ಎರಡುಮಚಲಂಗಳೆಡೆಯೊಳ್
ಪರಿವಮರನದೀಪ್ರವಾಹದಿಂದೆಸೆವ ವಸುಂ
ಧರೆಯಂದದಿನಲಘುಪಯೋ
ಧರವಿಲಸಿತಹಾರಲತಿಕೆ ಸತಿ ಸೊಗಯಿಸಿದಳ್           ೩೯

ಪೊಳೆವ ರವಿಬಿಂಬದೊಳ್ ಬಂ
ದೊಳಪೊಕ್ಕುಮೃತಾಂಶುಬಿಂಬಮೆನೆ ನಿಜಶಯ್ಯಾ
ತಳನಿಹಿತ ರತ್ನದರ್ಪಣ
ತಳದೊಳ್ ಮಾರ್ಪೊಳೆದುದಾನನಂ ಮಾನಿನಿಯಾ        ೪೦

ವ|| ಅಂತಿರ್ದಳಂ ಗೆಂಟಿನೊಳ್ ಕಂಡು ವಿನಯರತ್ನಾಕರಂ ಸಾಷ್ಟಾಂಗಪ್ರಣತನಾಗೆ

ಅರಸಿ ನಲವರಿಕೆಯಿಂದಂ
ಪರಸುತ್ತಿಂದೆನ್ನ ತಂದೆ ಬಂದನೆನುತ್ತಂ
ತೊರೆದೆನಸುಂ ಮೊಲೆವಾಲುಗು
ತರೆ ತನಯನನೞ್ಕಱಂದಮಪ್ಪಿದಳಾಗಳ್                ೪೧

ವ|| ಅನಂತರಂ ವೈಶಂಪಾಯನನುಮೞ್ಕಱಂ ತಳ್ಕೈಸಿ ವಿಳಾಸವತಿಮಹಾದೇವಿ ಕುಳ್ಳಿರ್ದು ವಿನಯದಿಂ ನೆಲದೊಳ್ ಕುಳ್ಳಿರ್ದ ವೈಶಂಪಾಯನನುಮಂ ಮಗುೞೆ ತೆಗೆದು ತಳ್ಕೈಸುತ್ತಮಿರ್ದು

ವಿನಯದೆ ನಿನ್ನ ತಂದೆಯ ಪ್ರಸಾದದಿನಿಂತು ಸಮಸ್ತ ಸತ್ಕಳಾ
ವನಿತೆಯರೊಳ್ ಮಹೋತ್ಸವದೆ ಕೂಡಿದಿರಿಂತಿರೆ ಬೇಗದಿಂ ವಧೂ
ಜನದೊಡಗೂಡಿಮೆಂದು ಪಿರಿದೞ್ಕಱನೊಳ್ ಪರಸುತ್ತಮಾತ್ಮನಂ
ದನ ಶುಕಾನಾಸನಂದನನನಾ ಸತಿ ಕಣ್ಮಲರಾರೆ ನೋಡಿದಳ್               ೪೨

ವ|| ತದನಂತರಂ ಸಮಸ್ತ ಜನನಿಯರುಮಂ ಯಥಾಕ್ರಮದಿನಭಿವಂದಿಸಿ ರಾಜಮಂದಿರಮಂ ಪೊಱಮಟ್ಟು ಸಕಲ ರಾಜಲೋಕಂಬೆರಸು ಮಹಾಮಾತ್ಯ ಶುಕನಾಸನರಮನೆಗೆ ವಂದು

ತಂದೆಗೆ ತಾಯ್ಗೆ ಮಹೋತ್ಸವ
ದಿಂದಂ ಪೊಡಮಡುವ ತೆಱದೆ ಸಚಿವಂಗಂ ತ
ತ್ಸುಂದರಿ ಮನೋರಮೆಗಮಾ
ನಂದದೆ ಪೊಡಮಟ್ಟನಂದು ಚಂದ್ರಾಪೀಡಂ              ೪೩

