ಅಮೃತಮಯೂಖ ನಿರ್ಮಲ ನಿಶೀಥಿನಿಯೊಳ್ ಲಲಿತಾಂಗಮಿಂದುಕಾಂ
ತಮಯಮೆನಲ್ಕೆ ಬಿಂದುವಿಡುತಿರ್ಪುದು ಸುಯ್ಯೆಲರಂಬುರಾಶಿ ವಾ
ರಿಮಯಮೆನಲ್ಕೆ ಪೆರ್ಚುವುದಪಾರಮನೋರಥಮುಂ ರಥಾಂಗಯು
ಗ್ಮಮಯಮೆನಲ್ಕೆ ಕೂಡದಣಮಾ ವಿಕಚೋತ್ಪಲಪತ್ರನೇತ್ರೆಯಾ             ೪೭

ಪೊಳೆವ ಶಶಿಕಾಂತದರ್ಪಣ
ನಿಳಯದೊಳಲ್ಲಲ್ಲಿ ಪೊಳೆವ ತನ್ನಯ ನೆೞಲಂ
ನಳಿನಾಕ್ಷಿ ಕಾಣುತಂ ಮನ
ದೊಳೆ ಪಱವಱಯಾದೆನೆಂದು ಚಿಂತಿಸುತಿರ್ದಳ್        ೪೮

ಅಲರ್ದಲರ್ವಾಸುಗಳೊಳ್ ಪರಿ
ಮಳಕ್ಕೆ ಪರಿತಂದು ಮಸುಱುವಳಿಕುಲದಿಂದಾ
ಕುಲತೆ ಪಿರಿದಾಗೆ ಮದನಾ
ನಲನಳುರಲ್ ಕಾಂತೆ ಪೊತ್ತಿ ಪೊಗೆವಂತಿರ್ದಳ್         ೪೯

ವ|| ಮತ್ತಮೇನೆಂದಱಯೆನದೊಂದು ಮುಗ್ಧತೆಯನಪ್ಪುಕೆಯ್ದಂತೆ ವಿಲಾಸಮಂ ತಾಳ್ದಿದಂತೆ ಮರುಳ್ತನಂ ತೊಡರ್ದಂತೆ ನೆಗೞುತ್ತಮಿರ್ಪಳದೆಂತೆನೆ

ಲಲನಾಮಂಜೀರನಾದಕ್ಕುಲಿಗುಮೆನುತೆ ಧಾರಾಗೃಹೋತ್ಕೀಲಿತೇಂದೂ
ಪಲ ಹಂಸಾಸ್ಯಂಗಳಂ ಮುದ್ರಿಸುವಳಿರುಗಳಲ್ದಪ್ಪುದೆಂದಬ್ಜಸೂತ್ರಾ
ವಳಿಯಿಂದಾಲೇಖ್ಯಚಕ್ರದ್ವಯದ ಚರಣಮಂ ಕಟ್ಟುವಳ್ ಕರ್ಣಪೂರೋ
ತ್ಪಲದಿಂ ಚಿಂತಾರತಕ್ಕಾಟಿಸಿ ಮಣಿಮಯದೀಪಂಗಳಂ ನಂದೆ ಪೊಯ್ವಳ್            ೫೦

ವ|| ಮತ್ತಮಾಕೆ ಜಲಕಣಿಕೆಯಂತೆ ನಳಿನೀದಳಂಗಳ ಮೇಲಿರ್ದು ನಡುಗುವಳ್ ನಳಿನಿಯಂತೆ ಶೀತಕರಸ್ಪರ್ಶನದಿಂ ಕೊರಗುವಳ್ ಚಂದ್ರಮೂರ್ತಿಯಂತೆ ಕಮಲನಿಕರಸ್ಖಲಿತಪಾದೆಯಾಗಿ ತೊೞುಲುತ್ತಮಿರುಳಂ ಕೞಪುವಳ್ ಕುಮುದಿನಿಯಂತೆ ತಿಳಿಗೊಳಂಗಳೊಳ್ ಮೂರ್ಛೆವೋಗಿ ಪಗಲಂ ಕೞಪುವಳ್ ಮಲಯನದಿಯಂತೆ ಚಂದನಪಲ್ಲವಕಲಿತ ಶಿಲಾತಲಂಗಳೊಳ್ ಮೆಯ್ಯನೀಡಾಡುವಳ್ ಕಂದಳಿಕೆಯಂತೆ ಕುಂದಕಳಿಯಂತೆ  ಶಿಶಿರಸಂರ್ಪಕ್ಕೆ ಕಂದಿ ಕುಂದು ವಳಂತುಮಲ್ಲದೆಯುಂ

