ಖಲ ನಿನ್ನೀ ತನು ಪಂಚಭೂತಮಯಮಲ್ತಂತಾಗೆ ನಿನ್ನಂ ರಸಾ
ತಲಮಂ ಪೊರ್ದಿಸದಾಯ್ತದೇಕಿಳೆ ಮರುತ್ತೇಕೊಯ್ಯದಾಯ್ತೊರ್ಮೊದಲ್
ಜಲಮೇಕಾಳಿಸದಾದುದೋ ದಹಿಸಲಿಲ್ಲೇತರ್ಕೆ ತಾನಗ್ನಿ ಪೇ
ೞೆಲೆ ಪಾಪಾತ್ಮನೆ ತನ್ನವೋಲೆಸಗಲಿಲ್ಲೇಕಾಗಸಂ ಶೂನ್ಯನಂ    ೪೨

ಈ ತೆಱದಿಂದಂ ಗಳಹುವ
ಪಾತಕಿ ನೀಂ ನೀತಿಮಾರ್ಗವಱಯದ ತಿರ್ಯ
ಗ್ಜಾತಿಯೊಳೆ ಜನ್ಮವೆತ್ತದ
ದೇತರ್ಕೆ ಮನುಷ್ಯಜಾತಿಯೊಳ್ ಜನಿಯಿಸಿದೈ           ೪೩

ವ|| ಮತ್ತಮೆಲೆ ಮತ್ತ ನೀನಿಂತು ನಗೆಗೀಡಾದ ನುಡಿಗಳಂ ನುಡಿಯುತ್ತಮೆನಗೆ ಮುಳಿಸನಾದೊಡಂ ಪುಟ್ಟಿಸಲಿಲ್ಲಮದುಕಾರಣದಿಂ ನಿನ್ನ ನುಡಿಗನುರೂಪಮಪ್ಪ ಜಾತಿಯೊಳ್ ಪುಟ್ಟಿದೊಡೆಮ್ಮನ್ನರನೆಂದುಂ ಕಾಮಿಸೆಯೆಂದು ನುಡಿದೊಡನಾಂ ಚಂದ್ರಾಭಿಮುಖಿಯಾಗಿ ಕೆಯ್ಗಳಂ ಮುಗಿದು ಮಹಾಭಾಗ ಸಕಲಭುವನಚೂಡಾಮಣಿಯಪ್ಪ ರೋಹಿಣೀರಮಣ ಪುಂಡರೀಕನನಾಂ ನೋಡಿದಂದಿನಿಂ ಮತ್ತೊರ್ವ ಪುರುಷನಂ ಮನದೊಳಾದೊಡಂ ಭಾವಿಸದಿರ್ದುದು ನನ್ನಿಯಪ್ಪೊಡೀಯಳೀಕಕಾಮಿಯಾನುಸಿರ್ದಂತೆ ಗಿಳಿಯಾಗಿ ಪುಟ್ಟುಗೆಂದು ಶಪಿಸಲೊಡನೆ

ಸಹಿಸಲಸಹ್ಯಮಪ್ಪು ಮದನಜ್ವರವೇಗದೆ ಮೇಣ್ ನಿಜಾಘ ದು
ರ್ವಹಪರಿಪಾಕದಿಂ ಬಗೆಯಲಲ್ಲದೊಡೆನ್ನಯ ತೀವ್ರಶಾಪವಾ
ಙ್ಮಹಿಮೆಯಿನಾತನಂದು ಕಡಿದಿಕ್ಕಿದ ಪೆರ್ಮರನಂತೆವೋಲದೇ
ನಹಹ ನಿರೂಪಿಪೆಂ ಕೆಡೆದು ಪೊಂದಿದನಾಯಿಳೆಯಲ್ಲಚೇತನಂ ೪೪

ವ|| ಅದಂ ಕಂಡತಿದುಖಿತರಪ್ಪ ಪರಿಜನಂಗಳ ಮುಖದಿಂದೀತಂ ಭವತ್ಪ್ರಿಯವಯಸ್ಯ ನೆಂದಱದಾಂ ಕಡುದುಗುಡಂದಳೆದಿದೇನೆಂದು ಕಂಬನಿಗಳಂ ಬಿಡುತ್ತೆ ಲಜ್ಜಾವನತಮುಖಿ ಯಾಗಿರ(ರ್ದಳಂ)ಲೆನ್ನಂ ಕುರಿತು ಚಂದ್ರಾಪೀಡಂ

