ಚಂದ್ರ ಕಿರಣ ರುಖ್ಮಿಣೀ, ಓ
ಬಾ, ಕೃಷ್ಣಪಕ್ಷದೀ
ಶುಕ್ಲ ಮಂಚ ಶಾಯಿ ಶ್ರೀ
ಶ್ರೀ ಕೃಷ್ಣವಕ್ಷಕೆ!

ಅಪೂರ್ಣಿಮಾ ಮಧ್ಯರಾತ್ರಿ;
ನಿದ್ರಾ ನಿಶ್ಯಬ್ದ ಧಾತ್ರಿ;
ಸೋಮನದೋ ವ್ಯೋಮಯಾತ್ರಿ;
ಸೃಷ್ಟಿ ಪರಿಷ್ವಂಗ ಸೂತ್ರಿ!
ಅಕ್ಷಿಯಿ ಗವಾಕ್ಷದಿ,
ಓ ಚಂದ್ರಕಿರಣ ರುಕ್ಮಿಣೀ,
ಬಾ ಹೃದಯ ಶಯನ ಕಕ್ಷಕೆ:
ಶುಕ್ಲ ಮಂಚ ಶಾಯಿ ಈ
ಶ್ರೀ ಕೃಷ್ಣವಕ್ಷಕೆ!