ವ|| ಅನಂತರಂ ಪುನಪ್ರಣಾಮಮಂ ಮಾಡಿ ಪೊಱಮಟ್ಟು ಬಂದು ಸುತವಿಯೋಗ ಚಿಂತಾಕ್ರಾಂತರಪ್ಪ ಶುಕನಾಸನುಮಂ ಮನೋರಮೆಯುಮನು ನುಡಿದು ಬೀೞ್ಕೊಂಡು ಬಂದು ವೈಶಂಪಾಯನದರ್ಶನತಾತ್ಪರ್ಯದೊಳಂ ಕಾದಂಬರೀಸಮಾಗಮೌತ್ಸುಕ್ಯ ದೊಳಮಕೃತಪರಿಲಂಬನಾಗಿ ಭವನಾಂಗಣದೊಳ್ ಸಾರ್ಚಿದಿಂದ್ರಾಯುಧಮಂ ಚಂದ್ರಾಪೀಡನೇಱ ದಿಗಂತರಂಗಳೆಲ್ಲಮನಂತಹ ಯಹೇಷಾರವಂಗಳಿಂ ತೆಕ್ಕನೆ ತೀವೆ ಭುವನತಳಮೆಲ್ಲಂ ತುರಂಗಮಯಮಾಗೆ ಪೊಱಮಟ್ಟು ಶಿಪ್ರಾನದಿಯಂ ದಾಂಟಿ ಯೋಜನತ್ರಯದನಿತಂ ಪೋಗಿ ತೃಣಜಲಸಮೃದ್ಧಮಾದೆಡೆಯೊಳ್ ಬೀಡುಗೆಯ್ದು ತನ್ನೊಳಿಂತೆಂದಂ

ಎನಗೆನಸುಂ ಲಜ್ಜಿಸಿ ಪೋ
ಪನ ಬೆನ್ನೊಳ್ ಪೋಗಿ ತೆಗೆದು ತಳ್ಕೈಸುತವಾ
ತನದೊಂದು ಲಜ್ಜೆಯಂ ಕಳೆ
ದನುಭವಿಪೆಂ ಮತ್ಸುಹೃತ್ಸಮಾಗಮಸುಖಮಂ           ೧

ಆತನುಮಾನುವಾಗಳೆ ಮದಾಗಮನೋದ್ಯತಹರ್ಷೆಯಂ ಮಹಾ
ಶ್ವೇತೆಯನೆಯ್ದೆ ಕಂಡು ಬೞಕಂತೆ ತದಾಶ್ರಮದೊಳ್ ತುರಂಗಸಂ
ಘಾತಮುಮಂ ನೃಪಾತ್ಮಜರುಮಂ ನಿಲಿಸಿಟ್ಟೊಲವಿಂದಮಾ ಮಹಾ
ಶ್ವೇತೆಯ ಬೇಗಮೊಯ್ಯೆ ಪುಗರ್ದಿರ್ಪೆವೆ ನಚ್ಚಿನ ಹೇಮಕೂಟಮಂ         ೨

ಆಂ ಬಂದುದನಹಮಹಮಿಕೆ
ಯಿಂ ಬೇಗಂ ಪರಿದುಹೋಗಿ ಪರಮೋತ್ಸವದಿಂ
ದಂ ಬಿನ್ನವಿಪ ಜನಂ ಕಾ
ದಂಬರಿಯಿಂ ಮೆಚ್ಚುಗೊಳ್ಳದಿರ್ಕುಮೆ ಪಿರಿದುಂ            ೩

ಎಂತೆಂತು ದಿಟಮೆ ನೀವೆನಿ
ತಂತರದೊಳ್ ಕಂಡಿರೆಲ್ಲಿದಂ ಬಂದನೆ ಭೂ
ಕಾಂತನೆನುತ್ತಂ ಬೆಸಗೊಳು
ತಂ ತಳವೆಳಗಾಗಿ ತಣಿಪಿ ನಿಜಪರಿಜನಮಂ ೪

ಬಿಸಿನೀಪತ್ರಂಗಳಂ ಭೋಂಕನೆ ತೊಲಗಿಸಿ ಮದ್ದರ್ಶನೋತ್ಪನ್ನ ಲಜ್ಜಾ
ರಸದಿಂದಂ ಮೇಲುದುಂ ಪೆರ್ಮೊಲೆಗೆ ತೆಗೆವ ಭೂಷಾಮೃಣಾಳಂಗಳಂ ಪಿಂ
ಗಿಸಿ ತತ್ಕಾಲೋಪಜಾತಪ್ರಚುರಪುಲಕಮಂ ಭೂಷಣಶ್ರೀಗೆ ಪಕ್ಕಾ
ಗಿಸುವೀ ವ್ಯಾಪಾರಸಾರಂ ಸಮನಿಸುಗೆ ಕಾದಂಬರೀದೇವಿಗಾಗಳ್         ೫

ವ|| ಬಳಿಕ ಮತ್ತೆ ನಮಸ್ಕಾರಮಾಡಿ ಹೊರಟುಬಂದನು. ಮಗನ ಅಗಲುವಿಕೆಯಿಂದ ಚಿಂತಾಕ್ರಾಂತರಾದ ಶುಕನಾಸನನ್ನೂ ಸಮಾಧಾನಪಟ್ಟುಕೊಳ್ಳುವಂತೆ ಬಹಳವಾಗಿ ಹೇಳಿ ಬೀಳ್ಕೊಂಡು ಬಂದು, ವೈಶಂಪಾಯನನನ್ನು ನೋಡಬೇಕೆಂಬ ಅಭಿಲಾಷೆಯಿಂದಲೂ, ಕಾದಂಬರಿಯನ್ನು ಸೇರಬೇಕೆಂಬ ಉತ್ಸಾಹದಿಂದಲೂ ಕಾಲ ವಿಳಂಬವನ್ನು ಮಾಡದೆ ಮನೆಯ ಅಂಗಳಕ್ಕೆ ಬಂದ ಇಂದ್ರಾಯುಧವನ್ನು ಚಂದ್ರಾಪೀಡನು ಹತ್ತಿದನು. ಅದರ ಕೆನೆಯುವ ದೊಡ್ಡ ಧ್ವನಿಯಿಂದ ದಿಗಂತಗಳನ್ನು ತುಂಬಲಾಗಿ, ಪ್ರಪಂಚವೆಲ್ಲ ಕುದುರೆಗಳಿಂದಲೇ ತುಂಬಿಕೊಂಡಿರುವಂತಾಗಲು ಹೊರಟು ಶಿಪ್ರಾನದಿಯನ್ನು ದಾಟಿ, ಮೂರು ಯೋಜನಗಳಷ್ಟು ದೂರ ಹೋಗಿ ಹುಲ್ಲೂ ನೀರೂ ಸಮೃದ್ಧಿಯಾಗಿ ದೊರಕುವ ಕಡೆಯಲ್ಲಿ ಬಿಡಾರಮಾಡಿ ತನ್ನ ಮನಸ್ಸಿನಲ್ಲಿ ಹೀಗೆ ಆಲೋಚಿಸಿದನು. ೧. “ನನ್ನನ್ನು ನೋಡಿ ಬಹಳವಾಗಿ ನಾಚಿಕೊಳ್ಳುತ್ತಿರುವ ವೈಶಂಪಾಯನನ ಹಿಂದುಗಡೆಯಲ್ಲೇ ಹೋಗಿ ಬಾಚಿ ತಬ್ಬಿಕೊಂಡು ಆತನ ನಾಚಿಕೆಯನ್ನು ಪರಿಹರಿಸಿ ಮಿತ್ರಸಮಾಗಮಸುಖವನ್ನು ಅನುಭವಿಸುತ್ತೇನೆ” ೨. ಬಳಿಕ ನಾವಿಬ್ಬರೂ ನನ್ನ ಆಗಮನದಿಂದ ಪರಮಾನಂದಭರಿತಳಾದ ಮಹಾಶ್ವೇತೆಯನ್ನು ಕಂಡು, ಅವಳ ಆಶ್ರಯದಲ್ಲಿ ಕುದುರೆ ದಂಡನ್ನೂ ಅರಸು ಮಕ್ಕಳನ್ನೂ ಬಿಟ್ಟು, ಆ ಮಹಾಶ್ವೇತೆಯೆ ಅಕ್ಕರೆಯಿಂದ ಬೇಗನೆ ಕರೆದುಕೊಂಡುಹೋಗಲು ಇಷ್ಟವಾದ ಹೇಮಕೂಟಕ್ಕೆ ಹೋಗುತ್ತೇವೆ. ವ|| ಹಾಗೆ ೩. ನನ್ನ ಬರುವಿಕೆಯನ್ನು ನಾನು ಮುಂದು ತಾನು ಮುಂದು ಎಂದು ಬೇಗನೆ ಓಡಿಹೋಗಿ ಬಹಳ ಸಡಗರದಿಂದ ಕಾದಂಬರೀದೇವಿಗೆ ಅರಿಕೆಮಾಡುವ ಪರಿಜನರು ಅವಳಿಂದ ದೊಡ್ಡ ಉಡುಗೊರೆಯನ್ನು ಪಡೆಯದೆ ಇರುತ್ತಾರೆಯೆ? ೪. ಏನು? ಏನು? ನಿಜವೆ? ನೀವು ಎಷ್ಟು ದೂರದಲ್ಲಿ ಅವನನ್ನು ಕಂಡಿರಿ? ಎಲ್ಲಿದ್ದಾನೆ? ರಾಜಕುಮಾರನು ಬಂದನೆ? ಎಂದು ಕೇಳುತ್ತಾ ಬೆರಗಾಗಿ

