ ವಿಕ್ರಮಾದಿತ್ಯನ (ಸು. ೭೩೫-೪೩) ಕಾಲದ ಒಂದು ಕನ್ನಡ ಜೈನ ಶಾಸನದಲ್ಲಿ ಬರುವ ಕಡೆಯ ಮಾತುಗಳಿವು:

ಭಟಾರರಾ ಧರ್ಮ್ಮದ ಸ್ಥಿತಿಯುಂ ಈಯಕ್ಷರಂಗಳುಮಾನ್

೧.ಎ. ಬಾದಾಮಿ ಚಾಳುಕ್ಯರ ಇಮ್ಮಡಿ ಕೀರ್ತಿವರ್ಮನ (೭೪೪-೬೦)

ಕಾಲದ ಒಂದು ಶಾಸನಾಂತ್ಯದ ಭಾಗ :

ಎಣ್ಟು ಮತ್ತಲ್ಗೞ್ದಿ ರಾಜಮಾನಂ ಜಿನೇನ್ದ್ರ
ಭವನಕ್ಕಿತೆತ್ತೋರಿದನಾರಾಎಸಲಿಪ್ಪೋರ ವರ್ತ್ತೆ
ಧರ್ಮ್ಮಮಾರಾರಿದಾ ಕೆಡಿಪ್ಪೋರವರ್ತ್ತೆ ಪಾಪ || ಪರಲೂರಾ
ಚೇದಿಯಬ್ಬಱ ಪ್ರಭಾಚನ್ದ್ರ ಗುರಾವಾರ್ಪ್ಪಡೆ [ದಾರ್]
[ಸೌ.ಇ.ಇ. ೨೦, ೯. ೮ ಶ. ಆಡೂರು (ಧಾಜಿ / ಹಾನಗಲ್ ತಾ) ಪು. ೧೦]

ಹೋಗುವ ಮಾತು ಸಹ ಸೇರಿರುವುದು ಪರಿಭಾವನ ಯೋಗ್ಯವಾಗಿದೆ.
ಕುಱುಂಬುದೆೞಿಯಂ ಪರಿಹಾರಂ ಬಿಟ್ಟಾರ್
ಈ ತೊೞಿಯ ಕೊಣ್ಡವರ್ – ಬಾರಣಾಸಿಯುವಂ
ಬಸದಿಯುವಂ ಕವಿಲೆಯು ವನಱಿದ ಬ್ರಹಾತಿಯನುಣ್ಡೊನ್
||
[ಕ್ರಿ.ಶ. ೮ನೆಯ ಶ. ಅಲಂಪೂರು]

೩. ಇದಾನೞಿತ್ತು ಕೆಡಿಪಿದೊನೊಕ್ಕಲ್ಕೆಡುಗ ಪಞ್ಚಮ
ಹಾಪಾತಕನಕ್ಕವನ್ಮಕ್ಕಳಂ ಸಾಗ
ವಸದಿಯಾನ್ಕೆಯ್ದೊನ್ನಾರಾಯಣ ಪೆ
ರುನ್ತಚ್ಚನ್
[ಎ.ಕ. ೩ (ಪ) ಹೆಕೋ. ೬೩ (ಮೈಆರಿ ೧೯೩೨-೫೮) ೯. ಶ. ಹೆಬ್ಬರಗುಪ್ಪೆ (ಮೈಜಿ / ಹೆಕೋತಾ) ಪು. ೪೬೮]

೪. ತೆಱೆಗೆಯೆಂದು ಬಿಟ್ಟಿಯೆಂದು ಕೇಳಸಲ್ಲದು ಯೀ
ಧರ್ಮ್ಮವ ನಡಸಿದವರಿಗೆ ಸ್ವರ್ಗ್ಗಪದವ ಪಡೆವರು ಯಿ
ಶರ್ಮ್ಮಕ್ಕೆ ತಪ್ಪಿದವರು ಯೇಳನೆಯ ನರಕಕೆ ಹೋಹರು
||
[ಎ.ಕ. ೭-೧, ಶಿವಮೊ. ೧೧೪. ಸು. ೯೫೦. ಕುಂಸಿ. ಪು. ೧೧೬]

೫. ಇದರ ರಕ್ಷಿಸಿ ನೆಗೆಱ್ದೂತಗೆ ಅಷ್ಟ ಸಷ್ಟಿ ತೀರ್ತ್ಥದಲ್ಲಿ ಫಲಮಕ್ಕುಂ ಸರ್ಗ್ಗಾಪವರ್ಗ್ಗ ಮೋಕ್ಷ ಪಡೆಗು
[ಸೌ.ಇ.ಇ. ೯-೧, ೭೧.೯೭೨. ಬಾಗಳಿ (ಬಳ್ಳಾರಿಜಿ/ ಹರಪನಹಳ್ಳಿ ತಾ) ಪು. ೪೪]

