ವ|| ಅಂತು ನೋೞ್ಪುದುಂ ನರೇಂದ್ರಂ ನಸುನಗುತ್ತಮಿಂತೆಂದಂ

ಆಂ ನುಡಿದೀಗಳೀ ನುಡಿಗೆ ಲಜ್ಜಿಸಿದಪ್ಪೆಲತಾಂಗಿ ಮಾಣ್ದೆನಾ
ನಿನ್ನದನಂತದಿರ್ಕೆ ವಿಳಸನ್ನವಚಂಪಕ ಚಾರುಕಾಂತಿಯಿಂ
ದಂ ನೆದಿರ್ದು ಕಣ್ಗೊಳಿಪ ಕುಂಕುಮಪಂಕನವಾಂಗರಾಗದೊಳ್
ನಿನ್ನ ತನುಪ್ರಭಾಪ್ರಕರದಿಂದೆ ಬೆಳರ್ಪನದೇಕೆ ಮಾಡಿದೌ          ೯೫

ಪಸರಿಸುವ ಗರ್ಭಸಂಪ್ರಾ
ಪ್ತಿಸುಧಾಸೇಚನೆಯೆ ಹೃದಯಶೋಕಾಗ್ನಿಯ ನಂ
ದಿಸೆ ಪೊಣ್ಮುತಿರ್ಪ ಧೂಮ
ಪ್ರಸರಮಿದೆನೆ ಕುಚದೊಳೇಕೆ ಕರ್ಪಂ ತಳೆದೌ               ೯೬

ತೊಳಗುವ ತೆಳ್ವಸಿಳ್ ಶಿಶು
ಬಳೆವಿನಮಭಿಷೇಕವಿಗೆ ನಿಲಿಸಿದ ನೀಲೋ
ತ್ಪಲಪಿಹಿತ ಹೇಮಕಲಶಂ
ಗಳಿವೆನಿಸಿದವಲ್ತೆ ನೀಲಮುಖಕುಚ ಯುಗಳಂ                ೯೭

ಉದರಾರ್ಭಕಂಗೆ ಮೇಲೆ
ತ್ತಿದ ಕುಚಯುಗಮೆಂಬ ಪೊನ್ನಮಳ್ಗೊಡೆಯಂ ತಾ
ಳ್ದಿದ ನೀಲದಂಡಮೆಂಬಂ
ದದೆ ಸೊಗಯಿಪ ಬಾಸೆಗರಸಿ ಲಜ್ಜಿಸವೇಡೌ                ೯೮

 

ನುಡಿವೊಡೆ ನಾಚಿಕೆ ಗಡ ನಿನ
ಗುಡಿನೂಲ್ ಬಿಗಿವಿನೆಗಮೀ ವಳಿತ್ರಯಮೀಗಳ್
ಕಿಡುತಿರ್ಪುದು ಬಡತನಮಂ
ಬಿಡುತಿರ್ಪುದು ನಡುವುಮಿಂತಿದಕ್ಕೇಗೆಯ್ವೌ               ೯೯

ವ|| ಎಂದು ತಾರಾಪೀಡಂ ಕಾಡುತಿರ್ಪುದುಮಂತರ್ನಿಗೂಢ ಹಾಸ್ಯಂ ಶುಕನಾಸನಿಂತೆಂದಂ

ನನಗೇಕೆ ನಾಚಿಕೆಯಾಗುವಂತೆ ಮಾಡುತ್ತೀದಿರಿ, ಹೇಳಿ’ ಎಂದು ಮೆಲ್ಲನೆ ಹೇಳುತ್ತಾ ತಲೆ ಬಗ್ಗಿಸಿಕೊಂಡು ರಾಜನನ್ನು ಅಸಹನೆಯಿಂದಲೋ ಎಂಬಂತೆ ಎಡಗಣ್ಣಿನಿಂದ ನೋಡಿದಳು. ವ|| ಹಾಗೆ ನೋಡಲಾಗಿ ರಾಜನು ನಸುನಗುತ್ತಾ ಹೀಗೆ ಹೇಳಿದನು. ೯೫. ‘ಎಲೌ ಬಳ್ಳಿಯಂತೆ ದೇಹವುಳ್ಳ ರಾಣಿಯೆ, ನಾನು ಈಗ ಹೇಳಿದ ಮಾತಿಗೆ ನೀನು ನಾಚಿಕೆಪಟ್ಟುಕೊಂಡರೆ ಹೋಗಲಿ ಬಿಡು! ನಾನು ಸುಮ್ಮನಾಗಿಬಿಡುತ್ತೇನೆ. ಆದರೆ ಪ್ರಕಾಶಮಾನವಾದ ಹೊಸದಾದ ಸಂಪಿಗೆಯ ಹೂವಿನಂತೆ ರಮಣೀಯವಾದ ಕಾಂತಿಯಿಂದ ತುಂಬಿ ಕಂಗೊಳಿಸುವ ಬಿಳಿಕುಂಕುಮದ ಹೊಸಲೇಪನದಲ್ಲಿ ನಿನ್ನ ಶರೀರದ ಕಾಂತಿಸಮೂಹದಿಂದ ಅತಿಶಯವಾದ ಬಿಳುಪನ್ನು ನೀನು ಏಕೆ ಉಂಟುಮಾಡಿದೆ? ಟಿ. ಗರ್ಭಧಾರಣೆಯಿಂದ ಶರೀರವು ಬೆಳ್ಳಗಾಗುತ್ತದೆ. ೯೬. ಬೆಳೆಯುತ್ತಿರುವ ಗರ್ಭವೆಂಬ ಅಮೃತವೃಷ್ಟಿಯು ಹೃದಯದಲ್ಲಿರುವ ದುಖವೆಂಬ ಬೆಂಕಿಯನ್ನು ಆರಿಸಲಾಗಿ ಹೊರಡುತ್ತಿರುವ ಹೊಗೆಯಿಂದ ಆವರಿಸಿದಂತೆ ಕಪ್ಪುಬಣ್ಣವನ್ನು ಸ್ತನಾಗ್ರದಲ್ಲಿ ಏಕೆ ಹೊಂದಿರುವೆ? ಟಿ. ಸ್ತನಾಗ್ರವು (ಮೊಲೆಗಳ ತೊಟ್ಟು) ಕಪ್ಪಾಗುವುದೂ ಒಂದು ಗರ್ಭಲಕ್ಷಣ. ೯೭. ಹೀಗೆ ತುದಿಯಲ್ಲಿ ಕಪ್ಪನ್ನು ಹೊಂದಿರುವ ನಿನ್ನ ಎರಡು ಸ್ತನಗಳು ಶೋಭಿಸುವ ತೆಳುಬಸಿರಿನಲ್ಲಿ ಶಿಶು ಬೆಳೆಯುತ್ತಿದೆಯಲ್ಲ! ಅದರ ಸ್ನಾನಕ್ಕಾಗಿ ಏರ್ಪಡಿಸಿರುವ ಕನ್ನೆ ದಿಲೆಯಿಂದ ಮುಚ್ಚಿರುವ ಎರಡು ಚಿನ್ನದ ಕೊಡಗಳಂತೆ ಕಾಣುತ್ತಿವೆಯಲ್ಲವೆ? ಟಿ. ಗರ್ಭಧಾರಣೆಯಿಂದ ಕಪ್ಪನ್ನು ಹೊಂದಿರುವ ಕುಚಾಗ್ರವನ್ನು

