ದೆಸೆಗೆಟ್ಟುದ್ಬಾಷ್ಪದಿಂದಂ ತರಳಿಕೆ ಪಿಡಿದೆಂತಾನುವಾತ್ಮಾಂಗಮಂ ನೆ
ಮ್ಮಿಸೆ ಜೋಲ್ದಂತಾ ಗುಹಾದ್ವಾರದ ಶಿಲೆಯೊಳೆ ಮನ್ಯೂದ್ಗಮಕ್ಷೋಭದಿಂ ಕಂ
ಪಿಸುತಂ ಪ್ರಾವರ್ಷ ಧಾರಾವಳಿವೊಲೊಗೆವ ಕಣ್ಣೀರ್ಗಳೊಳ್ ತೇಂಕುತಂ ದು
ಖಸಹಸ್ರೋದ್ವೇಜನಾಧೋಮುಖಿಯೆನಿಪ ಮಹಾಶ್ವೇತೆಯಂ ಕಂಡನಾಗಳ್         ೨೧

ಮಾತ್ರ ಹೋಗಿ ಪತ್ರಲೇಖೆಯನ್ನು ಕಳುಹಿಸಿ ಬಂದೆನು. ಇಷ್ಟಲ್ಲದೆ ವೈಶಂಪಾಯನನ ವೃತ್ತಾಂತವೇ ನನಗೆ ತಿಳಿಯದು” ಎಂದು ಹೇಳಿದನು. ಚಂದ್ರಾಪೀಡನು ಗೆಳೆಯನ ಮೇಲಿನ ಪ್ರೀತಿಯಿಂದ ಗಾಬರಿಗೊಂಡ ಮನಸ್ಸುಳ್ಳವನಾಗಿ ಬೇಗ ಬೇಗ ಪ್ರಯಾಣ ಮಾಡಿ ಚಿತ್ರರಥೋದ್ಯಾನಕ್ಕೆ ಬಂದು, ೧೯. “ವೈಶಂಪಾಯನನು ನಾನು ಬಂದಿರುವುದನ್ನು ಕೇಳಿ ನಾಚಿಕೆಯಿಂದ ಬೇರೊಂದು ಕಡೆಗೆ ಹೋಗಿಬಿಡಬಹುದು” ಎಂದು ಮನಸ್ಸಿನಲ್ಲಿ ಆಲೋಚಿಸಿ, ಕಳವಳಗೊಂಡು ತನ್ನ ಜೊತೆಯಲ್ಲಿ ಬಂದಿದ್ದ ರಾಜರನ್ನು ಕಾಡಿನ ಹೊರಗೆ ಸುತ್ತಲೂ ಕಾಯ್ದಕೊಂಡಿರುವಂತೆ ನೇಮಿಸಿದನು. ವ|| ಬಳಿಕ ತಾನೂ ಆ ವನಕ್ಕೆ ಪ್ರವೇಶಮಾಡುತ್ತಿರುವಲ್ಲಿ ಮೋಡಗಳ ದೆಸೆಯಿಂದ ಸುರಿಯುತ್ತಿರುವ ಜಲಧಾರೆಗಳಿಂದ ನೆನೆದುಹೋದ ದಡದ ಮೇಲಿರುವ ಮರಗಳುಳ್ಳ, ತೋಯಿಸಲ್ಪಟ್ಟ ಸಮೀಪದ ಹಸಿರುಹುಲ್ಲಿನ ಪ್ರದೇಶವುಳ್ಳ, ಒಂದೇಸಮನೆ ದಡದಿಂದ ಹರಿದುಬರುವ ನೀರು ಸೇರಿ ಕೊಳಕಾದಿ ಅಂಚುಗಳುಳ್ಳ, ಹಾಳುಮಾಡಲ್ಪಟ್ಟ ಉದ್ದವಾದ ದಂಟಿನಿಂದ ಕೂಡಿಕೊಂಡಿರುವ ಬಿಳಿಯ ನೈದಿಲೆದಳಗಳಿಂದ ತುಂಬಿಕೊಂಡಿರುವ, ಚಂದಗಾಣದಿರುವ ಕಮಲಗಳ ಪೊದರುಳ್ಳ, ಭಗ್ನವಾದ ಕಲ್ಹಾರ ಕನ್ನೈದಿಲೆಗಳುಳ್ಳ, ಗಾಬರಿಗೊಂಡ ದುಂಬಿಗಳುಳ್ಳ, ಹಾರಿಹೋದ ಹಂಸಸಮೂಹವುಳ್ಳ ಮತ್ತು ಅಳಿದುಳಿದಿರುವ ತಾವರೆಯೆಲೆಗಳೊಳಗೆ ಅಡಗಿಕೊಳ್ಳುತ್ತಿರುವ, ಗಾಬರಿಗೊಂಡ ಚಕ್ರವಾಕದಂಪತಿಗಳುಳ್ಳ, ಹೀಗೆಯೆ ಮೋಡಗಳ ಹಾವಳಿಯಿಂದ ಬೇರೊಂದು ಸರೋವರವೋ ಎಂಬ ಸಂದೇಹವನ್ನುಂಟುಮಾಡುವ ಅಚ್ಛೋದಸರೋವರವನ್ನು ಕಂಡನು. ೨೦. ಬಳಿಕ ಚಂದ್ರಾಪೀಡನು ಸಾಮಂತರಾಜದೊಂದಿಗೆ ಕೂಡಿಕೊಂಡು ಕಾಡಿನ ಮಧ್ಯದಲ್ಲಿ ದೊಡ್ಡಮರ, ಪೊದರು, ಹಳ್ಳ, ಕೊಳ್ಳಗಳ ಸ್ಥಳಗಳಲ್ಲೆಲ್ಲಾ ತಿರುಗಾಡಿ ಸುತ್ತಲೂ ಸುತ್ತಿ ಅಲೆದಾಡಿದನು. ಆದರೂ ಅವನಿಗೆ ತನ್ನ ಗೆಳೆಯನ ಸುಳಿವು ಸಿಕ್ಕಲಿಲ್ಲ. ವ|| ಹೀಗೆ ವೈಶಂಪಾಯನನನ್ನು ಎಲ್ಲೆಲ್ಲೂ ಹುಡುಕಿ ಕಾಣದೆ, ಆತನ ವೃತ್ತಾಂತವುಮಹಾಶ್ವೇತೆಗೇನಾದರೂ ಗೊತ್ತಿರಬಹುದೆಂದು ಚಂದ್ರಾಪೀಡನು ಅವಳ ಆಶ್ರಮಕ್ಕೆ ಬಂದು ಸ್ವಲ್ಪ ದೂರದಲ್ಲಿ ಕುದುರಸೈನ್ಯವನ್ನು ಬೀಡುಬಿಡಿಸಿದನು. ಬಳಿಕ ತಾನು ಪೋಷಾಕನ್ನು ತೆಗೆದು, ಹಾವಿನ ಪರೆಯಂತೆ ತೆಳುವಾದ ಪಟ್ಟೆವಸ್ತ್ರಗಳನ್ನು ಧರಿಸಿ, ಹಿಂದಿನಂತೆ ಜೀನುಹಾಕಿದ್ದ ಇಂದ್ರಾಯುಧದ ದಾರಿಯನ್ನೇ ಹಿಡಿದು, ಮಹಾಶ್ವೇತೆಯನ್ನು ನೋಡಬೇಕೆಂಬ ಕುತೂಹಲದಿಂದ ಕೂಡಿರುವ ಪರಿಜನರು ಹಿಂಬಾಲಿಸಿ ಬರುತ್ತಿರಲಾಗಿ ಗುಹೆಯ ಬಾಗಿಲಿಗೆ ಬಂದನು. ಅಲ್ಲಿ! ೨೧. ಮಹಾಶ್ವೇತೆಯು ಗುಹೆಯ ಬಾಗಿಲೆಲ್ಲ ಒಂದು ಹಾಸರೆಕಲ್ಲಿನ ಮೇಲೆ ಕುಳಿತಿದ್ದಾಳೆ. ತರಳಿಕೆಯು ದಿಕ್ಕೆಟ್ಟು ಕಣ್ಣೀರು ಸುರಿಸುತ್ತಾ ಅವಳನ್ನು ಹಿಡಿದುಕೊಂಡು ತನ್ನ ದೇಹಕ್ಕೆ ಒರಗಿಸಿಕೊಂಡಿದ್ದಾಳೆ. ಮಹಾಶ್ವೇತೆಯು ಹಾಗೆಯೆ ಅವಳ ಶರೀರದ ಮೇಲೆ ಜೋಲು ಬಿದ್ದಿದ್ದಾಳೆ.