ಹಂಸ ಮತ್ತು ಚಕ್ರವಾಕಪಕ್ಷಿಗಳ ಶಬ್ದಕ್ಕೆ ಅಂಜುತ್ತಿದ್ದಳು. ಮತ್ತೊಮ್ಮೆ ಸುಂದರವಾದ ಉದ್ಯಾನವನಕ್ಕೆ ಬಂದು ವಿರಹ ಸಂತಾಪದ ಶೈತ್ಯೋಪಚಾರಕ್ಕಾಗಿ ಇವಳು ಇಲ್ಲಿರುವ ಹೂವುಗಳೆಲ್ಲವನ್ನೂ ಕೊಯ್ದು ಹಾಳುಮಾಡಿದಳೆಂದು ಕೋಪಗೊಂಡಂತೆ ಮೊರೆಯುತ್ತಿರುವ ದುಂಬಿಗಳನ್ನು ನೋಡಿ ಬಹಳವಾಗಿ ತಳಮಳಗೊಳ್ಳುತ್ತಾಳೆ. ಮತ್ತೊಮ್ಮೆ ಮನೆಯ ಅಂಗಳದಲ್ಲಿರುವ ಮಾವಿನ ಮರದ ಹತ್ತಿರಕ್ಕೆ ಬಂದುತನ್ನ ಹಾಡಿನ ಇಂಪಾದ ಧ್ವನಿಯಿಂದ ನಮ್ಮ ಧ್ವನಿಯನ್ನು ಕೀಳುಮಾಡಿದ್ದಾಳೆಂದು ಕೋಪದಿಂದ ಬೆದರಿಸಿ ಗರ್ಜಿಸುವಂತಿರುವ ಕೋಕಿಲೆಗಳ ಕೂಗಿಗೆ ಹೆದರುತ್ತಾಳೆ. ಹೀಗೆ ಹಲವು ಬಗೆಯ ಕಾಮವಿಕಾರದ ಚೇಷ್ಟೆಗಳ ಆಯಾಸದಿಂದಲೆ ಹಗಲನ್ನು ಕಳೆಯುವಳು! ಅಗಲ್ಲದೆ,

೪೭. ಚಂದ್ರನ ಬೆಳದಿಂಗಳಿಂದ ಶುಭ್ರವಾದ ರಾತ್ರಿಯಲ್ಲಿ ಅರಳಿದ ಕನ್ನೆ ದಿಲೆಯ ಎಸಳಿನಂತೆ ಕಣ್ಣುಳ್ಳ ಕಾದಂಬರಿಯ ಕೋಮಲವಾದ ಶರೀರವುಚಂದ್ರಕಾಂತಶಿಲೆಯಿಂದ ಮಾಡಲ್ಪಟ್ಟಂತೆ ನೀರನ್ನು ಹನಿಸುತ್ತದೆ, (ಬೆವರಿರುವುದರಿಂದ) ನಿಟ್ಟುಸಿರು ಸಮುದ್ರದ ನೀರೋ ಎಂಬಂತೆ ಹೆಚ್ಚುತ್ತದೆ. ಅವಳ ದೊಡ್ಡ ಮನೋರಥವು ಚಕ್ರವಾಕದಂಪತಿಗಳೋ ಎಂಬಂತೆ ಕೂಡುವುದಿಲ್ಲ. (ಆಶೆಗೆ ಭಂಗಬರುತ್ತದೆ)

