ಅಮೃತವಿತ್ತ ಶರಧಿಯಲ್ತೆ
ವಿಷವ ಹಡೆದುದು?
ದೇವರೊಡನೆ ದನುಜರಲ್ತೆ
ಕಡಲ ಕಡೆದುದು?
ಅಮೃತದೊಡನೆ ವಿಷವ ಕೂಡಿ
ವರವ ಪಡೆದುದು?
ನೀರು ಒಂದರಿಂದ ಅಲ್ತೆ
ಎರಡು ಒಡೆದುದು?

ಅಮೃತ ಮಾತ್ರ ವರವ ಪಡೆಯೆ
ನಾನು ನೀನು ಬಾಳ ಕಡೆಯೆ
ವಿಷವನಿರದೆ ಬದುಕು ಹಡೆಯೆ
ನಂಜುನುಣ್ಬ ಶಿವನೆ ರಕ್ಷೆ:
ಶರಣೆನುತ್ತೆ ಕಾಲ್ವಿಡಿ!
ಅಮರ್ದು ಅವನ ಕೃಪೆಯ ಭಿಕ್ಷೆ:
ಶರಣು ಶರಣು ಶಿವನಡಿ!