ತನ್ನ ಪರಿಜನರನ್ನು ತೃಪ್ತಿಪಡಿಸುತ್ತಾಳಲ್ಲವೆ? ೫. ಆಗ ವಿರಹತಾಪದ ಶಾಂತಿಗಾಗಿ ಎದೆಯ ಮೇಲೆ ಇಟ್ಟುಕೊಂಡಿದ್ದ ತಾವರೆಯೆಲೆಗಳನ್ನು

ಕದಪಂ ಪತ್ತಿರ್ದ ಶಯ್ಯಾಕಮಲಕುಮುದಕಿಂಜಲ್ಕಮಂ ತಳ್ತ ರೋಮಾಂ
ಚದಿನೀಡಾಡುತ್ತವಣ್ಪಿಕ್ಕಿದ ಮಲಯಜಮಂ ಕೂಡೆ ಲಾವಣ್ಯಶೋಭಾ
ಸ್ಪದಮಪ್ಪಂಗಂಗಳೊಳ್ ನಾಣ್ ಪೊಡರೆ ತೊಡೆಯುತಂ ಬಿಟ್ಟು ಬೆನ್ನೆಲ್ಲಮಂ ಮು
ಚ್ಚಿದ ಕೇಶವ್ರಾತಮಂ ಮುಯ್ಪಿನೊಳಳವಡಿಸುತ್ತಿರ್ಕುಮೇ ಕಂಡೊಡೆನ್ನಂ ೬

ಕಣ್ಗುಡಿತೆಗಳಿಂದಾಕೆ ಪ
ವಣ್ಗೞದಾ ಬಾಷ್ಪವಾರಿಯಂ ಸುರಿಯುತ್ತಂ
ಕಣ್ಗೊಳಿಸದಿರ್ಕುಮೇ ಪೇೞು
ಮಾಣ್ಗಿಂ ಮದನ್ನಾಗಿಯೆಂದು ವದಿಪುವ ತೆಱದಿಂ         ೭

ವ|| ಆ ಸಮಯದೊಳ್ ಸಂಭ್ರಮಂಬೆರಸು ಮುನ್ನಿರ್ದ ಕುಸುಮಶಯನಮಂ ಪಿಂದಿಕ್ಕಿ ಕಂಪಿಸುತ್ತಮೆನಗಿದಿರೆೞ್ದ ಕಾದಂಬರೀದೇರಿಯಂ ಕಣ್ಣಾರೆ ನೋಡಿ ಕಣ್ಬಡೆದುದರ್ಕೆ ಸಾಫಲ್ಯಮಂ ಸಾಸುವೆನನಂತರಂ

ಚರಣನತೆ ಪತ್ರಲೇಖೆಯ
ನಿರದೆತ್ತುವ ವಿನಯವಿನತೆ ಮದಲೇಖೆಯನಾ
ದರಿಸುವ ಕೇಯೂರಕನಂ
ಬರತೆಗೆದಪ್ಪುವ ಸುಖಕ್ಕೆ ನೆಲೆಯೆನಿಸಿರ್ಪೆಂ   ೮

ವ|| ಅನಂತರಮಾ ಮಹಾಶ್ವೇತೆಯುಮಖಿಲಜನಸಮೂಹಮುಂ ವಿವಾಹಮಂಗಳಮನೆಸಗೆ ಕಾದಂಬರಿಯೊಳ್ ಕೂಡಿ ಹೃದಯಜನ್ಮನಿವಾಸಮೆನಿಸಿದಾ ವಾಸಭವನಕ್ಕೆ ಸುರಭಿಕುಸುಮ ಧೂಪಾನುಲೇಪನಾಮೋದಿತಾಂಗನೆಂ ಗಂಧರ್ವಕನ್ಯಾಕರಗ್ರಹಣಪೂರ್ವಕಂ ಬಂದಾಕೆವೆರಸು ದಳಿಂಬದೊಳ್ ಕುಳ್ಳಿರ್ದು ಕಿಱದುಬೇಗಕ್ಕೆ ಕೃತನರ್ಮಾಲಾಪೆಯಪ್ಪ ಮದಲೇಖೆ ಮೆಲ್ಲನೇನಾನುಮೊಂದು ನೆವದಿಂ ಪೊಱಮಟ್ಟು ಪೋಗೆ

ನವಲಜ್ಞಾಭಾರನಮ್ರಾನನೆಯನುರದೊಳೊತ್ತಂಬದಿಂದೊತ್ತಿ ಸರ್ವಾಂ
ಗವನೆನ್ನಂಗಂಗಳೊಳ್ ಮೆಯ್ಗರೆದುವೆನಿಸಿ ಮೆಯ್ಯಾರೆ ತಳ್ತಪ್ಪಿ ದೇವ
ರ್ಗವಣಂ ಕೆಯ್ಗೂಡದಂತಪ್ಪವಳಧರಸುಧಾಸಾರಮಂ ತೃಪ್ತಿಪರ್ಯಂ
ತವಲಂಪಿಂಪಿ ಪೀರ್ದು ಮದ್ವಲ್ಲಭೆಯ ಸುಸಿಲ ಸೈಪಿಂ ಕೃತಾರ್ಥಾತ್ಮನಪ್ಪೆಂ         ೯