೬. ಇದನಱಿದೊಂ ಪ್ರಯಾಗೆಯುವಂ ಕುರುಕ್ಷೇತ್ರವುವಂ ಬಾಣರಾಸಿಯುವಂ ಕಱ್ಬಪ್ಪುವಂ ಸಾಸಿರ ಕವಿಲೆಯುವಂ ಸಾಸಿರ್ಬ್ಬ ರ್ಪ್ಪಾರ್ವ್ವರುವಂ ಸಾಸಿರ್ಬ್ಬರ್ ರಿಷಿಯರುವನಱಿಸಪಾತಕನು ಬ್ರಹ್ಮಾತಿಕಾರನುಮಕ್ಕುಂ [ಸೌ.ಇ.ಇ. ೯-೧, ೭೭. ೯೯೨ ಕೋಗಳಿ (ಬಳ್ಳಾರಿ ಜಿ/ ಹಡಗಲಿ ತಾ) ಪು. ೪೯]

೭. ಇದಱ ಬಿತ್ತು ವಟ್ಟವನೞಿಪಿಕೊಣ್ಡವ
ದೇಗುಲವಂ ಬಸದಿಯುಮಂ ಕವಿಲೆಯುಮಂ
ಕೆಱಿಯುಮಂ ಬಾಣರಾಸಿಯುಮನಱೆದಂ
[ಎ.ಕ. ೪ (ಪ) ಚಾಮರಾ. ೪೦೪ (ರಿ. ೧೯೩೧-೪೩) ೯೯೩. ಸೋಮಸಮುದ್ರ (ಮೈಜಿ/ಚಾಮರಾ ತಾ)ಪು. ೨೬೫]

೮. ರಿಷಿಯರುವಂ ಸಾಸಿರ ಕವಿಲೆಯುಮನಳಿದ ಬ್ರಹ್ಮಾತಿಯಕ್ಕು
[ಸೌ.ಇ.ಇ. ೯-೧, ಸು. ೧೦೫೦. ಕೋಗಳಿ. ಪು. ೧೧೩]

ಇದನಳಿದಂ ಮಂಗಪಟ್ಟೆಯೊಳಯ್ನೂರ್ವ್ವರು ರಿಶಿಯರನಳಿದ ಮಹಾಪಾತಕ ನಕ್ಕು ||
[ಸೌ.ಇ.ಇ. ೧೧-೧, ೯೪.೧೦೫೯. ಡಂಬಳ (ಧರ್ಮವೊಱಲ್) – ಧಾಜಿ/ಮುಂಡರಗಿ ತಾ) ಪು. ೯೦]

೧೦. ನಗರದೊಳಗಾವನಾನುಂ
ನಗರ ಜಿನಾಲಯ ಜಿನೇಂದ್ರ ಪಾದಾ [ರ್ಚ್ಚ] ನೆಗೀ
ನಗರಂ ಬಿಟ್ಟುದನ (ಱಿ) ಯಲು
ಬಗೆದಂದಂ ತನಗೆ ತಂದನಾಯುವ ಕುಂದ (೦)
ಎನ [ಗ] ನು ಗೇವಣೆ ಘಲ್ಲೆಣೆ
ಘನವೀ ಕೇಣಿಯನದೇಂ [ಕು] ನಿಗುವೆ(೦) ನಾನೆಂ
ಧನಘು ಜಿನ ಧರ್ಮ್ಮ ದೂಷಕ
ತನದೊಳಮಿದನಱಿದಾತನಸು (೦) ಗತಿಗಿಳಿದ (೦)
||

