ಏಕಿಂತು ಕುದಿಯುತಿಹೆ, ಓ ನನ್ನ ಪ್ರಾಣಪುರುಷ?
ಲೋಕಮಾತೆಯ ವಕ್ಷದಲ್ಲಿ ಸುರಕ್ಷಿತ ನಿನ್ನ ಹರುಷ!

ಇಂದುಕಲೆ ಮಿಂದುಟ್ಟು ಚಂದದಿಂದಿಹಳಲ್ಲಿ
ಶಿವಸುಖದ ಬುಗ್ಗೆಯೊಲು ಶಿವಮೊಗ್ಗೆಯಲ್ಲಿ!
ಚೈತ್ರನಾನಂದದಿಂ ತೇಜಸ್ವಿಯೊಡಗೂಡಿ
ಕೇಕೆ ಹಾಕುತ್ತಿಹನು ನವಿಲುಯ್ಯಲಾಡಿ!
ಹೆಸರನಿನ್ನೂ ಹೊರದ ಹೊಸದಾಗಿ ಬಂದಳು
ನಾಳೆ ‘ತಾರಿಣಿ’ಯಹಳು ಸುಖದೊಳಿಹಳು!
ಇಂದುಕಲೆ ಚೈತ್ರ ತೇಜಸ್ವಿ ತಾರಿಣಿಯರಿಗೆ
ಜನ್ನವಿತ್ತಾ ನನ್ನ ಹೇಮಾಂಗಿ ತಾನವಳು
ಗುರುದೇವ ಕೃಪೆಯೊಳಾರೋಗ್ಯದಿಂದಿಹಳು!