ಮನೆಯ ಬೆಳಗುತಿರುವ ಓ
ನನ್ನ ಹೃದಯ ದೀಪ,
ಎನಿತು ಎಣ್ಣೆ ಸುರಿದರೂ
ಎನಿತು ಬತ್ತಿ ಊರಿದರೂ
ತಣಿಯದಿಹುದೆ ತಾಪ,
ಪೂರ್ವಜನ್ಮ ಶಾಪ
ರೂಪದೀ ಪ್ರಕೋಪ,
ಮನೆಯ ಬೆಳಗುತಿರುವ ಓ
ನನ್ನ ಪ್ರಾಣದೀಪ?

ಹಗಲಿರುಳೂ ಸವಿಯುತಿಹೆ;
ಉರಿದುರಿದೂ ಸವೆಯುತಿಹೆ;
ಚಣಚಣವೂ ತವಿಯುತಿಹೆ!
ತೃಪ್ತಿಯೆ ನಿನಗಿಲ್ಲವೆ?
ಸಾವೆ ಕೊನೆಯ ಗೆಲ್ಲವೆ?
ಸುಪ್ತಿಯೆ ತುದಿಗೆಲ್ಲವೆ?
ಹೇಳು, ಓ,
ಬಾಳ ಬೇವುಬೆಲ್ಲವೆ!