ಮಹಾಲಿಂಗನಾ
ಮೋಕ್ಷವೊಂದನಂಗನಾ ಮಹಾಲಿಂಗನಾ!
ಲೋಕವೊಂದು ನರಕ ಕೂಪ
ಜನನವೊಂದು ಘೋರ ಶಾಪ
ನೀನು ತೊರೆದರೆ,
ನಾನು ಮರೆತರೆ! —

ಮಹಾಲಿಂಗನಾ
ಮೋಕ್ಷವೊಂದನಂಗನಾ ಮಹಾಲಿಂಗನಾ!
ನಿನ್ನ ಬಾಹುಬಂಧನ
ನನ್ನ ಮೋಕ್ಷ ನಂದನ;
ನೀನು ಒಲಿದರೆ,
ನಾನು ತಿಳಿದರೆ! —

ಮಹಾಲಿಂಗನಾ
ಮೋಕ್ಷವೊಂದನಂಗನಾ ಮಹಾಲಿಂಗನಾ!