ಇರುಳ ಮೊದಲ ತಾರೆ
ಬೈಗು ಹಣೆಗೆ ತೋರೆ
ಬನದಂಚಿಗೆ ಬಾರೆ,
ಓ ನನ್ನ ನೀರೆ!

ಸುತ್ತ ಕವಿಯೆ ಕತ್ತಲೆ
ಚಿತ್ತಜನಿಗೆ ಬತ್ತಲೆ!
ಕಣ್ ಕಾಣದ ಬೇಟ
ಕುರುಡುತನವೆ ನೋಟ!