ಪ್ರಾಣೇಶ್ವರೀ, ಪ್ರಾಣೇಶ್ವರೀ,
ನೀನೊಡನಿರೆ ಗರಿಹಗುರಾ
ಸವಿಬದುಕೂ ಸಂಸಾರಾ;
ನೀನಿರದಿರೆ ಗಿರಿಭಾರಾ
ಕಡುಬೇಸರ ನಿಸ್ಸಾರಾ!

ಪ್ರಾಣೇಶ್ವರೀ, ಪ್ರಾಣೇಶ್ವರೀ,
ನೀನೊಡನಿರೆ ಸೂರ್ಯೋದಯ
ಸುಂದರ ಇಂದ್ರದಯಾ;
ನೀನೊಡನಿರೆ ಚಂದೋದಯ
ಇಂದ್ರಾಣಿಯ ಪ್ರಣಯ!

ಪ್ರಾಣೇಶ್ವರೀ, ಪ್ರಾಣೇಶ್ವರೀ,
ನೀನಿರದಿರೆ ಚಣಚಣವೂ
ನಾರಕ ಯುಗ ದೀರ್ಘ;
ನೀನೊಡನಿರೆ ಯುಯುಗವೂ
ಕ್ಷಣದಿವ್ಯಂ ಸ್ವರ್ಗ!