ರಾಯಚೂರು ಜಿಲ್ಲೆಯ ಹಿರಿಯ ಗಬ್ಬೂರು ಜಿನಾಲಯಕ್ಕೆ ಸೇರಿದ್ದು ಈ ಶಾಸನ. ಇದು ಕಲ್ಯಾಣ ಚಾಳುಕ್ಯ ವಿಕ್ರಾಮಾದಿತ್ಯ ೬ ರಾಜನ ಆಳಿಕೆಯರಚನೆ; ಕ್ರಿ.ಶ. ೧೧೦೯ ಇದರ ಕಾಲ. ಈ ಶಾಸನ ಹೈದರಾಬಾದು ಮ್ಯೂಸಿಯಂನಲ್ಲಿದೆ. ಈ ಶಾಸನಾಂತ್ಯದ ಎರಡು ಶಾಪಾಶಯ ಕಂದ ಪದ್ಯಗಳನ್ನಿಲ್ಲಿ ಉದಾಹರಿಸಿದೆ. ಈ ಶಾಪದ ಮಹತ್ವವೆಂದರೆ ಮಾಮೂಲಿನ ಶಾಪಾಶಯದ ಒಕ್ಕಣೆ ಇಲ್ಲದಿರುವುದು. ಹಿರಿಯ ಗಬ್ಬೂರಿನ ನಖರಂಗಳು, ಕಮ್ಮಟದ ಅಧಿಕಾರಗಳು, ಕಮ್ಮಟಕಾರರು ಸೇರಿ ಆ ಊರೊಳಗಿನ ಬ್ರಹ್ಮಜಿನಾಲಯಕ್ಕೆ ಬಿಟ್ಟು ಕೊಟ್ಟ ದಾನ ದತ್ತಿಗಳ ಪೂರ್ತಿ ಮಾಹಿತಿ ಹೇಳಿದ್ದಾದ ಮೇಲೆ, ಶಾಸನಾಂತ್ಯದಲ್ಲಿ ಮೇಲೆ ಉದಾಹರಿಸಿದ ಎರಡು ಪದ್ಯಗಳಿವೆ.

[Hyderabad Archaeological Series, No. 18. ‘A Corpus of Inscriptions in the Kannada Districts of Hyderabad State’, ed. Desai, P.B. (1958) Inscription No. 8. AD. 1109pp. 51-52]

೧. ರಿಸಿಯಂ ಕೊನ್ದ ಪಾತಕನ ಪೋದ ಲೋಕಕ್ಕೆ ಪೋಪರು
[ಸೌ.ಇ.ಇ. ೧೫, ೧೪.೧೧೩೫. ಸಿದ್ದಾಪುರ (ಧಾಜಿ/ತಾ) ಪು. ೧೨. ಸಾಲು : ೨೬]

ಸಾರಾಂಶ:

೧. ಉಳಿದೆಲ್ಲ ಶಾಸನಗಳಂತೆಯೇ ಜೈನ ಶಾಸನಗಳನ್ನೂ ಸಹ ಆರಂಭ, ಅಂತ್ಯ, ಸ್ಥಲನಾಮ, ಉಳಿದ ವಿಷಯಗಳು ಎಂಬ ನಾಲ್ಕು ನೆಲೆಗಳಲ್ಲಿ ಅಧ್ಯಯನ ನಡೆಸಬಹುದು. ತೌಲನಿಕವಾಗಿ ಕೈಗೊಳ್ಳುವ ಇಂತಹ ಅಧ್ಯಯನಗಳಿಂದ ಹಲವು ಹೊಸ ಸಂಗತಿಗಳನ್ನು, ಇರುವ ಹಳೆಯ ಮಾಹಿತಿಗಳ ಒಡಲಿಂದ, ಹೊರಗೆ ತೆಗೆಯಬಹುದು.

೨. ಶಾಸನಾಂತ್ಯದಲ್ಲಿ ಬರುವ ಶಾಪಾಶಯಗಳಲ್ಲಿ, ಸಂಭವಿಸಿದ ಸ್ಥಿತ್ಯಂತರ ವೊಂದನ್ನು ಗುರುತಿಸುವುದಷ್ಟೇ ಈ ಸಂಲೇಖನದ ಉದ್ದೇಶವೆಂದು ಪ್ರಾರಂಭ ದಲ್ಲಿಯೇ ಸ್ಪಷ್ಟಪಡಿಸಿದೆ. ಈ ಶಾಪಾಶಯಗಳಲ್ಲಿ ಇದ್ದ ಒಂದು ನಿರ್ದಿಷ್ಟ ಧಾರ್ಮಿಕ ಒತ್ತನ್ನು ಕಿತ್ತು ಹಾಕಿರುವುದು ಕ್ರಮೇಣ ಆಗಿರುವ ಮಾರ್ಪಾಟು. ಜೈನ ಪರವಾಗಿ ಇದ್ದ ಮಾತುಗಳನ್ನು ಪಕ್ಕಕ್ಕೆ ಸರಿಸಿ ಆಮೇಲೆ ಅದು ಮತ್ತೆ ಜೀವ ಪಡೆಯದಂತೆ ಆಗಿದ್ದು ಚಾರಿತ್ರಿಕ ವಿಸ್ಮಯ.

೩. ಇದು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಬದಲಾವಣೆಯ ಸಂಕೇತವೂ ಹೌದು.