ಕನ್ನೆ ದಿಲೆಗಳಿಗೂ ಸ್ತನಗಳನ್ನು ಚಿನ್ನದ ಕೊಡಗಳಿಗೂ ಹೋಲಿಸಿದ್ದಾನೆ. ೯೮. ನಿನ್ನ ಗರ್ಭದಲ್ಲಿರುವ ಮಗುವಿಗೆ ಎತ್ತಿ ಹಿಡಿದಿರುವ ಕುಚದ್ವಯ (ಎರಡು ಮೊಲೆ)ವೆಂಬ ಚಿನ್ನದ ಜೋಡಿ ಕೊಡೆಗೆ ಜೋಡಿಸಿರುವ ಕಪ್ಪುಕೋಲಿನಂತಿರುವ ಸೊಗಸಾದ ಬಾಸೆಗೆ (ರೋಮರಾಜಿ) ನಾಚಿಕೆಯಾಗುವುದಿಲ್ಲವೆ? ಟಿ. ಹೆಂಗಸರ ಹೊಕ್ಕಳಿನಿಂದ ಮೇಲುಮುಖವಾಗಿ ಬೆಳೆದಿರುವ ಕೂದಲುಸಾಲನ್ನು ಛತ್ರಿಯ ಕೋಲೆಂದು ವರ್ಣಿಸಿದ್ದಾನೆ. ೯೯. ಬಾಯಿಬಿಟ್ಟು ಹೇಳುವುದಕ್ಕೆ ನಿನಗೆ ನಾಚಿಕೆ ತಾನೆ? ಒಡ್ಯಾಣವು ಬಿಗಿಯುತ್ತಿದೆ. ತ್ರಿವಳಿಗಳು ಮುಚ್ಚಿಹೋಗುತ್ತಿವೆ. ಸೊಂಟವು ತೆಳುವನ್ನು ಬಿಡುತ್ತ ದಪ್ಪನಾಗುತ್ತಿದೆ. ಇದಕ್ಕೇನು ಹೇಳುತ್ತೀಯೆ? ವ|| ಎಂದು ತಾರಾಪೀಡನು ವಿಲಾಸವತಿಯನ್ನು ಗೇಲಿ

ಇನಿತಾಯಾಸಮನೇಕೆ ಮಾಡಿದಪೆ ನಾಣ್ಚುತ್ತಿರ್ದಪಳ್ ದೇವಿ ಭೂ
ವನಿತಾಶ್ವರ ನಿನ್ನ ಮಾತುಗಳಿನೀಗಳ್ ನಾಡೆಯುಂ ವಂಶವ
ರ್ಧನೆ ಪೇೞ್ದಲ್ಲಿಯ ಮಾತನೀಂ ಮಯೆನುತ್ತಲ್ಲಿಂದೆ ನರ್ಮಪ್ರಿಯಾ
ಭಿನುತಾಳಾಪದೆ ನೀಡುಮಿರ್ದು ಬೞಯಂ ಪೋದಂ ಪ್ರಧಾನೋತ್ತಮಂ     ೧೦೦

ವ|| ಇತ್ತಲ್ ಸನ್ನಿಹಿತಗರ್ಭದೋಹದ ಸಂಪಾದನದಿಂ ವಿಳಾಸವತೀಮಹಾದೇವಿಯಂ ಪ್ರಮುದಿತೆಯಪ್ಪಂತು ನೆಗೞುತ್ತುಮಿರೆ ಕೆಲವಾನುಂ ದಿವಸದೊಳ್ ಪ್ರಸವಸಮಯ ಪುಣ್ಯದಿನಮಾಗೆ ಗಣಕಗಣಂ ಗೃಹೀತಛಾಯಾಮಾನರಾಗಿ ಶುಭಲಗ್ನಮಂ ಪಾರುತ್ತಿರ್ಪನ್ನೆಗಂ

ಒದವಲ್ ನಿಜತೇಜಂ ಘನ
ದೊದವಿಂ ನವಮೇಘಮಾಲೆಗುದಯಿಪ ತೆಱದಿಂ
ಹೃದಯಾನಂದಂ ಭುವನದೊ
ಳೊದವಲ್ಕೆ ವಿಳಾಸವತಿಗೆ ಸುತನುದಯಿಸಿದಂ                  ೧೦೧

ವ|| ಅಂತಾ ಮಹಾತ್ಮಜಾತಜನನೋತ್ಸವದೊಳ್ ಸರಭಸಪ್ರಧಾವಿತ ಪರಿಜನಚರಣ ಸಂಕ್ಷೋಭಕ್ಷುಣ್ಣ ಕ್ಷಿತಿತಳಮುಂ ಭೂಪಾಲಾಭಿಮುಖ ಪ್ರಸೃತ ಚುಕಿಸಹಸ್ರಸಮ್ಮರ್ದನಿಷ್ಪಿಷ್ಯಮಾಣ ಕುಬ್ಜವಾಮನಗಣಮುಂ ವಿಷ್ಪಾರ್ಯಮಾಣಾಂತ ಪುರಜನಾಭರಣಝಂಕಾರಮನೋಹರಮುಂ

ಪೂರ್ಣಪಾತ್ರಹರಣವಿಲುಠ್ಯಮಾನವಸನಭೂಷಣಮುಂ ಸಂಕ್ಷೋಭಿತ ನಗರಮುಮೆನಿಸಿ ಮಹಾಸಂಭ್ರಮಂ ವಿಜೃಂಭಿಸುವುದುಮಂಭೋ ಗಂಭೀರದುಂದುಭಿದ್ಪಾನಪುರಸ್ಸರಮಾಗಿ ರಾಜಮಂದಿರದೊಳ್ ಮೃದುಮೃದಂಗ ಶಂಖಕಹಳಾರಾವ ನಿರ್ಭರಪಟಹರವಂಗಳೆಸೆಯೆ ಅನೇಕಸಹಸ್ರ ಜನಸಂಕುಲಂಗಳಿಂ ತ್ರಿಭುವನಮೆಲ್ಲಮಂ ತೆಕ್ಕನೆ ತೀವುವಾನಂದ ಬಹುಳ ಕೋಲಾಹಲಂ ನೆಗೆಯೆ ಸಮಸ್ತ ಸಾಮಂತಸಂತತಿಯುಮಶೇಷಾಂತ ಪುರಮುಮಖಿಳ ರಾಜಲೋಕಮುಂ ಆಬಾಲ ಗೋಪಾಲಪ್ರಕೃತಿಯೆಲ್ಲಮುಮತಿಹರ್ಷನಿರ್ಭರತೆಯಿಂ ಭೋರ್ಗರೆದಾರ್ದು ನಲಿದು ನರ್ತಿಸುತ್ತುಮಿರೆ

ಉದಯಿಸೆ ಚಂದ್ರಂ ನೆಲೆವೆ
ರ್ಚಿದರ್ಣವಂ ಘೂರ್ಣಿಪಂತೆ ಭೋರೆಂದೋರಂ
ದದೆ ಭುವನಮೈದೆ ಘೂರ್ಣಿಸಿ
ದುದದೆತ್ತಂ ರಾಜಪುತ್ರಜನನೋತ್ಸವದೊಳ್                   ೧೦೨

