ಪ್ರೇಮ ಮಧುಪ್ರೇಯಸೀ
ಹೇ ಹೇಮಾ ರೂಪಸೀ,
ನನ್ನ ಕೈಯೊಳಿರಲು ನಿನ್ನ
ಪ್ರೇಮ ಶಿಖರ ಪದುಮ ಸದೃಶ
ಹೇಮವಕ್ಷದಮೃತ ಕಲಶ,
ನಾನು ಅಜರ! ನಾನು ಅಮರ!
ನಾನು ದಿವ್ಯ! ನಾನು ಧನ್ಯ!
ನಾನು ಪೂರ್ಣ! ನಾನು ಶೂನ್ಯ!
ಪ್ರೇಮ ಮಧುಪ್ರೇಯಸೀ
ಹೇ ಹೇಮಾ ರೂಪಸೀ!