ಜಾತಿಸ್ಮರನಾದೆಂ ಮುನಿ
ಜಾತಿಯೆನಾಂ ಮುನ್ನ ಶಾಪದಿಂದಂ ತಿರ್ಯ
ಗ್ಜಾತಿಗೆ ಬಿೞ್ದೆಂ ಬಿಡು ದು
ಖಾತುರನೆಂ ನಿನಗೆ ಪುಣ್ಯಮಕ್ಕುಮಗಣ್ಯಂ     ೪೦

ವ|| ಎಂದಡಿಗಡಿಗೆ ಕಾಲ ಮೇಲೆ ಬೀೞ್ವುದುಮವಂ ಬೆಟ್ಟವೆಟ್ಟಿನಿಂತೆಂದಂ

ಮುನಿಯೋ ಯಕ್ಷನೊ ಗಂಧ
ರ್ವನೊ ರಾಕ್ಷಸನೋ ಪಿಶಾಚನೋ ನೀನಿನ್ನಾ
ವನುಮೆಂದಱಯೆಂ ಮತ್ಸಾ
ಮಿನಿಗೊಯ್ದೊಪ್ಪಿಸುವೆನೀಗಳಿನಿತನೆ ಬಲ್ಲೆಂ   ೪೧

ವ|| ಎಂದೆನ್ನಂ ಪಿಡಿದುಕೊಂಡು ದಕ್ಷಿಣಾಭಿಮುಖನಾಗಿ ಪೋಪುದುಮೆನಗಿಂ ಪ್ರಾಣ ಪರಿತ್ಯಾಗಮೇ ಪ್ರತಿಕ್ರಿಯೆಯೆಂದು ನಿಶ್ಚಸುವಿನಮನ್ನೆಗಂ ಮುಂದೆ ಜೀರ್ಣವಾಗುರಾಗ್ರಥನವ್ಯಗ್ರರುಂ ಗೃಹೀತಕಾಂಡಕೋದಂಡರುಂ ಉದ್ದಂಡಪಾಣಿಗಳುಂ ಬಹುವಿಧಗ್ರಾಹಕ ವಿಹಂಗಮ ವಾಚಾಲನಾಕುಶಲರುಂ ಕೌಲೇಯಕಮುಕ್ತಿಸಂಚಾರಣಚತುರರುಮಪ್ಪ ಚಂಡಾಲಶಿಶುಗಳ್ ದೆಸೆದೆಸೆಗೆ ಪರಿದು ಬೇಂಟೆಯಾಡುತ್ತಮಿರೆ ಮತ್ತಮಾನಂತೆ ಪೋಗೆವೋಗೆ ಪೊಲಸಿನ ಗಂಧಮಂ ಪೊತ್ತು ಕಿಱುಕವ್ವರೆಗೊಳ್ವ ಕೌರಪೊಗೆಯಿನಱಯಲಾದ ಬೇಡವಟ್ಟಮಂ ಕಂಡೆನಲ್ಲಿಯೆಲುವೆ ಮನೆಯ ಕಸದ ಕೂಟಂ ಬಸೆಯೆ ತುಪ್ಪಂ ನಾಯ್ಗಳೆ ಪರಿವಾರಂ ಮದ್ಯಮೆ ಪುರುಷಾರ್ಥಂ ನೆತ್ತರೆ ದೇವತಾರ್ಚನೋಪಕರಣಂ ಪಶೂಪಹಾರಮೆ ಧರ್ಮಮಂತುಮಲ್ಲದೆಯುಂ

ನರಕದ ನೆಲೆ ಪೇಸಿಕೆಗಳ
ಕರು ಮಸಣದ ಪುಟ್ಟು ಪಾಪದೆ ಪಾತಕದಾ
ಗರಮದು ನೆನೆವರ್ಗೆ ಭಯಂ
ಕರವತಿಪಾಪಕರಮಾದುದ್ವೇಗಕರಂ             ೪೨

ಎಲ್ಲರ ಮನೋರಥಗಳನ್ನೂ ನೆರವೇರಿಸುವ ತಾಯೆ, ಲಕ್ಷಿ , ನನ್ನನ್ನು ಕಾಪಾಡಬಾರದೇನಮ್ಮ ! ಹೇಳು. ಜಗತ್ತನ್ನೆ ಕಾಪಾಡಬಲ್ಲ ಶಕ್ತಿಯುಳ್ಳ ತಂದೆಯೆ! ಅಸಮರ್ಥನಾದ ನಿನ್ನ ಏಕಮಾತ್ರ ಪುತ್ರನನ್ನು ಕಾಪಾಡು. ಗೆಳೆಯ ಕಪಿಂಜಲ, ನೀನು ಮತ್ತೆ ಬಂದು ನನ್ನ ಕರ್ಮಗಳನ್ನು ಪರಿಹರಿಸು. ಮುಂದಿನ ಜನ್ಮದಲ್ಲಾದರೂ ನನ್ನ ಇಷ್ಟಾರ್ಥವು ಈಡೇರಲಿ.” ವ|| ಇದೇ ರೀತಿಯಲ್ಲಿ ಹಲವು ಬಗೆಯಾಗಿ ಹಲುಬುತ್ತಿದ್ದು ಆ ಚಂಡಾಲನನ್ನು ಕುರಿತು ಹೀಗೆ ಹೇಳಿದೆನು ೪೦. “ಅಯ್ಯ, ನಾನು ಹಿಂದಿನ ದನ್ಮದ ನೆನಪುಳ್ಳವನು. ಹಿಂದೆ ನಾನು ಋಷಿಯಾಗಿ ಹುಟ್ಟಿದೆ. ಈಗ ಶಾಪದಿಂದ ಹಕ್ಕಿಯ ಜಾತಿಯಲ್ಲಿ ಹುಟ್ಟಿದ್ದೇನೆ. ದುಖಪೀಡಿತನಾದ ನನ್ನನ್ನು ಬಿಟ್ಟುಬಿಡು. ನಿನಗೆ ಅನಂತವಾದ ಪುಣ್ಯವು ಬರುತ್ತದೆ.” ವ|| ಎಂದು ಮತ್ತೆ ಮತ್ತೆ ಕಾಲಿಗೆ ಬೀಳಲು ಅವನು ಯೋಚನೆ ಮಾಡದೆ ಹೀಗೆಂದನು. ೪೧. “ನೀನು ಋಷಿಯೋ, ಯಕ್ಷನೋ ಗಂಧರ್ವನೋ ರಾಕ್ಷಸನೋ ಪಿಶಾಚನೋ? ನೀನು ಯಾರೋ ನನಗೆ ಅದೊಂದೂ ಗೊತ್ತಿಲ್ಲ. ನಿನ್ನನ್ನು ತೆಗೆದುಕೊಂಡು ಹೋಗಿ ನನ್ನ ಒಡತಿಗೆ ಒಪ್ಪಿಸುವುದೊಂದೇ ನನಗೆ ಗೊತ್ತಿರುವುದು!” ಎಂದನು. ವ|| ಎಂದು ಹೇಳಿ ನನ್ನನ್ನು ಹಿಡಿದುಕೊಂಡು ದಕ್ಷಿಣಾಭಿಮುಖವಾಗಿ ಹೋಗುತ್ತಿದ್ದನು. ನನಗಿನ್ನು ಪ್ರಾಣತ್ಯಾಗವನ್ನು ಬಿಟ್ಟು ಬೇರೆ ದಾರಿಯೇ ಇಲ್ಲವೆಂದು ನಿಶ್ಚಯಿಸಿದೆನು. ಅಷ್ಟರಲ್ಲಿ ಮುಂದೆ ಹರಿದು ಹೋದ ಬಲೆಗಳನ್ನು ಹೊಲಿಯುವುದರಲ್ಲಿ ತತ್ಪರರಾದ, ಬಿಲ್ಲು ಬಾಣಗಳನ್ನು ಹಿಡಿದುಕೊಂಡಿರುವ, ದೊಣ್ಣೆಯನ್ನು ಹಿಡಿದುಕೊಂಡಿರುವ, ಹಕ್ಕಿಗಳನ್ನು ಹಿಡಿಯಲು ಸಹಾಯಮಾಡುವ ನಾನಾ ಬಗೆಯ ಹಕ್ಕಿಗಳಿಗೆ ಶಿಕ್ಷಣ ಕೊಡುವುದರಲ್ಲಿ ಕುಶಲರಾದ, ನಾಯಿಗಳನ್ನು “ಛೂ” ಬಿಡುವುದರಲ್ಲೂ, ಓಡಾಡಿಸುವುದರಲ್ಲೂ ಸಮರ್ಥರಾದ ಚಂಡಾಲ ಬಾಲಕರು ದಿಕ್ಕು ದಿಕ್ಕುಗಳಲ್ಲೂ ಓಡಾಡಿ ಬೇಟೆಯಾಡುತ್ತಿರಲು, ಬಹಳ ದುರ್ನಾತವನ್ನುಂಟುಮಾಡಿ ಸ್ವಲ್ಪಮಟ್ಟಿಗೆ ಮುತ್ತಿಕೊಂಡು ಕಂಟು ಹೊಗೆಯಿಂದ ಆವೃತವಾದ ಬೇಡರ ಬೀಡನ್ನು ಕಂಡೆನು. ಅಲ್ಲೋ ಮೂಳೆಗಳೇ ಮನೆಯ ಕಸ. ಪ್ರಾಣಿಗಳ ಕೊಬ್ಬೇ ತುಪ್ಪ. ನಾಯಿಗಳೇ ಪರಿವಾರ. ಮಧ್ಯವೇ ಭೋಗವಸ್ತು. ರಕ್ತವೇ ದೇವರ ಪೂಜೆಯ ಸಾಮಗ್ರಿ. ಪ್ರಾಣಿಬಲಿಯೇ ಧರ್ಮ ಎನಿಸಿದ್ದಿತು. ಅದಲ್ಲದೆ, ೪೨. ಆ ಚಂಡಾಲರ ಹಳ್ಳಿಯು ನರಕಕ್ಕೆ ಆಶ್ರಯವಾಗಿಯೂ, ಹೇಸಿಗೆಗಳಿಗೆ ಮೂಲಸ್ತಂಭವಾಗಿಯೂ ಮಸಣಕ್ಕೆ ಉತ್ಪತ್ತಿಸ್ಥಾನದಂತೆಯೂ, ಪಾಪಕ್ಕೆ ನೆಲೆಯಾಗಿಯೂ, ಹಿಂಸೆಗೆ ಮನೆಯಂತೆಯೂ, ನೆನಸುವವರಿಗೆ ಭಯಂಕರವಾಗಿಯೂ, ಬಹಳ

