ನನ್ನ
ಬದುಕಿಗಿವಳೆ ಸೂರ್ಯ, ಚಂದ್ರ;
ಬಾಳ್ವೆಗಿವಳೆ ರಸದ ಕೇಂದ್ರ;
ಜೊತೆಯೊಳಿರಲು ನಾನೆ ಇಂದ್ರ!
ಮೆಯ್

ಸೋಂಕೆ ಪುಲಕನಂದನ;
ಸುಯ್ ಸುಗಂಧ ಚಂದನ;
ತೋಳ್
ಸುತ್ತೆ ಮೋಕ್ಷ ಬಂಧನ;
ಮುತ್ತೆ
ಪ್ರಾಣ ಅಗ್ನಿ ಇಂಧನ!
ಆನಂದದ ಆಲಿಂಗನ
ಶಿವಗಿರಿಜಾ ಮದನರತಿಗೆ
ಷೋಡಶಾಂಗ ಸಾಷ್ಟಾಂಗದ
ಅನಂಗವಂದನಾ!