ಕೂಡಲೆ ತೆಗೆದುಹಾಕಿ, ನನ್ನನ್ನು ನೋಡಿದ್ದರಿಂದ ಉಂಟಾದ ನಾಚಿಕೆಯಂತೆ ತನ್ನ ಮೇಲುದವನ್ನು ತೋರಮೊಲೆಗಳಿಗೆ ಹೊದಿಸುತ್ತಿರುವ, ಹಾಗೆಯೆ ಒಡವೆಯಂತೆ ಹಾಕಿಕೊಂಡಿದ್ದ ತಾವರೆದಂಟುಗಳನ್ನು ತೆಗೆದುಹಾಕಿ, ಹೆಚ್ಚಾದ ಮೈನವಿರನ್ನೇ ಒಡವೆಯನ್ನಾಗಿ ಮಾಡಿಕೊಳ್ಳುವ, ಈ ಕೆಲಸಗಳೆಲ್ಲಾ ಕಾದಂಬರಿಗೆ ನನ್ನನ್ನು ಕಂಡಕೂಡಲೆ ಪ್ರಾರಂಭವಾಗುತ್ತದೆಯಲ್ಲವೆ ! ೬. ಮತ್ತು ನನ್ನನ್ನು ಕಂಡಕೂಡಲೆ ಕೆನ್ನೆಗೆ ಅಂಟಿಕೊಂಡಿದ್ದ, ಹಾಸಿಗೆಗಾಗಿ ಉಪಯೋಗಿಸಿದ್ದ ಕೆಂದಾವರೆ ಮತ್ತು ಬಿಳಿತಾವರೆಗಳ ಕೇಸರಗಳನ್ನು ಮೂಡುತ್ತಿರುವ ಮೈನವಿರುಗಳಿಂದ ತೆಗೆದುಹಾಕುತ್ತಾಳೆ.(ಟಿ. ಮೈನವಿರೆದ್ದುದರಿಂದ ಅವು ಉದುರಿಹೋಗುತ್ತವೆ,) ಲಾವಣ್ಯದಿಂದ ಶೋಭಿಸುವ ಶರೀರಕ್ಕೆ ಲೇಪಿಸಿಕೊಂಡಿದ್ದ ಗಂಧವನ್ನು ಬಹಳ ನಾಚಿಕೆಯುಂಟಾಗಲು ಅಳಿಸಿಹಾಕುತ್ತಿರುತ್ತಾಳೆ. ಬಿಚ್ಚಿಹೋಗಿ ಬೆನ್ನನ್ನು ಮುಚ್ಚಿಕೊಂಡಿದ್ದ ಕೂದಲನ್ನು ಓರಣವಾಗಿ ಹೆಗಲ ಮೇಲೆ ಅಳವಡಿಸಿಕೊಳ್ಳುತ್ತಾಳಲ್ಲವೆ? ೭. ನನ್ನನ್ನು ಕಂಡಕೂಡಲೆ ಅವಳು ತನ್ನ ಬೊಗಸೆಗಣ್ಣುಗಳಿಂದ ಅಳತೆಮೀರಿದ ಆನಂದಬಾಷ್ಪವನ್ನು ಸುರಿಸುತ್ತಾಳೆ. ಆಗ ಅವಳು ಇನ್ನು ‘ಕಾಮಾಗ್ನಿ ಸಾಕು’ ಎಂದು ಭಾವಿಸಿ ಅದನ್ನು ಆರಿಸುತ್ತಿರುವವಳಂತೆ ಶೋಭಿಸುತ್ತಿರುತ್ತಾಳೆ !. ಅಲ್ಲವೆ? ವ|| ಸಮಯದಲ್ಲಿ ಸಡಗರದಿಂದ ಮುಂದಿದ್ದ ಹೂವಿನ ಹಾಸಿಗೆಯನ್ನು ಹಿಂದಕ್ಕೆ ತಳ್ಳಿ, ನಡುಗುತ್ತ ನನ್ನನ್ನು ಎದುರುಗೊಂಡ ಕಾದಂಬರೀದೇವಿಯನ್ನು ಕಣ್ಣಾರೇ ನೋಡಿ ಕಣ್ಣನ್ನು ಪಡೆದುದಕ್ಕೆ ಸಾರ್ಥಕತೆಯನ್ನು ಪಡೆಯುತ್ತೇನೆ. ಬಳಿಕ ೮. ನನ್ನ ಕಾಲಿಗೆ ಎರಗಿದ ಪತ್ರಲೇಖೆಯನ್ನು ಮೇಲಕ್ಕೇಳಿಸುವ, ವಿನಯದಿಂದ ಬಾಗಿರುವ ಮದಲೇಖೆಯನ್ನು ಆದರಿಸುವ, ಕೇಯೂರಕನನ್ನು ಬಾಚಿ ತಬ್ಬಿಕೊಳ್ಳುವ ಸುಖಕ್ಕೆ ಪಾತ್ರನಾಗುತ್ತೇನೆ ! ವ|| ಬಳಿಕ ಮಹಾಶ್ವೇತೆಯೂ ಎಲ್ಲಾ ಬಂಧುಬಳಗದವರೂ ಸೇರಿ ನನಗೂ ಅವಳಿಗೂ ಮದುವೆಮಾಡುತ್ತಾರೆ ! ಆಮೇಲೆ ಅವಳೊಂದಿಗೆ ಕೂಡಿ ಮನ್ಮಥನ ವಾಸಗೃಹದಂತಿರುವ ಮನೆಗೆ ಸುವಾಸನೆಯಿಂದ ಕೂಡಿರುವ ಹೂವು, ಧೂಪಗಂಧ ಲೇಪನಗಳಿಂದ ಘಮಘಮಿಸುತ್ತಿರುವ ಶರೀರವುಳ್ಳವನಾಗಿ ಆ ಗಂಧರ್ವತರುಣಿಯ ಕೈಯನ್ನು ಹಿಡಿದುಕೊಂಡು ಬಂದು ಅವಳ ಜೊತೆಯಲ್ಲಿ ಮೆತ್ತೆಯ ಮೇಲೆ ಕುಳಿತುಕೊಳ್ಳುತ್ತೇನೆ. ಬಳಿಕ ಮದಲೇಖೆಯು ಸ್ವಲ್ಪ ಹೊತ್ತು ಹಾಸ್ಯಭರಿತವಾಗಿ ಮಾತನಾಡುತ್ತಿದ್ದು ಏನೋ ಒಂದು ನೆವದಿಂದ ಮೆಲ್ಲನೆ ಹೊರಟು ಹೋಗಲು, ೯. ಹೊಸದಾದ ನಾಚಿಕೆಯ ಭಾರದಿಂದ ತಲೆಯನ್ನು ತಗ್ಗಿಸಿಕೊಂಡಿರುವ ಇನಿಯಳನ್ನು ಬಲಾತ್ಕಾರದಿಂದ ಎದೆಗೆ ಅವುಚಿಕೊಂಡು, ಅವಳ ಸರ್ವಾಂಗಗಳೂ ನನ್ನ ಅಂಗಗಳಲ್ಲಿ ಲೀನವಾಗಿಬಿಟ್ಟಿವೆಯೊ ಎಂಬಂತೆ ಶರೀರವು ತಣಿಯುವ ಹಾಗೆ ಗಾಢವಾಗಿ ತಬ್ಬಿಕೊಂಡು, ಬಹುಮಟ್ಟಿಗೆ

ಎನಸುಂ ಮೀನೇಕ್ಷಣಂ ಸೋಲದ ರಸದೊದವಿಂ ಸೊರ್ಕಿ ಬೆಂಡೇೞನಂ ನ
ಚ್ಚಿನ ಮುಗ್ಧಾಲಾಪವಿಂಪಂ ಕದು ಬಱತುದೆಂಬನ್ನೆಗಂ ಬತ್ತಿರಲ್ ಬಾಯ್
ಮನದೊಳ್ ತೀವಿರ್ದ ಮೋಹಾಮೃತರಸಮನೆ ಸರ್ವಾಂಗಮುಂ ಚಾಗವಿಕ್ಕಿ
ತ್ತೆನಿಸಲ್ ಘರ್ಮಾಂಬು ತಳ್ತೊಪ್ಪಲುವನುನಯದಿಂದಾಕೆಯೊಳ್ ಕೂಡಿದಪ್ಪೆಂ      ೧೦

ವ|| ಅದಲ್ಲದೆಯುಮಖಿಳಜನ ಸುಲಭಮಾಗಿಯುಂ ಯೋಗೈಕಗಮ್ಯಮುಂ ಸ್ಪರ್ಶ ವಿಷಯಮಾಗಿಯುಂ ಹೃದಯಗ್ರಾಹಿಯುಂ ಮೋಹನಮಾಗಿಯುಂ ಇಂದ್ರಿಯಪ್ರಸಾದಸಂಪಾದಕ ಮುಮುದ್ದೀಪನಮಾಗಿಯಂ ಮದನದಹನನಿರ್ವೃತಿಕರಮುಂ ಉಪಜಾತವಿಷಮೋಚ್ಛಾ ಸ ಶ್ರಮಸ್ವೇದ ಮಾಗಿಯುಂ ಮಹಾಹ್ಲಾದಕಾರಿಯುಮನುಭೂಯಮಾನಮಾಗಿಯಂ ಉತ್ಪಾದಿತಾನುಭವಸ್ಪ  ಹಮುಂ ಸಹಸ್ರವಾರಾನುಭೂತಮಾಗಿ ಯುಮಪುನರುಕ್ತಮುಂ ಅತಿಸ್ಪಷ್ಟಮಾಗಿಯುಮನಿರ್ದೇಶ್ಯಸ್ವರೂಪ ಮುಮಸಂಸ್ಪರ್ಶನ ಮತುಲಸ್ಪರ್ಶ ಮನುಪಮರಸಮನಾಖ್ಯೇಯ ಪ್ರೀತಿಕರಮುಮಪ್ಪ ಸುರತಸುಖಮಂ ಬೇಂದು ಪರಮಾನಂದಸುಖಮನಾಕೆಯೊಳನುಭವಿಸಿ ರತಾವಸಾನಸಮಯದೊಳ್

