ತಾಯ ಚರಣ ಕಿರಣವೊಂದು
ಕೃಪೆಯೊಳೆನ್ನ ಪೊರೆಯಲೆಂದು
ನಿನ್ನ ರೂಪದಿಂದ ಬಂದು
ಸಲಹುತಿರುವುದೆನ್ನನಿಂದು!
ಮರೆಯುತದನು ಒಮ್ಮೆಯೊಮ್ಮೆ
ಗಂಡನೆಂಬ ಗಂಡುಹೆಮ್ಮೆ
ಮನವ ಮಥಿಸೆ ತಡೆಯಲಮ್ಮೆ:
ಮರ್ತ್ಯನೊಂದು ಮನಃಸ್ಥಿತಿ
ಮತ್ತೆ ಮತ್ತೆ ಈ ವಿಸ್ಕೃತಿ:
ಹೇ ಮಾಸತಿ, ಪ್ರೇಮಾವತಿ,
ಮೃಣ್ಮಯದಲಿ ಚಿನ್ಮಯ ರತಿ,
ಮನ್ನಿಸೆನ್ನ ಭಗವತಿ!