ನಾಡಿ ನಾಡಿಯಲಿ ಹರಿದುದು ಜೇನು
ನಾಳೆ ಬಹೆನೆಂದು ಬರೆಯಲು ನೀನು!

ಹತ್ತಿ ಕಲ್ಲುವೋಲಿದ್ದುದು ನಿನ್ನೆ;
ಕಲ್ಲೆ ಹತ್ತಿಯಾಯ್ತಿಂದೆನ್ನ ಚೆನ್ನೆ!

ನಾಳೆ ನಿನ್ನ ನಾ ನೋಡಿದೊಡೆನ್ನ
ಮುಡಿ ನಿಮಿರದೆ ಹೇಳಂಬರದನ್ನ!