ಯರಿಂದಲೂ, ಪುರಾಣಪುಣ್ಯಕಥೆಗಳನ್ನು ಹೇಳುವುದರಲ್ಲಿ ಆಸಕ್ತರಾಗಿರುವ ಸಂನ್ಯಾಸಿನಿಯರ ಗುಂಪಿನಿಂದಲೂ ಸೇವಿಸಲ್ಪಡುತ್ತಿದ್ದ ತಾಯಿಯನ್ನು ಕಂಡನು. ಅಲ್ಲದೆ, ೩೯. ಎರಡು ಬೆಟ್ಟಗಳ ಮಧ್ಯದಲ್ಲಿ ಹರಿಯುತ್ತಿರುವ ಗಂಗಾನದಿಯ ಪ್ರವಾಹದಿಂದ ಶೋಭಿಸುವ ಭೂಮಿ ಭಾಗದಂತೆ ತೋರಮೊಲೆಗಳ ಮಧ್ಯದಲ್ಲಿ ಶೋಭಿಸುತ್ತಿರುವ ಮುತ್ತಿನ ಸರದಿಂದ ವಿಲಾಸವತಿಯು ಕಂಗೊಳಿಸುತ್ತಿದ್ದಳು. ೪೦. ತಳತಳಿಸುವ ಸೂರ್ಯಬಿಂಬದಲ್ಲಿ ಪ್ರವೇಶಿಸಿರುವ ಚಂದ್ರಮಂಡಲದಂತೆ ತನ್ನ ಹಾಸಿಗೆಯಲ್ಲಿ ಇಟ್ಟಿರುವ ಮಣಿಗನ್ನಡಿಯಲ್ಲಿ ವಿಲಾಸವತಿಯ ಮುಖವು ಪ್ರತಿಫಲಿಸಿತು. ವ|| ಹೀಗೆ ಇದ್ದ ತಾಯಿಯನ್ನು ಬಹಳ ವಿನಯವಂತನಾದ ಚಂದ್ರಾಪೀಡನು ದೂರದಿಂದಲೇ ಕಂಡು ಸಾಷ್ಟಾಂಗ ನಮಸ್ಕಾರವನ್ನು ಮಾಡಲಾಗಿ, ೪೧. ಮಹಾರಾಣಿಯು ಬಹಳ ಪ್ರೀತಿಯಿಂದ ಆಶೀರ್ವದಿಸುತ್ತಾ ‘ಈ ದಿನ ನನ್ನಪ್ಪ ಬಂದನಲ್ಲ’ ಎಂದು ಹೇಳುತ್ತಾ, ಮೊಲೆಹಾಲು ಒಸರುತ್ತಿರಲು ಮಗನನ್ನು ಬಹಳ ಅಕ್ಕರೆಯಿಂದ ತಬ್ಬಿಕೊಂಡಳು. ವ|| ಬಳಿಕ ವೈಶಂಪಾಯನನನ್ನು ಪ್ರೀತಿಯಿಂದ ಆಲಿಂಗಿಸಿ ವಿನಯದಿಂದ ನೆಲದ ಮೇಲೆ ಕುಳಿತುಕೊಂಡಿದ್ದ ಅವನನ್ನು ಮತ್ತೆ ಮತ್ತೆ ಬಾಚಿ ತಬ್ಬಿಕೊಳ್ಳುತ್ತಿದ್ದು, ೪೨. “ಮಗು, ನಿನ್ನ ತಂದೆಯ ಅನುಗ್ರಹದಿಂದ ನೀವಿಬ್ಬರೂ ವಿನಯವಂತರಾಗಿ ಸಮಸ್ತವಿದ್ಯೆಗಳೆಂಬ ಕನ್ಯೆಯರನ್ನು ಬಹಳ ಸಂತೋಷದಿಂದ ಪಡೆದಿರಿ. ಇನ್ನು ಆದಷ್ಟು ಬೇಗನೆ ಹೆಂಡತಿಯರನ್ನು ಕೈಹಿಡಿಯಿರಿ” ಎಂದು ಬಹಳ ಮಮತೆಯಿಂದ ಆಶೀರ್ವದಿಸುತ್ತಾ ತನ್ನ ಮಗನನ್ನೂ ಮಂತ್ರಿಯ ಮಗನನ್ನೂ ರಾಣಿ ಕಣ್ಣು ತಣಿಯವಂತೆ ನೋಡಿದಳು. ವ|| ಬಳಿಕ ತಾಯಂದಿರನ್ನು ಕ್ರಮವರಿತು ನಮಸ್ಕರಿಸಿ, ಅರಮನೆಯಿಂದ ಹೊರಕ್ಕೆ ಬಂದು ಸಮಸ್ತ ಸಾಮಂತರಿಂದ ಕೂಡಿಕೊಂಡು ಮುಖ್ಯಮಂತ್ರಿಯಾದ ಶುಕನಾಸನ ಮಹಲಿಗೆ ಬಂದು, ೪೩. ಚಂದ್ರಾಪೀಡನು ತನ್ನ ತಾಯಿತಂದೆಗಳಿಗೆ ಹೇಗೆ ಸಂತೋಷದಿಂದ ನಮಸ್ಕರಿಸುತ್ತಾನೋ ಅದೇ ರೀತಿ

ವ|| ಅಂತು ಪೊಡವಟ್ಟು ಪರಮಾಶೀರ್ವಾದಂಗಳನಾಂತು ತದನಂತರದೊಳ್ ಪೊಱಮಟ್ಟು ಬರ್ಪಾಗಳ್

ತನಗೆಂದು ಬೇ ಮುನ್ನಮೆ
ಜನಕಂ ಮಾಡಿಸಿದ ನೆಲೆಯ ಕರುಮಾಡಂ ಕಾಂ
ಚನಕಲಶತತಿಯಿನೆಸೆದುದು
ಕನಕಾದ್ರಿಯನಲ್ಲಿ ಕಡೆದು ತಂದಿರ‍್ವಿಸಿದವೋಲ್        ೪೪

ವ|| ಅದಲ್ಲದೆಯುಮಾಬದ್ಧವಂದನಮಾಲಾಭಿರಂಜಿತಮುಮುದ್ಗತ ಸಿತಪತಾಕಾ ಸಹಸ್ರಸಂಕುಳಮುಮಭ್ಯಾಹತ ಮಂಗಳಪಟುಪಟ ಹರವಾಪೂರಿತಮುಂ ಉಪಪಾದಿತಾಶೇಷ ಗೃಹಪ್ರವೇಶಮಂಗಳಮುಮಪ್ಪ ನಿಜಮಂದಿರಮಂ ಪೊಕ್ಕು ನರೇಂದ್ರಚಕ್ರಮಂ ಯಥಾಕ್ರಮದಿಂ ಮನ್ನಿಸಿ ಮಜ್ಜನಭೋಜನಾದಿ ದಿವಸವ್ಯಾಪಾರಮಂ ತೀರ್ಚಿ

ಭುವನತ್ರಯಮುಂ ಕೈಸಾ
ರ್ಗುವಿದಱನೆಂಬಂತೆ ತನ್ನ ಮಣಿಮಯಶಯ್ಯಾ
ಭವನಾಂತರಾಳದೊಳ್ ಕ
ಟ್ಟವೇೞ್ದನಿಂದ್ರಾಯುಧಾಶ್ವಮಂ ನೃಪತನಯಂ           ೪೫

 

ವ|| ಅಂತು ತುರಗರತ್ನಮನೆ ನೋಡಿ ಪೋೞ್ತುಗಳೆಯುತ್ತಮಿರ್ಪುದುಂ

ದಿನಲಕ್ಷಿ ಕಾಂತೆ ಮೆಯ್ವಿಟ್ಟಿೞದು ಗಗನರಂಗಾಗ್ರದಿಂ ವಾರುಣೀಸೇ
ವನೆಗೆಯ್ತರ್ಪಲ್ಲಿ ಕಾಲಿಂ ನವಮಣಿಮಯಮಂಜೀರಕಂ ನುಣ್ಚುತಂ ತೀ
ವಿ ನಿಜಪ್ರದ್ಯೋತದಿಂ ಪಶ್ಚಿಮಶಿಖರಿಶಿರೋಭಾಗದೊಳ್ ಬೀೞ್ದುದೆಂಬಂ
ತಿನಬಿಂಬಂ ರಂಜಿಸಿತ್ತಸ್ತಮಯ ಸಮಯದೊಳ್ ಮುಕ್ತಪಾದಾವಲಂಬಂ        ೪೬

