ಬ್ರಹ್ಮಕೆ ಸೃಷ್ಟಿಯ ಮಹದಾಶೆ;
ಸೃಷ್ಟಿಗೆ ಬ್ರಹ್ಮದ ಬೃಹದಾಶೆ!

ಆಶೆ ಆಶೆ ಆಶೆ ಆಶೆ
ಸೃಷ್ಟಿಯೆ ಬ್ರಹ್ಮದ ಹೇರಾಸೆ:
ತಾಯಿಗೆ ಮಗುವಿನ ಆಶೆ,
ಮಗುವಿಗೆ ತಾಯಿಯ ಆಶೆ.
ಹೂವಿಗೆ ಚಿಟ್ಟೆಯ ಆಶೆ,
ಗಂಡನ ಕಿವಿಗೆ
ಹೆಣ್ಣಿನ ದನಿಯಾಶೆ;
ಹೆಣ್ಣನ ಕಿವಿಗೆ
ಗಂಡಿನ ದನಿಯಾಶೆ.
ನನಗೆ
ನಿನ್ನಾಶೆ;
ನಿನಗೆ
ನನ್ನಾಶೆ!

ಆಶೆ ಆಶೆ ಆಶೆ ಆಶೆ
ಸೃಷ್ಟಿಯೆ ಬ್ರಹ್ಮನ ಹೇರಾಸೆ:

ಬ್ರಹ್ಮಕೆ ಸೃಷ್ಟಿಯ ಮಹಾದಾಶೆ,
ಸೃಷ್ಟಿಗೆ ಬ್ರಹ್ಮದ ಬೃಹದಾಶೆ!