ವ|| ಅಂತದಂ ಕಂಡು ಕಂಟಣಿಸುತ್ತಮೆನ್ನೊಳಿಂತೆಂದೆಂ

ಬರುತಿರೆ ಕಂಡು ದೂರದೊಳೆ ತನ್ನಯ ಜಾತಿಗೆ ತಕ್ಕುದಲ್ತೆನಲ್
ಕರುಣಮನಪ್ಪುಕೆಯ್ದು ಮನದೊಳ್ ಬಿಡುವಂತುಟದೊಂದವಳ್ಗೆ ಪೇೞು
ದೊರಕೊಳಲಾರ್ಕಮೇಂ ಪೊಲತಿಗೆನ್ನಯ ಪುಣ್ಯದೊಳೆಂದು ಭಾವಿಸು
ತ್ತಿರಲಿರದೆಯ್ದಿದಂ ಪೊಲೆಯನಾ ಪೊಲೆವಟ್ಟಿನೊಳಿರ್ದ ಕನ್ನೆಯಂ            ೪೩

ವ|| ಕಂಡು ಗೆಂಟಳೆ ಪೊಡವಟ್ಟು ಮೆಲ್ಲನೆ ನೀಡೆ ಲೇಸುಗೆಯ್ದೆಯೆಂದೆನ್ನಂ ಕರತಲದೊಳ್ ತಳೆದು

ಎಯ್ದದೆಡೆಯೆಲ್ಲಮಂ ನೀ
ನೆಯ್ದಿದೆ ಮತ್ತಿರದೆ ಮಗನೆ ಮಾಣದೆ ಪೇೞ
ನ್ನೆಯ್ದಿದಪೆಯೆಲ್ಲಿಗೆೞ್ಕಱ
ನುಯ್ದಪೆನಾಂ ಕಾಮಪರತೆಯಿಂದಂ ಕೆಟ್ಟೈ    ೪೪

ವ|| ಎಂದು ಚಂಡಾಲಕನ್ನಿಕೆ ರೋಮಂಬೊರೆದ ಪಂದೊವಲ ಪಂಜರದೊಳಿಕ್ಕಿ ಮಹಾಶ್ವೇತಾವಲೋಕನಕೆ ತಗೆಯಂ ಮಾೞ್ಪಂತೆ ಪಡಿಯಂ ಕೆತ್ತಗುಳಿಯನಿಕ್ಕಿ ನೀನಿಂತಿರೆಂದು ನಿರ್ವೃತಾಂತರಾತ್ಮೆಯಂತೆ ನುಡಿದುಸಿರದಿರ್ದೊಡಾನುಮಾ ಪಂಜರದ ಪಡಿಕೆಯೊಳಿರ್ದೆನ್ನೊಳಿಂತೆಂದಂ

ಅಕ್ಕರ|| ನುಡಿದೆನಪ್ಪೊಡೆ ಲೇಸಾಗಿ ನುಡಿಯಲ್ಕೆ ಬಲ್ಲುದೀ ಗಿಳಿಯೆಂದು ಕನ್ನೆಯೆನ್ನಂ

ಬಿಡದಿರ್ಕುಮದಱಂದಮೀ ಕನ್ನಿಕೆ ನುಡಿಯಿಸಿದೊಡಮೆಂತುಂ ನುಡಿಯದಿರ್ಪೆಂ
ನುಡಿಯದಿರ್ದೆನಪ್ಪೊಡೆ ಕಡುಮುಳಿಸಿಂದಂ ಪಿರಿದಪ್ಪವಸ್ಥೆಯನೆಯ್ದಿಸುಗುಂ
ನುಡಿಯದೆಂತು ದಂದ್ವು ಮೇಬಾರ್ತೆಯೆಂದು ಮೇಣ್ ಬಿಡುಗುಮೊ
ಪೇೞೆನುತೆ ಬಗೆಯುತಿರ್ದೆಂ           ೪೫

ಸುರಲೋಕಭ್ರಷ್ಟನೆಂ ಮರ್ತ್ಯರೊಳುದಯಿಪ ತಿರ್ಯಕ್ತ್ವದೊಳ್ ನಿಲ್ವ ಚಂಡಾ
ಲರ ಕೆಯ್ಯೊಳ್ ಬೀೞ್ವ ತೋಲ್ಪಂಜರದ ಪಡಿಕೆಯೊಳ್ ನಿಲ್ವ ದುರ್ವಾರದುಖೋ
ತ್ಕರಮೆಲ್ಲಂ ನೋಡಲೆನ್ನಿಂದ್ರಿಯನಿವಹದ ದೋಷಂ ದಲಿಂ ಮೀಱದಂತಾ
ಗಿರಿಸಲ್ವೇೞ್ಕೆಂದವಂ ನಿಗ್ರಹಿಪ ನಿಯಮದಿಂ ಮೌನದಿಂದಿರ್ದೆನಾಗಳ್     ೪೬

