ನಮಗೆ ಕಾಣುವುದು  ಚಂದ್ರನ ಒಂದು ಮುಖ ಮಾತ್ರ.  ಭೂಮಿಗೆ ವಿಮುಖವಾಗಿರುವ, ಈವರೆಗೆ ಯಾರೂ ಕಾಣದ, ಚಂದ್ರನ   ಒಂದು ಪಾರ್ಶ್ವವನ್ನು ಆಚೆಬದಿ (farside) ಎಂದು ಕರೆಯೋಣ. ಚಂದ್ರನ ಆವರ್ತನೆ ಮತ್ತು ಪರಿಭ್ರಮಣೆ ಎರಡೂ ಒಂದೇ ಆಗಿರುವ ವಿಶಿಷ್ಟ ವಿದ್ಯಮಾನದ ಕಾರಣ ನಾವು ಕಾಣುವುದು ಚಂದ್ರನ ಒಂದು ಬದಿ ಮಾತ್ರ.ಇದಕ್ಕೆ ಕಡಲಿನ ಉಬ್ಬರ ಇಳಿತದ ನೇರ  ಸಂಬಂಧವೂ ಇದೆ.

ಮೊದಲಬಾರಿಗೆ 1959ರಲ್ಲಿ ಈ ಬದಿಯನ್ನು ರಷ್ಯಾದ ಸೋವಿಯತ್ ಲೂನ 3 ಎಂಬ ವ್ಯೋಮನೌಕೆಯೊಂದು  ಛಾಯಾಗ್ರಹಣ ಮಾಡಿತು. ಅದಕ್ಕೆ ರಷ್ಯಾದ ಹೆಸರಾದ ಮೇರ್ ಮಾಸ್ಕೋವಿಎನ್ಸ್ ಎಂದು ಕರೆಯಲಾಯಿತು. ಸೋಜಿಗದ ಸಂಗತಿ ಎಂದರೆ ಚಂದ್ರನ ಮೇಲ್ಮೈಮೇಲಿನ ಕಪ್ಪಾಗಿ ಕಾಣುವ (ಮೊಲ ಜಿಂಕೆ ಹೀಗೆಲ್ಲಾ ಭ್ರಮೆ ಮೂಡಿಸುವ) ವಿಶಾಲವಾದ ಮಟ್ಟಸ ಪ್ರದೇಶದಲ್ಲಿ ಒಂದಾದ ಮಾರಿಯಾ  ಇರುವಂತೆ,  ಚಂದ್ರನ ಆಚೆಬದಿಯಲ್ಲಿ  ಇಲ್ಲ. ಜರ್ಜರಿತವಾದ   ಗುಡ್ಡಗಾಡು ಪ್ರದೇಶ ಪ್ರಧಾನವಾಗಿರುತ್ತದೆ. ಅಂದರೆ ಅಗ್ನಿಶಿಲೆಯ ಭುಗಿಲೇಳುವಿಕೆ ಕೆಲ  ಪ್ರದೇಶಕ್ಕೆ ಮಾತ್ರ  ಸೀಮಿತವಾಗಿದೆ.

ಅಂದರೆ ಭೂಮಿಯಿಂದ ನಾವು ಕಾಣುವ ಚಂದ್ರನಿಗಿಂತ ಈ ಭಾಗ  ಭಿನ್ನವಾಗಿದೆ.

LROC WAC ಚಿತ್ರಿಸಿರುವ ಚಂದ್ರನ ಆಚೆಬದಿಯ 180° ಅಕ್ಷಾಂಶ ಮತ್ತು 0° ರೇಖಾಂಶವನ್ನೊಳಗೊಂಡ ಲಂಬರೇಖೀಯ ಚಿತ್ರಣ

ಹೀಗೆ ಚಂದ್ರನ ಎರಡು ಪಾರ್ಶ್ವಗಳು ಬಿಂಬ ಪ್ರತಿಬಿಂಬದಂತೆ ಇಲ್ಲದಿರುವುದೇ ಒಂದು ಕುತೂಹಲಕರ ವೈಜ್ಞಾನಿಕ ಪ್ರಶ್ನೆ. ಹಿಂದಿನ ಅಧ್ಯಯನಗಳ ಪ್ರಕಾರ ಚಂದ್ರನ ಆಚೆಬದಿಯಲ್ಲಿ ಚಿಪ್ಪು  ದಪ್ಪವಾಗಿರುತ್ತದೆ. ಆದ್ದರಿಂದ ಅದರ ಮೇಲ್ಮೈಯಲ್ಲಿ  ಶಿಲಾರಸ ಸ್ಫೋಟಿಸುವಿಕೆ ಕಷ್ಟವಾಗುತ್ತದೆ ಹಾಗೂ ಮಟ್ಟಸ ಪ್ರದೇಶದಲ್ಲಿ ಲಾವಾ ಪ್ರವಾಹದ ಅಗ್ನಿಶಿಲೆಯು ಅಲ್ಪ ಪ್ರಮಾಣದಲ್ಲಿರುತ್ತದೆ.  ಚಿಪ್ಪು ದಪ್ಪವಾಗಿರುವುದಕ್ಕೆ  ಕಾರಣ ಇನ್ನೂ ಚರ್ಚೆಯ ವಿಷಯವಾಗಿದ್ದು, ಸರಿಯಾದ ಉತ್ತರ ಇನ್ನೂ ದೊರೆತಿಲ್ಲ.