೪೮. ಆ ಕಾದಂಬರಿಯು ಕನ್ನಡಿಯಂತೆ ಹೊಳೆಯುತ್ತಿರುವ ಚಂದ್ರಕಾಂತಮಯವಾದ ಗೋಡೆಗಳಲ್ಲಿ ಅಲ್ಲಲ್ಲಿ ಮೂಡಿರುವ ತನ್ನ ಪ್ರತಿಬಿಂಬವನ್ನು ನೋಡಿ ತಾನು ಒಡೆದು ಚೂರು ಚೂರು ಆಗಿಬಿಟ್ಟೆನೋ ಎಂದು ಆಲೋಚಿಸುತ್ತಾಳೆ! ೪೯. ಅವಳು ಅರಳಿರುವ ಹೂವಿನ ಹಾಸಿಗೆಯಲ್ಲಿ ಮಲಗಿರುವಾಗ ಸುವಾಸನೆಗಾಗಿ ಬಂದು ಮುತ್ತುತ್ತಿರುವ ದುಂಬಿಗಳ ಗುಂಪಿನಿಂದ ಆವರಿಸಲ್ಪಟ್ಟಿದ್ದಳು. ಇದರಿಂದ ಅವಳ ಕಾಮಾಗ್ನಿಯು ಹೆಚ್ಚಾಗಿ ಹತ್ತಿಕೊಂಡು ಉರಿದು ಹೊಗೆಯಾಡುತ್ತಿರುವಂತೆ ಕಾಣುತ್ತಿತ್ತು. ವ|| ಮತ್ತು ಏಕೋ ತಿಳಿಯದು, ಅವಳು ಮೊದ್ದುತನವನ್ನು ಪಡೆದವಳಂತೆಯೂ ಲೀಲೆಯಾಡುವವಳಂತೆಯೂ ಹುಚ್ಚು ಹಿಡಿದವಳಂತೆಯೂ ತೋರ್ಪಡಿಸಿಕೊಳ್ಳುತ್ತಾಳೆ. ಹೇಗೆಂದರೆ ೫೦. ಹೆಂಗಸರ ಕಾಲುಗಡಗದ ಧ್ವನಿಯನ್ನು ಕೇಳಿ ತಾವೂ ಕೂಗುತ್ತವೆ ಎಂದು ನೀರುಮನೆಯಲ್ಲಿ ನಿರ್ಮಿಸಿರುವ ಚಂದ್ರಕಾಂತ ಶಿಲಾಮಯವಾದ ಹಂಸಗಳ ಬಾಯನ್ನು ಮುಚ್ಚುತ್ತಾಳೆ. ರಾತ್ರಿ ಅಗಲಿ ಬಿಡುತ್ತವೆ ಎಂದು ತಾವರೆದಂಟಿನ ದಾರಗಳಿಂದ ಚಿತ್ರದಲ್ಲಿ ಬರೆದಿರುವ ಚಕ್ರವಾಕದಂಪತಿಗಳ ಕಾಲುಗಳನ್ನು ಕಟ್ಟುತ್ತಾಳೆ. ಮತ್ತು ಮಾನಸಿಕ ಸಂಭೋಗವನ್ನು ಬಯಸಿ ರತ್ನದೀಪಗಳನ್ನು ಆರಿಸುವುದಕ್ಕಾಗಿ ಹೊಡೆಯುತ್ತಾಳೆ. ವ|| ಮತ್ತು ಅವಳು ನೀರಿನ ಹನಿಗಳಂತೆ ತಾವರೆಯೆಲೆಗಳ ಮೇಲೆ ಮಲಗಿ ನಡುಗುತ್ತಾಳೆ. ತಾವರೆಬಳ್ಳಿಯಂತೆ ಚಂದ್ರಕಿರಣಗಳ ಸಂಪರ್ಕದಿಂದ ಬಾಡುತ್ತಾಳೆ. ಚಂದ್ರನಂತೆ ಕಮಲಗಳ ಗುಂಪಿನಲ್ಲಿ ಎಡವುತ್ತಿರುವ ಕಾಲು (ಕಿರಣ)ಳ್ಳವಳಾಗಿ ತೊಳಲುತ್ತ ರಾತ್ರಿಯನ್ನು ಕಳೆಯುತ್ತಾಳೆ.

ಯುವತೀರತ್ನಕ್ಕೆ ನಿನ್ನಾಕೃತಿಯೊಳೆ ಸತತಂ ಚಿತ್ರವಿದ್ಯಾವಿಲಾಸೈ
ಕವಿನೋದಂ ನಿನ್ನ ನಾಮಾಕ್ಷರಮೆ ವಿರಹದಾಹಪ್ರತೀಕಾರಮಂ ಮಾ
ಡುವುಪಾಯಂ ನಿನ್ನ ಸಂಬಂಧಮೆ ಸಕಲ ರಹಸ್ಯಂಗಳುಂ ನಿನ್ನ ವೃತ್ತಾಂ
ತವೆ ಸರ್ವಪ್ರಶ್ನಮುಂ ನಿನ್ನಯ ಪೆಸರೆ ಸಖೀಸಂಕುಲಕ್ಕೆಲ್ಲಮೀಗಳ್         ೫೧