ಪಾಪಕರವಾಗಿಯೂ, ಮನಸ್ಸಿಗೆ ತಳಮಳವನ್ನುಂಟುಮಾಡುವುದಾಗಿಯೂ ಇತ್ತು. ವ|| ಅಂತಹುದನ್ನು ನೋಡಿ ಹೇಸಿಗೆಪಡುತ್ತ ಆಲೋಚಿಸಿದೆನು. ೪೩. “ನಾನು ಬರುತ್ತಿರುವುದನ್ನು ದೂರದಲ್ಲೆ ನೋಡಿ, ತನ್ನ ಜಾತಿಗೆ ತಕ್ಕುದಲ್ಲದಿದ್ದರೂ ಮನಸ್ಸಿಗೆ ಕರುಣೆಯು ಬಂದು ನನ್ನನ್ನು ಬಿಟ್ಟುಬಿಡಬೇಕೆಂಬ ಒಳ್ಳೆಯ ಬುದ್ಧಿಯ ನನ್ನ ಪುಣ್ಯವಿಶೇಷದಿಂದ ಆ ಚಂಡಾಲಕನ್ಯೆಗೆ ಬಂದುಬಿಡಬಹುದೆ?” ಎಂದು ಆಲೋಚಿಸುತ್ತಿರುವಂತೆಯೆ ಆ ಚಂಡಾಲನು ಹೊಲಗೇರಿಯಲ್ಲಿದ್ದ ಆ ಹುಡುಗಿಯ ಹತ್ತಿರಕ್ಕೆ ಬಂದನು. ವ|| ಅವಳನ್ನು ನೋಡಿ ದೂರದಿಂದಲೆ ನಮಸ್ಕರಿಸಿ ನನ್ನನ್ನು ಮೆಲ್ಲನೆ ಅವಳಿಗೆ ಒಪ್ಪಿಸಿದನು. ಅವಳು ಒಳ್ಳೆಯದನ್ನು ಮಾಡಿದೆ ಎಂದು ಹೇಳಿ ನನ್ನನ್ನು ಅಂಗೈ ಮೇಲಿಟ್ಟುಕೊಂಡು ೪೪. “ಮಗನೆ, ನೀನು ಬರಲಾರದ ಕಡೆಗೆಲ್ಲ ಬರಬೇಕಾಯಿತು. ಇನ್ನೂ ಆಸೆಯಿಂದ ಇನ್ನೂ ಎಲ್ಲಿಗೆ ಹೋಗುತ್ತೀಯೆ? ನಿನ್ನನ್ನು ನಾನು ಹಿಡಿತದಲ್ಲಿಡುತ್ತೇನೆ. ನೀನು ಕಾಮೋದ್ರೇಕದಿಂದಲೇ ಹಾಳಾದೆ” ವ|| ಎಂದು ಆ ಚಂಡಾಲಕನ್ನಿಕೆಯು ಕೂದಲುಗಳಿಂದ ಕೂಡಿಕೊಂಡಿರುವ ಹಸಿಚರ್ಮದ ಪಂಜರದಲ್ಲಿ ನನ್ನನ್ನು ಕೂಡಿ, ಮಹಾಶ್ವೇತೆಯನ್ನು ನೋಡುವುದಕ್ಕೆ ಮರೆಮಾಡುವಂತೆ ಬಾಗಿಲನ್ನು ಮುಚ್ಚಿ, ಅಗುಳಿಯನ್ನು ಹಾಕಿ, ‘ನೀನು ಹೀಗೆಯೇ ಇರು’ ಎಂದು ನೆಮ್ಮದಿಪಟ್ಟುಕೊಂಡವಳಂತೆ ಹೇಳಿ ಸಮ್ಮನಾದಳು. ನಾನೂ ಆ ಪಂಜರದ ಬಂಧನಕ್ಕೆ ಸಿಕ್ಕಿಕೊಂಡು ಆಲೋಚಿಸಿದೆನು. ೪೫. “ನಾನು ಮಾತನಾಡಿದರೆ ಈ ಗಿಳಿಯು ಚೆನ್ನಾಗಿ ಮಾತನಾಡಬಲ್ಲದೆಂದು ಈ ಹುಡುಗಿಯು ನನ್ನನ್ನು ಬಿಡದೆ ಇರಬಹುದು. ಆದ್ದರಿಂದ ಇವಳು ಮಾತನಾಡಿಸಿದರೂ ಏನಾದರೂ ಮಾತನಾಡುವುದೇ ಇಲ್ಲ. ಹಾಗೆ ಮಾತಾಡದಿದ್ದರೆ ಬಹಳ ಕೋಪದಿಂದ ಇದಕ್ಕಿಂತಲೂ ಹೆಚ್ಚಾದ ಕಷ್ಟಸ್ಥಿತಿಗೆ ನನ್ನನ್ನು ಒಳಪಡಿಸಬಹುದು. ಅಥವಾ ಮಾತನಾಡದಿದ್ದರೆ ಏನೋ ಹೋಗಲಿ ಎಂದು ಬೇಸರಿಕೆಯಿಂದ ನನ್ನನ್ನು ಬಿಟ್ಟರೂ ಬಿಡಬಹುದು” ಎಂದು ಆಲೋಚಿಸುತ್ತಿದ್ದೆನು. ೪೬. “ನಾನು ದೇವಲೋಕದಿಂದ ಕೆಳಗಿಳಿದೆ. ಮನುಷ್ಯಜಾತಿಯಲ್ಲಿ ಹುಟ್ಟಿದೆ. ಹಕ್ಕಿಯಾಗಿ ಹುಟ್ಟಿದೆ. ಚಂಡಾಲರ ಕೈಗೆ ಸಿಕ್ಕಿಬಿದ್ದೆ. ಹಾಗೂ ಈಗ ಚರ್ಮಪಂಜರದ ಬಂಧನಕ್ಕೆ ಒಳಪಟ್ಟೆ. ಹೀಗೆ ಈ ಸಹಿಸಲಸಾಧ್ಯವಾದ ದುಖ ಸಮೂಹವೆಲ್ಲ ವಿಚಾರಮಾಡಿ ನೋಡಿದರೆ ನಿಜವಾಗಿಯೂ ನನ್ನ ಇಂದ್ರಿಯಗಳ ತಪ್ಪು. ಇನ್ನು ಮೇಲೆ ಅವು ಹತೋಟಿ ಮೀರದಂತೆ ಇಟ್ಟುಕೊಂಡೇ ತೀರಬೇಕು” ಎಂದು ನಿಶ್ಚಯಿಸಿ, ಸುಮ್ಮನಿದ್ದೆನು.

ವ|| ಅಂತು ನಿಖಿಲೇಂದ್ರಿಯನಿಗ್ರಹಕ್ಕೆ ನಿಶ್ಚಯಂಗೆಯ್ವೆನಗೆ ಮರಣಮೆ ಶರಣಮೆಂದಿರೆ ತಮತಮಗೆ ಬಂದು

ನುಡಿಯಿಸಿದೊಡಮು ಬಿಡೆ ಜಡಿ
ದೊಡಮೋವದೆ ಪಿಡಿದು ಬಡಿದೊಡಂ ಕೊಂದೊಡವಾಂ
ನುಡಿಯದೆ ಕಿವಿ ಘೀಳೆನೆ ಘೀ
ಳಿಡುತಿರ್ದೆಂ ಕುಟುಕನೊಲ್ಲೆನೆಂತಿಕ್ಕಿದೊಡಂ ೪೭

ವ|| ಅಂತಾ ದಿವಸಮನನಶನದೊಳ್ ಕಳೆಯಲಾ ಕನ್ನೆ ಕಂಡು ನೋವಂತೆಗೆಯ್ದು ಪಲತೆಱದ ಪಕ್ವಫಲಂಗಳುಮಂ ಸುರಭಿಶೀತಲಜಲಂಗಳುಮಂ ತಾನೆ ತಂದು ನೀಡೆಯುಮೊಲ್ಲದಿರಲೆನ್ನನಿಂತೆಂದಳ್ ನಿರ್ವಿಕಾರಚಿತ್ತವೃತ್ತಿಗಳಪ್ಪ ಪಕ್ಷಿಗಳ್ ಪಸಿವುಂ ನೀರೞ್ಕೆಯುಮಾಗಲುಪಯೋಗಿಸದುದೊಂದುಮಿಲ್ಲೆತ್ತಾನುಂ ಭೋಜ್ಯಾಭೋಜ್ಯವಿವೇಕನೆನಾಂ ಜಾತಿಸ್ಮರವಾಹಾರಮಂ ಪರಿಹರಿಸುವೆ ನೆಂಬೆಯಪ್ಪೊಡೆ ಭಕ್ಷಾ ಭಕ್ಷ ರಹಿತ ಮಪ್ಪ ತಿರ್ಯಗ್ಜಾತಿಯೊಳ್ ಪುಟ್ಟಿದ ನಿನಗೆಯುಮಭಕ್ಷ ಮೊಂದುಮಿಲ್ಲಂ ಮೊದಲೊಭುತ್ಕೃಷ್ಟಜಾತಿಯೊಳ್ ಪುಟ್ಟಿ ತಿರ್ಯಗ್ಜಾರ್ತಿಗೆ ಬೀೞ್ದಂದೇ ನಿನ್ನ ವಿವೇಕಮಱದಂತುಟೆವಲಮಿನ್ನಿನಗೆ ಜಾತಿಗೆ ತಕ್ಕಂತಾಹಾರ ಮನಾಚರಿಸೆ ದೋಷಮಿಲ್ಲಮಲ್ಲದೆಯುಂ ಭಕ್ಷಾ ಭಕ್ಷ ನಿಯಮಿತರ್ಗಾ ಪದ್ವಿಷಯದೊಳ್ ಪ್ರಾಣಸಂಧಾರಣಾರ್ಥಮಭೋಜ್ಯೋಪಭೋಗ ಮುಂಟೀಗಳೆತ್ತಾನು ಮಾನಿತ್ತುದನೊಲ್ಲೆ ನೆಂಬೆಯಪ್ಪೊಡೆ ಚಂಡಾಲಭಾಂಡದಿಂ ಭೂಮಿಪತಿತಮಾದಂಬುವುಂ ಪವಿತ್ರಮೆಂಬುದುಂಟದಱಂ ಕ್ಷುತ್ಪಿಪಾಸೆ ಗಳಿನಾಯಾಸಂಬಡದೆ ಮುನಿಜನೋಚಿತಮಪ್ಪ ನವಫಲಂಗಳನುಪಭೋಗಿಸೆಂದು ನುಡಿಯೆ

