ಬರುತಾಳೆ ಬರುತಾಳೆ ಬರುತಾಳೆ ನಾಳೆ;
ಕೈಹಿಡಿದ ಮನದನ್ನೆ ಚೆನ್ನೆ ಬರುತಾಳೆ!
ಹೋದುಸಿರು ಹಿಮ್ಮರಳಿ ಬರುವಂತೆ ಬರುತಾಳೆ
ಒಣಗಲಿಹ ಪಯಿರಿಗೆ ಮಳೆಯಂತೆ ಬರುತಾಳೆ
ಬೆಂದೆದೆಗೆ ಶಾಂತಿಯ ಜೊನ್ನವ ತರುತಾಳೆ
ಒಡಲ ಕಡಲಿಗೆ ತಿಂಗಳುದಿಪಂತೆ ಬರುತಾಳೆ!
ತೋಟದ ಹೂಗಳಿಗೆ ಬರುವಂತೆ ಕಾಂತಿ
ಮನೆಯ ಶೂನ್ಯತೆ ತುಂಬಿ ಬರುವಂತೆ ಶಾಂತಿ
ಕವಿಯ ಬಾಳಿರುಲಿಗೆ ಹೊಂಬೆಳಕು ಬರುವಂತೆ
ಶಿವನ ಮೊಗ್ಗೆಯೆ ಮಲರುವಂತೆ ಬರುವಳು ಕಾಂತೆ!
Leave A Comment