ವ|| ಅಂತು ಕಂಡು ಭೋಂಕೆನಲಾಶಂಕಿತಹೃದಯನಾಗಿ

ಪಿರಿದುಂ ಹರ್ಷಮನೆನ್ನಯ
ಬರವಿಂದಂ ಮಾಡದೀ ಮಹಾಶ್ವೇತೆಯದೊಂ
ದಿರವಿಂತಿದೇನೊ ಕಾದಂ
ಬರಿಗೇನಾನೊಂದನಿಷ್ಟಮಾಗಲೆವೇೞ್ಕು        ೨೨

ವ|| ಎಂದು ತನ್ನೊಳ್ ಬಗೆಯುತ್ತಮೊಯ್ಯನೊಯ್ಯನೆ ಪೋಗಿ ಶಿಲಾತಲದೊಳ್ ಕುಳ್ಳಿರ್ದು ಬಾಷ್ಟವಿಷಣ್ಣವದನನಾಗಿ ತರಳಿಕೆಯನಿದೇನೆಂದು ಬೆಸಗೊಳ್ದುದುಮಾಕೆ ಕುಮಾರಂ ಬಿಜಂಗೆಯ್ದನೆಂದು ಮಹಾಶ್ವೇತೆಗಱಪುವುದುಮಾ ಕಾಂತೆಯನುಪಸಂಹೃತ ಮನ್ಯುವೇಗೆಯಂ ಗದ್ಗದಿಕಾವಗೃಹ್ಯಮಾಣಕಂಠೆಯು ಮಾಗಿ ಕುಮಾರನನಿಂತೆಂದಳ್

ನಿನಗೇವೇೞ್ದಪಕೆ ಕೇಳಿಸಿದೆನಾಂ ಮದ್ದುಖಮಂ ಮುನ್ನೆ ನಿ
ನ್ನನದುಖಶ್ರವಣಾರ್ಹನಂ ಸಕಲದುಖಾವಾಸೆಯೆಂ ಜೀವಿತ
ಕ್ಕೆ ನಿಬದ್ಧಾಸೆಯನತ್ರಪಾತ್ಮಿಕೆಯನೀಗಳ್ ಮತ್ತೆಯುಂ ಕೇಳಿಸ
ಲ್ಕನುಗೆಯ್ದಪ್ಪೆನಿದೊಂದು ದುಶ್ರವಮುಮಂ ರಾಜಾರಾಜಾತ್ಮಜಾ            ೨೩

ವ|| ಅದೆಂತೆನೆ ನೀಮುಜ್ಜಯಿನಿಗೆ ಬಿಜಯಂಗೆಯ್ದಿರೆಂಬುದನಾಂ ಕೇಯೂರಕನ ಪೇೞ್ಕೆಯಿಂದಱದು ಭೋಂಕನೆ ವಿದೀರ್ಣಹೃದಯೆಯಾಗಿ ಚಿತ್ರರಥಮನೋರಥಮುಂ ಮದಿರಾದೇವಿಯ ಮನೋಭಿಲಷಿತಮುಂ ಮದೀಯಸಮೀಪಹಿತಮುಂ ಕಾದಂಬರಿಯ ಮನಪ್ರಿಯಸಮಾಗಮನ ನಿರ್ವೃತಿಯುಂ ಸಮನಿಸಿತಿಲ್ಲೆಂದು ಮನಂ ನೊಂದು ವೈರಾಗ್ಯದಿಂ ಮದೀಯಪ್ರಿಯಸಖಿಯ ಕೂರ್ಮೆಯ ತೊಡರ್ಪಂ ಪಱದು ಮಹಾಘೋರತರ ತಪಶ್ಚರಣಾರ್ಥಂ ಮತ್ತಮಿಲ್ಲಿಗೆವಂದಿರ್ದೆನನ್ನೆಗಮೊಂದು ದಿವಸಂ

ನಸುದೋಱುತ್ತಿರ್ದ ನುಣ್ಮೀಸೆಗಳುಮತಿಮೃದುಸ್ನಿಗ್ಧಕೇಶಂಗಳುಂ ಕ
ಣ್ಗೆಸೆಯಲ್ ಮೂಲೋಕಮಂ ಯವ್ವನಚತುರತರಾಪಾಂಗದಿಂದೊಂದು ಸೀರ್ಪು
ಲ್ಗೆಸೆವನ್ನಂ ಮಾಡುತಂಗಪ್ಪಭೆಯೊಳಖಿಲ ಕಾಂತಾರಮಂ ಕೂಡೆ ತೇಂಕಾ
ಡಿಸುತಂ ವಿಪ್ರೋತ್ತಮಂ ನಿನ್ನಯ ಹರಯದವಂ ಬಂದನೊರ್ವಂ ಕುಮಾರಂ         ೨೪

ವ|| ಅಂತು ಬಂದಂತಕರಣದಿನುನ್ಮುಕ್ತನಾದಂತೆಯುಂ ಸಕಲೇಂದ್ರಿಯಂಗಳಿಂ ವಿಕಲನಾದಂತೆಯುಂ ಉತ್ತರಳಮುಖನುಂ ಉತುಲ್ಲಿತಾ ಕ್ಷನುಮೆನಿಸಿ ಬನದೊಳಲ್ಲಿಗಲ್ಲಿಗೆ ಬದ್ಧಲಕ್ಷ  ದೃಷ್ಟಿಯಿನೇನಾನುಂ ಕೆಟ್ಟುದನಱಸುವಂತೆನ್ನ ನೋಡುತ್ತಮೆಯ್ದೆವಂದು ಕಂಡಱವನಂತೆಯುಮೇನಾನುಮಂ ಪ್ರಾರ್ಥಿಪನಂತೆಯುಂ ಬೆಳಗೊಳ್ಳದೆಯುಂ ನಿಜಾವಸ್ಥೆಯಂ ನಿವೇದಿಸುವಂತೆಯುಂ ಲಜ್ಜಿಸುವಂತೆಯುಮ್ಮುಳಿಸುವಂತೆಯಮಾಗಿ