ನಯದಿಂದಂ ತಿಳಿವುಟ್ಟಿರಲ್ಕೆನಗೆ ಪೇೞಲ್ ಕೇಳ್ದು ಚಂಡಾಲಜಾ
ತಿಯೊಳೀ ವಾಕ್ಯಮುಮೀ ವಿವೇಕಮುಮದೆಂತಾದತ್ತೊ ಪೇೞೆಂದು ವಿ
ಸ್ಮಯಮುತ್ತೆಂದುದಗೆಯ್ವೆನೆಂಬ ಬಗೆಯೊಳ್ ಬಾೞುಸೆಯಿಂ ಕ್ಷುತ್ಪಿಪಾ
ಸೆಯುಮಂ ತಾಳ್ದಿರಲಾಱದಾಱಸಿದೆನಾಂ ತತ್ಪಾನಪಾನಂಗಳಿಂ            ೪೮

ವ|| ಅಂತು ಕೆಲವು ದಿವಸಮಿರ್ಪನ್ನೆಗಂ

ಇನೋದಯದೊಳೊರ್ಮೆ ಕಣ್ದೆಱದು ನೋಡುತುಂ ಕಂಡೆನಾಂ
ಕನತ್ಕನಕಪಂಜರಸ್ಥಿತನನೆನ್ನನಾ ಕನ್ನೆ ಮು
ನ್ನಿನಂತೆ ನಿಜರೂಪದಿಂದಮೆಸೆದಿರ್ದಳೆಂತಿಲ್ಲಿ ಕೇ
ಳನಂತರಮೆ ತೋಱತಿಂದ್ರಪುರದಂತಿರಾ ಪಕ್ಕಣಂ     ೪೯

ವ|| ಹಾಗೆ ಅವುಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕೆಂದು ತೀರ್ಮಾನಿಸಿರುವ ನನಗೆ ಸಾವೇ ಗತಿಯೆಂದು ನಿಶ್ಚಯಿಸಿರಲು, ತಾವು ತಾವೇ ಬಂದು ೪೭. ಅವರು ಮಾತನಾಡಿಸಿದರೂ, ಹೆಚ್ಚಾಗಿ ಬೆದರಿಸಿದರೂ, ಕರುಣೆಯಿಲ್ಲದೆ ಹಿಡಿದು ಹೊಡೆದರೂ, ಕೊನೆಗೆ ಕೊಂದು ಹಾಕಿದರೂ ನಾನು ಬಾಯೇ ಬಿಡಬಾರದೆಂದು ಹಟಮಾಡಿಬಿಟ್ಟೆ. ಹಾಗೆಯೆ ಬಾಯಿ ಬಿಡಲಿಲ್ಲ. ಆದರೆ ಕಿವಿ ಒಡೆದುಹೋಗುವಂತೆ ಕಿರುಚುತ್ತಿದ್ದೆನು. ವ|| ಹಾಗೆ ಆ ದಿನವನ್ನೆಲ್ಲಾ ಆಹಾರವನ್ನು ತೆಗೆದುಕೊಳ್ಳದೆ ಕಳೆದನು. ಬಳಿಕ ಮರುದಿವಸ ಇದನ್ನು ನೋಡಿ ವ್ಯಸನಪಡುವವಳಂತೆ ಕಾಣುತ್ತಿದ್ದ ಅವಳು ಹಲವು ಬಗೆಯ ಕಳಿತ ಹಣ್ಣುಗಳನ್ನೂ ಸುವಾಸನೆಯಿಂದ ಕೂಡಿರುವ ತಂಪಾದ ನೀರನ್ನೂ ತಾನೇ ತಂದುಕೊಟ್ಟಳು. ನಾನು ತೆಗೆದುಕೊಳ್ಳಲಿಲ್ಲ. ಆಗ ನನ್ನನ್ನು ಕುರಿತು ಹೀಗೆ ಹೇಳಿದಳು. “ಮನಸ್ಸಿಗೆ ಏನನ್ನೂ ಹಚ್ಚಿಕೊಳ್ಳದ ಹಕ್ಕಿಗಳು ಹಸಿವು ಬಾಯಾರಿಕೆಗಳುಂಟಾದರೆ ತೆಗೆದುಕೊಳ್ಳದಿರುವ ಪದಾರ್ಥವೇ ಇಲ್ಲ. ಒಂದು ವೇಳೆ “ನಾನು ಏನನ್ನು ತಿನ್ನಬೇಕು. ಏನನ್ನು ತಿನ್ನಬಾರದು ಎಂಬ ವಿವೇಕವುಳ್ಳವನು. ಮತ್ತು ಹಿಂದಿನ ಜನ್ಮಗಳ ನೆನಪುಳ್ಳವನು. ಆದ್ದ್ದರಿಂದ ಈ ಆಹಾರವನ್ನು ತೆಗೆದುಕೊಳ್ಳುವುದಿಲ್ಲ” ಎಂದು ಹೇಳುವೆಯಾದರೆ ಭಕ್ಷಾ ಭಕ್ಷ  ನಿಯಮನೇನೂ ಇಲ್ಲದ ಪಕ್ಷಿಯ ಜಾತಿಯಲ್ಲಿ ಹುಟ್ಟಿರುವ ನಿನಗೆ ತಿನ್ನಬಾರದೆಂಬುದು ಯಾವುದೂ ಇಲ್ಲ. ಮೊದಲು ಮೇಲುಜಾತಿಯಲ್ಲಿ ಹುಟ್ಟಿ ಈಗ ಈ ಹಕ್ಕಿಜಾತಿಗೆ ಬಿದ್ದಾಗಲೆ ನಿನ್ನ ವಿವೇಕವು ಗೊತ್ತಾಯಿತು! ಇನ್ನು ನಿನಗೆ ನಿನ್ನ ಜಾತಿಗೆ ತಕ್ಕ ಆಹಾರವನ್ನು ಸೇವಿಸಿದರೆ ಯಾವ ದೋಷವೂ ಬರುವುದಿಲ್ಲ. ಅದಲ್ಲದೆ ಭಕ್ಷಾ ಭಕ್ಷ ನಿಯಮವುಳ್ಳವರೂ ಆಪತ್ಕಾಲದಲ್ಲಿ ಪ್ರಾಣವನ್ನು ಉಳಿಸಿಕೊಳ್ಳುವುದಕ್ಕಾಗಿ ತಿನ್ನಬಾರದುದನ್ನು ತಿನ್ನುವುದೂ ಉಂಟು. ಈಗಲೂ ನಾನು ಕೊಡುವುದನ್ನು ತಿನ್ನುವುದಿವೆಂದು ಹೇಳುವುದೂ ಸರಿಯಲ್ಲ. ಏಕೆಂದರೆ, ಚಂಡಾಲರ ಪಾತ್ರೆಯಿಂದ ಭೂಮಿಗೆ ಬಿದ್ದ ನೀರೂ ಪವಿತ್ರವಾದುದೇ ಎಂದು ಹೇಳುತ್ತಾರೆ. ಆದ್ದರಿಂದ ಹೀಗೆ ಹಸಿವು ಬಾಯಾರಿಕೆಗಳಿಂದ ಆಯಾಸ ಪಡದೆ ಮುನಿಜನೋಚಿತವಾದ ಈ ಹೊಸ ಹಣ್ಣುಗಳನ್ನು ತಿನ್ನು” ಎಂದು ಹೇಳಿದಳು. ೪೮. ಹೀಗೆ ಮೃದುವಾಗಿ ನನಗೆ ತಿಳಿವಳಿಕೆಯುಂಟಾಗುವಂತೆ ಅವಳು ಹೇಳಿದ್ದನ್ನು ಕೇಳಿ ಚಂಡಾಲರ ಜಾತಿಯಲ್ಲಿ ಇಂತಹ ಮಾತೂ ಇಂತಹ ತಿಳಿವಳಿಕೆಯೂ ಹೇಗೆ ಬಂದಿತು? ಎಂದು ಆಶ್ಚರ್ಯವುಂಟಾಗಲು, ಅವಳು ಹೇಳಿದಂತೆಯೆ ಮಾಡಬೇಕೇಂದು ಮನಸ್ಸು ಮಾಡಿ, ಬದುಕಬೇಕೆಂಬ ಆಸೆಯಿಂದ ಹಸಿವು ಬಾಯಾರಿಕೆಗಳನ್ನು ತಡೆಯಲಾರದೆ, ಅವಳು ಕೊಟ್ಟ ಆಹಾರ ಪಾನೀಯಗಳ ಸೇವನೆಯಿಂದ ಹಸಿವನ್ನು ನಿವಾರಿಸಿಕೊಂಡೆನು. ವ|| ಹಾಗೆ ಕೆಲವು ದಿನಗಳಿರಲಾಗಿ,