ಇನನ ರಥಚಕ್ರಮಾರ್ಗವ
ನನುಸರಿಸಿ ಜಲಪ್ರವಾಹಮೇ ಪಿರಿದಪುದೆಂ
ಬಿನಮೆಸೆದತ್ತಪರದಿಶಾಂ
ಗನೆಯತ್ತಲ್ ರಾಗರುಚಿರ ದಿವಸಾಲೋಕಂ             ೪೭

ಮಂತ್ರಿಗೂ ಅವನ ಪತ್ನಿಯಾದ ಮನೋರಮೆಗೂ ಆನಂದದಿಂದ ನಮಸ್ಕರಿಸಿದನು. ವ|| ಹಾಗೆ ನಮಸ್ಕರಿಸಿ ಅಮೋಘವಾದ ಆಶೀರ್ವಾದಗಳನ್ನು ಪಡೆದು ಹೊರಟುಬರುತ್ತಿರಲಾಗಿ, ೪೪. ಮಹಾರಾಜನು ಮೊದಲೇ ಇವನ ವಾಸಕ್ಕೆಂದು ಹೊಸದಾಗಿ ಒಂದು ಉಪ್ಪರಿಗೆ ಮನೆಯನ್ನು ಕಟ್ಟಿಸಿದ್ದನು. ಅದು ಮೇರುಪರ್ವತವನ್ನೇ ಕಡೆದು ತಂದಿರಿಸಿರುವಂತೆ ಚಿನ್ನದ ಕಲಶಗಳಿಂದ ಶೋಭಿಸುತ್ತಿತ್ತು. ವ|| ಅಲ್ಲದೆ ಕಟ್ಟಿರುವ ತೋರಣದಿಂದ ರಮ್ಯವಾಗಿರುವ, ಎತ್ತಿಕಟ್ಟಿರುವ ಸಾವಿರಾರು ಬಿಳಿಯ ಬಾವುಟಗಳಿಂದ ನಿಬಿಡವಾಗಿರುವ, ಬಾರಿಸುತ್ತಿರುವ ಮಂಗಳಕರವಾದ ತಮಟೆಯ ದೊಡ್ಡ ಧ್ವನಿಯಿಂದ ತುಂಬಿಕೊಂಡಿರುವ, ಗೃಹಪ್ರವೇಶಕ್ಕೆ ಸಂಬಂಧಪಟ್ಟ ಶುಭಕಾರ್ಯ ಗಳನ್ನೆಲ್ಲಾ ಮಾಡಿ ಮುಗಿಸಿರುವ ತನ್ನ ವಾಸಭವನವನ್ನು ಸೇರಿ, ರಾಜರ ಸಮೂಹವನ್ನು ಕ್ರಮವರಿತು ಗೌರವಿಸಿ ಸ್ನಾನ, ಭೋಜನ ಮೊದಲಾದ ದಿನಚರಿ ಕೆಲಸವನ್ನೆಲ್ಲಾ ಮುಗಿಸಿದನು. ೪೫. ‘ಇದೊಂದು ದೊರಕಿರುವುದರಿಂದ ಮೂರು ಲೋಕವನ್ನೂ ಕೈವಶ ಮಾಡಿಕೊಳ್ಳಬಹುದು’ ಎಂಬಂತಿರುವ ಇಂದ್ರಾಯುಧವನ್ನು ತನ್ನ ರತ್ನಮಯವಾದ ಮಲಗುವ ಮನೆಯ ಒಳಗಡೆಯಲ್ಲೇ ಕಟ್ಟಿಹಾಕಬೇಕೆಂದು ಅಪ್ಪಣೆ ಮಾಡಿದನು. ವ|| ಹೀಗೆ ಆ ಅಶ್ವರತ್ನವನ್ನೇ ನೋಡುತ್ತಾ ನೋಡುತ್ತಾ ಕಾಲವನ್ನು ಕಳೆಯುತ್ತಿರಲಾಗಿ. ೪೬. ಸಂಧ್ಯಾಕಾಲದಲ್ಲಿ ಸೂರ್ಯಮಂಡಲವು ಕಿರಣಗಳ ಸಂಪರ್ಕವನ್ನು ಕಳೆದುಕೊಂಡು ಕಳೆಗುಂದಿ ಕೆಳಗಿಳಿಯುತ್ತಿತ್ತು. ಆಗ ಅದು ‘ದಿನಲಕ್ಷಿ ’ ಎಂಬ ಮಹಿಳೆಯು ಯಾವ ಅಳುಕೂ ಇಲ್ಲದೆ ಆಕಾಶಪ್ರದೇಶದಿಂದ “ವಾರುಣೀ ಸೇವನೆಗಾಗಿ” (೧. ಪಶ್ಚಿಮದಿಕ್ಕನ್ನು ಸೇರುವುದಕ್ಕಾಗಿ,

೨. ಮದ್ಯಪಾನಕ್ಕಾಗಿ) ಬರುತ್ತಿರಲಾಗಿ ಅವಳ ಕಾಲಿನಿಂದ ಹೊಸದಾದ ಪದ್ಮರಾಗಮಣಿಯ ಕಾಲ್ಗಡಗವು ಜಾರಿ ತನ್ನೊಂದು ಪ್ರಭೆಯಿಂದ ಮಧ್ಯರಂಧ್ರವನ್ನು ಮುಚ್ಚಿ ಏಕಾಕಾರವಾಗಿ ಮುಳುಗುವ ಬೆಟ್ಟದ ಮೇಲುಭಾಗದಲ್ಲಿ ಬೀಳುತ್ತಿದೆಯೋ ಎಂಬಂತೆ ಕಾಣುತ್ತಿತ್ತು!