ದುಖದ ಉದ್ವೇಗದಿಂದ ನಡುಗುತ್ತಿದ್ದಾಳೆ. ಧಾರಾಕಾರವಾಗಿ ಸುರಿಯುವ ಮಳೆಯಂತೆ ಹರಿಯುತ್ತಿರುವ ಕಣ್ಣೀರುಗಳಲ್ಲಿ ತೇಲುತ್ತಾ ಅಪಾರವಾದ ದುಖದಿಂದ ಕದಡಿದ ಮನಸ್ಸುಳ್ಳವಳಾಗಿ ತಲೆ ತಗ್ಗಿಸಿಕೊಂಡಿದ್ದಾಳೆ. ಇಂತಹ ಮಹಾಶ್ವೇತೆಯನ್ನು ಚಂದ್ರಾಪೀಡನು ಕಂಡನು. ವ|| ಹಾಗೆ ನೋಡಿ ಶಂಕೆಯಿಂದ ಕೂಡಿದ ಮನಸ್ಸುಳ್ಳವನಾಗಿ ೨೨. “ಈ ಮಹಾಶ್ವೇತೆಯು ನಾನು ಬಂದರೆ ಸಂತೋಷಪಡಬೇಕಾಗಿತ್ತು. ಅದನ್ನು ಬಿಟ್ಟು ಇವಳು ಈ ರೀತಿ ಇರಲು ಕಾರಣವೇನು? ಕಾದಂಬರೀದೇವಿಗೆ ಏನೋ ಒಂದು ಅನಿಷ್ಟವುಂಟಾಗಿರಬೇಕು” ವ|| ಎಂದು ತನ್ನಲ್ಲೇ ಆಲೋಚಿಸುತ್ತಾ ಮೆಲ್ಲಮೆಲ್ಲನೆ ಹೋಗಿ ಕಲ್ಲಿನ ಮೇಲೆ ಕುಳಿತುಕೊಂಡು ಕಣ್ಣೀರಿನಿಂದ ಕಳೆಗುಂದಿದ ಮುಖವುಳ್ಳವನಾಗಿ ತರಳಿಕೆಯನ್ನು ಕುರಿತು ಇದೇನೆಂದು ಕೇಳಿದನು. “ಯುವರಾಜನು ಬಂದಿದ್ದಾನೆಂ”ದು ಮಹಾಶ್ವೇತೆಗೆ ತಿಳಿಸಿದಳು. ಬಳಿಕ ಅವಳು ದುಖಾವೇಗವನ್ನು ತಡೆದುಕೊಂಡು ಗದ್ಗದಧ್ವನಿಯಿಂದ ಕೂಡಿದ ಕೊರಳುಳ್ಳವಳಾಗಿ ಯುವರಾಜನನ್ನು ಕುರಿತು ಹೀಗೆ ಹೇಳಿದಳು. ೨೩. “ಎಲೈ ಚಕ್ರವರ್ತಿಕುಮಾರನೆ, ನಿನಗೆ ಈಗ ನಾನು ಏನು ಹೇಳಲಿ? ಸಮಸ್ತ ದುಖಗಳಿಗೂ ವಾಸಸ್ಥಾನಳಾದ, ಪ್ರಾಣದ ಮೇಲೆ ಅತ್ಯಾಶೆಯಿಂದ ಕೂಡಿಕೊಂಡಿರುವ, ನಾಚಿಕೆಯಿಲ್ಲದ ನಾನು ದುಖವೃತ್ತಾಂತಗಳನ್ನು ಕೇಳಲು ಅರ್ಹನಲ್ಲದ ನಿನಗೆ ಹಿಂದೊಮ್ಮೆ ನನ್ನ ದುಖವನ್ನು ಹೇಳಿದ್ದೆ. ಮತ್ತೆ ಈಗ ದುಖಕರವಾದ ಮತ್ತೊಂದು ವೃತ್ತಾಂತವನ್ನು ತಿಳಿಸಲು ಹೊರಟಿದ್ದೇನೆ. ವ|| ಅದೇನೆಂದರೆ, ನೀವು ಉಜ್ಜಯಿನಿಗೆ ಪ್ರಯಾಣ ಮಾಡಿದುದನ್ನು ನಾನು ಕೇಯೂರಕನ ಮಾತಿನಿಂದ ತಿಳಿದುಕೊಂಡು ತಟ್ಟನೆ ಎದೆಯೊಡೆದವಳಂತಾಗಿ ‘ಅಯ್ಯೊ, ಚಿತ್ರರಥನ ಮನೋರಥವೂ ನೆರವೇರಲಿಲ್ಲ, ಮದಿರಾದೇವಿಯ ಆಶೆಯೂ ಈಡೇರಲಿಲ್ಲ, ನನ್ನ ಇಷ್ಟವೂ ಕೈಗೂಡಲಿಲ್ಲ, ಕಾದಂಬರಿಗೆ ಪ್ರಾಣೇಶ್ವರನ ಸಮಾಗಮಸುಖವೂ ಉಂಟಾಗಲಿಲ್ಲ’ವೆಂದು ಮನನೊಂದು, ವಿರಕ್ತಿಯಿಂದ ಪ್ರಿಯಸಖಿಯಾದ ಕಾದಂಬರಿಯ ಸ್ನೇಹದ ತೊಡಕನ್ನು ಹರಿದು ಮಹಾಕಠೋರವಾದ ತಪಸ್ಸನ್ನು ಮಾಡುವುದಕ್ಕಾಗಿ ಇಲ್ಲಿಗೆ ಬಂದುಬಿಟ್ಟೆನು. ಅಷ್ಟರಲ್ಲಿ ಒಂದು ದಿನ ೨೪. ಸ್ವಲ್ಪ ಮಾತ್ರ ಕಾಣುತ್ತಿದ್ದ ನುಣುಪಾದ ಮೀಸೆಯೂ, ಬಹಳ ಮೃದುವಾದ ಹಾಗೂ ಮನೋಹರವಾದ ಕೂದಲುಗಳೂ ಶೋಭಿಸುತ್ತಿರಲು, ಯೌವನದಿಂದ ಬಹಳ ಆಕರ್ಷಕವಾದ ಕುಡಿನೋಟದಿಂದ ಮೂರು ಲೋಕವನ್ನೂ ಹುಲ್ಲುಕಡ್ಡಿಗೆ ಸಮಾನರಾದುದೆಂಬಂತೆ ಮಾಡುತ್ತ ನಿನ್ನ ಸಮಾನ ವಯಸ್ಸಿನ ಬ್ರಾಹ್ಮಣತರುಣನು ಇಲ್ಲಿಗೆ ಬಂದನು. ವ|| ಹಾಗೆ ಬಂದು ಬುದ್ಧಿಹೀನನಾದಂತೆಯೂ, ಸರ್ವೇಂದ್ರಿಯರಹಿತನಾದಂತೆಯೂ, ಅತ್ತ ಇತ್ತ ಚಲಿಸುತ್ತಲಿರುವ ಮುಖವುಳ್ಳವನಾಗಿಯೂ,

ಸುರಿತರೆ ಬಾಷ್ಪಪೂರಮೆಮೆಯಿಕ್ಕದೆ ಕೆನ್ನೆಯನೆಯ್ದೆ ನೀಳ್ದು ಬಿ
ತ್ತರಿಪ ಬೞಲ್ಪೆಳರ‍್ವೆರಸು ಸುತ್ತುವ ಮುತ್ತುವಪಾಂಗಮಾಲೆಯಿಂ
ಬರೆತೆಗೆದಪ್ಪನಪ್ಪಿದಪನೆನ್ನೊಳಪೊಕ್ಕಪನೆಯ್ದೆ ಪೀರ್ದಪಂ
ಪಿರಿದುವೆನಲ್ಕೆ ತದ್ವಿಜಕುಮಾರಕನೆನ್ನನೊಱಲ್ದು ನೋಡಿದಂ      ೨೫

ವ|| ಅಂತು ನೀಡುಂ ನೇಡುತ್ತಮೆನ್ನನಿಂತೆಂದಂ

ಭುವನದೊಳೆಲ್ಲಂ ತಂತ
ಮ್ಮ ವಯೋರೂಪಕ್ಕೆ ತಕ್ಕುದಂ ನೆಗೞ್ದೊಡೆ ಮೆ
ಚ್ಚುವರೆಳವೆಗಮಸದೃಶಮೆನಿ
ಸುವನುಷ್ಠಾನದೊಳಿದೇಕೆ ನಿನ್ನಯ ಯತ್ನಂ    ೨೬

ಇರಿಸಲ್ಕೆ ತಕ್ಕುದೊಲವಿಂ
ದುರದೊಳೆನಿಪ್ಪೊಂದು ಮಾಲತೀಮಾಲಿಕೆಯೊಳ್
ದೊರೆಯೆನಿಪ ನಿನ್ನ ತನುವಂ
ಕೊರಗಿಪುದೆ ಲತಾಂಗಿ ಘೋರತರತಪದಿಂದಂ           ೨೭

ಸುಮನೋಬಾಣಜಯಪ್ರದಾಯಕತಮಂ ನಿನ್ನೀ ತ್ರಿಲೋಕಾಭಿರಾ
ಮಮೆನಿಪ್ಪಾಕೃತಿ ದೇವದುರ್ಲಭತರಂ ನಿನ್ನೀಜಗದ್ವಂದನೀ
ಯಮೆನಿಪ್ಪದ್ವಯವಪ್ರತರ್ಕ್ಯಮಹಿಮಂ ನಿನ್ನೀ ಮಹೋದಾರಮ
ಪ್ರಮಿತೈಶ್ವರ್ಯಮೆನಲ್ಕೆ ಮತ್ತೆ ತಪದಿಂ ತನ್ವಂಗಿ ನೀಂ ವೇೞ್ಪುದೇಂ      ೨೮

ಸರಸ ಮೃಣಾಳಿಕೆಯಂ ಮೃದು
ತರ ತುಹಿನಂ ಕೊರಗಿಪಂತೆ ಶಾಂತಿರಸಕ್ಕಾ
ಗರಮೆನಿಪ ತಪಮೆ ನಿನ್ನಂ
ಕೊರಗಿಸುತಿರೆ ತರುಣಿ ಪಿರಿದುವಾಂ ಕೊರಗಿದಪೆಂ      ೨೯

ಸುಂದರಿ ಜೀವಲೋಕದ ಸುಖಕ್ಕೆ ಪರಾಙ್ಮುಖಿಯರ್ಕಳಾಗಿ ನಿ
ನ್ನೊಂದಿಗರೀ ತಪಕ್ಕೆಳಸಿದಂದು ಮನೋಜನ ಬಿಲ್ಲ ಬಲ್ಮೆ ಪೂ
ರ್ಣೇಂದುವಿನುಜ್ಜಳಿಕ್ಕೆ ಮಧುಮಾಸದ ಗೋಸನೆ ತುಂಬಿಯಿಂಚರಂ
ಬಂದೆಳಮಾವಿನೇೞ್ಗೆ ಬಗೆದಂದು ನಿರರ್ಥಕಮಾಗದಿರ್ಕುಮೇ     ೩೦