ಪಿರಿದುಂ ನೀನೊಲವಿಂದೆ ಯತ್ನಿಸಿದೊಡಂ ಕಾದಂಬರೀದೇವಿಯಾ
ಚರಣೋಪಾಸನ ಸೌಖ್ಯಮಾದೊಡೆನಗಾದತ್ತಿಲ್ಲಮೀ ಪುಟ್ಟಿನೊಳ್
ದೊರೆಕೊಳ್ವಂತದು ತಾನೊಡರ್ಚು ಮಱುವುಟ್ಟಲ್ಲಾದೊಡಂ ನೀನೆಯೆಂ
ದೊರೆವನ್ನಂ ಬಿಱದತ್ತು ಭೋಂಕನೆರ್ದೆ ತದ್ರಾಜೇಂದ್ರಚಂದ್ರಾಂಕನಾ       ೪೫

ನೂರಾರು ಚೂರಾಗಿ ಬಿರಿದುಹೋಗಲಿಲ್ಲ? ೪೨. ಎಲೋ ದುಷ್ಟ, ನಿನ್ನ ದೇಹವು ಪಂಚಭೂತಗಳಿಂದ ಹುಟ್ಟಿದುದಲ್ಲವೆಂದು ಕಾಣುತ್ತದೆ? ಹಾಗೆ ಹುಟ್ಟಿದ್ದರೆ ಭೂಮಿಯು ನಿನ್ನನ್ನು ಪಾತಾಳಕ್ಕೆ ಏಕೆ ತಳ್ಳಲಿಲ್ಲ? ವಾಯು ಏಕೆ ಹಾರಿಸಿಕೊಂಡು ಹೋಗಲಿಲ್ಲ! ನೀನು ಏಕೆ ಮೊದಲೆಕೊಚ್ಚಿಕೊಂಡು ಹೋಗಲಿಲ್ಲ? ಅಗ್ನಿಯೇಕೆ ನಿನ್ನನ್ನು ಸುಡಲಿಲ್ಲ? ಎಲೋ ಪಾಪಿಷ್ಠ! ಆಕಾಶವು ನಿನ್ನನ್ನು ತನ್ನಂತೆಯೆ ಏಕೆ ಶೂನ್ಯನನ್ನಾಗಿ ಮಾಡಲಿಲ್ಲ, ಹೇಳು? ೪೩. ಎಲೊ ಪಾಪಿ. ಹೀಗೆ ಬೊಗಳುವ ನೀನು ನೀತಿಮಾರ್ಗವನ್ನು ತಿಳಿದುಕೊಂಡಿಲ್ಲದ ತಿರ್ಯಗ್ಜಾತಿಯಲ್ಲಿ ಜನ್ಮವೆತ್ತದೆ ಮನುಷ್ಯಜಾತಿಯಲ್ಲಿ ಏಕೆ ಹುಟ್ಟಿವೆ? ವ|| ಎಲೋ ಮತ್ತ ! ನೀನು ಹೀಗೆ ಮಾತುಗಳನ್ನು ಹೇಳುತ್ತಿದ್ದರೂ ನನಗೆ ಕೋಪವೇನೂ ಬರಲಿಲ್ಲ ! ಆ ಕಾರಣದಿಂದ ನಿನ್ನ ಈ ಮಾತುಗಳಿಗೆ ಅನುರೂಪವಾದ ಜಾತಿಯಲ್ಲಿ ನೀನು ಹುಟ್ಟಿಬಿಟ್ಟರೆ ನಮ್ಮಂತಹವರನ್ನು ಮೋಹಿಸುವುದಿಲ್ಲ !” ಎಂದು ಹೇಳಿ, ಚಂದ್ರನ ಕಡೆಗೆ ಮುಖಮಾಡಿಕೊಂಡು “ಸಮಸ್ತ ಪ್ರಪಂಚಕ್ಕೂ ಚೂಡಾಮಣಿಯಂತಿರುವ ಮಹಾತ್ಮನಾದ ಚಂದ್ರನೆ, ನಾನು ಪುಂಡರೀಕನನ್ನು ನೋಡಿದಾರಭ್ಯ ಮತ್ತೊಬ್ಬ ಪುರುಷನನ್ನು ಮನಸಿನಲ್ಲಾದರೂ ಚಿಂತಿಸದಿರುವುದು ಸತ್ಯವಾಗಿದ್ದ ಪಕ್ಷದಲ್ಲಿ ನಿರರ್ಥವಾಗಿ ಬಯಸುವ ಈ ಕಾಮನು ಗಿಳಿಯಾಗಿ ಹುಟ್ಟಲಿ!” ಎಂದು ಶಾಪವನ್ನು ಕೊಟ್ಟೆನು. ಕೂಡಲೆ ೪೪. ಸಹಿಸಲಸಾಧ್ಯವಾದ ಕಾಮಜ್ವರದಿಂದ ತೀಕ್ಷ ತೆಯಿಂದಲೋ ಅಥವಾ ತನ್ನ ಪಾಪದ ತಾಳಲಾರದ ಪರಿಣಾಮದಿಂದಲೋ ಅಥವಾ ನನ್ನ ತೀವ್ರವಾದ ಶಾಪವಚನಪ್ರಭಾವದಿಂದಲೂ ಕಾಣೆ, ಅಯ್ಯೋ, ಏನು ಹೇಳಲಿ ! ಆತನು ಕೂಡಲೆ ಕತ್ತರಿಸಿದ ಹೆಮ್ಮರದಂತೆ ಅಚೇತವಾಗಿ ಸತ್ತು ನೆಲಕ್ಕೆ ಬಿದ್ದನು! ವ|| ಅದನ್ನು ನೋಡಿ ಅತಿದುಖಿತರಾದ ಆತನ ಪರಿಜನರ ಬಾಯಿಂದ, ಅವನು ನಿನ್ನ ಆಪ್ತಮಿತ್ರನೆಂದು ತಿಳಿದುಕೊಂಡ ನಾನು ಬಹಳ ವಿಷಾದಪಡುತ್ತಿದ್ದೇನೆ” ಎಂದು ಕಣ್ಣೀರನ್ನು ಬಿಡುತ್ತ ಮಹಾಶ್ವೇತೆಯು ನಾಚಿಕೆಯಿಂದ ಮುಖವನ್ನು ತಗ್ಗಿಸಿದಳು. ಅವಳನ್ನು ಕುರಿತು ಚಂದ್ರಾಪೀಡನು