ವ|| ಎಂದಿವು ಮೊದಲಾಗಿ ಸೋನ್ಮಾದ ಸಪ್ರಸಾದ ಸನಿರ್ವೇದ ಸೋಪಾಲಂಭ ಸಾವಷ್ಟಂಭ ಸಾಭ್ಯುಪಗಮ ಸಸಂಭ್ರಮ ಸಪರಿಹಾಸ ಸರೋಷ ಸನಿರ್ವಿಶೇಷ ಸಾಭ್ಯರ್ಥನ ಸಾನುರಾಗ ಸಾತ್ಮಾರ್ಪಣಂಗಳೆನಿಸಿ ಸರಸಂಗಳಾಗಿಯುಮತಿಶೋಷಣಹೇತುಗಳುಂ ಕೋಮಲಂಗಳಾಗಿ ಯುಮತಿಕಠೋರಂಗಳುಂ ಲಲಿತಂಗಳಾಗಿಯುಂ ಪ್ರೌಢಂಗಳುಂ ಮಧುರಂಗಳಾಗಿಯು ದುಶ್ರವಂಗಳುಪ್ಪ ಕಾದಂಬರೀಸಂಬಂಧವಚನಂಗಳಂ ಪತ್ರಲೇಖೆ ಬಿನ್ನವಿಸುತ್ತಮಿರೆ ಸಾಲ್ಗುಮಿಂ ಕೇಳಲಾನೆಂದು ನಿಸರ್ಗರಪ್ರಕೃತಿಯಾಗಿಯುಂ ಅತಿಪರ್ಯಾಕುಲನಾದ ರಾಜಪುತ್ರನಂ ಪತ್ರಲೇಖೆಯಿಂತೆಂದಳ್
ಇನಿವಿರಿದವಸ್ಥೆಗಳ ನೀ
ನನಿಮಿತ್ತಂ ಸೃಜಿಸಿಯುಂ ನಿಜಂ ನಿಷ್ಕರುಣಾ
ತ್ಮನೆಯಾಗಿ ಚಿತ್ರರಥನಂ
ದನೆಯಂ ಪೇೞಂತು ದೇವ ಕಡೆಗಣಿಸುವುದೇ            ೫೨

ವ|| ಎಂದು ಪತ್ರಲೇಖೆ ಬಿನ್ನಪಂಗೆಯ್ಯೆ ಮದನಶರಶಲಾಕಾಕೀಲಿತಾಂತರಂಗನಾಗಿ

ಮನದೞಲಿಂ ಪೊಣ್ಮವ ಕ
ಣ್ಬದುಱುಗಲನೆಮೆಯೊಳಾಂತು ನಿಡುಸುಯ್ಗಧರಂ
ತನಿಗೆತ್ತಲ್ ಮನಮಿಕ್ಕೊ
ಯ್ಯನೆ ನುಡಿದಂ ಪತ್ರಲೇಖೆಗವನಿಪತನಯಂ             ೫೩

ವ|| ಅದೆಂತೆನೆ

ಎನಗನುರೂಪಲೀಲೆ ದೊರೆಕೊಂಡಿರದೆಂದಿನಿತುಂ ಮನೋರಥಂ
ಜನಿಯಿಸದೆಂದು ದೇವಿಯರ ಗೆಯ್ತಮದೆಲ್ಲಮೆ ಸಾಜಮೆಂದು ಕೆ
ಮ್ಮನೆ ಪಲವುಂ ವಿಕಲ್ಪಶತದಿಂದಮೆ ಸಂದೆಯಮಾಯ್ತು ದಿವ್ಯಕಾ
ಮಿನಿಯರದೃಷ್ಟಪೂರ್ವತೆಯಿನಿನ್ನೆನಗೇವೆನೊ ಪೇೞು ತಳೋದರೀ         ೫೪