ಅರಳಿದ ಕಣ್ಣುಳ್ಳವನಾಗಿಯೂ, ಕಾಡಿನಲ್ಲಿ ಅಲ್ಲಲ್ಲಿ ನೆಟ್ಟ ಕಣ್ಣುಗಳಿಂದ ಕಳೆದುಕೊಂಡ ಏನನ್ನೋ ಹುಡುಕವಂತೆಯೂ, ನನ್ನನ್ನು ನೋಡಿ ಹತ್ತಿರಕ್ಕೆ ಬಂದು ಪರಿಚಯುವುಳ್ಳವನಂತೆಯೂ, ಏನನ್ನೋ ಬೇಡಿಕೊಳ್ಳುವವನಂತೆಯೂ, ನಾನು ಕೇಳದಿದ್ದರೂ ತನ್ನ ಅವಸ್ಥೆಯನ್ನು ಅರಿಕೆ ಮಾಡುವವನಂತೆಯೂ, ನಾಚುವವನಂತೆಯೂ ತಳಮಳಗೊಳ್ಳುವವನಂತೆಯೂ ಆದನು. ೨೫. ಕಣ್ಣೀರಿನ ಪ್ರವಾಹವು ಕೆನ್ನೆಯ ಮೇಲೆ ಸುರಿಯುತ್ತಿರಲು, ದೀರ್ಘವಾಗಿ ಹರಡುತ್ತಿರುವ ಮತ್ತು ಬಳಲಿಕೆ ಭಯಗಳನ್ನು ಸೂಚಿಸುವ, ತಿರುಗುವ ಮತ್ತು ಮುತ್ತುವ ಕುಡಿನೋಟಗಳಿಂದ ನನ್ನನ್ನು ಹತ್ತಿರಕ್ಕೆ ಎಳೆದುಕೊಳ್ಳುವವನಂತೆಯೂ, ತಬ್ಬಿಕೊಳ್ಳುವವನಂತೆಯೂ, ನನ್ನ ಒಳಗೆ ಸೇರಿಕೊಂಡುಬಿಡುವವನಂತೆಯೂ, ಸಂಪೂರ್ಣವಾಗಿ ಕುಡಿದುಬಿಡುವವನಂತೆಯೂ ಆ ಬ್ರಾಹ್ಮಣಕುಮಾರನು ನನ್ನನ್ನು ಎವೆಯಿಕ್ಕದೆ ಪ್ರೀತಿಯಿಂದ ನೋಡಿದನು! ವ|| ಹಾಗೆ ಬಹಳ ಹೊತ್ತು ನೋಡುತ್ತಾ ನನ್ನನ್ನು ಕುರಿತು ಹೀಗೆಂದನು. ೨೬. “ಈ ಪ್ರಪಂಚದಲ್ಲಿ ಎಲ್ಲರೂ ತಮ್ಮ ವಯಸ್ಸಿಗೂ ರೂಪಕ್ಕೂ ಯೋಗ್ಯವಾದುದನ್ನು ಮಾಡಿದರೆ ಜನರು ಮೆಚ್ಚುತ್ತಾರೆ. ಈ ನಿನ್ನ ಚಿಕ್ಕವಯಸ್ಸಿಗೆ ಯೋಗ್ಯವಲ್ಲದ ತಪಶ್ಚರಣೆಯಲ್ಲಿ ಏತಕ್ಕೆ ನೀನು ತೊಡಗಿರುವೆ? ೨೭. ಎಲೌ, ಬಳ್ಳಿಯಂತೆ ದೇಹವುಳ್ಳವಳೆ, ವಕ್ಷಸ್ಥಳದಲ್ಲಿ ಧರಿಸಲು ಅರ್ಹವಾದ ಮಾಲತೀಕುಸುಮಮಾಲಿಕೆಗೆ ಸಮಾನವಾದ ನಿನ್ನ ಶರೀರವನ್ನು ಕಠೋರವಾದ ತಪಸ್ಸಿನಿಂದ ಕೊರಗಿಸಬಹುದೆ? ೨೮. ಎಲೌ, ತೆಳುವಾದ ಶರೀರವುಳ್ಳವಳೆ, ಮನ್ಮಥನ ಬಾಣಗಳಿಗೆ ಜಯಗಳಿಸಿಕೊಡುವುದರಲ್ಲಿ ನೆರವಾಗುವಂತಹ ಮತ್ತು ಮೂರು ಲೋಕಗಳಲ್ಲೆಲ್ಲಾ ಅತ್ಯಂತ ರಮಣೀಯವಾದ ನಿನ್ನ ಆ ಆಕಾರವೂ, ಜಗತ್ತಿಗೆ ಪೂರ್ಜಾಹವಾದ ಅಸದೃಶವಾದ ಊಹಿಸಲಸಾಧ್ಯವಾದ ನಿನ್ನ ಪ್ರಭಾವವೂ, ಬಹಳ ಸಮೃದ್ಧಿಯಾದ, ಅಳತೆಗೆ ನಿಲುಕದ ನಿನ್ನ ಸಂಪತ್ತೂ ದೇವತೆಗಳಿಗೂ ದುರ್ಲಭವೆನಿಸಿದೆ. ಹೀಗಿರಲು ತಪಸ್ಸಿನಿಂದ ನೀನು ಬಾಡಿಸುವಂತೆ ಶಾಂತರಸಕ್ಕೆ ಮನೆಯಂತಿರುವ ತಪಸ್ಸೇ ನಿನ್ನನ್ನು ಸೊರಗುವಂತೆ ಮಾಡುತ್ತಿರುವುದರಿಂದ ನನಗೆ ಬಹಳವಾಗಿ ವ್ಯಥೆಯುಂಟಾಗಿದೆ ೩೦. ಸುಂದರಿ, ನಿನ್ನಂತಹವರು ಜೀವಲೋಕದ ಸುಖಕ್ಕೆ ವಿಮುಖವಾಗಿ

ವ|| ಎಂದಿವು ಮೊದಲಾಗಿ ಮತ್ತಮನೇಕ ಚಾಟುಚಪಲವಚನಂಗಳಂ ನುಡಿಯುತ್ತಮಿರೆ ಕೇಳ್ದು ಪುಂಡರೀಕದೇವನ ವೃತ್ತಾಂತದಿನ ಪೇತಕೌತುಕೆಯುಮಪಗತಸುಖೆಯುಮವರಿತೋ ಪಭೋಗೆಯುಮಸಂಭೂತ ಪುರಾಷಾನುರಾಗಿಯು ಮಾಗಿರ್ಪೆನದುಕಾರಣದಿಂ

ನೀನಾರ್ಗೆಬಂದೆಯೆತ್ತಣಿ
ನೇನಂ ಬೆಸಗೊಳ್ವೆಯೆನ್ನನೆಂದಾತನನಂ
ತೇನುಮನಾಂ ಬೆಸಗೊಳ್ಳದೆ
ಮೌನದಿನೊರ್ದೆಸೆಗೆ ತೊಲಗಿದೆಂ ನೃಪತಿಲಕಾ          ೩೧

ತರಳಿಕೆ ದೇವತಾರ್ಚನಕೆ ಪೂದಿಱಯುತ್ತಿರಲಾಗಳೀಕೆಯಂ
ಕರೆದೆನಗೀ ದ್ವಿಜಂ ನುಡಿವನೊಂದುವಗೆಯ್ತವ ಕಾನನಕ್ಕೆವಂ
ದಿರವಿದು ಬೇಱದೊಂದೆನಿಸದಿರ್ರ‍ಪುದೀ ಗುಹೆಯತ್ತ ಸಾರದಂ
ತಿರಲಿವನಂ ನಿವಾರಿಸುೞದಂದೆನಸುಂ ಬೞಸಂದು ಪೊರ್ದುಗುಂ           ೩೨

ವ|| ಎಂದು ಪೇೞ್ವುದುಮವಳೆನ್ನತ್ತಲಾ ದ್ವಿಜಕುಮಾರನಂ ಸಾರದಂತು ನಿವಾರಿಸುತ್ತ ಮಿರೆಯಿದೆ

ಅದಯನೆನಿಪ್ಪ ಮನ್ಮಥನ ದುರ್ಜಯವೃತ್ತಿಯದೊಂದು ಪಾ
ಪದ ಫಲದಿಂ ವಿಧಾತೃವಶದಿಂ ಭವಿತವ್ಯತೆಯಿಂದಮಿಂತು ಮಾ
ಣದೆ ದಿವಸಕ್ಕಮಿಲ್ಲಿಗಸದಾಗ್ರದಿಂದಮೆ ಬಂದು ಪೊರ್ದಲ
ಣ್ಮದೆ ಮದನಾತುರಂ ಸುೞವನೆನ್ನಯ ಕಣ್ಬೊಲದೊಳ್ ನಿರಂತರಂ        ೩೩