ಮಾಡುತ್ತಿರಲಾಗಿ ಶುಕನಾಸನು ಹಾಸ್ಯಗರ್ಭಿತವಾಗಿ ಹೀಗೆ ಹೇಳಿದನು. ೧೦೦. ‘ಪ್ರಭುವೆ, ಮಹಾರಾಣಿಯವರಿಗೆ ಇಷ್ಟು ತೊಂದರೆಯನ್ನು ಏಕೆ ಕೊಡುತ್ತೀರಿ? ಅವರಿಗೆ ನಿಮ್ಮ ಮಾತುಗಳಿಂದ ಬಹಳ ನಾಚಿಕೆಯಾಗುತ್ತಿದೆ. ವಂಶವರ್ಧನೆ ಹೇಳಿದ ಮಾತುಗಳ ವಿಷಯವನ್ನು ಬಿಟ್ಟುಬಿಡಿ’ ಎಂದನು. ಹೀಗೆ ಪರಿಹಾಸಗರ್ಭಿತವಾದ ಸರಸ ಸಲ್ಲಾಪಗಳಿಂದ ಬಹಳ ಕಾಲವನ್ನು ಕಳೆದು ಶುಕನಾಸನು ತನ್ನ ಮನೆಗೆ ತೆರಳಿದನು. ವ|| ಈ ಕಡೆ ಬಸುರಿ ಬಯಕೆಯುಂಟಾದರೆ ಅದೆಲ್ಲವನ್ನೂ ಒದಗಿಸಿಕೊಡುವುದರಿಂದ ವಿಲಾಸವತಿಯು ಪರಮಾನಂದ ಗರ್ಭಿತಳಾಗುವಂತೆ ಏರ್ಪಡಿಸಲಾಗಿತ್ತು. ಹೀಗೆ ಕೆಲವು ದಿನ ಕಳೆಯಿತು. ಮಂಗಳಕರವಾದ ಹೆರಿಗೆದಿನವೂ ಬಂತು. ಅರಮನೆ ಜೋಯಿಸರು ಛಾಯಾಯಂತ್ರಗಳನ್ನು ಇಟ್ಟುಕೊಂಡು ಜನನಕಾಲದ ಶುಭಲಗ್ನವನ್ನು ಕಂಡುಹಿಡಿಯಲು ಉತ್ಸುಕರಾಗಿ ನಿರೀಕ್ಷಿಸುತ್ತಿದ್ದರು. ಅಷ್ಟರಲ್ಲಿ ೧೦೧. ಹೊಸದಾದ ಮೇಘಪಂಕ್ತಿಗೆ ಮಿಂಚಿನ ಹೊಳಪು ಹುಟ್ಟುವಂತೆ ಜಗತ್ತಿಗೆಲ್ಲ ಪರಮಾನಂದವುಂಟಾಗಲು ವಿಲಾಸವತಿಗೆ ಮಗನು ಹುಟ್ಟಿದನು. ವ|| ಹೀಗೆ ಮಹಾಪುರುಷನು ಹುಟ್ಟಿದ ಜನ್ಮೋತ್ಸವದಲ್ಲಿ ಅರಮನೆಯ ಊಳಿಗದವರು ಗಡಿಬಿಡಿಯಿಂದ ಜೋರು ಜೋರಾಗಿ ಓಡಾಡುತ್ತಿದ್ದರು. ಅವರ ಕಾಲುಗಳ ತುಳಿತದಿಂದ ಅರಮನೆಯ ಊಳಿಗಕ್ಕೆ ಸೇರಿದ್ದ ಅನೇಕ ಮಂದಿ ಕುಳ್ಳರು ಹಾಗೂ ಗುಜ್ಜಾರಿಗಳು ಅಜ್ಜಿಬಿಜ್ಜಿಯಾಗುತ್ತಿದ್ದರು. ರಾಣಿವಾಸದ ಹೆಂಗಸರ ಓಡಾಟದಿಂದ ಅವರ ಒಡವೆಗಳ ಮನೋಹರವಾದ ಝಂಕಾರಧ್ವನಿಯು ಎಲ್ಲೆಲ್ಲೂ ಹರಡುತ್ತಿತ್ತು. ಪರಿಜನರು ಉಡುಗೊರೆಗಳನ್ನು ಗಿಟ್ಟಿಸಿಕೊಳ್ಳುವುದಕ್ಕಾಗಿ ಬಟ್ಟೆಬರೆ ಒಡವೆವಸ್ತುಗಳನ್ನು ಸೆಳೆದುಕೊಳ್ಳುತ್ತಿದ್ದರು. ಹೀಗೆ ಪಟ್ಟಣವು ಗಡಿಬಿಡಿಯಿಂದ ಅಲ್ಲೋಲಕಲ್ಲೋಲವಾಗಿತ್ತು. ಹೀಗೆ ದೊಡ್ಡ ಸಡಗರವು ಹೆಚ್ಚುತ್ತಿತ್ತು. ಅದೇ ಸಮಯದಲ್ಲಿ ಸಮುದ್ರ ಧ್ವನಿಯಂತೆ ಗಂಭೀರವಾದ ನಗಾರಿಶಬ್ದದಿಂದ ಕೂಡಿಕೊಂಡಿರುವ, ಇಂಪಾದ ಮೃದಂಗ, ಶಂಖ, ಕಾಳೆಧ್ವನಿಗಳಿಂದ ಮಿಳಿತವಾದ ಗಟ್ಟಿಯಾಗಿ ಬಾರಿಸುತ್ತಿರುವ ತಮಟೆಧ್ವನಿಗಳು ವಿಜೃಂಭಿಸಿದವು. ಹೀಗೆ ಅನೇಕ ಸಹಸ್ರಸಂಖ್ಯೆಯ ಜನಜಂಗುಳಿಯಿಂದ ಮೂರು ಲೋಕವನ್ನೆಲ್ಲಾ ಸಂಪೂರ್ಣವಾಗಿ ವ್ಯಾಪಿಸುವ ಆನಂದಭರಿತವಾದ ಕಲಕಲಧ್ವನಿಯು ಹೊರಹೊಮ್ಮುತ್ತಿತ್ತು. ಸಮಸ್ತರಾದ ಸಾಮಂತ ರಾಜರೂ, ರಾಣಿವಾಸದ ಎಲ್ಲಾ ಜನರೂ ಮಕ್ಕಳು ಗೊಲ್ಲರು ಮೊದಲಾದ ಸಮಸ್ತಪ್ರಜೆಗಳೂ ಆನಂದಾತಿರೇಕದಿಂದ ಭೋರ್ಗರೆದು ಕೂಗಿ ಕುಪ್ಪಿಟ್ಟು ಕುಣಿಯುತ್ತಿರಲಾಗಿ, ೧೦೨. ಚಂದ್ರನು ಉದಯಿಸಲು ದಡಮೀರಿದ ಸಾಗರವು ಅಲ್ಲೋಲಕಲ್ಲೋಲವಾಗುವಂತೆ

ವ|| ಅಂತಾ ಸಮಯದೊಳ್

ಶುಕನಾಸಸಮನ್ವಿತನು
ತ್ಸುಕಹೃದಯಂ ನೃಪತಿ ಸುತಮುಖಾವಲೋಕನಕೌ
ತುಕದಿಂ ಬಂದಂ ಮೌಹೂ
ರ್ತಿಕೋಪದಿಷ್ಟಪ್ರಶಸ್ತಲಗ್ನೋದಯದೊಳ್                       ೧೦೩

ವ|| ಆಗಳ್ ಮಣಿಮಯಕಲಶವಿಲಸಿತಮುಂ ವಿವಿಧ ಪುತ್ರಿಕಾವಿಚಿತ್ರಮುಂ ಕಾಂಚನಮಯಕಮಲ ಮುಸಲಹಲಕಲಿತಮುಂ ಸಿತಕುಸುಮಮಿಶ್ರಿತ ದೂರ್ವಾಪ್ರವಾಳಾಲಂಕೃತಮುಂ ವ್ಯಾಘ್ರಚರ್ಮಸಾಂದ್ರಮುಂ ವಂದನಮಾಲಾಂತರಾಳಘಟಿತಘಂಟಾಗಣಮುಮೆನಿಸಿದ ಸೂತಿಕಾಭವನದ್ವಾರದೇಶದೊಳ್ ನಿವಾರಿತ ಪರಿವಾರನಾಗಿ ಶುಕನಾಸಸಮನ್ವಿತಂ ಪುಗುವಲ್ಲಿ ಉತ್ತಾನವಿನಿಹಿತವರಾಟಕಪ್ರಕರದಂತುರಂಗಳುಂ ವಿವಿಧ ವರ್ಣರಾಗ ರುಚಿರ ಕಾರ್ಪಾಸಕುಸುಮಲಾಂಛಿತಂಗಳುಂ

ಕುಸುಂಭಕೇಸರಲವಾಶ್ಲೇಷಲೋಹಿತಮುಖಂಗಳುಮಾಗಿ ರಂಜಿಸುವ ರಂಗವಲ್ಲಿಗಳುಮಂ ವಿಕಚಪಕ್ಷಮಂಡಿತ ಶಿಖಂಡಿವಾಹನನುಂ ಆಲೋಲಲೋಹಿತ ಪಟಪತಾಕನುಂ ಉಲ್ಲಸಿತಶಕ್ತಿದಂಡನುಮೆನಿಸಿದ ಕಾರ್ತಿಕೇಯನುಮಂ ಅಲಕ್ತಕಪಟಲಪಾಟಳರಪ್ಪ ಸೂರ್ಯಚಂದ್ರಮಸರುಮಂ ಕುಂಕುಮಪಂಕಪಿಂಜರೀಕೃತಂಗಳುಂ ಊರ್ಧ್ವಪ್ರೋತ ಕನಕಮಯಯವನಿಕರಂಗಳುಂ ಚಂದನರಸಧವಳಿತ ಭಿತ್ತಿಭಾಗಾಂಚಿತ ಪಂಚರಾಗವಿಚಿತ್ರ ಚೇಲಕಳಾಪಚಿಹ್ನಂಗಳುಮಂ ವರ್ಧಮಾನಕ ಪರಂಪರೆಗಳುಮಂ ಇನ್ನುಮನೇಕ ಪ್ರಸವಗೃಹ ಮಂಡನಂಗಳುಮಂ ಸಂಪಾದಿಸುವ ಪುರಂಯರೊಳಂ ಗುಗ್ಗುಳಫಣಿಕಂಚುಕವಿಷಾಣ ರೇಣುಗಳಿಂದೆ ಕರ್ವೊಗೆಯಿಡುವ ಸರ್ವರಕ್ಷಾಧೂಪಧೂಮಂಗಳೊಳಂ ಶಾಂತ್ಯುದಕಮಂ ತಳಿವವನೀ ವೃಂದಾರಕ ವೇದಘೋಷಣಂಗಳೊಳಂ ಮಾತೃಗಣ ಪೂಜಾವಿಧಾನತತ್ಪರರಾದ ಧಾತ್ರೀಜನಂಗಳೊಳಂ ಮಂಗಳಮಂ ಪಾಡುವ ಶುದ್ಧಾಂತವೃದ್ಧಾಂಗನೆಯರೊಳಂ ಕನಕದಂಡಾಗ್ರ ಮಂಡಿತವಾಗಿ ಬೆಳಗುವ ಮಂಗಳಪ್ರದೀಪಂಗಳೊಳಂ ಉತ್ಖಾತಾಸಿಲತಾಸನಾಥಪಾಣಿಗಳಪ್ಪ ರಕ್ಷಾಪುರುಷರೊಳಮೆಸೆವ ಸೂತಿಕಾಗೃಹಮಂ ತಾರಾಪೀಡನರೇಂದ್ರ ಪುಗುವುದುಂ ಪ್ರಸವ ಪರಿಕ್ಷಾಮಪಾಂಡುಮೂರ್ತಿಯಪ್ಪ ವಿಳಾಸವತೀಮಹಾದೇವಿಯುತ್ಸಂಗದೊಳ್ ತನ್ನ ಬೆಳಗೆ ಬೆಳಗಾಗೆ