ಅಮೃತಲವಲಲಿತಮಾದ
ತ್ತಮೃತದ್ಯುತಿಬಿಂಬಮೆನಿಪ ನಿರ್ಭರ ಸುರತ
ಶ್ರಮಜಲಲವಲಿತಮನವ
ಳ ಮುಖೇಂದುವನಡರೆ ನೋೞ್ಪ ಸೈಪಂ ಪಡೆವೆಂ      ೧೧

ವ|| ಮತ್ತಮೆಳವೆಂಡಿರ ತಂಡದಲತಗೆಯೂಡಿದಡಿವಜ್ಜೆಗಳಿಂದ ಚ್ಛಿಱದ ಪಚ್ಚೆಯ ಪಾಸಗಳುಮಂ ಕೇಗುವ ಸೋಗೆಗಳ ಕಳಕಳಂಗಳಿಂ ತೆಕ್ಕನೆ ತೀವಿದ ತಮಾಲತರುಗಳುಮಂ ಪೊಸವಿಸಿಲ ಪೊಳಪಿನಿಂ ನುಣ್ಣನುಜ್ಜಳಿಪ ರನ್ನದದೆಳವೆಳಗಿನ ಬಳಗದಿಂ ಬಣ್ಣಿಸಿ ಸುರಶರಾಸನಂಗಳ ನೆೞಲಿಕ್ಕಿದಂತೆ ನಿಮಿರ್ವ ನಿರ್ಝರಂಗಳುಮನಪ್ಪುಕೆಯ್ದು ಕೇಳೀಪರ್ವತನಿತಂಬಂಗಳೊಳಂ ಪಗೊಳಂಗಳೊಳ್ ತೇಂಕಿ ಪಾಱುವ ಪಕ್ಕಿಗಳೆಱಂಕೆರಿಡಿದುದಿರ್ವ ತಂಪನೀವ ತುಂತುರ್ವನಿಯ ತುಱುಗಲಮಂ ತಳಿರ ನನೆಯಲರ ಕಾಯ ತನಿವಣ್ಣ ಬಣ್ಣಂಗಳಿಂಂ ಚಿತ್ರಿಸಿದಂತಿಡಿದಡರೆ ಗೋಡುಗಳೊಳಂಚಿತಮಾದ ಗೊಂಚಲುಗಳುಮನರ್ಲಂಡನುಂಡು ತನಿಸೊರ್ಕಿಂ ಸೊರ್ಕಿ ತೆಱಂದಿರಿದು ಪಾಱುವ ಪೆಣ್ದುಂಬಿಗಳ ಬಳಗಮನೊಳಗೊಂಡ ಲತಾಮಂಟಪಂಗಳೊಳಂ ತಳರೆ ತಾಗುವ ತೆರೆದುಱುಗಲಲೆಪದಿಂ ಸೂಸಿ ಪಾಸಿಱದು ಬಣ್ಣವುರಂ ತೀವಿದಂತೆ

ದೇವತೆಗಳಿಗೂ ದುರ್ಲಭವೆನಿಸಿರುವ ಅವಳ ಅಧರಾಮೃತವನ್ನು ತೃಪ್ತಿಯಾಗುವವರೆಗೂ ಪ್ರೀತಿಯಿಂದ ಹೀರಿ ನನ್ನ ಪ್ರಾಣಕಾಂತೆಯ ಭೋಗಸುಖದ ಪುಣ್ಯದಿಂದ ಕೃತಾರ್ಥನಾಗುತ್ತೇನೆ. ೧೦. ಹಾಗೆಯೆ ಅವಳ ಸುಂದರವಾದ ಕಣ್ಣುಗಳು ಹೆಚ್ಚುಹೆಚ್ಚಾದ ಆನಂದಾನುಭವದಿಂದ ಸೊಕ್ಕಿ ಜಡವಾಗುವಂತೆಯೂ, ವಿಶ್ವಾಸದಿಂದ ಕೂಡಿರುವ ಮೊದ್ದುಮಾತುಗಳು ಇಂಪನ್ನು ಸುರಿಸಿ ಬತ್ತಿಹೋಗಿದೆಯೆಂಬಂತೆ ಬಾಯಿ ಒಣಗಿ ಹೋಗಲು, ಮನಸ್ಸಿನಲ್ಲಿ ತುಂಬಿ ಭರ್ತಿಯಾಗಿರುವ ಪ್ರೀತಿಯೆಂಬ ಅಮೃತರಸವನ್ನು ಎಲ್ಲಾ ಅಂಗಗಳೂ ಹೊರಸೂಸುತ್ತಿವೆಯೋ ಎಂಬಂತೆ ಬೆವರುನೀರು ಶರೀರದಲ್ಲಿ ಹರಡುತ್ತಿರಲು, ನಯವಾದ ಮಾತುಗಳಿಂದ ಮನರೊಲಿಸಿ ಅವಳಲ್ಲಿ ಬೆರೆಯುತ್ತೇನೆ. ವ|| ಅದಲ್ಲದೆ ಸರ್ವಜನಸಾಮಾನ್ಯವಾಗಿದ್ದರೂ ಏಕಾಗ್ರಚಿತ್ತತೆಯಿಂದ ಮಾತ್ರ ಆಸ್ವಾದಿಸಲ್ಪಡುವ, ತ್ವಗಿಂದ್ರಿಯವೇದ್ಯವೆನಿಸಿದ್ದರೂ ಹೃದಯಸಂವೇದ್ಯವಾದ, ಮತ್ತನ್ನುಂಟುಮಾಡುವುದಾದರೂ ಇಂದ್ರಿಯಗಳ ತಿಳಿವಳಿಕೆಗೆ ಪಾತ್ರವಾಗುವ, ಉಜ್ವಲಸ್ವಭಾವವುಳ್ಳದ್ದಾದರೂ ಮನ್ಮಥಾಗ್ನಿಯ ಶಮನವನ್ನುಂಟುಮಾಡುವ, ತಡೆಯಲಾರದಷ್ಟು ಉಚ್ಛಾ ಸ, ಶ್ರಮ, ಬೆವರುಗಳನ್ನು ಉಂಟುಮಾಡುವುದಾದರೂ ಪರಮಾಹ್ಲಾದಕರವನ್ನುಂಟುಮಾಡುವ, ಅನುಭವಿಸುತ್ತಲೇ ಇದ್ದರೂ ಮತ್ತೂ ಅನುಭವಿಸಬೇಕೆಂಬ ಆಸೆಯನ್ನುಂಟುಮಾಡುವ, ಸಾವಿರಾರು ಸಲ ಅನುಭವಿಸಿದ್ದರೂ ಚವಿತಚರ್ವಣವಾಗದಿರುವ, ಬಹಳ ಸ್ಪಷ್ಟವಾಗಿದ್ದರೂ ಇದು ಹೀಗೆ ಎಂದು ನಿರೂಪಿಸಲು ಅಶಕ್ಯವಾಗಿರುವ, ಅಸಾಧಾರಣವಾದ ಸ್ಪರ್ಶಸುಖವನ್ನುಂಟುಮಾಡುವ, ಹೇಳಲಾಗದಷ್ಟು ಪ್ರೀತಿಯನ್ನುಂಟು ಮಾಡುವ, ಬೇರೊಂದು ಮೋಕ್ಷಸುಖದಂತಿರುವ ರತಿಸುಖವನ್ನು ಅನುಭವಿಸುವೆನು. ಕೊನೆಯಲ್ಲಿ. ೧೧. ಚಂದ್ರಮಂಡಲವು ಅಮೃತದ ಹನಿಗಳಿಂದ ಕೂಡಿಕೊಂಡು ಸುಂದರವಾಗಿರುವಂತೆ ಗಾಢವಾದ ಸುರತದ ಆಯಾಸದಿಂದ ಉಂಟಾದ ಬೆವರಿನ ಹನಿಗಳಿಂದ ಸೊಬಗನ್ನುಂಟುಮಾಡುವ ಅವಳ ಮುಖಚಂದ್ರನನ್ನು ನೋಡುವ ಭಾಗ್ಯವನ್ನು ಪಡೆಯುತ್ತೇನೆ ! ವ|| ಮತ್ತು ಗುಂಪಿನ ಅರಗಿನ ರಸವನ್ನು ಬಳಿದಿರುವ ತರುಣಿಯರ ಕಾಲಿನ ಗೆಜ್ಜೆಗಳಿಂದ ಮುದ್ರಿತವಾದ ಹಾಸುಗಲ್ಲುಗಳಿಂದಲೂ, ಕೂಗುತ್ತಿರುವ ನವಿಲುಗಳ ಕಲಕಲಧ್ವನಿಯಿಂದ ಆವರಿಸಲ್ಪಟ್ಟಿರುವ ಹೊಂಗೆಮರಗಳಿಂದಲೂ, ಎಳಬಿಸಿಲಿನ ಹೊಳಪಿನಿಂದ ಚೆನ್ನಾಗಿ ಪ್ರಕಾಶಿಸುವ ರತ್ನಗಳ ನುಣುಪಾದ ಕಾಂತಿಗಳ ಸಮೂಹದಿಂದ ಚಿತ್ರಿತವಾದ, ಅದರಿಂದಲೆ ಕಾಮನಬಿಲ್ಲಿನ ಪ್ರತಿಬಿಂಬವನ್ನು ಹೊಂದಿರುವಂತೆ ಶೋಭಿಸಿ ಹರಿಯುತ್ತಿರುವ ಗಿರಿನದಿಗಳಿಂದಲೂ ಕೂಡಿಕೊಂಡಿರುವ ಕ್ರೀಡಾಪರ್ವತದ ಸಮಭೂಮಿಗಳಲ್ಲೂ ಮತ್ತು ತಾವರೆಗೊಳಗಳಲ್ಲಿ ಈಜಾಡಿ ಹಾರುತ್ತಿರುವ ಹಕ್ಕಿಗಳ ರೆಕ್ಕೆಗಳಲ್ಲಿ ಸೇರಿಕೊಂಡಿದ್ದು ಉದುರುತ್ತಿರುವ, ತಂಪನ್ನುಂಟುಮಾಡುವ, ತುಂತುರುಹನಿಗಳ ಗುಂಪನ್ನೂ, ಚಿಗುರಿನ, ಮೊಗ್ಗಿನ, ಕಾಯ, ಮಾಗಿದ ಹಣ್ಣಿನ ಬಣ್ಣಗಳಿಂದ ಚಿತ್ರಿಸಿದಂತಿರುವ ದಟ್ಟವಾದ ಹಾಗೂ ನೀಳವಾದ ಕೊಂಬೆಗಳ ಸುಂದರವಾದ ಗೊಂಚಲುಗಳನ್ನೂ, ಹೂವಿನ ರಸವನ್ನು ಕುಡಿದು ನುಸುಳಿ ಹಾರುತ್ತಿರುವ ಹೆಣ್ಣುದುಂಬಿಗಳ