ವ|| ಅಂತು ಸುೞಯುತ್ತಮಿರಲೊರ್ಮೆ ಯಾಮಿನೀಯಾಮತ್ರಯಸಮಯದೊಳುತ್ಸಾರಿತ ತಮಪಟಳಮುಮುದ್ದೀಪಿತ ಮದನದಹನ ಮುಮುತ್ತೇಜಿತ ಮನೋಜಮಾರ್ಗಣಮುದ್ದಳಿತ ವಿರಹಿಹೃದಯಮುಮುತ್ಖಂಡಿತ ಮಾನಿನೀಯಮಾನಮುಮುದ್ಬಾಷ್ಟೀಕೃತ ವಿರಹಿ ಜನಮುಮೆನಿಸಿ ಚಂದ್ರಿಕಾಪಯಪೂರಮನಿಂದುಮಯೂಖಂಗಳ್ ಸುರಿಯೆ ತರಳಿಕೆ ಮದು ನಿದ್ರೆಗೆಯ್ದಳೆನಗೆ ನಿದ್ರೆಬಾರದೆ ಸಂತಪ್ತಶರೀರೆಯಾಗಿ ಗುಹೆಯಂ ಪೊಱಮಟ್ಟೆನನ್ನೆಗಂ

ಅಲರ್ದಚ್ಛೋದನವೋತ್ಪಲಪ್ರಸರ ದಿವ್ಯಾಮೋದದೊಳ್ ಸಂದು ನಿ
ರ್ಮಲ ಚಂದ್ರದ್ಯುತಿವರ್ಷಹರ್ಷಿತ ಚಕೋರಾನಂದವಾರ್ಬಿಂದು ಸಂ
ಕುಲದೊಳ್ ಮಿಂದು ಚಲಲ್ಲತಾವಳಿಗೆ ಲಾಸ್ಯಾರಂಭಮಂ ತಂದು ತ
ಣ್ಣೆಲರೂದುತ್ತಿರರಲಾನದರ್ಕೆಳಸಿ ಪಟ್ಟಿರ್ದೆಂ ಶಿಲಾಟ್ಟದೊಳ್      ೩೪

ತಪಸ್ಸು ಮಾಡಲು ಹೊರಟುಬಿಟ್ಟರೆ ಮನ್ಮಥನ ಬಿಲ್ಲಿನ ಸಾಮರ್ಥ್ಯವೂ, ಪೂರ್ಣಚಂದ್ರನ ಹೊಳಪೂ, ವಸಂತಮಾಸದ ಆಡಂಬರವೂ, ದುಂಬಿಗಳ ಮೃದುಧ್ವನಿಯೂ, ಎಳೆಮಾವಿನ ಮರಧ ಅಭಿವೃದ್ಧಿಯೂ ನಿಜವಾಗಿಯೂ ವ್ಯರ್ಥವಾಗದೆ ಇರುತ್ತದೆಯೆ?” ವ|| ಇವೇ ಮೊದಲಾದ ಅನೇಕ ಬಗೆಯ ಪ್ರಿಯವಚನಗಳನ್ನು ಹೇಳತೊಡಗಿದನು. ನಾನು ಕೇಳಿಸಿಕೊಂಡರೂ ಪುಂಡರೀಕನ ವೃತ್ತಾಂತದಿಂದ ಇಂತಹುದರಲ್ಲಿ ನನಗೆ ಆಸಕ್ತಿ ತಪ್ಪಿಹೋಗಿತ್ತು. ಸುಖವೇ ಬೇಕಿರಲಿಲ್ಲ. ಕಾಮಸುಖಾಭಿಲಾಷೆಯನ್ನಂತೂ ಬಿಟ್ಟೇ ಆಗಿತ್ತು. ಪುರುಷರಲ್ಲಿ ನನಗೆ ಪ್ರೀತಿಯೇ ಉಂಟಾಗುತ್ತಿರಲಿಲ್ಲ. ಆ ಕಾರಣದಿಂದ ೩೧. ಎಲೈ ರಾಜಶ್ರೇಷ್ಠನೆ ಕೇಳು, ಆಗ ನಾನು ಅವನನ್ನು “ನೀನು ಯಾರ ಮಗ? ಎಲ್ಲಿಂದ ಬಂದೆ? ನನ್ನನ್ನು ಏನು ಕೇಳುತ್ತಿರುವೆ? ಎಂಬುದಾಗಿ ಏನನ್ನೂ ಕೇಳದೆ, ಮಾತನ್ನೇ ಆಡದೆ ಬೇರೆ ಕಡೆಗೆ ಹೊರಟುಹೋದೆನು. ೩೨. ಆಗ ತರಳಿಕೆಯು ದೇವರ ಪೂಜೆಗೆ ಹೂ ಕೊಯ್ಯುತ್ತಿದ್ದಳು. ನಾನು ಅವಳನ್ನು ಕರೆದು “ತರಳಿಕೆ, ಈ ಬ್ರಾಹ್ಮಣನು ನನ್ನ ಬಳಿಗೆ ಬರುವ ಕಾರ್ಯವನ್ನು ಪ್ರಸ್ತಾಪಿಸುತ್ತಿದ್ದಾನೆ. ಇವನು ಈ ಕಾಡಿಗೆ ಬಂದ ರೀತಿಯನ್ನು ನೋಡಿದರೆ, ಏನೋ ಬೇರೆ ರೀತಿಯ ಅಭಿಪ್ರಾಯ ಕಂಡುಬರುತ್ತದೆ. ಈ ಗುಹೆಯ ಹತ್ತಿರಕ್ಕೆ ಅವನು ಬಾರದಂತೆ ಮಾಡು. ಇಲ್ಲದಿದ್ದರೆ ನನ್ನ ಹತ್ತಿರಕ್ಕೆ ಮತ್ತೆ ಬಂದು ಮಾತನಾಡಿಸುತ್ತಾನೆ” ವ|| ಎಂದು ಹೇಳಿದೆನು. ಅವಳು ಆ ಬ್ರಾಹ್ಮಣಕುಮಾರನನ್ನು ನನ್ನ ಕಡೆಗೆ ಬರದಂತೆ ತಡೆಯುತ್ತಿದ್ದಳು. ೩೩. ನಿಷ್ಕರುಣಿಯಾದ ಹಾಗೂ ತಡೆಯಲಸಾಧ್ಯವಾದ ವರ್ತನೆಯುಳ್ಳ ಮನ್ಮಥನ ದುಷ್ಟಕಾರ್ಯದಿಂದಲೂ, ವಿವಿಲಾಸದಿಂದಲೂ, ಹಾಗೆಯೇ ಆಗಬೇಕೆಂಬ ದೈವೇಚ್ಛೆಯಿಂದಲೂ ಅವನು ಕೆಟ್ಟ ಅಭಿನಿವೇಶದಿಂದಲೆ ಬಿಡದೆ ಪ್ರತಿದಿನವೂ ಬಂದು ಬಂದು, ನನ್ನ ಹತ್ತಿರಕ್ಕೆ ಮಾತ್ರ ಬರಲು ಅವಕಾಶವಿಲ್ಲದೆ, ಕಾಮಾತುರನಾಗಿ ನನ್ನ ದೃಷ್ಟಿಮಾರ್ಗದಲ್ಲೇ ಯಾವಾಗಲೂ ಸುಳಿದಾಡುತ್ತಿದ್ದನು. ವ|| ಹಾಗೆ ಸುಳಿದಾಡುತ್ತಿರಲು ಒಂದು ಸಲ ರಾತ್ರಿಯ ಮೂರನೆಯ ಜಾವದಲ್ಲಿ ಕತ್ತಲೆಯ ಸಮೂಹವನ್ನು ಓಡಿಸುವ ಕಾಮಾಗ್ನಿಯನ್ನು ಉರಿಸುವ, ಮದನಬಾಣಗಳನ್ನು ಚೂಪುಮಾಡುವ, ವಿರಹಿಗಳ ಹೃದಯವನ್ನು ಭೇದಿಸುವ, ಮಾನಿನಿಯರ ಪ್ರಣಯಕೋಪದ ಹಟವನ್ನು ಹಾಳುಮಾಡುವ, ವಿರಹಿಗಳನ್ನು ಬಹಳವಾಗಿ ಕಣ್ಣೀರು ಬಿಡಿಸುವ, ಬೆಳದಿಂಗಳೆಂಬ ನೀರಿನ ಪ್ರವಾಹವನ್ನು ಚಂದ್ರಕಿರಣಗಳು ಸುರಿಸುತ್ತಿರಲಾಗಿ ತರಳಿಕೆಯು ಮೈಮರೆತು ನಿದ್ರಿಸುತ್ತಿದ್ದಳು. ನನಗೆ ನಿದ್ರೆ ಬರಲಿಲ್ಲ, ಮೈಯೆಲ್ಲ ಉರಿಯುತ್ತಿತ್ತು. ಗುಹೆಯಿಂದ ಹೊರಕ್ಕೆ ಬಂದೆನು. ಆಗ ೩೪. ಅಚ್ಛೋದಸರೋವರದ ಅರಳಿರುವ ಹೊಸ ಕನ್ನೆ ದಿಲೆಯ ದಿವ್ಯವಾದ

ವ|| ಅಂತಿರ್ದ ಸುಧಾರ್ದ್ರಂಗಳಪ್ಪ ಕರಕೂರ್ಚಂಗಳಿಂ ದಿಗ್ಛತ್ತಿಗಳಂ ದವಳಿಸುತ್ತಿರ್ದ ಸುಧಾಮಯೂಖನಂ ನೀಡುಂ ನೋಡಿ

ಅಮೃತಾಸರದಿನಾವಗಂ ತ್ರಿಭುವನಕ್ಕಾನಂದಮಂ ಮಾೞ್ಪ ತ
ನ್ನ ಮರೀಚಿಪ್ರಕರಂಗಳಿಂದವೆನಗೆಂತಾನಂದಮಂ ಮಾೞ್ಪನಂ
ತೆ ಮನಂಗೊಂಡು ಮದೀಯವಲ್ಲಭನೆನಿಪ್ಪಾ ಪುಂಡರೀಕಂಗವಾ
ತ್ಮರೀಚಿವ್ರಜದಿಂದೆ ಮಾಡುಗುಮೆ ಪೇೞಾನಂದಮಂ ಚಂದ್ರಮಂ           ೩೫

ಮಿಸುಗುವ ಚಂದ್ರಮಂಡಲದಿನಂದಿೞತಂದನ ದಿವ್ಯವಾಣಿಯುಂ
ಪುಸಿಯೆನಿಸಿತ್ತು ಮಾಯ್ದೆನಗೆ ಪಾಪಿಗೆ ಮೇಣ್ ದಯೆಯಿಂದ ಜೀವಿತ
ವ್ಯಸನಿಯನಂತೆ ಜೀವಿಸುತಮಿರ್ಕಿವಳೆಂದು ಮಹಾತ್ಮನೆನ್ನನಾ
ಱಸಿದನದೆಂತುಮನ್ನಯ ಸಮೀಹಿತಮಿಂತು ವಿಳಂಬಿಸಿರ್ಕುಮೇ                         ೩೬

ತನುವನದೊರ್ಮೆಯುಂ ಮಗುೞ್ದು ತೋಱಸಲಾಱನೆ ಪುಂಡರೀಕದೇ
ವನನಿರದೆತ್ತಿಕೊಂಡು ಗಗನಕ್ಕೆ ಪರಾಸುವನಾ ವನಕ್ಕೆ ಭೋಂ
ಕನೆ ಪಿಡಿದೊಯ್ದನೇವೆನೊ ಮನಪ್ರಿಯನಕ್ಕಟ ಜೀವಿಸುತ್ತಮೆಂ
ತೆನಗೆ ಕೃಪಾಬ್ಧಿ ತಾರನೆ ಕಪಿಂಜಲಕಂ ಪ್ರಿಯನೊಂದು ವಾರ್ತೆಯಂ       ೩೭

ವ|| ಎಂದಿವು ಮೊದಲಾಗಿ ಪಲವುಮಾಲಜಾಲಂಗಳಂ ದುರ್ಜೀವಿಕಾಗೃಹೀತೆಯನೆನ್ನೊಳ್ ಚಿಂತಿಸುತ್ತಮಿರ್ಪನ್ನೆಗಮಾ ದ್ವಿಜಕುಮಾರನೆಡೆವಿಡದೆ ನಟ್ಟುಡಿದ ನನೆಯಂಬಿನ ಮೊನೆಗಳಂತೆ ನೆಗೆದ ಕಂಟಕನಿಕಾಯಮುಂ ಮದನದಹನನಿಂ ಭಸ್ಮಮಾದಂತೆ ಬೆಳರ್ಪನಪ್ಪುಕೆಯ್ದ ಮೆಯ್ಯುಮಪ್ರತಿಹತಶಾಸನನಪ್ಪ ಪುಷ್ಪಶರಾಸನನಿನವಶ್ಯಮರಣದೊಳ್ ವಧ್ಯಶಿಲಾತಲಕಟ್ಟಲೆಂದು ಕಟ್ಟಿದ ಕಟ್ಟುಗಳಂತೆ ತೊಟ್ಟ ಮೃಣಾಳವಲಯಮುಂ ಸುತ್ತಿಯಿನ್ನೆತ್ತವೋಪೆಯೆಂದು ತರ್ಜಿಸಿದ ನಿಸಾಕರನ ಕರಶಾಖೆಯಂತೆ ಕಿವಿಗವತಂಸಮಾದ ಕೇದಗೆಯೊಳ್ಗರಿಯುಂ ತನಗೆ ತಾನೆ ನೀರ್ಗೊಟ್ಟಪನೆಂಬಂತೆ

