ಶ್ರೀ ಮಾತೆಯ ಪಾದದಲಿ
ಮಕ್ಕಳು ನಾಲ್ವರು ನಾಳ್ವೆರಳು;
ಸಹಧರ್ಮಿಣಿ ಸತಿ ಹೆಬ್ಬೆರಳು!

ಶ್ರೀ ಗುರುವಾಶೀರ್ವಾದದಲಿ
ಕವಿಗೀ ಸಂಸಾರವೆ ಪೂಜೆ;
ಪೂಜೆಯ ಸಂಸಾರದ ಓಜೆ!

ಸಂಸಾರದ ಸೇವೆ
ಶ್ರೀ ಪಾದದ ಪೂಜೆ;
ಶ್ರೀ ಪಾದದ ಪೂಜೆ
ಸಂಸಾರದ ಸೇವೆ!