WAC ತಂಡದ ಚಿತ್ರೀಕರಣ ಕಾರ್ಯವು ತನ್ನದೇ ಆದ ವಿಶಿಷ್ಟ ಬೆಳಕಿನಲ್ಲಿ ಪ್ರತಿ ತಿಂಗಳೂ ಚಂದ್ರನ ಸಂಪೂರ್ಣ ಚಿತ್ರಣವನ್ನು ಚಿತ್ರೀಕರಿಸುತ್ತದೆ. ಇದರೊಂದಿಗೆ ಕಕ್ಷೆಯಿಂದ ಕಕ್ಷೆಗೆ ಸಿಗುವ ಪ್ರತಿಬಿಂಬ, ಸ್ಟೀರಿಯೋ ವ್ಯಾಪ್ತಿಯದಾಗಿರುತ್ತದೆ. ಈ ಬಿಡಿ ಬಿಡಿ ಬಿಂಬಗಳನ್ನು ಒಟ್ಟುಗೂಡಿಸಿ ಚಂದ್ರ  ನಕ್ಷೆಯನ್ನು ತಯಾರಿಸುವುದು ಬಹಳ ಕ್ಲಿಷ್ಟ ಕೆಲಸವೇ ಆಗಿದೆ. ಜರ್ಮನಿಯ Aerospace Center ನ  Lunar Reconnaissance Orbiter Camera (LROC) ತಂಡದ ಮುಂದಾಳತ್ವದಲ್ಲಿ  ಈ ಕಾರ್ಯ ನಿರ್ವಹಿಸುತ್ತಿದೆ. ಮೊದಮೊದಲಿಗೆ ತಯಾರಾದ WACನ ಸ್ಥಳಾಕೃತಿಯ ಹಲವಾರು ಉತ್ಪನ್ನಗಳು, LROCಯ ಹಲವಾರು    ಚಿತ್ರಣಗಳಲ್ಲಿ ಕೆಲವು ವರ್ಷಗಳಿಂದೀಚೆಗೆ ಪ್ರದರ್ಶನಗೊಂಡಿವೆ. WACನ ದತ್ತಾಂಶಕಾರ್ಯ ಅತಿಶೀಘ್ರದಲ್ಲೇ ಮುಗಿಯಲಿದ್ದು ಈ ವರ್ಷದ ಅಂತ್ಯದಲ್ಲಿ ಬಿಡುಗಡೆಗೊಳ್ಳಲಿದೆ.

೧೯೯೨ರ ಲ್ಲಿ ಹಾರಿದ ಕ್ಲೆಮೆಂಟೈನ್ (Clementine) ಬಾಹ್ಯಾಕಾಶ  ಯೋಜನೆಯಿಂದ ಲಭ್ಯವಾದ ಅಚೆಬದಿಯ ಚಿತ್ರ ಗಳು ಸುಂದರವಾಗಿದ್ದರೂ  ನೇರವಾಗಿ ಬಿಸಿಲು ಬೀಳುವ ಸ್ಥಾನದಲ್ಲಿ ಸೂರ್ಯನಿದ್ದಾಗ ,  ಮೇಲ್ಮೈಸ್ವರೂಪವನ್ನು ನೋಡುವುದಕ್ಕೆ ಅನುಕೂಲವಾಗುವಂತೆ ಇರಲಿಲ್ಲ. ಲುನಾರ್ ರೆಕನ್ನೈಸೆನ್ಸ್ ಯೋಜನೆಯ ನೌಕೆಯ  WAC(Wide Angle Camera) ಚಿತ್ರಣವು ಚಂದ್ರನ ಆಚೆಬದಿ ಸ್ವರೂಪದ ಸಂಪೂರ್ಣ ಚಿತ್ರಣವನ್ನು ಒದಗಿಸಿದೆ.  ವಿಜ್ಞಾನಿಗಳಿಗೆ  ಇದು ಒಂದು ಅಮೂಲ್ಯವಾದ ಸಂಪತ್ತು.

ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾಗಿರುವ ವಿಶ್ವ ಚಿತ್ರಣದಲ್ಲಿ 15,000 WAC ಪ್ರತಿಬಿಂಬಗಳನ್ನು ಕಾಣಬಹುದು. ಇವುಗಳನ್ನು ನವೆಂಬರ್ 2009 ರಿಂದ ಫೆಬ್ರವರಿ 2011 ರವರೆಗೆ ಪಡೆಯಲಾಗಿದೆ. ಅಧೃವೀಯ ಪ್ರತಿಬಿಂಬಗಳನ್ನು GLD100 ಮಾದರಿ ಹಾಗೂ ಧೃವೀಯ ಪ್ರತಿಬಿಂಬಗಳನ್ನು LOLA ಮಾದರಿಗಳಂತಹ ನಕ್ಷೆಯಲ್ಲಿ ಪ್ರದರ್ಶಿಸಲಾಯಿತು. ಇದರೊಂದಿಗೆ LOLA ದಿಂದ ಪಡೆದು ತಿದ್ದಿದ ಸ್ಥಾನ ವಿವರಗಳ  WAC ಪ್ರತಿಬಿಂಬಕ್ಕಿಂತ ಉತ್ತಮವಾದ ಚಿತ್ರಗಳನ್ನು ಪಡೆಯಬಹುದಾಗಿದೆ.

ಮಾರ್ಚ್ 2011 PDS ಬಿಡುಗಡೆ ಪ್ರಕಾರ,  LROC ತಂಡ ಹತ್ತು (10)  ಟೈಲ್ ಗಳಲ್ಲಿ  ನಕ್ಷೆಯನ್ನು ಪ್ರದರ್ಶಿಸಿತು. ಇವುಗಳಲ್ಲಿ ಎಂಟು (8) ಸಮಆಯತ ಪ್ರಕ್ಷೇಪಗಳು 60° ಅಕ್ಷಾಂಶ  ಮತ್ತು  90° ರೇಖಾಂಶವನ್ನೊಳಗೊಂಡಿರುತ್ತವೆ. ಇದರೊಂದಿಗೆ ಒಂದೊಂದು ಧೃವೀಯ ±60° ಇಂದ ಇನ್ನೊಂದು   ಧೃವೀಯದವರೆಗೆ  ಎರಡು ಧೃವೀಯ ತ್ರಿವಿಮಿತೀಯ ಚಿತ್ರಣವೂ ಲಭ್ಯ.  ಈ ಸಂಕ್ಷಿಪ್ತ ದಾಖಲೆಗಳನ್ನು ಮಾರ್ಚ್ 15, ೨೦೧೧ ರಿಂದ ಅಂತರ್ಜಾಲದಲ್ಲಿ ಪುನರ್ಲಭ್ಯತೆಯ ಅವಕಾಶದೊಂದಿಗೆ ಪ್ರಸ್ತುತಪಡಿಸಲಾಗಿದೆ.ಕಾಲಾನುಕ್ರಮದಲ್ಲಿ ಚಂದ್ರನ ದ್ಯುತಿಮಾಪನ ಕಾರ್ಯದಲ್ಲಿ ಅರಿವು ವೃದ್ಧಿಗೊಂಡಂತೆ ಉತ್ತಮವಾದ ಹೊಸಹೊಸ ಚಿತ್ರಗಳನ್ನು ಪ್ರದರ್ಶಿಸಬಹುದು.

WAC ಚಿತ್ರಿಸಿರುವ ಆರು (6) ಲಂಬರೇಖೀಯ ಚಿತ್ರಣಗಳನ್ನು ಇಲ್ಲಿ ಕೊಟ್ಟಿದೆ. ಈ ಚಿತ್ರಣದಲ್ಲಿ ಚಂದ್ರನ ಎಡಮೇಲ್ಭಾಗದಿಂದ ಕೆಳ ಬಲಭಾಗದವರೆಗೆ ಮಧ್ಯರೇಖಾಂಶವು   0°, 60°, 120°, 180°, 240°, 300°.

ಸಂಬಂಧಿತ-ಸಂಪರ್ಕಗಳು:

WAC mosaic orthographic view centered at 0° longitude and 0° latitude
WAC mosaic orthographic view centered at 60° longitude and 0° latitude
WAC mosaic orthographic view centered at 120° longitude and 0° latitude
WAC mosaic orthographic view centered at 180° longitude and 0° latitude
WAC mosaic orthographic view centered at 240° longitude and 0° latitude
WACmosaic  orthographic  view centered at 300° longitude and 0° latitude

NASA/Goddard/Arizona State University ಇವರಿಗೆ ಕೃತಜ್ಞತೆಗಳು.