೪೭. ಸೂರ್ಯನ ರಥಚಕ್ರದಿಂದ ದಾರಿಯನ್ನು ಅನುಸರಿಸಿ ಜಲಪ್ರವಾಹವೇ ಹರಿಯುತ್ತಿದೆಯೋ ಎಂಬಂತೆ ಸಂಜೆಗೆಂಪಿನಿಂದ

ನಳನೀಪರಿಮಳ ಪರಿಚಿತ
ಲುಳಿತ ಭ್ರಮರಾಳಿ ಕಾಲಪಾಶಂಗಳವೋಲ್
ಬಳಸೆ ಕೊರಲಂ ರಥಾಂಗಂ
ಗಳನಗಲ್ದುವು ವಿರಹತಾಪವಿಹ್ವಲಿತಂಗಳ್       ೪೮

ತೆಗೆದಂಬುಜಮಧುರಸಮಂ
ಪಗಲೆಲ್ಲಂ ಕರಪುಟಂಗಳಿಂ ಪೀರ್ದುದನಾ
ಗಗನಪಥಶ್ರಮದಿಂ ರವಿ
ಮಗುೞದಂತಾಯ್ತು ಮಿಸುಪ ಕೆಂಬಿಸಿಲುಗಳುಂ      ೪೯

ರವಿಮಂಡಲಂ ಪ್ರತೀಚೀ
ಯುವತೀಕರ್ಣಾವತಂಸರಕ್ಕೋತ್ಪಲದಂ
ತೆವೊಲಿರೆ ಚಿನ್ನೈದಿಲ್ಗೊಳ
ದಂತೆವೊಲಾಯ್ತು ಸಂಜೆಗೆಂಪಿನಿಂ ಗಗನತಳಂ          ೫೦

ಇನನಿನಿಯನೆನಿಪನಗಲಲು
ಮನಿತಳಂ ಪುಗಿಸಿ ಮುಚ್ಚಿ ಮಧುಕರನೊಳ್ ಪ
ದ್ಮಿನಿ ನೆರೆದಳೆಂದೊಡೇಂ ಕಾ
ಮಿನಿಯೊಲವಂ ನಚ್ಚುವವನೆ ಗಾವಿಲನಲ್ತೇ             ೫೧

ವ|| ತದನಂತರಂ ಕೃಷ್ಣಾಗರುಪಂಕಪತ್ರಲತೆಗಳಂತೆ ತಿಮಿರರೇಖೆಗಳ್ ನಿಮಿರೆಯುಂ ಪ್ರಾಸಾದಲಕ್ಷಿ ಯ ಕರ್ಣೋತ್ಪಲಂಗಳಂತೆ ವಾತಾಯನವಿವರಂಗಳೊಳ್ ಪಾರಾವತಂಗಳೆಸೆಯೆಯುಂ ಚಂಪಕದೊಳ್ಳಾರಂಗಳಂತೆ ದೀಪಿಕಾಸಹಸ್ರಂಗಳ್ ಮಣಿಬದ್ಧಭೂಮಿಭಾಗಂಗಳೊಳ್ ಮಾರ್ಪೊಳೆಯೆಯುಂ ರವಿವಿರಹಾರ್ತ ನಳಿನೀವಿನೋದನಾಗತ ಬಾಲಾತಪಂಗಳಂತೆ ದೀಪಿಕಾ ಲೋಕಂಗಳ್ ಭವನದೀರ್ಘಿಕೆಗಳೊಳ್ ಪ್ರಜ್ವಳಿಸೆಯುಂ ಯಾಮಿಕನಂತಾರೋಪಿತಚಾಪನಾಗಿ ಕುಸುಮಶರನಂತಪುರಮಂ ತೊಳಲೆಯುಂ ನವಪಲ್ಲವಂಗಳಂತೆ ಸರಾಗಂಗಳಾದ

