ನೀನಿದ್ದರೆ ಮನೆ ತುಂಬು;
ಇರದಿರೆ ಬರಿ ಪಾಳ್ ತೆರವು!
ನೀ ಬಂದರೆ ಮನ ತುಂಬು;
ಬರದಿರೆ ಬಾಳ್ ಬರಿತೆರವು!

ನೀನಿರೆ ಮನೆ ಕಿಕ್ಕಿರಿ ಕಿಷ್ಕಿಂಧೆ;
ಇರದಿರೆ ಬರು ವಂಧ್ಯೆ!
ನೀನಿರೆ ನಾನರ್ಣವ ಸಂಪೂರ್ಣ!
ಇರದಿರೆ ಮರುಶೀರ್ಣ!
ನನ್ನಹಮನಿತೂ, ಅನಿಂದ್ಯಾ ವಂದ್ಯೆ,
ನಿನ್ನಡಿಯಲಿ ಚೂರ್ಣ!