ರಾಜಕುಮಾರನ ಜನ್ಮೋತ್ಸವದಲ್ಲಿ ಲೋಕವು ಒಂದೇ ಸಮನೆ ಬಹಳವಾಗಿ ಭೋರೆಂದು ಗದ್ದಲದಿಂದ ಆವರಿಸಲ್ಪಟ್ಟಿತ್ತು. ವ|| ಆ ಸಮಯದಲ್ಲಿ, ೧೦೩. ರಾಜನು ಮಗನ ಮುಖವನ್ನು ನೋಡಬೇಕೆಂಬ ಕುತೂಹಲದಿಂದ ಜೋಯಿಸರು ತಿಳಿಸಿದ ಪ್ರಶಸ್ತವಾದ ಲಗ್ನದಲ್ಲಿ ಶುಕನಾಸದೊಂದಿಗೆ ತವಕಗೊಂಡ ಮನಸ್ಸಿನಿಂದ ಬಂದನು. ವ|| ಆಗ ರತ್ನಖಚಿತವಾದ ಪೂರ್ಣಕಲಶಗಳಿಂದ ಕೂಡಿಕೊಂಡಿರುವ, ಬಗೆಬಗೆಯಾದ ಬೊಂಬೆಗಳಿಂದ ಶೋಭಿಸುತ್ತಿರುವ, ಚಿಗುರೆಲೆಗಳಿಂದ ತುಂಬಿರುವ, ಚಿನ್ನದ ತಾವರೆ ನೇಗಿಲು ಒನಕೆಗಳನ್ನು ಇರಿಸಿರುವ, ಬಿಳಿಯ ಹೂವುಗಳಿಂದ ಕೂಡಿರುವ, ಎಳೆಯ ಗರಿಕೆಗಳಿಂದ ಶೋಭಿಸುವ ಹುಲಿಯ ಚರ್ಮವನ್ನು ಇಟ್ಟಿರುವ, ತೋರಣದ ಮಧ್ಯದಲ್ಲಿ ಜೋಡಿಸಿರುವ ಗಂಟೆಗಳುಳ್ಳ ಹೆರಿಗೆಮನೆಯ ಬಾಗಿಲಲ್ಲಿ ಊಳಿಗದವರನ್ನು ನಿಲ್ಲುವಂತೆ ಹೇಳಿ ಶುಕನಾಸನೊಂದಿಗೆ ಒಳಕ್ಕೆ ಬಂದನು. ಅಲ್ಲಿ ಮುತ್ತೈದೆಯರು ನೆರೆದಿದ್ದರು. ಅವರಲ್ಲಿ ಕೆಲವರು ರಂಗೋಲೆಯಿಂದ ಸ್ವಸ್ತಿಕಾಕಾರವನ್ನು ಬರೆದು ಅದರ ಮೇಲೆ ಕಡವೆಗಳನ್ನು ಮೇಲುಮುಖವಾಗಿ ಇಡಬೇಕಾದ ಕಡೆಗಳಲ್ಲಿ ಇಟ್ಟು ನಾನಾ ಬಣ್ಣಗಳಿಂದ ರಂಜಿತವಾದ ಮತ್ತು ಸುಂದರವಾದ ಹತ್ತಿಹೂವುಗಳನ್ನು (ಹೂಬತ್ತಿ)? ಏರಿಸಿ ಕುಸುಬೆಹೂವಿನ ಕೇಸರಗಳನ್ನು ಚೂರು ಚೂರು ಮಾಡಿ ಅದರ ಮೇಲೆ ಉದುರಿಸಿ ಕೆಂಪಾಗುವಂತೆ ಮಾಡುತ್ತಿದ್ದಾರೆ. ಮತ್ತೆ ಕೆಲವರು ಅಕ್ಕಿ ಹಿಟ್ಟಿನಿಂದ ಬಿಚ್ಚಿದ ರೆಕ್ಕೆಯುಳ್ಳ ನವಿಲಿನ ಮೇಲೆ ಕುಳಿತುಕೊಂಡಿರುವ, ಹಾರಾಡುತ್ತಿರುವ ಕೆಂಬಟ್ಟೆಯ ಬಾವುಟವುಳ್ಳ ಶಕ್ತಿ ಎಂಬ ಆಯುಧವನ್ನು ಹಿಡಿದುಕೊಂಡಿರುವ ಕುಮಾರಸ್ವಾಮಿಯ ಆಕಾರವನ್ನು ಬರೆಯುತ್ತಿದ್ದಾರೆ. ಮತ್ತೊಂದು ಕಡೆ ಮತ್ತೆ ಕೆಲವರು ಅರಗಿನ ರಸದಿಂದ ಮಧ್ಯದಲ್ಲಿ ಕೆಂಬಣ್ಣವನ್ನು ಅಳವಡಿಸಿ ಚಂದ್ರ ಸೂರ್ಯ ಮಂಡಲಗಳನ್ನು ಚಿತ್ರಿಸುತ್ತಿದ್ದಾರೆ. ಹಲವರು ಹಳದಿ ಕುಂಕುಮದ ಲೇಪನದಿಂದ ಹೊಂಬಣ್ಣವಾದ ಕುಡಿಕೆಗಳನ್ನಿರಿಸಿ ಅವುಗಳ ಮೇಲೆ ಚಿನ್ನದಿಂದ ಮಾಡಿದ ಜವೆಗೋ ಸಸಿಗಳನ್ನು ನೆಟ್ಟು ಬಿಳಿಸಾಸುವೆಗಳನ್ನು ದಟ್ಟವಾಗಿ ಹರಡುತ್ತಿದ್ದಾರೆ. ಮತ್ತೆ ಕೆಲವರು ಗೋಡೆಯ ಮೇಲೆ ಚಂದನರಸದ ಲೇಪನದಿಂದ ಬಿಳುಪಾದ ಮಣ್ಣಿನ ಶರಾವೆಗಳನ್ನು ಸಾಲಾಗಿ ಇರಿಸಿ ಅವುಗಳನ್ನು ಪಂಚವರ್ಣಗಳಿಂದ ರಂಜಿತವಾದ ವಸ್ತ್ರಖಂಡಗಳಿಂದ ಅಲಂಕರಿಸುತ್ತಿದ್ದಾರೆ. ಇದೇ ರೀತಿಯಲ್ಲಿ ಹೆರಿಗೆಮನೆಯಲ್ಲಿ ಮಾಡಬೇಕಾದ ಅನೇಕ ಬಗೆಯ ಅಲಂಕಾರಗಳನ್ನೆಲ್ಲಾ ಮುತ್ತೈದೆಯರು ಮಾಡುತ್ತಿರುವರು. ಗುಗ್ಗಳ, ಹಾವಿನಪೊರೆ, ಕುರಿಕೊಂಬಿನ ಪುಡಿಗಳನ್ನು ಹಾಕುವುದರಿಂದ ಕಪ್ಪುಹೊಗೆ ಬರುತ್ತಿರುವ ರಕ್ಷಾಧೂಪದ ಅಗ್ನಿಯು ಒಂದು ಕಡೆಯಲ್ಲಿ ಉರಿಯುತ್ತಿದೆ. ಬ್ರಾಹ್ಮಣರು ನೆರೆದು ವೇದಘೋಷಪೂರ್ವಕವಾಗಿ ಶಾಂತ್ಯುದಕವನ್ನು ಪ್ರೋಕ್ಷಿಸುತ್ತಿದ್ದಾರೆ. ದಾದಿಯರು ಸಪ್ತಮಾತೃಕೆಯರ ಪೂಜೆಯಲ್ಲಿ ನಿರತರಾಗಿದ್ದಾರೆ. ರಾಣಿವಾಸದ ವೃದ್ಧ ಮಹಿಳೆಯರು ಹೆರಿಗೆಮನೆಯಲ್ಲಿ ಹೇಳಬೇಕಾದ ಸೋಬಾನೆ ಹಾಡುಗಳನ್ನು ಹಾಡುತ್ತಿದ್ದಾರೆ. ಚಿನ್ನದ ಕಟ್ಟಿಗೆಯ ಮೇಲೆ ಮಂಗಳದೀಪಗಳು ಬೆಳಗುತ್ತಿವೆ. ಬಿಚ್ಚುಗತ್ತಿಯನ್ನು ಹಿಡಿದು ಕಾವಲಿನ ಭಟರು ಪಹರೆ ಕಾಯುತ್ತಿದ್ದಾರೆ. ಹೀಗೆ ವಿರಾಜಮಾನವಾದ ಸೂತಿಕಾಗೃಹವನ್ನು ತಾರಾಪೀಡಮಹಾರಾಜನು ಒಳಹೊಕ್ಕು ಹೆರಿಗೆಯಿಂದ