ಬೆಡಂಗುವಡೆದ ಬಣ್ಣವಣ್ಣಿಗೆಯ ನೀರ್ವೂಗಳ ರಜಂಗಳುಮನೊಳದೊಂಡಿನ ಪಾಲ್ಗಲುಮಂ ಪೀರ್ದಿಂಗೊರಲ್ಗಳಾದ ನೀರ್ವಕ್ಕಿಗಳ ಸುಸಿಲ ಮಸಕದಿಂಚರಂಗಳುಮಂ ನೀರಾಟವಾಡುವ ಗಾಡಿಕಾರ್ತಿಯರ ಘನಜಘನಂಗಳ ಪೆರ್ಮೊಲೆಯ ಪೊರ್ಕುಳಿಯಿಂ ಪಱವಱಯಾದ ಪೆರ್ದೆರೆಗಳುಮಂ ತಳೆದ ಪೂಗೊಳಂಗಳೊಳಂ ಪಲತಿಱದ ರಮಣೀಯಪ್ರದೇಶಂಗಳೊಮೊಂದುಪೊತ್ತಗಲದೆ ಮೆಯ್ಗೆ ಮೆಚ್ಚಿದಂ ತೊಚ್ಚತಂ ಕಾದಂಬರಿಯೊಳ್ ನೆರೆದು ನಿಸರ್ಗರಮಣೀಯಮಪ್ಪ ಯವ್ವನಮಂ ರಮಣೀಯತರಮಾಗೆ ನೆಗೞುತ್ತಮಿರ್ಪೆನದಲ್ಲದೆಯುಂ

ಮನದನ್ನಳೆನಿಸಿ ನೆಗೞ್ವೆ
ನ್ನಿನಿಯಳ್ಗಾಂ ಪೇೞ್ದನಂತರಂ ಮಾಡಿಸುವೆಂ
ಮನಮೊಸೆದಾ ವೈಶಂಪಾ
ಯನಂಗೆ ಮದಲೇಖೆಯೊಳ್ ವಿವಾಹೋತ್ಸವಮಂ     ೧೨

ವ|| ಎಂದಿಂತನಂಚಿಂತಾಂತರಂಗಂ ಪಲುಂಬಿ ಪಂಬಲಿಸುತ್ತುಂ ನಿಚ್ಚಪಯಣಂಗಳಿಂ ಯುವರಾಜನನೇಕ ಯೋಜನಂಗಳಂ ಪೆಱಗಿಕ್ಕಿ ಪೋಗುತ್ತಮಿರೆಯಿರೆ

ವಸುಧಾಚಕ್ರಕ್ಕೆ ಕಾಲಾಯಸಗೃಹವರಣಂ ಚಂದ್ರಬಿಂಬಕ್ಕೆ ರಾಹು
ಗ್ರಸನಂ ಚಂದ್ರಾಂಶುಬಿಂಬಕ್ಕವಮೆಯ ರಜನೀಪ್ರೋದ್ಗಮಂ ವಜ್ರವಹ್ನಿ
ಪ್ರಸರಕ್ಕುದ್ದಾಮಧೂಮೋದಯಮಖಿಲಲವಿಯೋಗಾತುರರ್ಗಧಕಾರೋ
ಲ್ಲಸನಂ ತಾನೆಂಬಿನಂ ಬಂದುದು ಬಹುಳ ತಟಿಜ್ವಾಲಮಂಭೋದಕಾಲಂ             ೧೩

ತಿರುವಂ ಮುಪ್ಪುರಿಗೊಂಡು ಮಿಲ್ಲಿಸುವ ಮಿಂಚಂ ಮಾಡಿ ನೀಡುಂ ಭಯಂ
ಕರಮಾಗೇಱಸಿಕೊಂಡು ಶಕ್ರ್ವ ಧನುವಂ ಧಾರಾಶರಾಸಾರಮಂ
ಸುರಿಯುತ್ತುಂ ಘನಘೋಷಗರ್ಘರತರ ಪ್ರಧ್ವಾನಿದಂದಾರ್ದು ಪಾ
ರ್ದಿರದುದ್ದಾಮ ನಿದಾಘಮಂ ಬೆದ ಬೆಂಕೊಂಡತ್ತು ಮೇಘಾಗಮಂ          ೧೪

ವ|| ಅಂತು ಬಂದ ಮೇಘಾಗಮದೊಳ್ ವಿಯೋಗಿಜನಂಗಳ ಮೊಗಂಗಳುಂ ದಿಗಂತರಂಗಳುಮೊಡನೊಡನೆ ಕತ್ತಲಿಸಿದುವವರ ಮನಮಂ ಮರಾಳಕುಲಮುಮೊಡನೊಡನೆ ಬೆದಱದುವವರ ನಿಶ್ವಾಸವಾತಂಗಳುಂ ಧಾರಾಕದಂಬಂಗಳುಮೊಡನೊಡನೆ ಪೊಣ್ಮಿದುವವರ ಕಣ್ಮಲರ್ಗಳುಂ ಕಾರಮುಗಿಲ್ಗಳುಮೊಡನೊಡನೆ ವಾರಿಧಾರೆಗಳಂ ಸುರಿದುವವರ ಹೃದಯಂಗಳುಂ ನದೀನದಂಗಳುಮೊಡನೊಡನುತ್ಕಲಿಕೆಯ್ದುವರರ ರಣರಣಕಾವಸ್ಥೆಗಳುಂ ಕೆಂ ಕಂ ದಳಂಗಳು ಮೊಡನೊಡನೆ ವಿಜೃಂಭಿಸಿದುವವರ ಮನೋರಥಂಗಳುಂ ಮೇಘವರ್ಣಂಗಳುಮೊಡನೊಡನೆ ಬಹುವಿಧಂಗಳಾದುವಂತುಮಲ್ಲದೆಯುಂ

