ನೀನು ಹೂವು, ನಾನು ಚಿಟ್ಟೆ;
ನಿನ್ನನೊಲಿವುದೆನ್ನ ನಿಟ್ಟೆ.
ನನ್ನ ಬಾಳ ರಸದ ಬಟ್ಟೆ,
ನೀನು ಮುನಿಯಲಾನು ಕೆಟ್ಟೆ!
ನಿನ್ನ ಮೇಲೆ ನನಗೆ ಸಿಟ್ಟೆ?
ಆಡಬೇಡ ಅನೃತವ.
ವಿರಹದುರಿಯೊಳಯ್ಯೊ ಸುಟ್ಟೆ!
ಸಾಕು ಮಾಡು; ಬೇಗ ನೀಡು
ಅಧರಮಿಲನದಮೃತವ!