ಉದಯದ ಕೆಂಪಿನಿಂ ಪುದಿದದೊಂದಿನಬಿಂಬಮೊ ಸಂಜೆಗೆಂಪಿನಿಂ
ಪುದಿದ ಸುಧಾಂಶುಮಂಡಳಮೊ ಮೇಣಿದರಲ್ಕೆಯೊಳಾದ ರಾಗದಿಂ
ಪುದಿದರುಣಾರವಿಂದಚಯಮೋ ತಳಿರ್ಗೊಂಚಲ ತಳ್ತ ಕೆಂಪಿನಿಂ
ಪುದಿದಮರಾವನೀರುಹಮೊ ಪೇಳೆನೆ ಬಾಲಕನಾದಮೊಪ್ಪಿದಂ             ೧೦೪

ಎಳವಿಸಿಲಿಂ ಪವಳದ ಕುಡಿ
ದಳಿರಿಂ ಮಾಣಿಕದ ಬೆಳಗಿನಿಂ ನಿರ್ಮಿಸಿದಂ
ನಳಿನಭವನೆಂಬಿನಂ ಕ
ಣಳಿಸಿರ್ದಂ ಜಿತಕುಮಾರನೆಂಬ ಕುಮಾರಂ ೧೦೫

ಸಹಜವಿಭೂಷಣದಂತಿರೆ
ಮಹನೀಯಕ್ಷುಣ್ಣಲಕ್ಷಣಂ ಮಿಸುಗೆ ಶುಭಾ
ವಹನೆನಿಸಿದನಂ ಕಂಡಂ
ಮಹಾತ್ಮನಂ ಸುತನನೞ್ಕಱಂದಾ ಮಹಿಪಂ                  ೧೦೬

ವ|| ಅಂತು ಕಂಡು

ಅಡಿಗಡಿಗಾನಂದಾಶ್ರುಗ
ಳೆಡೆವಿಡದುಣ್ಮುತ್ತಿರಲ್ಕೆ ನಿಡ್ಲುಗಣ್ಮಲರಿಂ
ಪಿಡಿವಂದದೆ ಕುಡಿವಂದದೆ
ನುಡಿವಂದದೆ ಸುತನನೞ್ಕಱಂದೀಕ್ಷಿಸಿದಂ                     ೧೦೭

ವ|| ಆಗಳ್ ಶುಕನಾಸಂ ಕುಮಾರನಂಗಪ್ರತ್ಯಂಗಂಗಳಂ ಪ್ರೀತಿವಿಸ್ತಾರಿತಲೋಚನನಾಗಿ ನೋಡಿ ನರೇಂದ್ರಂಗಿಂತೆಂದಂ

ದೇವ ಪೆಱತಾವುದವ್ಯ
ಕ್ತಾವಯವದೊಳಂ ಕುಮಾರನುನ್ನತಿಕೆಯನು
ದ್ಭಾವಿಸುತಿರ್ದಪ್ಪು ದಂ ಪರ‍್ವಿ
ಭಾವಿಸು ನೀಂ ಚಕ್ರವರ್ತಿಚಿಹ್ನೋತ್ಕರಮಂ                 ೧೦೮

ಪೆನೊಸಲೊಳ್ ಬಿಸತಂತುವ
ತೆಱದಿಂ ಮಿಱುಗಿದಪುದೂರ್ಣೆ  ಭವನಾಂತರಮಂ
ನೆ ಧವಳಿಸುತಿರ್ದಪುದೀ
ತುಱುಗೆಮೆಗಣ್ಬೆಳಗು ಪುಂಡರೀಕೇಕ್ಷಣನಾ                    ೧೦೯

ಕೃಶವಾದ ಹಾಗೂ ಬಿಳುಪಾದ ದೇಹವುಳ್ಳ ವಿಲಾಸವತೀ ಮಹಾರಾಣಿಯ ತೊಡೆಯ ಮೇಲೆ ತನ್ನೊಂದು ದೇಹಪ್ರಭೆಯೆ ಇತರ ದೀಪಗಳ ಬೆಳಕನ್ನು ಮುಚ್ಚಿ ತಾನೇ ತಾನಾಗಿ ಬೆಳಗುತ್ತಿರಲಾಗಿ, ೧೦೪. ಉದಯ ಕಾಲದ ಕೆಂಬಣ್ಣದಿಂದ ಕೂಡಿಕೊಂಡಿರುವ ಸೂರ್ಯಮಂಡಳದಂತೆಯೂ, ಸಂಜೆಗಂಪಿನಿಂದ ಕೂಡಿಕೊಂಡಿರುವ ಚಂದ್ರಬಿಂಬದಂತೆಯೂ, ಅರಳಿರುವುದರಿಂದ ಕೆಂಪನ್ನು ಹೊಂದಿರುವ ಕೆಂದಾವರೆಯ ಗುಂಪಿನಂತೆಯೂ, ಚಿಗುರಿನ ಗೊಂಚಲುಗಳ ಕೆಂಪಿನಿಂದ ಕೂಡಿರುವ ಕಲ್ಪವೃಕ್ಷದಂತೆಯೂ ಆ ಶಿಶು ಬಹಳ ಸೊಗಸಾಗಿ ಶೋಭಿಸುತ್ತಿತ್ತು. ೧೦೫. ಕುಮಾರ ಸ್ವಾಮಿಯನ್ನು ಮೀರಿಸಿರುವ ಈ ಕುಮಾರನು “ಬ್ರಹ್ಮನು ಎಳೆಬಿಸಿಲು, ಹವಳದ ಬಳ್ಳಿಯ ಕುಡಿಚಿಗುರು ಮತ್ತು ಮಾಣಿಕ್ಯದ ಕಾಂತಿ, ಇವುಗಳನ್ನು ಕೂಡಿಸಿ ಸೃಷ್ಟಿಸಿದ್ದಾನೋ ಎಂಬಂತೆ ಕಣ್ಗೊಳಿಸುತ್ತಿದ್ದನು. ೧೦೬. ಆ ಕುಮಾರನಲ್ಲಿ ಮಹಾಪುರುಷರಲ್ಲಿ ಕಂಡು ಬರುವ ಲಕ್ಷಣಗಳೆಲ್ಲ ನೈಜವಾದ ಅಲಂಕಾರದಂತೆ ಪ್ರಕಾಶಿಸುತ್ತಿದ್ದುವು. ಅಂತಹ ಮಂಗಳಕರನಾದ ಮಹಾತ್ಮನಂತಿರುವ ಮಗನನ್ನು ರಾಜನು ಬಹಳ ಅಕ್ಕರೆಯಿಂದ ನೋಡಿದನು. ವ|| ಹಾಗೆ ನೋಡಿ ೧೦೭. ಪ್ರತಿ ಕ್ಷಣದಲ್ಲೂ ಆನಂದಬಾಷ್ಪವು ಒಂದೇ ಸಮನೆ ಉಕ್ಕುತ್ತಿರಲಾಗಿ ಮಹಾರಾಜನು ತನ್ನ ವಿಸ್ತಾರವಾದ ಅರಳಿದ ಕಣ್ಣುಗಳಿಂದ ತನ್ನ ಮಗನನ್ನು ಹಿಡಿದುಕೊಳ್ಳುವಂತೆಯೂ ಕುಡಿದುಬಿಡುವವನಂತೆಯೂ ಮಾತಾಡಿಸುವಂತೆಯೂ ಪ್ರೀತಿಯಿಂದ ನೋಡಿದನು. ವ|| ಆಗ ಶುಕನಾಸನು ಕುಮಾರನ ಅಂಗೋಪಾಂಗಗಳನ್ನು ಪ್ರೀತಿಯಿಂದ ಅಗಲವಾದ ಕಣ್ಣುಳ್ಳವನಾಗಿ ನಿರೀಕ್ಷಿಸಿ ರಾಜನನ್ನು ಕುರಿತು ಹೀಗೆ ಹೇಳಿದನು. ೧೦೮. ಈಗ ತಾನೆ ಜನಿಸಿರುವುದರಿಂದ ಲಕ್ಷಣಗಳು ಚೆನ್ನಾಗಿ ತೋರದಿರುವ ಈ ಎಳಮೈಯಲ್ಲೂ ಕುಮಾರನ ಪೆಂಪನ್ನು ಪ್ರಕಾಶಪಡಿಸುವ ಚಕ್ರವರ್ತಿ ಲಕ್ಷಣಗಳ ಸಮೂಹವನ್ನು ತಾವು ಪರಾಂಬರಿಸಬೇಕು. ೧೦೯. ಬೆಳ್ದಾವರೆಯಂತೆ ಕಣ್ಣುಳ್ಳ ಈ ಕುಮಾರನ