ಸುವಾಸನೆಯೊಂದಿಗೆ ಸೇರಿಕೊಂಡು, ನಿರ್ಮಲವಾದ ಬೆಳದಿಂಗಳಿನ ಪ್ರಸಾರದಿಂದ ಸಂತೋಷಗೊಂಡ ಚಕೋರಪಕ್ಷಿಗಳ ಆನಂದಬಾಷ್ಪದ ಹನಿಗಳ ಸಮೂಹದಲ್ಲಿ ಸ್ನಾನ ಮಾಡಿ, ಅಳ್ಳಾಡುತ್ತಿರುವ ಬಳ್ಳಿಗಳಿಗೆ ಮೃದುವಾದ ನೃತ್ಯವನ್ನು ಉಪದೇಶಿಸಿ ತಂಗಾಳಿಯು ಬೀಸುತ್ತಿತ್ತು. ಆಗ ನಾನು ಅದಕ್ಕೆ ಇಷ್ಟಪಟ್ಟು ಹಾಸುಗಲ್ಲಿನ ಮೇಲೆ ಮಲಗಿದ್ದೆನು. ವ|| ಹಾಗಿದ್ದ ಅಮೃತವೆಂಬ ಸುಣ್ಣದಿಂದ ನೆನೆಸಲ್ಪಟ್ಟ, ಕಿರಣಗಳೆಂಬ ಕುಂಚಗಳಿಂದ ದಿಕ್ಕೆಂಬ ಗೋಡೆಯನ್ನು ಬೆಳ್ಳಗೆ ಮಾಡುತ್ತಿದ್ದ ಚಂದ್ರನನ್ನು ಬಹಳ ಹೊತ್ತು ನೋಡುತ್ತಿದ್ದೆನು. ಆಗ ೩೫. “ಈ ಚಂದ್ರನು ಅಮೃತದಮಳೆಯಿಂದ ಮೂರುಲೋಕಕ್ಕೂ ಆನಂದನ್ನುಂಟುಮಾಡುವ ತನ್ನ ಕಿರಣಗಳಿಂದ ನನಗೆ ಈಗ ಆನಂದನ್ನುಂಟುಮಾಡುತ್ತಿದ್ದಾನೆ. ಹಾಗೆಯೆ ಕೃಪೆಯನ್ನು ನನ್ನ ಪ್ರಾಣಕಾಂತನಾದ ಪುಂಡರೀಕನಿಗೂ ನನ್ನ ಕಿರಣಪರಂಪರೆಯಿಂದ ಆನಂದವನ್ನುಂಟುಮಾಡುತ್ತಾನೆಯೆ? ೩೬. ಪಾಪಿಷ್ಠಳಾದ ನನಗೆ ಪ್ರಕಾಶಮಾನವಾದ ಚಂದ್ರಮಂಡಲದಿಂದ ಇಳಿದುಬಂದ ಮಹಾಪುರುಷನ ದಿವ್ಯವಾಣಿಯೂ ಸುಳ್ಳಾಗಿ ಹೋಯಿತಲ್ಲ ! ಅಥವಾ ಬದುಕಬೇಕೆಂಬ ಆಶೆಯನ್ನಿಟ್ಟುಕೊಂಡಿರುವ ಜೀವಗಳ್ಳಿಯಾದ ಇವಳು ಹೇಗದರೂ ಬದುಕಿರಲಿ!” ಎಂದು ಮಹಾತ್ಮನಾದ ಅವನು ಕರುಣೆಯಿಂದ ನನ್ನನ್ನು ಸಮಾಧಾನಪಡಿಸಿರಬೇಕು ! ಹಾಗಿಲ್ಲದಿದ್ದರೆ ನನ್ನ ಮನೋರಥವು ಕೈಗೂಡಲು ಹೀಗೆ ವಿಳಂಬವಾಗುತ್ತಿತ್ತೆ? ೩೭. ತಟ್ಟನೆ ಬಂದು ಮೃತನಾಗಿದ್ದ ಪುಂಡರೀಕದೇವನನ್ನು ಬಿಡದೆ ಆಕಾಶಕ್ಕೆ ಎತ್ತಿಕೊಂಡುಹೋದ ಆ ಪುರುಷನು ಯಾವನೇ ಆಗಲಿ, ಮತ್ತೊಮ್ಮೆ ಬಂದು ಕರುಣೆಯಿಂದ ನನಗೆ ಕಾಣಿಸಿಕೊಳ್ಳಬಾರದಾಗಿತ್ತೆ? ಪ್ರಾಣವೇ ಹೋಗಿದ್ದ ನನ್ನ ಪ್ರಾಣಕಾಂತನು, ಪಾಪ! ಏನು ಮಾಡುತ್ತಾನೆ? ಆದರೆ ಬದುಕಿದ್ದ ದಯಾವಂತನಾದ ಕಪಿಂಜಲನು ಬದುಕಿದ್ದೂ ಇನಿಯನ ಸಮಾಚಾರವನ್ನು ನನಗೆ ಬಂದು ತಿಳಿಸಲಿಲ್ಲವಲ್ಲ !” ಎಂದು ಚಿಂತಿಸುತ್ತಿದ್ದೆನು. ಹಾಳುಪ್ರಾಣಗಳನ್ನು ಧರಿಸಿಕೊಂಡಿರುವ ನಾನು ವ|| ಇವೇ ಮೊದಲಾದ ಹಲವು ಬಗೆಯ ಮಿಥ್ಯಾಭಿಲಾಷೆಗಳನ್ನು ಚಿಂತಿಸುತ್ತಿರುವಲ್ಲಿ, ಆ ಬ್ರಾಹ್ಮಣತರುಣನು ಸ್ವಲ್ಪವೂ ಸ್ಥಳವಿಲ್ಲದಂತೆ ನಾಟಿ ಮುರಿದಿರುವ ಮನ್ಮಥನ ಹೂವಿನ ಬಾಣದ ತುದಿಗಳಂತೆ ಕಾಣುವ ಮೇಲಕ್ಕೆದ್ದಿರುವ ರೋಮಾಂಚಗಳೂ, ಕಾಮಾಗ್ನಿಯಿಂದ ಸುಟ್ಟು ಬೂದಿಯಾದಂತೆ ಬೆಳ್ಳಗಾಗಿರುವ ದೇಹವೂ, ಜಗತ್ತಿನಲ್ಲಿ ತಡೆಯೇ ಇಲ್ಲದ ಅಪ್ಪಣೆಯುಳ್ಳ ಮನ್ಮಥನಿಂದ ನಿಶ್ಚಯವಾಗಿ ಸಾಯಲೇಬೇಕಾದ ಪ್ರಸಂಗದಲ್ಲಿ ವಧ್ಯಶಿಲೆಯ ಮೇಲೆ ಕೂರಿಸಬೇಕೆಂದು ಕಟ್ಟಿದ ಕಟ್ಟುಗಳೆಂಬಂತೆ ತೊಟ್ಟುಕೊಂಡಿರುವ ತಾವರೆದಂಟಿನ ಬಳೆಯೂ ಉಳ್ಳವನಾಗಿ ಬರುತ್ತಿದ್ದ ಅವನನ್ನು ಬಳಸಿ ಬಳಸಿ ಇನ್ನೆಲ್ಲಿಗೆ ಹೋಗುತ್ತೀಯೆಂದು ಗದರಿಸುತ್ತಿರುವ ಚಂದ್ರನ ಬೆರಳಿನಂತಿರುವ ಕಿವಿಗೆ ಮುಡಿದುಕೊಂಡಿರುವ ಕೇದಗೆಯ ಸುಂದರವಾದ ಗರಿಯೂ, ತನಗೆ ತಾನೆ ತರ್ಪಣ ಕೊಡುವಂತೆ ಒಂದೇಸಮನೆ ಸುರಿಯುವ ಕಣ್ಣೀರೂ, ತನ್ನ ಇಷ್ಟದಿಂದಲೇ ನನ್ನ ಪಾಣಿಗ್ರಹಣ ಮಾಡಲು ಮಂಗಳಸ್ನಾನ ಮಾಡಿದ್ದಾನೆಂಬಂತೆ ಹೊಮ್ಮುತ್ತಿರುವ ಬೆವರುನೀರಿನ ಪ್ರವಾಹವೂ, ಇತರರ ಮನಸ್ಸನ್ನು ತಿಳಿದುಕೊಳ್ಳದೆ ಸುಮ್ಮನೆ ಬಯಸಬೇಡವೆಂದು ಹೆಜ್ಜೆಹೆಜ್ಜೆಗೂ ತಡೆಯುವಂತೆ

ಸುರಿವ ನಿರಂತರಾಶ್ರುಪೂರಮಂ ತನ್ನಿಚ್ಚೆಯೊಳೆನ್ನ ಕೈವಿಡಿಯಲೆಂದು ಮಿಂದನೆಂಬಂತೆ ಪೊಣ್ಮುವ ಘರ್ಮೋದಕಂಗಳುಂ ಇದಿರ ಮನಮೇನೆಂದಱಯದೆಳಸರೆಂದಡಿಗಡಿಗೆ ನಿವಾರಿಸುವಂತೆ ನಿಲಿಸುವ ಊರುಸ್ತಂಭಮುಮುತ್ಕಲಿಕಾಸಹಸ್ರವಿಷಮರಾಗಸಾಗರಮನೀಸಿದಪ ನೆಂಬಂತೆನ್ನನಪ್ಪುವೞಯಾಸೆಯಿಂ ದೂರದೊಳ್ ನಿಮಿರ್ವ ನಿಡುತೋಳ್ಗಳುಂ ತನ್ನೊಳ್ ತೋ ಸತ್ವಗುಣಕ್ಕೆ ಸಾರ್ಕೆಗುಡದೆ ಕೃಪಣತೆ ಗೆಡೆಗೊಟ್ಟು ವಿರಕ್ತತೆಗೆ ಬಿಗುರ್ತು ತರಳತೆಗೆ ಕೂರ್ತು ಲಜ್ಜೆಗೆ ಗೆಂಟಾಗಿ ಧಾಷ್ಟಾ ನಭಿಮುಖನಾಗಿ ಪರಲೋಕಭಯಕ್ಕೆ ಬೆಸೆದು ಬೆಸನಕ್ಕೊಸೆದು ಯುಕ್ತಾಯುಕ್ತವಿವೇಕಕ್ಕೆ ಪಿಂತೆಗೆದು ಉನ್ಮತ್ತನಂತಚ್ಚಬೆಳ್ದಿಂಗಳೊಳೊಯ್ಯನೊಯ್ಯನೆ ಬರುತಿರ್ದನನಾಂ ದೂರದೊಳ್ ಕಂಡು ಭಯಂಗೊಂಡು

ಎಲೆ ಕೇಡಾಯ್ತೆನಗೋವೊ ಮತ್ತಮಿವನೆನ್ನಂ ಕೆಯ್ಯೊಳಂ ಬಂದು ಮು
ಟ್ಟಲೊಡಂ ಪತ್ತುವಿಡಲ್ಕೇವೇೞ್ಕುವಸುವಂ ಮೆಯ್ಯೊಡ್ಡಿದೆಂ ದುಖಸಂ
ಕುಲಕೋರಂತಿರೆ ಪುಂಡರೀಕನನೆ ಮತ್ತಂ ಕಾಣ್ಬೆನಾನೆಂದ ನಿ
ಪಲಮಾಯ್ತಕ್ಕಟ ಮಂದಭಾಗ್ಯೆಗೆನಗಿಂತೀ ಪ್ರಾಣಸಂಧಾರಣಂ   ೩೮

ವ|| ಎಂದೆನ್ನೊಳ ಬಗೆಯುತ್ತಿರ್ದೆನನ್ನೆಗವಾತಯ್ದೆವಂದೆನ್ನನಿಂತೆಂದಂ

ಎಲೇ ಕುಮುದನೇತ್ರೆ ಮನ್ಮಥಸಹಾಯನೀ ಚಂದ್ರಮಂ
ಕೊಲಲ್ ಬಗೆದನೆನ್ನನಾರ್ತನನಾಥನಂ ದುಖಿಯಂ
ಪಲುಂಬಿ ಮವೊಕ್ಕೆನಾಂ ನಿನಗನಮೀ ಜೀವಿತಂ
ವಿಲಂಬಿಸದೆ ರಕ್ಷಿಸೆನ್ನನಱಯೆಂ ಪ್ರತೀಕಾರಮಂ          ೩೯