೪೯. ಎಲೈ ರಾಜನೆ ಕೇಳು, ಒಂದು ದಿನ ಸೂರ್ಯೋದಯಕಾಲದಲ್ಲಿ ಕಣ್ಣು ಬಿಟ್ಟು ನೋಡಲು ನಾನು ತಳಿತಳಿಸುವ ಚಿನ್ನದ

ವ|| ಅಂತದಂ ಕಂಡು ವಿಸ್ಮಿತಾಂತರಂಗನಾಗಿ ಮೌನಮಂ ಬಿಟ್ಟು ಕನ್ನೆಯಂ ಬೆಸಗೊಳ ಲುಜ್ಜುಗಂಗೆಯ್ವನ್ನಮೆನ್ನನೊಡಗೊಂಡು ದೇವರ ಶ್ರೀಪಾದಂಗಳಂ ಕಾಣಲೆಂದು ಬಂದಳ್

ಈ ಕನ್ನೆಯಾರ್ಗೆ ಪೆಸರೇ
ನೇಕೆನ್ನಂ ಪಿಡಿದು ತರಿಸಿದಳ್ ಸೆಯೊಳ್ ಮ
ತ್ತೇಕಿಕ್ಕಿದಳಾಗಳ್ ತಾ
ನೇಕಿಲ್ಲಿಗೆ ತಂದಳಱಯೆನಿದವನಿಪತೀ           ೫೦

ವ|| ಎಂದು ಶೂದ್ರಕಮಹಾರಾಜಂಗಾ ಪ್ರಪಂಚಮೆಲ್ಲಮಂ ಪೇೞೆ ಕೇಳ್ದತಿಕುತೂಹಲಿತನಾಗಿ ಚಂಡಾಲಕನ್ಯೆಯನೊಡಗೊಂಡುಬಾಯೆಂದು ಮುಂದಿರ್ದ ಪಡಿಯಱತಿಗೆ ಬೆಸಸುವುದುಮವಳ್ ಪೋಗಿ ಬೇಗದಿನೊಡಗೊಂಡು ಬರೆ ತದುಪದಿಶ್ಯಮಾನರ್ಗೆಯಾಗಿ ಬಂದು

ಮಾಣ್ಗುೞದರ ಮೆಯ್ವೆಳಗೆನೆ
ಕಣ್ಗಳ್ ಕೋರೈಸೆ ತೊಳಗಿ ಬೆಳಗುತ್ತಂ ಮುಂ
ದಣ್ಗಾಗಿ ನಡೆದು ನೃಪನಂ
ಜಾಣ್ಗೊಂಡ ನಿಜಪ್ರಗಲ್ಭವಚನದೆ ನುಡಿದಳ್   ೫೧

ವಿದಿತಾಶೇಷಕಲಾಕಲಾಪ ಭುವನಾಲಂಕಾರ ಕಾದಂಬರೀ
ಹೃದಯಾನಂದನ ರೋಹಿಣೀರಮಣ ತಾನಾತ್ಮೀಯ ವೃತ್ತಾಂತಮಂ
ವಿದಿತಂ ಪೇೞುತಮೀ ದುರಾತ್ಮನಿಗೆ ಕೇಳುತ್ತಿರ್ದೆ ನೀಂ ಕೇಳ್ದೆ ದಲ್
ಮೊದಲಿಂ ಪೂರ್ವಭವಾಂತರೋದಿತ ಭವದ್ವೃತ್ತಾಂತಸಂತಾನಮಂ      ೫೨

ವ|| ಮತ್ತಮೀ ದುರ್ಬುದ್ಧಿ ಈ ಜನ್ಮದೊಳಂ ಗುರುಗಳಿಂ ನಿಷಿದ್ಧನಾಗಿಯುಂ ತಂದೆಯ ಮಾತಂ ವಿಱ ವಧೂನಿರೀಕ್ಷಣೋತ್ಸುಕತೆಯಿಂ ಪಾಱಪೋಗುತ್ತಮಿರೆ

ಮಗನಿಂತೀ ಶುಕನೀ ದುರಾತ್ಮಕನ ತಾಯೆಂ ಶ್ರೀಯೆನಾಂ ದಿವ್ಯಚ
ಕ್ಷುಗಳಿಂದೀತನ ತಂದೆ ಪೋಗಱದಿವಂ ತಿರ್ಯಕ್ತ್ವದೊಳ್ ನಿಲ್ವನೆ
ನ್ನೆಗಮಾಯುಷ್ಕರಮಾದ ಯಜ್ಞಮನಿದಂ ಪೊರೈಸದಾನಿರ್ಪೆನ
ನ್ನೆಗಮೀಗಳ್ ಸೆಯಿಕ್ಕಿಯಿಂ ನಿಲಿಪುದೆಂದೆನ್ನಲ್ಲಿಗಿಂತಟ್ಟಿದಂ       ೫೩

ಪಂಜರದಲ್ಲಿರುವುದು ಗೊತ್ತಾಯಿತು. ಆ ಹುಡುಗಿಯು ಈಗ ಇಲ್ಲಿ ಹೇಗೇ ಕಾಣುತ್ತಿದ್ದಾಳೋ ಅದೇ ರೀತಿ ಅಲ್ಲಿ ಶೋಭಿಸುತ್ತಿದ್ದಳು. ಕೂಡಲೆ ಆ ಹೊಲಗೇರಿಯು ಅಮರಾವತಿಯಂತೆ ಕಾಣತೊಡಗಿತು. ವ|| ಆ ರೀತಿಯಲ್ಲಿದ್ದ ಅದನ್ನು ನೋಡಿ ಆಶ್ಚರ್ಯಗೊಂಡು, ಮೌನವನ್ನು ಬಿಟ್ಟು ಆ ಹುಡುಗಿಯನ್ನು ಕೇಳಲು ಪ್ರಯತ್ನ ಮಾಡುವಷ್ಟರಲ್ಲಿ ಅವಳು ನನ್ನನ್ನು ತೆಗೆದುಕೊಂಡು ತಮ್ಮ ಘನವಾದ ಪಾದಗಳ ದರ್ಶನಕ್ಕಾಗಿ ಬಂದಳು. ೫೦. ಎಲೈ ರಾಜನೆ, ಆ ಹುಡುಗಿಯು ಯಾರ ಮಗಳು? ಅವಳ ಹೆಸರೇನು? ನನ್ನನ್ನೇಕೆ ಹಿಡಿಸಿ ತರಿಸಿದಳು? ಏಕೆ ಬಂಧನದಲ್ಲಿಟ್ಟಳು? ಇಲ್ಲಿಗೇಕೆ ನನ್ನನ್ನು ತಂದಳು? ಇದಾವುದೂ ನನಗೆ ತಿಳಿಯದು.” ವ|| ಎಂದು ಶೂದ್ರಕಮಹಾರಾಜನಿಗೆ ಆ ಕಥೆಯೆಲ್ಲವನ್ನೂ ಹೇಳಿದನು. ಆಗಶೂದ್ರಕರಾಜನು ಬಹಳ ಕುತೂಹಲವುಳ್ಳವನಾಗಿ “ಚಂಡಾಲಕನ್ನಿಕೆಯನ್ನು ಕರೆದುಕೊಂಡು ಬಾ!” ಎಂದು ಮುಂದಿದ್ದ ದ್ವಾರಪಾಲಕಳಿಗೆ ಅಪ್ಪಣೆ ಮಾಡಿದನು. ಅವಳು ಹೋಗಿ ಬೇಗನೆ ಆಕೆಯನ್ನು ದಾರಿ ತೋರಿಸುತ್ತಾ ಕರೆತಂದಳು. ೫೧. ಬೇರೆಯವರ ದೇಹಕಾಂತಿಯು ಹಾಗಿರಲಿ ಎಂಬಂತೆ ಎಲ್ಲರ ಕಣ್ಣುಗಳೂ ಕೋರೈಸುತ್ತಿರಲು, ಕಾಂತಿಯಿಂದ ಪ್ರಕಾಶಿಸುತ್ತ ಆ ಚಂಡಾಲಕನ್ನಿಕೆ ಮುಂದೆ ಬಂದು ರಾಜನನ್ನು ಕುರಿತು ಜಾಣತನದಿಂದ ಕೂಡಿದ ಮಾತುಗಳಿಂದ ಹೀಗೆ ಹೇಳಿದಳು. ೫೨. “ಲೋಕಪ್ರಸಿದ್ಧವಾದ ಸಮಸ್ತ ಕಲೆಗಳ ಸಮೂಹದಿಂದ ಜಗತ್ತನ್ನು ಅಲಂಕರಿಸುತ್ತಿರುವವನೆ, ಕಾದಂಬರೀದೇವಿಯ ಹೃದಯಕ್ಕೆ ಆನಂದವನ್ನುಂಟು ಮಾಡುವವನೆ, ರೋಹಿಣೀವಲ್ಲಭಭನಾದ ಚಂದ್ರನೆ! ಈ ಕೆಟ್ಟಬುದ್ಧಿಯುಳ್ಳವನು ತನ್ನ ವೃತ್ತಾಂತವನ್ನು ತಿಳಿಯುವಂತೆ ಹೇಳಿದ್ದನ್ನು ನೀನು ಕೇಳಿದಯಷ್ಟೆ ! ಇದರಿಂದ ನಿಜವಾಗಿಯೂ ಜನ್ಮಾಂತರದಲ್ಲಿ ನಡೆದ ನಿನ್ನ ವೃತ್ತಾಂತಗಳೆಲ್ಲವನ್ನೂ ನೀನು ಆಮೂಲಾಗ್ರವಾಗಿ ಕೇಳಿದಂತಾಯಿತು. ವ|| ಮತ್ತು ಈ ತಿಳಿಗೇಡಿಯು ಈ ಜನ್ಮದಲ್ಲೂ ತಂದೆಯವರಿಂದ ಬೇಡವೆಂದು ತಡೆಯಲ್ಪಟ್ಟರೂ ಅವರ ಮಾತನ್ನು ಮೀರಿ ಇನಿಯಳನ್ನು ನೋಡಬೇಕೆಂಬ ಉತ್ಸಾಹದಿಂದ ಹಾರಿಹೋಗುತ್ತಿತ್ತು. ೫೩. ಈ ಕೆಟ್ಟಬುದ್ಧಿಯುಳ್ಳ, ಹಿಂದಿನ ಜನ್ಮದ ಮಗನಾದ ಈ ಗಿಳಿಯು ಹೀಗೆ ಹಾರಿಹೋಗುತ್ತಿರುವುದನ್ನು ಇವನ ತಂದೆಯಾದ ಶ್ವೇತಕೇತುಮಹರ್ಷಿಯು ಜ್ಞಾನದೃಷ್ಟಿಯಿಂದ ತಿಳಿದುಕೊಂಡನು. ನಾನು ಇವನ ತಾಯಿಯಾದ ಲಕ್ಷಿ ! ಆ ಮಹರ್ಷಿಯು, ಇವನು ಹಕ್ಕಿಯ ಜಾತಿಯಲ್ಲಿರುವವರೆಗೂ,