೪೫. “ಪೂಜ್ಯಳೆ, ನೀನು ಮಮತೆಯಿಂದ ಬಹಳವಾಗಿ ಪ್ರಯತ್ನಿಸಿದರೂ ಕಾದಂಬರೀದೇವಿಯ ಪಾದಸೇವೆಯ ಸುಖವು ನನಗೆ ಈ ಜನ್ಮದಲ್ಲಿ ಲಭಿಸಲಿಲ್ಲ. ಆದ್ದರಿಂದ ಮುಂದಿನ ಜನ್ಮದಲ್ಲಾದರೂ ಅದು ನನಗೆ ಲಭ್ಯವಾಗುವಂತೆ ನೀನು ಮಾಡಬೇಕು” ಎಂದು ಹೇಳುತ್ತಿರು

ವ|| ಅನಂತರಂ ತರಳಿಕೆ ಮಹಾಶ್ವೇತೆಯಂ ಬಿಟ್ಟು ಭೋರನೆ ಚಂದ್ರಾಪೀಡಶರೀರಮಂ ಸಾರ್ದು ಹಾ ದೇವ! ಚಂದ್ರಾಪೀಡನ ಕಾದಂಬರಿಯನುೞದೆತ್ತ ಪೋಪೆಯೆಂದು ಬಾಯೞದು ಪಳವಿಸುತ್ತಮಿರ್ದಳ್ ಮಹಾಶ್ವೇತೆಯುಂ ಚಂದ್ರಾಪೀಡಮುಖನಿಹಿತ ನಿಶ್ಚಲಸ್ತಬ್ಧದೃಷ್ಟಿಯಾಗಿ ಮರಣಸಮಾಸಾದಿತೆಯಾದಂತೆ ಮೂರ್ಛೆಗೆ ಸಂದಳಿತ್ತಲನಂತರಂ ತತ್ಸಮಾಸನ್ನ ಪರಿಜನಂ ಪ್ರಲಾಪಂಗೆಯ್ಯುತ್ತವನಿತಲದೊಳ್ ಕೆಡೆದು ವಿಗತಚೇತನನಾದ ಕುಮಾರನಂ ಕಂಡು ಕೆಟ್ಟೆವಿದೇನೆಂದು ರಾಜಪುತ್ರರುಮುದ್ಭಾ ಂತರಾಗಿ ಚಂದ್ರಾಪೀಡನನುಗಮನಮೇ ಕರಣೀಯವೆಂದು ನಿಶ್ಚೆ ಸಿರ್ದರನ್ನೆಗಮಿತ್ತ ಕಾದಂಬರಿಯ ಪರಿಜನಂ

ತಮತಮಗೊಲವಿಂ ಶ್ವೇತಾ
ಶ್ರಮಕ್ಕೆ ತಾಂ ಬಂದನಕಹರ್ಷದೆ ನೃಪಚಂ
ದ್ರಮನೆಂದು ಭೋಂಕನತಿ ಸಂ
ಭ್ರಮದಿಂ ಗಂಧರ್ವಕನ್ಯೆಗಱಪಿದರಾಗಳ್       ೪೬

ವ|| ಅಂತಱಪೆ ಚಂದ್ರೋದಯೋಲ್ಲಸಿತೆಯಪ್ಪುದವೇಲೆಯಂತೆ ಸಮಕರಧ್ವಜೆಯಾಗಿ ಮನದೊಳಗೆ ಗುಡಿಗಟ್ಟಿ ಮಹಾಶ್ವೇತೆಯಲ್ಲಿಗೆ ಪೋದಪ್ಪೆನೆಂದು ಜನನೀಜನಕರಿಂ ಕೃತಾನುeಯಾಗಿ ಕಾದಬಂರಿ ಕೆಯ್ಗೆಯ್ದು ರಸನ್ಮಣಿನೂಪುರಕಲಾಪೆಯರುಂ ಮುಖರ ಮೇಖಲಾದಾಮ ಸಂದಾನಿತಜಘನೆಯರುಂ ರಮ್ಯೋಜ್ವಲಾಕಲ್ಪೆಯರುಂ ಗೃಹೀತಸುರಭಿಮಾಲ್ಯಾನು ಲೇಪನಪಟವಾಸಾದ್ಯುಪಕರಣೆಯರುಮೆನಿಸಿದ ಕೇಲಂಬ ರಾಪ್ತಪರಿಚಾರಿಕೆಯರ್ವೆರಸು ಕೇಯೂರ ಕೋಪದಿಶ್ಯಮಾನ ಮಾರ್ಗೆಯುಮೆನಿಸಿ ಪತ್ರಲೇಖಾಹಸ್ತಾವಲಂಬಿನಿಯುಮಾಗಿ ಬರುತಂ ಮದಲೇಖಗಿಂತೆಂದಳ್

ಅಱವೋ ನಿಸ್ಸೇಹನೆನ್ನಂ ಹಿಮಗೃಹಕದೊಳಂತಿರ್ದಳಂ ಕಂಡು ಮತ್ತಂ
ಪೆಱವೋದಂ ದುರ್ವಿದಗ್ಧಂ ಕಠಿನಹೃದಯನಾಂ ಸತ್ತೊಡಂ ನಂಬನೆನ್ನಂ
ಮಱುಗುತ್ತಿರ್ದಪ್ಪಳಿಂದೆಂದೆಣಿಸಿ ನುಡಿದೊಡಂ ಪೇೞೆನಾನೇನುಮಂ ಕೇಳ್
ಪೆಱತೇಂ ಸಾರ್ತಂದವಂ ಕಾಲ್ವಿಡಿದೊಡಮೊಸೆಯೆಂ ಪದ್ಮಪತ್ರಾಯತಾಕ್ಷೀ          ೪೭