ಗುಂಪನ್ನೂ ಒಳಗೊಂಡಿರುವ ಬಳ್ಳಿಮನೆಗಳಲ್ಲೂ ಮತ್ತು ಒಂದಕ್ಕೊಂದು ತಗುಲುತ್ತಾ ಹೊರಡುತ್ತಿರುವ ಅಲೆಗಳ ಸಮೂಹದ ಚಲನೆಯಿಂದ ಚೆಲ್ಲಿ ಹರಡಿಕೊಂಡು ಚಿತ್ರಿತವಾದಂತೆ ಸೊಬಗನ್ನು ಪಡೆದಿರುವ ನಾನಾ ಬಣ್ಣದ ನೀರುಹೂವುಗಳ ಧೂಳುಗಳನ್ನೂ ದಂಟಿನೊಳಗಣ ದಿಂಡಿನ ರಸವನ್ನೂ ಹೀರಿ ಮಧುರವಾದ ಕಂಠವನ್ನು ಹೊಂದಿರುವ ನೀರಹಕ್ಕಿಗಳ ಮಿಗಿಲಾದ ಸಂಭೋಗಕ್ರೀಡೆಯಿಂದ ಉಂಟಾಗುವ ಇಂಪಾದ ಧ್ವನಿಯನ್ನೂ, ಜಲಕ್ರೀಡೆಯಾಡುತ್ತಿರುವ ಸುಂದರಿಯರ ನಿತಂಬಗಳ ಮತ್ತು ತೋರಮೊಲೆಗಳ ಹೊಡೆತದಿಂದ ಚೆಲ್ಲಾಪಿಲ್ಲಿಯಾದ ದೊಡ್ಡ ದೊಡ್ಡ ಅಲೆಗಳನ್ನೂ ಹೊಂದಿರುವ ಹೂವಿನ ಕೊಳಗಳಲ್ಲೂ, ಹೀಗೆಯೆ, ಹಲವು ತೆರದ ಮನೋಹರವಾದ ಸ್ಥಳಗಳಲ್ಲಿ ಒಂದು ಕ್ಷಣಕಾಲವೂ ಬಿಟ್ಟಿರದೆ, ಶರೀರಕ್ಕೆ ಹಿತವಾಗುವಂತೆ ಕಾದಂಬರಿಯೊಂದಿಗೆ ಕ್ರೀಡಿಸುತ್ತಾ ಸ್ವಭಾವತ ರಮಣೀಯವಾದ ಯೌವನವನ್ನು ಅತ್ಯಂತ ರಮಣೀಯವನ್ನಾಗಿ ಮಾಡುತ್ತಾ ಇರುತ್ತೇನೆ! ಅಲ್ಲದೆ ೧೨. ವಿಶ್ವಾಸಪಾತ್ರಳಾದ ನನ್ನ ಪ್ರಿಯಳಿಗೆ ಹೇಳಿ ಪ್ರೀತಿಯಿಂದ ವೈಶಂಪಾಯನನಿಗೆ ಮದಲೇಖೆಯೊಂದಿಗೆ ವಿವಾಹೋತ್ಸವವನ್ನು ಮಾಡಿಸುತ್ತೇನೆ !” ವ|| ಇವೇ ಮೊದಲಾದ ಅನೇಕ ಆಶೋತ್ತರಗಳಿಂದ ತುಂಬಿದ ಮನಸ್ಸುಳ್ಳವನಾಗಿ, ಹಲುಬಿ ಹಂಬಲಿಸುತ್ತಾ ನಿತ್ಯಪ್ರಯಾಣಗಳಿಂದ ಅನೇಕ ಯೋಜನೆಗಳನ್ನು ಅತಿಕ್ರಮಿಸಿ ಹೋದನು. ೧೩. ಭೂಮಂಡಲಕ್ಕೆ ಲೋಹಪಂಜರದ ಬಂಧನದಂತೆಯೂ, ಚಂದ್ರಬಿಂಬಕ್ಕೆ ರಾಹುಗ್ರಸನದಂತೆಯೂ, ಸೂರ್ಯಮಂಡಲಕ್ಕೆ ಅಮಾವಾಸ್ಯೆಯ ರಾತ್ರಿಯು ಒದಗಿದಂತೆಯೂ, ಸಿಡಿಲೆಂಬ ಬೆಂಕಿಯು ಹರಡುವುದಕ್ಕೆ ಮೊದಲು ದೊಡ್ಡಹೊಗೆ ಎದ್ದಿರುವಂತೆಯೂ, ವಿರಹಿಜನಕ್ಕೆಲ್ಲ ಕಗ್ಗತ್ತಲೆ ಕವಿದಂತೆಯೂ ಇರುವ ಅತ್ಯಕವಾದ ಮಿಂಚುಗಳ ಗುಂಪಿನಿಂದ ಕೂಡಿದ ಮಲೆಗಾಲವು ಬಂದಿತು. ೧೪. ಮಳೆಗಾಲವು ಚಲಿಸುವ ಮಿಂಚುಗಳನ್ನು ಒಟ್ಟಾಗಿ ಸೇರಿಸಿ ಹೊಸೆದು ಮೌರ್ವಿಯನ್ನಾಗಿ ಮಾಡಿಕೊಂಡು, ಕಾಮಬಿಲ್ಲನ್ನು ಬಹಳ ಭಯಂಕರವಾಗುವಂತೆ ಹೆದೆಯೇರಿಸಿ ಕಟ್ಟಿ, ಜಲಧಾರೆಗಳೆಂಬ ಬಾಣಗಳ ಮಳೆಯನ್ನು ಸುರಿಸುತ್ತಾ, ಗುಡುಗು ಸಿಡಿಲುಗಳ ಗುಡುಗುಡು ಧ್ವನಿಯಿಂದ ಗಟ್ಟಿಯಾಗಿ ಗರ್ಜಿಸಿ ನೋಡಿ ಮಹತ್ತರವಾದ ಬೇಸಿಗೆಯನ್ನು ಹೆದರಿಸಿ ಓಡಿಸಿತು! ವ|| ಹಾಗೆ ಬಂದ ಮಳೆಗಾಲದಲ್ಲಿ ತಮ್ಮ ಮಡದಿಯರಿಂದ ಅಗಲಿದ ವಿರಹಿಗಳ ಮುಖಗಳೂ ದಿಗಂತಗಳೂ ಒಟ್ಟಿಗೆ ಕಪ್ಪಾದುವು (ವಿರಹಿಗಳ ಮುಖವು ದುಖದಿಂದ ಕಳೆಗುಂದಿತು. ಸೂರ್ಯರಶ್ಮಿಯೇ ಇಲ್ಲದೆ ದಿಕ್ಕುಗಳು ಕಪ್ಪಾಗಿದ್ದುವು. ವಿರಹಿಗಳ ನಿಟ್ಟಿಸಿರೂ ಜಲಧಾರೆಗಳೂ ಒಟ್ಟಿಗೆ ಹೊಮ್ಮಿದುವು. ಅವರ ಕಣ್ಣುಗಳೂ ಮಳೆಮೋಡಗಳೂ ಒಟ್ಟಿಗೆ ನೀರು ಸುರಿಸಿದುವು.