ಸುಂದರವಾದ ಹಗಲಿನ ಬೆಳಕು ಪಶ್ಚಿಮದಿಕ್ಕೆಂಬ ಹೆಂಗಸಿನ ಕಡೆಗೆ ಸಾಗಿಹೋಗುತ್ತಿತ್ತು. ೪೮. ಆ ಸಮಯದಲ್ಲಿ ತಾವರೆಯ ಸುವಾಸನೆಯ ಮೇಲಿರುವ ಅತ್ಯಕವಾದ ಲೋಭದಿಂದ ಮುತ್ತಿಕೊಂಡಿದ್ದ ದುಂಬಿಗಳ ಸಾಲು ಅದು ಮುಚ್ಚಿಕೊಂಡ ಮೇಲೆ ಚೆಲ್ಲಾಪಿಲ್ಲಿಯಾಗಿ ಚಕ್ರವಾಕದಂಪತಿಗಳ ಕೊರಳನ್ನು ಸುತ್ತುಗಟ್ಟಿದುವು. ಆಗ ವಿರಹವ್ಯಥೆಯಿಂದ ಕಳವಳಗೊಂಡ ಅವು ಯಮಪಾಶದಿಂದ ಸೆಳೆಯಲ್ಪಟ್ಟಂತೆ ಒಂದಕ್ಕೊಂದು ಅಗಲಿಹೋದುವು. ಟಿ. ಸೂರ್ಯಾಸ್ತಮಯವಾದ ಕೂಡಲೆ ಚಕ್ರವಾಕಪಕ್ಷಿಗಳು ಪರಸ್ಪರ ಅಗಲಿ ವಿರಹವೇದನೆಯಿಂದ ಸಂತಾಪಗೊಳ್ಳುತ್ತವೆ. ೪೯. ಸೂರ್ಯನು ಹಗಲೆಲ್ಲ ಕಮಲದಲ್ಲಿರುವ ಹೂವಿನ ರಸವನ್ನು ತನ್ನ ಕಿರಣಗಳೆಂಬ ಕೈಬೊಗಸೆಯಿಂದ ತೆಗೆದು ತೆಗೆದು ಕುಡಿಯುತ್ತಿದ್ದನು. ಈಗ ದೀರ್ಘಪ್ರಯಾಣದ ಅಲಸಿಕೆಯಿಂದ ಹೊಟ್ಟ ಕೆಡಲು ಅವುಗಳನ್ನೆಲ್ಲಾ ಕಕ್ಕುತ್ತಿದ್ದಾನೆ ಎಂಬಂತೆ ಕೆಂಬಿಸಿಲು ಶೋಭಿಸುತ್ತಿತ್ತು. ೫೦. ಆಗ ಸೂರ್ಯಮಂಡಲವು, ಪಶ್ಚಿಮದಿಕ್ಕೆಂಬ ರಮಣಿಯು ಕಿವಿಯಲ್ಲಿ ಮುಡಿದುಕೊಂಡಿರುವ ಕೆಂದಾವರೆಯಂತೆ ಕಾಣುತ್ತಿತ್ತು. ಸಂಜೆಗೆಂಪಿನಿಂದ ಆಕಾಶಪ್ರದೇಶವು ಕೆಂದಾವರೆಯ ಕೊಳದಂತೆ ಕಾಣುತ್ತಿತ್ತು. ೫೧. ಪದ್ಮಿನಿ (ತಾವರೆ)ಗೆ ಪ್ರೀತಿಪಾತ್ರನಾದ ಸೂರ್ಯನು ಅಗಲಿಹೋದನು. ಕೂಡಲೆ ಅವಳು ಮಧುಕರ (ದುಂಬಿ)ನನ್ನು ತನ್ನೊಳಗೆ ಸೇರಿಸಿಕೊಂಡು ಮುಚ್ಚಿ ಅವನೊಂದಿಗೆ ಬೆರೆತುಕೊಂಡುಬಿಟ್ಟಳು. ಕಾಮಿನಿಯರ ಪ್ರೀತಿಯನ್ನು ನಂಬುವವನು ಶುದ್ಧ ಮೂಢನಲ್ಲವೆ? ಟಿ. ಸೂರ್ಯನು ಮುಳುಗಿದ ಕೂಡಲೆ ತಾವರೆ ಮುಚ್ಚಿಕೊಳ್ಳುತ್ತದೆ. ಆಗ ಬಂಡನ್ನು ಕುಡಿಯಲು ಬಂದಿದ್ದ ದುಂಬಿಯೂ ಒಳಗೆ ಸೇರಿಬಿಡುವುದುಂಟು. ಇಲ್ಲಿ ಪದ್ಮಿನಿಯನ್ನು ಕಾಮಿನಿಯೆಂದೂ ಸೂರ್ಯನನ್ನು ನಿಜವಾದ ನಲ್ಲನೆಂದೂ ದುಂಬಿಯನ್ನು ವಿಟನೆಂದೂ ಚಿತ್ರಿಸಿದ್ದಾನೆ. ವ|| ಬಳಿಕ ಕಾಲಾಗರು ದ್ರವದಿಂದ ಬರೆಯಲ್ಪಟ್ಟಿರುವ ಪತ್ರರಚನೆಯಂತಿರುವ ಅಂಧಕಾರ ಪರಂಪರೆಗಳು ಹರಡುತ್ತಿರಲಾಗಿ, ಅರಮನೆಯ ಗೃಹದೇವತೆಯಾದ ಲಕ್ಷಿ ಯ ಕಿವಿಯಲ್ಲಿರುವ ಕನ್ನೆ ದಿಲೆಗಳಂತೆ ಕಿಟಕಿ ಗೂಡುಗಳಲ್ಲಿ ಪಾರಿವಾಳಗಳು ಶೋಭಿಸುತ್ತಿರಲಾಗಿ, ಸಂಪಿಗೆ ಹೂವಿನ ಒಳ್ಳೆಯ ಮಾಲೆಯಂತೆ ಸಾವಿರಾರು ದೀಪಗಳು ರತ್ನದ ನೆಲೆಗಟ್ಟುಗಳಲ್ಲಿ ಪ್ರತಿಬಿಂಬಿಸಿರಲಾಗಿ, ಸೂರ್ಯನ ಅಗಲುವಿಕೆಯಿಂದ ವೇದನೆಯನ್ನು ಅನುಭವಿಸುವ ನಳಿನಿಯ (ತಾವರೆಯ) ಬೇಸರವನ್ನು ಕಳೆಯುವುದಕ್ಕಾಗಿ ಬಂದಿರುವ ಎಳೆಬಿಸಿಲುಗಳಂತೆ ದೀಪಗಳ ಬೆಳಕು ಅರಮನೆಯ ಸರೋವರಗಳಲ್ಲಿ ಬೆಳಗುತ್ತಿರಲಾಗಿ, ಕಾವಲುಗಾರನಂತೆ ಮನ್ಮಥನು ಹೆದೆಯೇರಿಸಿದ ಬಿಲ್ಲನ್ನು ಹಿಡಿದುಕೊಂಡು ರಾಣಿವಾಸಕ್ಕೆ ಹೋಗಿ ಸುತ್ತಾಡುತ್ತಿರಲಾಗಿ, ಹೊಸಚಿಗುರಿನಂತೆ “ಸರಾಂಗಂಗಳಾದ” (೧. ಕಾಮೋದ್ದೀಪಕವಾದ, ೨. ಕೆಂಪಿನಿಂದ

ದೂತೀವಚನಂಗಳ್ ಕಾಂತಾಜನಕ್ಕೆ ಕರ್ಣಪೂರಂಗಳಾಗೆಯುಂ ಆ ನಿಶಾಸಮಯದೊಳ್ ನೃಪರೂಪಚಂದ್ರಂ ಸಂಧ್ಯಾ ಸಮಯೋಚಿತ ನಿಯಮಮಂ ನಿರ್ವರ್ತಿಸಿ ಮಣಿಮಯಮಂಟಪದೊಳ್ ವೈಶಂಪಾಯನ ದ್ವಿತೀಯನೋಲಗದೊಳಿರೆ