ದರದಳಿತ ಕಮಲಕುಟ್ಮಳ
ಪರಿಮಳವೆನಿಸಿರ್ದ ಸಹಜಮುಖಸೌರಭಮಂ
ಬರೆ ಪೀರುತಿರ್ಪುದೆಂಬಂ
ತಿರೆ ನಾಸಿಕ ನೀಳ್ಪುವೆತ್ತುದೀ ಬಾಲಕನಾ                   ೧೧೦

ಅರುಣೋತ್ಪಲದಳಲೋಹಿತ
ಕರಂಗಳೊಳ್ ಶಂಖಚಕ್ರಚಿಹ್ನಂಗಳನಾಂ
ತಿರೆ ಮುರವೈರಿಯ ಕರದಂ
ತಿರೆ ಕರಮೆಸೆದಪುದು ಕರಯುಗಂ ಬಾಲಕನಾ                            ೧೧೧

ಕರಿತುರಗಾತಪತ್ರ ಶತಪತ್ರಪರಿಸುಟರೇಖೆಗಳ್ ಮನೋ
ಹರತರಮಾಗೆ ಕಲ್ಪತರು ಕೋಮಲಪಲ್ಲವದಂತೆ ಮೆಲ್ಪಿನಿಂ
ಪೊರೆದ ನರೇಂದ್ರವೃಂದ ಮಣಿಮೌಳಿಕದಂಬಕಚುಂಬನೋಚಿತಂ
ಚರಣಯುಗಂ ಮನಂಗೊಳಿಸುತಿರ್ದಪುದಿಂತಿದೆನಲ್ ಕುಮಾರನಾ         ೧೧೨

ನಂದನರುದಿತಂ ಹೃದಯಾ
ನಂದಮನೆನಗೊದವಿಸುತ್ತಮಿರ್ದಪುದಿಂತೀ
ದುಂದುಭಿಗಭೀರನಾದದಿ
ನೆಂದಿಂತಾ ಮಂತ್ರಿ ಪೇೞುತಿರೆ ತತ್‌ಕ್ಷಣದೊಳ್                                ೧೧೩

ವ|| ಅಂತಪುರದ್ವಾರದೇಶದೊಳಿರ್ದ ರಾಜಲೋಕಮೆಲ್ಲಮಂ ಸಂಭ್ರಮಂಬೆರಸು ತೊಲಗಲೊರ್ವ ಪುರುಷಂ ಪ್ರಹೃಷ್ಪವಡನಂ ತ್ವರಿತಗತಿಯಿಂ ಬಂದು ಪೊಡಮಟ್ಟು ಬಿನ್ನಪಮೆಂದಿಂತೆಂದಂ

ದೈವವಿದಿರ್ಚಿ ಬಂದುದು ಜಗಜ್ಜಯಮಂ ತಳೆ ದೇವ ರೇಣುಕಾ
ದೇವಿಗೆ ರಾಮನುತ್ಸವದೆ ಪುಟ್ಟಿದವೋಲ್ ಶುಕನಾಸಮಂತ್ರಿ ಸಂ
ಭಾವಿತೆಯಪ್ಪ ಪಾರ‍್ವಿತಿ ಮನೋರಮೆಗತ್ತ ಭವತ್ಪ್ರಸಾದದಿಂ
ದೀವರಲಗ್ನದೊಳ್ ತನಯನತ್ಯಕೋತ್ಸವಮಾಗೆ ಪುಟ್ಟಿದಂ             ೧೧೪

ಅರಸಂ ಕಲ್ಯಾಣಪರಂ
ಪರೆ ಸಮನಿಸಿತೆಂದು ತೆಗೆದು ತಳ್ಕೈಸುತ್ತಂ
ಸರಭಸಮೊಲವಿಂ ಸಚಿವೋ
ತ್ತರೀಯಮಂ ಪೂರ್ಣಪಾತ್ರಮೆನೆ ಕೊಂಡಂ                               ೧೧೫

