ಮುತ್ತನೊಂದನೊತ್ತದಿಂದು
ಸತ್ತನೊಂದು ದಿನವನು!

ಮನ್ನಿಸೆನ್ನ, ಮುದ್ದು ಕಂದ,
ನಮ್ಮ ನಮ್ಮ ಮುನಿಸಿನಿಂದ
ನಿನ್ನನೆತ್ತಿಕೊಳ್ಳದಿಂದು
ಕೊಂದೆನೊಂದು ದಿನವನು,
ಮತ್ತೆ ಮರಳಲಾರದೊಂದೊ
ಮುತ್ತಿನಂಥ ದಿನವನು!