ಗುಣನಿಯಂ ನೋಡಲ್ಕಾ
ಫಣೀಂದ್ರನುತ್ಕಂಠನಾಗೆ ತಲೆದೋರ್ಪ ಫಣಾ
ಮಣಿರುಚಿಗಳಂತೆ ಪೊಳೆದುವು
ಮಣಿಭೂಮಿಯೊಳೆಸೆವ ದೀಪಿಕಾಪ್ರಕರಂಗಳ್           ೫೨

ವ|| ಅಂತಾ ಸಮಯದೊಳ್

ಉದಿತೇಂದುಪ್ರಭೆ ರಾಹುವಿಂಗಗಿದು ಕಾಂತಾರೂಪಮಂ ತಾಳ್ದಿ ಬಂ
ದುದೊ ಮೇಣ್ ರಾಜಕುಲಾದೇವತೆಯೆ ಬಂದಳ್ ಮೂರ್ತಿಗೊಂಡೆಂಬಿನಂ
ಸುದತೀರತ್ನಮದೊರ್ವಳೆೞ್ತರುತಮಿರ್ದಳ್ ಸುತ್ತಲುಂ ನಾಡೆ ಪೊ
ಣ್ಮಿದ ಲಾವಣ್ಯದೆ ಕಾಂಚನಾಕರರಜೋವಿಸ್ತಾರಮಂ ಮಾೞ್ಪವೋಲ್       ೫೩

 

ಲಲಿತ ರಣನ್ಮಣಿನೂಪುರ
ವಿಲಸಿತ ಪದಯುಗಳದಿಂದೆ ಸುಂದರಿ ಕೂಜ
ತ್ಕಲಹಂಸಾಕುಲ ಕಮಲಾ
ಕಲಿತ ಸರೋಜಿನಿಯ ತೆಱದಿನೆೞ್ತರುತಿರ್ದಳ್                     ೫೪

ಲಲಿತಾಂಗಿ ಮೆಲ್ಲಮೆಲ್ಲನೆ
ನಳಿತೋಳಂ ಬೀಸೆ ಮಿಸುಗುವಸಿಯುಗುರ್ಗಳ ನು
ಣ್ಬೆಳಗು ನಿಮಿರ್ದೆಸೆದುವೊಗೆದ
ಗ್ಗಲಿಸುವ ಲಾವಣ್ಯರಸದ ಧಾರಾವಳಿವೋಲ್                 ೫೫

ಮಿಸುಗುವ ಬೆಳ್ದಿಂಗಳ್ ದೆಸೆ
ದೆಸೆಯೊಳ್ ಪಸರಿಸುವ ತೆಱದೆ ಹಾರಮರೀಚಿ
ಪ್ರಸರಂ ಬಳಸುತ್ತಿರೆ ಬ
ರ್ಪಸಿಯಳ್ ಪಾಲ್ಗಡಲೊಳೆಸೆವ ಸಿರಿಯಂ ಪೋಲ್ತಳ್        ೫೬

ಕೂಡಿರುವ) ನಲ್ಲನ ಕಡೆಯಿಂದ ಬಂದ ದೂತಿಯ ಮಾತುಗಳು ನಲ್ಲೆಯರಿಗೆ ಕರ್ಣಾಭರಣಗಳಂತೆ ಸೊಗಸನ್ನುಂಟುಮಾಡುತ್ತಿರಲಾಗಿ, ಆ ರಾತ್ರಿಯ ವೇಳೆಯಲ್ಲಿ ಚಂದ್ರಾವತಾರನಾದ ರಾಜಪುತ್ರನು ಸಂಧ್ಯಾಕಾಲಕ್ಕೆ ಉಚಿತವಾದ ನಿಯಮಗಳನ್ನು ಮುಗಿಸಿ ರತ್ನಮಂಟಪದಲ್ಲಿ ವೈಶಂಪಾಯನನ ಜೊತೆಯಲ್ಲಿ ಮಾತುಕತೆ ನಡೆಸುತ್ತಿರಲಾಗಿ, ೫೨. ಗುಣನಿಯಾದ ಈ ರಾಜಕುಮಾರನನ್ನು ನೋಡುವುದಕ್ಕಾಗಿ ಅತ್ಯಾಸೆಪಟ್ಟು ಆದಿಶೇಷನು ಪಾತಾಳಲೋಕದಿಂದ ಮೇಲಕ್ಕೆ ತಲೆನೀಡಲಾಗಿ ಅವನ ಸಾವಿರ ಹೆಡೆಗಳಲ್ಲಿರುವ ರತ್ನಗಳ ಕಾಂತಿಯಂತೆ ಮಣಿಮಯವಾದ ನೆಲೆಗಟ್ಟಿನಲ್ಲಿ ಪ್ರತಿಬಿಂಬಿಸಿರುವ ದೀಪಗಳು ಹೊಳೆಯುತ್ತಿದ್ದುವು. ವ|| ಆ ಸಮಯದಲ್ಲಿ ೫೩. ಬಾಲಚಂದ್ರನ ಕಳೆಯು ರಾಹುವಿಗೆ ಹೆದರಿಕೊಂಡು, ಸ್ತ್ರೀರೂಪವನ್ನು ತಾಳಿ ಬಂದಿರುವಂತೆಯೂ ಅರಮನೆಯ ಅದೇವತೆಯು ಮೂರ್ತಿಭವಿಸಿ ಬಂದಿರುವಂತೆಯೂ ಶೋಭಿಸುವ ಒಬ್ಬ ಶ್ರೇಷ್ಠ ತರುಣಿಯು ಅವನ ಸಮೀಪಕ್ಕೆ ಬರುತ್ತಿದ್ದಳು. ಸುತ್ತಲೂ ಹೊಮ್ಮುತ್ತಿರುವ ಅವಳ ಲಾವಣ್ಯದಿಂದ ಚಿನ್ನದ ಗಣಿಯ ಧೂಳಿ ಎಲ್ಲೆಲ್ಲೂ ಹರಡುತ್ತಿರುವಂತೆ ಕಾಣುತ್ತಿತ್ತು. ೫೪. ಇಂಪಾಗಿ ದನಿಮಾಡುತ್ತಿರುವ ರತ್ನಖಚಿತವಾದ ಎರಡು ಕಾಲ್ಗಡಗಗಳನ್ನು ಹಾಕಿಕೊಂಡು ಬರುತ್ತಿರುವ ಆ ಚೆಲುವೆಯು ಕೂಗುತ್ತಿರುವ ರಾಜಹಂಸಗಳಿಂದ ತುಂಬಿಕೊಂಡಿರುವ ತಾವರೆಗಳುಳ್ಳ ತಾವರೆಬಳ್ಳಿಯಂತೆ ಶೋಭಿಸುತ್ತಿದ್ದಳು. ೫೫. ಆ ಕೋಮಲಾಂಗಿಯು ಬರುತ್ತಿರುವಾಗ ಅವಳ ಕೋಮಲವಾದ ತೋಳುಗಳು ಮೆಲ್ಲಮೆಲ್ಲನೆ ಹಿಂದಕ್ಕೂ ಮುಂದಕ್ಕೂ ಚಲಿಸುತ್ತಿದ್ದುವು. ಆಗ ತೆಳುವಾದ ಉಗುರುಗಳು ತಂಬೆಳಗು ಹರಡುತ್ತಿತ್ತು. ಅದು ಹೆಚ್ಚುತ್ತಿರುವ ಸೌಂದರ್ಯ ರಸದ ಧಾರೆಗಳ ಪರಂಪರೆಯಂತೆ ಶೋಭಿಸುತ್ತಿತ್ತು. ೫೬. ಪ್ರಕಾಶಿಸುವ ಬೆಳ್ದಿಂಗಳು ದಿಕ್ಕುದಿಕ್ಕಿಗೂ ಹರಡುವ ರೀತಿಯಲ್ಲಿ ಮುತ್ತಿನಸರದ ಕಾಂತಿಸಮೂಹವು ಅವಳ ಸುತ್ತಲೂ ವ್ಯಾಪಿಸಿರಲು ಬರುತ್ತಿರುವ ಆ ಸುಂದರಿಯು ಕ್ಷೀರಸಮುದ್ರದಲ್ಲಿ ಶೋಭಿಸುವ ಲಕ್ಷಿ ಯಂತೆ

ಗಿರಿರಾಜಂ ಗೌರಿಯನಾ
ಹರಂಗೆ ಶುಶ್ರೂಷೆಗೆಯಿಸಲೊಡಗೊಂಡೊಯ್ವಂ
ತಿರೆ ಸತಿಯ ಪೆಱಗೆ ಕಿಱದಂ
ತರದೊಳ್ ಕೈಲಾಸನೆಂಬ ಕಂಚುಕಿ ಬಂದಂ               ೫೭

ವ|| ಅಂತಾ ಕಾಂತೆವೆರಸು ಕಂಚುಕಿ ಬಂದು ಪೊಡವಟ್ಟು ಕೈಗಳಂ ಮುಗಿದು ದೇವಾ ಬಿನ್ನಪಮೆಂದಿಂತೆಂದಂ

ಮುನಿಸಿಂ ತ್ವಜ್ಜನಕಂ ಕುಳೂತಪುರಮಂ ನಿರ್ಮೂಲಿಪಂದಾ ಕುಳೂ
ತನರೇಂದ್ರಂ ಭಯದಿಂ ಕಳತ್ರಸಹಿತಂ ಪೋಗಲ್ ಕುಳೂತೇಶನಂ
ದನೆಯಂ ಮತ್ತಮನೇಕರಂ ಸೆಗೆ ತಂದಿಟ್ಟಲ್ಲಿ ತದ್ರಾಜನಂ
ದನೆಯಂ ಕನ್ನೆಯನೞ್ಕಱಂ ನಡಪಿದಳ್ ಮಾದೇವಿ ಕಾರುಣ್ಯದಿಂ            ೫೮

ವ|| ಅಂತು ನಡಪುತ್ತಮಿರ್ದು

ಪಿರಿದುಂ ಮನ್ನಿಸಿ ನಡಪು
ತ್ತಿರೆ ಪರಮರಹಸ್ಯಭೂಮಿಯೆನಿಸಿದಳಿಂತೀ
ಪರಿಚಾರಿಕೆ ತನಗೆಂದಾ
ದರದಿಂ ನಿಜಜನನಿ ಬೆಸಸಿಯಟ್ಟಿದಳೀಗಳ್                  ೫೯

ಧರೆಯೊಳ್ ನೆಗೞ್ದ ಕುಳೂತೇ
ಶ್ವರನ ಮಗಳ್ ಪತ್ರಲೇಖೆಯೆಂಬುದು ಪೆಸರಿಂ
ಪರಿಜನ ಸಾಮಾನ್ಯದೆ ನೀಂ
ಪರೀಕ್ಷಿಸಲ್ವೇಡ ಸತಿಯನೀ ಗುಣವತಿಯಂ                ೬೦

ವ|| ಎಂದು ಪೊಡವಡಿಸೆ ಪತ್ರಲೇಖೆಯ ವಿಚಿತ್ರರೂಪನಾ ಕ್ಷತ್ರಿಯಪುತ್ರಂ ವಿಸ್ಮಯಾ ಕ್ಷಿಪ್ತಚಿತ್ತನಾಗಿ ನೋಡುತಿರ್ದು ದೇವಿಯರ್ ಬೆಸಸಿದಂತೆ ನೆಗೞ್ವೆನೆಂದು ಕಂಚುಕಿಯಂ ಕೞಪಲಿತ್ತ ಪತ್ರಲೇಖೆಯಭಿನವ ಸಮುಪಜಾತ ಸೇವಾರಸದಿನೊಂದು ಪೊತ್ತಗಲದೋಲಗಿಸುತ್ತಿರ ಲಾಕೆಯ ಶೀಲಾಚಾರವಿನಯಮಂ ಕಂಡು ತಾಂಬೂಲಕರಂಕವಾಹಿನಿಯಂ ಮಾಡಿ ನೃಪರೂಪಚಂದ್ರಂ ನಿಜಜನನೀಜನಕರನೋಲಗಿಸುತ್ತಿರ್ದ ನನ್ನೆಗಮತ್ತಂ