ಧರೆಯೊಳ್ ಶಾಲೂರಸಂಘಂ ಪವನಪಥದೊಳಂಭೋಧರಾನೀಕವಾಶಾಂ
ತರದೊಳ್ ಜಝಾಸಮೀರಂ ವನಸಮುದಯದೊಳ್ ಕೇಕಿಸಂಘಾತಮುರ್ವೀ
ಧರಚಕ್ರಪ್ರಾಂತದೊಳ್ ನಿರ್ಝರತತಿ ತಟಿನೀವ್ಯೂಹದೊಳ್ ಪೂರವಾರಂ
ವಿರಹಿವ್ರಾತಂ ಬಿಗುರ್ವಂತೊಡನೊಡನೆ ರುತಂ ಪರ್ರ‍ಿಸುತ್ತಿರ್ದುವೆತ್ತಂ   ೧೫

ಬಯಲೊಳ್ ಪರ್ವುಗೆದೋಱ ನುಣ್ಬಸಲೆಯೊಳ್ ಮೆಯ್ದೋಱ ನೀರ್ದಾಣದೊಳ್
ನಯಮಂ ಬೀಱ ಮಹೀಧ್ರದೊಳ್ ಮಸಕಮಂ ಕೈಗೊಂಡು ಶಾಖಾಸಮು
ಚ್ಚಯದೊಳ್ ಸಂದಣಿಗೊಂಡು ತಾಳವನದೊಳ್ ಕಾರ್ಕಶ್ಯಮಂ ಮಾಡಿಕೊಂ
ಡು ಯಥಾಸಾರನಿಪಾತಮುಣ್ಮಿದುದು ಮೇಘೋನ್ಮುಕ್ತಧಾರಾರವಂ         ೧೬

ಸುರಿತ ತಟಿತ್ಪ್ರಭಾಪ್ರತತಿ ಕೞ್ತಲೆಯಂ ಸುರಗೋಪಕಾಂತಿ ಪಾಂ
ಡುರತೆಯನಂಬುವಾಹತತಿ ಶೋಷಣಮಂ ಘನವಾರಿಧಾರೆ ನಿ
ರ್ಭರಪರಿತಾಪಮಂ ಕುಟಜಕುಂದ ನವೋದ್ಗಮವಾಟಿ ರಾಗಮಂ
ವಿರಹಿಜನಕ್ಕೆ ಮಾಡಿದುದು ನೋಡುವೊಡೆಯ್ದೆ ವಿರುದ್ಧಮೆಂಬಿನಂ            ೧೭

ವ|| ಅಂತು ಬಂದ ಮೞೆಗಾಲಮಂ ಬಗೆಯದೆ ಸುಹೃದ್ದರ್ಶನಕುತೂಹಲದೊಳಂ ಕಾದಂಬರೀಸಮಾಗಮೌತ್ಸುಕ್ಯದೊಳಮೆಲ್ಲಿಯುಂ ತಡೆಯದೆ ಪಲವು ಪಯಣಂಗಳುಂ ಚಿತ್ರರಥವನಕ್ಕೆ ಸಮೀಪವೆನೆ ಬರ್ಪಿನವನ್ನೆಗಂ ಪತ್ರಲೇಖೆಯಂ ಕಳುಪಿ ಮಗುೞ್ದುಂ ಬಂದು ಪೊಡಮಟ್ಟ ಮೇಘನಾದನನಿದಿರೊಳ್ ಕಂಡು ವೈಶಂಪಾಯನವಾರ್ತಾಕರ್ಣನೋತ್ಸುಕನಾಗಿ ಚಂದ್ರಾಪೀಡನಿಂತೆಂದಂ

ಪ್ರಿಯಸಖವಾರ್ತೆಯಂ ತಿಳಿಯೆ ಬಿನ್ನವಿಸನ್ನೆಗಮಿರ್ಕೆ ಪತ್ರಲೇ
ಖೆಯ ದೆಸೆ ಕಂಡುದುಂಟೆ ಸಖನೇಂ ಸುಖಮಿರ್ದನೆ ತದ್ವನಾಂತದ
ಲ್ಲಿಯೆ ನೆಲೆಸಿರ್ದ ಕಾರಣವದೇಂ ನಿನಗಾತನದೇನನೆಂದನೆ
ನ್ನಯ ಬರುತಿರ್ದುದುಂ ವಿದಿತಮಾದುದೆ ಕಾಣ್ಬೆನೆ ಪೋದೊಡಾತನಂ     ೧೮

ವ|| ಎಂದು ಬೆಸಗೊಳ್ವುದುಂ ದೇವರ್ ಬೆಸಸಿದಲ್ಲಿವರಂ ಪೋಗಿ ಪತ್ರಲೇಖೆಯಂ ಕಳುಪಿ ಬಂದೆನಲ್ಲದೆ ವೈಶಂಪಾಯನ ವೃತ್ತಾಂತಮನಱಯೆನೆಂದು ಮೇಘನಾದಂ ನುಡಿಯೆ ಚಂದ್ರಾಪೀಡಂ ಸುಹೃತ್ಸೆ ಹಕಾತರಹೃದಯನಾಗಿ ಬೇಗಂ ನಡೆಗೊಂಡು ಚಿತ್ರರಥಮನೆಯ್ಠಿ

ಅವರ ಹೃದಯಗಳೂ ಗಂಡು ಹೆಣ್ಣು ಹೊಳೆಗಳೂ (ನದನದಿಗಳು) ಒಟ್ಟಿಗೆ ಉತ್ಕಲಿಕೆಗಳನ್ನು (೧. ಕಾತರತೆ, ೨. ಅಲೆ) ಪಡೆದುವು. ಅವರ ವಿರಹಾವಸ್ಥೆಯೂ ಚಿಗುರುಗಳೂ ಒಟ್ಟಿಗೆ ಹೆಚ್ಚಿದುವು. ಅವರ ಮನೋರಥಗಳೂ ಮೋಡದ ಬಣ್ಣಗಳೂ ಒಟ್ಟಿಗೆ ನಾನಾಬಗೆಯಾದವು. ಅದಲ್ಲದೆ, ೧೫. ಭೂಮಿಯಲ್ಲಿ ಕಪ್ಪೆಗಳೂ ಆಕಾಶಮಾರ್ಗದಲ್ಲಿ ಮೇಘಗಳೂ ದಿಕ್ಕುಗಳ ಮಧ್ಯದಲ್ಲಿ ಬಿರುಗಾಳಿಯೂ ಕಾಡುಗಳಲ್ಲಿ ನವಿಲುಗಳ ತಂಡವೂ ಬೆಟ್ಟಗಳಲ್ಲಿ ಝರಿಗಳೂ ನದಿಗಳಲ್ಲಿ ಪ್ರವಾಹಗಳೂ ವಿರಹಿಗಳೆಲ್ಲ ಭಯಪಡುವಂತೆ ಎಲ್ಲೆಲ್ಲೂ ಸದ್ದನ್ನು ಹೆಚ್ಚು ಹೆಚ್ಚಾಗಿ ಮಾಡುತ್ತಿದ್ದುವು. ೧೬. ಮೋಡಗಳಿಂದ ಸುರಿಯುತ್ತಿರುವ ಜಲಧಾರೆಗಳ ಸಪ್ಪಳವು ಮೈದಾನಗಳಲ್ಲಿ ಹರಡಿಕೊಂಡು ಮೃದುವಾದ ಹಸುರುಹುಲ್ಲಿರುವ ಪ್ರದೇಶಗಳಲ್ಲಿ ಕಾಣಿಸಿಕೊಂಡು, ಜಲಾಶಯಗಳಲ್ಲಿ ಮೆದುವಾಗಿ, ಪರ್ವತಗಳಲ್ಲಿ ವಿಜೃಂಭಿಸಿ, ಕೊಂಬೆಗಳಲ್ಲಿ ಗುಂಪುಗೂಡಿ, ತಾಳೆಮರದ ಕಾಡುಗಳಲ್ಲಿ ಕಠಿನತನವನ್ನು ವ್ಯಕ್ತಪಡಿಸಿ, ಧಾರಾಸಂಪಾತವನ್ನನುಸರಿಸಿ ಹರಡಿತು. ೧೭. ಹೊಳೆಯುವ ಮಿಂಚಿನ ಬೆಳಕು ವಿರಹಿಗಳಿಗೆ ಕತ್ತಲೆಯನ್ನುಂಟುಮಾಡುತ್ತಿತ್ತು. (ದಿಕ್ಕು ತೋಚದಂತೆ ಮಾಡುತ್ತಿತ್ತು). ಮಿಂಚುಹುಳುಗಳ ಹೊಂಬಣ್ಣದ ಬೆಳಕು ಇವರ ಶರೀರವು ಬಿಳುಪಾಗುವಂತೆ ಮಾಡುತ್ತಿತ್ತು. ಮೋಡಗಳ ಗುಂಪು ಇವರ ದೇಹವು ಒಣಗುವಂತೆ ಮಾಡುತ್ತಿತ್ತು. ದಟ್ಟವಾದ ಜಲಧಾರೆಯು ಬಹಳ ಸಂತಾಪವನ್ನುಂಟುಮಾಡುತ್ತಿತ್ತು. ಬೆಟ್ಟಮಲ್ಲಿಗೆ, ಮೊಲ್ಲೆ ಎಂಬ ಬಿಳಿಯ ಬಣ್ಣದ ಹೂವುಗಳನ್ನು ಬೆಳೆಯುವ ಹೊಸ ಕೈದೋಟವು ಇವರಿಗೆ ರಾಗವನ್ನು (೧. ಪ್ರೀತಿ, ೨. ಕೆಂಪು) ಉಂಟುಮಾಡುತ್ತಿತ್ತು. ಇವೆಲ್ಲವೂ ನೋಡಿದರೆ ವಿರುದ್ಧವಾಗಿ ಕಾಣುತ್ತಿದ್ದುವು. ವ|| ಹೀಗೆ ಬಂದ ಮಳೆಗಾಲವನ್ನೂ ಗಮನಿಸದೆ ಸ್ನೇಹಿತನನ್ನು ನೋಡಬೇಕೆಂಬ ಕುತೂಹಲದಿಂದಲೂ, ಕಾದಂಬರಿಯೊಂದಿಗೆ ಕೂಡಬೇಕೆಂಬ ಉತ್ಸಾಹದಿಂದಲೂ, ಎಲ್ಲಿಯೂ ನಿಲ್ಲದೆ ಕೆಲವು ದಿನಗಳು ಪ್ರಯಾಣ ಮಾಡಿ ಚಿತ್ರರಥೋದ್ಯಾನದ ಹತ್ತಿರಕ್ಕೆ ಬಂದನು. ಅಷ್ಟರಲ್ಲಿ ಪತ್ರಲೇಖೆಯನ್ನು ಕಳುಹಿಸಿ ಹಿಂದಿರುಗಿಬರುತ್ತಿದ್ದ ಮೇಘನಾದನು ಸಂಸಿ ನಮಸ್ಕಾರಮಾಡಿದನು. ಅವನನ್ನು ಎದುರಿನಲ್ಲೆ ಕಂಡು ವೈಶಂಪಾಯನನ ಸಮಾಚಾರವನ್ನು ಕೇಳಬೇಕೆಂಬ ಕುತೂಹಲವುಳ್ಳವನಾಗಿ ಚಂದ್ರಾಪೀಡನು ಮೇಘನಾದನನ್ನು ಕುರಿತು ಹೀಗೆಂದನು. ೧೮. “ಮೇಘನಾದ, ಪತ್ರಲೇಖೆಯ ಸಮಾಚಾರವು ಸ್ವಲ್ಪ ಹಾಗಿರಲಿ. ವೈಶಂಪಾಯನನ ವೃತ್ತಾಂತವನ್ನು ಮೊದಲು ನನಗೆ ತಿಳಿಸು. ನೀನು ನನ್ನ ಗೆಳೆಯನನ್ನು ಕಂಡಿದ್ದೆಯಾ? ಸುಖವಾಗಿರುವನೆ? ಕಾಡಿನಲ್ಲಿ ನೆಲಸಲು ಕಾರಣವೇನು? ನಿನಗೆ ಅವನು ಏನು ಹೇಳಿದನು? ನಾನು ಬರುವುದು ಅವನಿಗೆ ಗೊತ್ತೆ? ನಾನು ಹೋದರೆ ಅವನು ಸಿಕ್ಕುತ್ತಾನೆಯೆ?” ವ|| ಎಂದು ಕೇಳಲಾಗಿ ಮೇಘನಾದನು “ಸ್ವಾಮಿ, ತಾವು ಮೊದಲು ಅಪ್ಪಣೆಮಾಡಿದ ಸ್ಥಳದವರೆಗೆ