ವ|| ಅದಱನೀತಂಗೆಂತೆಂತು ವಿರಕ್ತಿ ಪುಟ್ಟುಗುಮಂತಂತೆ ವಿನಯವೃತ್ತಿನಿಮಿವಿನಿತುಮಂ ಮಾಡಿದೆನೀಗಳಾಯ ಜ್ಞಾವಸಾನಸಮಯ ಮಾಗಿರ್ದುದಱನೀ ಸಮಯದೊಳ್ ಸಮಸುಖದುಖಿಗಳಾಗಲೆವೇೞ್ಕುಮದಱಂದೀತನ ಜನ್ಮಾಂತರ ಸಹಾಯನಪ್ಪ ನಿನ್ನಲ್ಲಿಗೊಡಗೊಂಡು ಬಂದೆ ದಿವ್ಯದೇಹಂಗಳಂ ಕೈಕೊಂಡು ಇಷ್ಟಜನಸಮಾಗಮ ಸುಖಮನನುಭವಿಸಿಂ ಮರ್ತ್ಯಲೋಕಸಂಪರ್ಕಪರಿಹಾರಾರ್ಥಮೀ ಚಂಡಾಲವೇಷಮಂ ತಳೆದಿರ್ದೆನಿಂ ಪೋಪೆನೆಂದು

ಝಣಜ್ಜಣಿತ ಮೇಖಲಾಕಲಿಕ ಹಾರಕೇಯೂರ ಭೂ
ಷಣಪ್ರಭೆ ದಿಗಂತಮಂ ಬೆಳಗೆ ರಾಜರಾಜದ್ಗ ಹಾಂ
ಗಣಸ್ಥಿತ ಜನಕ್ಕೆ ವಿಸ್ಮಯಮನಾಗಿಸುತ್ತುಂ ನಭೋಂ
ಗಣಕ್ಕೊಗೆದಳಂದು ಲಕ್ಷಿ  ಕುಡುಮಿಂಚಿದೊಂದೆಂಬಿನಂ             ೫೪

ವ|| ಅನಂತರಮಾ ಶೂದ್ರಕಮಹಾರಾಜನಾ ವಚನಮಂ ಕೇಳ್ದು ಜಾತಿಸ್ಮರನಾಗಿ ಗಿಳಿಯ ಮೊಗಮಂ ನೋಡಿ

ನೀಂ ಪುಂಡರೀಕನೈ ವೈ
ಶಂಪಾಯನ ಪೂರ್ವಜನ್ಮ ಸಂಬಂಯೆ ಕಂ
ಡೆಂ ಪುಣ್ಯದಿಂದಮಿರ್ವರು
ಮಿಂ ಪಡೆದಪಮೊಡನೆ ಶಾಪಮೋಕ್ಷದ ಫಲಮಂ      ೫೫

ವ|| ಎಂಬುದುಮನಂತರಂ ಗಂಧರ್ವರಾಜನಂದನೆಯಂ ಮುಂದೆ ನಿಲಿಸಿ ಕರ್ಣಾಂತಾ ಕೃಷ್ಟಕಾರ್ಮುಕನಾಗಿ ಮಕರದ್ವಜನೆಡೆವಿಡದೆ ಮತ್ಸರಿಸಿ ಮನುಜಮಕರದ್ವಜನ ನೋರಂತಿಸುತಿರ ಲಾತನಲರ್ಗಣೆಯ ಗಾಳಿಯೆ ಪೊಯ್ದಂತೆ ಮೆಯ್ ನಡುಗಲೊಡರಿಸಿದುದಾತನ ನನೆಯಂಬಿನ ಮೊನೆಗಣೆಗಳಿವೆಂಬಿನಂ ಮೆಯ್ ನವಿರ್ನೆಸೆದುವಾತನ ಕುಡುವಿಲ್ಲ ಜೇವಡೆಗೆ ಬಿಗುರ್ತಂತೆ ಕಣ್ ಮುಕುಳಿಸಿದುವಾತನುರಿಯಂಬಿನ ಪೊಗೆ ಮೊಗಸಿದಂತಧರಕಿಸಲಯಂ ನಸುಗಂದಿದುದಾತನ ವಿಷಮಶರಶಲಾಕೆಗಳಿಂ ಕೀಲಿತಮಾದಂತವಯವಂಗಳ್ ನಟ್ಟು ನಿಂದುವಂತುಮಲ್ಲದೆಯುಂ

ಎಳಮರನಂ ಕಾೞಚ್ಚಿರ
ದಳುರಲ್ ಬೆವರುಣ್ಮಿ ಪೊಣ್ಮೊವಂತಿರಲಾ ಕೋ
ಮಳತನುವತನಾದಾವಾ
ನಳನಳುರಲ್ ಬೆಮರ್ಗಳುಣ್ಮಿ ಪೊಣ್ಮಿದುವಾಗಲ್       ೫೬