ವ|| ಎಂದು ನುಡಿಯುತ್ತಂ ಚಂದ್ರಾಪೀಡದರ್ಶನೋತ್ಕಂಠೆಯಾಗಿ ಕಾದಂಬರಿ ಮಹಾಶ್ವೇತಾಶ್ರಮಕ್ಕೆ ವಂದು ನೆರೆದಿರ್ದ ರಾಜಲೋಕದ ನಡುವೆ ತಿರೋಹಿತಾಮೃತಮಪ್ಪ ರತ್ನಾಕರ ಮುಮನಂತಪ್ರವಿಷ್ಟ ಕಮಲಮಪ್ಪ ಪದ್ಮಾಕರಮುಮಂ ಜಲಧರಪಟಲಾಂತರಿತೇಂದುವಪ್ಪ

ವಂತೆಯೇ ಆ ಚಂದ್ರಾಪೀಡನ ಎದೆಯು ತಟ್ಟನೆ ಒಡೆದುಹೋಯಿತು ! ವ|| ಬಳಿಕ ತರಳಿಕೆಯು ಮಹಾಶ್ವೇತೆಯನ್ನು ಬಿಟ್ಟು ಕೂಡಲೆ ಚಂದ್ರಾಪೀಡನ ಶರೀರದ ಹತ್ತಿರಕ್ಕೆ ಬಂದು “ಅಯ್ಯೋ ಸ್ವಾಮಿ, ಚಂದ್ರಾಪೀಡ, ಕಾದಂಬರಿಯನ್ನು ಬಿಟ್ಟು ಎಲ್ಲಿಗೆ ಹೋದೆ” ಎಂದು ಬಾಯಿಬಾಯಿ ಬಿಟ್ಟು ಗೋಳಾಡತೊಡಗಿದಳು. ಮಹಾಶ್ವೇತೆಯೂ ಚಂದ್ರಾಪೀಡನ ಮುಖವನ್ನು ನಿಶ್ಚಲವಾದ ದೃಷ್ಟಿಯನ್ನಿರಿಸಿ ಮರಣ ಹೊಂದಿದವಳಂತೆ ಮೂರ್ಛೆಗೊಂಡಳು. ಬಳಿಕ ಚಂದ್ರಾಪೀಡನ ಸಮೀಪದಲ್ಲಿದ್ದ ಪರಿಜನರು ಪ್ರಲಾಪಿಸುತ್ತಿರಲು, ಭೂಮಿಯ ಮೇಲೆ ಬಿದ್ದು ಪ್ರಾಣಬಿಟ್ಟಿರುವ ಯುವರಾಜನನ್ನು ಕಂಡು “ಅಯ್ಯೋ ಕೆಟ್ಟೆವಲ್ಲ! ಇದೇನಿದು!” ಎಂದು ಅರಸುಮಕ್ಕಳೆಲ್ಲರೂ ಗಾಬರಿಗೊಂಡು ತಾವೂ ಚಂದ್ರಾಪೀಡನನನ್ನೇ ಹಿಂಬಾಲಿಸಿ ಸಾಯಬೇಕೆಂದು ನಿಶ್ಚಯಿಸಿದರು. ಈ ಕಡೆಯಲ್ಲಿ ಕಾದಂಬರಿಯ ಪರಿವಾರದವರು ೪೬. “ಚಂದ್ರಾಪೀಡನು ಮಹಾಶ್ವೇತಾಶ್ರಮಕ್ಕೆ ಬಹಳ ಸಂತೋಷದಿಂದ ಬಂದಿದ್ದಾನೆ” ಎಂದು ತಾವು ತಾವೇ ಬಹಳ ಪ್ರೀತಿಯಿಂದ ತಟ್ಟನೆ ಸಂಭ್ರಮದಿಂದ ಬಂದು ಕಾದಂಬರಿಗೆ ಆಗ ತಿಳಿಸಿದರು ವ|| ಹಾಗೆ ತಿಳಿಸಲಾಗಿ ಕಾದಂಬರಿಯು ಚಂದ್ರೋದಯದಿಂದ ಉಕ್ಕುತ್ತಿರುವ ಸಮುದ್ರದಂತೆ ಸಮಕರಧ್ವಜಳಾಗಿ (೧. ಕಾಮಪರವಶಳಾಗಿ, ೨. ಮೊಸಳೆಯ ಬಾವುಟವುಳ್ಳದ್ದಾಗಿ, ಸಮುದ್ರದೇವನಿಗೆ ಮೊಸಳೆಯ ಬಾವುಟ) ಸಂತೋಷಪಟ್ಟು, ಮಹಾಶ್ವೇತೆಯ ಬಳಿಗೆ ಹೋಗಿ ಬರುತ್ತೇನೆಂದು ತಾಯಿ ತಂದೆಗಳಿಂದ ಅನುಮತಿಯನ್ನು ಪಡೆದು ಹೊರಟಳು, ಒಡವೆಗಳನ್ನು ಧರಿಸಿ ಧ್ವನಿಮಾಡುತ್ತಿರುವ ರತ್ನದ ಕಾಲಗಡಗವನ್ನು ಹಾಕಿಕೊಂಡು, ಸೊಂಟದಲ್ಲಿ ಧ್ವನಿ ಮಾಡುತ್ತಿರುವ ಡಾಬನ್ನು ಧರಿಸಿಕೊಂಡಿರುವ ಸುಂದರವಾದ ವೇಷಭೂಷಣಗಳುಳ್ಳ, ಹೂವಿನ ಸರ, ಗಂಧ, ಬುಕ್ಕಿಹಿಟ್ಟು ಮೊದಲಾದ ಸಾಮಗ್ರಿಗಳನ್ನು ತೆಗೆದುಕೊಂಡಿರುವ ಕೆಲವರು ಆಪ್ತರಾದ ಪರಿಚಾರಿಕೆಯರೊಂದಿಗೆ ಕೂಡಿಕೊಂಡು, ಕೇಯೂರಕನು ದಾರಿಯನ್ನು ತೋರಿಸುತ್ತಿರಲು, ಪತ್ರಲೇಖೆಯ ಕೈಯನ್ನು ಹಿಡಿದುಕೊಂಡು ಬರುತ್ತಾ ಮದಲೇಖೆಯನ್ನು ಕುರಿತು ಹೀಗೆ ಹೇಳಿದಳು. ೪೭. “ಕಮಲನೇತ್ರೆ ನಿನಗೆ ಗೊತ್ತಿದೆಯಲ್ಲ, ಆ ಪ್ರೀತಿಯೇ ಇಲ್ಲದವನು, ಹಿಂದೆ ಹಿಮಗೃಹದಲ್ಲಿ ಆ ರೀತಿಯಲ್ಲಿ ಸಂಕಟಪಡುತ್ತಿದ್ದ ನನ್ನನ್ನು ಕಣ್ಣಾರ ನೋಡಿದರೂ ಮತ್ತೆ ಹಿಂದಕ್ಕೆ ತನ್ನೂರಿಗೆ ಹೊರಟುಹೋದನು. ಇಂತಹ ಕಠಿನಚಿತ್ತನಾದ ಅವನು ನಾನು ಸತ್ತರೂ ನನ್ನನ್ನು ನಂಬುವುದಿಲ್ಲ ! ಈಗೇನೋ ಸಂಕಟಪಡುತ್ತಿದ್ದಾಳೆ ಎಂದು ತಿಳಿದುಕೊಂಡು ಬಂದು ನನ್ನನ್ನು ಮಾತನಾಡಿದರೂ ನಾನು ಮಾತನಾಡುವುದಿಲ್ಲ ! ಹೆಚ್ಚೇಕೆ? ಅವನು ಕಾಲು ಹಿಡಿದುಕೊಂಡರೂ ನಾನು ಕೋಪವನ್ನು ಬಿಡುವುದಿಲ್ಲ !” ವ|| ಎಂದು ಹೇಳುತ್ತ ಕಾದಂಬರಿಯು ಚಂದ್ರಾಪೀಡನನ್ನು ನೋಡಬೇಕೆಂಬ ಹೆಬ್ಬಯಕೆಯುಳ್ಳವಳಾಗಿ ಮಹಾಶ್ವೇತೆಯ ಆಶ್ರಮಕ್ಕೆ ಬಂದಳು. ಅಲ್ಲಿ ನೆರೆದಿದ್ದ ರಾಜರುಗಳ ಮಧ್ಯದಲ್ಲಿ ಅಮೃತವ  ತನ್ನಲ್ಲಿ ಅಡಗಿಸಿಕೊಂಡಿರುವ ಸಮುದ್ರದಂತೆಯೂ,