ಕನ್ಮೈದಿಲೆಯ ಬಳ್ಳಿಯಂತೆ ನಿರ್ಮಲವಾದ ಕೊಳಗಳೆಡೆಯಲ್ಲಿ ಮೈಮರೆತು ಹಗಲನ್ನು ಕಳೆಯುತ್ತಾಳೆ. ಮಲಯಪರ್ವತದ ನದಿಯಂತೆ ಗಂಧದ ಮರದ ಚಿಗುರುಗಳಿಂದ ಕೂಡಿಕೊಂಡಿರುವ ಕಲ್ಲುಗಳ ಮೇಲೆ ದೇಹವನ್ನು ಈಡಾಡುತ್ತಾಳೆ. (ಮಲಯಪರ್ವತದ ನದಿಯು ಅಂತಹ ಕಲ್ಲುಗಳ ಮೇಲೆ ಹರಿಯುತ್ತದೆ). ಬಾಳೆಯಂತೆ ಶೈತ್ಯೋಪಚಾರಕ್ಕೆ ಕಂದಿ ಬಾಡುತ್ತಾಳೆ. ಅದಲ್ಲದೆ, ೫೧. ಆ ತರುಣಿಗೆ ಯಾವಾಗಲೂ ನಿನ್ನ ಆಕಾರವನ್ನು ಚಿತ್ರಿಸುವುದರಲ್ಲೇ ಚಿತ್ರಕಲಾಭ್ಯಾಸವು ವಿನಿಯೋಗವಾಗುತ್ತಿದೆ. ನಿನ್ನ ನಾಮಾಕ್ಷರವೇ ವಿರಹಸಂತಾಪಕ್ಕೆ ಪರಿಹಾರೋಪಾಯವಾಗಿದೆ. ಗೌಷ್ಯವ್ಯವಹಾರಗಳೆಲ್ಲ ನಿನಗೇ ಸಂಬಂಧಪಟ್ಟಿವೆ, ಪ್ರಶ್ನೆಗಳೆಲ್ಲವೂ ನಿನ್ನ ಸಮಾಚಾರವನ್ನು ತಿಳಿದುಕೊಳ್ಳುವುದಕ್ಕಾಗಿಯೇ ಮಾಡಲ್ಪಡುತ್ತವೆ. ಅವಳ ಗೆಳತಿಯರ ಬಾಯಲ್ಲೆಲ್ಲ ನಿನ್ನ ಹೆಸರೊಂದೆ ನೆಲಸಿಬಿಟ್ಟಿದೆ. ವ|| ಇವೇ ಮೊದಲಾದ ಮನೋವಿಕಾರದಿಂದ ಕೂಡಿಕೊಂಡಿರುವ, ಅನುಗ್ರಹಪೂರ್ವಕವಾದ ಖೇದದಿಂದ ಕೂಡಿರುವ, ನಿಂದಾಪೂರ್ವಕವಾದ ಗರ್ವದಿಂದ ಕೂಡಿರುವ, ಅಂಗೀಕಾರದಿಂದಲೂ ಸಡಗರದಿಂದಲೂ ಹಾಸ್ಯದಿಂದಲೂ ಕೋಪದಿಂದಲೂ ವಿಶೇಷರೀತಿಯ ಪ್ರಾರ್ಥನೆಯಿಂದಲೂ ಪ್ರೀತೀಯಿಂದಲೂ ಆತ್ಮಾರ್ಪಣೆಯಿಂದಲೂ ಕೂಡಿಕೊಂಡಿರುವ ಮತ್ತು ಸರಸವಾಗಿದ್ದರೂ (೧. ಒದ್ದೆಯಾಗಿದ್ದರೂ ೨. ಶೃಂಗಾರರಸಮಯವಾಗಿದ್ದರೂ), ಶೋಷಹೇತುನಾಗಿರುವ (೧. ಒಣಗಿಸಲು ಕಾರಣವಾದ, ೨. ಮನಸ್ಸಿಗೆ ಕೊರತೆಯನ್ನುಂಟು ಮಾಡುವ), ಮೃದುವಾಗಿದ್ದರೂ ಕಠೋರವಾಗಿರುವ, ಲಲಿತವಾಗಿದ್ದರೂ ಪ್ರೌಢವಾಗಿರುವ, ಇಂಪಾಗಿದ್ದರೂ ಕೇಳಲು ಕಷ್ಟಕರವಾಗಿರುವ ಕಾದಂಬರಿಗೆ ಸಂಬಂಧಪಟ್ಟ ಮಾತುಗಳನ್ನು ಪತ್ರಲೇಖೆಯು ಅರಿಕೆ ಮಾಡಿದಳು. ಚಂದ್ರಾಪೀಡನು ‘ಸಾಕು ಕೇಳಲಾರೆ’ ಎಂದು ಹೇಳಿ ಸ್ವತ ಧೈರ್ಯವಂತನಾದರೂ ಬಹಳ ಕಳವಳಗೊಂಡನು. ಆ ರಾಜಪುತ್ರನನ್ನು ನೋಡಿ ಪತ್ರಲೇಖೆಯು ಹೀಗೆಂದಳು. ೫೨. “ಯುವರಾಜ, ಅವಳಿಗೆ ಇಷ್ಟು ಅವಸ್ಥೆಗಳನ್ನು ನಿಷ್ಕಾರಣವಾಗಿ ಉಂಟುಮಾಡಿರುವ ನೀನು ನಿಜವಾಗಿಯೂ ಕಠಿನಚಿತ್ತನೇ ಸರಿ! ಕಾದಂಬರಿಯನ್ನು ನೀನು ಹೀಗೆ ಉದಾಸೀನ ಮಾಡಬಹುದೆ?” ವ|| ಎಂದು ಪತ್ರಲೇಖೆಯು ಅರಿಕೆ ಮಾಡಿದಳು. ಚಂದ್ರಾಪೀಡನು ಮನ್ಮಥನ ಬಾಣಗಳು ಏe