ಹಾಗೂ ತಾನು ಮಾಡುತ್ತಿರುವ ಆಯುಷ್ಕರವಾದ ಯಜ್ಞವು ಮುಗಿಯುವವರೆಗೂ ಇವನನ್ನು ಸೆರೆಯಿಟ್ಟುಕೊಂಡಿರುವಂತೆ ತಿಳಿಸಿ ನನ್ನನ್ನು ಭೂಲೋಕಕ್ಕೆ ಕಳುಹಿಸಿದನು ! ವ|| ಆದ್ದರಿಂದ ಇವನಿಗೆ ಪಶ್ಚಾತ್ತಾಪವುಂಟಾಗುವಂತೆಯೂ, ಒಳ್ಳೆಯ ನಡತೆಯುಂಟಾಗುವಂತೆಯೂ ಆಗಲು ಇಷ್ಟನ್ನೂ ನಾನೇ ಮಾಡಿದ್ದೇನೆ. ಈಗ ಆ ಯಜ್ಞವು ಮುಗಿಯುತ್ತಾ ಬಂದಿದೆ. ಈ ಸಮಯದಲ್ಲಿ ನೀವಿಬ್ಬರೂ ಒಂದೇಸಮನಾದ ಸುಖದುಖಗಳನ್ನು ಅನುಭವಿಸ ತಕ್ಕವರಾದುದರಿಂದ ಈತನ ಜನ್ಮಾಂತರಮಿತ್ರನಾದ ನಿನ್ನ ಹತ್ತಿರಕ್ಕೆ ಕರೆದುಕೊಂಡು ಬಂದಿದ್ದೇನೆ. ನೀವಿಬ್ಬರೂ ಹುಟ್ಟು ಮುಪ್ಪು ಸಾವು ರೋಗಗಳಿಂದ ಕೂಡಿಕೊಂಡಿರುವ ಈಗಿನ ದೇಹಗಳನ್ನು ಬಿಟ್ಟು, ದಿವ್ಯದೇಹಗಳನ್ನು ಪಡೆದು ಆಪ್ತೇಷ್ಟರ ಸಮಾಗಮಸುಖವನ್ನು ಅನುಭವಿಸಿರಿ! ಭೂಲೋಕದ ಜನರ ಸಂಪರ್ಕವನ್ನು ತಪ್ಪಿಸಿಕೊಳ್ಳುವುದಕ್ಕಾಗಿ ನಾನು ಈ ಚಂಡಾಲವೇಷವನ್ನು ಧರಿಸಿದ್ದೆನು.ಇನ್ನು ನಾನು ಹೋಗುತ್ತೇನೆ !” ಎಂದು ಹೇಳಿದಳು.೫೮. ಲಕ್ಷಿ ಯು ಝಣಝಣ ಧ್ವನಿಯನ್ನು ಮಾಡುತ್ತಿರುವ ಡಾಬಿನಿಂದ ಕೂಡಿರುವ ಹಾರ ತೋಳುಬಂದಿ ಮೊದಲಾದ ಆಭರಣಗಳ ಕಾಂತಿಯು ದಿಗಂತವನ್ನು ಬೆಳಗುತ್ತಿರಲು, ಅರಮನೆಯ ರಮಣೀಯವಾದ ಅಂಗಣದಲ್ಲಿರುವ ಜನರಿಗೆ ಆಶ್ಚರ್ಯವನ್ನುಂಟುಮಾಡುತ್ತಾ ಇದೊಂದು ಬಳ್ಳಿ ಮಿಂಚೋ ಎಂಬಂತೆ ಕೂಡಲೆ ಆಕಾಶಪ್ರದೇಶಕ್ಕೆ ಹಾರಿ ಕಣ್ಮರೆಯಾದಳು ! ವ|| ಬಳಿಕ ಶೂದ್ರಕಮಹಾರಾಜನು ಆ ಮಾತು ಕೇಳಿ, ಹಿಂದಿನ ಜನ್ಮದ ನೆನಪನ್ನು ಪಡೆದು ಗಿಳಿಯ ಮುಖವನ್ನು ನೋಡಿ ೫೫. “ವೈಶಂಪಾಯನ ! ನೀನು ಪುಂಡರೀಕ ! ನನ್ನ ಹಿಂದಿನ ಜನ್ಮದ ನೆಂಟ! ಪುಣ್ಯವಶದಿಂದ ನಿನ್ನನ್ನು ಕಂಡೆನು, ಇನ್ನು ಇಬ್ಬರೂ ಒಟ್ಟಿಗೆ ಶಾಪವಿಮೋಚನದ ಫಲವನ್ನು ಪಡೆಯುತ್ತೇವೆ” ವ|| ಎಂದು ಹೇಳುತ್ತಿರುವಂತೆಯೇ ಮನ್ಮಥನು ಕಾದಂಬರಿಯನ್ನು ಮುಂದೆ ನಿಲ್ಲಿಸಿ ಬಿಲ್ಲನ್ನು ಕಿವಿಯವರೆಗೂ ಎಳೆದು ಮನುಷ್ಯರೂಪವನ್ನು ತಾಳಿರುವ ಮನ್ಮಥನಂತಿರುವ ಶೂದ್ರಕಮಮಹಾರಾಜನ ಮೇಲೆ ಹೊಟ್ಟೆಕಿಚ್ಚಿನಿಂದಲೋ ಎಂಬಂತೆ ಒಂದೇ ಸಮನೆ ಬಾಣಗಳನ್ನು ಬಿಡುತ್ತಿದ್ದನು. ಹೂವಿನ ಬಾಣದ ಗಾಳಿಯಿಂದ ಹೊಡೆಯಲ್ಪಟ್ಟಂತೆ ಶರೀರವು ನಡುಗಲಾರಂಭಿಸಿತು. ಅವನ ಹೂವಿನ ಬಾಣದ ತುದಿಗಳೇ ಇವು ಎಂಬಂತೆ ಮೈಗೂದಲು ಮೇಲಕ್ಕೆದ್ದಿತು. ಆತನ ಬಾಗಿದ ಬಿಲ್ಲಿನ ಟಂಕಾರಕ್ಕೆ ಹೆದರಿದಂತೆ ಕಣ್ಣು ಮುಚ್ಚಿಕೊಂಡಿತು. ಆತನ ಉರಿಯುವ ಭಾಣದ ಹೊಗೆಯು ಆವರಿಸಿದಂತೆ ಚಿಗುರಿನಂತಿರುವ ತುಟಿಯು ಸ್ವಲ್ಪ ಮಟ್ಟಿಗೆ ಒಣಗಿತು. ಅವನ ಭಯಂಕರವಾದ ಬಾಣಗಳೆಂಬ ಸರಳುಗಳಿಂದ ಬಿಗಿಯಲ್ಪಟ್ಟಂತೆ ಅಂಗಗಳು ಮಿಸುಕಾಡದೆ ಸ್ತಬ್ಧವಾದುವು ! ಅದಲ್ಲದೆ ೫೬. ಎಳೆಯ ಮರವನ್ನು ಕಾಡುಕಿಚ್ಚು ಆವರಿಸಲು

ವ|| ಅಂತು ಸಂತಾಪಮೊದವೆ ತಾಪಾಪನೋದನಾರ್ಥಂ ಪ್ರವಾಳ ಕಮಲ ಕುವಲಯ ಕಲ್ಹಾರ ಮೃಣಾಳವಲಯ ಮಲಯಜಮೌಕ್ತಿಕಾವಳೀದರ್ಪಣಾದಿ ಶಿಶಿರೋಪಚಾರಂಗಳಂ ಪರಿಜನಂಗಳ್ ಪರಿತಂದು ಮಾಡೆ ತನ್ನೊಳಿಂತೆಂದಂ

ತಳಿರಂ ಕಾಂತೆಯ ಕೆಂದಳಂ ಕಮಲಮಂ ಕಣ್ಗಳ್ ಮೃಣಾಂಳಂಗಳಂ
ನಳಿತೋಳ್ ಕನ್ನಡಿಯಂ ಕುಚಂ ಮಲಯಜಶ್ರೀಯಂ ಸ್ಮಿತಂ ಮೌಕ್ತಿಕಾ
ವಳಿಯಂ ದಂತಮರೀಚಿ ಚಂದ್ರಿಕೆಯನಂಗಜ್ಯೋತಿ ಪೂರ್ಣೇಂದುಮಂ
ಡಳಮಂ ಮುದ್ದುಮೊಗಂ ಗೆಲುತ್ತುಮಿರೆ ಮತ್ತೇನೆಂದಿವಂ ತಾಳ್ದುವೆಂ      ೫೭

ವ|| ಎಂದು ಚಿತ್ರರಥನಂದನೆಯಂ ಹೃದಯದೊಳ್ ತಳೆದು

ಆಕೆಯ ಪೆಸರಾಕೆಯ ಮಾ
ತಾಕೆಯ ಮುದ್ದಾಕೆಯಂದವಾಕೆಯ ತನುಸೋಂ
ಕಾಕೆಯ ತಿಳಿವಾಕೆಯ ಮುಳಿ
ಸಾಕೆಯ ಕೂಟಮೆ ದಲಿರ್ದುದರಸನ ಮನದೊಳ್       ೫೮

ವ|| ಅದಲ್ಲದೆಯುಂ ಗಿಳಿಯ ಮೊಗಮ ನೋಡಿ ನೃಪರೂಪಚಂದ್ರಂ ಚಂದ್ರಾಪೀಡನಾದ ತನ್ನ ಮುನ್ನಿನ ಭವದ ಕೆಳೆಯನಂ ವೈಶಂಪಾಯನನಂ ನೆನೆನೆನೆದು ನಿಜಪ್ರಿಯಸಖ ವಿಯೋಗದವದಹ್ಯಮಾನಮಾನಸನಾಗಿ ಪರಿಜನಂಗಳ್ ಪಸರಿಸಿದ ಸಿರಿಕಂಡದಣ್ಪುಗಳೊಳಂ ಕೇಸಡಿಗಳೊಳಿಕ್ಕುವಿರ್ಪುವೊರೆದ ತಾವರೆಯೆಲೆಗಳೊಳಂ ಕೆಂದಳಂಗಳೊಳ್ ಸಂದಿಸುವ ಕರ್ಪೂರರಜದೊಳ್ ಪೊರೆದ ಹಿಮದ ಬ್ಬುಗಳೊಳಮುರದೊಳಿಕ್ಕಿದಾಲಿಗೋಡುವ ಹಾರಂಗಳೊಳಂ ಕದಂಪಿನೊಳೊತ್ತುವ ರನ್ನದ ಕನ್ನಡಿಗಳೊಳಂ ನೊಸಲೊಳಿಕ್ಕುವ ಚಂದ್ರಾಕಾಂತದ ಪಟ್ಟಂಗಳೊಳಂ ಮುಯ್ಪಿನೊಳಮರ್ಚುವ ಮೃಣಾಳದ ತೋಳ್ವಲಯಂಗಳೊಳಂ ಬಾೞೆಯ ತಿರುಳೆಲೆಯ ಬಿಜ್ಜಣಿಗೆಗಳೊಳಮೆಸೞ ಪಸೆಗಳೊಳಂ ಪಳುಕಿನ ನೆಲವಾಳಿಗೆಗಳೊಳಂ ಧಾರಾಗೃಹಂಗಳೊಳಂ ಜಲಮಂಟಪಂಗಳೊಳಮೆಂತುಮಾ ಸಂತಾಪಮಂ ಸಂತಯಿಸಲಾಱದೆ

