ಇನ್ನೇನಾದರೂ ನೀ ಮಾಡು,
ಅಗಲುವುದೊಂದುಳಿದು;
ಮನ್ನಿಸಿ ಕರುಣಿಸಿ ಕಾಪಾಡು,
ಕವಿಹೃದಯವ ತಿಳಿದು.

ನಟನೆಗೆ ನಿಜವನು ಮರೆಮಾಡಿ
ಒಲಿದಿಹೆ ಸತಿಲೀಲೆಯನಾಡಿ;
ದಿಟದಿಂ ಮಾತಾಯಿ!
ಪದತಲದೀ ಪದವಿಯ ನೋಡಿ
ಹೃದಯದ ಮುನಿಸನು ಹೋಗಾಡಿ
ಕನಿಕರದಲಿ ಕಾಯಿ!

ಚಿತೆಯಾಗಿದೆ ಬಾಳ್; ಮನೆಯ ಶ್ಮಶಾನ!
ಹದಿನೈದೇ ದಿನಗಳ್ ಶತಮಾನ!
ಅಡಿಹುಡಿಯಾಗಿದೆ ಗೌರವ, ಮಾನ!
ದುಮ್ಮಾನದಿ, ತತಿ, ನಾನತಿದೀನ!