ಕಾಣುತ್ತಿದ್ದಳು. ೫೭. ಹಿಮವಂತನು ತನ್ನ ಮಗಳಾದ ಗೌರಿಯನ್ನು ಪರಮೇಶ್ವರನ ಸೇವೆಗಾಗಿ ಕರೆದುಕೊಂಡು ಬರುತ್ತಿರುವಂತೆ ಆ ಹುಡುಗಿಯ ಹಿಂದೆ ಸ್ವಲ್ಪ ದೂರದಲ್ಲಿ ಕೈಲಾಸನೆಂಬ ಕಂಚುಕಿ ಬರುತ್ತಿದ್ದನು. ವ|| ಹೀಗೆ ಆ ಕನ್ನಿಕೆಯೊಂದಿಗೆ ಕಂಚುಕಿಯು ಬಂದು ನಮಸ್ಕರಿಸಿ ಕೈಮುಗಿದು “ಬುದ್ಧೀ! ಅರಿಕೆ” ಎಂದು ಹೀಗೆ ಹೇಳಿದನು. ೫೮. “ನಿಮ್ಮ ತಂದೆಯವರು ಹಿಂದೆ ಕುಳೂತದೇಶದ ರಾಜನು ಮಾಡಿದ ಅಪರಾಧಕ್ಕಾಗಿ ಅವನ ಮೇಲೆ ಕೋಪಗೊಂಡು ಅವನ ರಾಜಧಾನಿಯನ್ನು ಜಯಿಸಬೇಕೆಂದು ದಂಡೆತ್ತಿಹೋಗಿ ಅವನನ್ನು ಸೋಲಿಸಿದರು. ಆಗ ಅವನು ಭಯದಿಂದ ರಾಣೀವಾಸದ ಸಮೇತ ಓಡಿಹೋದನು. ಆಗ ನಮ್ಮವರು ಅವನ ಮಗಳನ್ನೂ ಮತ್ತೆ ಕೆಲವರೊಂದಿಗೆ ಸೆರೆಹಿಡಿದುಕೊಂಡು ಬಂದರು. ಆಗ ನಮ್ಮ ಮಹಾರಾಣಿಯವರು ಆ ರಾಜನ ಮಗಳನ್ನು ನೋಡಿ ಅಂತಪುರದಲ್ಲಿಟ್ಟುಕೊಂಡು ಬಹಳ ಪ್ರೀತಿಯಿಂದ ಸಾಕುತ್ತಿದ್ದಾರೆ. ವ|| ಹಾಗೆ ಕಾಪಾಡುತ್ತಿದ್ದು ೫೯. ಬಹಳ ಮಮತೆಯಿಂದ ಸಾಕುತ್ತಿದ್ದು ಈಗ ನಿಮಗೆ ಇವಳು ಬಹಳ ನಂಬಿಕೆಗೆ ಪಾತ್ರಳಾದ ಪರಿಚಾರಿಕೆಯಾಗುತ್ತಾಳೆಂದು ಆದರದಿಂದ ನಿಮ್ಮ ಹತ್ತಿರಕ್ಕೆ ಕಳುಹಿಸಿಕೊಟ್ಟಿದ್ದಾರೆ. ೬೦. ಇವಳು ಭೂಮಿಯಲ್ಲಿ ಹೆಸರುವಾಸಿಯಾದ ಕುಳೂತೇಶ್ವರನ ಮಗಳು. ಇವಳ ಹೆಸರು ಪತ್ರಲೇಖೆ. ಬಹಳ ಶೀಲವಂತೆ. ಇವಳನ್ನು ನಾಡಾಡಿ ಪರಿಚಾರಿಕೆಯಂತೆ ನೋಡಿಕೊಳ್ಳಬೇಡ.” ವ|| ಹೀಗೆ ಹೇಳಿ ನಮಸ್ಕಾರ ಮಾಡಲಾಗಿ ಪತ್ರಲೇಖೆಯ ಬೆರಗನ್ನುಂಟುಮಾಡುವ ಸೌಂದರ್ಯವನ್ನು ಆ ಕ್ಷತ್ರಿಯಕುಮಾರನು ಆಶ್ಚರ್ಯದಿಂದ ಆಕರ್ಷಿಸಲ್ಪಟ್ಟ ಮನಸ್ಸುಳ್ಳವನಾಗಿ ನೋಡುತ್ತಿದ್ದು “ಮಹಾರಾಣಿಯವರು ಅಪ್ಪಣೆ ಮಾಡಿದಂತೆಯೇ ನಡೆದುಕೊಳ್ಳುತ್ತೇನೆಂದು” ಹೇಳಿ ಕಂಚುಕಿಯನ್ನು ಕಳುಹಿಸಿದನು. ಈ ಕಡೆ ಪತ್ರಲೇಖೆಯು ಹೊಸದಾಗಿ ಒದಗಿದ ಈ ಸೇವೆಯನ್ನು ಬಹಳ ಒಲುಮೆಯಿಂದ ಕೈಗೊಂಡು ಒಂದು ಕ್ಷಣವೂ ರಾಜಕುಮಾರನನ್ನು ಬಿಟ್ಟಿರದೆ ಓಲೈಸುತ್ತಿದ್ದಳು, ರಾಜಕುಮಾರನು ಆಕೆಯ ಗುಣ, ಆಚಾರ, ವಿನಯವೇ ಮೊದಲಾದ ಸದ್ಗುಣಗಳಿಗೆ ಮಾರುಹೋಗಿ ಅವಳನ್ನು ತನ್ನ ವೀಳೆಯದ ಸಂಪುಟವನ್ನು ಹಿಡಿಯುವ ಊಳಿದವಳನ್ನಾಗಿ ಮಾಡಿಕೊಂಡು ತನ್ನ ಮಾತಾಪಿತೃಗಳ ಸೇವೆಯಲ್ಲಿ ನಿರತನಾಗಿದ್ದನು.