ಬಾಲಚಂದ್ರನಂತಿರುವ ಹಣೆಯಲ್ಲಿ ತಾವರೆದಂಟಿನ ಎಳೆಯಂತಿರುವ ಚಕ್ರವರ್ತಿ ಲಕ್ಷಣವನ್ನು ಸೂಚಿಸುವ ಹುಬ್ಬುಗಳ ನಡುವಿನ ಕೂದಲುಸುಳಿಯು ಚೆನ್ನಾಗಿ ಕಾಣುತ್ತಿದೆ. ಅಲ್ಲದೆ ಒತ್ತು ರೆಪ್ಪೆಗೂದಲುಳ್ಳ ಕಣ್ಣುಗಳ ಬೆಳಕು ಈ ಸೂತಿಕಾಗೃಹವನ್ನು ಬೆಳಗುತ್ತಿದೆ. ೧೧೦. ಸ್ವಲ್ಪ ಅರಳಿರುವ ತಾವರೆ ಮೊಗ್ಗಿನ ಸುವಾಸನೆಯನ್ನು ಹೋಲುವ ಬಾಯಿಯ ಸಹಜವಾದ ಪರಿಮಳವನ್ನು ಚೆನ್ನಾಗಿ ಹೀರುತ್ತಿವೆಯೋ ಎಂಬಂತೆ ಈ ಬಾಲಕನ ಮೂಗು ಉದ್ದವಾಗಿದೆ. ೧೧೧. ಕೆಂದಾವರೆಯ ಎಸಳುಗಳಂತೆ ಕೆಂಪಾದ ಈ ಎರಡು ಕೈಗಳು ಶಂಖ, ಚಕ್ರರೇಖೆಗಳನ್ನು ಹೊಂದಿರಲಾಗಿ ಶ್ರೀಮನ್ನಾರಾಯಣನ ಕೈಗಳಂತೆ ಶೋಭಿಸುತ್ತಿವೆ. ೧೧೨. ಈ ಶಿಶುವಿನ ಎರಡು ಕಾಲುಗಳಲ್ಲಿ ಆನೆ, ಕುದುರೆ, ಛತ್ರಿ, ಕಮಲರೇಖೆಗಳು ಬಹಳ ಮುದ್ದಾಗಿಯೂ ಸ್ಪಷ್ಟವಾಗಿಯೂ ಕಾಣುತ್ತಿವೆ. ಕಲ್ಪವೃಕ್ಷದ ಕೋಮಲವಾದ ಚಿಗುರಿನಂತೆ ಮೃದುವಾದ ಕಾಲಿಗೆರಗುವ ಅಸಂಖ್ಯಾತ ರಾಜರ ಕಿರೀಟಗಳ ತಗಲುವಿಕೆಗೆ ಪಾತ್ರವಾಗುವ ಈ ಚರಣಯುಗಳವು ಬಹಳ ಮನೋಹರವಾಗಿದೆ. ೧೧೩. ಈ ಮಗುವಿನ ದುಂದುಭಿಧ್ವನಿಯಂತೆ ಗಂಭೀರವಾದ ಅಳುವ ಶಬ್ದವು ನನ್ನ ಹೃದಯಕ್ಕೆ ಬಹಳ ಆನಂದವನ್ನುಂಟುಮಾಡುತ್ತದೆ ಎಂಬುದಾಗಿ ಆ ಮಂತ್ರಿಯು ಹೇಳುತ್ತಿರಲಾಗಿ, ಆ ಕೂಡಲೆ ವ|| ರಾಣೀವಾಸದ ಬಾಗಿಲಿನಲ್ಲಿ ನೆರೆದಿದ್ದ ರಾಜರ ಸಂದಣಿಯನ್ನು ಗಡಿಬಿಡಿಯಿಂದ ದಾರಿ ಬಿಡಿಸಿಕೊಳ್ಳುತ್ತಾ ಒಬ್ಬ ಮನುಷ್ಯನು ಅರಳಿದ ಮುಖವುಳ್ಳವನಾಗಿ ಬಹಳ ವೇಗದಿಂದ ಬಂದು ನಮಸ್ಕರಿಸಿ ಹೀಗೆ ಅರಿಕೆ ಮಾಡಿದನು. ೧೧೪. ‘ಮಹಾಪ್ರಭುಗಳಿಗೆ ಅದೃಷ್ಟವು ಕೂಡಿ ಬಂದಿದೆ. ಜಗತ್ತಿನಲ್ಲಿ ಸರ್ವೋತ್ಕೃಷ್ಟರೆನಿಸಿ ಮೆರೆಯಿಸಿ. ಪ್ರಭುವೆ, ರೇಣುಕಾದೇವಿಗೆ ಪರಶುರಾಮನು ಸಂಭ್ರಮದಿಂದ ಹುಟ್ಟಿದಂತೆ ಶುಕನಾಸಮಂತ್ರಿಗಳ ಧರ್ಮಪತ್ನಿಯವರಾದ ಮನೋರಮಾಮ್ಮನವರಿಗೆ ತಮ್ಮ ಅನುಗ್ರಹದಿಂದ ಈ ಶುಭಲಗ್ನದಲ್ಲಿ ಎಲ್ಲರಿಗೂ ಪರಮಾನಂದವಾಗುವಂತೆ ಗಂಡು ಮಗು ಹುಟ್ಟಿದೆ. ೧೧೫. ತಾರಾಪೀಡಮಹಾರಾಜನು ಈ ಮಾತುಗಳನ್ನು ಕೇಳಿ ‘ಶುಭಪರಂಪರೆಯು ಬಂದೊದಗುತ್ತಾ ಇದೆ’ ಎಂದು ಹೇಳುತ್ತಾ ತಟ್ಟನೆ

ವ|| ಅನಂತರಮೊಸಗೆವಾತಂ ಪೇೞ್ದವಂಗೆ ಮಚ್ಚುಗೊಟ್ಟಲ್ಲಿಂದೆೞ್ದು ಪೊಱಮಟ್ಟು ನೋೞ್ಪನ್ನೆಗಮಲ್ಲಿ ಕ್ವಣಿತಮಣಿನೂಪುರಸಹಸ್ರ ಮುಖರಿತ ದಿಗಂತಮುಂ ಅತಿರಭಸೋಪಚಲಿತ ಮಣಿವಲಯಾವಳೀವಿಳಸಿತ ಭುಜಲತಾಪ್ರತಾನಮುಮುತ್ತಾನಕರತಳನಳಿನಮುಂ ಮೃದಿತ ಕರ್ಣಪೂರಪಲ್ಲವಮಂ ಅನ್ಯೋನ್ಯಾಂಗದ ಸಂಘಟ್ಚನಸಂದಷ್ಟಪಾಟಿತೋತ್ತರೀಯಮುಂ ನಿಜಾಂಗರಾಗರಂಜಿತವಸನಮುಂ ಕಿಂಚಿದವಶಿಷ್ಟಮಕರಿಕಾ ಪತ್ರಲೇಖಮುಂ ಆಲೋಲ ಹಾರಲತಾಸಾಲಿತಕುಚಕುಂಭಸ್ಥಳಮುಂ ಸಿಂಧೂರತಿಲಕಾರುಣಿತಚಿಕುರನಿಕರಮುಂ ಪಿಷ್ಟಾತಪಾಂಸಂಪಿಂಜರಿತ ಕೇಶಪಾಶಮುಂ ಪ್ರನೃತ್ತ ಖಂಜ ಮೂಕ ಕುಬ್ಜ ವಾಮನ ಕಿರಾತಜನ ಪುರಸ್ಸರಮುಂ ಉತ್ತರೀಯಾಂಶುಕಾಕೃಷ್ಟ ಜರತ್ಕಂಚುಕನಿಕಾಯಮುಂ ವೀಣಾವೇಣುಮುರಜ ಕಾಂಸ್ಯತಾಳಲಯಾನುಗತ ಮೆನಿಸಿದಂತಪುರವಿಳಾಸಿನೀಜನಮುಂ ಪ್ರಚಲನ್ಮಣಿಕುಂಡಲಾಹತ ಗಂಡಮಂಡಲಮುಂ ಘೂರ್ಣಮಾನ ಕರ್ಣೋತ್ಪಲಮುಂ ಅಧೋವಿಗಳಿತವಿಲೋಲಶೇಖರಮುಂ ಡೋಲಾಯಮಾನ ವೈಕಕ್ಷಕಕುಸುಮಮಾಲಮುಂ ಭೇರೀ ಮೃದಂಗ ಮರ್ದಳ ಪಟಹ ಕಹಳಾ ಶಂಕರವಜನಿತರಭಸಮುಮೆನಿಸಿದ ರಾಜಪರಿವಾರಮುಂ ನೃತ್ಯಪ್ರವೃತ್ತಚಾರಣಗಣಮುಮೊಸಗೆ ಮರುಳ್ಗೊಂಡು ಭೋರ್ಗರೆದು ನಲಿದು ನರ್ತಿಸುತ್ತುಮೊಡನೆ ಬರೆವರೆ

ವಿವಿಧವಿಲಾಸಮಂ ತಳೆದು ಮಂಗಳಕೇಳಿಯನೞವಟ್ಟು ಮಾ
ನವಪತಿ ನೋಡುತಂ ಸಚಿವಮಂದಿರಮಂ ಪುಗುತಂದು ಸೂತಿಕಾ
ಭವನಮನೆಯ್ದಿ ಪೆರ್ಮೆಗನುರೂಪಮೆನಲ್ ನಿಜಮಂದಿರೋದ್ಗತೋ
ತ್ಸವಕಿದು ನಾಡೆಯುಂ ದ್ವಿಗುಣಮೆಂಬಿನಮುತ್ಸವಮಂ ನೆಗೞದಂ                  ೧೧೬

ವ|| ಅಂತು ನೆಗೞ ದಶಮದಿನಪುಣ್ಯಸುಮುಹೂರ್ತದೊಳ್ ಸುವರ್ಣಕೋಟಿಗಳಂ ದ್ವಿಜೋತ್ತಮರ್ಗಿತ್ತು ತದನಂತರದೊಳ್

ಮೊದಲೊಳ್ ಬಂದೞ್ಕಱಂದೀತನ ಜನನಿಯ ವಕ್ತ್ರಾಬ್ಜದೊಳ್ ಚಂದ್ರಮಂ ಪೊ
ಕ್ಕುದನಲ್ತೆ ಕಂಡೆನಾಂ ಸ್ವಪ್ನದೊಳೆನುತೆ ಮನಂಗೊಂಡು ತತ್ಸ ಪ್ನಸಾದೃ
ಶ್ಯದೆ ಚಂದ್ರಾಪೀಡನೆಂಬೀ ಮೊದಲ ಪೆಸರನಿಟ್ಟಂ ತನೂಜಂಗೆ ಮೂಲೋ
ಕದೊಳಂ ಮಾಂಗಲ್ಯತೂರ್ಯಧ್ವನಿ ಪಸರಿಸಿ ಪರ್ವುತ್ತಿರಲ್ ಸಾರ್ವಭೌಮಂ           ೧೧೭