ಶರಣಾಗತಜನಭರಣಂ
ಪರತರಧರ್ಮಂ ತಪಸ್ವಿಗಳ್ಗದಱಂದಂ
ಪೊರೆಯೆನ್ನನಿಲ್ಲದೊಡೆ ಹಾ
ಸ್ಮರಶೀತಮಯೂಖರಿಂದೆ ಹತನಾದಪ್ಪೆಂ      ೪೦

ವ|| ಅದಂ ಕೇಳಲೊಡಮೆನ್ನ ನೆತ್ತಿಯೊಳುರಿ ಮಸಗಿದಂತಾಗೆ ಕಿನಿಸು ಕೆಯ್ಮಣ್ಮೆ ಕಣ್ಗಳಿಂದುಗುತರ್ಪ ಕಂಬನಿಗಿಡಿಗಳಿಂದುರುಪುವಂತವನಂ ನೀಡುಂ ನೋಡುತ್ತಾವಿಷ್ಟೆಯಂತೆನ್ನನಾನಱಯದೆ

ನುಡಿವನ್ನನೆನ್ನನೀ ಪರಿ
ಸಿಡಿಲೇತಕೆ ಕೆಡೆದುದಿಲ್ಲ ನಿನ್ನಯ ಸಿರದೊಳ್
ಉಡುಗಿದುದಿಲ್ಲಮುಸಿರ್ ನೂ
ರ್ಮಡಿಯೆನಲೀ ಜಿಹ್ವೆ ಬಿಱದುದಿಲ್ಲ ದುರಾತ್ಮಾ            ೪೧

ನಿಲ್ಲಿಸುತ್ತಿರುವ ಕಂಭದಂತಿರುವ ತೊಡೆಗಳು (ಭಯದಿಂದ ತೊಡೆ ಮುಂದುವರಿಯುತ್ತಿರಲಿಲ್ಲ), ಸಾವಿರಾರು ಬಯಕೆಗಳೆಂಬ ತೆರೆಗಳಿಂದ ಕಷ್ಟಕರವಾದ, ಪ್ರೀತಿಯೆಂಬ ಕಡಲನ್ನು ದಾಟುತ್ತಿರುವವನಂತೆ ನನ್ನನ್ನು ಆಲಂಗಿಸಿಕೊಳ್ಳಬೇಕೆಂಬ ಹುಸಿಯಾಸೆಯಿಂದ ದೂರದಲ್ಲೇ ಮೇಲಕ್ಕೆತ್ತಿರುವ ನೀಳವಾದ ತೋಳುಗಳೂ ತನ್ನಲ್ಲಿ ಕಾಣುತ್ತಿರಲು, ಸತ್ವಗುಣಕ್ಕೆ ಅವಕಾಶಕೊಡದೆ ಕೇವಲ ದೈನ್ಯಕ್ಕೆ ಅವಕಾಶಕೊಟ್ಟು, ವಿರಕ್ತಿಯಿಂದ ದೂರಸರಿದು, ಚಾಪಲ್ಯಕ್ಕೆವಶನಾಗಿ, ಲಜ್ಜೆಗೆ ದೂರಸರಿದು, ದಿಟ್ಟತನಕ್ಕೆ ಬೆನ್ನುತಿರುಗಿಸಿ, ಪರಲೋಕಭಯಕ್ಕೆ ವಿಮುಖವಾಗಿ, ಹಂಬಲಕ್ಕೆ ಒಲಿದು, ಯುಕ್ತಾಯುಕ್ತವಿಚಾರಕ್ಕೆ ಹಿಮ್ಮೆಟ್ಟಿ, ಹುಚ್ಚನಂತೆ ಸ್ವಚ್ಛವಾದ ಬೆಳದಿಂಗಳಲ್ಲಿ ಮೆಲ್ಲಮೆಲ್ಲನೆ ಬಂದನು. ಅವನನ್ನು ನಾನು ದೂರದಿಂದಲೆ ನೋಡಿ ಭಯಪಟ್ಟೆನು. ೩೮. “ಅಯ್ಯೊ, ನನಗೊಳ್ಳೆಯ ಕಷ್ಟಬಂತಲ್ಲ ! ಇವನೇನಾದರೂ ಬಂದು ನನ್ನನ್ನು ಕೈಯಿಂದ ಮುಟ್ಟಿಬಿಟ್ಟರೆ ಈ ಪ್ರಾಣವನ್ನು ಬಿಟ್ಟುಬಿಡಬೇಕಾಗುತ್ತದೆ. ಪುಂಡರೀಕನನ್ನು ಮತ್ತೆ ಕಾಣುವೆನೆಂಬ ಒಂದು ಆಶೆಯಿಂದಲೇ ಒಂದೇಸಮನಾಗಿ ದುಖಪರಂಪರೆಯನ್ನು ಅನುಭವಿಸಿಕೊಂಡು ಬಂದೆ. ಅಯ್ಯೊ, ಮಂದಭಾಗ್ಯಳಾದ ನನಗೆ ಪ್ರಾಣವನ್ನು ಉಳಿಸಿಕೊಂಡಿರುವುದು ವ್ಯರ್ಥವಾಯಿತು.” ವ|| ಎಂದು ನನ್ನಲ್ಲೆ ಯೋಚಿಸುತ್ತಿರುವಷ್ಟರಲ್ಲಿ ಆತನು ಹತ್ತಿರಬಂದು ನನ್ನನ್ನು ಕುರಿತು ಹೀಗೆಂದನು, ೩೯. “ಎಲೈ ನೈದಿಲೆಯಂತೆ ಕಣ್ಣುಳ್ಳವಳೆ, ಮನ್ಮಥನಿಗೆ ಸಹಾಯಕನಾದ ಈ ಚಂದ್ರನು ಕಷ್ಟಕ್ಕೆ ಸಿಕ್ಕಿರುವ, ಅನಾಥನಾದ ಹಾಗೂ ದುಖಿಯಾದ ನನ್ನನ್ನು ಕೊಲ್ಲಲು ಹೊರಟಿದ್ದಾನೆ. ನಾನು ಹಲುಬುತ್ತಾ ನಿನ್ನ ಮರೆಹೊಕ್ಕಿದ್ದೇನೆ. ಈಗ ನನ್ನ ಪ್ರಾಣವು ನಿನ್ನ ಕೈಯಲ್ಲಿದೆ. ವಿಳಂಬಮಾಡದೆ ನನ್ನನ್ನು ಕಾಪಾಡು. ಇದಕ್ಕೆ ಏನುಮಾಡಬೇಕೆಂಬುದೇ ನನಗೆ ಗೊತ್ತಾಗುತ್ತಿಲ್ಲ. ೪೦. ತಪಸ್ವಿಗಳಿಗೆ ಶರಣಾಗತರನ್ನು ಕಾಪಾಡುವುದೇ ಬಹಳ ಶ್ರೇಷ್ಠವಾದ ಧರ್ಮ. ಅದರಿಂದ ನನ್ನನ್ನು ಕಾಪಾಡು. ಇಲ್ಲದಿದ್ದರೆ, ಅಯ್ಯೋ ಮನ್ಮಥ ಮತ್ತು ಈ ಚಂದ್ರ ಇಬ್ಬರೂ ನನ್ನನ್ನು ಕೊಂದುಬಿಡುತ್ತಾರೆ !” ವ|| ಅವನ ಮಾತನ್ನು ಕೇಳಿದ ಕೂಡಲೆ ನನ್ನ ನೆತ್ತಿಗೆ ಉರಿ ಹತ್ತಿದಂತಾಗಿ ಕೋಪವು ಹೆಚ್ಚಲು, ಕಣ್ಣುಗಳಿಂದ ಹೊರಡುತ್ತಿರಲು ಕಣ್ಣೀರೆಂಬ ಬೆಂಕಿಕಿಡಿಗಳಿಂದ ಅವನನ್ನು ಸುಟ್ಟುಬಿಡುವವಳಂತೆ ದೃಷ್ಟಿಸಿ ನೋಡುತ್ತಾ, ಆವೇಶಗೊಂಡವಳಂತೆ ನನ್ನನ್ನೆ ನಾನು ಅರಿಯದೆ ಹೋದೆನು. ೪೧. “ಎಲೋ ದುಷ್ಟನೆ ನನಗೆ ಈ ರೀತಿ ಹೇಳುತ್ತಿರುವ ನಿನ್ನ ತಲೆಯ ಮೇಲೆ ಸಿಡಿಲು ಏಕೆ ಬೀಳಲಿಲ್ಲ? ನಿನ್ನ ಉಸಿರು ಏಕೆ ಉಡುಗಿ ಹೋಗಲಿಲ್ಲ? ನಿನ್ನ ನಾಲಿಗೆಯೇಕೆ