ಮಧುಮಂಚಕೆ ಬಾ, ಮದುಮಗಳೆ,
ಮದನನ ಬಿಲ್ಲಿನ ಬಿರಿಮುಗುಳೆ,
ಮಾವನ ಮುದ್ದಿನ ಸಿರಿಮಗಳೆ,
ಮಧುಮಂಚಕೆ ಬಾ, ಮದುಮಗಳೆ!
ಚಂದ್ರಾನನದಲಿ ಬಿಂಬಾಧರ ಮಧುರಸದೋಕುಳಿಯನು
ಸಿಂಚಿಸಿ ಬಾ;
ಕಾಂಚನ ಸುಂದರ ಕಿಂಕಿಣಿ ಸಮಧುರ ಕಾಂಚೀಪದವನು
ಮಿಂಚಿಸಿ ಬಾ;
ರಂಭೆ ತಿಲೋತ್ತಮೆ ಮೇನಕೆಯರ ನಂದನ ಶೃಂಗಾರವ
ವಂಚಿಸಿ ಬಾ;
ಇಂದ್ರ ಸಹಸ್ರರ ಅಕ್ಷಿ ಸಹಸ್ರಕೆ ಶಚೀ ಸಹಸ್ರರ
ಹೊಂಚಿಸಿ ಬಾ!
ಮಧುಮಂಚಕೆ ಬಾ, ಮದುಮಗಳೆ,
ಮದನನ ಬಿಲ್ಲಿನ ಬಿರಿಮುಗುಳೆ,
ಮಾವನ ಮುದ್ದಿನ ಸಿರಿಮಗಳೆ,
ಮಧುಮಂಚಕೆ ಬಾ, ಮದುಮಗಳೆ!
Leave A Comment