ಸ್ವಾಗತ|| ಎನ್ನನಿತ್ತು ಸುಖಮಂ ಸಖಂಗೆ ಮಾ
ೞ್ಪೆಂ ನಿರಾಕುಳಮೆನುತ್ತವಾಗಳಿ
ತ್ತಂ ನೃಪಂ ಪದಪಿನಿಂ ಮಹಾತ್ಮನಾಂ
ಕಿದ ನದೇಯಮೆನೆ ತನ್ನ ಜೀವಮಂ             ೫೯

ಅದರಿಂದ ದ್ರವವು ಹೊರಡುವಂತೆ ಆ ರಾಜನ ಮೃದುವಾದ ಶರೀರವನ್ನು ಮನ್ಮಥನೆಂಬ ಕಾಡುಕಿಚ್ಚು ಆವರಿಸಲು ಬೆವರು ಹೊರಹೊಮ್ಮುತ್ತಿತ್ತು. ವ|| ಹಾಗೆ ಸಂತಾಪವುಂಟಾಗಲು ಅದನ್ನು ಶಮನ ಮಾಡುವುದಕ್ಕಾಗಿ ಪರಿಜನರು ಬೇಗ ಬಂದು ಹವಳ, ಕಮಲ ಕನ್ನೈದಿಲೆ, ಕಲ್ಹಾರ, ತಾವರೆದಂಟಿನ ಬಳೆ, ಶ್ರೀಗಂಧ, ಮುತ್ತಿನ ಸರ, ಕನ್ನಡಿ ಮೊದಲಾದುವುಗಳಿಂದ ಶೈತ್ಯೋಪಚಾರವನ್ನು ಮಾಡಲು ಶೂದ್ರಕನು ತನ್ನಲ್ಲಿ ಹೀಗೆ ಚಿಂತಿಸಿದನು. ೫೭. “ಚಿಗುರನ್ನು ಇನಿಯಳ ಅಂಗೈ ಅಂಗಾಲುಗಳು ಸೋಲಿಸುತ್ತವೆ. ಹಾಗೆಯೇ ಕಮಲವನ್ನು ಕಣ್ಣುಗಳೂ, ತಾವರೆದಂಟುಗಳನ್ನು ಕೋಮಲವಾದ ತೋಳುಗಳೂ, ಕನ್ನಡಿಯನ್ನು ಕುಚಗಳೂ, ಗಂಧದ ಶೋಭೆಯನ್ನು ಮಂದಹಾಸವೂ, ಮುತ್ತಿನ ಸರವನ್ನು ಹಲ್ಲುಗಳ ಕಾಂತಿಯೂ, ಬೆಳದಿಂಗಳನ್ನುಶರೀರದ ಲಾವಣ್ಯವೂ, ಚಂದ್ರಮಂಡಲವನ್ನು ಮುದ್ದುಮೊಗವೂ ಸೋಲಿಸುತ್ತವೆ. ಹೀಗಿರಲು ಏನೆಂದು ಇವುಗಳನ್ನು ಉಪಯೋಗಿಸಿಕೊಳ್ಳಲಿ?” ಟಿ. ಕಾದಂಬರಿಯ ಅಂಗಗಳಿಂದ ಈ ಪದಾರ್ಥಗಳೆಲ್ಲ ಸೋತುಹೋಗಿವೆ. ಹೀಗೆ ನಿಸ್ಸತ್ವ ಪದಾರ್ಥಗಳಿಗೆ ಅವಳ ವಿರಹದಿಂದ ಉಂಟಾದ ನನ್ನ ಸಂತಾಪವನ್ನು ಪರಿಹರಿಸುವ ಸಾಮರ್ಥ್ಯವಿದೆಯೇ? ಎಂದು ತಾತ್ಪರ್ಯ. ವ|| ಹೀಗೆ ಆಲೋಚಿಸುತ್ತಾ ಕಾದಂಬರಿಯನ್ನು ಹೃದಯದಲ್ಲಿ ನಿಲ್ಲಿಸಿದ್ದನು. ೫೮. ಆಕೆಯ ಹೆಸರು, ಆಕೆಯ ಮಾತು, ಆಕೆಯ ಪ್ರೀತಿ, ಆಕೆಯ ಶರೀರ ಸ್ಪರ್ಶ, ಆಕೆಯ ಪ್ರಸನ್ನತೆ, ಆಕೆಯ ಕೋಪ, ಆಕೆಯ ಸಮಾಗಮ –  ಇವುಗಳೆ ಆ ರಾಜನ ಮನಸ್ಸಿನಲ್ಲಿ ಯಾವಾಗಲೂ ಇರುತ್ತಿತ್ತು. ವ|| ಇದಲ್ಲದೆ ಗಿಳಿಯ ಮುಖವನ್ನು ನೋಡಿ ಚಂದ್ರಾವತಾರನಾದ ಶೂದ್ರಕನು ತನ್ನ ಹಿಂದಿನ ಜನ್ಮದ ಸ್ನೇಹಿತನಾದ ವೈಶಂಪಾಯನನನ್ನು ಯಾವಾಗಲೂ ನೆನೆಸಿಕೊಳ್ಳುತ್ತಿದ್ದನು. ಪ್ರಿಯಸ್ನೇಹಿತನ ವಿರಹವೆಂಬ ಕಾಡುಕಿಚ್ಚಿನಿಂದ ಅವನ ಹೃದಯವು ಬೆಂದುಹೋಗುತ್ತಿತ್ತು. ಪರಿಜನರು ಮೈಗೆಲ್ಲಾ ಲೇಪಿಸಿದ ಶ್ರೀಗಂಧದಿಂದಲೂ, ಕೆಂಪಾದ ಕಾಲುಗಳ ಮೇಲೆ ಇಟ್ಟ ತೇವದಿಂದ ಕೂಡಿದ ತಾವರೆಯೆಲೆಗಳಿಂದಲೂ, ಅಂಗೈ ಮೇಲೆ ಇಟ್ಟಿರುವ ಕರ್ಪೂರಧೂಳಿಗಳಿಂದ ಮಿಶ್ರಿತವಾದ ಹಿಮದ ಗಡ್ಡೆಗಳಿಂದಲೂ, ಎದೆಯ ಮೇಲೆ ಇಟ್ಟಿರುವ ಆಲಿಕಲ್ಲಿನಂತೆ ಕೊರೆಯುವ ಹಾರಗಳಿಂದಲೂ, ಕೆನ್ನೆಗೆ ಒತ್ತುವ ರನ್ನಗನ್ನಡಿಗಳಿಂದಲೂ, ಹಣೆಯ ಮೇಲೆ ಇರಿಸುವ ಚಂದ್ರಕಾಂತಮಣಿಯ ಪಟ್ಟಿಗಳಿಂದಲೂ, ಹೆಗಲಿಗೆ ತೊಡಿಸಿರುವ ತಾವರೆದಂಟಿನ ತೋಳುಬಳೆಗಳಿಂದಲೂ, ಬಾಳೆಯ ಸುಳಿಯೆಲೆಯ ಬೀಸಣಿಗೆಯಿಂದಲೂ, ಹೂವಿನ ದಳಗಳ ಆಸನಗಳಿಂದಲೂ, ಸಟಿಕದ ನೆಲಮಾಳಿಗೆಗಳಿಂದಲೂ, ಕಾರಂಜಿಮನೆಗಳಿಂದಲೂ, ಜಲಮಂಟಪಗಳಿಂದಲೂ, ಅವನ ಸಂತಾಪವು ಶಮನವಾಗಲಿಲ್ಲ. ೫೯. “ಸ್ನೇಹಿತನಿಗೆ ನನ್ನನ್ನೇ ಒಪ್ಪಿಸಿ