ಪ್ರೀತಿಯಿಂದ ಮಂತ್ರಿಯನ್ನು ಗಾಢವಾಗಿ ತಬ್ಬಿಕೊಂಡು “ಇನಾಮು” ಎಂದು ಹೇಳುತ್ತಾ ಅವನ ಮೇಲುದವನ್ನು ಕಸಿದುಕೊಂಡನು. ವ|| ಬಳಿಕ ಈ ಶುಭಸಮಾಚಾರವನ್ನು ಹೇಳಿದವನಿಗೆ ಬಳುವಳಿಯನ್ನು ಕೊಟ್ಟು ಅಲ್ಲಿಂದ ಎದ್ದು ಹೊರಟುಬಂದು ನೋಡುತ್ತಿರಲಾಗಿ ಅಂತಪುರದ ಲಲನೆಯರು ಆನಂದದಿಂದ ನಲಿದಾಡುತ್ತಿದ್ದರು. ಅವರ ರತ್ನಖಚಿತವಾದ ಅಸಂಖ್ಯಾತ ಕಾಲ್ಗಡಗಗಳ ಕಣಕಣಧ್ವನಿಯು ದಿಗಂತವನ್ನು ಶಬ್ದಮಯವಾಗಿ ಮಾಡುತ್ತಿತ್ತು. ಅವರ ಬಳ್ಳಿದೋಳುಗಳಲ್ಲಿ ರನ್ನಗಡಗಗಳು ಬಹಳ ವೇಗದಿಂದ ಚಲಿಸುತ್ತಿದ್ದುವು. ಅವರು ತಾವರೆಯಂದದ ತಮ್ಮ ಅಂಗೈಗಳನ್ನು ಮೇಲಕ್ಕೆತ್ತುತ್ತಿದ್ದರು. ಕಿವಿಯಲ್ಲಿ ಮುಡಿದಿದ್ದ ಚಿಗುರುಗಳು ಹಿಸುಕಿಹೋಗಿದ್ದುವು. ತೋಳುಬಂದಿಗಳ ಪರಸ್ಪರ ತಿಕ್ಕಾಟದಲ್ಲಿ ಸಿಕ್ಕಿಕೊಂಡು ಮೇಲುದುಗಳು ಹರಿದುಹೋಗುತ್ತಿದ್ದುವು. ಅವರು ಲೇಪಿಸಿಕೊಂಡಿದ್ದ ಶ್ರೀಗಂಧವೇ ಮೊದಲಾದುವುಗಳು ಸೀರೆಗೆ ರಂಗಿಳಿಸಿಕೊಂಡಿದ್ದವು. ಬರೆದುಕೊಂಡಿದ್ದ ಪತ್ರರಚನೆಯು ಬೆವರಿನಿಂದ ಅಳಿಸಿಹೋಗಿ ಸ್ವಲ್ಪ ಮಾತ್ರ ಉಳಿದುಕೊಂಡಿತ್ತು. ಅಳ್ಳಾಡುತ್ತಿರುವ ಹಾರವು ಸ್ತನಗಳಿಗೆ ಪದೇ ಪದೇ ಬಡಿಯುತ್ತಿತ್ತು. ಕುಂಕುಮದ ತಿಲಕವು ಕರಗಿ ಮುಂಗುರುಳು ಗಳನ್ನೆಲ್ಲಾ ಕೆಂಪಗೆ ಮಾಡುತ್ತಿತ್ತು. ಬುಕ್ಕಿಹಿಟ್ಟಿನ ಪುಡಿಗಳ ಎರಚಾಟದಿಂದ ಅವರ ತಲೆಗೂದಲುಗಳು ಹೊಂಬಣ್ಣವಾಗಿದ್ದುವು. ಊಳಿಗದ ಕುಂಟ, ಮೂಗ, ಗೂನ, ಕುಳ್ಳರು ಕುಣಿಯುತ್ತಿದ್ದರು. ತಮಾಶೆಗಾಗಿ ಮುದಿ ಕಂಚುಕಿಗಳನ್ನು ಮೇಲುದದಿಂದ ಕಟ್ಟಿ ಎಳೆದಾಡುತ್ತಿದ್ದರು. ವೀಣೆ, ಕೊಳಲು, ಮುರಜ, ಕಂಚಿನ ತಾಳಗಳ ಲಯಕ್ಕೆ ಅನುಸಾರವಾಗಿ ಅಂತಪುರದ ರಮಣಿಯರು ಕುಣಿಯುತ್ತಿದ್ದರು. ಪರಿವಾರದ ಜನರು ನರ್ತಿಸುತ್ತಿರಲಾಗಿ ಅವರ ಮಣಿಕುಂಡಲಗಳು ಕೆನ್ನೆಗೆ ಪದೇ ಪದೇ ಬಡಿಯುತ್ತಿದ್ದುವು. ಕಿವಿಯಲ್ಲಿ ಮುಡಿದಿರುವ ತಾವರೆಯು ಜೋಲಾಡುತ್ತಿತ್ತು. ತಲೆಯಲ್ಲಿ ಮುಡಿದುಕೊಂಡಿರುವ ಹೂವಿನ ದಂಡೆ ಅಳ್ಳಾಡಿ ಕೆಳಗೆ ಬೀಳುತ್ತಿತ್ತು. ಅವರು ಉಪವೀತದಂತೆ ಹಾಕಿಕೊಂಡಿರುವ ಹೂವಿನ ಮಾಲೆಯು ತೂಗಾಡುತ್ತಿತ್ತು. ಭೇರಿ, ಮೃದಂಗ, ಮದ್ದಳೆ, ತಮ್ಮಟೆ, ಕಾಳೆ, ಶಂಖಧ್ವನಿಗಳ ರಭಸವು ಬಹಳ ಜೋರಾಗಿತ್ತು. ಹೀಗೆ ರಾಜಪರಿವಾರದ ಜನರು ಕುಣಿದಾಡುತ್ತಿದ್ದರು. ಅರಮನೆಯ ಕಲಾವಿದರು ನೃತ್ಯವಾಡುತ್ತಿದ್ದರು. ಇವರೆಲ್ಲರೂ ಸಂತೋಷದಿಂದ ಪರವಶರಾಗಿ ಭೋರಾಡುತ್ತಾ ನಲಿದು ನರ್ತಿಸುತ್ತಾ ಜೊತೆಯಲ್ಲಿ ಬರುತ್ತಿರಲಾಗಿ ೧೧೬. ಹೀಗೆ ಲೀಲೆಯನ್ನು ತಾಳಿದ ಮಂಗಳಕ್ರೀಡೆಯನ್ನು ಬಹಳ ಆಸಕ್ತಿಯಿಂದ ನೋಡುತ್ತಾ ಮಹಾರಾಜನು ಮಂತ್ರಿಯ ಮನೆಗೆ ಬಂದು ಹೆರಿಗೆಮನೆಗೆ ಹೋಗಿ ತನ್ನ ಹೆಮ್ಮೆಗೆ ಅನುಗುಣವಾಗಿದೆ ಎಂಬಂತೆ ತನ್ನ ಅರಮನೆಯಲ್ಲಿ ನಡೆದ ಉತ್ಸವಕ್ಕೆ ಇದು ಎರಡರಷ್ಟು ಎಂಬಂತೆ ಉತ್ಸವವನ್ನು ಮಾಡಿಸಿದನು. ವ|| ಹಾಗೆ ಮಾಡಿಸಿ ಹತ್ತನೆಯ ದಿನ ಶುಭಮುಹೂರ್ತದಲ್ಲಿ ಬ್ರಾಹ್ಮಣೋತ್ತಮರಿಗೆ ಕೋಟಿಗಟ್ಟಲೆ ಚಿನ್ನವನ್ನು ದಾನ ಮಾಡಿ ಬಳಿಕ, ೧೧೭. ಹಿಂದೆ ತಾನು ಈ ಶಿಶುವಿನ ತಾಯಿಯ ಬಾಯೊಳಕ್ಕೆ ಚಂದ್ರನು ಆಸಕ್ತಿಯಿಂದ ಪ್ರವೇಶಮಾಡಿದ್ದನ್ನು ಕಂಡನಲ್ಲವೆ?