ನಿಶಾಪ್ರಬಂಧಮುಮನನುಕರಿಸಿ ತಿರೋಭೂತಚೇತನನಾದ ಚಂದ್ರಾಪೀಡದೇವನಂ ಕಂಡು ಕೆಟ್ಟೆನಿದೇನೆಂದು ತೊಟ್ಟನೆ ಮುಗ್ಧೆ ಮೂರ್ಛೆಗೆ ಸಂದು ನೆಲಕ್ಕೆ ಬೀೞ್ವನ್ನೆಗಮೆಂತಾನುಂ ಮುಕ್ತಾಕ್ರಂದೆಯಪ್ಪ ಮದಲೇಖೆ ಕರತಲದಿಂ ಪಿಡಿದೆತ್ತ ಪತ್ರಲೇಖೆಯುಂ ಕಾದಂಬರೀದೇವಿಯ ಕರತಲಮಂ ಬಿಟ್ಟು ನಿಶ್ಚೇತನೆಯಾಗಿ ಬಿೞ್ದಳಿತ್ತಲನಂತರಮೆಂತಾನುಂ ಕಿಱದುಬೇಗಕ್ಕೆ ಕಾದಂಬರಿ ಲಬ್ಧಸಂeಯಾಗಿ

ಮರವಟ್ಟಂತೆ ವಿಮೂಢೆಯಂತೆ ಬರೆದಂತಾವಿಷ್ಟೆಯಾದಂತೆ ಕಂ
ಡರಿಸಿಟ್ಟಂತುಸಿರಿಕ್ಕಲುಂ ಮದು ಚಂದ್ರಾಪೀಡದೇವಾನನಾಂ
ಬುರುಹಸ್ತಂಭಿತದೃಷ್ಟಿ ಮೆಯ್ಯಱಯದಂತರ್ಮನ್ಯುಭಾರಾತಿಮಂ
ಥರೆ ಪೆಂಡರ್ಗಿದು ತಕ್ಕುದಲ್ತೆನಿಪವಸ್ಥಾಭೇದಮಂ ತಾಳ್ದಿದಳ್     ೪೮

ವ|| ಅಂತು ತಾಳ್ದಿದ ಕಾದಂಬರಿಯ ಕಾಲಮೇಲೆ ಬಿೞ್ದು ಮುಕ್ತಾರ್ತನಾದೆಯಾಗಿ ಮದಲೇಖೆಯಿಂತೆಂದಳ್

ಬಿಡುನಿಜಮನ್ಯುಬಾಷ್ಪಭರಮಂ ನುಡಿಗುಂದುತಮಿಂತು ದುಖಮಾಂ
ತೊಡೆ ಕಡೆಗೋಡಿಪೋಗದೆ ಪೊನಲ್ ಪುಗತರ್ಪ ತಟಾಕದಂದದಿಂ
ದೊಡೆದಪುದಲ್ತೆ ನಿನ್ನ ಸುಮಕೋಮಲಪ್ಪೆರ್ದೆ ತಂದೆಯ ತಾಯ ಬಾೞ್ಕೆಯಿ
ನ್ನುಡಿದೊಡದೆಂತುಮಿಲ್ಲ ತಿಳಿ ನೀಂ ಬೞಕಿಲ್ಲ ನಿಜಾನ್ವಯದ್ವಯಂ           ೪೯