ತೊಲಗುಗುಮೊ ಕೆಳೆಯನೊರ್ದೆಸೆ
ಗೆ ಲಜ್ಜೆಯಿಂ ನಮ್ಮ ಬರವುಗೇಳ್ದೊಡೆನುತ್ತಾ
ಕುಲಮತಿ ಯುವರಾಜಂ ರಾ
ಜಲೋಕಮಂ ಬನದ ಪೊಱಗೆ ಕಾಪಂ ಪೇೞಂ            ೧೯

ವ|| ಅನಂತರಂ ತಾನುಮಾ ವನಮಂ ಪುಗುವಲ್ಲಿ ಜಲಧರಗಳಿತಧಾರಾಜಲಕ್ಲಿನ್ನತೀರ ತರುತಳಮುಮಾಪ್ಲಾವಿ ತೋಪಾಂತಶಾಡ್ವಲಮುಂ ಅನವರತ ರೋಧೋಜಲಪ್ರವೇಶಕಲುಷಿತ ಪ್ರಾಂತಮುಮವಶೀರ್ಯ ಮಾಣೋದ್ದಂಡಕುಮುದದಳಗಹನಮುಂ ಮನೋಜ್ಞಕಮಲಷಂಡಮುಂ ಜರ್ಝರಿತಕಲ್ಹಾರಕುವಲಯಮುಮುದ್ಭಾ ಂತಭ್ರಮರಮುಂ ಉಡ್ಡೀನಹಂಸಸಾರ್ಧಮುಂ ಉತ್ಕಂಪಿತ ಕಾದಂಬಕದಂಬಕಾಶ್ರಯಮಾಣೋಪಕೂಲ ನಡ್ವಲಮುಂ ಅವಶಿಷ್ಟ ದಳನಿಲೀಯಮನೋಚ್ಚಕಿತ ಚಕ್ರವಾಕಯುಗಮುಮೆನಿಸಿ ತಜ್ಜಲದೋಷಹತಿಯಿಂ ಜಲದ ಕಾಲೋಪಹತಿಯಿಂ  ಬೇಂದು ಸರೋವರಮೆಂಬ ಸಂದೆಯಮಂ ಸಂದಿಸಚ್ಛೋದಸರೋವರಮಂ ಕಂಡು

ವನಾಂತರದ ಪೆರ್ಮರಂ ಪೊದಱು ಪಳ್ಳಕೊಳ್ಳಂಗಳೆಂ
ಬೆನಿತ್ತೆಡೆಯೊಳಂ ತೊೞಲ್ದವನಿಪಾಲರುಂ ತಾನುಮಾ
ವನಾಂತದೊಳೆತ್ತಲುಂ ಸುೞದು ಸುತ್ತಲುಂ ಸುತ್ತಿ ಕಂ
ಡನಿಲ್ಲ ಸಖನಿರ್ದ ಚಿಹ್ನಮುಮನಾ ನರೇಂದ್ರಾತ್ಮಜಂ   ೨೦

ವ|| ಅಂತು ವೈಶಂಪಾಯನನೆಲ್ಲಿಯುಮಱಸಿ ಕಾಣದಾತನ ವೃತ್ತಾಂತಮಂ ಮಹಾಶ್ವೇತೆಯಾದೊಡಱಗುಮೆಂದು ಚಂದ್ರಾಪೀಡದೇವಂ ತದಾಶ್ರಮಮನೆಯ್ದೆವಂದು ಕಿಱದಾನುಂ ದೂರದೊಳ್ ನಿವೇಶಿತ ತುರಂಗಸೈನ್ಯನಪನೀತಸಮಾಯೋಗನಾಗಿ ಪಾವಿನೆರೆಯ ದೊರೆಯ ದುಕೂಲಮಂ ಪೊದೆದು ಯಥಾಸ್ಥಿತಪರ್ಯಾಣಕಮಪ್ಪಿಂದ್ರಾಯುಧಮನೇಱ ಮಹಾಶ್ವೇತಾಶ್ರಮಮಂ ಪೊಕ್ಕು ತುರಂಗಮದಿನವತರಿಸಿ ಪೆಱಗೆ ತೆಗೆದು ಬರ್ಪಿಂದ್ರಾಯುಧದ ಬೞವಿಡಿದು ಮಹಾಶ್ವೇತಾವಲೋಕನ ಕುತೂಹಲದಿಂದೆ ಪರಿಜನಂ ಬರುತ್ತಮಿರೆ ಗುಹಾದ್ವಾರಮನೆಯ್ದೆವರ್ಪಲ್ಲಿ