ತವರಿನಿಂದ ತಿರುಗಿ ಬಂದೆ:
ಹೋದ ಹರಣಗಳನೆ ತಂದೆ,
ಓ ಜೀವಿತೇಶ್ವರಿ!
ನೀನಿಲ್ಲದೆ ಬದುಕು ಗುಂಡು
ಕಲ್ ಭಾರ!
ನೀನಿಲ್ಲದೆ ಟೊಳ್ಳು, ಬೆಂಡು,
ನಿಸ್ಸಾರ!
ಸುಖಾಗಮನಕಿದುವೆ ಕವನ
ನಿನಗೆ, ನನ್ನ ದೇವಿ!
ನನ್ನದೇನೆ ಇರಲಿ ತಪ್ಪು
ಕ್ಷಮಿಸಿ ಕರುಣೆಸೆನ್ನನಪ್ಪು,
ಬಾಳಿಸೆನ್ನನೋವಿ!