ವ|| ಎಂದು ನುಡಿಯೆ ವಿಹಸಿತವದನೆಯಾಗಿ ಕಾದಂಬರಿ ಮದಲೇಖೆಯನಿಂತೆಂದಳ್

ಮರುಳೇ ನೀಂ ತಂಗಿ ಪೇೞು ಕಲ್ಲೆರ್ದೆಯಿದೊಡೆಗುಮೇಂ ಮುಂದೆ ಮತ್ಕಾಂತನಿಂತಾ
ಗಿರೆಯುಂ ಪ್ರಾಣಂಗಳೆನ್ನಂ ಬಿಡವು ಬಿಡದೊಡೇನಾದುದೆಂತಾನುಮೀಗಳ್
ದೊರೆಕೊಂಡತ್ತೀ ಮದೀಯ ಪ್ರಿಯತಮತನುವಿಂ ತಂದೆ ತಯ್ ಬಂಧುವರ್ಗಂ
ಪರಿವಾರಂ ತಾನದೇಕೀ ತನುವಿನ ಬೞಸಂದಾಂ ಕೃತಾರ್ಥಾತ್ಮೆಯಪ್ಪೆಂ                         ೫೦

ವ|| ಅದಲ್ಲದೆಯುಂ

ಪಿಂದೆ ಸಮಸ್ತರಾಜ್ಯಪದಮಂ ಬಿಸುಟೆನ್ನಯ ದೂಸಱಂದವೇ
ೞ್ತಂದೆನಗೊಪ್ಪುಗೊಟ್ಟು ನಿಜದೇಹಮನೀ ಮಹಿಪಂ ಗುರುತ್ವದಿಂ
ದೊಂದಿದನೀಗಳಾಂ ಬರಿದೆ ಕಣ್ಬನಿಯಂ ಸುರಿಯುತ್ತಮಿರ್ದೊಡಂ
ಬಂದಪುದೇನೊ ಪೇೞು ಕೆಳದಿ ಕೆಮ್ಮನೆ ಲಾಘವದಿಂದಮೊಂದುವೆಂ       ೫೧

ತಾವರೆಗಳನ್ನು ಒಳಗೆ ಹೊಂದಿರುವ ತಾವರೆಗೊಳದಂತೆಯೂ, ಮೋಡಗಳ ಗುಂಪಿನಲ್ಲಿ ಮುಚ್ಚಿಹೋಗಿರುವ ಚಂದ್ರನುಳ್ಳ ರಾತ್ರಿಕಾಲದಂತೆಯೂ, ಇರುವ ಚೇತನ್ಯವಳಿದ ಚಂದ್ರಾಪೀಡದೇವನನ್ನು ಕಂಡು “ಅಯ್ಯಯ್ಯೊ, ಕೆಟ್ಟೆ, ಇದೇನು?” ಎಂದು ತಟಕ್ಕನೆ ಏನೂ ಅರಿಯದೆ ಅವಳು ಮೂರ್ಛೆಗೊಂಡು ನೆಲಕ್ಕುರುಳಿಬೀಳುವುದರಲ್ಲಿದ್ದಳು. ಅಷ್ಟರಲ್ಲಿ ಗೋಳಿಡುತ್ತಿರುವ ಮದಲೇಖೆಯು ಹೇಗೋ ತನ್ನ ಕೈಯಿಂದ ಹಿಡಿದೆತ್ತಿದಳು. ಪತ್ರಲೇಖೆಯು ಕಾದಂಬರೀದೇವಿಯ ಕೈಯನ್ನು ಬಿಟ್ಟು ಎಚ್ಚರದಪ್ಪಿ ನೆಲಕ್ಕೆ ಬಿದ್ದಳು. ಕಾದಂಬರಿಯು ಸ್ವಲ್ಪಕಾಲವಾದಮೇಲೆ ಹೇಗೋ ಎಚ್ಚರಗೊಂಡಳು. ೪೮. ಸ್ತಬ್ಧಳಾದಂತೆಯೂ, ಮೂರ್ಛೆಗೊಂಡವಳಂತೆಯೂ, ಚಿತ್ರದಲ್ಲಿ ಬರೆಯಲ್ಪಟ್ಟವಳಂತೆಯೂ, ಭೂತಹಿಡಿದವಳಂತೆಯೂ, ಕೆತ್ತಿರಿಸಲ್ಪಟ್ಟವಳಂತೆಯೂ ಉಸಿರು ಬಿಡುವುದನ್ನೂ ಮರೆತು ಚಂದ್ರಾಪೀಡನ ಮುಖಕ್ಘಆ