ಓ ಬೆಳಕಿನಾ ಮಲ್ಲಿಗೆ,
ಇಳಿದು ಬಾ ಇಲ್ಲಿಗೆ:
ಏರಲಾರೆನಲ್ಲಿಗೆ
ಓ ನನ್ನ ಮಲ್ಲಿಗೆ!

ಓ ಅಗ್ನಿ ಚರಣ ಚಂದ್ರಿಕೆ,
ನನ್ನ ಅಸು ಚಕೋರಿಕೆ
ತೃಷಿತೆ; ಆದೊಡಂಜಿಕೆ:
ನೀನಗ್ನಿಚಂದ್ರಿಕೆ!

ಓ, ಈ ಚಕೋರ ಕೋರಿಕೆ,
ನನ್ನ ಹೇ ಚಕೋರಿಕೆ,
ಏರಲಾರದಲ್ಲಿಗೆ:
ಇಳಿದು ಬಾ ಇಲ್ಲಿಗೆ,
ಓ ಬೆಂಕೆಮಲ್ಲಿಗೆ!